Tag: sentence

  • ಜಿಲ್ಲೆಯಲ್ಲೇ ಫಸ್ಟ್ ಟೈಂ – ರಾಮನಗರ ನ್ಯಾಯಾಲಯದಿಂದ ಅತ್ಯಾಚಾರಿಗೆ ಗಲ್ಲು ಶಿಕ್ಷೆ

    ಜಿಲ್ಲೆಯಲ್ಲೇ ಫಸ್ಟ್ ಟೈಂ – ರಾಮನಗರ ನ್ಯಾಯಾಲಯದಿಂದ ಅತ್ಯಾಚಾರಿಗೆ ಗಲ್ಲು ಶಿಕ್ಷೆ

    ರಾಮನಗರ: ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅತ್ಯಾಚಾರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

    9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಸಲೀಂಗೆ 50 ಸಾವಿರ ರೂ. ದಂಡ ಮತ್ತು ಗಲ್ಲು ಶಿಕ್ಷೆ ವಿಧಿಸಿ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದ 3ನೇ ಹೆಚ್ಚುವರಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಆದೇಶ ಪ್ರಕಟಿಸಿದ್ದಾರೆ.

    2012 ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಬೆಂಗಳೂರು ದಕ್ಷಿಣ ತಾಲೂಕಿನ ತಾವರೇಕರೆಯಲ್ಲಿ 9 ವರ್ಷದ ಬಾಲಕಿ ಹೀನಾ ಕೌಸರ್ ಎಂಬಾಕೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು. ಬೀಡಿ ತರಲು ಅಂಗಡಿಗೆ ಕಳುಹಿಸಿದ್ದ ಸಂದರ್ಭದಲ್ಲಿ ನೆರೆಮನೆಯಲ್ಲಿದ್ದ ಬೆಂಗಳೂರಿನ ಗೋರಿಪಾಳ್ಯದ ಸಲೀಂ (35) ಆಕೆಯನ್ನು ಮನೆಯ ಒಳಗೆ ಕರೆದು ಅತ್ಯಾಚಾರ ಮಾಡಿ ನಂತರ ಕೊಲೆಗೈದಿದ್ದ. ನಂತರ ಆರೋಪಿ ಸಲೀಂನನ್ನು ಬಂಧಿಸಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದಲ್ಲಿ 23 ಕ್ಕೂ ಹೆಚ್ಚು ಸಾಕ್ಷಿಗಳು ಸಲೀಂ ವಿರುದ್ಧ ಸಾಕ್ಷಿ ನುಡಿದಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಕೃತ್ಯವನ್ನು ಸಾಬೀತುಪಡಿಸಿತ್ತು. ತೀರ್ಪು ಪ್ರಕಟವಾದ ಬಳಿಕ ಹೊರ ಬಂದ ಸಲೀಂ ವಾದ ಮಂಡಿಸಿದ್ದ ಸರ್ಕಾರಿ ಪರ ವಕೀಲರು ಹಾಗೂ ಮಾಧ್ಯಮದವರನ್ನು ಕಂಡು ಕೆಂಡಾಮಂಡಲವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೇ ಕೋರ್ಟ್ ಆವರಣದಲ್ಲಿ ಸಿಕ್ಕ ಕಲ್ಲನ್ನು ಮಾಧ್ಯಮದವರ ಮೇಲೆ ಹಾಗೂ ವಕೀಲರ ಮೇಲೆ ತೂರಿ ಪೊಲೀಸರ ಬಳಿ ಇದ್ದ ರೈಫಲ್ ಕಿತ್ತುಕೊಳ್ಳುವ ಯತ್ನ ನಡೆಸಿದ್ದಾನೆ.

    ಆರೋಪಿಯ ಈ ವರ್ತನೆಯನ್ನು ನೋಡಿ ಪೊಲೀಸರು ಮೂಕರಂತೆ ವರ್ತಿಸಿದ್ದಾರೆ. ಅಲ್ಲದೇ ಅಪರಾಧಿಯನ್ನ ಕೇವಲ ಸಮಾಧಾನ ಪಡಿಸಲು ಮುಂದಾದರು.

  • ಸೆಕ್ಸ್ ನಂತ್ರ ಗೊತ್ತಾಗಿದ್ದು, ಅವಳು ಮಂಗಳಮುಖಿ-ಕೊನೆಗೆ 119 ಬಾರಿ ಇರಿದು ಕೊಂದ

    ಸೆಕ್ಸ್ ನಂತ್ರ ಗೊತ್ತಾಗಿದ್ದು, ಅವಳು ಮಂಗಳಮುಖಿ-ಕೊನೆಗೆ 119 ಬಾರಿ ಇರಿದು ಕೊಂದ

    ವಾಷಿಂಗ್ಟನ್: ತಾನು ಲೈಂಗಿಕ ಕ್ರಿಯೆ ನಡೆಸಿದ್ದು ಮಂಗಳಮುಖಿಯೊಂದಿಗೆ ತಿಳಿದ ವ್ಯಕ್ತಿ ಕೋಪದಿಂದ ಆಕೆಯನ್ನು ಹರಿತವಾದ ಚಾಕುವಿನಿಂದ ಸುಮಾರು 119 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.

    ಡೀ ವಿಗಾಂ (25) ಕೊಲೆಯಾದ ಮಂಗಳಮುಖಿ. ಡುವ್ಯಾನ್ ಹಿಕ್ಯಾರಸನ್(55) ಎಂಬಾತನೇ ಮಂಗಳಮುಖಿಯನ್ನು ಕೊಲೆಗೈದ ವ್ಯಕ್ತಿ. ಡೀ ವಿಗಾಂ ಮತ್ತು ಡುವ್ಯಾನ್ ಮಿಸಿಸಿಪ್ಪಿ ನಗರದ ಬೆಸ್ಟ್ ವೆಸ್ಟರ್ನ್ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಕೊನೆಯಲ್ಲಿ ಡೀ ಮೊದಲು ಗಂಡಸು ಎಂಬ ರಹಸ್ಯ ಗೊತ್ತಾಗಿದೆ.

    ತಾನು ಮಂಗಳಮುಖಿ ಎಂಬುದನ್ನು ಡೀ ಮರೆಮಾಚಿದ್ದಳು. ಇದ್ರಿಂದ ಕುಪಿತಗೊಂಡ ಡುವ್ಯಾನ್ ಹರಿತವಾದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಡೀ ಮುಖದ ತುಂಬೆಲ್ಲಾ ಇರಿದಿದ್ದು, 10 ಇಂಚಿನಷ್ಟು ಗಾಯಗಳನ್ನು ಮಾಡಿ ಕೊಲೆಗೈದಿದ್ದಾನೆ.

    ಡೀ ವಿಗಾಂ ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದಳು. ಇನ್ನೂ ಡುವ್ಯಾನ್ ಮಾಜಿ ನಾವಿಕನಾಗಿದ್ದನು. ಕೊಲೆಯಾದ ಎರಡು ದಿನಗಳ ನಂತರ ಡುವ್ಯಾನನ್ನು ಕೀಸ್ಲೆರ್ ವಾಯು ಸೇನೆಯ ಬಳಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಕೆಲವು ತಿಂಗಳುಗಳ ಹಿಂದೆ ಕಪಲ್ ಆನ್‍ಲೈನ್‍ನಲ್ಲಿ ಪರಿಚಯಗೊಂಡಿದ್ರು.

    ಎಲ್ಲಾ ಕಳೆದುಕೊಂಡೆ: ಪೊಲೀಸರು ಡುವ್ಯಾನ್‍ನ್ನು ಕೋರ್ಟ್ ಗೆ ಹಾಜರುಪಡಿಸಿದಾಜ ಜಡ್ಜ್ ಮುಂದೆ ನಾನು ಎಲ್ಲಾ ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾನೆ. ನಾವಿಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ನಂತರ ಆಕೆ, ತಾನು ಮೊದಲಿಗೆ ಗಂಡು ಮಗುವಾಗಿ ಹುಟ್ಟಿ, ನಂತರ ಮುಂದಿನ ದಿನಗಳಲ್ಲಿ ತಾನು ಹೆಣ್ಣಾಗಿರುವ ವಿಚಾರವನ್ನು ತಿಳಿಸಿದ್ದಾಳೆ ಎಂದಿದ್ದಾನೆ.

    ಕೋರ್ಟ್ ನಲ್ಲಿ ಡುವ್ಯಾನ್ ತಾನು ಮಾಡಿದ ತಪ್ಪಿಗೆ ಡೀ ವಿಗಾಂಳ ಕುಟುಂಬಸ್ಥರಲ್ಲಿಯೂ ಕ್ಷಮೆ ಕೇಳಿದ್ದಾನೆ. ಕೋರ್ಟ್ ಡುವ್ಯಾನ್‍ಗೆ 40 ವರ್ಷಗಳ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

    ನಾನು ಅವಳ ಜೀವನ ಶೈಲಿಯನ್ನು ಒಪ್ಪಿಕೊಂಡಿರಲಿಲ್ಲ. ನನಗೆ ಅವನ ನೋವು ಮತ್ತು ಆ ಕ್ಷಣದ ಕೋಪ ಅರ್ಥವಾಗುತ್ತದೆ. ಆದ್ರೂ ನಾನು ನನ್ನ ಸಹೋದರನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಡೀ ಸೋದರಿ ಡೇನಿಶಾ ವಿಗಾಂ ಹೇಳಿದ್ದಾರೆ.