Tag: selling

  • 3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್

    3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್

    ಚೆನ್ನೈ: 10 ತಿಂಗಳ ಮಗುವನ್ನು ಆಂಧ್ರಪ್ರದೇಶದ ದಂಪತಿಗೆ 3 ಲಕ್ಷ ರೂ. ಗೆ ಮಾರಾಟ ಮಾಡಿರುವ ಪ್ರಕರಣ ಸಂಬಂಧ ತಾಯಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

    ಕನ್ನಗಿ ನಗರದ ವಿಜಯಲಕ್ಷ್ಮಿ (30) ಮತ್ತು ಆಕೆಯ ಪತಿ ಚಿಂದೂರೈ (35) ಬಡತನದ ಕಾರಣದಿಂದ ತಮ್ಮ ಹತ್ತು ತಿಂಗಳ ಹಸುಳೆ ಮುತ್ತುರಾಜ್ ನನ್ನು ಮಾರಾಟ ಮಾಡಿದ್ದಾರೆ. ದಂಪತಿ ತಮ್ಮ ಮಗುವನ್ನು ಮಹಿಳಾ ಬ್ರೋಕರ್ ಒಬ್ಬರ ಮೂಲಕ ಆಂಧ್ರ ಪ್ರದೇಶದ ದಂಪತಿಗೆ 85,000 ರೂ. ಗೆ ನೀಡಲು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ

    ನಂತರ ದಂಪತಿ ಬ್ರೋಕರ್‌ಗೆ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ ಮೊದಲಿಗೆ ಬ್ರೋಕರ್, ದಂಪತಿಯ ಬೇಡಿಕೆಗೆ ಒಪ್ಪಿರಲಿಲ್ಲ. ನಂತರ ಅವಳು ಅವರ ಬೇಡಿಕೆಗೆ ಒಪ್ಪಿಕೊಂಡಿದ್ದು, ರೆಡ್ ಹಿಲ್ಸ್‌ನ ನವನೀತಮ್ ಮತ್ತು ಪಾಂಡುರಂಗನ್ ಎಂಬ ದಂಪತಿಗೆ 3 ಲಕ್ಷ ರೂ. ಗೆ ಮಗುವನ್ನು ಮಾರಾಟ ಮಾಡಿದ್ದಾಳೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ

    ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಲಲಿತಾ ಅವರಿಗೆ ಶಿಶು ಮಾರಾಟದ ಬಗ್ಗೆ ತಿಳಿದಿದ್ದು, ಲಲಿತಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    ಮುಂಬೈ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಕೇವಲ 14 ರೂಪಾಯಿ ಉಳಿದಿದ್ದು, ರೈತ ಕಣ್ಣೀರು ಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

    ಕಳೆದೊಂದು 4ರಿಂದ 5 ತಿಂಗಳಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಇದೀಗ ಬೆಳೆ ಬೆಳೆದ ರೈತನಿಗೆ ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚವನ್ನು ಕಳೆದು ಕೇವಲ 14 ರೂಪಾಯಿ ಉಳಿದಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಈ ಕುರಿತು ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ರೈತನಿಗೆ ಆಗುವ ಅನ್ಯಾಯದ ಕುರಿತಾಗಿ ಬೆಳಕು ಚೆಲ್ಲಿದ್ದಾರೆ. ಸೊಲ್ಲಾಪುರದ ಬಾಪು ಕವಾಡೆ 1665 ಕೆಜಿ ಈರುಳ್ಳಿ ಬೆಳೆದು ಮಾರಾಟಕ್ಕೆ ಕಳುಹಿಸಿದ್ದರು. ಆಗ 1 ರೂಪಾಯಿನಂತೆ ಈರುಳ್ಳಿ ಮಾರಾಟ ಮಾಡಿದ್ದಾರೆ. ದಲ್ಲಾಳಿ ಇವರಿಗೆ 1665 ರೂಪಾಯಿ ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಸಾಗಣೆ ವೆಚ್ಚ, ಕಮಿಷನ್ ಎಲ್ಲಾ ಸೇರಿ ಕವಾಡೆಗೆ 1651 ರೂ ವೆಚ್ಚವಾಗಿತ್ತು. ಅಂದರೆ ಉಳಿದಿದ್ದು ಕೇವಲ 14 ರೂಪಾಯಿ ಮಾತ್ರ. ದಲ್ಲಾಳಿ ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ತರಕಾರಿಗಳ ಬೆಲೆ ಮಾತ್ರ ಗಗನಕ್ಕೆ ಏರಿದೆ. ಟೊಮೆಟೋ ಬೆಲೆ 150 ರೂಪಾಯಿಗೂ ಹೆಚ್ಚಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆದರೆ ಇರುಳ್ಳಿ ಬೆಲೆ ಮಾತ್ರ ಭಾರೀ ಕುಸಿತ ಕಂಡಿರುವುದು ರೈತರಿಗೆ ಕಣ್ಣೀರು ತರಿಸಿದೆ.