Tag: sell

  • 14.23 ಕೋಟಿ ರೂಪಾಯಿಗೆ ಹರಾಜಾದ ಒಂಟೆ

    14.23 ಕೋಟಿ ರೂಪಾಯಿಗೆ ಹರಾಜಾದ ಒಂಟೆ

    ರಿಯಾದ್: ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ದುಬಾರಿ ಬೆಲೆಯ ಒಂಟೆಯನ್ನು ಖರೀದಿ ಮಾಡಿದ್ದಾರೆ. ಈ ಒಂಟೆಯೂ 7 ಮಿಲಿಯನ್ ಅಂದರೆ ಸುಮಾರು 14.23 ಕೋಟಿ ರೂಪಾಯಿಗೆ ಮಾರಾಟವಾಗಿದೆ.

    ಒಂಟೆಯ ವಿಶೇಷತೆ: ಸೌದಿ ಅರೇಬಿಯಾದಲ್ಲಿ ಇಷ್ಟು ದುಬಾರಿ ಬೆಲೆಗೆ ಹರಾಜಾದ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ. ಈ ಒಂಟೆ ವಿಶೇಷ ಸೌಂದರ್ಯವನ್ನು ಹೊಂದಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.

    ಸೌದಿ ಅರೇಬಿಯಾದಲ್ಲಿ ಈ ಒಂಟೆಗಾಗಿ ಸಾರ್ವಜನಿಕ ಹರಾಜು ಆಯೋಜಿಸಲಾಗಿತ್ತು. ಹರಾಜಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ, ಒಂಟೆಯನ್ನು ಚೌಕಾಕಾರದ ಕಬ್ಬಿಣದ ಮಧ್ಯೆ ಇರಿಸಿರುವುದನ್ನು ನೀವು ನೋಡಬಹುದು. ಇದನ್ನೂ ಓದಿ: ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ: ಹೆಚ್‍ಡಿಕೆ

    ಒಂಟೆಯ ಆರಂಭಿಕ ಬಿಡ್ (5 ಮಿಲಿಯನ್ ರಿಯಾದ್) ಸುಮಾರು 10.16 ಕೋಟಿ ರೂಪಾಯಿ ಆಗಿದೆ. ನಂತರ ಒಂಟೆ 14.23 ಕೋಟಿ (7 ಮಿಲಿಯನ್ ಸೌದಿ ರಿಯಾಲ್‍ಗಳಲ್ಲಿ)ಗೆ ಹರಾಜು ಹಾಕಲಾಗಿದೆ. ಇಷ್ಟು ಹೆಚ್ಚು ಬಿಡ್ ಮಾಡಿ ಒಂಟೆ ಖರೀದಿಸಿದವರ ಗುರುತು ಬಹಿರಂಗವಾಗಿಲ್ಲ. ಆದರೆ ಈ ದುಬಾರಿ ಬೆಲೆಯ ಒಂಟೆ ಮಾತ್ರ ಸಖತ್ ಸುದ್ದಿಯಾಗುತ್ತಲಿದೆ.

  • ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಗುಲ್ಮೊಹರ್ ಪಾರ್ಕ್‍ನಲ್ಲಿರುವ ತಮ್ಮ ದಕ್ಷಿಣ ದೆಹಲಿಯಲ್ಲಿರುವ ‘ಸೋಪಾನ್’ ಹೆಸರಿನ ಮನೆಯನ್ನು 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

    ನೆಜೋನ್ ಗ್ರೂಪ್ ಆಫ್ ಕಂಪನಿಗಳ (ಸಿಇಒ) ಅವ್ನಿ ಬೇಡರ್ ಅವರಿಗೆ ಬಚ್ಚನ್ ಮನೆಯನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಬಚ್ಚನ್ ಅವರು ಈ ಮನೆಯುನ್ನು ಕಟ್ಟಿಸಿ ತುಂಬಾ ವರ್ಷಗಳಾಗಿದ್ದು, ಇದು ಹಳೆಯ ನಿರ್ಮಾಣವಾಗಿದೆ. ಆದ್ದರಿಂದ ನಾವು ಸೋಪಾನ್ ಮನೆಯನ್ನು ಕೆಡವುತ್ತೇವೆ. ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆ ಮನೆಯನ್ನು ಹೊಸದಾಗಿ ನಿರ್ಮಿಸುತ್ತೇವೆ. ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಾನು ಹೆಚ್ಚುವರಿ ಆಸ್ತಿಗಾಗಿ ದೆಹಲಿಯಲ್ಲಿ ಒಂದು ಮನೆಯನ್ನು ಹುಡುಕುತ್ತಿದ್ದೆ. ಆಗ ಅಮಿತಾಬ್ ಅವರ ಮನೆ ಮಾರಾಟಕ್ಕಿರುವುದು ತಿಳಿದುಬಂದಿದ್ದು, ತಕ್ಷಣ ಆ ಮನೆಯನ್ನು ಖರೀದಿಸಿದ್ದೇವೆ ಎಂದು ಅವ್ನಿ ಅವರು ಮಾಧ್ಯಮದ ಮೂಲಕ ತಿಳಿಸಿದರು.

    ಈ ಹಿಂದೆ ಸೋಪಾನ್ ಮನೆಯಲ್ಲಿ ಅಮಿತಾಭ್ ಬಚ್ಚನ್ ಅವರ ತಂದೆ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ಅವರ ತಾಯಿ ದಿವಂಗತ ತೇಜಿ ಬಚ್ಚನ್‍ರವರು ವಾಸಿಸುತ್ತಿದ್ದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ

    ಈ ಮನೆಯು 418.5 ಚದರ ಮೀಟರ್ ಜಾಗದಲ್ಲಿದ್ದು, ಡಿಸೆಂಬರ್ 7 ರಂದು ಇದರ ನೊಂದಣಿಯನ್ನು ಪೂರ್ಣಗೊಳಿಸಲಾಗಿತ್ತು. ಹರಿವಂಶ್ ರಾಯ್ ಬಚ್ಚನ್ ಅವರು ಈ ಮನೆಯಲ್ಲಿ ವಾಸವಾಗಿದ್ದಾಗ ಕವಿಗೋಷ್ಠಿಯನ್ನು ಆಯೋಜಿಸಿದ್ದರು. ಬಚ್ಚನ್‍ರವರ ಅನೇಕ ನೆನಪುಗಳನ್ನು ಮನೆ ಹೊಂದಿದೆ. ಅಲ್ಲದೆ, ಎರಡು ಅಂತಸ್ತಿನ ಸೋಪಾನ್ ಅನ್ನು ತಾಯಿ ತೇಜಿ ಬಚ್ಚನ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಈ ಬಗ್ಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಅಫ್ಘಾನ್‍ನಲ್ಲಿ ಮಕ್ಕಳ ಅಂಗಾಂಗ ಮಾರಾಟ!

    ಅಫ್ಘಾನ್‍ನಲ್ಲಿ ಮಕ್ಕಳ ಅಂಗಾಂಗ ಮಾರಾಟ!

    ಕಾಬೂಲ್: ಜೀವನ ಸಾಗಿಸಲು ಅಫಾಸ್ಘಾನಿಯರು ಮಕ್ಕಳ ಅಂಗಾಂಗವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

    ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಅಲ್ಲಿನ ಜನರ ಬದುಕು ತೀರಾ ದುಸ್ತರವಾಗಿದೆ. ಮೊದಲೇ ಸಂಕಷ್ಟದಲ್ಲಿದ್ದ ಅಫ್ಘಾನಿಸ್ತಾನ್ ಜನತೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಹೀಗಾಗಿ ಮಕ್ಕಳ ಅಂಗಾಗಂಗವನ್ನು ಮಾರಾಟ ಮಾಡುತ್ತಿದ್ದಾರೆ.

    ಜೀವನ ಸಾಗಿಸಲು ಅಲ್ಲಿರುವ ಜನರು ಮಕ್ಕಳನ್ನೇ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ತಮ್ಮದೇಹದ ಅಂಗಾಂಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಅಲ್ಲಿನ ಮಾಧ್ಗಮವೊಂದು ವರದಿ ಮಾಡಿದೆ. ಒಂದು ಮಗುವನ್ನು 1 ಲ್ಷದವರೆಗೆ ಮಾರಲಾಗುತ್ತದೆ. ಮೂತ್ರಪಿಂಡದ ಬೆಲೆ150.000 ರಿಂದ 220,000 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದಾಗಿ ಸುದ್ದಿಯಾಗಿದೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಸಾಮೂಹಿಕ ಅತ್ಯಾಚಾರ- ಪತಿ, ಆತನ ಸ್ನೇಹಿತರು ಅರೆಸ್ಟ್‌

    ಅಫ್ಘಾನ್‍ನಲ್ಲಿ ನೆಲೆಸಿರುವ ವಲಸಿಗರನ್ನು ಟಾಗೇಟ್ ಮಾಡಲಾಗುತ್ತಿದೆ. ಬಲಂತವಾಗಿ ಮಕ್ಕಳನ್ನು ಮಾರಾಟ ಮಾಡಲು ಹಾಗೂ ಅಂಗಾಂಗಳನ್ನು ದಾನ ಮಾಡೋದಕ್ಕೆ ಪ್ರಚೋದನೆ ನೀಡಲಾಗುತ್ತದೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

    ಬಡತನ, ದೇಶದಲ್ಲಿನ ಆರ್ಥಿಕ ಸಮಸ್ಯೆಗಳು ಮತ್ತು ಕೊರೊನಾ ಕಾರಣದಿಂದ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಕುಟುಂಗಳಿಗೆ ಒತ್ತಾಯಿಸಲಾಯಿಸಲಾಗುತ್ತಿದೆ. ಪ್ರತಿ ಕುಟುಂಬವು ಸುಮಾರು ಎರಡರಿಂದ ಏಳು ಮಕ್ಕಳನ್ನು ಹೊಂದಿದ್ದಾರೆ. ಮಕ್ಕಳು ಮತ್ತು ಮೂತ್ರಪಿಂಡಗಳನ್ನು ಮಾರಾಟ ಮಾಡುವುದನ್ನು ತಡೆಯಲು ದತ್ತಿ ಸಮಿತಿಯು ಸಹಾಯ ಮಾಡಿತು. ದತ್ತಿ ಸಮಿತಿಯು ಮಜಾರ್-ಎ-ಷರೀಫ್‍ನಲ್ಲಿ ಸಾವಿರಾರು ಸ್ಥಳಾಂತರಗೊಂಡ ಮತ್ತು ದುರ್ಬಲ ಜನರಿಗೆ ನಗದು ನೆರವು ಮತ್ತು ಆಹಾರವನ್ನು ಒದಗಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮಾರ್ಚ್‍ನಿಂದ ಶಾಲೆ, ವಿಶ್ವವಿದ್ಯಾಲಯ ಪುನಾರಂಭ

  • ಮಗಳನ್ನು ಮಾರಾಟ ಮಾಡಿ ಬಿಕ್ಕಿಬಿಕ್ಕಿ ಅತ್ತ ತಂದೆ

    ಮಗಳನ್ನು ಮಾರಾಟ ಮಾಡಿ ಬಿಕ್ಕಿಬಿಕ್ಕಿ ಅತ್ತ ತಂದೆ

    ಕಾಬೂಲ್: 9 ವರ್ಷದ ಮಗಳನ್ನು 55 ವರ್ಷದವನಿಗೆ ಮಾರಾಟ ಮಾಡಿದ ತಂದೆ ಬಿಕ್ಕಿಬಿಕ್ಕಿ ಅತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಅಬ್ದುಲ್ ಮಲಿಕ್ ತನ್ನ 9 ವರ್ಷದಮಗಳನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾರೆ. ಅಬ್ದುಲ್ ಮಲಿಕ್ ಅವರ ಕುಟುಂಬದಲ್ಲಿ ಎಂಟು ಜನರಿದ್ದು, ಎಲ್ಲರೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿರುವ ಅಬ್ದುಲ್ ಕೊನೆಗೆ ಮಗಳನ್ನು ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಈಗ ಇದು ನಿಮ್ಮ (ಕೊರ್ಬಾನ್) ವಧು, ದಯವಿಟ್ಟು ಅವಳನ್ನು ನೋಡಿಕೊಳ್ಳಿ, ಈಗ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು, ಅವಳನ್ನು ಕೊಲ್ಲಬೇಡಿ ಎಂದು ಅಬ್ದುಲ್ ಮಲಿಕ್ ಮಗಳ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿ ಕಣ್ಣೀರು ಹಾಕಿದ್ದಾರೆ. ನಮಗೆ ತಿನ್ನಲು ಏನೂ ಇಲ್ಲದ ಕಾರಣ ನನ್ನ ತಂದೆ ನನ್ನನ್ನು ಮಾರಿದ್ದಾರೆ. ನನ್ನನ್ನು ಒಬ್ಬ ಮುದುಕನಿಗೆ ಮಾರಾಟ ಮಾಡಿದ್ದಾರೆ ಎಂದು 9 ವರ್ಷದ ಬಾಲಕಿ ಹೇಳಿದ್ದಾಳೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

  • ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ಡೆಹ್ರಾಡೂನ್: ಭಾರತ ಪರ 28 ಬಾರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ತನ್ನ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ.

    ದಿಲ್ರಾಚ್ ಕೌರ್ 2005ರಲ್ಲಿ ಪ್ರಾರಂಭಿಸಿದ ತನ್ನ ಕ್ರೀಡಾ ಜೀವನದಲ್ಲಿ 15 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದರು. ಬಳಿಕ ಇದೀಗ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್, ಗಾಂಧಿ ಪಾರ್ಕ್ ಬಳಿ ಬಿಸ್ಕತ್ ಮತ್ತು ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ದಿಲ್ರಾಜ್ ಕೌರ್, ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ, ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಇದೀಗ ಜೀವನ ನಿರ್ವಹಣೆಗೆ ಕಷ್ಟಪಡುವಂತಹ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿ ಬಿಸ್ಕತ್ ಚಿಪ್ಸ್ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

    https://twitter.com/shubham_jain999/status/1407302791429705728

    ಈ ಬಗ್ಗೆ ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • 7 ತಿಂಗಳಲ್ಲಿ 7 ಬಾರಿ 18ರ ಯುವತಿಯ ಮಾರಾಟ

    7 ತಿಂಗಳಲ್ಲಿ 7 ಬಾರಿ 18ರ ಯುವತಿಯ ಮಾರಾಟ

    – ಕೆಲಸ ಕೊಡಿಸುವುದಾಗಿ ನಂಬಿಸಿ ಮಾರಾಟ
    – ಕೊನೆಗೆ ಬುದ್ಧಿಮಾಂದ್ಯನೊಂದಿಗೆ ವಿವಾಹ

    ಭೋಪಾಲ್: 18 ವರ್ಷದ ಯುವತಿಯನ್ನು 7 ತಿಂಗಳಲ್ಲಿ 7 ಬಾರಿ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

    ಛತ್ತಿಸ್‍ಗಡದ 18 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ 7 ತಿಂಗಳಲ್ಲಿ ಬರೋಬ್ಬರಿ 7 ಬಾರಿ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಘಟನೆ ನಡೆದಿದ್ದು, ಮನನೊಂದ ಯುವತಿ 2019ರ ಸೆಪ್ಟೆಂಬರ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಛತ್ತಿಸ್‍ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯದ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಒತ್ತಾಯ ಪೂರ್ವಕವಾಗಿ ಯುವತಿಯನ್ನು ವಿವಾಹವಾಗಿದ್ದ ಬುದ್ಧಿಮಾಂದ್ಯ ವ್ಯಕ್ತಿ ಬಬ್ಲೂ ಕುಶ್ವಾಹ್‍ನನ್ನು ಇನ್ನೂ ಪತ್ತೆಹಚ್ಚಬೇಕಿದೆ. ಛತ್ತಿಸ್‍ಗಡದ ಜಶ್ಪುರ ಜಿಲ್ಲೆಯಿಂದ ಯುವತಿಯನ್ನು ಅಪಹರಿಸಿದ ಆರೋಪಿಗಳು, ಆಕೆಯ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಬಳಿಕ ಈ ಭೀಕರ ಮಾನವ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.

    ಯುವತಿ ಛತ್ತಿಸ್‍ಗಡದ ಜಶ್ಪುರ ನಿವಾಸಿಯಾಗಿದ್ದು, ತಂದೆಗೆ ಕೃಷಿಯಲ್ಲಿ ಸಹಾಯ ಮಾಡಿಕೊಂಡು ಇದ್ದಳು. ಬಳಿಕ ಸಂಬಂಧಿಕರೊಬ್ಬರು ಕೆಲಸ ಕೊಡಿಸುವುದಾಗಿ ಆಕೆಯನ್ನು ಮಧ್ಯ ಪ್ರದೇಶದ ಛತರ್‍ಪುರಕ್ಕೆ ಕರೆದೊಯ್ದು, ಅಪಹರಿಸಿದ್ದರು. ಅಪಹರಣಕಾರರು ಯುವತಿಯ ಪೋಷಕರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದಲ್ಲಿ ಮಗಳ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಪೋಷಕರು ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿಕರಾದ ಪಂಚಮ್ ಸಿಂಗ್ ರೈ ಹಾಗೂ ಈತನ ಪತ್ನಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಕೆಲಸ ಕೊಡಿಸುವುದಾಗಿ ಯುವತಿಯನ್ನು ಜಶ್ಪುರದಿಂದ ಛತ್ತರ್‍ಪುರಕ್ಕೆ ಕರೆ ತಂದಿದ್ದೆವು ಎಂದು ಒಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.

    ಈ ದಂಪತಿ ಯುವತಿಯನ್ನು 20 ಸಾವಿರ ರೂ.ಗೆ ಛತ್ತರ್‍ಪುರದ ಕಲ್ಲು ರೈಕ್ವಾರ್ ಗೆ 7 ತಿಂಗಳ ಹಿಂದೆ ಮಾರಾಟ ಮಾಡಿದ್ದು, ಕೊನೇಯ ವ್ಯಕ್ತಿಯಾಗಿ ಉತ್ತರ ಪ್ರದೇಶದ ಲಲಿತ್‍ಪುರದ ಸಂತೋಷ್ ಕುಶ್ವಾಹ್ 70 ಸಾವಿರ ರೂ.ಗೆ ಯುವತಿಯನ್ನು ಕೊಂಡುಕೊಂಡಿದ್ದ. ಬಳಿಕ ಯುವತಿಯನ್ನು ಸಂತೋಷ್ ಕುಶ್ವಾಹ್ ಮಗ ಬುದ್ಧಿಮಾಂದ್ಯ ಬಬ್ಲೂ ಕುಶ್ವಾಹ್ ಜೊತೆ ವಿವಾಹ ಮಾಡಲಾಗಿದೆ. ಇದರಿಂದ ಬೇಸತ್ತ ಯುವತಿ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಲಲಿತ್‍ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಕರಣದ ಕುರಿತು ಛತ್ತರ್‍ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಛತ್ತಿಸ್‍ಗಡ, ಮಧ್ಯ ಪ್ರದೇಶಗಳಲ್ಲಿನ ಬುಡಕಟ್ಟು ಪ್ರದೇಶಗಳಿಂದ ಹೆಚ್ಚಿನ ಹುಡುಗಿಯರನ್ನು ಇತರ ರಾಜ್ಯಗಳಿಗೆ ಆರೋಪಿಗಳು ಕಳ್ಳ ಸಾಗಣೆ ಮಾಡಿರುವ ಕುರಿತು ಪರಿಶೀಲಿಸುತ್ತಿದ್ದಾರೆ.

  • ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    – ಪತ್ನಿ ಹಣ ಕೊಡದಿದ್ದಕ್ಕೆ ಕಂದಮ್ಮನನ್ನೇ ಮಾರಿದ

    ಹೈದರಾಬಾದ್: ಮದ್ಯದ ಚಟಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಹೊಸ ವರ್ಷದ ಸಂಭ್ರಮಾಚರಣೆಗೆ ಮದ್ಯ ಖರೀದಿಸಲು ತನ್ನ ಮಗನನ್ನೇ ಮಾರಾಟಕ್ಕಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜು ಮತ್ತು ಸಾರಾ ದಂಪತಿ ಮಲಕ್‍ಪೇಟೆ ಏರಿಯಾ ಆಸ್ಪತ್ರೆಯ ಬಳಿ ಫುಟ್‍ಪಾತ್‍ನಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು. ದಂಪತಿಗೆ 6 ತಿಂಗಳ ಗಂಡು ಮಗುವೊಂದಿತ್ತು. ಹೊಸ ವರ್ಷದ ಗುಂಗಿನಲ್ಲಿದ್ದ ರಾಜು ತನ್ನ ಪತ್ನಿ ಸಾರಾ ಜೊತೆ ಮದ್ಯ ಖರೀದಿಸಲು ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದರಿಂದ ತನ್ನ 6 ತಿಂಗಳ ಮಗುವನ್ನೇ ಮಾರಾಟ ಮಾಡಲು ಹೊರಟಿದ್ದಾನೆ.

    ಹೊಸ ವರ್ಷದ ಆಚರಣೆಗಾಗಿ ಮದ್ಯಕುಡಿಯಲು ಹಣ ಕೊಡದಿದ್ದ ಪತ್ನಿಯ ವಿರುದ್ಧ ಕೋಪಗೊಂಡ ರಾಜು ತನ್ನ ಆರು ತಿಂಗಳ ಗಂಡು ಮಗುವನ್ನು ಆಫ್ರೀನ್ ಎಂಬ ಏಜೆಂಟ್‍ನ ಸಹಾಯದಿಂದ ಮಾರಾಟ ಮಾಡಲು ಯತ್ನಿಸಿದ್ದಾನೆ. ಅದರಂತೆ ಏಜೆಂಟ್, ಗಂಡು ಮಗುವನ್ನು ಬಯಸುವ ಗ್ರಾಹಕರನ್ನು ಸಂಪರ್ಕಿಸಿ 70,000 ರೂಪಾಯಿಗೆ ಮಾರಾಟ ಮಾಡಿ ಕೊಡುವುದಾಗಿ ರಾಜುಗೆ ತಿಳಿಸಿದ್ದಾನೆ.

    ಆಫ್ರೀನ್ ಮಗುವಿನೊಂದಿಗೆ ಎಬ್ಬಿ ನಗರಕ್ಕೆ ಕರೆದುಕೊಂಡು ಬಂದು ಮಾರಾಟ ಮಾಡುತ್ತಿರುವುದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಚಾದರ್‍ಘಾಟ್ ಪೊಲೀಸರು, ರಾಜು ಮತ್ತು ಆಫ್ರೀನ್ ನಡುವೆ ಹಣದ ವಿಚಾರವಾಗಿ ಚೌಕಾಸಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಸಿಸಿಟಿವಿ ಆಧಾರದ ಮೂಲಕ ಮಗುವನ್ನು ಮಾರಾಟ ಮಾಡಿದ ಸ್ಥಳವನ್ನು ಗುರುತು ಮಾಡಿ ಮಗುವನ್ನು ರಕ್ಷಿಸಿದ್ದಾರೆ. ರಾಜು ಮತ್ತು ಆಫ್ರೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಾದರ್‍ಘಾಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ತರಕಾರಿ ಮಾರುತ್ತಿದ್ದ ಬಾಲಕಿಗೆ ದ್ವಿಚಕ್ರ ವಾಹನ ಗಿಫ್ಟ್ ಕೊಟ್ಟ ಪೊಲೀಸ್

    ತರಕಾರಿ ಮಾರುತ್ತಿದ್ದ ಬಾಲಕಿಗೆ ದ್ವಿಚಕ್ರ ವಾಹನ ಗಿಫ್ಟ್ ಕೊಟ್ಟ ಪೊಲೀಸ್

    – ಬಾಲಕಿ ತರಕಾರಿ ಮಾರುತ್ತಿರೋ ಫೋಟೋ ವೈರಲ್

    ದಿಸ್ಪುರ್(ಅಸ್ಸಾಂ): ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನೇಕ ಮಂದಿ ಪಡಬಾರದ ಕಷ್ಟ ಅನುಭವಿಸಿದರು. ಹೀಗೆ ಅಗತ್ಯ ವಸ್ತುಗಳಿಗೆ ಕಷ್ಟ ಪಡುವವರಿಗೆ ಅಸ್ಸಾಂ ಪೊಲೀಸ್ ಸಹಾಯ ಹಸ್ತ ಚಾಚುತ್ತಿದ್ದಾರೆ.

    ತರಕಾರಿ ಮಾರುತ್ತಿದ್ದ ಬಾಲಕಿಯೊಬ್ಬಳಿಗೆ ಅಸ್ಸಾಂನ ದಿಬ್ರುಗರ್ ಪೊಲೀಸ್ ಸೋಮವಾರ ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿ, ಮಾನವೀಯತೆ ಮೆರೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಾಲಕಿ ತನ್ನ ಕುಟುಂಬವನ್ನು ನಿರ್ವಹಿಸಲೆಂದು ತರಕಾರಿ ಮಾರಾಟ ಮಾಡುತ್ತಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಪೊಲೀಸರು ಆಕೆಯ ಸಹಾಯಕ್ಕೆ ನಿಂತಿದ್ದಾರೆ.

    ದಿಬ್ರುಗರ್ ಜಿಲ್ಲೆ ಜನ್ಮೋನಿ ಗೊಗೊಯ್, ಕಳೆದ 8 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ತಂದೆ ಸೇರಿದಂತೆ ತನ್ನ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಳು. ಹೀಗಾಗಿ ಲಾಕ್ ಡೌನ್ ಸಂದರ್ಭದಲ್ಲಿ ಬೈಸಿಕಲ್ ಮೂಲಕ ಮನೆ-ಮನೆಗೆ ತರಕಾರಿ ಮಾರಾಟ ಮಾಡುತ್ತಿದ್ದಳು.

    ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರುವ ಈಕೆಗೆ ತನ್ನ ಗೆಳತಿಯರಂತೆ ಉನ್ನತ ಶಿಕ್ಷಣ ಪಡೆಯುವ ಹಂಬಲವಿತ್ತು. ಆದರೆ ಇಡೀ ದೇಶ ಲಾಕ್ ಡೌನ್ ಆದ ಪರಿಣಾಮ ಈಕೆ ಕುಟುಂಬ ನಿರ್ವಹಣೆ ಮಾಡಲೆಂದು ತರಕಾರಿ ಮಾರಾಟ ಮಾಡುವತ್ತ ಚಿತ್ತ ಹರಿಸಿದಳು. ಹೀಗೆ ತರಕಾರಿ ಮಾರುತ್ತಿದ್ದಾಗ ಯಾರೋ ಈಕೆಯ ಫೋಟೋ ತೆಗೆದಿದ್ದಾರೆ. ಅಲ್ಲದೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.

    ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸೋಮವಾರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಪಲ್ಲವಿ ಮಜೂಮ್ದಾರ್ ಬಾಲಕಿಯ ಮನೆಗೆ ಬೇಟಿ ನೀಡಿದರು. ಅಲ್ಲದೆ ಆಕೆಗೆ ಮೊಪೆಡ್ ಉಡುಗೊರೆಯಾಗಿ ನೀಡಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಮಹಿಳಾ ಪೊಲೀಸ್ ಅಧಿಕಾರಿ, ಕುಟುಂಬ ನಿರ್ವಹಣೆಗಾಗಿ ತರಕಾರಿ ಮಾರುತ್ತಿದ್ದ ಬಾಲಕಿಗೆ ಡಿಜಿಪಿ ನಿರ್ದೇಶನದಂತೆ ಆಕೆಗೆ ಆರ್ಥಿಕ ಸಹಾಯ ಕೂಡ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಡಿವೈಎಸ್‍ಪಿ ಬೈಕ್ ಒಂದನ್ನು ಗಿಫ್ಟ್ ಆಗಿ ನೀಡಿರುವುದಾಗಿ ತಿಳಿಸಿದರು.