Tag: Separate System

  • ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್‍ನ್ಯೂಸ್

    ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್‍ನ್ಯೂಸ್

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ನಮ್ಮ ಮೆಟ್ರೋ ಗುಡ್‍ನ್ಯೂಸ್ ನೀಡಿದ್ದು, ಮೆಟ್ರೋ ಹತ್ತಲು, ಸ್ಟೇಷನ್‍ಗೆ ಹೋದಾಗ ಗೇಟ್ ದಾಟಲು ಕಷ್ಟ ಪಡುತ್ತಿದ್ದ ಗರ್ಭಿಣಿಯರಿಗೆ ಸಹಾಯವಾಗಲು ಬಿಎಂಆರ್‍ಸಿಎಲ್ ಹೊಸ ವ್ಯವಸ್ಥೆ ಕಲ್ಪಿಸಿ ಕೊಡಲಿದೆ.

    ಸಾಮಾನ್ಯ ಜನರು ಓಡಾಟ ನಡೆಸುವ ಮಂದಿಗೆ ಹೋಲಿಕೆ ಮಾಡಿದರೆ ಗರ್ಭಿಣಿಯರು ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ವೇಳೆ ಸಮಸ್ಯೆ ಎದುರಿಸಿದ್ದರು. ಸದ್ಯ ನಮ್ಮ ಮೆಟ್ರೋ ಈ ಸಮಸ್ಯೆಗೆ ಮುಕ್ತಿ ನೀಡಲು ಗರ್ಭಿಣಿಯರಿಗಾಗಿಯೇ ವಿಶೇಷ ಸರ್ವೀಸ್ ಗೇಟ್‍ಗಳ ವ್ಯವಸ್ಥೆಯನ್ನು ಮಾಡಲಿದೆ.

    ಸದ್ಯ ಮೆಟ್ರೋ ನಿಲ್ದಾಣದಲ್ಲಿ ಇರುವ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ ಗೇಟ್‍ಗಳು ಟೋಕನ್ ಹಾಕಿದ ತಕ್ಷಣ ತೆರೆದುಕೊಂಡು ನಿರ್ದಿಷ್ಟ ಸಮಯದೊಳಗೆ ಮುಚ್ಚಿಕೊಳ್ಳುತ್ತವೆ. ಈ ಅವಧಿಯಲ್ಲಿ ತುಂಬು ಗರ್ಭಿಣಿಯರು ಗೇಟ್ ದಾಟಲು ಆಗದೇ ಪರದಾಡುತ್ತಿದ್ದರು. ಇದರಿಂದ ಅವರಿಗೆ ಅಪಾಯ ಆಗಬಹುದು ಎಂದು ಬೇರೊಂದು ವ್ಯವಸ್ಥೆ ಮಾಡಲು ಕೆಲವು ಮಹಿಳೆಯರು ಬಿಎಂಆರ್‌ಸಿಎಲ್ ಗೆ ಮನವಿ ಮಾಡಿಕೊಂಡಿದ್ದರು. ಈ ಮನವಿ ಪರಿಗಣಿಸಿ, ಸರ್ವೀಸ್ ಗೇಟ್ ಕಲ್ಪಿಸಿಕೊಡಲು ಮೆಟ್ರೋ ನಿಗಮ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv