Tag: sellers

  • ಮದ್ಯವ್ಯಸನಿಗಳಿಗೆ ಬ್ಯಾಡ್ ನ್ಯೂಸ್.!

    ಮದ್ಯವ್ಯಸನಿಗಳಿಗೆ ಬ್ಯಾಡ್ ನ್ಯೂಸ್.!

    ಬೆಂಗಳೂರು: ಲಾಕ್‍ಡೌನ್ ಮಧ್ಯೆ ಎಣ್ಣೆ ಬೇಕು ಎಣ್ಣೆ ಅಂತ ಗಲ್ಲಿಗಲ್ಲಿಯ ಸಂದಿ ಮೂಲೆಯಲ್ಲಿ ಸುತ್ತಾಡುತ್ತಿದ್ದ ಕುಡುಕರಿಗೆ ಅಬಕಾರಿ ಇಲಾಖೆ ಬಿಗ್‍ಶಾಕ್ ನೀಡಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇತ್ತೀಚೆಗೆ ಮಾತನಾಡಿ, ಏಪ್ರಿಲ್ 14ರವರಗೆ ಮದ್ಯದದಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ. ಏ.14ರ ಬಳಿಕ ಪರಿಸ್ಥಿತಿ ನೋಡಿಕೊಂಡು ಮದ್ಯದಂಗಡಿ ತೆರೆಯಬೇಕೋ ಬೇಡ್ವೋ ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದರು. ಆದರೆ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ನಡೆಸಿದ್ದರು. ಇದಕ್ಕೆ ಬ್ರೇಕ್ ಹಾಕಲು ಅಬಕಾರಿ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಏನೇ ಒತ್ತಡ ಬಂದ್ರೂ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ: ಬೊಮ್ಮಾಯಿ

    ಬೆಂಗಳೂರಿನಲ್ಲಿ ಈಗಾಗಲೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 3,800 ಬಾರ್‍ಗಳಿಗೂ ಸೀಲ್ ಹಾಕಲಾಗಿದೆ. ಅಷ್ಟೇ ಅಲ್ಲದೆ ನಗರದಲ್ಲಿ 54 ಅಬಕಾರಿ ಇಲಾಖೆ ವೆಹಿಕಲ್ಸ್ ರೌಂಡ್ಸ್ ಹಾಕುತ್ತಿವೆ. ಅಕ್ರಮ ಮದ್ಯ ಮಾರಾಟ ಮಾಡಿದ್ದು, ಎಣ್ಣೆ ತಗೆದುಕೊಳ್ಳುವುದು ಕಂಡು ಬಂದರೆ ಅಂತವರನ್ನ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಾರೆ. ಜೊತೆಗೆ ದಂಡವನ್ನು ಹಾಕುತ್ತಾರೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ. ಇದನ್ನೂ ಓದಿ: ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ದಂಡ

    ಅಬಕಾರಿ ಇಲಾಖೆಯು ಬೆಂಗಳೂರಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಇಲಾಖೆಯ ಜಂಟಿ ಆಯುಕ್ತ ನಾಗೇಶ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಪಥಸಂಚಲನೆ ನಡೆಯಲಿದೆ. ಈ ಮೂಲಕ ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗುತ್ತದೆ. ಒಂದು ವೇಳೆ ಲಾಕ್‍ಡೌನ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಅಬಕಾರಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಇದನ್ನೂ ಓದಿ:  ಕೊರೊನಾ ಎಫೆಕ್ಟ್- ಮದ್ಯ ಸಿಗದಿದ್ದಕ್ಕೆ ಊಟ ಬಿಟ್ಟು ವ್ಯಕ್ತಿ ಸಾವು

    ಅಕ್ರಮವಾಗಿ ಮದ್ಯ ಮಾರಾಟ, ಸಾಗಾಣಿಕೆ ಮಾಡುತ್ತಿದ್ದ ಸಂಬಂಧ ಇದುವರೆಗೆ 22 ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 14 ಜನ ಆರೋಪಿಗಳನ್ನು ಬಂಧಸಿದ್ದು, 2 ವಾಹನ 2,085 ಲೀ ಮದ್ಯ, 1653 ಲೀ ಬಿಯರ್, 40 ಲೀ. ಸೇಂದಿ ಜಪ್ತಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಹಿನ್ನೆಲೆ 6 ಅಬಕಾರಿ ಸನ್ನದುಗಳು ರದ್ದುಗೊಳಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಜಂಟಿ ಆಯುಕ್ತ ನಾಗೇಶ್ ತಿಳಿಸಿದ್ದಾರೆ.

  • ಚಿಕನ್, ಮಟನ್ ಆಯ್ತು ಈಗ ತರಕಾರಿಗೂ ಕೊರೊನಾ ಭೀತಿ

    ಚಿಕನ್, ಮಟನ್ ಆಯ್ತು ಈಗ ತರಕಾರಿಗೂ ಕೊರೊನಾ ಭೀತಿ

    ಬೆಂಗಳೂರು: ಸತತ ಒಂದು ವಾರದಿಂದ ತರಕಾರಿ ಬೆಲೆ ಪಾತಾಳಕ್ಕೆ ಇಳಿಯುತ್ತಿದೆ. ತರಕಾರಿ ಕಡಿಮೆ ಆದರೆ ಜನ ಖರೀದಿ ಮಾಡುವುದು ಹೆಚ್ಚಾಗುತ್ತೆ. ಆದರೆ ಕೊರೊನಾ ವೈರಸ್ ಭೀತಿ ಗ್ರಾಹಕರನ್ನು ಆವರಿಸಿದೆ. ಚಿಕನ್ ಅಂದರೆ ದೂರ ಹೋಗುತ್ತಿದ್ದ ಜನ ಈಗ ತರಕಾರಿ ಅಂದರೆ ಭಯಪಡುತ್ತಿದ್ದಾರೆ.

    ಈ ಹಿಂದೆ ಟೊಮ್ಯಾಟೋ ದರ 22 ರೂ. ಇತ್ತು. ಆದರೆ ಈಗ 15 ರೂ. ಆಗಿದೆ. ಬೀಟ್‍ರೂಟ್ ಹಿಂದಿನ ದರ 20 ರೂ. ಆಗಿತ್ತು. ಆದರೆ ಈಗ 18 ರೂ. ಆಗಿದೆ. 30 ರೂ. ಇದ್ದ ಮೂಲಂಗಿ ಇದೀಗ 22 ರೂ. ಆಗಿದೆ. ಸೀಮೆ ಬದನೆಕಾಯಿ ದರ 30 ರೂ. ಇತ್ತು. ಆದರೆ ಈಗ 21 ರೂ. ಆಗಿದೆ. ಹಾಗೆಯೇ ಕ್ಯಾಪ್ಸಿಕಂ 30 ರೂ. ಇತ್ತು. ಆದರೆ ಈಗ 22 ರೂ. ಆಗಿದೆ. 30 ರೂ. ಇದ್ದ ಗೆಡ್ಡೆಕೋಸು ಈಗ 21 ರೂ. ಆಗಿದೆ. ಈರುಳ್ಳಿ 40 ರೂ. ಇತ್ತು. ಆದರೆ ಈಗ 21 ರೂ. ಆಗಿದೆ. ಕ್ಯಾರೇಟ್ ದರ 55 ರೂ. ಆಗಿತ್ತು. ಇದೀಗ 44 ರೂ. ಆಗಿದೆ. 40 ರೂ. ಇದ್ದ ಬೀನ್ಸ್ ಇದೀಗ 30 ರೂ. ಆಗಿದೆ. ಹಾಗೆಯೇ ಮೆಣಸಿನಕಾಯಿ 50 ರೂ. ಇತ್ತು. ಆದರೆ ಈಗ 44 ರೂ. ಆಗಿದೆ.

    ಎಲ್ಲಾ ಮಾರ್ಕೆಟ್‍ಗಳು ಹಾಗೂ ಹಾಪ್‍ಕಾಮ್ಸ್ ಗಳಲ್ಲೂ ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿತ್ತು. ಬೆಲೆ ಕಡಿಮೆಯಾಗಿದ್ರೂ ಜನ ಖರೀದಿ ಮಾಡುತ್ತಿಲ್ಲ. ಎಲ್ಲಿ ತರಕಾರಿಯಿಂದ ಕೊರೊನಾ ಬಂದುಬಿಡುತ್ತೋ ಎಂದು ಅಂಗಡಿ ಬಳಿ ಬರುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಎಲ್ಲಾ ಕೊರೊನಾ ಎಫೆಕ್ಟ್ ಅನ್ನಿಸುತ್ತೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕೆಜಿಗೆ ನೂರು ರೂ. ಬೆಲೆಯಲ್ಲಿದ್ದ ತರಕಾರಿಗಳು ಈಗ 100 ರೂ.ಗೆ 6 ಕೆಜಿಯಷ್ಟು ಸಿಕ್ರು ಜನ ಖರೀದಿ ಮಾಡುತ್ತಿಲ್ಲ.

  • ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯದು ಯಾವಾಗಲೂ ಬ್ಯುಸಿ ಶೆಡ್ಯೂಲ್. ಹೀಗಾಗಿ ಸ್ಟ್ರೀಟ್ ಫುಡ್‍ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರ ಹಾರ್ಟ್ ಫೇವರೆಟ್ ಈ ಸ್ಟ್ರೀಟ್ ಫುಡ್‍ಗಳ ಆರ್ಭಟ ನಗರದ ಗಲ್ಲಿಗಲ್ಲಿಯಲ್ಲೂ ಜೋರಾಗಿದೆ. ಅಗ್ಗದ ದರ, ಟೇಸ್ಟಿ ಸ್ಟ್ರೀಟ್ ಫುಡ್‍ಗಳು ಇದೀಗ ಕಿಲ್ಲರ್ ಫುಡ್ ಆಗಿ ಕೆಲವೆಡೆ ಬದಲಾಗುತ್ತಿದೆ. ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಈ ಡರ್ಟಿ ಸ್ಟ್ರೀಟ್ ಫುಡ್ ಸೀಕ್ರೆಟ್ ಬಟಾಬಯಲು ಮಾಡಿದೆ.

    ಸಂಜೆ ಹೊತ್ತಲ್ಲಿ ಸ್ಟ್ರೀಟ್‍ನಲ್ಲಿ ನಿಂತ್ಕೊಂಡು ಗೋಬಿ ಮಂಚೂರಿನೋ, ಸ್ಪೈಸಿ ತಿಂಡಿ ಮೆಲ್ಲೋಣ ಎಂದು ಹೋಗುವವರು ಹೆಚ್ಚು. ಇತ್ತ ಗರಿ ಗರಿ ದೋಸೆ, ಇಡ್ಲಿ, ಬೊಂಡಾ ಇದಕ್ಕೆಲ್ಲಾ ಕಾಂಬಿನೇಷನ್ ಆಗಿ ಚಿಕನ್, ಮಟನ್ ಇದ್ದರೆ ಸಂಜೆ ಹೋದವರು ಅದನ್ನೆಲ್ಲಾ ತಿಂದು ಬರುವಷ್ಟರಲ್ಲಿ ಕತ್ತಲಾಗಿರುತ್ತೆ. ಆ ರೇಂಜ್‍ಗೆ ಸ್ಟ್ರೀಟ್ ಫುಡ್ ನಮ್ಮನ್ನು ಆಕರ್ಷಿಸುತ್ತೆ. ಈ ತಿಂಡಿಗಳು ಅಗ್ಗದ ದರದಲ್ಲೂ ಸಿಗುತ್ತೆ. ಜೊತೆಗೆ ಟೇಸ್ಟ್ ಕೂಡ ಸಖತ್ ಆಗಿರುತ್ತೆ ಎಂದು ಜನ ಸ್ಟ್ರೀಟ್ ಫುಡ್‍ಗಳ ಸೆಂಟರ್ ಮುಂದೆ ಕ್ಯೂ ನಿಲ್ತಾರೆ. ಆದರೆ ಈ ಸ್ಟ್ರೀಟ್‍ಫುಡ್ ಜನರ ಪಾಲಿಗೆ ಕಿಲ್ಲರ್ ಫುಡ್ ಆಗಿದೆ. ಇದೆಲ್ಲಾ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಗರದ ಜೆಸಿ ರಸ್ತೆ, ಲಾಲ್‍ಬಾಗ್- ನ್ಯಾಷನಲ್ ಕಾಲೇಜು ಸಮೀಪದ ವಿವಿ ಪುರಂ ಫುಡ್ ಸ್ಟ್ರೀಟ್ ಇಡೀ ಬೆಂಗಳೂರಲ್ಲಿ ತುಂಬಾನೇ ಫೇಮಸ್. ಬೆಳಗ್ಗೆ, ಮಧ್ಯಾಹ್ನ ತಡರಾತ್ರಿಯಾದರೂ ಇಲ್ಲಿ ಫುಡ್ ಸಿಗುತ್ತೆ. ಸಂಜೆಯಂತೂ ಇಲ್ಲಿ ಕಾಲಿಡೋಕು ಜಾಗ ಇರಲ್ಲ. ಆದರೆ ಈ ಏರಿಯಾದಲ್ಲಿ ಸಿಗುವ ಕೆಲ ಹೋಟೆಲ್‍ನ ಡರ್ಟಿ ಸೀನ್ ನೋಡಿದರೆ ವಾಕರಿಕೆ ಬರತ್ತೆ.

    ದೋಸೆ ಹೊಯ್ಯುವ ಹೆಂಚು ತೊಳೆದು ಎಷ್ಟು ಕಾಲವಾಗಿದ್ಯೋ ಏನೋ? ಇಡ್ಲಿ ಬೇಯಿಸುವ ಪಾತ್ರೆ ನೋಡಿದರೆ ಜನ್ಮದಲ್ಲಿ ಇಡ್ಲಿ ತಿನ್ನೋದೆ ಬೇಡ ಅನಿಸಿಬಿಡುತ್ತೆ. ಇಡ್ಲಿಗೆ ನೊಣ ಫ್ರೀ ಎನ್ನುವಂತೆ ಬೇಯಿಸಿಟ್ಟ ಇಡ್ಲಿ ಪಕ್ಕ ಕಸದ ಬುಟ್ಟಿಯ ಮುಂದೆ ನೊಣಗಳು ಹಾರಾಡುತ್ತಿರುತ್ತೆ. ಇಲ್ಲಿ ಸ್ವಚ್ಛತೆಗೆ ಮೂರುಕಾಸಿನ ಬೆಲೆ ಇಲ್ಲ. ಅಲ್ಲದೆ ನೀವು ತಿಂದ ಪಾತ್ರೆಗಳನ್ನ ಅವರು ತೊಳೆಯೋದು ನೋಡಿದ್ರೆ ಸುಸ್ತಾಗಿ ಹೋಗ್ತಿರಾ. ನೆಟ್ಟಗೆ ಲೋಟ ತಟ್ಟೆಯನ್ನು ತೊಳೆಯದೇ ಹಾಗೆಯೇ ತಿಂಡಿಗಳನ್ನು ಬಡಿಸಿ ಕೊಡ್ತಾರೆ.

    ಇತ್ತ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣದ ಫುಡ್ ಸ್ಟಾಲ್ ಕಥೆಯಂತೂ ಕೇಳೋದೇ ಬೇಡ. ರೋಡ್‍ನಲ್ಲೇ ಕಿಚನ್, ಡರ್ಟಿ ಫುಡ್‍ನ ದುನಿಯಾ ಇದು. ರಸ್ತೆಯಲ್ಲೆ ತಿಂಡಿ ಲಟ್ಟಿಸುತ್ತಾರೆ, ಬಾಣಲೆ ಇಟ್ಟು ಬೇಯಿಸ್ತಾರೆ. ಕಡೆಗೆ ಧೂಳು ಮುತ್ತಿದ್ದ ಮೇಲೆ ತಿಂಡಿಗಳನ್ನು ಮಾರುತ್ತಾರೆ. ತಿಂಡಿ ಮೇಲೆ ನೋಣವೆಲ್ಲ ಕೂರುತ್ತಿದೆ ಎಂದು ಪ್ರಶ್ನಿಸಿದರೆ ವ್ಯಾಪಾರಿಗಳು ಮಾತ್ರ ಏನೂ ಪ್ರತಿಕ್ರಿಯೆ ಕೊಡದೆ ಬಾಯಿ ಮುಚ್ಚಿ ಇರುತ್ತಾರೆ.

    ಹಾಗೆಯೇ ವಿಜಯನಗರ ಸ್ಟ್ರೀಟ್ ಫುಡ್ ಬಳಿ ಸಣ್ಣ ಚರಂಡಿ ಇದೆ. ಅಲ್ಲೇ ಇಡ್ಲಿ ಇಟ್ಟು, ಇಡ್ಲಿ ತೆಗೆಯುವುದಕ್ಕೆ ಬಳಸೋ ನೀರು ನೋಡಿದರೆ ಅಸಹ್ಯ ಎನಿಸುತ್ತೆ. ಕುಡಿಯುವ ನೀರಿನ ಜಾಗ ಹಾಗೂ ಕೈತೊಳೆಯೊ ಜಾಗಕ್ಕೆ ಏನೂ ವ್ಯತ್ಯಾಸವಿಲ್ಲ. ಹೀಗಿರುವ ಸ್ಥಳದಲ್ಲಿ ತಿಂಡಿ ತಿಂದರೆ ಕಾಯಿಲೆ ಗ್ಯಾರೆಂಟಿ.

    ನಾನ್‍ವೆಜ್ ತಿಂಡಿಗಳಿಗೆ ಫೇಮಸ್ ಆಗಿರುವ ಶಿವಾಜಿನಗರದಲ್ಲಿ ಸ್ವಚ್ಛತೆ ನೋಡಿದರೆ ದಂಗಾಗುತ್ತೀರ. ನೇತು ಹಾಕಿರೋ ಪ್ರಾಣಿಗಳ ದೇಹದಂತೆ ಇಲ್ಲಿ ಊಟದ ಸ್ವಚ್ಛತೆಯೂ ಜೋತು ಬಿದ್ದಿದೆ.

    ಈ ಸ್ಟ್ರೀಟ್ ಫುಡ್ ತಯಾರಕರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು. ಇಲ್ಲವಾದರೆ ಉಗುರಿನಲ್ಲಿರೋ ಫಂಗಸ್ ದೇಹ ಸೇರಿ ಕರುಳುಬೇನೆ ಶುರುವಾಗುತ್ತದೆ. ಜೊತೆಗೆ ಪದೇ ಪದೇ ಕಾಯಿಲೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಛತೆಯ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತೆ. ಹೀಗಾಗಿ ಕಡಿಮೆ ಬೆಲೆಗೆ, ಬಿಸಿ ಬಿಸಿ ಸಿಗುತ್ತೆ ಎಂದು ಸ್ಟ್ರೀಟ್ ಫುಡ್ ಮೊರೆ ಹೋಗೋ ಮುನ್ನ ಎಚ್ಚರದಿಂದಿರಿ. ಸ್ವಚ್ಛತೆ ಇಲ್ಲದ ಕಡೆ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ.

  • ಹೆಡ್‍ಫೋನ್ ಬೆಲೆ ಜಗಳ ಶಿಕ್ಷಕನ ಕೊಲೆಯಲ್ಲಿ ಅಂತ್ಯ

    ಹೆಡ್‍ಫೋನ್ ಬೆಲೆ ಜಗಳ ಶಿಕ್ಷಕನ ಕೊಲೆಯಲ್ಲಿ ಅಂತ್ಯ

    ನವದೆಹಲಿ: ಹೆಡ್‍ಫೋನ್ ಬೆಲೆ ವಿಚಾರವಾಗಿ ಶಿಕ್ಷಕನನ್ನು ಇಬ್ಬರು ವ್ಯಾಪಾರಿಗಳು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ದೆಹಲಿಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.

    27 ವರ್ಷದ ಮೊಹಮ್ಮದ್ ಒವೈಶ್ ಕೊಲೆಯಾದ ಶಿಕ್ಷಕ. ಇವರು ದೆಹಲಿಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನು. ಕೊಲೆ ಆರೋಪಿಗಳನ್ನು ಅಲ್ಲನ್ ಮತ್ತು ಅಯೂಬ್ ಎಂದು ಗುರುತಿಸಲಾಗಿದೆ.

    ದೆಹಲಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಒವೈಶ್ ಕೆಲಸ ಮುಗಿಸಿ ಉತ್ತರ ಪ್ರದೇಶದ ತನ್ನ ಮನೆಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹೆಡ್‍ಫೋನ್ ಕೊಂಡುಕೊಳ್ಳಲು ಹೋದಾಗ ಬೆಲೆ ವಿಚಾರಕ್ಕೆ ಓವೈಶ್ ಮತ್ತು ಅಲ್ಲನ್ ನಡುವೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಹೆಡ್‍ಫೋನ್ ವ್ಯಾಪಾರಿಗಳು ಶಿಕ್ಷಕನನ್ನು ಹೊಡೆದು ಸಾಯಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಹರೇಂದ್ರ ಕುಮಾರ್ ಸಿಂಗ್, ನಮಗೆ ರೈಲ್ವೆ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ಬಿದ್ದಿದ್ದಾನೆ ಎಂದು ಕರೆ ಬಂತು. ನಾವು ತಕ್ಷಣ ಅಲ್ಲಿಗೆ ಹೋಗಿ ಅವನನ್ನು ಅಸಫ್ ಅಲಿ ಆಸ್ಪತ್ರೆಗೆ ದಾಖಲು ಮಾಡಿದೆವು. ಅಲ್ಲಿನ ವೈದ್ಯರು ಆತ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರ ಮಾಡಿರುವುದಾಗಿ ಹೇಳಿದರು.

  • ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

    ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

    -ಅಂಬಿ ಇಷ್ಟದ ಮಿಠಾಯಿ ಸವಿದ ಪಕ್ಷೇತರ ಅಭ್ಯರ್ಥಿ

    ಮಂಡ್ಯ: ಇಂದು ಬೆಳ್ಳಂಬೆಳಗ್ಗೆ ಮಂಡ್ಯದ ಮಾರುಕಟ್ಟೆಯಲ್ಲಿ ಸುಮಲತಾ ಅಂಬರೀಶ್ ಪ್ರಚಾರ ಆರಂಭ ಮಾಡಿದ್ದು, ಅಲ್ಲಿ ಕೆಲ ಮಹಿಳಾ ವ್ಯಾಪಾರಸ್ಥರು ಹಾಗೂ ಅಂಬಿ ಅಭಿಮಾನಿಗಳು ಪ್ರೀತಿಯಿಂದ ಪ್ರಚಾರದ ಖರ್ಚಿಗೆ ಹಣ ನೀಡಿದಷ್ಟೇ ಅಲ್ಲದೆ ಸೌತೆಕಾಯಿ, ಕಿತ್ತಳೆ ಹಣ್ಣು, ಮಿಠಾಯಿ ನೀಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ಲೋಕಸಮರಕ್ಕೆ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯ ಮಾರುಕಟ್ಟೆಯಲ್ಲಿ ಪ್ರಚಾರಕ್ಕೆ ತೆರೆಳಿದ್ದ ವೇಳೆ ಅಂಬರೀಶ್ ಅಭಿಮಾನಿಗಳು, ಸುಮಲತಾರನ್ನು ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲದೆ ಕೆಲ ಮಹಿಳಾ ವ್ಯಾಪಾರಿಗಳು ಸುಮಲತಾರಿಗೆ ಪ್ರಚಾರದ ಖರ್ಚಿಗೆ ಕೊಂಚ ಹಣವನ್ನು ಕೂಡ ನೀಡಿದ್ದಾರೆ. ಹಾಗೆಯೇ ವ್ಯಾಪಾರ ಮಾಡುತ್ತಿದ್ದ ನಾವು ಸಂತೋಷದಿಂದ ಹಣ ಕೊಟ್ಟಿದ್ದೇವೆ. ಅವರು ಗೆಲ್ಲಲಿ ಎಂದು ಹಣ ಕೊಟ್ಟಿದ್ದೇವೆ. ನಮಗೆ ಏನು ಮಾಡಬೇಕೋ ಅದನ್ನು ಅವರು ಗೆದ್ದ ನಂತರ ಮಾಡಲಿ. ನಮ್ಮಂಥ ಬಡವರನ್ನು ಕಾಪಾಡಲಿ ಎಂದು ಕಿರುಕಾಣಿಕೆ ನೀಡಿದ ವೃದ್ಧೆಯೊಬ್ಬರು ಹೇಳಿದರು.

    ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ಚಿಕ್ಕ ಮಂಡ್ಯ ರಸ್ತೆಯಲ್ಲಿ ಇರುವ ಮಿಠಾಯಿ ಅಂಗಡಿ ಹೋಗಿ ಮಿಠಾಯಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಆದ್ದರಿಂದ ಪ್ರಚಾರದ ವೇಳೆ ಮಿಠಾಯಿ ಅಂಗಡಿ ಮಾಲೀಕ ಚಂದ್ರು, ಅಂಬಿ ಅವರ ಇಷ್ಟದ ಮಿಠಾಯಿಯನ್ನು ಸುಮಲತಾರಿಗೆ ನೀಡಿ ಖುಷಿಪಟ್ಟಿದ್ದಾರೆ.

    ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ತಾವೇ ಖುದ್ದಾಗಿ ಚಂದ್ರು ಅವರ ಮಿಠಾಯಿ ಅಂಗಡಿಗೆ ಹೋಗಿ ಬೆಲ್ಲದ ಮಿಠಾಯಿ ಖರೀದಿಸಿ ತಿನ್ನುತ್ತಿದ್ದರು. ಅಲ್ಲದೆ ಅಂಬರೀಶ್‍ರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವವರು ಕೂಡ ಚಂದ್ರು ಅಂಗಡಿಯಿಂದ ಬೆಲ್ಲದ ಮಿಠಾಯಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಹೀಗಾಗಿ ಸುಮಲತಾ ಅವರು ಮಾರ್ಕೆಟ್‍ಗೆ ಬಂದ ವಿಷಯ ತಿಳಿದ ಚಂದ್ರು, ಅಭಿಮಾನದಿಂದ ಅವರಿಗೆ ಮಿಠಾಯಿ ತಂದುಕೊಟ್ಟರು. ಬಳಿಕ ಅಭಿಮಾನಿ ಪ್ರೀತಿಗೆ ಸೋತ ಸುಮಲತಾ, ಅಂಬರೀಶ್ ನೆನಪಿಗಾಗಿ ಮಾರುಕಟ್ಟೆಗೆ ಬಂದಾಗ ನಿಮ್ಮ ಅಂಗಡಿಗೆ ನಾನೇ ಬಂದು ಮಿಠಾಯಿ ತಿನ್ನುತ್ತೇನೆ ಎಂದು ಸಂತೋಷದಿಂದ ಹೇಳಿಕೊಂಡರು.