Tag: Separate State

  • ನಾನು ಮುಖ್ಯಮಂತ್ರಿ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿದ್ದೆ: ವಾಟಾಳ್ ನಾಗರಾಜ್

    ನಾನು ಮುಖ್ಯಮಂತ್ರಿ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿದ್ದೆ: ವಾಟಾಳ್ ನಾಗರಾಜ್

    ಬೆಂಗಳೂರು: ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ. ನಾನು ಸಿಎಂ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್‌ಗೆ ಸೇರಿಸುತ್ತಿದ್ದೆ ಅಂತ ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಆಗಿದ್ರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸುತ್ತಿದ್ದೆ. ಉಮೇಶ್ ಕತ್ತಿಗೆ ಬುದ್ಧಿ ಇಲ್ಲ. ಕರ್ನಾಟಕದಲ್ಲಿ ಇರೋದ್ರಿಂದ ಅವರು ರಾಜಕಾರಣಿ ಆಗಿ ಉಳಿದಿದ್ದಾರೆ. ಇಲ್ಲದೇ ಹೋಗಿದ್ರೆ ಮರಾಠಿಗರು ಅವರನ್ನು ತಿಂದು ತೇಗುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಕರ್ನಾಟಕ ಯಾವುದೇ ಕಾರಣಕ್ಕೂ ಇಬ್ಭಾಗ ಆಗಬಾರದು. ಎಲ್ಲಾ ಭಾಗಗಳನ್ನ ಸರ್ಕಾರ ಅಭಿವೃದ್ಧಿ ಮಾಡಬೇಕು. ಉತ್ತರ ಕರ್ನಾಟಕ, ಹೈದರಾಬಾದ್ ಕಲ್ಯಾಣ ಅಭಿವೃದ್ಧಿ ಆಗಬೇಕು. ಅದನ್ನ ಹೇಳಲಿ, ಅದು ಬಿಟ್ಟು ಬೇಜವಾಬ್ದಾರಿಯಾಗಿ ಯಾರು ಮಾತಾಡಬಾರದು ಅಂತಾ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: 55ರ ಮಹಿಳೆಯೊಂದಿಗೆ 29ರ ಯುವಕ ರೊಮ್ಯಾನ್ಸ್ – ಮದುವೆ ಎಂದೊಡನೇ ಯುವಕ ಎಸ್ಕೇಪ್

    ಮಂತ್ರಿಯಾಗಿ ಉಮೇಶ್ ಕತ್ತಿ ಏನ್ ಕೆಲಸ ಮಾಡಿದ್ದಾರೆ? ಎಷ್ಟು ಕಾಡು ಉಳಿಸಿದ್ದಾರೆ? ಗೊತ್ತಿಲ್ಲ. ಪದೇ ಪದೇ ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡುತ್ತಾರೆ. ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಬುದ್ದಿ ಇಲ್ಲ. ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡಬಾರದು ಅಂತ ಅಗ್ರಹ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು: ಕತ್ತಿಗೆ ಹೊರಟ್ಟಿ ತಿರುಗೇಟು

    ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು: ಕತ್ತಿಗೆ ಹೊರಟ್ಟಿ ತಿರುಗೇಟು

    ಹುಬ್ಬಳ್ಳಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು. ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ. ಆ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಚಿವ ಉಮೇಶ್ ಕತ್ತಿಗೆ ತಿರುಗೇಟು ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗುತ್ತಾನೆ ಎಂದಿದ್ದರು. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸರ್ಕಾರಕ್ಕೆ ಕೇಳೋಣ. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ಪಠ್ಯ ಪುಸ್ತಕ ಪೂರೈಕೆ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ಉಂಟಾಗಿ ವಿಳಂಬವಾಗಿದೆ. ಈ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುವೆ. ಪಠ್ಯ ವಿಚಾರದಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಸಮಿತಿಗೆ ಬಿಡಬೇಕು. ಅದರಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಭಾಗವಹಿಸುವುದು ಸರಿಯಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾನಿಯಾಗಬಾರದು ಎಂದರು. ಇದನ್ನೂ ಓದಿ: ಮೋದಿಯವರ ವ್ಯಕ್ತಿತ್ವ, ಜೀವನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ: ಗೆಹ್ಲೋಟ್

    ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಭೆ ಕರೆದಿದ್ದೇನೆ. ಬಳಿಕ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೆನೆ ಎಂದರು.

    Live Tv

  • ರೈತ ಸಂಘದಿಂದ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ

    ರೈತ ಸಂಘದಿಂದ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ

    ಮಡಿಕೇರಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ವಿವಿಧ ಸರ್ಕಾರಗಳು, ರಾಜಕೀಯ ಪಕ್ಷಗಳು ಕೊಡಗಿನ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಹೀಗಾಗಿ ಮುಂದೆ ಕೊಡಗಿನ ಜನತೆ ಜಾತಿ, ಧರ್ಮ, ಮತ ಬೇಧ ಮರೆತು ರಾಜಕೀಯವಾಗಿ ಕೊಡಗು ಪ್ರತ್ಯೇಕ ರಾಜ್ಯಕ್ಕೆ ಹೋರಾಟ ನಡೆಸಬೇಕು ಎಂದು ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹೇಳಿದರು.

    ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಆಯೋಜನೆ ಗೊಂಡಿದ್ದ ರೈತ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಇದರಿಂದ ನಮ್ಮ ಜಿಲ್ಲೆಯ ಏಳಿಗೆ ಸಾಧ್ಯ ಎಂದರು. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತ ಸಂಘದ ಸದಸ್ಯರು ಇದನ್ನು ಒಗ್ಗಟ್ಟಾಗಿ ಒಪ್ಪಿಗೆ ಸೂಚಿಸಿ ಮುಂದೆ ಪ್ರತ್ಯೇಕ ರಾಜ್ಯದ ಹೋರಾಟ ಕೈಗೆತ್ತಿಕೊಳ್ಳವುದೇ ಲೇಸು ಎಂದು ಸಹಮತ ವ್ಯಕ್ತಪಡಿಸಿದರು. ಚೆಸ್ಕಾಂ ಇಲಾಖೆಯು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದೇ ಗ್ರಾಹಕರಿಂದ ವಿದ್ಯುತ್ ಬಿಲ್ ಪಡೆಯುತ್ತಿರುವ ಬಗ್ಗೆ ತೀವ್ರ ಚರ್ಚೆ ನಡೆಯಿತು. ಇದೇ ವೇಳೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ವಾರ್ಷಿಕ ವರದಿ ಮಂಡಿಸಿದರು. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

    ಕಾನೂನು ಸಲಹೆಗಾರರಾದ ಹೇಮಚಂದ್ರ ಪ್ರಾಸ್ತಾವಿಕ ಮಾತನಾಡಿ, ರೈತ ಸಂಘವು ನಡೆಸಿದ ಹೋರಾಟದ ಮಾಹಿತಿಗಳನ್ನು ಸಭೆಯಲ್ಲಿ ಮಂಡಿಸಿದರು. ರೈತರ 10 ಹೆಚ್.ಪಿ. ಉಚಿತ ವಿದ್ಯುತ್ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

  • ಮುಧೋಳದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ

    ಮುಧೋಳದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ

    ಬಾಗಲಕೋಟೆ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಇಂದು ಧ್ವಜಾರೋಹಣ ನೆರವೇರಿಸಲಾಯಿತು.

    ಮುಧೋಳ ನಗರದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಕರ್ನಾಟಕ ಧ್ವಜವನ್ನು ಬಿಟ್ಟು ಹೊಸ ಧ್ವಜವನ್ನು ರಚಿಸಿ ಧ್ವಜಾರೋಹಣ ನಡೆಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ.

    ಸೆಪ್ಟೆಂಬರ್ 23 2018 ರಂದು ಬಾಗಲಕೋಟೆ ನಗರದಲ್ಲಿ ಹೋರಾಟ ಸಮಿತಿ ಸದಸ್ಯರು ಪಂಚನಿರ್ಣಯ ಕೈಗೊಂಡಿದ್ದರು. ಆಗ ಜನವರಿ 1ರಂದು ಪ್ರತ್ಯೇಕ ಧ್ವಜಾರೋಹಣದ ಮಾಡಬೇಕು ಎಂದು ಹೋರಾಟಗಾರರು ನಿರ್ಧರಿಸಿದ್ದರು. ಇಂದು ಧ್ವಜಾರೋಹಣ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಪ್ರತ್ಯೇಕ ಧ್ವಜವು 4 ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ ಉತ್ತರ ಕರ್ನಾಟಕದ ನಕ್ಷೆಯನ್ನು ಒಳಗೊಂಡಿದೆ. ಕೇಸರಿ, ಹಳದಿ, ಹಸಿರು ಬಣ್ಣದ ಮಧ್ಯೆ ನೀಲಿ ವರ್ಣದ ಉತ್ತರ ಕರ್ನಾಟಕ ನಕ್ಷೆಯ ಧ್ವಜವನ್ನು ಅನಾವರಣ ಮಾಡಲಾಗಿದೆ. ಈ ಪ್ರತ್ಯೇಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿದಂತೆ ಇತರೇ ಹೋರಾಟಗಾರರು ಭಾಗಿಯಾಗಿದ್ದರು.

    ಒಟ್ಟು ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳು ಒಳಗೊಂಡ ನಕ್ಷೆಯನ್ನು ಧ್ವಜದ ಮಧ್ಯೆ ರೂಪಿಸಲಾಗಿದೆ. ಹಾಗೆಯೇ ಕೇಸರಿ ಬಣ್ಣ ಧೈರ್ಯ, ಶೌರ್ಯದ ಸಂಕೇತವಾದರೆ, ಹಳದಿ ಹೊಸತನದ ಸಂಕೇತ, ಹಸಿರು ಸಮೃದ್ಧಿಯ ಸಂಕೇತ ಹಾಗೂ ನೀಲಿ ವಿಶಾಲತೆಯ ಸಂಕೇತ ಎಂದು ಹೊಸ ಧ್ವಜದಲ್ಲಿ ಬಳಸಿರುವ ಬಣ್ಣಗಳ ಕುರಿತು ಹೋರಾಟಗಾರರು ತಿಳಿಸಿದರು.

    ಈ ವೇಳೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಭಾಷಣ ಮಾಡಿ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಹೀಗೆ ನೂತನ ಧ್ವಜವನ್ನು ಸೃಷ್ಟಿಸಿ ಧ್ವಜಾರೋಹಣ ಮಾಡಿದ್ದೇವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ. ಆಗ ಇಲ್ಲಿನ ಮನೆ ಮನೆಯಲ್ಲೂ ಈ ಧ್ವಜವನ್ನು ಹಾರಿಸೋಣ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಜೀವಿತಾವಧಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸಾಧ್ಯವಿಲ್ಲ: ಎಚ್‍ಡಿಡಿ

    ನನ್ನ ಜೀವಿತಾವಧಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸಾಧ್ಯವಿಲ್ಲ: ಎಚ್‍ಡಿಡಿ

    ನವದೆಹಲಿ: ನನ್ನ ಜೀವಿತಾವಧಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಹಲವು ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಬಜೆಟ್ ನಲ್ಲಿ ನಿಧಿ ಹಂಚುವ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಬಿಜೆಪಿ ನಾಯಕ ಯಡಿಯೂರಪ್ಪ ದುರುದ್ದೇಶಪೂರಿತ ಪ್ರಚಾರದ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ನಮ್ಮ ಬೆಂಬಲವಿಲ್ಲ ಹಾಗೂ ನಾನು ಮತ್ತು ನನ್ನ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಇದು ಎಂದಿಗೂ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಬಿಜೆಪಿಯೂ ಸರ್ಕಾರ ರಚನೆ ಮಾಡಲಾಗದೇ ಹೋದದ್ದಕ್ಕೆ ಬಿಜೆಪಿ ನಾಯಕರಾದ ಯಡಿಯೂರಪ್ಪ ಅವರಿಗೆ ನಿರಾಸೆಯಾಗಿದೆ. ಆದ್ದರಿಂದಲೇ ಅವರು ಉತ್ತರ ಕರ್ನಾಟಕದ ಜನರಿಗೆ ಪ್ರತ್ಯೇಕ ಕರ್ನಾಟಕಕ್ಕಾಗಿ ಪ್ರಚೋದನೆ ಕೊಡುತ್ತಿದ್ದಾರೆ. ಅಲ್ಲದೆ ರಾಜ್ಯ ಬಜೆಟ್, ರೈತರ ಸಾಲ ಮನ್ನಾ ಹಾಗೂ ಇತರೆ ವಿಚಾರಗಳನ್ನಿಟ್ಟುಕೊಂಡು ಜನರನ್ನು ಪ್ರಚೋದಿಸುತ್ತಿದ್ದಾರೆ. ಇವೆಲ್ಲವೂ ರಾಜಕೀಯ ಲಾಭಕ್ಕಾಗಿಯೇ ಮಾಡುತ್ತಿದ್ದಾರೆ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದ್ದಾರೆ.

    ಬಿಎಸ್‍ವೈ ಹೇಳಿದ್ದು ಏನು?
    ತಮ್ಮ ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ ರೂಪಿಸಿದೆ. ಈ ಹಿಂದೆ ವೀರಶೈವ, ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ಜೆಡಿಎಸ್ ರಾಜ್ಯ ಪ್ರತ್ಯೇಕ ಮಾಡುವ ಹುನ್ನಾರ ಮಾಡ್ತಿದೆ. ದೇವೇಗೌಡರ ಈ ತಂತ್ರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಪ್ರತ್ಯೇಕ ರಾಜ್ಯ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಯಡಿಯೂರಪ್ಪ ಹೇಳಿದ್ದರು.

  • ಮೋದಿಯಿಂದ ದೇಶ ವಿಭಜನೆ, ಬಿಎಸ್‍ವೈಯಿಂದ ರಾಜ್ಯ ವಿಭಜನೆ: ಆನಂದ್ ಅಸ್ನೋಟಿಕರ್

    ಮೋದಿಯಿಂದ ದೇಶ ವಿಭಜನೆ, ಬಿಎಸ್‍ವೈಯಿಂದ ರಾಜ್ಯ ವಿಭಜನೆ: ಆನಂದ್ ಅಸ್ನೋಟಿಕರ್

    ಕಾರವಾರ: ಯುವಕರನ್ನು ಬಳಸಿ ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪನವರು ಕರ್ನಾಟಕವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.

    ಪ್ರತ್ಯೇಕ ರಾಜ್ಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಖ್ಯಾತಿಯನ್ನು ಸಹಿಸಲಾಗದೇ ಯಡಿಯೂರಪ್ಪನವರು ಹಾಗೂ ಬಿಜೆಪಿಯವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಕುರಿತು ರೈತರನ್ನು ಬಲಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಡ ರೈತರನ್ನು, ಯುವಕರನ್ನು ಬಳಸಿ ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪನವರು ಕರ್ನಾಟಕವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸ್ನೋಟಿಕರ್ ದೂರಿದರು.

    ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿಲ್ಲ, ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ ಎನ್ನುವ ಉದ್ದೇಶವಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ. ಇವರ ಮೇಲಿರುವ ಕೇಸುಗಳನ್ನು ಮುಗಿಸಿಕೊಳ್ಳಬೇಕಿದೆ ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಗೇಮ್. ಮುಂಬರುವ ಲೋಕಸಭಾ ಚುನಾವಣೆಯೇ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ಅಮಿತ್ ಶಾ ರವರಿಗೆ ಕರ್ನಾಟಕದಲ್ಲಿ ತಾನೇನೋ ಮಾಡುತ ದ್ದೇನೆ ಎಂದು ತೋರಿಸಿಕೊಳ್ಳಲು ಯಡಿಯೂರಪ್ಪನವರು ಹೀಗೆ ಮಾಡುತ್ತಿದ್ದಾರೆ. ಅವರು ಇನ್ನು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ. ಕುಮಾರಸ್ವಾಮಿಯವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ. ತಾವು ವಿರೋಧ ಪಕ್ಷದಲ್ಲಿದ್ದು ರಾಜ್ಯಕ್ಕಾಗಿ ಒಳ್ಳೆಯ ಹೋರಾಟ ಮಾಡಿ ಎಂದು ಯಡಿಯೂರಪ್ಪನವರಿಗೆ ಸಲಹೆ ನೀಡಿದರು.

  • ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು- ಸಹಿ ಸಂಗ್ರಹಕ್ಕೆ ಮುನ್ನವೇ ಹೋರಾಟಗಾರರು ವಶಕ್ಕೆ

    ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು- ಸಹಿ ಸಂಗ್ರಹಕ್ಕೆ ಮುನ್ನವೇ ಹೋರಾಟಗಾರರು ವಶಕ್ಕೆ

    ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಬೇಕು ಅಂತ ಆಗ್ರಹಿಸಿ ಕಲಬುರಗಿಯಲ್ಲಿ ಸಹಿ ಸಂಗ್ರಹಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ 30ಕ್ಕೂ ಹೆಚ್ಚು ಮಂದಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹೊಸ ದಕ್ಷಿಣ ಕರ್ನಾಟಕವೂ ಬೇಡ. ಮುಂಬೈ ಕರ್ನಾಟಕವೂ ಬೇಡ. ನಮಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಅಂತ ಇಂದು ಲಕ್ಷ ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲು ಮುಂದಾಗಿದ್ದರು. ಈಗ ಹೋರಾಟಗಾರರನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ.

    ಕಲಬುರಗಿಯ ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ನೇತೃತ್ವದಲ್ಲಿ ಮಠಾಧೀಶರು, ವಕೀಲರು, ವೈದ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು.

    ಉತ್ತರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬಂದ್‍ಗೆ ಯಾವುದೇ ಸಂಘಟನೆಗಳ ಬೆಂಬಲ ನೀಡಲಿಲ್ಲ. ಎಂದಿನಂತೆ ಸಾರಿಗೆ ಸಂಚಾರ, ಜನಜೀವನ, ಅಂಗಡಿ ಮುಂಗಟ್ಟುಗಳನ್ನ ವ್ಯಾಪಾರಸ್ಥರು ತೆರೆದಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

  • ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸುವುದು ಸರಿಯಲ್ಲ: ಗಂಗಾವತಿ ಪ್ರಾಣೇಶ್

    ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸುವುದು ಸರಿಯಲ್ಲ: ಗಂಗಾವತಿ ಪ್ರಾಣೇಶ್

    ಕೊಪ್ಪಳ: ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸಿ, ಪ್ರತ್ಯೇಕಗೊಳಿಸುವುದು ಸರಿಯಲ್ಲ ಎಂದು ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ನಡೆಯುತ್ತಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಹಾಸ್ಯ ರೂಪದಲ್ಲಿ ತಮ್ಮ ಭಾಷಣದಲ್ಲಿ ಪ್ರಾಣೇಶ ಪ್ರತಿಕ್ರಿಯೆ ನೀಡಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕೇಕ್ ಉದಾಹರಣೆಯನ್ನು ತೆಗೆದುಕೊಂಡು, ರಾಜ್ಯವನ್ನು ಕೇಕ್ ನಂತೆ ಕತ್ತರಿಸಿ, ಪ್ರತ್ಯೇಕಗೊಳಿಸುವುದು ಸರಿಯಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದಾರೆ.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ, ಅಖಂಡ ಕರ್ನಾಟಕವಿದ್ದರೆ ರಾಜ್ಯಕ್ಕೆ ಗೌರವ. ಪ್ರತ್ಯೇಕ ರಾಜ್ಯಕ್ಕಿಂತ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಮನಮುಟ್ಟುವಂತೆ ತಿಳಿಸೋಣ ಜೊತೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

    ಪ್ರತ್ಯೇಕ ರಾಜ್ಯಕ್ಕಿಂತ ಇಲ್ಲಿನ ಸಮಸ್ಯೆಗಳ ಪರಿಹಾರದ ಹಾದಿ ಹುಡುಕೋಣ. ಈ ಹಿಂದೆ ಮಹದಾಯಿ ಯೋಜನೆ ಹೋರಾಟ ನಡೆಯುವಾಗ ರೈತರನ್ನು ನಗಿಸುವ ಕೆಲಸ ಮಾಡಿದ್ದೇವೆ. ತುಂಗಭದ್ರಾ ಹೂಳು ತೆಗೆಯುವಾಗ ನಮ್ಮ ಹಾಸ್ಯ ತಂಡ ಭೇಟಿ ನೀಡಿ ಧನ ಸಹಾಯ ಕೂಡ ಮಾಡಿತ್ತು ಎಂದು ನೆನಪಿಸಿಕೊಂಡರು.

    ನಾವು ಉತ್ತರ ಕರ್ನಾಟಕದ ಭಾಷೆ ಬಳಸಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದೇವೆ. ಹೀಗಾಗಿ ಪ್ರತ್ಯೇಕ ರಾಜ್ಯ ಮಾಡಿದರೆ ಅವರು ನಮ್ಮನ್ನು ಆಹ್ವಾನಿಸುವುದಿಲ್ಲ ಎಂದು ಈ ವೇಳೆ ಹಾಸ್ಯ ಚಟಾಕಿ ಹಾರಿಸಿದರು.

  • ಅಭಿವೃದ್ಧಿ ಬಯಸುತ್ತೇವೆ ಹೊರತು ಪ್ರತ್ಯೇಕ ರಾಜ್ಯ ಅಲ್ಲ- ಎಂ.ಬಿ ಪಾಟೀಲ್

    ಅಭಿವೃದ್ಧಿ ಬಯಸುತ್ತೇವೆ ಹೊರತು ಪ್ರತ್ಯೇಕ ರಾಜ್ಯ ಅಲ್ಲ- ಎಂ.ಬಿ ಪಾಟೀಲ್

    ಬೆಂಗಳೂರು: ಪ್ರತ್ಯೇಕ ರಾಜ್ಯ ಬಯಸಿದವರು ನಾವಲ್ಲ. ಸಮಗ್ರ ಕರ್ನಾಟಕ ಬಯಸಿದವರು ನಾವು ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳು ಇದ್ದಂತೆ. ನಾವು ಅಭಿವೃದ್ಧಿಯನ್ನು ಬಯಸುತ್ತೇವೆ ಹೊರತು ಪ್ರತ್ಯೇಕ ರಾಜ್ಯ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಜನ ಮತ ನೀಡಿದ್ದಾರೆ ಅಂದ್ರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವತ್ತೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಮಾಡಿಲ್ಲ. ಕುಮಾರಸ್ವಾಮಿಯವರೂ ಮಾಡಲ್ಲ ಅನ್ನೋ ನಂಬಿಕೆ ಇದೆ ಎಂದು ಹೇಳಿದ್ದಾರೆ. ರಾಜ್ಯ ಇಬ್ಬಾಗ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಬಾರದು. ಈ ವಿಚಾರವನ್ನಿಟ್ಟುಕೊಂಡು ಬಿಎಸ್‍ವೈ ರಾಜ್ಯ ಪ್ರವಾಸ ನಡೆಸಿದ್ರೆ ಅದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಲೋಕಸಮರದಲ್ಲಿ ಉತ್ತರ ಭಾಗದ ಸಂಸದರಿಗೆ ವೋಟ್ ಹಾಕ್ಬೇಡಿ- ಪಾಟೀಲ್ ಪುಟ್ಟಪ್ಪ ಕರೆ

    ಲೋಕಸಮರದಲ್ಲಿ ಉತ್ತರ ಭಾಗದ ಸಂಸದರಿಗೆ ವೋಟ್ ಹಾಕ್ಬೇಡಿ- ಪಾಟೀಲ್ ಪುಟ್ಟಪ್ಪ ಕರೆ

    ಧಾರವಾಡ: ಪ್ರತ್ಯೇಕ ಉತ್ತರ ಕರ್ನಾಟಕದ ಹೋರಾಟದಿಂದ ಏನೂ ಪ್ರಯೋಜನವಿಲ್ಲ. ಈ ಭಾಗದ ನೂರು ಜನ ಶಾಸಕರಿದ್ದರೂ ಏನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇಲ್ಲಿ ಆಯ್ಕೆಯಾದ ಸಂಸದರು ಏನೂ ಮಾಡಿಲ್ಲ, ಅವರಿಗೆ ಓಟ್ ಮಾಡ್ಬೇಡಿ ಎಂದು ಉತ್ತರ ಕರ್ನಾಟಕ ಜನತೆಗೆ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಕರೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ಮೊದಲು ಇಂಗ್ಲೆಂಡ್, ಆಸ್ಟ್ರೇಲಿಯಾ ನೋಡಬೇಕು ಎನ್ನುವ ಹವ್ಯಾಸ ಬಿಡಲಿ. ಅವರು ಮೊದಲು ಕರ್ನಾಟಕ ನೋಡಲಿ ಅಂತ ಸಲಹೆ ನೀಡಿದ್ರು. ಎಷ್ಟೋ ಮಂದಿ ಕರ್ನಾಟಕವನ್ನೇ ನೋಡಿಲ್ಲ. ಎಷ್ಟೋ ಮಂದಿ ಮಂತ್ರಿಗಳಾಗಿದ್ದಾರೆ. ಆದ್ರೆ ಅವರು ಉತ್ತರ ಕರ್ನಾಟಕಕ್ಕೆ ಬಂದೇ ಇಲ್ಲ. ಸಿನೆಮಾ ನಟರೊಬ್ಬರಿಗೆ ವೈದ್ಯಕೀಯ ಸೇವೆ ಬೇಕಾಯಿತು. ಸಿಂಗಾಪುರಕ್ಕೆ ಹೋದ್ರು. 3 ಕೋಟಿ ರೂ. ಖರ್ಚಾಯಿತು. ಇದು ರಾಜ್ಯ ಕಟ್ಟೋ ಯೋಜನೆಯಾ? ಅವರು ಕರ್ನಾಟಕವನ್ನು ನೋಡಿಲ್ಲ. ಹೀಗಾಗಿ ಅವರನ್ನು ಜನ ನೋಡಿಲ್ಲ ಅಂದ್ರು.

    ಈ ಹಿನ್ನೆಲೆಯಲ್ಲಿ ಸರ್ಕಾರ ತಮ್ಮ ಶಾಸಕರಿಗೆ ಏನಾದ್ರೂ ಉಪಕಾರ ಮಾಡಬೇಕು. ಕರ್ನಾಟಕವನ್ನು ಅವರಿಗೆ ತೋರಿಸಬೇಕು. ಹೀಗಾಗಿ ರಾಜ್ಯದ ಬಗ್ಗೆ ಅವರಿಗೆ ಆಸಕ್ತಿ ಮೂಡಲಿ. ವಿಷಾದವೆಂದರೆ ಉತ್ತರ ಕರ್ನಾಟಕದ ಶಾಸಕರು ಕೂಡ ಆ ಶಾಸಕರ ಭಾಗವಾಗಿದ್ದಾರೆ. ಅವರು ಜನರನ್ನು ಬಿಟ್ಟು ನಡೇತಿರಬೇಕಾದ್ರೆ ಜನ ಕೂಡ ಅವರನ್ನು ಬಿಟ್ಟು ನಡೀಬೇಕಾಗುತ್ತದೆ ಅಂತ ಸಿಡಿಮಿಡಿಗೊಂಡರು.

    ಅನ್ಯಾಯವಾಗಿದೆ ಆದ್ರೆ ಹೋರಾಟದ ಮೂಲಕ ನಾವು ಅದನ್ನು ಪಡೀಬೇಕು. ಇಷ್ಟಕ್ಕೆ ನಿಮ್ಮನ್ನು ಬಿಡಲ್ಲ. ಹೀಗಾಗಿ ಹೋರಾಟ ಮಾಡಿಯಾದ್ರು ಸರಿ ಕರ್ನಾಟಕವನ್ನು ಸಮಗ್ರವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ ಅವರು, ಒಂದು ವೇಳೆ ಜನ ವಿಭಜನೆ ಆಗುತ್ತೇವೆ ಅನ್ನೋ ಹಂತಕ್ಕೆ ಬಂದ್ರೆ ಏನೂ ಪ್ರಯೋಜನವಾಗಲ್ಲ. ಯಾಕಂದ್ರೆ ಆಂಧ್ರಪ್ರದೇಶ, ಹೈದರಾಬಾದ್, ತೆಂಗಾಣದಂತಹ ಸ್ಥಿತಿಗೆ ನಾವಿನ್ನು ಮುಟ್ಟಿಲ್ಲ ಅಂದ್ರು.

    ಉತ್ತರ ಕರ್ನಾಟಕದಲ್ಲಿ ನೂರು ಮಂದಿ ಶಾಸಕರಿದ್ದಾರೆ. ಆದ್ರೆ ಈ ಭಾಗಕ್ಕೆ ಅನ್ಯಾಯವಾಗುತ್ತಿದೆ ಅಂತ ಗೊತ್ತಿದ್ರೂ ಬಾಯಿ ಮುಚ್ಚಿ ಕೂತಿದ್ದಾರೆ ಅಂತ ಕಿಡಕಾರಿದ್ರು.