Tag: semi-final

  • ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಆಡಿಲೇಡ್: ಟಿ20 ವಿಶ್ವಕಪ್‍ನಲ್ಲಿ (T20 World Cup) ಸೆಮಿಫೈನಲ್ ಪ್ರವೇಶಿಸುವ ಮುಕ್ತ ಅವಕಾಶ ಹೊಂದಿದ್ದ ದಕ್ಷಿಣ ಆಫ್ರಿಕಾ (South Africa), ನೆದರ್‌ಲ್ಯಾಂಡ್‌ (Netherland) ವಿರುದ್ಧ ಸೋಲಿನೊಂದಿಗೆ ಮನೆದಾರಿ ಹಿಡಿದಿದೆ. ಇತ್ತ ಆಫ್ರಿಕಾ ಸೋಲಿನ ಪ್ರಯೋಜನ ಪಡೆದ ಪಾಕಿಸ್ತಾನ (Pakistan) ತಂಡ ಬಾಂಗ್ಲಾದೇಶ (Bangladesh) ವಿರುದ್ಧದ ಗೆಲುವಿನೊಂದಿಗೆ ಅದೃಷ್ಟದಾಟದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

    ದಿನದ ಮೊದಲ ಆಟದಲ್ಲಿ ನೆದರ್‌ಲ್ಯಾಂಡ್‌ ವಿರುದ್ಧದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರಾಭವಗೊಂಡು ತಮ್ಮ ತಂಡಕ್ಕಿದ್ದ ಚೋಕರ್ಸ್ ಹಣೆಪಟ್ಟಿಯನ್ನು ತೊಡೆದು ಹಾಕಲು ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆದರ್‌ಲ್ಯಾಂಡ್‌ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಪೇರಿಸಿತು. 159 ರನ್‍ಗಳ ಉತ್ತಮ ಮೊತ್ತವನ್ನು ಬೆನ್ನಟ್ಟಿದ ಆಫ್ರಿಕಾ ನೆದರ್‌ಲ್ಯಾಂಡ್‌ ಬೌಲರ್‌ಗಳ ಸಂಘಟಿತ ದಾಳಿಗೆ ಕಕ್ಕಾಬಿಕ್ಕಿಯಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ನೆದರ್‌ಲ್ಯಾಂಡ್‌ 13 ರನ್‍ಗಳ ಜಯದೊಂದಿಗೆ ತೃಪ್ತಿದಾಯಕ ವಿದಾಯ ಹೇಳಿತು. ಇದನ್ನೂ ಓದಿ: ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಈ ಸೋಲಿನೊಂದಿಗೆ ಆಫ್ರಿಕಾ ಮನೆ ದಾರಿ ಹಿಡಿಯಿತು. ಇತ್ತ ಭಾರತ (India) ಸೆಮಿಫೈನಲ್‍ಗೆ ಪ್ರವೇಶ ಪಡೆದರೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಬಾಗಿಲು ತೆರೆದುಕೊಂಡಿತು. ಹಾಗಾಗಿ ಪಾಕ್, ಬಾಂಗ್ಲಾ ನಡುವಿನ ಕಾದಾಟ ಕುತೂಹಲ ಮೂಡಿಸಿತ್ತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು ಬಗ್ಗುಬಡಿದು ಸೆಮಿಫೈನಲ್‍ಗೆ ಪ್ರವೇಶ ಪಡೆದಿದೆ. ಇದನ್ನೂ ಓದಿ: ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ಬಾಂಗ್ಲಾದೇಶ ನೀಡಿದ 128 ರನ್‍ಗಳ ಅಲ್ಪಮೊತ್ತವನ್ನು ಪಾಕಿಸ್ತಾನ ತಂಡ 18.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 128 ರನ್ ಸಿಡಿಸಿ ಇನ್ನೂ 11 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಅಂತರದ ಜಯ ಗಳಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಇದೀಗ ಸೆಮಿಫೈನಲ್‍ಗೆ ಗ್ರೂಪ್ 1ರಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವೇಶ ಪಡೆದರೆ, ಗ್ರೂಪ್ 2ರಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್‍ಗೆ ತೇರ್ಗಡೆಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ರೋಚಕ ಹಂತಕ್ಕೆ ತಲುಪಿದೆ. ಸೂಪರ್ 12 ಹಂತದಿಂದ ಸೆಮಿಫೈನಲ್‍ಗೇರಲು (Semi-Final) ಎಲ್ಲಾ ತಂಡಗಳು ಹರಸಾಹಸ ಪಡುತ್ತಿದೆ. ಈ ನಡುವೆ ಮಳೆಯಿಂದಾಗಿ (Rain) ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬಿದ್ದಿದೆ.

    ಇದೀಗ ಗ್ರೂಪ್ 2 ರಿಂದ ಸೆಮಿಫೈನಲ್‍ಗೇರುವ ತಂಡಗಳ ಲೆಕ್ಕಾಚಾರ ಕುತೂಹಲ ಮೂಡಿಸಿದೆ. ಭಾರತ (India), ದಕ್ಷಿಣ ಆಫ್ರಿಕಾ (South Africa), ಪಾಕಿಸ್ತಾನ (Pakistan), ಬಾಂಗ್ಲಾದೇಶ (Bangladesh) ತಂಡಗಳ ನಡುವೆ ಸೆಮಿಸ್ ರೇಸ್ ಆರಂಭಗೊಂಡಿದೆ. ಇದೀಗ ಅಂಕಪಟ್ಟಿಯಲ್ಲಿ 6 ಪಾಯಿಂಟ್‍ಗಳೊಂದಿಗೆ ನಂಬರ್ 1 ಸ್ಥಾನದಲ್ಲಿ ಭಾರತವಿದೆ. ನಂಬರ್ 2ರಲ್ಲಿ  ದಕ್ಷಿಣ ಆಫ್ರಿಕಾ, ನಂಬರ್ 3ರಲ್ಲಿ ಪಾಕಿಸ್ತಾನವಿದೆ. 4ರಲ್ಲಿ ಬಾಂಗ್ಲಾದೇಶವಿದೆ. ನಾಲ್ಕು ತಂಡಗಳಿಗೂ ಒಂದೊಂದು ಪಂದ್ಯ ಬಾಕಿ ಇದೆ. ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

    ಈ ಪೈಕಿ ಭಾರತ ತನ್ನ ಕೊನೆಯ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮಳೆ ಕಾಟ ಕೊಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗುತ್ತದೆ. ಹೀಗಾದಲ್ಲಿ ಭಾರತ ತಂಡ 7 ಅಂಕಗಳೊಂದಿಗೆ ಸೆಮಿಫೈನಲ್‍ಗೆ ಭಾರತ ಲಗ್ಗೆ ಇಟ್ಟರೂ, ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನ ಉಳಿಸಿಕೊಳ್ಳಲು ಕಷ್ಟವಿದೆ. ಎಲ್ಲಾದರೂ ಜಿಂಬಾಬ್ವೆ ವಿರುದ್ಧ ಭಾರತ ಗೆದ್ದರೆ, 8 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿ ಉಳಿಯಲಿದೆ.

    ಇತ್ತ ಭಾರತದ ಪಂದ್ಯ ಮಳೆಯಿಂದ ರದ್ದಾದರೆ, ದಕ್ಷಿಣ ಆಫ್ರಿಕಾ ತಂಡ ನೆದರ್‌ಲ್ಯಾಂಡ್‌ ವಿರುದ್ಧ ಗೆದ್ದರೆ, ರನ್‍ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ನಂಬರ್ 1 ಸ್ಥಾನಕ್ಕೆ ಏರಬಹುದಾದ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ಮತ್ತು ನೆದರ್‌ಲ್ಯಾಂಡ್‌ ಪಂದ್ಯ ಮಳೆಯಿಂದ ರದ್ದಾದರೆ ಆಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಅವಕಾಶವಿದೆ. ಅದರಲ್ಲೂ ಪಾಕಿಸ್ತಾನಕ್ಕೆ ಹೆಚ್ಚಿನ ಅವಕಾಶವಿದೆ. ಆದರೆ ರನ್‍ರೇಟ್ ಉತ್ತಮ ಪಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇತ್ತ ಬಾಂಗ್ಲಾ ರನ್‍ರೇಟ್ -1.276 ಇರುವುದರಿಂದ ಅವಕಾಶ ಕಡಿಮೆ ಇದೆ. ಪಾಕ್ ಮತ್ತು ಬಾಂಗ್ಲಾ ಪಂದ್ಯ ಮಳೆಯಿಂದ ರದ್ದಾದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸುಲಭವಾಗಿ ಸೆಮಿಫೈನಲ್‍ಗೇರಲಿದೆ. ಇದನ್ನೂ ಓದಿ: ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    ಗ್ರೂಪ್-2ರಲ್ಲಿ ಮೊದಲ ಸ್ಥಾನ ಪಡೆದ ತಂಡ ಗ್ರೂಪ್-1 ರಲ್ಲಿ 2ನೇ ಸ್ಥಾನ ಪಡೆದ ತಂಡದೊಂದಿಗೆ ಸೆಮಿಫೈನಲ್ ಪಂದ್ಯವಾಡಲಿದೆ. ಗ್ರೂಪ್-2ರಲ್ಲಿ 2ನೇ ಸ್ಥಾನ ಪಡೆದ ತಂಡ ಗ್ರೂಪ್-1ರಲ್ಲಿ ಮೊದಲ ಸ್ಥಾನ ಪಡೆದ ತಂಡದೊಂದಿಗೆ ಸೆಮಿಫೈನಲ್ ಆಡಲಿದೆ.

    Live Tv
    [brid partner=56869869 player=32851 video=960834 autoplay=true]

  • ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    ದುಬೈ: 19ನೇ ಓವರಿನಲ್ಲಿ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಆಸ್ಟ್ರೇಲಿಯಾ ರೋಚಕ 5 ವಿಕೆಟ್‌ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಲೀಗ್‍ನ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸುವ ಕನಸು ಕಂಡಿದ್ದ ಪಾಕಿಸ್ತಾನದ ಕನಸು ಭಗ್ನವಾಗಿದೆ.

    ಪಾಕಿಸ್ತಾನ ನೀಡಿದ 177 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 177 ರನ್‌ ಹೊಡೆಯಿತು. ಈ ಮೂಲಕ ಎರಡನೇ ಬಾರಿ ಆಸ್ಟ್ರೇಲಿಯಾ ಫೈನಲ್‌ ಪ್ರವೇಶಿಸಿತು.

    ಕೊನೆಯ 18 ಎಸೆತಗಳಿಗೆ 38 ರನ್‌ ಬೇಕಿತ್ತು. 18 ನೇ ಓವರಿನಲ್ಲಿ 15 ರನ್‌ ಬಂದಿತ್ತು. ಶಾಹಿನ್‌ ಅಫ್ರಿದಿ ಎಸೆದ 19ನೇ ಓವರ್‌ನಲ್ಲಿ 22 ರನ್‌ ಬಂತು. 19 ನೇ ಓವರಿನ ಕೊನೆಯ ಮೂರು ಎಸೆತದಲ್ಲಿ ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

    ವೇಡ್ ಮತ್ತು ಸ್ಟೋಯಿನಿಸ್ ಮುರಿಯದ 6ನೇ ವಿಕೆಟಿಗೆ 41 ಎಸೆತಗಳಿಗೆ 81 ರನ್‌ ಚಚ್ಚಿದರು. ವಾಡೆ 41 ರನ್(17‌ ಎಸೆತ, 2 ಬೌಂಡರಿ, 4 ಸಿಕ್ಸರ್)‌ ಸ್ಟೋಯಿನಿಸ್ 40 ರನ್‌(31 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ವಿಕೆಟ್‍ಗಳನ್ನು ಕಳೆದುಕೊಳ್ಳುತ್ತ ಸಾಗಿತ್ತು. ನಾಯಕ ಆರನ್ ಫಿಂಚ್ ಶೂನ್ಯ ಸುತ್ತಿದರೆ, ಸ್ಟೀವ್ ಸ್ಮಿತ್ 5 ರನ್‍ಗೆ ಸುಸ್ತಾದರು. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಒಂದು ಕಡೆ ಆಸರೆಯಾಗಿದ್ದ ಡೇವಿಡ್ ವಾರ್ನರ್ ಉತ್ತಮವಾಗಿ ಬ್ಯಾಟ್‌ ಬೀಸಿ 49 ರನ್ (30 ಎಸೆತ, 3 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಮಾರ್ಕಸ್ ಸ್ಟೋಯಿನಿಸ್ ಮತ್ತು ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ಗೆಲುವಿಗೆ ಹೋರಾಟ ನಡೆಸಿ ಗೆಲುವು ತಂದು ಕೊಟ್ಟರು.

    ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ 71 ರನ್ (60 ಎಸೆತ) ಸೇರಿಸಿತು. ಈ ವೇಳೆ ದಾಳಿಗಿಳಿದ ಜಂಪಾ, ಬಾಬರ್ ಅಜಮ್ 39 ರನ್ (34 ಎಸೆತ, 5 ಬೌಂಡರಿ) ವಿಕೆಟ್ ಪಡೆಯವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

    ನಂತರ ಜೊತೆಯಾದ ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಮತ್ತಷ್ಟು ವೇಗವಾಗಿ ರನ್ ಗಳಿಸಲು ಮುಂದಾದರು. ಆಸೀಸ್ ಬೌಲರ್‍ಗಳ ಬೆಂಡೆತ್ತಿದ ಈ ಜೋಡಿ ಕೂಡ ಉತ್ತಮವಾದ ಜೊತೆಯಾಟವಾಡಿತು. 2ನೇ ವಿಕೆಟ್‍ಗೆ ಈ ಜೋಡಿ 72 ರನ್ (46 ಎಸೆತ) ಒಟ್ಟುಗೂಡಿಸಿತು. ರಿಜ್ವಾನ್ 67 ರನ್ (52 ಎಸೆತ, 3 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು. ಫಖರ್ ಜಮಾನ್ ಇನ್ನಿಂಗ್ಸ್ ಅಂತ್ಯದವರೆಗೆ ಬ್ಯಾಟ್ ಬೀಸಿ ಅಜೇಯ 55 ರನ್ (32 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿದರು. ಅಂತಿಮವಾಗಿ 20 ಓವರ್‍ ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಪೇರಿಸಿತು. ಇದನ್ನೂ ಓದಿ: ಐಪಿಎಲ್‍ನ ನೂತನ ತಂಡ ಅಹಮದಾಬಾದ್‍ನ ಕೋಚ್ ಆಗಲಿದ್ದಾರೆ ರವಿಶಾಸ್ತ್ರಿ?

    ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತು ಮಿಂಚಿದರೆ, ಪ್ಯಾಟ್ ಕಮ್ಮಿನ್ಸ್ ಮತ್ತು ಆ್ಯಡಂ ಜಂಪಾ ತಲಾ 1 ವಿಕೆಟ್ ಪಡೆದರು.

  • ಸೆಮಿಯಲ್ಲಿ ಲವ್ಲೀನಾಗೆ ಸೋಲು – ಭಾರತಕ್ಕೆ ಕಂಚು

    ಸೆಮಿಯಲ್ಲಿ ಲವ್ಲೀನಾಗೆ ಸೋಲು – ಭಾರತಕ್ಕೆ ಕಂಚು

    ಟೋಕಿಯೋ: ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೆಮಿಯಲ್ಲಿ ಸೋತಿದ್ದು, ಕಂಚಿನ ಪದಕವನ್ನು ಗೆದ್ದಿದ್ದಾರೆ.

    69 ಕೆಜಿ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ ಮನೇಲಿ ವಿರುದ್ಧ ಲವ್ಲೀನಾ 0-5 ಅಂಕಗಳಿಂದ ಸೋತಿದ್ದಾರೆ. ಈ ಪಂದ್ಯ ಸೋತರೂ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲ ಸ್ಪರ್ಧಿಗಳಿಗೆ ಪದಕ ನೀಡುವ ಕಾರಣ ಲವ್ಲೀನಾ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

    ಮೀರಾಬಾಯಿ ಚಾನು ಮತ್ತು ಪಿ.ವಿ. ಸಿಂಧು ಈಗಾಗಲೇ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದಿದ್ದಾರೆ.

  • ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ – ರವೀಂದ್ರ ಜಡೇಜಾ

    ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ – ರವೀಂದ್ರ ಜಡೇಜಾ

    ಲಂಡನ್: ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲಿ ಸೋತ ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಸೆಮಿಫೈನಲ್‍ನಲ್ಲಿ ಭಾರತದ ಪರ ಉತ್ತಮ ಬ್ಯಾಟಿಂಗ್ ಮಾಡಿದ ಆಲ್‍ರೌಂಡರ್ ರವೀಂದ್ರ ಜಡೇಜಾ ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

    ಮಂಗಳವಾರ ಮಳೆ ಬಂದ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಬುಧವಾರ ನಡೆದ ಪಂದ್ಯದಲ್ಲಿ ಭಾರತ 18 ರನ್ ಅಂತರದಲ್ಲಿ ಸೋತು ವಿಶ್ವಕಪ್‍ನಿಂದ ಹೊರ ಬಿತ್ತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಈ ಪಂದ್ಯದ ಕುರಿತು ಟ್ವೀಟ್ ಮಾಡಿದ್ದು, ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ ಎಂದಿದ್ದಾರೆ.

    ಭಾವನತ್ಮಾಕವಾಗಿ ಟ್ವೀಟ್ ಮಾಡಿರುವ ಜಡೇಜಾ, “ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ. ಅದನ್ನು ನಾನು ಎಂದಿಗೂ ಬಿಡುವುದಿಲ್ಲ. ನನ್ನ ಪ್ರೀತಿಯ ಮೂಲವಾದ ನನ್ನ ಅಭಿಮಾನಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನನಗೆ ಸದಾ ಸ್ಫೂರ್ತಿದಾಯಕವಾಗಿರಿ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು. ಜಡೇಜಾ 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳಿಂದ ಅರ್ಧ ಶತಕ ಪೂರ್ಣಗೊಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ನಂ.8ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧ ಶತಕ ಬ್ಯಾಟ್ಸ್ ಮನ್ ಸಿಡಿಸಿದ ಸಾಧನೆ ಮಾಡಿದರು. 5 ವರ್ಷಗಳ ಬಳಿಕ ಜಡೇಜಾ ಗಳಿಸಿದ ಏಕದಿನ ಅರ್ಧ ಶತಕ ಇದಾಗಿತ್ತು.

    5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದಾಗ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿತ್ತು. 122 ಎಸೆತಗಳಲ್ಲಿ ಈ ಜೋಡಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್(72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು.

    ರವೀಂದ್ರ ಜಡೇಜಾ ಅವರ ಈ ಪ್ರದರ್ಶನಕ್ಕೆ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಿಟಲ್ ಮಾಸ್ಟರ್ ಸಚಿನ್ ಅವರು ಜಡೇಜಾ ಅವರ ವಿಶೇಷ ಆಟವನ್ನು ಶ್ಲಾಘಿಸಿದ್ದಾರೆ. ಈ ಉತ್ತಮ ಜೊತೆಯಾಟದ ಹಿಂದೆ ಧೋನಿ ಅವರ ಮಾರ್ಗದರ್ಶನವಿದೆ ಎಂದು ಹೇಳಿದ್ದಾರೆ.

  • ಕ್ರೀಡಾಂಗಣದ ಮೇಲೆ ವಿಮಾನ ಹಾರಾಟ ನಿಷೇಧ – ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ

    ಕ್ರೀಡಾಂಗಣದ ಮೇಲೆ ವಿಮಾನ ಹಾರಾಟ ನಿಷೇಧ – ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ

    ಲಂಡನ್: ವಿಶ್ವಕಪ್ ಸೆಮಿ ಫೈನಲ್ ಕದನ ನಡೆಯುತ್ತಿರುವ ಓಲ್ಡ್ ಟ್ರಾರ್ಫಡ್ ಕ್ರೀಡಾಂಗಣದ ಪ್ರದೇಶದಲ್ಲಿ ಬಿಗಿ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಪ್ರದೇಶದ ಮೇಲೆ ವಿಮಾನ ಹಾರಾಟ ನಿಷೇಧ ಮಾಡಲಾಗಿದೆ.

    ಶ್ರೀಲಂಕಾ ವಿರುದ್ಧ ಟೂರ್ನಿಯ ಲೀಗ್ ಹಂತದ ಪಂದ್ಯದ ವೇಳೆ ಭಾರತದ ವಿರೋಧಿ ಹೇಳಿಕೆ ಹೊಂದಿದ್ದ ವಿಮಾನ ಹಾರಾಟ ನಡೆಸಿತ್ತು. ಪರಿಣಾಮ ಆಟಗಾರರ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಬಿಸಿಸಿಐ ಕೂಡಲೇ ಐಸಿಸಿಗೆ ಖರವಾದ ಪತ್ರ ಬರೆದು ಕ್ರಮಕೈಗೊಳ್ಳಲು ಕೋರಿತ್ತು.

    ಬಿಸಿಸಿಐ ಪತ್ರಕ್ಕೆ ಕ್ರಮಕೈಗೊಂಡಿರುವ ವೇಲ್ಸ್ ಕ್ರಿಕೆಟ್ ಬೋಡ್ (ಇಸಿಬಿ) ಬಿಸಿಸಿಐಗೆ ಮಾಹಿತಿ ನೀಡಿದೆ. ಆಟಗಾರರ ಭದ್ರತೆ ಬಗ್ಗೆ ನಮಗೆ ಅರಿವಿದೆ. ಈಗಾಗಲೇ ಬಿಗಿ ಭದ್ರತೆ ವಹಿಸಲಾಗಿದೆ. ಕ್ರೀಡಾಂಗಣದ ಪ್ರದೇಶವನ್ನು ‘ನೋ ಫ್ಲೈಯಿಂಗ್ ಝೋನ್’ ಎಂದು ಘೋಷಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಯಾವುದೇ ಅಂತರಾಷ್ಟ್ರೀಯ ಪಂದ್ಯ ನಡೆಯುವ ಕ್ರೀಡಾಂಗಣದ ಮೇಲೆ ಯಾವುದೇ ಒಂದು ದೇಶದ ವಿರೋಧವಾಗಿ ಅಥವಾ ಜನಾಂಗದ ವಿರೋಧವಾಗಿ ಘೋಷಣೆ ಮಾಡುವುದು ನಿಯಮ ಬಾಹಿರವಾಗಿದೆ. ಐಸಿಸಿದಂತಹ ಟೂರ್ನಿಯಂತಹ ಪಂದ್ಯಗಳ ವೇಳೆಯೇ ಇಂತಹ ಘಟನೆ ನಡೆದಿರುವ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತ್ತು.

    ಚಹಲ್ ಇನ್: ಇತ್ತ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವೂ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಂದ್ಯಕ್ಕೆ ಮಳೆ ಅಡ್ಡ ಪಡಿಸುವ ಭೀತಿ ಇದ್ದು, ಇತ್ತಂಡಗಳು ಗೆಲುವಿವಾಗಿ ಹೋರಾಟ ನಡೆಸಿದೆ. ಇತ್ತ ಶ್ರೀಲಂಕಾ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಚಹಲ್ ತಂಡಕ್ಕೆ ಸೇರ್ಪಡೆಯಾಗಿದ್ದು, ಜಡೇಜಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿದಿದ್ದಾರೆ.

  • ರಣಜಿ ಸೆಮಿಫೈನಲ್‍ನಲ್ಲಿ ಕರ್ನಾಟಕಕ್ಕೆ ವೀರೋಚಿತ ಸೋಲು- ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿದರ್ಭ

    ರಣಜಿ ಸೆಮಿಫೈನಲ್‍ನಲ್ಲಿ ಕರ್ನಾಟಕಕ್ಕೆ ವೀರೋಚಿತ ಸೋಲು- ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿದರ್ಭ

    ಕೋಲ್ಕತ್ತಾ: ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಸೋಲರಿಯದ ಸರದಾರನಂತೆ ಮುನ್ನುಗ್ಗುತ್ತಿದ್ದ ಕರ್ನಾಟಕ, ಸೆಮಿ ಫೈನಲ್‍ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿ ಫೈನಲ್ ಫೈಟ್‍ನಿಂದ ಹೊರ ನಡೆದಿದೆ.

    ರೋಚಕ ಹೋರಾಟಕ್ಕೆ ಸಾಕ್ಷಿಯಾದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ತಂಡವನ್ನು ಮಣಿಸಿದ ವಿದರ್ಭ ತಂಡ ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಗೆಲುವಿಗಾಗಿ 198 ರನ್‍ಗಳ ಗುರಿ ಪಡೆದಿದ್ದ ಕರ್ನಾಟಕ ಅಂತಿಮ ದಿನದಾಟದಲ್ಲಿ 59.1 ಓವರ್‍ಗಳಲ್ಲಿ 192 ರನ್‍ಗಳಿಗೆ ಆಲೌಟ್ ಆಗುವ ಮೂಲಕ 5 ರನ್‍ಗಳ ಅಂತರದಲ್ಲಿ ಫೈನಲ್ ಆಸೆಯನ್ನು ಕೈ ಬಿಟ್ಟಿತು.

    ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಪಂದ್ಯ ಜಯಿಸಲು ಮೂರು ವಿಕೆಟ್‍ಗಳ ನೆರವಿನಿಂದ 87 ರನ್‍ಗಳಿಸುವ ಸವಾಲಿನ ಗುರಿ ಹೊಂದಿತ್ತು. 19 ರನ್‍ಗಳಿಸಿ ನಾಯಕ ವಿನಯ್ ಕುಮಾರ್ ಹಾಗೂ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಮುಂದುವರಿಸಿದ್ದರು. ಜವಾಬ್ದಾರಿಯುತ ಆಟವಾಡುತ್ತಿದ್ದ ವಿನಯ್ ಕುಮಾರ್ 36 ರನ್‍ಗಳಿಸಿದ್ದ ವೇಳೆ, ಗುರ್ಬಾನಿ ಬೌಲಿಂಗ್‍ನಲ್ಲಿ ಕೀಪರ್ ವಾಡ್ಕರ್‍ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಕರ್ನಾಟಕದ ಗೆಲುವಿಗೆ ಇನ್ನೂ 57 ರನ್‍ಗಳ ಅವಶ್ಯಕತೆ ಇತ್ತು.

    ಬಳಿಕ ಶ್ರೇಯಸ್ ಜೊತೆಗೂಡಿದ ಅಭಿಮನ್ಯು ಮಿಥುನ್ ಎಚ್ಚರಿಕೆಯ ಅಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. 8ನೇ ವಿಕೆಟ್‍ಗೆ 48 ರನ್‍ಗಳ ಅತ್ಯಮೂಲ್ಯ ಜೊತೆಯಾಟವಾಡಿದ ಈ ಜೋಡಿ ಕ್ರೀಸ್‍ನಲ್ಲಿರುವಷ್ಟು ಹೊತ್ತು ಕರ್ನಾಟಕದ ಫೈನಲ್ ಆಸೆ ಜೀವಂತವಾಗಿತ್ತು. ಆದರೆ ಪಟ್ಟು ಬಿಡದ ವಿದರ್ಭ ತಂಡ, ಕೊನೆಯ ಕ್ಷಣದಲ್ಲಿ ಬೌಲಿಂಗ್‍ನಲ್ಲಿ ಮತ್ತೆ ಮೋಡಿ ಮಾಡಿತು. 5 ಬೌಂಡರಿಗಳ ನೆರವಿನಿಂದ 33 ರನ್‍ಗಳಿಸಿ ಆಡುತ್ತಿದ್ದ ಅಭಿಮನ್ಯು ಮಿಥುನ್‍ರನ್ನು ತಮ್ಮ ಮೀಡಿಯಂ ವೇಗದ ಬಲೆಗೆ ಬೀಳಿಸಿದ ಗುರ್ಬಾನಿ ಪಂದ್ಯವನ್ನು ಮತ್ತಷ್ಟು ರೋಚಕ ಘಟ್ಟಕ್ಕೆ ಕೊಂಡೊಯ್ದರು. 9ನೆ ವಿಕೆಟ್ ಪತನವಾದ ವೇಳೆ ಕನಾಟಕದ ಗೆಲುವಿಗೆ 9ರನ್ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ವಿದರ್ಭ ಗೆಲುವಿಗೆ ಒಂದೇ ಒಂದು ವಿಕೆಟ್ ಬಾಕಿ ಇತ್ತು.

    ರೋಚಕ ಕೊನೆಯ ಓವರ್: ಕರ್ನಾಟಕ ಪರ ಕೊನೆಯ ಬ್ಯಾಟ್ಸ್ ಮನ್ ಆಗಿ ಕ್ರೀಸಿಗಿಳಿದ ಎಸ್. ಅರವಿಂದ್. ಅದರೆ ಅದೇ ವಿದರ್ಭ ಪಾಲಿಗೆ ಸ್ಟ್ರಾಂಗೆಸ್ಟ್ ಹೋಪ್ ಆಗಿತ್ತು. ಉಮೇಶ್ ಯಾದವ್ ಬೌಲಿಂಗ್‍ನ್ನು ಹಾಗೋ ಹೀಗೋ ಎದುರಿಸಿದ ಅರವಿಂದ್ ಕೊನೆಯ ಎಸೆತದಲ್ಲಿ ಒಂಟಿ ರನ್‍ಗಾಗಿ ಓಡಿದರು. ಹಿಂದೂ ಮುಂದು ನೋಡದೆ ಮತ್ತೊಂದು ಬದಿಯಲ್ಲಿದ್ದ ಸೆಟ್ ಬ್ಯಾಟ್ಸ್ ಮನ್ ಶ್ರೇಯಸ್ ಕೂಡ ಸಿಂಗಲ್‍ಗಾಗಿ ಓಡಿದರು. ಆದರೇ ಇದೇ ಕರ್ನಾಟಕದ ಪಾಲಿಗೆ ಮುಳುವಾಯಿತು. ಮುಂದಿನ ಓವರ್ ಎಸೆಯಲು ಬಂದ ಗುರ್ಬಾನಿ ಮೊದಲ ಎಸೆತದಲ್ಲೇ ಅರವಿಂದ್ ವಿಕೆಟ್ ಪಡೆದು ವಿದರ್ಭ ತಂಡವನ್ನು ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವಂತೆ ಮಾಡಿದರು.

    ಎರಡನೇ ಇನ್ನಿಂಗ್ಸ್ ನಲ್ಲಿ 198 ರನ್‍ಗಳ ಗೆಲುವಿನ ಗುರಿ ಪಡೆದಿದ್ದ ಕರ್ನಾಟಕಕ್ಕೆ ಮಾರಕವಾಗಿ ಎರಗಿದ್ದು, ವಿದರ್ಭ ಬೌಲರ್ ರಜನೀಶ್ ಗುರ್ಬಾನಿ. 23.1 ಓವರ್‍ಗಳ ಜೀವನ ಶ್ರೇಷ್ಟ ಬೌಲಿಂಗ್ ದಾಳಿಯಲ್ಲಿ 68 ರನ್ ನೀಡಿ 7 ವಿಕೆಟ್ ಪಡೆದು ವಿದರ್ಭ ಪಾಲಿಗೆ ಹೀರೋ ಆಗಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮತ್ತೊಂದೆಡೆ ರೋಚಕ ಹೋರಾಟ ನಡೆಸಿಯೂ ಕೇವಲ 5 ರನ್‍ಗಳಿಂದ ಪಂದ್ಯ ಸೋತ 8 ಬಾರಿಯ ಚಾಂಪಿಯನ್ ಕರ್ನಾಟಕ, 5 ವರ್ಷದಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಸಾಧನೆಯಿಂದ ಸ್ವಲ್ಪದರಲ್ಲಿಯೇ ವಂಚಿತವಾಯಿತು.

    ಮಹಾರಾಷ್ಟ್ರದ ಅಂಪೈರ್‍ ಗಳೇಕೆ?
    ಬಿಸಿಸಿಐ ನಿಯಮಗಳ ಪ್ರಕಾರ ದೇಶೀಯ ಕ್ರಿಕೆಟ್‍ನಲ್ಲಿ ಆಡುವ ಎರಡು ತಂಡಗಳ ಕ್ರಿಕೆಟ್ ಸಂಸ್ಥೆಗಳಿಗೆ ಸಂಬಂಧಪಟ್ಟ ಅಂಪೈರ್‍ಗಳು ಇರಬಾರದು ಎಂಬ ನಿಯಮವಿದೆ. ಆದರೆ ವಿದರ್ಭ ಮತ್ತು ಕರ್ನಾಟಕ ತಂಡಗಳ ರಣಜಿ ಸೆಮಿಫೈನಲ್‍ನ ಅಂಪೈರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪಶ್ಚಿಮ್ ಪಾಠಕ್ ಮತ್ತು ವಿನೀತ್ ಕುಲಕರ್ಣಿ ಇಬ್ಬರೂ ಮಹಾರಾಷ್ಟ್ರದವರು.

    ಇಬ್ಬರೂ ಅಂಪೈರ್ ಗಳು ವಿದರ್ಭ ಕ್ರಿಕೆಟ್ ಸಂಸ್ಥೆಗೆ ಸಂಬಂಧಪಟ್ಟಿಲ್ಲವಾದರು ಪಾಠಕ್ ಮುಂಬೈ ಹಾಗೂ ಕುಲಕರ್ಣಿ ಪುಣೆ ಮೂಲದವರು. ಇದರ ಪ್ರಕಾರ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದ ವಿದರ್ಭ ಕ್ರಿಕೆಟ್ ಸಂಸ್ಥೆಯ ಪಂದ್ಯದಲ್ಲಿ ಮಹಾರಾಷ್ಟ್ರದ ಅಂಪೈರ್‍ಗಳು ಕಾರ್ಯ ನಿರ್ವಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಈ ಹಿಂದೆ ನಾಗ್ಪುರದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ (ವಿದರ್ಭ) ಅಂಪೈರ್‍ಗಳಾದ ಅಭಿಜಿತ್ ದೇಶಮುಖ್ ಮತ್ತು ನಿತಿನ್ ಪಂಡಿತ್ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಕರ್ನಾಟಕ, ಮುಂಬೈ ತಂಡದ ವಿರುದ್ಧ ಇನ್ನಿಂಗ್ಸ್ ಮತ್ತು 20 ರನ್ ಗೆಲುವು ಪಡೆದಿತ್ತು.

    ವಿವಾದ ಎದ್ದಿದ್ದು ಯಾಕೆ?
    ವಿದರ್ಭ ತಂಡದ ಗುರಿ ಬೆನ್ನಟ್ಟಿದ ಕರ್ನಾಟಕದ ಪ್ರಮುಖ ಇಬ್ಬರು ಆಟಗಾರರು ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು ಕರ್ನಾಟಕಕ್ಕೆ ಮಾರಕವಾಯಿತು. ಬ್ಯಾಟಿಂಗ್ ಮುಂದುವರೆಸಿದ ಬಲಗೈ ಬ್ಯಾಟ್ಸ್ ಮನ್ ಸಮರ್ಥ್, ವಿದರ್ಭ ಬಲಗೈ ಮಧ್ಯಮ ವೇಗಿ ಸಿದ್ದೇಶ್ ನೇರಲ್ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸಿದ್ದರು. ಈ ವೇಳೆ ನೇರಲ್ ಎಸೆದ ಬಾಲ್ ಬ್ಯಾಟ್‍ನ ಒಳ ಅಂಚಿಗೆ ಬಡಿದು ಪ್ಯಾಡ್‍ಗೆ ತಗಿತ್ತು. ಕೂಡಲೇ ವಿದರ್ಭ ಆಟಗಾರರು ಅಂಪೈರ್ ಗೆ ಎಲ್ ಬಿಡಬ್ಲೂ ಗೆ ಮನವಿ ಸಲ್ಲಿಸಿದರು, ಕೂಡಲೇ ಆಟಗಾರರ ಮನವಿ ಸ್ವೀಕರಿಸಿದ ಅಂಪೈರ್ ಪಾಠಕ್ ಔಟ್ ಎಂದು ತೀರ್ಪು ನೀಡಿದರು.

    ಪಾಠಕ್ ಅವರ ಕಳಪೆ ಅಂಪೈರಿಂಗ್ ಸಿ.ಎಂ ಗೌತಮ್ ಅವರಿಗೂ ಮುಳುವಾಯಿತು. ಗೌತಮ್ ಬ್ಯಾಟಿಂಗ್ ವೇಳೆ ವಿದರ್ಭ ಬೌಲರ್ ರಜನೀಶ್ ಗುರ್ಬಾನಿ ಎಸೆದ ಬಾಲ್ ಗೌತಮ್ ಅವರ ಎಡಗಾಲಿನ ಪ್ಯಾಡ್ ಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತು. ಕ್ಷಣ ಮಾತ್ರದಲ್ಲಿ ಅಂಪೈರ್ ಗೌತಮ್ ರನ್ನು ಔಟ್ ಎಂದು ತೀರ್ಪು ನೀಡಿದ್ದರು. ಈಗ ಈ ವಿಚಾರವನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಬರೆದು ಬಿಸಿಸಿಐಯನ್ನು ಪ್ರಶ್ನಿಸುತ್ತಿದ್ದಾರೆ.

  • ಫ್ರೆಂಚ್ ಓಪನ್ ಸೂಪರ್ ಸಿರೀಸ್- ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

    ಫ್ರೆಂಚ್ ಓಪನ್ ಸೂಪರ್ ಸಿರೀಸ್- ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

    ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್ ಸಿರೀಸ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ತಮ್ಮ ಎದುರಾಳಿ ಚೀನಾದ ಚೆನ್ ಯುಫಿ ವಿರುದ್ಧ 21-14, 21-14 ಸೆಟ್‍ಗಳ ಅಂತರದಲ್ಲಿ ಗೆದ್ದ ಸಿಂಧು ಇದೇ ಮೊದಲ ಬಾರಿಗೆ ಈ ಟೂರ್ನಮೆಂಟ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.

    ಈ ಹಿಂದೆ ಡೆನ್ಮಾರ್ಕ್‍ನಲ್ಲಿ ನಡೆದ ಆರಂಭಿಕ ಸುತ್ತಿನಲ್ಲಿ ಯುಫಿ, ಸಿಂಧು ವಿರುದ್ಧ ಗೆದ್ದಿದ್ದರು. ಸಿಂಧು ಅವರು ಈ ಬಾರಿ ಚೆನ್ ಯುಫಿ ವಿರುದ್ಧ ಗೆಲ್ಲುವ ಮೂಲಕ ತಮ್ಮ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ.

    ಪುರುಷರ ಸಿಂಗಲ್ಸ್‍ನಲ್ಲಿ ಶ್ರೀನಾಥ್ ಪ್ರಣಯ್, ಜಿಯಾನ್ ಜಿನ್ ವಿರುದ್ಧ 21-16, 21-16 ಸೆಟ್‍ಗಳ ಅಂತರದಿಂದ ಜಯ ಸಾಧಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ ಡೆನ್ಮಾರ್ಕ್‍ನ ಹಾನ್ಸ್ ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ ನಡೆದ ಹಣಾಹಣಿಯಲ್ಲಿ ಪ್ರಣಯ್ 21-11, 21-12 ನೆರ ಸೆಟ್‍ಗಳ ಮೂಲಕ ಜಯಗಳಿಸಿದ್ದರು. ಕಳೆದ ಎರಡು ಪಂದ್ಯಗಳಲ್ಲಿಯೂ ಪ್ರಣಯ್ ವಿಶ್ವ ಅಗ್ರ ಮಾನ್ಯ ಶ್ರೇಯಾಂಕ ಹೊಂದಿರುವ ಆಟಗಾರರನ್ನು ಸೋಲಿಸುವ ಮೂಲಕ ಆಮೋಘ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಪ್ರಣಯ್ ವಿಶ್ವ  ರ‍್ಯಾಂಕಿಂಗ್‌ ಪಟ್ಟಿಯಲ್ಲಿ 12ನೇ ಸ್ಥಾನವನ್ನು ಪಡೆದಿದ್ದಾರೆ.

    ಇನ್ನುಳಿದಂತೆ ಭಾರತದ ಬಿ.ಸಾಯಿ ಪ್ರಣೀತ್ ಜಪಾನ್ ಕೆಂಟಾ ನಿಶಿಮೊಟೊ ವಿರುದ್ಧ 13-21, 17-21 ಸೆಟ್‍ಗಳ ಮೂಲಕ ಸೋತರು. ಸೈನಾ ನೆಹ್ವಾಲ್ ಈ ಸರಣಿಯಲ್ಲಿ ಎರಡನೇ ಸುತ್ತಿನಲ್ಲಿಯೇ ಜಪಾನ್‍ನ ಅಕಾನೆ ಯಮಗುಚಿ ವಿರುದ್ಧ 9-21, 21-22 ರ ಸೆಟ್‍ಗಳಲ್ಲಿ ಸೋಲುಂಡು ನಿರಾಸೆ ಮೂಡಿಸಿದರು.