ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲಾ 70 ವರ್ಷ ತುಂಬಿದವರಿಗೂ ಉಚಿತ ಆರೋಗ್ಯ ಸೇವೆ ನೀಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ. 70 ತುಂಬಿದ ಹಿರಿಯ ನಾಗರಿಕರಿಗೆ ವಯೋ ವಂದನಾ ಯೋಜನೆಯ ಅನುಸಾರ ಆರೋಗ್ಯ ಸೇವೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬೆಂಗಳೂರು: ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ, ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ ಪೋಷಕ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007 ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ(Krishna Byre Gowda) ಅವರು ಮಾಹಿತಿ ನೀಡಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನೇ ಆರೈಕೆ ಮಾಡದಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ವೇಳೆ ಮಕ್ಕಳು ಅಥವಾ ಸಂಬಂಧಿಕರು ತಮ್ಮನ್ನು ಆರೈಕೆ ಮಾಡದಿದ್ದರೆ ಅವರ ಹೆಸರಿಗೆ ಮಾಡಿರುವ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಹಿರಿಯ ನಾಗರಿಕರಿಗೆ ಇದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಚುನಾವಣೆ ವೇಳೆ ಅಭ್ಯರ್ಥಿ ಮೇಲೆ ಹಲ್ಲೆ ಕೇಸ್ – ಸಚಿವ ಮುನಿಯಪ್ಪಗೆ ಜಾಮೀನು
ಕೇಂದ್ರ ಸರ್ಕಾರ 2007ರಲ್ಲೇ `ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ಯನ್ನು ಜಾರಿಗೆ ತಂದಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದಲೇ ಪರಿಷತ್‌ನಲ್ಲಿ ಈ ಕಾಯ್ದೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ. ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಸೆಕ್ಷನ್ 09ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ವಸತಿ ಯೋಜನೆಗಳ ಸಹಾಯಧನ ಹೆಚ್ಚಳಕ್ಕೆ ಕ್ರಮ: ಸಚಿವ ಜಮೀರ್
ಹಿರಿಯ ನಾಗರಿಕರ ದೂರು ಸಾಬೀತಾದರೆ, ತಂದೆ ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೇ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ. ಈ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಈಗಾಗಲೇ ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಲಾಗುತ್ತಿದೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಅಪೀಲು ಹೋಗಲೂ ಸಹ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು. ಇದನ್ನೂ ಓದಿ: ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ
* ತೃತೀಯಲಿಂಗಿಗಳಿಗೂ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ
* ದಿವ್ಯಾಂಗರಿಗೆ ವಿಶೇಷ ಮನೆಗಳ ನಿರ್ಮಾಣ
ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ʻಸಂಕಲ್ಪ ಪತ್ರʼ (Sankalp Patra) ಹೆಸರಿನಲ್ಲಿ ಬಹುನಿರೀಕ್ಷಿತ ಪ್ರಣಾಳಿಕೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿಂದು ಪ್ರಧಾನಿ ಮೋದಿ ಪ್ರಣಾಳಿಕೆ (BJP Manifesto) ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಜೆ.ಪಿ ನಡ್ಡಾ, ರಾಜನಾಥ್ ಸಿಂಗ್ ವೇದಿಕೆಯಲ್ಲಿದ್ದರು.
ಇಡೀ ದೇಶ ಈ ಪ್ರಣಾಳಿಕೆಗಾಗಿ ಕಾಯುತ್ತಿದೆ. ಕಳೆದ 10 ವರ್ಷದಲ್ಲಿ ನೀಡಿದ ಎಲ್ಲ ಭರವಸೆ ಗ್ಯಾರಂಟಿ (Modi Guarantee) ರೂಪದಲ್ಲಿ ತಳಮಟ್ಟದಿಂದ ಜಾರಿ ಮಾಡಿದೆ. ಈ ಬಾರಿ ಯುವಶಕ್ತಿ, ನಾರಿಶಕ್ತಿ, ಬಡವರು ಮತ್ತು ರೈತರಿಗೆ ನಮ್ಮ ಪ್ರಣಾಳಿಕೆ ಶಕ್ತಿ ತುಂಬಲಿದೆ. ಗೌರವಯುತ ಜೀವನ, ಗುಣಮಟ್ಟದ ಜೀವನ, ಅವಕಾಶಗಳ ಸೃಷ್ಟಿ ಮಾಡುವ ಬಗ್ಗೆ ನನ್ನ `ಸಂಕಲ್ಪ’ ಇದೆ. ಮೂಲಸೌಕರ್ಯಗಳ ಅಭಿವೃದ್ಧಿ ಮೂಲಕ ಉದ್ಯೋಗ ಹೆಚ್ಚಿಸುವ ಗುರಿ ಹೊಂದಿದೆ. ಸ್ಟಾರ್ಟ್ಅಪ್‌ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಯುವ ಜನರಿಗೆ ಹೆಚ್ಚು ಅವಕಾಶ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆ ಮುಂದಿನ 5 ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಗ್ಯಾರಂಟಿ ನೀಡಿದ್ದಾರೆ.
75 ವರ್ಷ ಮೇಲ್ಪಟ್ಟವರು, ತೃತೀಯ ಲಿಂಗಿಗಳು ʻಆಯುಷ್ಮಾನ್ ಭಾರತ್ʼ ವ್ಯಾಪ್ತಿಗೆ:
ಇತ್ತೀಚಿನ ದಿನಗಳಲ್ಲಿ ವೃದ್ಧರು ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ದೊಡ್ಡ ಚಿಂತೆಯಾಗಿದೆ. ಮಧ್ಯಮ ವರ್ಗದ ಜನರಿಗೆ ಇದು ಇನ್ನೂ ಗಂಭೀರ ಚಿಂತನೆಯಾಗಿದೆ. ಹಾಗಾಗಿ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನೂ ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಈ ಮೂಲಕ 5 ಲಕ್ಷ ರೂ. ರೈ.ವೆರೆಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಅಲ್ಲದೇ ತೃತೀಯ ಲಿಂಗಿಗಳನ್ನೂ ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಯಲ್ಲಿ ತರಲು ನಿರ್ಧರಿಸಿದೆ. ಇದರೊಂದಿಗೆ ಜನೌಷಧಿ ಕೇಂದ್ರದಲ್ಲಿ ಮೆಡಿಸನ್‌ಗಳಿಗೆ 80% ರಿಯಾಯಿತಿ ಸಿಗಲಿದೆ ಎಂದಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು:
* `ನಾರಿ ಶಕ್ತಿ’ ಯೋಜನೆಯಲ್ಲಿ ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ತರಬೇತಿ. `ನಮೋ ಡ್ರೋನ್’ ಅಡಿ 3 ಕೋಟಿ ಮಹಿಳೆಯರನ್ನು `ಲಕ್ ಪತಿ’ ದೀದಿ ಮಾಡುವ ಗುರಿ. ಮಹಿಳಾ ಕ್ರೀಡಾಪಟುಗಳಿಗೆ ವಿಶೇಷ ಯೋಜನೆ, ಮಹಿಳೆಯರಲ್ಲಿ ಉಂಟಾಗುವ ರೋಗಗಳ ಬಗ್ಗೆ ವಿಶೇಷ ಅಭಿಯಾನ, ಕಿಸಾನ್ ಕಾರ್ಡ್ ಯೋಜನೆ ವಿಸ್ತರಣೆ, `ಪಿಎಂ ಶ್ರೀಅನ್ನ’ ಯೋಜನೆಗೆ ಹೆಚ್ಚಿನ ಒತ್ತು.
* ದೇಶಾದ್ಯಂತ ಸಂಚರಿಸುತ್ತಿರುವ ಒಂದೇ ಭಾರತ್ ಇನ್ಮುಂದೆ ಸ್ಲೀಪರ್, ಚೇರ ಕಾರ್ ಮತ್ತು ಮೆಟ್ರೋ ಮೂರು ಆಯಾಮದಲ್ಲಿ ಸಂಚಾರ ಮಾಡಲಿದೆ. ಬುಲೆಟ್ ಟ್ರೈನ್ ಕೆಲಸ ಅಂತ್ಯಕ್ಕೆ ಬಂದಿದೆ. ದಕ್ಷಿಣ ಭಾರತಕ್ಕೆ ಬುಲೆಟ್ ಟ್ರೈನ್ ಸಮೀಕ್ಷೆ ಶೀಘ್ರದಲ್ಲೇ ಶುರುವಾಗಲಿದ್ದು, ಉತ್ತರ, ದಕ್ಷಿಣ ಮತ್ತು ಈಶಾನ್ಯ ಭಾಗದಲ್ಲಿ ಬುಲೆಟ್ ಟ್ರೈನ್ ಕಾರ್ಯ ಆರಂಭಿಸಲಾಗುವುದು. ಒಂದೇ ಭಾರತ್ ಮೆಟ್ರೋ ಸಹ ಶುರುವಾಗಲಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ
* ಇನ್ನೂ ಗ್ರೀನ್ ಎನರ್ಜಿಗೆ ಆದ್ಯತೆ ನೀಡಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲಿದೆ. ಕಳೆದ ವರ್ಷ 17 ಲಕ್ಷ ವಾಹನ ಮಾರಾಟವಾಗಿದೆ. ಪ್ರತಿ ವರ್ಷ 5 ಸಾವಿರ ಕಿಮೀ ರೈಲ್ವೇ ಹಳಿ ಸಂಪರ್ಕ ವಿಸ್ತರಣೆ ಮಾಡಲಾಗಿದೆ. ರೈಲು ಅಪಘಾತ ತಪ್ಪಿಸಲು `ಕವಚ’ ಸಿಸ್ಟಮ್ ವಿಸ್ತರಣೆ ಮಾಡಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣಗಳನ್ನ ನಿರ್ಮಾಣ ಮಾಡಲಾಗಿದೆ.
* ನಮ್ಮ ಸರ್ಕಾರ ದೇಶಾದ್ಯಂತ 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿದೆ. ಇಲ್ಲಿಗೆ ಕೆಲಸ ಮುಗಿದಿಲ್ಲ, ಬಡತನದಿಂದ ಹೊರ ಬಂದ ಜನರನ್ನ ಇನ್ನೂ ಮುಂದೆತರುವ ಅನಿವಾರ್ಯತೆ ಇದೆ. ಅದಕ್ಕಾಗಿ `ಗರೀಬ್ ಕಲ್ಯಾಣ್’ ಯೋಜನೆಗಳನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸಲಿದೆ.
* ದೇಶಾದ್ಯಂತ 4 ಕೋಟಿ ಮನೆ ಬಡವರಿಗೆ ಕಟ್ಟಿಕೊಡಲಾಗಿದೆ. ಇನ್ನೂ 3 ಕೋಟಿ ಮನೆಗಳನ್ನು ಕಟ್ಟಿ ಕೊಡಲಾಗುವುದು. ಅಂಗವಿಕಲರಿಗೂ ವಿಶೇಷ ಮನೆ ವ್ಯವಸ್ಥೆ ಮಾಡಲಾಗುವುದು. ಕಡಿಮೆ ಬೆಲೆಯಲ್ಲಿ ಸಿಲಿಂಡರ್ ನೀಡಲಾಗಿತ್ತು. ಇನ್ಮುಂದೆ ಪೈಪ್‌ಲೈನ್ ಮೂಲಕ ಗ್ಯಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು. ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಅಲ್ಲದೇ ಈ ಯೋಜನೆಯಡಿ 10 ಲಕ್ಞ ರೂ.ವರೆಗೆ ಪಡೆಯುತ್ತಿದ್ದ ಸಾಲದ ಪ್ರಮಾಣವನ್ನು 20 ಲಕ್ಷ ರೂ. ವರೆಗೆ ಹೆಚ್ಚಿಸಲಾಗುವುದು.
– 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’ – ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್ – ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಣೆ
ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ತನ್ನ ಬಹುನಿರೀಕ್ಷಿತ ಪ್ರಣಾಳಿಕೆಯನ್ನು (BJP Manifesto) ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ (Narendra Modi) ಅವರು ಬಡವರು, ಮಹಿಳೆಯರು, ರೈತರು, ಮಹಿಳೆಯರ ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
70 ವರ್ಷ ಮೇಲ್ಪಟ್ಟ ಎಲ್ಲರನ್ನೂ ಹಾಗೂ ತೃತೀಯಲಿಂಗಿಗಳನ್ನು ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಆ ಮೂಲಕ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, 3 ಕೋಟಿ ಮನೆ ನಿರ್ಮಾಣ, ಪೈಪ್ ಮೂಲಕ ಮನೆಗೆ ಅಡುಗೆ ಅನಿಲ, 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’ ಯೋಜನೆ ಫಲಾನುಭವಿಗಳಾಗಲಿದ್ದಾರೆಂಬ ಭರವಸೆಯನ್ನು ಪ್ರಣಾಳಿಕೆ ನೀಡಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಗರ್ಭಕಂಠ ಕ್ಯಾನ್ಸರ್ ತಡೆಗೆ ವಿಶೇಷ ಯೋಜನೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ತಡೆಯಲು ಕಠಿಣ ಕಾನೂನು, ಹಿರಿಯ ನಾಗರಿಕರಿಗೆ ಜ್ಞಾನ ಹಂಚಿಕೆ ಪೋರ್ಟಲ್ ಹಾಗೂ ಬಡವರಿಗೆ ಉಚಿತ ಪಡಿತರ, ನೀರು ಮತ್ತು ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ
ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು, ಅಂಚೆ ಮತ್ತು ಡಿಜಿಟಲ್ ನೆಟ್ವರ್ಕ್ ಸಹಯೋಗ, ಹಿರಿಯ ನಾಗರಿಕರಿಗೆ ಯುಪಿಐ ಬಗ್ಗೆ ತರಬೇತಿ – ಮೋಸ ವಂಚನೆಗಳಿಂದ ತಪ್ಪಿಸಲು ಕ್ರಮಕೈಗೊಳ್ಳುವುದು, ಹಿರಿಯ ನಾಗರಿಕರಿಗೆ ಆಯುಷ್ ಕ್ಯಾಂಪ್ ಆಯೋಜನೆ, ರಾಜ್ಯ ಸರ್ಕಾರಗಳ ಜೊತೆ ಸೇರಿ ಹಿರಿಯ ನಾಗರಿಕರಿಗೆ ಸುಗಮ ತೀರ್ಥಯಾತ್ರೆ ವ್ಯವಸ್ಥೆ, ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ, ಭಾರತವನ್ನು ಅಂತಾರಾಷ್ಟ್ರೀಯ ನ್ಯೂಟ್ರಿ ಹಬ್ ಮಾಡುವುದು, ಕೃಷಿಗಾಗಿ ಪ್ರತ್ಯೇಕ ಸ್ಯಾಟಲೈಟ್ ಮೊದಲಾದ ಭರವಸೆಗಳನ್ನು ಬಿಜೆಪಿ ಜನರಿಗೆ ನೀಡಿದೆ. ಇದನ್ನೂ ಓದಿ: ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?
ಶೂನ್ಯ ವಿದ್ಯುತ್ ಬಿಲ್
ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ತರುವುದು, ಏಕರೂಪ ನಾಗರಿಕ ಸಂಹಿತೆ (UCC) ಜಾರಿ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್, ಮಹಿಳೆಯರಿಗಾಗಿ ಶೌಚಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಶಕ್ತಿ ವಂದನ್ ಕಾಯ್ದೆಯ ಅನುಷ್ಠಾನ, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ಬರಲಿವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಮೆಟ್ರೋ ಮತ್ತು ನೀರಿನ ಮೆಟ್ರೋಗಳು ಬರಲಿವೆ. ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ಆಧುನಿಕ ಸೌಲಭ್ಯಗಳು, ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹಾಲಿ, ಮಾಜಿ ಪ್ರಧಾನಿಗಳ ಸಮಾಗಮದಿಂದ ದೊಡ್ಡ ಸಂದೇಶ ರವಾನೆ: ಯದುವೀರ್
ನವದೆಹಲಿ: ಹಿರಿಯ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಸರ್ಕಾರ ತಿಳಿಸಿದೆ.
From March 1, people above 60 years of age and those above 45 years of age with comorbidities will be vaccinated at 10,000 govt & over 20,000 private vaccination centres. The vaccine will be given free of cost at govt centres: Union Minister Prakash Javadekar#COVID19pic.twitter.com/Rxhkkk8eSC
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್, ಮಾರ್ಚ್ 1ರಿಂದ ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಎರಡರಲ್ಲೂ ಲಸಿಕೆ ಪಡೆಯಬಹುದಾಗಿದ್ದು, 45 ವರ್ಷ ಮೇಲ್ಪಟ್ಟವರು ತಮಗೆ 2ಕ್ಕಿಂತ ಹೆಚ್ಚು ಕಾಯಿಲೆಗಳು ಇರುವ ಬಗ್ಗೆ ಸರ್ಟಿಫಿಕೇಟ್ ತೋರಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ಹೇಳಿದರು.
Those who want to get vaccinated from private hospitals will have to pay. The amount they would need to pay will be decided by the health ministry within 3-4 days as they are in discussion with manufacturers & hospitals: Union Minister Prakash Javadekar pic.twitter.com/Vi0V37oOJL
ಸುಮಾರು 10 ಸಾವಿರಕ್ಕೂ ಅಧಿಕ ಸರ್ಕಾರಿ ಕೇಂದ್ರಗಳು, 20 ಸಾವಿರಕ್ಕೂ ಅಧಿಕ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ವ್ಯಾಕ್ಸಿನ್ ಪಡೆಯಬಹುದಾಗಿದ್ದು, ಖಾಸಗಿ ಕೇಂದ್ರಗಳಲ್ಲಿ ಪಡೆಯುವವರು ಹಣ ಪಾವತಿಸಬೇಕಾಗುತ್ತದೆ. ಒಂದು ಡೋಸ್‍ಗೆ ಎಷ್ಟು ಹಣ ನೀಡಬೇಕು ಎಂಬುದನ್ನು ಎರಡ್ಮೂರು ದಿನಗಳಲ್ಲಿ ತಿಳಿಸಲಾಗುವುದು. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು.
ಜನವರಿ 16ರಿಂದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ವಿತರಣಾ ಪ್ರಕ್ರಿಯೆ ಆರಂಭವಾಗಿದ್ದು, ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಬಳಿಕ ಮುಂಚೂಣಿಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಈಗ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕೂ ಹೆಚ್ಚು ಖಾಯಿಲೆಯಿಂದ ನರಳುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ.
ಆರಂಭದಲ್ಲಿ 50 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಬಳಿಕ ವಯಸ್ಸಿನ ಅಂತರವನ್ನು 60 ವರ್ಷಕ್ಕೆ ಹೆಚ್ಚಿಸಲಾಗಿದೆ. 60 ವರ್ಷ ಮೇಲ್ಪಟ್ಟವರು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬೇಕಾದಲ್ಲಿ ಕೋ-ವಿನ್ ಆ್ಯಪ್ ಕಡ್ಡಾಯವಾಗಿ ಇರಬೇಕು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
– ಪತ್ನಿ ಮೃತಪಟ್ಟ ಒಂದು ವರ್ಷದಲ್ಲೇ ಮತ್ತೊಂದು ಮದ್ವೆ
– ತನಗಿಂತ 25 ವರ್ಷ ಕಡಿಮೆ ವಯಸ್ಸಿನ ಮಹಿಳೆ ಜೊತೆ ವಿವಾಹ
ಲಕ್ನೋ: ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ ಎಂಟು ಹಿರಿಯ ನಾಗರಿಕರೊಂದಿಗೆ ಮದುವೆ ಆಗಿದ್ದಾಳೆ. ವಿವಾಹವಾದ ಕೆಲ ದಿನಗಳ ನಂತರ ನಗದು ಮತ್ತು ಆಭರಣಗಳ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ನಡೆದಿದೆ.
ಇತ್ತೀಚೆಗೆ ಘಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಮದುವೆಯಾಗಿ ಮೋಸ ಹೋಗಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಮೋನಿಕಾ ಮಲಿಕ್ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?
ಘಾಜಿಯಾಬಾದ್‍ನ ಕವಿ ನಗರ ಪ್ರದೇಶದ ನಿವಾಸಿ ಜುಗಲ್ ಕಿಶೋರ್ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅವರ ಪತ್ನಿ ಸಾವನ್ನಪ್ಪಿದ್ದು, ಮಗ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದನು. ಇದರಿಂದ ಕಿಶೋರ್ ಅವರಿಗೆ ಒಂಟಿತನದ ನೋವು ಕಾಡುತ್ತಿತ್ತು. ಹೀಗಾಗಿ ಮತ್ತೊಂದು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆಗ ಖನ್ನಾ ವಿವಾಹ ಕೇಂದ್ರದ ಜಾಹೀರಾತೊಂದನ್ನು ನೋಡಿದ್ದಾರೆ. ಅದರಲ್ಲಿ ಹಿರಿಯ ನಾಗರಿಕರು ಮತ್ತು ವಿಚ್ಛೇದಿತ ವ್ಯಕ್ತಿಗಳಿಗೆ ವರ-ವಧು ಹುಡುಕಲಾಗುತ್ತದೆ ಎಂದು ಹೇಳಲಾಗಿತ್ತು.
ಆಗ ಕಿಶೋರ್ ಏಜೆನ್ಸಿಯನ್ನು ಸಂಪರ್ಕಿಸಿದ್ದಾರೆ. ಏಜೆನ್ಸಿಯ ಮಾಲೀಕ ಮಂಜು ಖನ್ನಾ, ನಿಮಗೆ ಸೂಕ್ತವಾದ ವಧು ಇದ್ದಾಳೆ ಎಂದು ಕಿಶೋರ್‌ಗಿಂತ 25 ವರ್ಷ ಕಡಿಮೆ ವಯಸ್ಸಿನ ಮೋನಿಕಾಳನ್ನು ಪರಿಚಯಿಸಿದ್ದಾನೆ. ಮೋನಿಕಾ ಕೂಡ ತನಗೂ ವಿಚ್ಛೇದನವಾಗಿದೆ ಎಂದು ಕಿಶೋರ್‌ಗೆ ತಿಳಿಸಿದ್ದಳು. ಹೀಗಾಗಿ ಇಬ್ಬರು ಪರಸ್ಪರ ಕೆಲವು ವಾರ ಮಾತನಾಡಿಕೊಂಡಿದ್ದಾರೆ. ನಂತರ ಆಗಸ್ಟ್ 2019ರಲ್ಲಿ ವಿವಾಹವಾಗಿದ್ದಾರೆ.
ಕವಿ ನಗರ ನಿವಾಸದಲ್ಲಿ ದಂಪತಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಎರಡು ತಿಂಗಳ ನಂತರ ಮೋನಿಕಾ ಆಭರಣ ಮತ್ತು ಹಣದೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ. 2019 ಅಕ್ಟೋಬರ್ 26 ರಂದು ಮೋನಿಕಾ 15 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳೊಂದಿಗೆ ಓಡಿಹೋಗಿದ್ದಾಳೆ ಎಂದು ಕಿಶೋರ್ ಆರೋಪಿಸಿದ್ದಾರೆ. ನಂತರ ಕಿಶೋರ್ ಏಜೆನ್ಸಿಯನ್ನು ಸಂಪರ್ಕಿಸಿದ್ದು, ಆಗ ಮಾಲೀಕರು ಕಿಶೋರ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕಿಶೋರ್‌ಗೆ, ಮೋನಿಕಾಳ ಮಾಜಿ ಪತಿಯ ಪರಿಯಚವಾಗಿದೆ. ಆತ ಕೂಡ ಇದೇ ರೀತಿ ಮೋಸ ಹೋಗಿರುವ ಬಗ್ಗೆ ತಿಳಿದುಕೊಂಡಿದ್ದಾರೆ.
ಕೊನೆಗೆ ಕಿಶೋರ್ ಪೊಲೀಸರನ್ನು ಸಂಪರ್ಕಿಸಿ ಮೋನಿಕಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೋನಿಕಾ ಕಳೆದ 10 ವರ್ಷಗಳಲ್ಲಿ ಎಂಟು ಹಿರಿಯ ನಾಗರಿಕರನ್ನು ಮದುವೆ ಮಾಡಿಕೊಂಡು ಮೋಸ ಮಾಡಿದ್ದಾಳೆ ಎಂದು ಗೊತ್ತಾಯಿತು. ಮೋನಿಕಾ ವಿವಾಹದ ಕೆಲ ವಾರಗಳ ನಂತರ ನಗದು ಮತ್ತು ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಾಳೆ. ಆಕೆಯ ಎಲ್ಲಾ ಮದುವೆಗಳನ್ನು ಖನ್ನಾ ವಿವಾಹ ಕೇಂದ್ರವೇ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಕಾಯ್ಡೆ ಅಡಿಯಲ್ಲಿ ಮೋನಿಕಾ, ಆಕೆಯ ಕುಟುಂಬ ಮತ್ತು ಖನ್ನಾ ವಿವಾಹ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಅಭಿಷೇಕ್ ವರ್ಮಾ ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದೆ. ಸೀನಿಯರ್ ಸಿಟಿಜನ್‍ಗಳನ್ನ ಲಾಕ್ ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ಅದರಲ್ಲೂ ಮಹಾನಗರಿ ಬೆಂಗಳೂರಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಕೇಸ್‍ಗಳು ಬರ್ತಿವೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ನಾನಾ ಕಸರತ್ತು ಮಾಡ್ತಿದೆ. ರಾಜ್ಯದಲ್ಲಿ ಹಿರಿಯ ನಾಗರೀಕರನ್ನ ಮನೆಯಿಂದ ಹೊರ ಬರದಂತೆ ತಡೆಯಲು ಹೊಸ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.
ಹೌದು. ಕೊರೊನಾ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚು ಅಪಾಯಕಾರಿಯಾದ್ದರಿಂದ ಹಿರಿಯ ನಾಗರಿಕರನ್ನ ಲಾಕ್‍ಡೌನ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಒಂದಷ್ಟು ತಿಂಗಳುಗಳ ಕಾಲ ಹಿರಿಯ ನಾಗರಿಕರನ್ನ ಹೋಂ ಐಸೋಲೇಶನ್ ಮಾಡಲು ಸರ್ಕಾರ ನಿರ್ಧರಿಸಿದೆ. ಸೋಂಕು ನಿವಾರಣೆ ಆಗುವವರೆಗೂ 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಇದ್ದರೆ ಸೋಂಕು ಹರಡುವಿಕೆ ಕ್ರಮೇಣ ಕಡಿಮೆಯಾಗಬಹುದೇನೋ ಅಂತ ಸರ್ಕಾರ ಲೆಕ್ಕಾಚಾರ ಹಾಕ್ತಿದೆ. ಈ ಬಗ್ಗೆ ಶೀಘ್ರವಾಗಿ ಅಧಿಕೃತವಾದ ಕಾನೂನು ರೂಪುಗೊಳ್ಳುವ ಸಾಧ್ಯತೆ ಇದೆ.
ಸರ್ಕಾರ ಹೇರಬಹುದಾದ ನಿರ್ಬಂಧಗಳೇನು?
– 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರುವಂತಿಲ್ಲ
– ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಕ್ವಾರಂಟೈನ್
– ಪಾರ್ಕ್‍ಗಳಿಗೆ ಅಥವಾ ವಾಕಿಂಗ್ ಮಾಡಲು ಹೊರಗೆ ಬರುವಂತಿಲ್ಲ
– ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೋಂ ಐಸೋಲೇಷನ್
– ಮನೆಯಿಂದ ಹೊರ ಬರುವ ಎಲ್ಲಾ ಅವಕಾಶಗಳನ್ನು ನಿರ್ಬಂಧಿಸುವುದು
ಹೀಗೆ ಹಲವು ನಿಯಮಗಳನ್ನೂ ರೂಪಿಸಿ ಕೊರೊನಾದಿಂದ ಹಿರಿಯ ನಾಗರಿಕರನ್ನ ಪಾರು ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕಾನೂನು ಜಾರಿಗೆ ಈಗಾಗಲೇ ತೀರ್ಮಾನ ಮಾಡಲಾಗಿದೆ. ಅಂತಿಮವಾಗಿ ಸೂಕ್ತ ತಜ್ಞರೊಂದಿಗೆ ಚರ್ಚಿಸಿ ಅಂತಿಮ ಕರಡು ಸಿದ್ದಪಡಿಸಿ ಕಾನೂನು ರೂಪಿಸಲಾಗುತ್ತೆ. ಶೀಘ್ರವಾಗಿ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.