Tag: Sengol

  • ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಶುಭ ಸಂಕೇತ: ಕಾಶೀ ಜಗದ್ಗುರು

    ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಶುಭ ಸಂಕೇತ: ಕಾಶೀ ಜಗದ್ಗುರು

    ಧಾರವಾಡ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹೊಸ ಸಂಸತ್ ಭವನ (New Parliament) ಉದ್ಘಾಟನೆಯಾಗಿದ್ದು, ಇದು ಇಡೀ ದೇಶವೇ ಹೆಮ್ಮೆ ಪಡುವಂತಹ ವಿಷಯ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಹೇಳಿದರು.

    ಧಾರವಾಡ (Dharwad) ದಲ್ಲಿ ಮಾತನಾಡಿದ ಅವರು, ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಹೋದರು. ಆಗ ಅಧಿಕಾರ ಹಸ್ತಾಂತರ ಮಾಡಿದ್ದರು. ಆ ಸಂದರ್ಭದಲ್ಲಿ ನಂದಿ ಲಾಂಛಿತ ಸುವರ್ಣ ದಂಡ ಕೊಟ್ಟಿದ್ದರಂತೆ. ಅದು ಈಗ ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಅದು ಯಾರಿಗೂ ಗೊತ್ತಿರಲಿಲ್ಲ ಎಂದರು.

    ಇದೇ ವೇಳೆ ಧರ್ಮ ಪ್ರತಿಯೊಬ್ಬ ರಾಜನಿಗೂ ಅವಶ್ಯವಾಗಿರಬೇಕು ಎಂದ ಅವರು, ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮ ಗುರು ಇರುತ್ತಿದ್ದರು. ರಾಜ ಸಿಂಹಾಸನವೇರಿ “ಅಹಂ ಅದಂಡಹ್ಯ” ಎನ್ನುತ್ತಿದ್ದನು. ನನ್ನ ಮೇಲೆ ಯಾವ ದಂಡನೆ ಇರುವುದಿಲ್ಲ ಎನ್ನುತ್ತಿದ್ದರು. ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದನು ಎಂದು ತಿಳಿಸಿದರು.

    ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡ ತೋರಿಸುತ್ತಿದ್ದರು. ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು. ಅದನ್ನು ಮೀರಿ ಧರ್ಮ ಮಾರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ ಎನ್ನುತ್ತಿದ್ದರು. ಅಂತಹ ಒಂದು ಧರ್ಮ ದಂಡ (Sengol) ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಆಗಿದೆ ಇದು ಶುಭ ಸಂಕೇತ ಎಂದು ಅವರು ಹೇಳಿದರು. ಇದನ್ನೂ ಓದಿ: ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿ: ನರೇಂದ್ರ ಮೋದಿ ಕರೆ

    ಕಾಶೀ ಪೀಠ ಮಾತ್ರವಲ್ಲ, ಇಡೀ ವಿಶ್ವವೇ ಹೆಮ್ಮೆ ಪಡುವ ನಾಯಕ ಮೋದಿ (Narendra Modi), ಈಗಾಗಲೇ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಕಾಶೀ ವಿಶ್ವನಾಥ ಮಂದಿರ ಜೀರ್ಣೋದ್ಧಾರ ಆಗಿದೆ ಎಂದ ಅವರು, ಮಹಾಕಾಳೇಶ್ವರ ಮಂದಿರ ಜೀರ್ಣೋದ್ಧಾರ ಆಗಿದೆ. ಅಯೋಧ್ಯೆ ರಾಮಮಂದಿರ ಜೀರ್ಣೋದ್ಧಾರ ಆಗುತ್ತಿದೆ. ಇದೆಲ್ಲವೂ ದೇಶದ ಹಿತದೃಷ್ಟಿಯಿಂದ ಆಗುತ್ತಿವೆ ಎಂದರು.

    ನಮ್ಮ ಸಂಸದೀಯ ಕ್ಷೇತ್ರದಿಂದ ಚುನಾಯಿತ ಆದವರು ಪ್ರಧಾನಿ ನರೇಂದ್ರ ಮೋದಿಯವರು, ಮೋದಿಯವರು ನಮ್ಮ ಗುರುಕುಲದ ಶತಾಬ್ದಿ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಸಿದ್ಧಾಂತ ಶಿಖಾಮಣಿ ಬಿಡುಗಡೆ ಮಾಡಿದ್ದರು ಎಂದ ಶ್ರೀಗಳು, ಸನಾತನ ವೀರಶೈವ ಧರ್ಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಶ್ರೀಗಳು ತಿಳಿಸಿದರು.

  • ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ

    ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ

    ನವದೆಹಲಿ: ನೂತನ ಸಂಸತ್ ಭವನದ (New Parliament) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಸನ್ಮಾನಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಗೂ ಮುನ್ನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ ಸ್ಮರಣಿಕೆ ನೀಡಿ ಪುರಸ್ಕರಿಸಿದ್ದಾರೆ.

    ಸುಂದರವಾಗಿ ಕಟ್ಟಲ್ಪಟ್ಟಿರುವ ನೂತನ ಸಂಸತ್ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರವನ್ನು ಈ ಮೂಲಕ ಪ್ರಧಾನಿ ಮೋದಿ ಸ್ಮರಿಸಿದ್ದಾರೆ. ದೇಶದ ಹಲವು ಕಡೆಯ ಶಿಲ್ಪಿಗಳು ಹಾಗೂ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಅವರೆಲ್ಲರಿಗೂ ಸನ್ಮಾನಿಸುವ ಮೂಲಕ ಗೌರವ ಸೂಚಿಸಲಾಯಿತು. ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಮೋದಿ ತೆರಳಿದ್ದಾರೆ. ಇದನ್ನೂ ಓದಿ: ಸಂಸತ್‍ನಲ್ಲಿ ಚಿನ್ನದ ರಾಜದಂಡ ಪ್ರತಿಷ್ಠಾಪನೆ

    ಬಳಿಕ ಐತಿಹಾಸಿಕ ಸೆಂಗೋಲ್ (Sengol) ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು.

    ಪೂಜಾ-ವಿಧಿವಿಧಾನಗಳು ನಡೆಯುತ್ತಿದ್ದು, ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಲಾಯಿತು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು-ಸಂತರು ಭಾಗಿಯಾಗಿದ್ದು, 12 ಮಂದಿ ಧಾರ್ಮಿಕ ನಾಯಕರಿಂದ ಪ್ರಾರ್ಥನೆ ನಡೆಯುತ್ತಿದೆ. ಇದನ್ನೂ ಓದಿ: ನೂತನ ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನಸೆಳೆದ ಸರ್ವಧರ್ಮ ಸಮ್ಮಿಳನ

  • ಸಂಸತ್‍ನಲ್ಲಿ ಚಿನ್ನದ ರಾಜದಂಡ ಪ್ರತಿಷ್ಠಾಪನೆ

    ಸಂಸತ್‍ನಲ್ಲಿ ಚಿನ್ನದ ರಾಜದಂಡ ಪ್ರತಿಷ್ಠಾಪನೆ

    ನವದೆಹಲಿ: ನೂತನ ಸಂಸತ್ ಭವನ (New Parliament) ಸೆಂಟ್ರಲ್ ವಿಸ್ತಾ (Central Vista) ದ ಉದ್ಘಾಟನೆಗೆ ಕೌಂಟ್‍ಡೌನ್ ಶುರುವಾಗಿದೆ. ಇಂದು (ಭಾನುವಾರ) ಬೆಳಗ್ಗೆ 7.30ರಿಂದ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇತ್ತ ಸಂಸತ್ ಭವನದ ಉದ್ಘಾಟನೆಯ ಮುನ್ನಾ ದಿನ ರಾಜದಂಡ `ಸೆಂಗೋಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಗೆ ಹಸ್ತಾಂತರ ಮಾಡಲಾಗಿದೆ.

    ಇದೀಗ ಮೋದಿಯವರು ಐತಿಹಾಸಿಕ ರಾಜದಂಡ ಪ್ರತಿಷ್ಠಾಪನೆ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಕುರ್ಚಿ ಪಕ್ಕದಲ್ಲಿ ರಾಜದಂಡ ಅಳವಡಿಸಲಾಗಿದ್ದು, ಸುದೀರ್ಘ ಇತಿಹಾಸ ಹೊಂದಿರುವ ಚಿನ್ನದ ರಾಜದಂಡ ಇದಾಗಿದೆ. ಭಾರತಕ್ಕೆ ಅಧಿಕಾರ ಹಸ್ತಾಂತರ ಪ್ರತೀಕವಾಗಿದ್ದ ಸೆಂಗೊಲ್, 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ವಿಶೇಷ ಮಾನ್ಯತೆ ಪಡೆದಿದೆ. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ ಕೈಂಕರ್ಯ ಆರಂಭವಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿದೆ. 2020ರಲ್ಲಿ ಅಡಿಗಲ್ಲು ಪೂಜೆಯನ್ನು ಪುರೋಹಿತರು ನೆರವೇರಿಸಿದ್ದಾರೆ.

    ಸೆಂಗೊಲ್ ಮಹತ್ವವೇನು?
    ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಅವರ ಜೊತೆ ಯಾವ ರೀತಿ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚೋಳರ ಇತಿಹಾಸವನ್ನು ತಿಳಿದಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ಸೆಂಗೊಲ್ ನೀಡುವ ಮೂಲಕ ಹಸ್ತಾಂತರಿಸಬಹುದು ಎಂದು ಸಲಹೆ ನೀಡಿದ್ದರು. ಈ ಸಲಹೆ ನೆಹರೂ ಅವರಿಗೆ ಇಷ್ಟವಾಯಿತು. ಇದನ್ನೂ ಓದಿ: ಬಾಗಲಕೋಟೆಯಲ್ಲಿದೆ ಸೆಂಗೊಲ್ ರಾಜದಂಡ ಹೋಲುವ ಕಲಾಕೃತಿ – ಏನಿದರ ವಿಶೇಷತೆ?

    ಭಾರತದ ಸ್ವಾತಂತ್ರ‍್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು. ಇವರು ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಧೀನಂ ಮಠವನ್ನು ಸಂಪರ್ಕಿಸಿದರು. ಆ ಮಠದ ಶ್ರೀಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡರು. ಮದ್ರಾಸಿನ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗೋಲನ್ನು ತಯಾರಿಸಿದ್ದು, ಇದು ಐದು ಅಡಿ ಉದ್ದ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ಯನ್ನು ಹೊಂದಿದೆ.

    ವರದಿಗಳ ಪ್ರಕಾರ, ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್‌ಬ್ಯಾಟನ್‌ಗೆ ನೀಡಿದ್ದರು. ನಂತರ ರಾಜದಂಡವನ್ನು ಪಡೆದ ಗಂಗಾಜಲವನ್ನು ಸಿಂಪಡಿಸಿದರು. 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹಲವಾರು ನಾಯಕರು ಮತ್ತು ಉನ್ನತ ಗಣ್ಯರ ಸಮ್ಮುಖದಲ್ಲಿ ಸೆಂಗೊಲ್ ಅನ್ನು ಸ್ವೀಕರಿಸಿದರು. ಇದು ಬ್ರಿಟಿಷರಿಂದ ಸ್ವತಂತ್ರ ಭಾರತದ ಜನರಿಗೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. ಭಾರತ ಸ್ವಾತಂತ್ರ‍್ಯ ಗಳಿಸಿದ ಮಧ್ಯರಾತ್ರಿಯ 15 ನಿಮಿಷಗಳ ಮೊದಲು ಈ ಸ್ಮರಣೀಯ ಘಟನೆಗಳು ನಡೆದಿತ್ತು. ಪ್ರಧಾನಿ ನೆಹರೂ ರಾಜದಂಡವನ್ನು ಸ್ವೀಕರಿಸುತ್ತಿದ್ದಂತೆ ವಿಶೇಷ ಗೀತೆಯನ್ನು ಮೊಳಗಿಸಲಾಯಿತು. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

    ತಮಿಳು ಸಂಸ್ಕೃತಿಯಲ್ಲಿ ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೊಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಪೀಠದ ಬಳಿ ರಾಜದಂಡ ಇಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

     

  • ಬಾಗಲಕೋಟೆಯಲ್ಲಿದೆ ಸೆಂಗೊಲ್ ರಾಜದಂಡ ಹೋಲುವ ಕಲಾಕೃತಿ – ಏನಿದರ ವಿಶೇಷತೆ?

    ಬಾಗಲಕೋಟೆಯಲ್ಲಿದೆ ಸೆಂಗೊಲ್ ರಾಜದಂಡ ಹೋಲುವ ಕಲಾಕೃತಿ – ಏನಿದರ ವಿಶೇಷತೆ?

    ಬಾಗಲಕೋಟೆ: ನೂತನ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಂಸತ್ ಭವನದ ಆಕರ್ಷಣಾ ಕೆಂದ್ರಬಿಂದುವಾಗಿರುವ ಸೆಂಗೊಲ್ (Sengol) ಪ್ರತಿಷ್ಠಾಪನೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ ಸೆಂಗೊಲ್ ರಾಜದಂಡದ ನಂಟು ಬಾಗಲಕೋಟೆ (Bagalkote) ಜಿಲ್ಲೆಗೂ ವ್ಯಾಪಿಸಿದೆ. ಐತಿಹಾಸಿಕ ತಾಣವಾದ ಬಾಗಲಕೋಟೆಯಲ್ಲಿ ಸೆಂಗೊಲ್ ಪ್ರತಿರೂಪ ಕಲಾಕೃತಿಯಲ್ಲಿ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಬಾದಾಮಿ (Badami) ತಾಲೂಕಿನ ಪಟ್ಟದಕಲ್ಲು (Pattadakal) ಗ್ರಾಮದ ವಿರೂಪಾಕ್ಷ ದೇವಾಲಯದ (Virupaksha Temple) ಬಲ ಗೋಡೆಯ ಮೇಲೆ ಸೆಂಗೋಲ್ ಪ್ರತಿರೂಪದ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ದೇವಾಲಯದ ಗೋಡೆಯ ಮೇಲೆ ಕಲಾವಿದನಿಂದ ಕೆತ್ತಲ್ಪಟ್ಟ ಕಲಾಕೃತಿ ಸೆಂಗೊಲ್‌ಗೆ ಸಾಮ್ಯತೆ ಹೊಂದಿದೆ. ಕಲಾಕೃತಿಯಲ್ಲಿ ನಾಟ್ಯರೂಪದ ಚತುರ್ಭುಜದ ಶಿವನ ಎಡಗೈನಲ್ಲಿ ಸೆಂಗೊಲ್ ಕಾಣಿಸುತ್ತಿದೆ. ಸೆಂಗೊಲ್ ಮೇಲೆ ನಂದಿಯ ಕೆತ್ತನೆಯಾಗಿದೆ. ಅಜ್ಞಾನದ ಸಂಕೇತವಾಗಿರುವ ಮೂರ್ತಿಯನ್ನು ನಾಶಪಡಿಸಿ, ದುಷ್ಟಶಕ್ತಿಯನ್ನು ಕಾಲಿನಿಂದ ನಿರ್ನಾಮ ಮಾಡುವ ರೂಪದಲ್ಲಿ ಶಿವನ ಮೂರ್ತಿಯ ಕಲಾಕೃತಿ ಕೆತ್ತನೆಯಾಗಿದೆ. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

    ಚಾಲುಕ್ಯರ ಲೋಕಮಹಾದೇವಿ ಕಟ್ಟಿಸಿದ ದೇವಾಲಯದಲ್ಲಿ ಈ ಕಲಾಕೃತಿ ಕಂಡು ಬಂದಿದ್ದು, ಈ ಒಂದು ರಾಜಮುದ್ರೆ ಸೆಂಗೊಲ್ 7ನೇ ಶತಮಾನದಲ್ಲಿ ಚಾಲನೆಯಲ್ಲಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯ ಕಂಚಿ ಪಲ್ಲವರ ಮೇಲೆ ಯುದ್ಧಸಾರಿ ಜಯ ಸಾಧಿಸಿದ ನೆನಪಿಗಾಗಿ ಕಟ್ಟಿಸಲ್ಪಟ್ಟಿರುವ ವಿರೂಪಾಕ್ಷ ದೇವಾಲಯದ ಗೋಡೆಯ ಮೇಲೆ ಕಂಡುಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

  • 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    – ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದ್ದುದು ನೆಹರು ಅವರ ವಾಕಿಗ್ ಸ್ಟಿಕ್ ಹೆಸರಲ್ಲಿ

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆ ವಿವಾದದೊಂದಿಗೆ ಇದೀಗ ಪ್ರತಿಪಕ್ಷಗಳು ‘ಸೆಂಗೋಲ್’ (Sengol) ವಿವಾದವನ್ನೂ ಎಳೆದುತಂದಿದೆ. 7 ದಶಕಗಳ ಕಾಲ ಈ ಚಿನ್ನದ ಸೆಂಗೋಲ್ ಅನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ (Allahabad Museum) ಇಡಲಾಗಿದ್ದು, ಇದೀಗ ಸಂಸತ್ ಭವನ (New Parliament Building) ಉದ್ಘಾಟನೆ ವೇಳೆ ಸ್ಪೀಕರ್ ಆಸನದ ಬಳಿ ಇರಿಸಲಾಗುತ್ತಿದೆ.

    ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರಿಗೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವ ಸಂಕೇತವಾಗಿ ಸೆಂಗೋಲ್ ಅನ್ನು ನೀಡಲಾಗಿತ್ತು ಎಂಬ ಮಾತು ಕೇಳಿಬಂದರೂ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಆದರೆ ಇವೆಲ್ಲದಕ್ಕೂ ಬಿಜೆಪಿ ನಾಯಕರು ಉತ್ತರ ನೀಡಿದ್ದಾರೆ. ಇದನ್ನು ಹುಡುಕಲು 2 ವರ್ಷವೇ ಬೇಕಾಯಿತು ಎಂಬ ಸಂಗತಿ ಅತ್ಯಂತ ಕುತೂಹಲ ಮೂಡಿಸಿದೆ.

    ಸೆಂಗೋಲ್ ಬೆಳಕಿಗೆ ಬಂದಿದ್ದು ಯಾವಾಗ?
    2021ರಲ್ಲಿ ಅಂಕಣಕಾರ ಎಸ್ ಗುರುಮೂರ್ತಿ ಅವರು ‘ತುಘಲಕ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ಸೆಂಗೋಲ್ ಹುಡುಕಾಟ ಆರಂಭವಾಯಿತು. ಬಳಿಕ ಸತತ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ಸೆಂಗೋಲ್ ಹುಡುಕಾಟ ನಡೆಸಿತು. 1947ರ ಆಗಸ್ಟ್ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಕ್ಕಿದಾಗ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರಿಸುವ ಸಮಾರಂಭ ನಡೆದಿತ್ತು ಎಂಬುದನ್ನು ಸರ್ಕಾರ ಖಚಿತಪಡಿಸಿಕೊಂಡಿತು. ಇದೀಗ 77 ವರ್ಷ ಹಳೆಯ ಸೆಂಗೋಲ್ ಅನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ನಿರ್ಧಾರಿಸಿದೆ.

    ಗುರುಮೂರ್ತಿ ಬರೆದ ಲೇಖನದಲ್ಲೇನಿತ್ತು?
    ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಮಿಳುನಾಡಿನ ಸ್ವಾಮೀಜಿಯೊಬ್ಬರು ದೇಶದ ಸ್ವಾತಂತ್ರ‍್ಯ ಹಾಗೂ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರ ಮಾಡಿದ್ದರು ಎಂದು ಗುರುಮೂರ್ತಿ ಲೇಖನ ಬರೆದಿದ್ದರು. ಈ ಲೇಖನ ಪ್ರಕಟವಾದ ಕೆಲ ದಿನಗಳ ಬಳಿಕ ಖ್ಯಾತ ನೃತ್ಯಗಾರ್ತಿ ಡಾ.ಪದ್ಮಾ ಸುಬ್ರಮಣ್ಯಂ ಅವರು ಅದರ ಇಂಗ್ಲಿಷ್ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದರು. ಅದರೊಂದಿಗೆ ಪತ್ರವನ್ನೂ ಕಳುಹಿಸಿ, ಈ ಪವಿತ್ರ ಹಾಗೂ ಐತಿಹಾಸಿಕ ಸಂಗೋಲ್ ಹಸ್ತಾಂತರ ಸಮಾರಂಭದ ಇತಿಹಾಸವನ್ನು ಜನರಿಂದ ಮರೆಮಾಚಲಾಗಿದೆ. ಈ ವಿಚಾರವನ್ನು ಮೋದಿ ಸರ್ಕಾರ 2021ರ ಸ್ವಾತಂತ್ರ್ಯೋತ್ಸವದಂದು ಬಹಿರಂಗಪಡಿಸಬೇಕು ಎಂದು ಕೋರಿಕೊಂಡಿದ್ದರು.

    2 ವರ್ಷ ಸೆಂಗೋಲ್‌ಗಾಗಿ ಹುಡುಕಾಟ:
    ಪದ್ಮಾ ಸುಬ್ರಮಣ್ಯಂ ಅವರ ಪತ್ರವನ್ನು ಗಮನಿಸಿದ ಪ್ರಧಾನಿ ಕಾರ್ಯಾಲಯ ಹಾಗೂ ಸಂಸ್ಕೃತಿ ಸಚಿವಾಲಯ ಹಳೆಯ ದಾಖಲೆಗಳ ಹುಡುಕಾಟ ನಡೆಸಿತು. ಸೆಂಗೋಲ್‌ನ ಅಸ್ಥಿತ್ವ ನಿಜವೇ ಅಥವಾ ಹುಸಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಹಳೆಯ ಪತ್ರಿಕಾ ಲೇಖನ, ಪುಸ್ತಕಗಳು ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿದರು. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

    ಕೊನೆಗೆ ನೆಹರು ಅವರಿಗೆ ತಮ್ಮ ನಿವಾಸದಲ್ಲಿಯೇ ಸೆಂಗೋಲ್ ಅನ್ನು ಹಸ್ತಾಂತರ ಮಾಡಲಾಗಿತ್ತು ಎಂಬುದು ತಿಳಿದುಬಂತು. ಇದನ್ನು ಖಚಿತಪಡಿಸಿಕೊಳ್ಳಲು ಸಮಾರಂಭದ ಫೋಟೋಗಾಗಿ ಹುಡುಕಾಟ ನಡೆಸಲಾಯಿತು. ನೆಹರು ಅವರ ಖಾಸಗಿ ದಾಖಲೆಗಳನ್ನೂ ಪರಿಶೀಲಿಸಲು ಮನವಿ ಮಾಡಲಾಯಿತು. ಈ ವೇಳೆ 1947ರ ಆಗಸ್ಟ್ 25 ರಂದು ‘ಟೈಮ್’ ನಿಯತಕಾಲಿಕೆಯಲ್ಲಿ ಸೆಂಗೋಲ್ ಸಮಾರಂಭದ ಕುರಿತು ವಿವರವಾಗಿ ಬರೆಯಲಾಗಿದ್ದ ವರದಿ ಲಭಿಸಿತು.

    ನೆಹರು ವಾಕಿಂಗ್ ಸ್ಟಿಕ್ ಹೆಸರಲ್ಲಿ ಪ್ರದರ್ಶನ:
    ಸೆಂಗೋಲ್ ಸಿಕ್ಕಿದ್ದು ನಿಜ ಆದರೆ ಅದು ಎಲ್ಲಿದೆ ಎನ್ನುವುದು ಪತ್ತೆಯಾಗಲಿಲ್ಲ. ಸರ್ಕಾರ ಹಲವು ಮ್ಯೂಸಿಯಂಗಳಲ್ಲಿ ಸೆಂಗೋಲ್ ಹುಡುಕಾಟ ಆರಂಭಿಸಿತು. ಕೊನೆಗೆ ಈ ಸೆಂಗೋಲ್ 70 ವರ್ಷಗಳಿಂದ ಅಲಹಾಬಾದ್‌ನ ಮ್ಯೂಸಿಯಂನಲ್ಲಿ ಇರುವುದು ತಿಳಿದುಬಂತು. ಆದರೆ ಅದಕ್ಕೆ ನೆಹರು ಅವರು ಬಳಸುತ್ತಿದ್ದ ಚಿನ್ನದ ವಾಕಿಂಗ್ ಸ್ಟಿಕ್ ಎಂಬ ಅಡಿಬರಹದೊಂದಿಗೆ ಪ್ರದರ್ಶನಕ್ಕೆ ಇಡಲಾಗಿತ್ತು.

    ಇದೀಗ ಮರೆಮಾಚಲಾಗಿದ್ದ ಇತಿಹಾಸವನ್ನು ಬಯಲಿಗೆ ತಂದು ಸರ್ಕಾರ ಸೆಂಗೋಲ್ ಅನ್ನು ಮ್ಯೂಸಿಯಂನಿಂದ ತರಿಸಿ ಹೊಸದಾಗಿ ನಿರ್ಮಾಣವಾಗಿರುವ ಸಂಸತ್ ಭವನದಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಿದೆ. ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

  • ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

    ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

    ನವದೆಹಲಿ: ಹೊಸ ಸಂಸತ್ ಭವನ ಉದ್ಘಾಟನೆ ವಿವಾದದ ಜೊತೆಗೆ ಈಗ ರಾಜದಂಡ `ಸೆಂಗೋಲ್‌ʼ (Sengol) ವಿವಾದವೂ ಸೇರ್ಪಡೆಯಾಗಿದೆ. ಕಳೆದ 7 ದಶಕಗಳಿಂದ ಅಲಹಾಬಾದ್ ಮ್ಯೂಸಿಯಂನಲ್ಲಿದ್ದ (Allahabad Museum) ಚಿನ್ನದ ರಾಜದಂಡವನ್ನು ಸಂಸತ್‌ಭವನ ಉದ್ಘಾಟನೆ ವೇಳೆಯೇ ಸ್ಪೀಕರ್ ಆಸನದ ಬಳಿ ಸ್ಥಾಪಿಸಲಾಗ್ತಿದೆ.

    1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದಾಗ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಲಾರ್ಡ್ ಮೌಂಟ್ ಬ್ಯಾಟನ್ ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಈ ಚಿನ್ನದ ರಾಜದಂಡ ಕೊಟ್ಟಿದ್ದರು. ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ರಾಜದಂಡವನ್ನು ಸ್ವೀಕರಿಸುವಂತೆ ನೆಹರು ಅವರಿಗೆ ಸಲಹೆ ನೀಡಿದ್ದರು. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

    ಇದನ್ನು, 1950ರಲ್ಲಿ ಅಲಹಾಬಾದ್ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ. ಆದ್ರೆ ಲಾರ್ಡ್ ಮೌಂಟ್ ಬ್ಯಾಟನ್ – ರಾಜಗೋಪಾಲಾಚಾರಿ-ನೆಹರೂ ಅವರಿಗೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ಈ ರಾಜದಂಡವನ್ನು ಕೊಡಲಾಗಿತ್ತು ಅನ್ನೋದೇ ಬೋಗಸ್. ಯಾವುದೇ ಸಾಕ್ಷ್ಯ ಇಲ್ಲ ಅಂತಾ ಕಾಂಗ್ರೆಸ್‌ನ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವರು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಆಡಳಿತಕ್ಕೆ 9 ವರ್ಷ, ಕಾಂಗ್ರೆಸ್‌ನಿಂದ 9 ಪ್ರಶ್ನೆ – ಮೌನ ಮುರಿದು ಉತ್ತರಿಸುವಂತೆ ಒತ್ತಾಯ

    ಗೃಹ ಸಚಿವ ಅಮಿತ್ ಶಾ (Amit Shah) ಟ್ವೀಟ್ ಮಾಡಿ, ಇದು ಸಂಸ್ಕೃತಿ ಸಂಪ್ರದಾಯಗಳನ್ನು ಆಧುನಿಕತೆಯೊಂದಿಗೆ ಸಂಯೋಜಿಸುತ್ತದೆ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿದೆ. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿ (Narendra Modi) ಅವರಿಗೆ ಗೊತ್ತಾಗುತ್ತಿದ್ದಂತೆ ಅದನ್ನು ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲು ನಿರ್ಧರಿಸಿದ್ದಾರೆ. ಸೆಂಗೋಲ್ ಎಂದರೆ ತಮಿಳಿನ ಭಾಷೆಯಲ್ಲಿ `ಸಮೃದ್ಧ, ಸಂಪತ್ತು’ ಎಂದರ್ಥ ಎಂದು ಅಮಿತ್ ಶಾ ಹೇಳಿದ್ದಾರೆ. ಸ್ವಾತಂತ್ರ್ಯದ ಸಂಕೇತವಾದ ಈ ರಾಜದಂಡವನ್ನು ನೆಹರು ಅವರ ಊರುಗೋಲು ಅಂತಾ ಕತ್ತಲೆಯಲ್ಲಿ ಇಡಲಾಗಿತ್ತು ಎಂದು ಸ್ಮೃತಿ ಇರಾನಿ ಕೂಡ ವಾಗ್ದಾಳಿ ನಡೆಸಿದ್ದಾರೆ.

  • ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

    ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

    ನವದೆಹಲಿ: ಮೇ 28ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ (Narendra Modi) ಉದ್ಘಾಟನೆಗೊಳ್ಳಲಿರುವ ಹೊಸ ಸಂಸತ್ತಿನಲ್ಲಿ (Parliment) ಚಿನ್ನದ ರಾಜದಂಡವನ್ನು ಇಡಲಾಗುತ್ತದೆ.

    ಗೃಹ ಸಚಿವ ಅಮಿತ್ ಶಾ (Amit Shah) ಸುದ್ದಿಗೋಷ್ಠಿ ನಡೆಸಿ ಹೊಸ ಸಂಸತ್ತಿನಲ್ಲಿ ಸ್ಪೀಕರ್ ಸ್ಥಾನದ ಬಳಿ ನರೇಂದ್ರ ಮೋದಿಯವರು ಐತಿಹಾಸಿಕ ಚಿನ್ನದ ರಾಜದಂಡ ‘ಸೆಂಗೊಲ್’ (Sengol) ಇರಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಬ್ರಿಟಿಷ್ ಆಡಳಿತ ಹಸ್ತಾಂತರಿಸಿತ್ತು. ಈ ರಾಜದಂಡವನ್ನು ‘ಸೆಂಗೊಲ್’ ಎಂದು ಕರೆಯಲಾಗುತ್ತದೆ. ಇದು ತಮಿಳು ಪದ ‘ಸೆಮ್ಮೈʼನಿಂದ ಬಂದಿದೆ ಎಂದರು.

    ಸೆಂಗೊಲ್‌ನ ಇತಿಹಾಸ ಮತ್ತು ಮಹತ್ವ ಅನೇಕರಿಗೆ ತಿಳಿದಿಲ್ಲ. ಹೊಸ ಸಂಸತ್ತಿನಲ್ಲಿ ಇದನ್ನು ಸ್ಥಾಪಿಸುವುದರಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನಮ್ಮ ಆಧುನಿಕತೆಯೊಂದಿಗೆ ಜೋಡಿಸುವ ಪ್ರಯತ್ನವಾಗುತ್ತದೆ. ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವ ಯೋಜನೆಯು ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಸೆಂಗೊಲ್ ಈಗ ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿದೆ. ಅಲ್ಲಿಂದ ಸಂಸತ್ತಿಗೆ ತಂದು ಪ್ರಧಾನಿ ಮೋದಿಯವರು ಸ್ಪೀಕರ್ ಸ್ಥಾನದ ಬಳಿ ಅದನ್ನು ಸ್ಥಾಪಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ಸೆಂಗೊಲ್ ಅನ್ನು ರಾಜಕೀಯಕ್ಕೆ ಜೋಡಿಸಬಾರದು. ಆಡಳಿತವು ಕಾನೂನಿನ ನಿಯಮದಿಂದ ನಡೆಯಬೇಕೆಂದು ನಾವು ಬಯಸುತ್ತೇವೆ. ಇದು ಯಾವಾಗಲೂ ಅದನ್ನು ನಮಗೆ ನೆನಪಿಸುತ್ತದೆ. ಅಲ್ಲದೇ ಸಂಸತ್ತಿನಲ್ಲಿ ರಾಜದಂಡದ ಸ್ಥಾಪನೆಯು ಮರೆತುಹೋದ ಇತಿಹಾಸವನ್ನು ನಮಗೆ ನೆನಪಿಸುವಂತೆ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ

    ಸೆಂಗೊಲ್ ಮಹತ್ವವೇನು?
    ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಅವರ ಜೊತೆ ಯಾವ ರೀತಿ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚೋಳರ ಇತಿಹಾಸವನ್ನು ತಿಳಿದಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ಸೆಂಗೊಲ್ ನೀಡುವ ಮೂಲಕ ಹಸ್ತಾಂತರಿಸಬಹುದು ಎಂದು ಸಲಹೆ ನೀಡಿದ್ದರು. ಈ ಸಲಹೆ ನೆಹರೂ ಅವರಿಗೆ ಇಷ್ಟವಾಯಿತು. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ಭಾರತದ ಸ್ವಾತಂತ್ರ‍್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು. ಇವರು ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಧೀನಂ ಮಠವನ್ನು ಸಂಪರ್ಕಿಸಿದರು. ಆ ಮಠದ ಶ್ರೀಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡರು. ಮದ್ರಾಸಿನ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗೋಲನ್ನು ತಯಾರಿಸಿದ್ದು, ಇದು ಐದು ಅಡಿ ಉದ್ದ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ಯನ್ನು ಹೊಂದಿದೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

    ವರದಿಗಳ ಪ್ರಕಾರ, ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್‌ಬ್ಯಾಟನ್‌ಗೆ ನೀಡಿದ್ದರು. ನಂತರ ರಾಜದಂಡವನ್ನು ಪಡೆದ ಗಂಗಾಜಲವನ್ನು ಸಿಂಪಡಿಸಿದರು. 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹಲವಾರು ನಾಯಕರು ಮತ್ತು ಉನ್ನತ ಗಣ್ಯರ ಸಮ್ಮುಖದಲ್ಲಿ ಸೆಂಗೊಲ್ ಅನ್ನು ಸ್ವೀಕರಿಸಿದರು. ಇದು ಬ್ರಿಟಿಷರಿಂದ ಸ್ವತಂತ್ರ ಭಾರತದ ಜನರಿಗೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. ಭಾರತ ಸ್ವಾತಂತ್ರ‍್ಯ ಗಳಿಸಿದ ಮಧ್ಯರಾತ್ರಿಯ 15 ನಿಮಿಷಗಳ ಮೊದಲು ಈ ಸ್ಮರಣೀಯ ಘಟನೆಗಳು ನಡೆದಿತ್ತು. ಪ್ರಧಾನಿ ನೆಹರೂ ರಾಜದಂಡವನ್ನು ಸ್ವೀಕರಿಸುತ್ತಿದ್ದಂತೆ ವಿಶೇಷ ಗೀತೆಯನ್ನು ಮೊಳಗಿಸಲಾಯಿತು. ಇದನ್ನೂ ಓದಿ: ಪಾಕಿಸ್ತಾನದಲ್ಲೂ ಜನ ಮೋದಿಯನ್ನು ಇಷ್ಟಪಡುತ್ತಾರೆ: ಅನೂಪ್ ಜಲೋಟಾ

    ತಮಿಳು ಸಂಸ್ಕೃತಿಯಲ್ಲಿ ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೊಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಪೀಠದ ಬಳಿ ರಾಜದಂಡ ಇಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ