Tag: senior officer

  • ಬಿಎಂಟಿಸಿ ಮೇಲಾಧಿಕಾರಿಗಳಿಂದ ಕಿರುಕುಳ -ಚಾಲಕ ಕಮ್ ನಿರ್ವಾಹಕ ರಾಜೀನಾಮೆಗೆ ನಿರ್ಧಾರ

    ಬಿಎಂಟಿಸಿ ಮೇಲಾಧಿಕಾರಿಗಳಿಂದ ಕಿರುಕುಳ -ಚಾಲಕ ಕಮ್ ನಿರ್ವಾಹಕ ರಾಜೀನಾಮೆಗೆ ನಿರ್ಧಾರ

    ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಚಾಲಕ- ನಿರ್ವಾಹಕರಿಗೆ ಕಿರುಕುಳ ಹೆಚ್ಚಾಗಿದೆ ಎನ್ನುವುದಕ್ಕೆ ಘಟನೆಯೊಂದು ಬೆಳಕಿಗೆ ಬಂದಿದೆ.

    ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಕಮ್ ಕಂಡೆಕ್ಟರ್ ಆಗಿರುವ ಪುಂಡಲಿಕ ಹನುಮಂತ ಉಮರಾಣಿ ಸ್ವ-ಇಚ್ಛೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ. ಡಿಪೋ 32ರಲ್ಲಿ ಬಿಎಂಟಿಸಿಯ ಚಾಲಕ ಹಾಗೂ ನಿರ್ವಾಹಕರಾಗಿರುವ ಪುಂಡಲಿಕ ಹನುಮಂತ ಉಮರಾಣಿ, ಇದೇ ತಿಂಗಳ 15ರಂದು ಬನಶಂಕರಿ- ಅತ್ತಿಬೆಲೆ ಮಾರ್ಗದಲ್ಲಿ ಕಂಡೆಕ್ಟರ್ ಆಗಿ ಕರ್ತವ್ಯದಲ್ಲಿ ಇದ್ದರು.

    ಕರ್ತವ್ಯದಲ್ಲಿ ಇದ್ದಾಗ, ಟಿಕೆಟ್ ತನಿಖಾಧಿಕಾರಿ ಗಂಗಮ್ಮ ತಲವಾರ್ ಎಂಬುವವರು ಕೇಸ್ ಹಾಕಿದ್ದರು ಎನ್ನಲಾಗಿದೆ. ನನ್ನ ಮೇಲೆ ಕೇಸ್ ಹಾಕಿದ್ದಕ್ಕೆ ಡಿಪೋದಲ್ಲಿ ಅಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಾನು ಕರ್ತವ್ಯದಲ್ಲಿ ಇದ್ದಾಗ ಕಳ್ಳನ ಹಾಗೇ ನೋಡಿ ಅವಮಾನ ಮಾಡಿದ್ದಾರೆ. ಈ ಅವಮಾನಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದಾ ಎಂದು ಒಮ್ಮೊಮ್ಮೆ ಎನಿಸುತ್ತೆ ಎಂದು ನಿರ್ವಾಹಕ ಭಾವುಕರಾಗಿ ಮಾತನಾಡಿದರು.

    ಇಂದು ಫ್ರೀಡಂಪಾರ್ಕ್ ರಸ್ತೆಯಲ್ಲಿ ಸಾರಿಗೆ ನೌಕರರ ಪ್ರತಿಭಟನೆಗೆ ಬಂದಿದ್ದ ನಿರ್ವಾಹಕ ಪುಂಡಲೀಕ ಹನುಮಂತ ನೇರವಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ.

  • ಕಿರುಕುಳ ತಪ್ಪಿಸಿ ಎಂದು ಶಾಸಕರ ಮುಂದೆ ಹಿರಿಯ ಅಧಿಕಾರಿ ಕಣ್ಣೀರು

    ಕಿರುಕುಳ ತಪ್ಪಿಸಿ ಎಂದು ಶಾಸಕರ ಮುಂದೆ ಹಿರಿಯ ಅಧಿಕಾರಿ ಕಣ್ಣೀರು

    ಮೈಸೂರು: ದೊಡ್ಡ ಹುದ್ದೆಯಲ್ಲಿ ಇರುವವರು ತಮ್ಮ ಕೆಳಗಿನ ಅಧಿಕಾರಿಗಳಿಗೆ ಕಿರುಕುಳ ನೀಡೋದು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕೆಳ ಹಂತದ ಅಧಿಕಾರಿಯೇ ತನ್ನ ಮೇಲಿನ ಅಧಿಕಾರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

    ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೆಳ ಹಂತದ ಅಧಿಕಾರಿ ಹಾಗೂ ಅವರ ಪತಿಯಿಂದ ಆಗುತ್ತಿರುವ ಕಿರುಕುಳ ಹೇಳಿಕೊಂಡು ಹಿರಿಯ ಅಧಿಕಾರಿ ಶಾಸಕರ ಮುಂದೆ ಕಣ್ಣೀರಿಟ್ಟಿದ್ದಾರೆ. ತಾಲೂಕಿನ ಕಳಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಕಣ್ಣೀರಿಟ್ಟಿದ್ದಾರೆ.

    ನವಿಲೂರು ಉಪ ಪ್ರಾಥಮಿಕ ಕೇಂದ್ರ ಕಿರಿಯ ಸಹಾಯಕ ವೈದ್ಯಾಧಿಕಾರಿ ಶಾರದಾ ಹಾಗೂ ಇವರ ಪತಿ ಗೋಪಾಲ ಕೃಷ್ಣ ಎಂಬವರು ನನಗೆ ಕೆಲಸದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮುಕ್ತಿ ಕೊಡಿಸಿ ಎಂದು ಶಾಸಕರಾದ ಹರ್ಷವರ್ಧನ್ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟರು.

    ಕೆಲಸದ ವಿಚಾರದಲ್ಲಿ ಸಹಾಯಕ ವೈದ್ಯಾಧಿಕಾರಿ ಶಾರದಾ ಅವರಿಗೆ ನೋಟಿಸ್ ನೀಡಿದ್ದೆ. ಈ ಕಾರಣಕ್ಕೆ ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಪತಿ ಆರ್.ಟಿ.ಐ.ನಲ್ಲಿ ಅನಗತ್ಯವಾಗಿ ಅರ್ಜಿ ಸಲ್ಲಿಸಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದರು. ಮನವಿ ಆಲಿಸಿದ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ವಿಷಯ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

  • ಹಿರಿಯ ಅಧಿಕಾರಿಗಳನ್ನು ನಾನ್ ನೋಡ್ಕೋತಿನಿ- ಕಂತೆ ಕಂತೆ ಹಣ ಪಡೆದ ಪೊಲೀಸ್ ಪೇದೆ

    ಹಿರಿಯ ಅಧಿಕಾರಿಗಳನ್ನು ನಾನ್ ನೋಡ್ಕೋತಿನಿ- ಕಂತೆ ಕಂತೆ ಹಣ ಪಡೆದ ಪೊಲೀಸ್ ಪೇದೆ

    ಬೆಂಗಳೂರು: ಸಿಸಿಬಿ ಪೊಲೀಸ್ ಪೇದೆಯೊಬ್ಬರು ಸ್ಪಾ ಮಾಲೀಕರೊಬ್ಬರಿಂದ ಕಂತೆ ಕಂತೆ ಹಣ ಪಡೆದಿರುವ ವಿಡಿಯೋ ಬಹಿರಂಗವಾಗಿದೆ.

    ರಾಜಾಜಿನಗರದ ಸ್ಪಾ ಬಳಿ ಹೋದ ಇಬ್ಬರು ಪೇದೆಗಳು, ಮಾಲೀಕನಿಗೆ “ನೀವೇನು ಭಯಪಡಬೇಡಿ ಹಿರಿಯ ಅಧಿಕಾರಿಗಳನ್ನು ನಾವು ನೋಡಿಕೊಳ್ಳುತ್ತೇವೆ. ಸಿಸಿಬಿ ಹಿರಿಯ ಅಧಿಕಾರಿಗಳು ರೇಡ್ ಮಾಡುವಾಗ ನಮಗೆ ಮೊದಲೇ ಇಂತಹ ದಿನ ನಿಮ್ಮ ಏರಿಯಾದಲ್ಲಿ ರೇಡ್‍ಗೆ ಬರುತ್ತೇವೆ, ಹುಷಾರಾಗಿ ಎಂದು ನಮಗೆ ವಾಟ್ಸಾಪ್ ಕಾಲ್ ಮಾಡಿ ಹೇಳುತ್ತಾರೆ. ನಾವು ಆಗ ಎಲ್ಲಾ ಅಕ್ರಮ ಚಟುವಟಿಕೆಗಳ ನಡೆಯುವ ಜಾಗದ ಮಾಲೀಕರಿಗೆ ಅಲರ್ಟ್ ಮಾಡಿಬಿಡ್ತೀವಿ. ಸೀನಿಯರ್ ಆಫೀಸರ್ ಗಳ ಬಗ್ಗೆ ನೀವೇನು ಭಯಪಡಬೇಡಿ” ಎಂದು ಹೇಳಿದ್ದಾರೆ.

    ಸದ್ಯ ಇಬ್ಬರು ಪೇದೆ ಸ್ಪಾ ಮಾಲೀಕರ ಬಳಿ ಹಣ ಪಡೆದಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಡಿಸಿಪಿ ಕುಲ್ ದಿಲ್ ಕುಮಾರ್ ಜೈನ್ ಮಾತನಾಡಿ, ವಿಡಿಯೋ ವಿಚಾರ ನಮ್ಮ ಗಮನಕ್ಕೆ ಬಂದಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು,