Tag: Senior Officers

  • ಬೇಕಾದ್ರೆ ತೊಗೊಳ್ಳಿ ಬೇಡವಾದ್ರೆ ಬಿಡಿ: ಟಾರ್ಪಲ್ ವಿತರಣೆ ವೇಳೆ ರೇವಣ್ಣ ಸಿಟ್ಟು

    ಬೇಕಾದ್ರೆ ತೊಗೊಳ್ಳಿ ಬೇಡವಾದ್ರೆ ಬಿಡಿ: ಟಾರ್ಪಲ್ ವಿತರಣೆ ವೇಳೆ ರೇವಣ್ಣ ಸಿಟ್ಟು

    ಹಾಸನ: ಅಲ್ಲಿ ಆ ನನ್ ಮಕ್ಳು ದುಡ್ಡು ಹೊಡ್ಕೊಂಡಿರ್ತಾರೆ ಎಂದು ಮಾಜಿ ಸಚಿವ ರೇವಣ್ಣ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೆಕೋಟೆಯಲ್ಲಿ ರೇವಣ್ಣ ಅವರು ಸಹಾಯಧನದಲ್ಲಿ ರೈತರಿಗೆ ಟಾರ್ಪಲ್ ವಿತರಣೆ ಮಾಡುತ್ತಿದ್ದರು. ಈ ವೇಳೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ರೇವಣ್ಣ ಅವರು ಹಿರಿಯ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದಿದ್ದಾರೆ.

    ರೇವಣ್ಣ ಅವರು ಟಾರ್ಪಲ್ ವಿತರಿಸುತ್ತಿದ್ದ ವೇಳೆ ರೈತರೊಬ್ಬರು, ಸರ್ ಹೊರಗಡೆ 1,050 ರೂ. ಸಿಗುತ್ತೆ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೇವಣ್ಣ ಅವರು ಏಯ್ ಬೇಕಾದ್ರೆ ತಗೊಳ್ಳಿ ಬೇಡವಾದ್ರೆ ಬಿಡಿ ಎಂದು ಗರಂ ಆಗಿದ್ದಾರೆ.

    ಬಳಿಕ ಅಲ್ಲಿ ಆ ನನ್ ಮಕ್ಕಳು ದುಡ್ಡನ್ನು ಹೊಡೆದುಕೊಂಡಿರುತ್ತಾರೆ. ಹಿರಿಯ ಅಧಿಕಾರಿಗಳು ಅವರಲ್ಲ, ಅವರು ಹೊಡ್ಕೊಂದು ನಿಮ್ಮ ಮೇಲೆ ಹಾಕ್ತಾರೆ ಅಷ್ಟೇ. ಇದೇನು ನನಗೆ ಗೊತ್ತಿಲ್ಲದಿರೋ ಬೇಳೆ ಕಾಳಲ್ಲ. ಕೆಳ ಹಂತದ ಅಧಿಕಾರಿಗಳು ಏನೂ ಮಾಡಲ್ಲ ಎಲ್ಲಾ ಮೇಲಾಧಿಕಾರಿಗಳ ಕೆಲಸ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.