Tag: senegal

  • ಬಸ್‌ ಟೈರ್‌ ಪಂಕ್ಚರ್‌ ಆಗಿ ಮತ್ತೊಂದು ಬಸ್‌ಗೆ ಡಿಕ್ಕಿ – 40 ಸಾವು, 78 ಮಂದಿಗೆ ಗಾಯ

    ಬಸ್‌ ಟೈರ್‌ ಪಂಕ್ಚರ್‌ ಆಗಿ ಮತ್ತೊಂದು ಬಸ್‌ಗೆ ಡಿಕ್ಕಿ – 40 ಸಾವು, 78 ಮಂದಿಗೆ ಗಾಯ

    ಡಾಕರ್: ಭೀಕರ ಬಸ್‌ ಅಪಘಾತದಲ್ಲಿ (Bus Crash) 40 ಮಂದಿ ದುರ್ಮರಣಕ್ಕೀಡಾಗಿದ್ದು, ಹಲವರು ಗಾಯಗೊಂಡಿರುವ ದಾರುಣ ಘಟನೆ ಕೇಂದ್ರ ಸೆನೆಗಲ್‌ನಲ್ಲಿ (Senegal) ಭಾನುವಾರ ನಡೆದಿದೆ.

    ಸಾರ್ವಜನಿಕ ಬಸ್‌ವೊಂದರ ಟೈರ್ ಪಂಕ್ಚರ್ ಆಗಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕನಿಷ್ಠ 78 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಭೀಕರ ರಸ್ತೆ ಅಪಘಾತ – 19 ಮಂದಿ ಬಲಿ

    ಕಾಫ್ರಿನ್ ಪ್ರದೇಶದ ಗ್ನಿವಿ ಗ್ರಾಮದಲ್ಲಿ ಮುಂಜಾನೆ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಅಧ್ಯಕ್ಷ ಮ್ಯಾಕಿ ಸಾಲ್ (Macky Sall) ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಇಂದು ಗ್ನಿಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 40 ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ದುರಂತ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಅವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುವುದು” ಎಂದು ತಿಳಿಸಿದ್ದಾರೆ.

    ಸೋಮವಾರದಿಂದ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ ಅವರು, ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು ಸಭೆ ನಡೆಸುವುದಾಗಿ ಮ್ಯಾಕಿ ಸಾಲ್ ಹೇಳಿದ್ದಾರೆ. ಕಳಪೆ ಗುಣಮಟ್ಟದ ರಸ್ತೆಗಳು, ಚಾಲಕರು ನಿಯಮಗಳನ್ನು ಪಾಲಿಸದ ಕಾರಣ ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಮೋಟಾರ್ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಶಾಲೆ ಬಿಟ್ಟು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಮೆರಿಕದ ಜಡ್ಜ್

    2017ರಲ್ಲಿ, ಎರಡು ಬಸ್‌ಗಳು ಅಪಘಾತಕ್ಕೀಡಾಗಿ ಕನಿಷ್ಠ 25 ಜನರು ಸಾವನ್ನಪ್ಪಿದ್ದರು. ಅವರಲ್ಲಿ ಅನೇಕರು ತೀರ್ಥಯಾತ್ರೆಗಾಗಿ ಕೇಂದ್ರ ಪಟ್ಟಣವಾದ ತೌಬಾ ಕಡೆಗೆ ಹೋಗುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರವಿ ಪೂಜಾರಿ ಇಲ್ಲಿ ನಟೋರಿಯಸ್- ಅಲ್ಲಿ ಸಮಾಜ ಸೇವಕ!

    ರವಿ ಪೂಜಾರಿ ಇಲ್ಲಿ ನಟೋರಿಯಸ್- ಅಲ್ಲಿ ಸಮಾಜ ಸೇವಕ!

    – ಬುರ್ಕಿನಾ ಫಾಸೊ, ಸೆನೆಗಲ್‍ನಲ್ಲಿ ಗೌರವಾನ್ವಿತ ವ್ಯಕ್ತಿ

    ಬೆಂಗಳೂರು: ಈ ದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ರವಿ ಪೂಜಾರಿಯನ್ನು ಬರೋಬ್ಬರಿ 26 ವರ್ಷಗಳ ಬಳಿಕ ಭಾರತಕ್ಕೆ ಕರೆತರಲಾಗಿದೆ. ವರ್ಷದ ಹಿಂದೆಯೇ ಅರೆಸ್ಟ್ ಆಗಿದ್ದರೂ ಪ್ರೊಸೀಜರ್ ಮುಗಿಸಿ ಕರೆತರೋಕೆ ವರ್ಷವೇ ಉರುಳಿ ಹೋಗಿದೆ.

    ಕರ್ನಾಟಕದಲ್ಲಿ ಹುಟ್ಟಿದ್ದ ರವಿ ಪೂಜಾರಿ ಬಾಂಬೆ ಸೇರಿ ಮರ್ಡರ್ ಮಾಡಿದ್ದ. ಆ ಕೇಸಲ್ಲಿ ಜೈಲಿಗೆ ಹೋಗಿ ಬಂದು ಪುನಃ ಕೊಲೆ ಮಾಡಿ ದೇಶ ಬಿಟ್ಟಿದ್ದ. ನೇಪಾಳ ಮೂಲಕ ಮಲೇಷ್ಯಾ, ಉಗಾಂಡ, ಬುರ್ಕಿನಾ ಫಾಸೊ ಹೀಗೆ ಹಲವಾರು ದೇಶಗಳಲ್ಲಿ ಓಡಾಡ್ಕೊಂಡು ರಾಜಕಾರಣಿಗಳು, ಸಿನಿಮಾ ನಟರು, ಬ್ಯುಸಿನೆಸ್‍ಮೆನ್‍ಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡ್ತಿದ್ದ. ಈತನ ಪತ್ತೆಗಾಗಿ ಎಡಿಜಿಪಿ ಅಮರ್‍ಕುಮಾರ್ ಪಾಂಡೆ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಹೀಗಾಗಿ ಈತನ ಬಂಧನಕ್ಕಾಗಿ ರೆಡ್‍ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.

    2019ರ ಜನವರಿ 19ರಂದು ಸೆನೆಗಲ್‍ನ ಡಕಾರ್‍ನಲ್ಲಿ ಅರೆಸ್ಟ್ ಆಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನ 2020ರ ಫೆಬ್ರವರಿ 23ರಂದು ಅಂದರೆ ವರ್ಷಗಳ ಬಳಿಕ ಭಾರತಕ್ಕೆ ಕರೆತರಲಾಗಿದೆ. ನನ್ನನ್ನ ಭಾರತಕ್ಕೆ ಹಸ್ತಾಂತರ ಮಾಡ್ಬಾರ್ದು ಅನ್ನೋ ರವಿ ಪೂಜಾರಿಯ ಅರ್ಜಿಯನ್ನ ಸೆನೆಗಲ್ ದೇಶದ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಭಾರತಕ್ಕೆ ರವಿ ಪೂಜಾರಿಯನ್ನ ಕರೆ ತರೋದು ಸುಲಭವಾಗಿತ್ತು. ಬುರ್ಕಿನಾ ಫಾಸೊದ ಸಿಟಿಜನ್‍ಶಿಪ್ ಹೊಂದಿರುವ ರವಿಪೂಜಾರಿ ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದ. ಮೂರು ವರ್ಷದ ಹಿಂದೆ ಬುರ್ಕಿನಾ ಫಾಸೊದಿಂದ ಸೆನೆಗಲ್‍ಗೆ ಸ್ಥಳ ಬದಲಾಯಿಸಿದ್ದ ರವಿ ಪೂಜಾರಿ ಮಹಾರಾಜ ಹೆಸರಿನ ಹೋಟೆಲ್ ನಡೆಸ್ತಿದ್ದ. 2019ರ ಜನವರಿ 19 ರಂದು ಡಕಾರ್‍ನಲ್ಲಿ ಅರೆಸ್ಟ್ ಆದಾಗಿನಿಂದ ಇಲ್ಲಿಯತನಕ ರವಿ ಪೂಜಾರಿ ಜೈಲಿನಲ್ಲೇ ಇದ್ದ.

    ತಿಲಕ್ ನಗರ ಡಬಲ್ ಮರ್ಡರ್ ಶೂಟೌಟ್ ಕೇಸ್‍ನಲ್ಲಿ ಸಿಸಿಬಿ 14 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. 97 ಕೇಸ್‍ಗಳು ಕರ್ನಾಟಕದಲ್ಲಿ ರವಿ ಪೂಜಾರಿ ಮೇಲಿದ್ದು, 47 ಕೇಸ್‍ಗಳು ಬೆಂಗಳೂರು ಸಿಟಿಯಲ್ಲೇ ಇವೆ. ಮುಂಬೈ, ಕೊಚ್ಚಿ, ಗುಜರಾತ್ ಸೇರಿದಂತೆ ಹಲವಾರು ಕಡೆ ಕೇಸ್‍ಗಳಿವೆ. ಬುರ್ಕಿನಾ ಫಾಸೊ ಮತ್ತು ಸೆನೆಗಲ್‍ನಲ್ಲಿ ರವಿ ಪೂಜಾರಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಸಮಾಜ ಸೇವೆ ಮಾಡಿ ಜನರಿಂದ ಒಳ್ಳೆ ವ್ಯಕ್ತಿ ಅನ್ನಿಸಿಕೊಂಡಿದ್ದ. ಈ ಎರಡೂ ದೇಶಗಳಲ್ಲಿ ಈತನ ಮೇಲೆ ಯಾವುದೇ ಕೇಸ್ ಗಳಿರಲಿಲ್ಲ. ಆಂಥೋನಿ ಫರ್ನಾಂಡಿಸ್ ಅಂತ ಹೆಸರು ಕೂಡ ಚೇಂಜ್ ಮಾಡ್ಕೊಂಡಿದ್ದ ಈತನಿಗೆ ಗುರು ಚೋಟಾ ರಾಜನ್ ಟೋನಿ ಫರ್ನಾಂಡಿಸ್ ಅಂತ ಹೆಸ್ರು ನೀಡಿದ್ದನಂತೆ. ಬಳಿಕ ಸೆನೆಗಲ್ ನಲ್ಲಿ ಆಂಟೋನಿ ಫರ್ನಾಂಡಿಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದು, ವಿವಿಧ ಹೆಸರುಗಳಲ್ಲಿ ರವಿ ಪೂಜಾರಿ ಹಲವಾರು ಪಾಸ್ ಪೋರ್ಟ್ ಹೊಂದಿದ್ದ.

    2018ರ ಜುಲೈ 18ರಂದು ಈತನ ಶೋಧಕಾರ್ಯಕ್ಕೆ ಇಳಿದಿದ್ದ ಅಮರ್ ಕುಮಾರ್ ಪಾಂಡೆ, 2019ರ ಜನವರಿ 19ರಂದು ಸೆನೆಗಲ್ ನಲ್ಲಿ ಅರೆಸ್ಟ್ ಮಾಡುವಂತೆ ಕೆಲಸ ನಿರ್ವಹಿಸಿದ್ರು. ಅಮರ್ ಕುಮಾರ್ ಪಾಂಡೆ ಜೊತೆ ಡಿಐಜಿ ಸಂದೀಪ್ ಪಾಟೀಲ್ ತಂಡ ಕೆಲಸ ಮಾಡಿತ್ತು. ಇಂಟರ್‍ನೆಟ್ ಕಾಲ್ ನಿಂದ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಡ್ತಿದ್ದ ಪಾತಕಿ ಮೇಲೆ ನೂರಾರು ಕೇಸ್‍ಗಳಿವೆ. ಕರ್ನಾಟಕದಲ್ಲಿ ನಡೆದ ಕೊಲೆ, ಹಾಗೂ ಬೆದರಿಕೆ ಕೇಸ್‍ಗಳ ತನಿಖೆ ಮುಗಿದ ತಕ್ಷಣ ಬಾಡಿವಾರೆಂಟ್ ಮೇಲೆ ಪಾತಕಿಯನ್ನ ವಶಕ್ಕೆ ಪಡೆಯಲು, ರಾ, ಐಬಿ ಹಾಗೂ ಮಹಾರಾಷ್ಟ್ರ ಪೊಲೀಸರು ಕಾಯುತ್ತಿದ್ದಾರೆ.

  • ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

    ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

    ಬೆಂಗಳೂರು: ನಕಲಿ ಪಾಸ್‍ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‍ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ದೊರೆ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಹೇಗೆ ಪರಾರಿಯಾಗಿದ್ದಾನೆ ಎನ್ನುವುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ನ್ಯಾಯಾಲಯದಿಂದ ಬೇಲ್ ಪಡೆದು ರವಿ ಪೂಜಾರಿ ಬಿಡುಗಡೆಹೊಂದಿದ್ದಾನೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೋ ಅಥವಾ ಜೈಲಿನಿಂದಲೇ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ರವಿ ಪೂಜಾರಿ ಪರಾರಿಯಾಗಿದ್ದಾನೆ ಎಂದು ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.

    ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರವಿ ಪೂಜಾರಿ ಸೆನೆಗಲ್‍ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಯಾರೂ ತಿಳಿಸಿಲ್ಲ.

    ಈ ಸುದ್ದಿ ನಿಜವೇ ಆದರೆ ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ರವಿ ಪೂಜಾರಿಯನ್ನು ಕಾನೂನು ಹೋರಾಟದಡಿ ಗಡೀಪಾರು ಮಾಡುವ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಬಿದ್ದಿದೆ. ರವಿ ಪೂಜಾರಿಯನ್ನು ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನಗಲ್‍ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು.

    ಆತನ ವಿರುದ್ಧ ದಾಖಲಾಗಿರೋ ಕೇಸ್‍ಗಳು, ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಅಂತಿಮ ಹಂತದಲ್ಲಿದ್ದು, ಹಸ್ತಾಂತರ ಆಗುವ ನಿರೀಕ್ಷೆ ಇತ್ತು. ಈ ಮಧ್ಯೆ, ರವಿ ಪೂಜಾರಿ ಅರೆಸ್ಟ್ ಕ್ರೆಡಿಟ್‍ಗಾಗಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಫೆಬ್ರವರಿ ತಿಂಗಳಲ್ಲಿ ಭಾರೀ ಟ್ವೀಟ್ ಸಮರವೇ ನಡೆದಿತ್ತು.