ದುಬೈ: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ಸ್ಪಿನ್ನರ್ ಕುಲದೀಪ್ ಯಾದವ್‌ಗೆ (Kuldeep Yadav) ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಮೈದಾನದಲ್ಲೇ ಕ್ಲಾಸ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.
ಕುಲದೀಪ್ ಯಾದವ್ ಇನ್ನಿಂಗ್ಸ್ 32 ಓವರ್ ಎಸೆಯುತ್ತಿದ್ದರು. 5ನೇ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ಸ್ಮಿತ್ ಡೀಪ್ ಸ್ಕ್ಯಾರ್ ಲೆಗ್ ಕಡೆ ಹೊಡೆದು ಓಡಿದರು.
Rohit Sharma and Virat Kohli both got angry on Kuldeep Yadav for not stopping the ball🤯🫣 pic.twitter.com/ppUCuHcfG4
ಬಾಲ್ ಕೊಹ್ಲಿ ಕೈ ಸೇರಿತು. ಕೂಡಲೇ ಕೊಹ್ಲಿ ಬೌಲರ್ ಎಂಡ್‌ನಲ್ಲಿದ್ದ ಕುಲದೀಪ್ ಯಾದವ್‌ಗೆ ಚೆಂಡು ಎಸೆದರು. ಆದರೆ ಕುಲದೀಪ್ ಯಾದವ್ ಚೆಂಡು ಹಿಡಿಯಲು ಪ್ರಯತ್ನಿಸದೇ ಬಿಟ್ಟರು. ಕೂಡಲೇ ಮಿಡ್ ಆಫ್‌ನಲ್ಲಿದ್ದ ರೋಹಿತ್ ಶರ್ಮಾ ಚೆಂಡನ್ನು ಹಿಡಿದರು.
ಒಂದು ವೇಳೆ ರೋಹಿತ್ ಶರ್ಮಾ ಕವರ್ ಮಾಡದೇ ಇದ್ದರೆ ಸ್ಮಿತ್ ಇನ್ನೊಂದು ರನ್ ಓಡುವ ಸಾಧ್ಯತೆ ಇತ್ತು. ಸುಲಭವಾಗಿ ಹಿಡಿಯುವ ಚೆಂಡನ್ನು ಹಿಡಿಯದ್ದಕ್ಕೆ ವಿರಾಟ್ ಕೊಹ್ಲಿ ಗರಂ ಆದರು. ನಂತರ ರೋಹಿತ್ ಶರ್ಮಾ ಸಹ ಕ್ಲಾಸ್ ತೆಗೆದುಕೊಂಡರು.
ಇಂದಿನ ಪಂದ್ಯದಲ್ಲಿ 8 ಓವರ್ ಎಸೆದ ಕುಲದೀಪ್ ಯಾದವ್ 44 ರನ್ ನೀಡಿದರು. ಆದರೆ ವಿಕೆಟ್ ಪಡೆಯಲು ವಿಫಲರಾದರು.
ತುಮಕೂರು: ಬುಧವಾರ ಟೀಂ ಇಂಡಿಯಾ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ಸೆಮಿ ಫೈನಲ್ (Semi Final) ಕ್ರಿಕೆಟ್ ಪಂದ್ಯ ನಡೆದಿದ್ದು, 70 ರನ್‌ಗಳ ಅಂತರದಲ್ಲಿ ಭಾರತ ಭರ್ಜರಿ ಜಯ ಗಳಿಸಿ ವಿಶ್ವಕಪ್ (World Cup) ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ನಡುವೆ ತುಮಕೂರಿನಲ್ಲಿ (Tumakuru) ಕ್ರಿಕೆಟ್ ಪ್ರೇಮಿಗಳು ತಮ್ಮ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಇಂಡೋ-ಕಿವೀಸ್ ಸೆಮಿ ಫೈನಲ್ ಮ್ಯಾಚ್ ಹಾಕಿಸಿ ಸುದ್ದಿಯಾಗಿದ್ದಾರೆ.
ಪಾವಗಡದ (Pavagada) ಎಸ್‌ಎಸ್‌ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೆಟ್ ಪ್ರೇಮಿಗಳಾದ ಸೌಂದರ್ಯ ಹಾಗೂ ಕಾರ್ತಿಕ್ ಸೆಮಿ ಫೈನಲ್ ದಿನವೇ ತಮ್ಮ ಮದುವೆ ಮಾಡಿಕೊಂಡಿದ್ದು, ಮದುವೆ ಮಂಟಪದಲ್ಲೇ ಇಂಡಿಯಾ ಮತ್ತು ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ವಧು ಹಾಗೂ ವರ ಮದುವೆ ಮಂಟಪದಲ್ಲಿ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಿದ್ದು, ಆರತಕ್ಷತೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರಿಗಾಗಿ ಎಲ್‌ಇಡಿ (LED) ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: World Cup Semifinal: 7 ವಿಕೆಟ್ ಕಿತ್ತು ಗ್ಲೆನ್ ಮ್ಯಾಕ್‌ಗ್ರಾತ್ ದಾಖಲೆ ಸರಿಗಟ್ಟಿದ ಶಮಿ
ಮುಂಬೈ: ವಿಶ್ವಕಪ್ ಕ್ರಿಕೆಟ್ (World Cup Cricket) ಮೊದಲ ಸೆಮಿಫೈನಲ್ (Semi Final) ಇಂದು ನಡೆಯಲಿದ್ದು ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ವಿಶೇಷ ಸಾಧನೆ ಮಾಡಲಿದ್ದಾರೆ.
2019ರ ವಿಶ್ವಕಪ್ ವೇಳೆ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಸೆಮಿ ಫೈನಲ್ ಪಂದ್ಯದಲ್ಲಿ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ 67 ರನ್(95 ಎಸೆತ, 6 ಬೌಂಡರಿ) ಹೊಡೆದಿದ್ದರೆ ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟಾಗಿದ್ದರು.
ವಿರಾಟ್ ಕೊಹ್ಲಿ 594 ರನ್ ಹೊಡೆಯುವ ಮೂಲಕ 2023ರ ವಿಶ್ವಕ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಕೇನ್ ವಿಲಿಯಮ್ಸನ್ 187 ರನ್ ಹೊಡೆದಿದ್ದಾರೆ. 2011 ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಸೋತಿತ್ತು. 2015 ಮತ್ತು 2019ರ ಫೈನಲಿನಲ್ಲಿ ಕ್ರಮವಾಗಿ ಆಸ್ತ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸೋತಿತ್ತು.
2011ರ ವಿಶ್ವಕಪ್ ಫೈನಲಿನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಜಯಗಳಿಸಿತ್ತು. 2015 ಮತ್ತು 2019 ವಿಶ್ವಕಪ್ ಸೆಮಿಫೈನಲಿನಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು.
ಮುಂಬೈ: ಈ ಬಾರಿಯ ವಿಶ್ವಕಪ್‌ನ ಹಾಟ್ ಫೇವರೇಟ್ ಭಾರತ ತಂಡ (Team India) ಇಂದು ವಿಶ್ವಕಪ್‌ನ (World Cup) ಮೊದಲ ಸೆಮಿ ಫೈನಲ್‌ನಲ್ಲಿ (Semi Final) ನ್ಯೂಜಿಲೆಂಡ್ (New Zealand) ತಂಡವನ್ನು ಎದುರಿಸಲಿದೆ. ಕಳೆದ ಬಾರಿಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದ ಭಾರತ ತಂಡ, ಈ ಬಾರಿ ಅದೇ ತಂಡದ ವಿರುದ್ದ ಸೆಮಿಫೈನಲ್ ಆಡುತ್ತಿದ್ದು, ಈ ಬಾರಿ ಗೆಲುವಿನ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಏಕದಿನ ವಿಶ್ವಕಪ್ ಮಹಾ ಸಂಗ್ರಾಮ ಉಪಾಂತ್ಯಕ್ಕೆ ಬಂದಾಗಿದೆ. ಬಲಿಷ್ಠ ನಾಲ್ಕು ತಂಡಗಳ ಕಾದಾಟಕ್ಕೆ ರಣಾಂಗಣ ಕೂಡ ಸಜ್ಜಾಗಿದೆ. ಆದರೆ, ಈ ಬಾರಿಯ ಸೆಮಿಫೈನಲ್‌ನ ಮೊದಲ ಪಂದ್ಯ ಕೇವಲ ಪಂದ್ಯವಾಗಿ ಉಳಿದಿಲ್ಲ. ಬದಲಾಗಿ ಕಿವೀಸ್ ಪಡೆಯ ವಿರುದ್ಧ ಭಾರತ ತಂಡದ ಸೇಡಿನ ಸಮರವಾಗಿದೆ. ಐಸಿಸಿ (ICC) ಟೂರ್ನಿಯಲ್ಲಿ ಭಾರತ ತಂಡಕ್ಕೆ ಕಿವೀಸ್ ನೀಡಿದ ಆ ಎರಡು ಬ್ಯಾಕ್ ಟು ಬ್ಯಾಕ್ ಶಾಕ್ ಇನ್ನೂ ಕೂಡ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಾಗಿ ಉಳಿದಿದ್ದು, ಈ ಬಾರಿಯ ವಿಶ್ವಕಪ್ ಸೆಮಿಸ್‌ನಲ್ಲಿ ಮುಯ್ಯಿ ತೀರಿಸಿಕೊಳ್ಳುವ ಮೂಲಕ ಟೀಂ ಇಂಡಿಯಾ ಕೂಡ ಹಳೇ ನೋವು ಮರೆಸುವ ನಿಟ್ಟಿನಲ್ಲಿ ಸಜ್ಜಾಗಿದೆ. ಇದನ್ನೂ ಓದಿ: ಅಭಿಮಾನಿಯ ಹೃದಯ ಬಡಿತ ನಿಲ್ಲಿಸಿತ್ತು, ವಿಶ್ವಕಪ್ ಕನಸನ್ನೇ ಭಗ್ನಗೊಳಿಸಿತ್ತು ಆ ಒಂದು ರನೌಟ್..!
2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯ ಭಾರತೀಯರು ಇಂದಿಗೂ ಆ ಸೋಲಿನ ನೋವು ಮರೆತಿಲ್ಲ. 2019ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ್ದ ನ್ಯೂಜಿಲೆಂಡ್, ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರು ಮಾಡಿತ್ತು. ಇದಕ್ಕೆಲ್ಲಾ ಕಾರಣ ಧೋನಿಯ (MS Dhoni) ಆ ಒಂದೇ ಒಂದು ರನೌಟ್. ಆ ಪಂದ್ಯದಲ್ಲಿ ಕೊನೆಯ ಓವರ್‌ಗಳಲ್ಲಿ ಎಡವಿದ್ದ ಭಾರತ ತಂಡ ಸೆಮಿಸ್‌ನಲ್ಲಿ ಸೋಲುವ ಮೂಲಕ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕನಸಾಗೇ ಉಳಿದಿತ್ತು. ಕ್ರಿಕೆಟ್ ಪ್ರೇಮಿಗಳಿಗೆ ಈ ನೋವು ಮಾಸುವ ಮುನ್ನವೇ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲೂ ಕೂಡ ಭಾರತಕ್ಕೆ ನ್ಯೂಜಿಲೆಂಡ್ ಶಾಕ್ ನೀಡಿ ಚಾಂಪಿಯನ್ ಆಗಿ ಗೆದ್ದು ಬೀಗಿತ್ತು. ಆ ಎರಡು ಸೋಲುಗಳಿಗೆ ಇಂದು ಮುಯ್ಯಿ ತೀರಿಸಿಕೊಳ್ಳುವ ಸಮಯ ಬಂದಿದ್ದು, ಟೀ ಇಂಡಿಯಾ ಕೂಡ ಭರ್ಜರಿ ತಯಾರಿ ನಡೆಸಿದೆ. ಇದನ್ನೂ ಓದಿ: 1,20,000 ರೂ.ಗೆ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಟಿಕೆಟ್ ಮಾರಾಟ – ಓರ್ವ ಅರೆಸ್ಟ್
ಇನ್ನೂ ಐಸಿಸಿ ವಿಶ್ವಕಪ್ 2023ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಹೋಲಿಸಿದರೆ ಭಾರತ ಬಲಿಷ್ಠ ತಂಡವೇ ಆಗಿದೆ. ಆದರೆ ಉಭಯ ತಂಡಗಳ ವಿಶ್ವಕಪ್ ಮುಖಾಮುಖಿಯಲ್ಲಿ ಕಿವೀಸ್ ಬಲಿಷ್ಠವಾಗಿದೆ. 2003ರ ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಭಾರತ ಕೊನೆಯ ಬಾರಿಗೆ ಜಯ ಸಾಧಿಸಿತ್ತು. ಆ ಬಳಿಕ 2007, 2011 ಮತ್ತು 2015ರ ವಿಶ್ವಕಪ್ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಆಡಿರಲಿಲ್ಲ. ಒಟ್ಟು 10 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಐದು ಪಂದ್ಯಗಳನ್ನು ಗೆದ್ದರೆ ಭಾರತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಆದರೆ ಕ್ರಿಕೆಟ್ ಪಂಡಿತರ ಪ್ರಕಾರ ಈ ಅಂಕಿ ಅಂಶ ಈ ಬಾರಿ ದೊಡ್ಡ ಮಟ್ಟಿಗೆ ವರ್ಕೌಟ್ ಆಗಿಲ್ಲ ಅನ್ನೋದು ಅವರ ಲೆಕ್ಕಾಚಾರ. ಇದನ್ನೂ ಓದಿ: ನನ್ನ ಮಗನ ಹೆಸರಿಗೂ ದ್ರಾವಿಡ್-ಸಚಿನ್ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್ ತಂದೆ
ಇನ್ನೂ ಈಗಾಗಲೇ ಅಜೇಯವಾಗಿ ಉಪಾಂತ್ಯಕ್ಕೆ ತಲುಪಿರೋ ಟೀ ಇಂಡಿಯಾ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲೂ ಬಲಿಷ್ಠವಾಗಿಯೇ ಇದೆ. ಜೊತೆಗೆ ಈಗಾಗಲೇ ಕಳೆದ ಪಂದ್ಯಗಳಲ್ಲಿ ಆಡಿದ್ದ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಇವತ್ತಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಬಹುತೇಕ ಬದಲಾವಣೆ ಸಾಧ್ಯತೆ ಕಡಿಮೆ ಇದೆ. ಇತ್ತ ನ್ಯೂಜಿಲೆಂಡ್ ಕೂಡ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಕೊಂಚ ಎಡವಿತ್ತು. ಆದರೆ ಸೆಮಿಸ್‌ಗೆ ಬರುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಇಂದು ಮುಂಬೈನ (Mumbai) ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಎದುರಿಸಲು ಕಿವೀಸ್ ಕೂಡ ಉತ್ತಮ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಲಿದೆ. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್ ರೋಹಿತ್ ಶರ್ಮಾ
ಬೆಂಗಳೂರು: 2019ರ ಜುಲೈ 9 ರಂದು ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ವಿಶ್ವಕಪ್ (World Cup) ಸೆಮಿಫೈನಲ್ (Semi-Final) ಪಂದ್ಯದಲ್ಲಿ ಎಂ.ಎಸ್ ಧೋನಿ (MS Dhoni) ಕೊನೆಯ ಕ್ಷಣದಲ್ಲಿ ರನೌಟ್‌ಗೆ ತುತ್ತಾದರು. ಈ ರನೌಟ್ ಇಡೀ ವಿಶ್ವಕಪ್ ಗೆಲ್ಲುವ ಕನಸನ್ನೇ ನುಚ್ಚುನೂರು ಮಾಡಿತ್ತು. ಕೋಟ್ಯಂತರ ಅಭಿಮಾನಿಗಳಲ್ಲೂ ನೋವುಂಟುಮಾಡಿತ್ತು. ಮೊಬೈಲ್‌ನಲ್ಲಿ ಈ ದೃಶ್ಯ ನೋಡುತ್ತಿದ್ದಂತೆ ಕೋಲ್ಕತ್ತಾದಲ್ಲಿ (Kolkata) ಕ್ರಿಕೆಟ್ ಅಭಿಮಾನಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದರು.
ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ನೆರೆದಿದ್ದ ಅಭಿಮಾನಿಗಳು ಗೆಲುವು ಟೀಂ ಇಂಡಿಯಾದ್ದೇ (India) ಎಂದು ಬೀಗುತ್ತಿದ್ದರು. ಗೆಲ್ಲಲು 240 ರನ್ ಗಳ ಗುರಿಯನ್ನು ಪಡೆದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‌ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟಿದ್ದರು. ಇದನ್ನೂ ಓದಿ: ನನ್ನ ಮಗನ ಹೆಸರಿಗೂ ದ್ರಾವಿಡ್-ಸಚಿನ್ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್ ತಂದೆ
5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. 122 ಎಸೆತಗಳಲ್ಲಿ ಈ ಜೋಡಿ 116 ರನ್ ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿ ಟ್ರೆಂಟ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸರೆಯಾಗಿದ್ದ ಧೋನಿ 50 ರನ್ (72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು. ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್ – ಗುಡ್‌ಬೈ ಹೇಳಿದ ಬೌಲಿಂಗ್ ಕೋಚ್
ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ 10 ಎಸೆತಗಳಲ್ಲಿ 25 ರನ್ ಬೇಕಿದ್ದಾಗ 48ನೇ ಓವರ್‌ನ 3ನೇ ಎಸೆತದಲ್ಲಿ ಧೋನಿ 2 ರನ್ ಕದಿಯಲು ಪ್ರಯತ್ನಿಸಿದರು. ಆದ್ರೆ ಫೀಲ್ಡಿಂಗ್‌ನಲ್ಲಿದ್ದ ಮಾರ್ಟಿನ್ ಗಪ್ಟಿಲ್ ಎಸೆದ ಡೈರೆಕ್ಟ್ ವಿಕೆಟ್ ಥ್ರೋ ಗೆ ಧೋನಿ ರನೌಟ್ ಆಗಿದ್ದರು. ಈ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಅಲ್ಲದೇ ಅದು ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಟೂರ್ನಿಯೂ ಆಗಿತ್ತು. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್ ರೋಹಿತ್ ಶರ್ಮಾ
ಇದೇ ಆವೃತ್ತಿಯಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಿವೀಸ್ ನೀಡಿದ್ದ 274 ರನ್‌ಗಳ ಗುರಿ ಬೆನ್ನಟ್ಟಿ ಭಾರತ ಜಯ ಸಾಧಿಸಿತ್ತು. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮುಖವನ್ನೇ ನೋಡದ ಟೀಂ ಇಂಡಿಯಾ ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ವಿಶ್ವ ಏಕದಿನ ಕ್ರಿಕೆಟ್‌ಗೆ ಸಾಮ್ರಾಟನಾಗಲಿದೆ. ಕೋಟ್ಯಂತರ ಅಭಿಮಾನಿಗಳ ಆಶಯವೂ ಇದೇ ಆಗಿದೆ. ಇದನ್ನೂ ಓದಿ: World Cup 2023: ವಿಶ್ವದ ನಂ.1 T20 ಬ್ಯಾಟರ್‌ಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ
ಲಕ್ನೋ: ವಿಶ್ವಕಪ್ ಕ್ರಿಕೆಟ್‌ನಲ್ಲಿ (world Cup Cricket) ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ (Afghanistan) ಕ್ರಿಕೆಟ್ ಶಿಶು ನೆದರ್ಲ್ಯಾಂಡ್ಸ್ (Netherlands) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ 46.3 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಇನ್ನೂ 111 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 181 ರನ್ ಹೊಡೆಯುವ ಮೂಲಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಸೆಮಿಫೈನಲ್ (Semi Final) ಪ್ರವೇಶದ ಕನಸನ್ನು ಜೀವಂತವಾಗಿಟ್ಟುಕೊಂಡಿತು.
ಅಫ್ಘಾನ್ ಪರವಾಗಿ ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೇ 56 ರನ್ (64 ಎಸೆತ, 6 ಬೌಂಡರಿ), ರಹಮತ್ ಶಾ 52 ರನ್ (54 ಎಸೆತ, 8 ಬೌಂಡರಿ), ಅಜ್ಮತುಲ್ಲಾ ಔಟಾಗದೇ 31 ರನ್ (28 ಎಸೆತ, 3 ಬೌಂಡರಿ) ಹೊಡೆದರು.
ಸೆಮಿ ಆಸೆ ಜೀವಂತ
ಭರ್ಜರಿ ಗೆಲುವಿನೊಂದಿಗೆ ಅಫ್ಘಾನಿಸ್ತಾನದ ಸೆಮಿ ಪ್ರವೇಶಕ್ಕೆ ಎರಡು ಹಜ್ಜೆ ಮಾತ್ರ ಬಾಕಿಯಿದ್ದು, ಅಂಕಪಟ್ಟಿಯಲ್ಲಿ 4 ಜಯದೊಂದಿಗೆ 8 ಅಂಕ ಪಡೆಯುವ ಅಫ್ಘಾನಿಸ್ತಾನ 5ನೇ ಸ್ಥಾನಕ್ಕೆ ಜಿಗಿದಿದೆ.
ಆಸ್ಟ್ರೇಲಿಯಾಗೆ (Australia) ಇನ್ನೂ 3 ಪಂದ್ಯಗಳಿದ್ದರೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ಗೆ (New Zealand) 2 ಪಂದ್ಯಗಳಿವೆ. ನ.7 ರಂದು ಅಸ್ಟ್ರೇಲಿಯಾ, ನ.10 ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಅಫ್ಘಾನಿಸ್ತಾನ ಸೆಣೆಸಾಡಲಿದೆ. ಈ ಎರಡು ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ಸೆಮಿ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.
ಶನಿವಾರ ಬೆಂಗಳೂರಿನಲ್ಲಿ ಪಾಕಿಸ್ತಾನ (Pakistan) ಮತ್ತು ನ್ಯೂಜಿಲೆಂಡ್ ಮಧ್ಯೆ ಪಂದ್ಯ ಇದ್ದರೆ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯೆ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೋತರೆ ಅಫ್ಘಾನಿಸ್ತಾನಕ್ಕೆ ಲಾಭ. ಒಂದು ವೇಳೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಗೆದ್ದರೆ ಅಫ್ಘಾನಿಸ್ತಾನದ ಉತ್ತಮ ರನ್‌ರೇಟ್‌ನಿಂದ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ.
ಅಫ್ಘಾನಿಸ್ತಾನ ಸೆಮಿ ಭವಿಷ್ಯ ನ.7 ರಂದು ತೀರ್ಮಾನವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದರೆ ಸಮಸ್ಯೆ ಇಲ್ಲ. ಈ ಪಂದ್ಯವನ್ನು ಸೋತರೆ ಉತ್ತಮ ರನ್ ರೇಟ್ ಇದ್ದರೆ ಮಾತ್ರ ಸೆಮಿ ಪ್ರವೇಶಿಸಬಹುದು. ಇನ್ನೊಂದು ಕಡೆಯಲ್ಲಿ ಪಾಕಿಸ್ತಾನಕ್ಕೂ ಎರಡು ಪಂದ್ಯಗಳಿವೆ. ಈ ಕಾರಣಕ್ಕೆ ಸೆಮಿ ಪ್ರವೇಶಕ್ಕೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನದ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ.
ಹ್ಯಾಂಗ್‌ಝೋ: ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್ (Asian Games Cricket) ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ (Team India) ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 9.1 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿತು.
A stroke-filled half-century for Tilak Varma & a heart-warming celebration for his mom follows ♥️
ನೇಪಾಳ ವಿರುದ್ಧ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಈ ಬಾರಿ ಮೊದಲ ಓವರ್‌ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಮುರಿಯದ ಎರಡನೇ ವಿಕೆಟಿಗೆ ನಾಯಕ ಋತುರಾಜ್ ಗಾಯಕ್‌ವಾಡ್ (Ruturaj Gaikwad) ಮತ್ತು ತಿಲಕ್ ವರ್ಮಾ (Tilak Varma) 52 ಎಸೆತಗಳಲ್ಲಿ 97 ರನ್ ಜೊತೆಯಾಟವಾಡಿ ಜಯ ತಂದುಕೊಟ್ಟರು.
#TeamIndia's skipper wants this done in a jiffy – takes the attack to 🇧🇩 with 2️⃣0️⃣ runs off the 3rd over!
ಬಾಂಗ್ಲಾ ಪರ ಪರ್ವೇಜ್ ಹೊಸೈನ್ ಎಮಾನ್ 23 ರನ್, ಜೇಕರ್ ಅಲಿ ಔಟಾಗದೇ 24 ರನ್ ಹೊಡೆದರು. ಭಾರತದ ಪರ ಸಾಯಿ ಕಿಶೋರ್ 3 ವಿಕೆಟ್, ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರೆ, ಅರ್ಶ್‌ದೀಪ್ ಸಿಂಗ್ ತಿಲಕ್ ವರ್ಮಾ , ರವಿ ಬಿಶ್ಣೋಯಿ, ಶಹಬಾಜ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಧ್ಯೆ ಇಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಭಾನುವಾರ ಫೈನಲ್ ನಡೆಯಲಿದೆ.
ಆಡಿಲೇಡ್: ಟಿ20 ವಿಶ್ವಕಪ್‍ನ (T20 World Cup) ಎರಡನೇ ಸೆಮಿಫೈನಲ್ (Semi-Final) ಕಾದಾಟದಲ್ಲಿ ಇಂದು ಭಾರತ (India) ಹಾಗೂ ಇಂಗ್ಲೆಂಡ್ (Englan) ಕಾದಾಡುತ್ತಿದೆ. ವಿಶ್ವಕ್ರಿಕೆಟ್ ಪ್ರೇಮಿಗಳ ಚಿತ್ತ ಆಡಿಲೇಡ್‍ನತ್ತ (Adelaide) ನೆಟ್ಟಿದೆ.
ಇಂದು ಗೆದ್ದ ತಂಡ ಫೈನಲ್‍ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಹೊಂದಿದೆ. ಭಾರತಕ್ಕೆ ಬ್ಯಾಟಿಂಗ್ ಬಲವಾದರೆ, ಅತ್ತ ಇಂಗ್ಲೆಂಡ್‍ಗೆ ಆಲ್‍ರೌಂಡರ್‌ಗಳ ಬಲವಿದೆ. ಹಾಗಾಗಿ ಈ ಪಂದ್ಯ ಬಹಳ ರೋಚಕತೆಯನ್ನು ಮೂಡಿಸಿದೆ. ಇದನ್ನೂ ಓದಿ: ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – 3ನೇ ಬಾರಿ ಫೈನಲ್‍ಗೇರಿದ ಪಾಕ್
ಭಾರತಕ್ಕೆ ರೋಹಿತ್, ರಾಹುಲ್, ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶಕ್ತಿಯಾದರೆ, ಅತ್ತ ಅಲೆಕ್ಸ್ ಹೇಲ್ಸ್, ಬಟ್ಲರ್, ಅಲಿ, ಬೆನ್‍ಸ್ಟೋಕ್ಸ್ ಬ್ಯಾಟಿಂಗ್ ಬಿರುಗಾಳಿಗಳು ಹಾಗಾಗಿ ಆಡಿಲೇಡ್‍ನಲ್ಲಿ ರನ್ ಮಳೆ ಸುರಿಯುವ ಸಾಧ್ಯತೆ ಇದೆ. ಇಂದು ಗೆದ್ದ ತಂಡ ನ.13 ರಂದು ಈಗಾಗಲೇ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಸೋತ ತಂಡ ಮನೆ ದಾರಿ ಹಿಡಿಯಲಿದೆ. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೀಗ ಇಂಗ್ಲೆಂಡ್ ಮಣಿಸಿ, ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿ ಭಾರತವಿದ್ದರೆ, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಬೇಕಾದ ಸವಾಲು ಟೀಂ ಇಂಡಿಯಾ ಮುಂದಿದೆ. ಇತ್ತ ಅಭಿಮಾನಿಗಳೂ ಕೂಡ ಇದೆ ಆಸೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದು ಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸಿಡ್ನಿ: ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ (Mohammad Rizwan) ಮತ್ತು ಬಾಬರ್ ಅಜಮ್ (Babar Azam) ಅಬ್ಬರದಾಟದ ಮುಂದೆ ಕಿವೀಸ್ ಮಂಕಾಗಿದೆ. ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ಪಾಕಿಸ್ತಾನ (Pakistan) 7 ವಿಕೆಟ್‌ಗಳ ಅಂತರದ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸುತ್ತಿಗೇರಿದೆ.
ನ್ಯೂಜಿಲೆಂಡ್ ನೀಡಿದ 153 ರನ್‍ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಈ ಮೊತ್ತ ಸವಾಲಾಗಿ ಪರಿಣಮಿಸಲಿಲ್ಲ. ಆರಂಭಿಕ ಆಟಗಾರರಿಬ್ಬರೆ 105 ರನ್ ಜೊತೆಯಾಟವಾಡಿ ಪಾಕ್‍ಗೆ ಮೇಲುಗೈ ತಂದುಕೊಟ್ಟರು. ಆ ಬಳಿಕ ಅಂತಿಮವಾಗಿ ಪಾಕ್ 19.1 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿ ಜಯದ ನಗೆ ಬೀರಿತು. ಇತ್ತ ಈ ಜಯದೊಂದಿಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್‍ಗೆ ಲಗ್ಗೆ ಇಟ್ಟಿದೆ. 2007ರಲ್ಲಿ ಪಾಕಿಸ್ತಾನ ರನ್ನರ್ ಅಪ್ ಆಗಿತ್ತು. 2009ರಲ್ಲಿ ಚಾಂಪಿಯನ್ ಆಗಿತ್ತು. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?
ಪಾಕ್ ಪರ ಬ್ಯಾಟಿಂಗ್‍ನಲ್ಲಿ ಮಿಂಚಿದ ಬಾಬರ್ ಮತ್ತು ರಿಜ್ವಾನ್ ಭರ್ಜರಿ ಆರಂಭ ನೀಡಿದರು. 2022ರ ಟಿ20 ವಿಶ್ವಕಪ್‍ನಲ್ಲಿ ಮಂಕಾಗಿದ್ದ ಈ ಜೋಡಿ ಸೆಮಿಫೈನಲ್‍ನಲ್ಲಿ ಮೊದಲ ವಿಕೆಟ್‍ಗೆ 105 ರನ್ (76 ಎಸೆತ) ಸಿಡಿಸಿ ಮೈಚಳಿ ಬಿಟ್ಟು ಆಡಿತು. ಬಾಬರ್ ಅಜಮ್ 53 ರನ್ (42 ಎಸೆತ, 7 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ರಿಜ್ವಾನ್ ಜೊತೆ ಸೇರಿಕೊಂಡ ಮೊಹಮ್ಮದ್ ಹ್ಯಾರಿಸ್ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು ಎನ್ನುವಷ್ಟರಲ್ಲಿ ರಿಜ್ವಾನ್ 57 ರನ್ (43 ಎಸೆತ, 5 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಹ್ಯಾರಿಸ್ 30 ರನ್ (26 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಗೆಲುವಿಗೆ 2 ರನ್ ಬೇಕಾಗಿದ್ದಾಗ ಔಟ್ ಆದರು. ಬಳಿಕ ಮಸೂದ್ 3 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಲೀಗ್ ಹಂತದಲ್ಲೇ ಹೊರಬೀಳುವ ಸ್ಥಿತಿಯಲ್ಲಿದ್ದ ಪಾಕ್ ಅದೃಷ್ಟದಿಂದ ಸೆಮಿಫೈನಲ್ ಪ್ರವೇಶಿಸಿ ಇದೀಗ ಫೈನಲ್ ಹಂತಕ್ಕೆ ತೇರ್ಗಡೆಗೊಂಡಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ
ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಈ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ಆರಂಭಿಕ ಅಟಗಾರ ಫಿನ್ ಅಲೆನ್ ಕೇವಲ 4 ರನ್ (3 ಎಸೆತ, 1 ಬೌಂಡರಿ) ಸಿಡಿಸುವಷ್ಟರಲ್ಲಿ ಸುಸ್ತಾದರು. ಇನ್ನೊಂದೆಡೆ ಡೆವೂನ್ ಕಾನ್ವೇ ನಿಧಾನವಾಗಿ ಅಬ್ಬರಿಸುವ ಸೂಚನೆ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಚೇತರಿಕೆ ನೀಡಲು ಮುಂದಾದರು. ಆದರೆ ಕಾನ್ವೇ ಆಟ 21 ರನ್ (20 ಎಸೆತ, 3 ಬೌಂಡರಿ) ಸಿಡಿಸಿ ರನೌಟ್ ಆಗುವುದರೊಂದಿಗೆ ಅಂತ್ಯಕಂಡಿತು.
ಬಳಿಕ ಬಂದ ಗ್ಲೆನ್ ಫಿಲಿಪ್ಸ್ ಆಟ 6 ರನ್‍ಗಳಿಗೆ (8 ಎಸೆತ, 1 ಬೌಂಡರಿ) ಸೀಮಿತವಾಯಿತು. ಆ ಬಳಿಕ ಒಂದಾದ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅಬ್ಬರಿಸಲು ಆರಂಭಿಸಿದರು. ಇಬ್ಬರೂ ಕೂಡ ಜವಾಬ್ದಾರಿಯುತ ಬ್ಯಾಟ್ ಬೀಸಿದ ಪರಿಣಾಮ 4ನೇ ವಿಕೆಟ್‍ಗೆ 68 ರನ್ (50 ಎಸೆತ) ಜೊತೆಯಾಟ ಇವರಿಂದ ಬಂತು. ಕೇನ್ ವಿಲಿಯಮ್ಸನ್ 46 ರನ್ (42 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು.
ಅಂತಿಮವಾಗಿ ಡೇರಿಲ್ ಮಿಚೆಲ್ ಅಜೇಯ 53 ರನ್ (35 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಜೇಮ್ಸ್ ನಿಶಾಮ್ 16 ರನ್ (12 ಎಸೆತ, 1 ಬೌಂಡರಿ) ಬಾರಿಸಿದ ಪರಿಣಾಮ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್‍ಗಳ ಸಾಧಾರಣ ಮೊತ್ತ ಪೇರಿಸಿತು. ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಇನ್ನೊಂದು ವಿಕೆಟ್ ನವಾಝ್ ಪಾಲಾಯಿತು.
Live Tv
[brid partner=56869869 player=32851 video=960834 autoplay=true]
ಸಿಡ್ನಿ: ಟಿ20 ವಿಶ್ವಕಪ್ (T20 World Cup) ಪಂದ್ಯದ ಕೊನೆಯ 3 ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ 4 ತಂಡಗಳು ಸೆಮಿಫೈನಲ್‍ಗೆ (Semi Final) ಲಗ್ಗೆ ಇಟ್ಟಿವೆ.
ಗ್ರೂಪ್ 1ರಲ್ಲಿ ನ್ಯೂಜಿಲೆಂಡ್ (New Zealand) ಮತ್ತು ಇಂಗ್ಲೆಂಡ್ (England) ಪ್ರವೇಶ ಪಡೆದರೆ, ಗ್ರೂಪ್ 2ರಲ್ಲಿ ಭಾರತ (India) ಹಾಗೂ ಪಾಕಿಸ್ತಾನ (Pakistan) ತಂಡಗಳು ಪ್ರವೇಶ ಪಡೆದಿದೆ. ಸಿಡ್ನಿ, ಆಡಿಲೇಡ್ ಮತ್ತು ಮೆಲ್ಬರ್ನ್‍ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ
ಮೊದಲ ಸೆಮಿಫೈನಲ್‍ನಲ್ಲಿ ಗ್ರೂಪ್ 1ರ ಮೊದಲ ಸ್ಥಾನ ಪಡೆದ ನ್ಯೂಜಿಲೆಂಡ್, ಗ್ರೂಪ್ 2ರ ಎರಡನೇ ಸ್ಥಾನ ಪಡೆದ ಪಾಕಿಸ್ತಾನವನ್ನು ಸಿಡ್ನಿಯಲ್ಲಿ ನ.9 ರಂದು ಎದುರಿಸಲಿದೆ. ಎರಡನೇ ಸೆಮಿಫೈನಲ್‍ನಲ್ಲಿ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವನ್ನು ಆಡಿಲೇಡ್‍ನಲ್ಲಿ ನ.10 ರಂದು ಎದುರಿಸಲಿದೆ. ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್ ಪಂದ್ಯವಾಡಲಿದೆ. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ