Tag: Senior Citizen

  • ಸಮಾಜಮುಖಿ ಕಾರ್ಯಗಳ ಮೂಲಕ ಹಿರಿಯರಿಗೆ ಗೌರವ ಸಲ್ಲಿಸಬೇಕು: ಸಿದ್ದರಾಮಯ್ಯ

    ಸಮಾಜಮುಖಿ ಕಾರ್ಯಗಳ ಮೂಲಕ ಹಿರಿಯರಿಗೆ ಗೌರವ ಸಲ್ಲಿಸಬೇಕು: ಸಿದ್ದರಾಮಯ್ಯ

    ಬೆಂಗಳೂರು: ಹಿರಿಯ ನಾಗರಿಕರ (Senior Citizens) ಸಾಧನೆಗಳು ಯುವಜನರಿಗೆ ಸ್ಪೂರ್ತಿ. ಹಿರಿಯರ ಬದುಕು ಕೇವಲ ಆದರ್ಶವಾಗಿಸದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವಹಿರಿಯ ನಾಗರೀಕರ ದಿನಾಚರಣೆ 2024 ಅನ್ನು ಉದ್ಘಾಟಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು, ಘನತೆಯ ಬಾಳಿನೊಂದಿಗೆ ವಯೋಪಕ್ವತೆ, ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ ಎಂಬ ವಿಶ್ವಸಂಸ್ಥೆಯ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಸಿಎಂ ಪತ್ನಿ ಪತ್ರದ ಬೆನ್ನಲ್ಲೇ 14 ಸೈಟ್‌ಗಳ ಸೇಲ್ ಡೀಡ್ ರದ್ದು; ಅಧಿಕಾರಿಗಳಿಂದ ಭೂಮಿ ಪರಿಶೀಲನೆ

    ಹಿರಿಯನ್ನು ಗೌರವದಿಂದ ಕಾಣಬೇಕು. ಅವರ ಅನುಭವಗಳನ್ನು ಗೌರವಿಸಿ ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹಿರಿಯರ ಕೊಡುಗೆಗಳು ಹಾಗೂ ಅವರ ಮಾರ್ಗದರ್ಶನದಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಬಾಲ್ಯ, ಯೌವ್ವನ, ವೃದ್ಧಾಪ್ಯ, ಮಾನವನ ಜೀವನದ ಸಹಜ ಘಟ್ಟಗಳು. ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ ನೀಡಲೆಂಬ ಸದುದ್ದೇಶದಿಂದ ಹಿರಿಯ ನಾಗರಿಕನ್ನು ಗೌರವಿಸಿ ಸನ್ಮಾನಿಸಲಾಗುತ್ತದೆ. ನಮ್ಮ ಆತ್ಮಸಾಕ್ಷಿಯೇ ನ್ಯಾಯಾಲಯವಿದ್ದಂತೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಸಮಾಜದಲ್ಲಿ ಇಂದು ಮೌಢ್ಯಗಳು, ಕಂದಾಚಾರಗಳಿವೆ. ಇವುಗಳಿಗೆ ಜೋತುಬೀಳದೇ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ರಾಷ್ಟçಕವಿ ಕುವೆಂಪುರವರು ತಿಳಿಸಿದಂತೆ ಮಾನವ, ಅಲ್ಪಮಾನವನಾಗದೇ, ವಿಶ್ವಮಾನವನಾಗಲು ಪ್ರಯತ್ನಿಸಬೇಕು. ಇದಕ್ಕಾಗಿ ಹಿರಿಯರ ಅನುಭವಗಳು ನಮಗೆ ದಾರಿದೀಪವಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ- ಲಕ್ಷ್ಮಿ ಹೆಬ್ಬಾಳ್ಕರ್

    2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 57.91 ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ, ಮಕ್ಕಳು ವಿದೇಶದಲ್ಲಿ ನೆಲೆಸಿ, ತಂದೆ-ತಾಯಿಯನ್ನು ಪೋಷಿಸಲು ಸಾಧ್ಯವಾಗದೇ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಈ ಮಾಸಾಶನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎ

    ಹಿರಿಯ ನಾಗರಿಕರ ನೆಮ್ಮದಿಗೆ ಹಾಗೂ ಆರೋಗ್ಯವನ್ನು ಖಾತ್ರಿಪಡಿಸುವುದು ಸರ್ಕಾರದ ಕರ್ತವ್ಯ. ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಸಮಸಮಾಜ ನಿರ್ಮಿಸುವ ನಮ್ಮ ಗುರಿಯನ್ನು ಈಡೇರಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ ಆಶಕ್ತರಾಗಿರುವ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿರಿಯ ನಾಗರಿಕರು, ವಿಕಲಚೇತನರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಯುವಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

  • ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ- ಲಕ್ಷ್ಮಿ ಹೆಬ್ಬಾಳ್ಕರ್

    ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ- ಲಕ್ಷ್ಮಿ ಹೆಬ್ಬಾಳ್ಕರ್

    – ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ 10.47 ಕೋಟಿ ರೂ. ಅನುದಾನ ನಿಗದಿ

    ಬೆಂಗಳೂರು: ಹಿರಿಯ ನಾಗರಿಕರಿಗೆ ಗೌರವ ಮತ್ತು ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಹಿರಿಯರಿಗಾಗಿ ಆರೋಗ್ಯ ವಿಮೆ ಯೋಜನೆಯನ್ನು (Health Insurance Scheme) ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

    ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ, ಅವರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ ಮಾಡುವ ಬಗ್ಗೆ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮರಿಗೌಡನಿಂದ ಸಿದ್ದರಾಮಯ್ಯಗೆ ಕಳಂಕ – ಸಿಎಂ ಬಾಲ್ಯ ಸ್ನೇಹಿತ

    ನಮ್ಮ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಗ್ಯಾರಂಟಿ ಯೋಜನೆಗಳಿಂದ ಹಿರಿಯ ನಾಗರಿಕರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಶಕ್ತಿ ಯೋಜನೆಯಡಿ ನಮ್ಮ ಹಿರಿಯ ತಾಯಿಂದಿರರು ಕೂಡ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಸಂತಸದ ಸಂಗತಿ ಆಗಿದೆ ಎಂದರು. ರಾಜ್ಯದಲ್ಲಿ ಸದ್ಯ 57.91 ಲಕ್ಷ ಹಿರಿಯ ನಾಗರಿಕರಿದ್ದಾರೆ. ಇಲಾಖೆಗೆ 2024 -25ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ 10.47 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಈ ಮೂಲಕ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ

    ರಾಜ್ಯದಲ್ಲಿ ಅಶಕ್ತ ಮತ್ತು ನಿರ್ಗತಿಕ ಹಿರಿಯ ನಾಗರಿಕರಿಗಾಗಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ರಾಜ್ಯದೆಲ್ಲೆಡೆ 63 ವೃದ್ಧಾಶ್ರಮಗಳನ್ನು ತೆರೆದಿದೆ. ಸದ್ಯ 1,575 ಮಂದಿ ಅಶಕ್ತ ಹಿರಿಯ ನಾಗರಿಕರು ಆಶ್ರಯ ಪಡೆದಿದ್ದಾರೆ. ಕೇಂದ್ರ ಸರ್ಕಾರದಿಂದ ನಡೆಸುತ್ತಿರುವ ವೃದ್ಧಾಶ್ರಯಗಳಲ್ಲೂ ಹಿರಿಯ ನಾಗರಿಕರಿದ್ದಾರೆ. ಇನ್ನೂ 19 ವೃದ್ಧಾಶ್ರಮಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಅವರಿಗಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಹಾಯವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಸಿಬ್ಬಂದಿಗೆ ಶೇ.50ರಷ್ಟು ಗೌರವ ಧನ ಹೆಚ್ಚಿಸಲಾಗಿದೆ ಎಂದರು. ಇದನ್ನೂ ಓದಿ: ಮುಡಾ ಸೈಟು ವಿವಾದ | ಸಿಎಂ ಪತ್ನಿಯ 14 ಮುಡಾ ನಿವೇಶನಗಳ ಖಾತೆ ರದ್ದು

    ಹಿರಿಯ ನಾಗರಿಕರ ಜೀವನಾನುಭವ, ಅವರ ಸಹನೆ, ಸಾಮರ್ಥ್ಯ ನಮ್ಮೆಲ್ಲರಿಗೂ ಪ್ರೇರಣದಾಯಕ. ಅವರು ಅಶಕ್ತರಲ್ಲ ಸಶಕ್ತರು. ಹಿರಿಯರನ್ನು ಗೌರವಿಸುವುದು, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಿರಿಯರ ಬಗ್ಗೆ ಸಾಮಾಜಿಕ ಕಳಕಳಿ ಅತ್ಯಾವಶ್ಯಕ. ಯುವ ಜನಾಂಗಕ್ಕೆ ಹಿರಿಯರ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಅತ್ಯಗತ್ಯ ಎಂದು ನುಡಿದರು. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಇಲಾಖಾ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಟಿ. ರಾಘವೇಂದ್ರ, ವಿಕಲಚೇತನರ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎ

  • 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ – 5 ಲಕ್ಷದವರೆಗೆ ಚಿಕಿತ್ಸೆ ಫ್ರೀ

    70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ – 5 ಲಕ್ಷದವರೆಗೆ ಚಿಕಿತ್ಸೆ ಫ್ರೀ

    ನವದೆಹಲಿ: ರಾಷ್ಟ್ರೀಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ (Ayushman Bharat) ಅಡಿಯಲ್ಲಿ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರಿಗೂ ಆರೋಗ್ಯ ರಕ್ಷಣೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

    ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಆರು ಕೋಟಿ ಹಿರಿಯ ನಾಗರಿಕರನ್ನು (Senior Citizen) ಹೊಂದಿರುವ 4.5 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಉಚಿತ ಸೌಲಭ್ಯ 5 ಲಕ್ಷ ರೂ ಮೌಲ್ಯದ್ದಾಗಿದೆ. ಈ ಅನುಮೋದನೆಯೊಂದಿಗೆ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ AB PM-JAY ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಹಿರಿಯ ನಾಗರಿಕರಿಗೆ AB PM- ಅಡಿಯಲ್ಲಿ ಹೊಸ ವಿಭಿನ್ನ ಕಾರ್ಡ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಯಡಿಯಲ್ಲಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರು AB PM-JAY ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

    AB PM-JAY ಯೋಜನೆಯು ಫಲಾನುಭವಿಗಳ ತಳಹದಿಯ ನಿರಂತರ ವಿಸ್ತರಣೆಯನ್ನು ಮಾಡಲಾಗಿದೆ. ಆರಂಭದಲ್ಲಿ, ಭಾರತದ ಜನಸಂಖ್ಯೆಯ ಕೆಳಭಾಗದ 40% ಒಳಗೊಂಡಿರುವ 10.74 ಕೋಟಿ ಬಡ ಮತ್ತು ಬಡ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ದೇಶದಾದ್ಯಂತ ಕೆಲಸ ಮಾಡುತ್ತಿರುವ 37 ಲಕ್ಷ ಆಶಾ ಕಾರ್ಯಕರ್ತೆಯರು, ಎಡಬ್ಲ್ಯೂಡಬ್ಲ್ಯೂಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಆರೋಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ.

    AB PM-JAY ವಿಶ್ವದ ಅತಿದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ಖಾತ್ರಿ ಯೋಜನೆಯಾಗಿದ್ದು, 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡುವುದಾಗಿ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಹೇಳಿದ್ದರು.

  • ಬೆಂಗ್ಳೂರಿನಲ್ಲಿ ವೃದ್ಧ ದಂಪತಿ ಕೊಲೆ- ಮಗನಿಂದಲೇ ಹತ್ಯೆ ಶಂಕೆ

    ಬೆಂಗ್ಳೂರಿನಲ್ಲಿ ವೃದ್ಧ ದಂಪತಿ ಕೊಲೆ- ಮಗನಿಂದಲೇ ಹತ್ಯೆ ಶಂಕೆ

    ಬೆಂಗಳೂರು: ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಾಮಾಕ್ಷಿಪಾಳ್ಯದ ಕಾವೇರಿನಗರದಲ್ಲಿ ನಡೆದಿದೆ.

    ಮೂಲತಃ ಮೈಸೂರಿನವರಾದ ನರಸಿಂಹ ರಾಜು (70), ಪತ್ನಿ ಸರಸ್ವತಿ (64) ಹತ್ಯೆಯಾದವರು. ಈ ದಂಪತಿ ಕಳೆದೊಂದು ವರ್ಷದಿಂದ ಕಾವೇರಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಬುಧವಾರ ಬೆಳಗ್ಗೆ ಮನೆ ಕೆಲಸದ ಮಹಿಳೆ ಮನೆಗೆ ಬಂದು ನೋಡಿದಾಗ ದಂಪತಿ ಮೃತಪಟ್ಟಿದ್ದರು.

    ನರಸಿಂಹ ರಾಜು ದಲ್ಲಾಳಿಯಾಗಿದ್ದರೆ, ಪತ್ನಿ ಸರಸ್ವತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆದರೆ ಕೆಲವು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಘಟನೆಯ ಬಳಿಕ ದಂಪತಿಯ ಪುತ್ರ ಸಂತೋಷ್ ನಾಪತ್ತೆಯಾಗಿದ್ದು, ಆತನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ವೃದ್ಧ ದಂಪತಿಯ ಮನೆ ಕೆಲಸದ ಮಹಿಳೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

  • ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ರೈಲ್ವೇ ಇಲಾಖೆ ಕೆಟ್ಟ ಹೆಸರು ತರಲು ಯತ್ನಿಸಿ ಸಿಕ್ಕಿಬಿದ್ದ ವೃದ್ಧ

    ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ರೈಲ್ವೇ ಇಲಾಖೆ ಕೆಟ್ಟ ಹೆಸರು ತರಲು ಯತ್ನಿಸಿ ಸಿಕ್ಕಿಬಿದ್ದ ವೃದ್ಧ

    ನವದೆಹಲಿ: ಭಾರತೀಯ ರೈಲ್ವೇಗೆ ಕೆಟ್ಟ ಹೆಸರು ತರಲು ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ಸುಳ್ಳು ದೂರು ನೀಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸುರೇಂದ್ರ ಪಾಲ್ (70) ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ಕಳ್ಳಾಟ ಆಡುತ್ತಿದ್ದ ವೃದ್ಧ. ರೈಲಿನಲ್ಲಿ ಉಚಿತ ಊಟ ಪಡೆಯುವ ಉದ್ದೇಶದಿಂದ ಸುರೇಂದ್ರ ಪಾಲ್ ಹೀಗೆ ಸುಳ್ಳ ಹೇಳಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

    ಗುಂಟ್ಕಲ್ ನಿಲ್ದಾಣದಲ್ಲಿ ಖರೀದಿಸಿದ್ದ ವೆಜ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಅದನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂದು ಸುರೇಂದ್ರ ಪಾಲ್ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ದೂರಿದ್ದ. ತಕ್ಷಣವೇ ಆತನನ್ನು ರೈಲ್ವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

    ವೃದ್ಧನ ನಡೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರೊಬ್ಬರು ಪಾಲ್ ಪ್ರಕರಣ ಎತ್ತಿಕೊಂಡಿದ್ದರು. ಬಳಿಕ ವಿವಿಧ ವಿಭಾಗಗಳಲ್ಲಿ ವರದಿಯಾದ ಇತರ ಪ್ರಕರಣಗಳನ್ನು ಹೋಲಿಕೆಯನ್ನು ಗಮನಿಸಿದರು. ತೀರಾ ಇತ್ತೀಚಿಗೆ ಜಬಲ್ಪುರದಲ್ಲಿ ವರದಿಯಾಗಿತ್ತು.

    ಜಬಲ್ಪುರಕ್ಕೆ ಸಂಪರ್ಕಿಸಿದಾಗ ಅಲ್ಲಿನ ಅಧಿಕಾರಿಗಳು, ತಮ್ಮ ಸಮೋಸಾದಲ್ಲಿ ಹಲ್ಲಿ ಸಿಕ್ಕಿತ್ತು ಎಂದು ದೂರಿದ್ದ ವ್ಯಕ್ತಿಯ ಫೋಟೋವನ್ನು ಕಳುಹಿಸಿದರು. ಅದು ಸುರೇಂದ್ರ ಪಾಲ್‍ದೆ ಆಗಿತ್ತು. ಮಿರಾಜ್ ನಿಲ್ದಾಣದಲ್ಲಿಯೂ ಪಾಲ್, ಇಡ್ಲಿಯಲ್ಲಿ ಬ್ಲೇಡ್ ಬಂದಿತ್ತು ಅಂತ ಹೇಳಿಕೊಂಡಿದ್ದ ಎಂದು ಪುಣೆ ವಿಭಾಗವು ಮಾಹಿತಿ ನೀಡಿತು. ಅಷ್ಟೇ ಅಲ್ಲದೆ ಇತರ ಎರಡು ಪ್ರಕರಣಗಳಲ್ಲಿ, ಪಾಲ್ ಅಂಗಡಿ ಮಾಲೀಕರಿಗೆ ದೂರು ನೀಡಿ ಬೆದರಿಕೆ ಹಾಕಿದ್ದು ಮತ್ತು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ ವಿಚಾರಗಳು ಬೆಳಕಿಗೆ ಬಂದಿವೆ.

    ರೈಲ್ವೇ ಇಲಾಖೆಗೆ ಕೆಟ್ಟ ಹೆಸರು ತಂದಿದ್ದಕ್ಕೆ ಪಾಲ್‍ನನ್ನು ಶಿಕ್ಷಿಸಲಾಯಿತು. ಆದರೆ ಪಾಲ್, ತನ್ನ ಮಾರ್ಗಗಳನ್ನು ಬದಲಾಯಿಸುವ ಭರವಸೆ ನೀಡಿದ್ದಾನೆ. ಹೀಗಾಗಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ತಪ್ಪು ಕೆಲಸ ಮಾಡಿದ್ದೇನೆ. ನಾನು ವೃದ್ಧ, ಮಾನಸಿಕವಾಗಿ ಅಸ್ತಿತ್ವ ಕಳೆದುಕೊಂಡಿದ್ದೇವೆ. ನನಗೆ ರಕ್ತ ಕ್ಯಾನ್ಸರ್ ಇದೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ಪಂಜಾಬ್‍ನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗುತ್ತಿರುವೆ ಎಂದು ಸುರೇಂದ್ರ ಪಾಲ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾನೆ.

    ಪಾಲ್ ಹೇಳಿಕೊಂಡಂತೆ ಮಾನಸಿಕವಾಗಿ ಅಸ್ಥಿರವಾಗಿದ್ದಾನೆಯೇ ಅಥವಾ ರಕ್ತ ಕ್ಯಾನ್ಸರ್ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ದೀಪಾವಳಿ ದಿನದಂದೇ ಬೆಂಕಿ ಅವಘಡಕ್ಕೆ ವೃದ್ಧೆ ಬಲಿ!

    ದೀಪಾವಳಿ ದಿನದಂದೇ ಬೆಂಕಿ ಅವಘಡಕ್ಕೆ ವೃದ್ಧೆ ಬಲಿ!

    ಮುಂಬೈ: ದೀಪಾವಳಿ ಹಬ್ಬದಂದೇ ಮನೆಗೆ ಬೆಂಕಿ ಹತ್ತಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈನ ಗ್ರ್ಯಾಂಟ್ ರೋಡ್‍ನ ನಿರ್ಮಲಾ ನಿವಾಸದ ನರ್ಗಿಸ್ ಕಂಗ (65) ಮೃತ ದುರ್ದೈವಿ. ಏಳು ಮಹಡಿಯ ಕಟ್ಟಡದಲ್ಲಿ ಮೂರನೇ ಅಂತಸ್ತಿನಲ್ಲಿ ವೃದ್ಧೆ ವಾಸವಾಗಿದ್ದರು. ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಓದಿ: 3 ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿದ ಪಾಪಿ!

    ಆಗಿದ್ದೇನು?:
    ನರ್ಗಿಸ್ ಕಂಗ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಬುಧವಾರ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಿಡಿ ತಗುಲಿ, ಮನೆಯಲ್ಲಿದ್ದ ಪುಸ್ತಕ, ಕಟ್ಟಿಗೆಯ ಪೀಠೋಪಕರಣಕ್ಕೆ ಬೆಂಕಿ ಹೊತ್ತಿಕೊಂಡು ಭಾರೀ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಿತ್ತು. ಅದನ್ನು ಗಮನಿಸಿದ ಕಟ್ಟಡದ ನಿವಾಸಿಯೊಬ್ಬರು, ಮನೆಯ ಬಾಗಿಲು ಮುರಿದು, ವೃದ್ಧೆಯನ್ನು ರಕ್ಷಿಸಿದ್ದಾರೆ. ಆದರೆ ವೃದ್ಧೆಯ ದೇಹವು ಸಂಪೂರ್ಣವಾಗಿ ಸುಟ್ಟು, ಸಾವು ಬದುಕಿನ ಮಧ್ಯದಲ್ಲಿ ಹೋರಾಡುತ್ತಿದ್ದರು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಕಟ್ಟಡದಲ್ಲಿ ಬುಧವಾರ ಬೆಳಗ್ಗೆ 4 ಗಂಟೆಗೆ ಕಾಣಿಸಿಕೊಂಡ ಬೆಂಕಿ 9 ಗಂಟೆವರೆಗೆ ಹೊತ್ತಿ ಉರಿದಿದೆ. ಇದರಿಂದಾಗಿ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ನಿರ್ಮಲಾ ನಿವಾಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಗೆ ನುಗ್ಗಿ ಮಕ್ಕಳಿಗೆ ಕಚ್ಚಿದ ಮಂಗ!

    ಶಾಲೆಗೆ ನುಗ್ಗಿ ಮಕ್ಕಳಿಗೆ ಕಚ್ಚಿದ ಮಂಗ!

    ಗದಗ: ಹುಚ್ಚು ಹಿಡಿದ ಮಂಗವೊಂದು 6ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.

    ಮಕ್ಕಳು, ವೃದ್ದರಿಗೆ ಮನಬಂದಂತೆ ಮಂಗ ಕಚ್ಚಿದ್ದು ಹುಚ್ಚು ಹಿಡಿದಂತೆ ವರ್ತಿಸುತ್ತಿದೆ. ಯಾವಗಲ್ ಪ್ರಾಥಮಿಕ ಶಾಲೆಗೆ ನುಗ್ಗಿ ಮಕ್ಕಳನ್ನ ಸಹ ಮಂಗ ಕಚ್ಚಿದೆ.

    ಕಳೆದ ಎರಡು ದಿನಗಳಿಂದ ಮಂಗನ ದಾಳಿಗೆ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಮಂಗನ ದಾಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ದಾಳಿ ವೇಳೆ ಓಡಿಹೋಗುವ ಸಂದರ್ಭದಲ್ಲಿ ಬಿದ್ದು ಮೂವರಿಗೆ ಕೈ ಮುರಿದಿದೆ.

    ಕಿರಣ್ ಗಾಳಿ, ನೀಲವ್ವ ಜಾಲಿಹಾಳ, ರೇಣುಕಾ, ಗಿರಿಜಾ, ಉಮೇಶ್, ಪಾರವ್ವ ಎಂಬುವರಿಗೆ ಗಾಯವಾಗಿದ್ದು ಗಾಯಾಳುಗಳನ್ನ ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.