Tag: selfie

  • ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಗೃಹಿಣಿ

    ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಗೃಹಿಣಿ

    ಮೈಸೂರು: ಸೆಲ್ಫಿ ತೆಗೆಯಲು ಹೋಗಿ ಗೃಹಿಣಿಯೊಬ್ಬಳು ನೀರು ಪಾಲಾದ ಘಟನೆ ಮೈಸೂರಿನ ಶ್ರೀ ಕ್ಷೇತ್ರ ಸಂಗಮ ಬಳಿಯ ಕಪಿಲಾ ನದಿಯಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ(38) ಮೃತ ದುರ್ದೈವಿ. ಕವಿತಾ ಮೈಸೂರು ತಾಲೂಕಿನ ದೂರ ಗ್ರಾಮದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಡಿ.ಬಿ. ನಾಗರಾಜ್ ಅವರ ಪುತ್ರಿಯಾಗಿದ್ದರು. ಕವಿತಾ, ಪತಿ ಗಿರೀಶ್ ಹಾಗೂ ಪುತ್ರಿಯ ಜೊತೆಗೆ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮಕ್ಕೆ ಪೂಜೆಗೆ ತೆರಳಿದ್ದರು. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

    ದೇವಾಲಯದ ಪ್ರವೇಶಕ್ಕೂ ಮುನ್ನ ಕಪಿಲಾ ನದಿಯಲ್ಲಿ ಕಾಲು ತೊಳೆಯಲು ಹೋಗಿದ್ದರು. ಇದೇ ವೇಳೆ ಕವಿತಾ ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕಾಲು ಜಾರಿ ನೀರು ಪಾಲಾಗಿದ್ದಾರೆ. ಈ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಡೆಲಿಂಗ್‍ನ್ನು ವೃತ್ತಿ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಹತ್ಯೆಗೈದ ಸಹೋದರ

  • ಮದ್ಯ ಬಾಟಲಿಯಿಂದ ಕೊಲೆ ಮಾಡಿ, ಶವದ ಜೊತೆ ಸೆಲ್ಫಿ ತೆಗೆದುಕೊಂಡ ಕೊಲೆಗಾರರು

    ಮದ್ಯ ಬಾಟಲಿಯಿಂದ ಕೊಲೆ ಮಾಡಿ, ಶವದ ಜೊತೆ ಸೆಲ್ಫಿ ತೆಗೆದುಕೊಂಡ ಕೊಲೆಗಾರರು

    ಚೆನ್ನೈ: ವ್ಯಕ್ತಿಯೊಬ್ಬನನ್ನು ಕೊಂದು, ಆತನ ಶವದೊಂದಿಗೆ ಸೆಲ್ಫಿ ತೆಗೆದುಕೊಂಡ ಘಟನೆ ಚೆನ್ನೈನ ನ್ಯೂ ಮನಾಲಿ ಪಟ್ಟಣದ ಸಮೀಪ ನಡೆದಿದೆ.

    ರಿಕ್ಷಾ ಚಾಲಕ ರವಿಚಂದ್ರನ್(32) ಮೃತ ದುರ್ದೈವಿ. ಮದನ್ ಕುಮಾರ್(31), ಧನುಷ್(19), ಜಯಪ್ರಕಾಶ(18), ಭರತ್(19) ಬಂಧಿತ ಆರೋಪಿಗಳು. ಈ ನಾಲ್ವರು ಸೇರಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರವಿಚಂದ್ರನ್ ಅವರನ್ನು ಕೊಲೆ ಮಾಡಿದ್ದಾರೆ. ನಂತರ ತಾವು ಕೊಲೆ ಮಾಡಿರುವುದಾಗಿ ಸ್ನೇಹಿತರಿಗೆ ಸಾಬೀತಪಡಿಸಲು ರವಿಚಂದ್ರನ್ ಶವದೊಂದಿಗೆ ಸೆಲ್ಫಿ ತೆಗೆದುಕೊಂಡಿದುಕೊಂಡು ವಾಟ್ಸ್‌ಪ್‌ ಗ್ರೂಪ್‌ಗೆ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ.

    KILLING CRIME

    ರವಿಚಂದ್ರನ್ ಕೆಲ ದಿನಗಳ ಹಿಂದೆ ಮದನ್ ಜೊತೆಗೆ ಜಗಳ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮದನ್ ಹಾಗೂ ಆತನ ಸ್ನೇಹಿತರು ಸೇರಿ ರವಿಚಂದ್ರನ್ ಅವರನ್ನು ಕೊಲೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು.

    ಪ್ಲ್ಯಾನ್ ಪ್ರಕಾರವಾಗಿ ರವಿಚಂದ್ರನ್ ಅವರಿಗೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನ್ಯೂ ಮನಾಲಿ ಪಟ್ಟಣದ ಆಟದ ಮೈದಾನದಲ್ಲಿ ಮದ್ಯದ ಪಾರ್ಟಿಗಾಗಿ ಮದನ್ ಆಹ್ವಾನಿಸಿದ್ದ. ಇದಕ್ಕೆ ಒಪ್ಪಿದ್ದ ರವಿಚಂದ್ರನ್ ಪಾರ್ಟಿಗೆ ಹೋಗಿದ್ದ. ನಂತರ ಮದನ್ ಹಾಗೂ ಸ್ನೇಹಿತರು ಸೇರಿ ಮದ್ಯದ ಬಾಟಲಿಯಿಂದ ರವಿಚಂದ್ರನ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

    CRIME 2

    ರಾತ್ರಿಯಾದರೂ ಬರದಿದ್ದರಿಂದ ರವಿಚಂದ್ರನ್ ಪತ್ನಿ ಕೀರ್ತನಾ, ರವಿಚಂದ್ರನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ವಿಚ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಅವಳು ರವಿಚಂದ್ರನ್ ಅವರನ್ನು ಹುಡುಕಲು ಸಂಬಂಧಿಕರಿಗೆ ತಿಳಿಸಿದರು. ನಂತರ ವೆಟ್ರಿ ನಗರದ ಎಂಆರ್‍ಎಫ್ ಆಟದ ಮೈದಾನದ ಮೂಲೆಯಲ್ಲಿ ಆತ ಶವವಾಗಿ ಬಿದ್ದಿರುವುದು ಕಂಡಿದೆ. ಇದನ್ನೂ ಓದಿ: ಬಿಜೆಪಿ ನಾಯಕರೇ ಅಮಿತ್‌ ಶಾ ಗುಲಾಮರಾಗಬೇಡಿ, ಕನ್ನಡ ತಾಯಿ ಸ್ವಾಭಿಮಾನಿ ಮಕ್ಕಳಾಗಿ: ಸಿದ್ದು

    ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ ರವಿಚಂದ್ರನ್ ಪತ್ನಿ ಕೀರ್ತನಾ ಆವಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

    POLICE JEEP

    ಕೀರ್ತನಾ ಅವರ ದೂರಿನ ಆಧಾರದ ಮೇಲೆ, ಆವಡಿಯ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಅವರು ವಿಶೇಷ ತಂಡಗಳನ್ನು ರಚಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಯೊಬ್ಬರ ಪ್ರಕಾರ, ಸೆಲ್ಫಿ ಕೊಲೆಗಾರರನ್ನು ಗುರುತಿಸಲು ಸಹಾಯ ಮಾಡಿದೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

  • ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್  ನಲ್ಲೂ ರಶ್ಮಿಕಾ ಹವಾ

    ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ನ ಒಂದೇ ಒಂದು ಸಿನಿಮಾ ಕೂಡ ರಿಲಿಸ್ ಆಗಿಲ್ಲ. ಮೂರು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರೂ, ಒಂದೇ ಒಂದು ಖಾತೆ ಕೂಡ ತೆರೆದಿಲ್ಲ. ಆದರೆ, ಸಾಕಷ್ಟು ಅಭಿಮಾನಿಗಳನ್ನು ಅವರು ಸಂಪಾದನೆ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ನಿನ್ನೆ ಮುಂಬೈಗೆ ಅವರು ಬಂದಿಳಿದಾಗ ಮುತ್ತಿಕೊಂಡ ಅಭಿಮಾನಿಗಳ ಗುಂಪು. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಮನಾಲೆಯಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಆ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದರು. ಸಣ್ಣದೊಂದು ಶೆಡ್ಯೂಲ್ ಮುಗಿಸಿದ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಂಬೈಗೆ ವಾಪಸ್ಸಾಗಿದೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಶೂಟಿಂಗ್ ನಲ್ಲಿ ಪಾಲ್ಗೊಂಡು ಹೈರಾಣಾಗಿದದ್ ರಶ್ಮಿಕಾ ಮಂದಣ್ಣ ರಿಲ್ಯಾಕ್ಸ್ ಗಾಗಿ ರೆಸ್ಟೋರೆಂಟ್ಗೆ ಹೋಗಿದ್ದಾರೆ. ಅಲ್ಲಿಂದ ಆಚೆ ಬರುವಾಗ ನೂರಾರು ಅಭಿಮಾನಿಗಳೂ ರಶ್ಮಿಕಾ ಅವರನ್ನು ಮುತ್ತಿಕೊಂಡಿದ್ದಾರೆ. ಸೆಲ್ಫಿಗಾಗಿ ಕೇಳಿಕೊಂಡಿದ್ದಾರೆ. ನಗುತ್ತಲೇ ಎಲ್ಲರಿಗೂ ಸೆಲ್ಫಿಕೊಟ್ಟಿರುವ ಅವರು, ಅಭಿಮಾನಿಗಳ ಜತೆ ಕೆಲ ಕಾಲ ಕಳೆದಿದ್ದಾರೆ. ಇದನ್ನೂ ಓದಿ : ಪ್ರಧಾನಿ ಮೋದಿ ಕೈ ಸೇರಿದ ಅನುಪಮ್ ಖೇರ್ ತಾಯಿ ಕೊಟ್ಟ ರುದ್ರಾಕ್ಷಿ

    ಕನ್ನಡ ಸಿನಿಮಾ ರಂಗದಿಂದಲೇ ಚಿತ್ರೋದ್ಯಮಕ್ಕೆ ಕಾಲಿಟ್ಟ ರಶ್ಮಿಕಾ, ಮೊದಲ ಸಿನಿಮಾದಲ್ಲೇ ಭಾರೀ ಸಕ್ಸಸ್ ಪಡೆದರು. ಆನಂತರ ಕನ್ನಡದ ಹಲವು ಸ್ಟಾರ್ ನಟರ ಜತೆ ನಟಿಸಿದರು. ಅಲ್ಲಿಂದ ತೆಲುಗು ಸಿನಿಮಾ ರಂಗಕ್ಕೆ ಹಾರಿದರು. ತೆಲುಗಿನಿಂದ ತಮಿಳಿನಲ್ಲೂ ಅನೇಕ ಚಿತ್ರಗಳನ್ನು ಮಾಡಿದರು. ಇತ್ತೀಚೆಗಷ್ಟೇ ತೆರೆ ಕಂಡ ಪುಷ್ಪಾ ಸಿನಿಮಾದ ಮೂಲಕ ನ್ಯಾಷಿನಲ್ ಕ್ರಶ್ ಆಗಿ ರೂಪಗೊಂಡರು. ಇದೀಗ ಬಾಲಿವುಡ್ ನಲ್ಲೂ ರಶ್ಮಿಕಾ ತಮ್ಮ ಛಾಪು ಮೂಡಿಸುತ್ತಿದ್ದಾರೆ.

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕರನ್ನು ಬೆನ್ನೆಟ್ಟಿದ ಆನೆ- ವೀಡಿಯೋ ವೈರಲ್‌

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕರನ್ನು ಬೆನ್ನೆಟ್ಟಿದ ಆನೆ- ವೀಡಿಯೋ ವೈರಲ್‌

    ಚೆನ್ನೈ: ಆನೆಗಳ ಹಿಂಡು ರಸ್ತೆ ದಾಟುತ್ತಿರುವಾಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕರನ್ನು ನೋಡಿ ಬೆನ್ನೆಟ್ಟಿದ ಘಟನೆ ತಮಿಳುನಾಡಿನ ಕೂನೂರಿನಲ್ಲಿ ನಡೆದಿದೆ.

    ತಮಿಳುನಾಡಿನ ಕಟ್ಟೇರಿ ಬಳಿ ಆನೆಗಳ ಹಿಂಡುಗಳು ಆಹಾರ ಮತ್ತು ನೀರಿನ್ನು ಹುಡುಕುತ್ತಾ ಹೆದ್ದಾರಿಗೆ ಬಂದಿದ್ದವು. ಇದರಿಂದಾಗಿ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವಾಹನಗಳು ಆನೆ ರಸ್ತೆಯನ್ನು ದಾಟುವವರೆಗೆ ಅಲ್ಲೇ ನಿಂತಿದ್ದವು. ಆದರೆ ಅಲ್ಲಿದ್ದ ಯುವಕರು ಆ ಆನೆಗಳು ರಸ್ತೆಯನ್ನು ದಾಟುವಾಗ ಸೆಲ್ಫಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಿಂದ ಆನೆಗಳು ಕೆರಳಿದೆ. ಅಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ಓಡಿಸಲು ಮುಂದಾಗಿದೆ.

    ಪಕ್ಕದಲ್ಲಿದ್ದವರು ಭಯಭೀತರಾಗಿ ದೂರ ಸರಿದಿದ್ದಾರೆ. ನಂತರ ಆನೆಗಳು ಅರಣ್ಯಕ್ಕೆ ಇಳಿದುಹೋಗಲು ಸ್ವಲ್ಪ ಸಮಯವನ್ನು ತೆಗೆದುಕೊಂಡಿದೆ. ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಅಸ್ತಿತ್ವಕ್ಕಾಗಿ ಶಸ್ತ್ರಾಸ್ತ್ರ ಹಿಡಿಯುವಂತಾಗಿದೆ: ಯತಿ ನರಸಿಂಹಾನಂದ ವಿರುದ್ಧ ಖರ್ಗೆ ಖಂಡನೆ

    ನೀಲಗಿರಿ ಜಿಲ್ಲೆ ಕಾಡು ಆನೆಗಳು, ಕಾಡಾನೆಗಳು ಮತ್ತು ಚಿರತೆಗಳಂತಹ ವನ್ಯಜೀವಿಗಳಿಂದ ಸಮೃದ್ಧವಾಗಿದೆ. ಅನೇಕ ಬಾರಿ ಆನೆಗಳು ಆಹಾರ ಮತ್ತು ನೀರನ್ನು ಹುಡುಕಿಕೊಂಡು ಹೆದ್ದಾರಿಗಳನ್ನು ದಾಟುತ್ತಿರುತ್ತದೆ. ಕಳೆದ 15 ದಿನಗಳಿಂದ ಕುನ್ನೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಈ ಆನೆಗಳು ರನ್ನಿಮೇಡು, ಪಿಲ್ಲಿಮಲೈ, ಚಿನ್ನ ಕರುಂಬಳಂ ಮುಂತಾದ ಪ್ರದೇಶಗಳಲ್ಲಿ ಆಹಾರ ಮತ್ತು ನೀರು ಹುಡುಕುತ್ತಿವೆ. ಇದರಿಂದಾಗಿ ಈ ಮೊದಲೇ ಅರಣ್ಯ ಇಲಾಖೆಯವರು ಪ್ರವಾಸಿಗರಿಗೆ ಜಾಗರೂಕರಾಗಿರಿ ಹಾಗೂ ಆನೆಯ ಹಿಂಡನ್ನು ಪ್ರಚೋದಿಸಂತೆ ಅಥವಾ ಹತ್ತಿರಕ್ಕೆ ಹೋಗಲು ಪ್ರಯತ್ನಿಸದಂತೆ ಎಚ್ಚರಿಕೆಯನ್ನು ನೀಡಿದ್ದರು. ಇದನ್ನೂ ಓದಿ: ಹೀಗೆ ಮಾಡಿದ್ರೆ ಮುಂದಿನ ಜನಾಂಗಕ್ಕೆ ಕಾಂಗ್ರೆಸ್ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ: ಮುರುಗೇಶ್ ನಿರಾಣಿ

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ 25 ಅಡಿ ಆಳದ ಬಾವಿಗೆ ಬಿದ್ದು ಹುಡುಗ ಸಾವು

    ಸೆಲ್ಫಿ ತೆಗೆದುಕೊಳ್ಳಲು ಹೋಗಿ 25 ಅಡಿ ಆಳದ ಬಾವಿಗೆ ಬಿದ್ದು ಹುಡುಗ ಸಾವು

    ಗುರುಗ್ರಾಮ: ಹೋಳಿಹಬ್ಬದ ಸಂಭ್ರಮದ ವೇಳೆ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ 17 ವರ್ಷದ ಹುಡುಗನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಬಾದಶಹಪುರದಲ್ಲಿ ನಡೆದಿದೆ.

    ಮೃತನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಈತ 25 ಆಳದ ಬಾವಿಗೆ ಬಿದ್ದು, ನೀರಿನ ಸೆಲೆಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಇನ್ಸ್ಪೆಕ್ಟರ್ ದಿನಕರ್, ಇಲ್ಲಿನ ಬಾದಶಹಪುರದಲ್ಲಿ ಹೋಳಿ ಸಂಭ್ರಮದ ವೇಳೆ ರಾಹುಲ್ ತನ್ನ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಯಸಿದ್ದಾನೆ. ರಾಹುಲ್, ಲಲಿತ್ ಸೇರಿದಂತೆ ಮತ್ತೊಬ್ಬ ಸ್ನೇಹಿತ ಗ್ರಾಮದಲ್ಲಿರುವ ಬಾವಿಯ ಅಂಚಿನಲ್ಲಿ ಸರಪಳಿಯಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಈ ವೇಳೆ ರಾಹುಲ್ ಮತ್ತು ಲಲಿತ್‍ನ ಕಾಲುಜಾರಿ ಬಾವಿಗೆ ಬಿದ್ದಿದ್ದಾನೆ. ನಂತರ 3ನೇ ವ್ಯಕ್ತಿ ನೀರಿಗೆ ಹಾರಿ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ನೀರಿನ ಸೆಲೆಗೆ ಸಿಕ್ಕಿದ್ದರಿಂದ ರಾಹುಲ್‍ನನ್ನು ಹೊರತೆಯಲು ಸಾಧ್ಯವಾಗದ ಕಾರಣ, ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ರಾಹುಲ್ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ.

    ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ನಾವು ಶವವನ್ನು ಪೋಷಕರಿಗೆ ಹಸ್ತಾಂತರಿಸಿದ್ದೇವೆ ಎಂದು ದಿನಕರ್ ಘಟನೆಯನ್ನು ವಿವರಿಸಿದ್ದಾರೆ.

  • ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು..!

    ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು..!

    ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟ ಗ್ರಾಮದ ಸರ್ಕಾರಿ ಹೈಸ್ಕೂಲ್ ಹಾಗೂ ಪಿಯು ಕಾಲೇಜ್‍ಗೆ ಶಾಸಕರು ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿನಿಯರು ಶಾಸಕರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ನಾ-ಮುಂದು ತಾ-ಮುಂದು ಎಂದು ಮುಗಿಬಿದ್ದರು.

    ಜನ್ಮದಿನ ಆಚರಿಸಿಕೊಳ್ಳಲು ಹೈಸ್ಕೂಲ್ ಗೆ ಶಾಸಕರು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಂತೆಯೇ ಶಾಸಕರು ಎಲ್ಲ ವಿದ್ಯಾರ್ಥಿನಿಯರ ಜೊತೆ ಸೆಲ್ಫಿಗೆ ಪೋಸು ಕೊಟ್ಟರು. ಇದನ್ನೂ ಓದಿ: ಇವನಿಂದ ನಾನೇನು ಕಲಿಯಬೇಕಾಗಿಲ್ಲ, ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ – ಡಿ.ಕೆ.ಸುರೇಶ್‍ಗೆ ಏಕವಚನದಲ್ಲೇ ಹೆಚ್‍ಡಿಕೆ ವಾರ್ನಿಂಗ್

  • ಇನ್‌ಸ್ಟಾಗ್ರಾಮ್‌ನ ಸೆಲ್ಫಿ ಫೋಟೋ ತೆಗೆದುಹಾಕು, ಇಲ್ಲಾಂದ್ರೆ ಬ್ರೇಕ್‌ಅಪ್‌ ಆಗು: ಯುವತಿಗೆ ಪ್ರಿಯಕರ ಎಚ್ಚರಿಕೆ

    ಇನ್‌ಸ್ಟಾಗ್ರಾಮ್‌ನ ಸೆಲ್ಫಿ ಫೋಟೋ ತೆಗೆದುಹಾಕು, ಇಲ್ಲಾಂದ್ರೆ ಬ್ರೇಕ್‌ಅಪ್‌ ಆಗು: ಯುವತಿಗೆ ಪ್ರಿಯಕರ ಎಚ್ಚರಿಕೆ

    ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಸೆಲ್ಫಿ ಫೋಟೋ ಡಿಲೀಟ್‌ ಮಾಡು. ಇಲ್ಲದಿದ್ದರೆ ಬ್ರೇಕ್‌ ಅಪ್‌ ಆಗೋಣ ಎಂದು ಪ್ರೇಯಸಿಗೆ ಪ್ರಿಯತಮ ವಿಧಿಸಿರುವ ಷರತ್ತಿನ ಸಂದೇಶ ಎಲ್ಲೆಡೆ ವೈರಲ್‌ ಆಗಿದೆ.

    ಈ ಸಂದೇಶದಿಂದಾಗಿ ಕೊನೆಗೂ ಪ್ರೇಮಿಗಳು ದೂರಾಗಿದ್ದಾರೆ. ಮಾಜಿ ಪ್ರಿಯಕರ ತನಗೆ ಷರತ್ತು ವಿಧಿಸಿ ಮಾಡಿದ್ದ ಮೆಸೇಜ್‌ ಅನ್ನು ಯುವತಿ ಶೇರ್‌ ಮಾಡಿಕೊಂಡಿದ್ದಾಳೆ. ಆ ಬಗ್ಗೆ ಕಾಮೆಂಟ್‌ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಜೊತೆಗೆ ಹೋಟೆಲ್‍ನಲ್ಲಿ ಉಳಿದಿದ್ದ ಮಹಿಳೆ ಸಾವು- ಗೆಳೆಯ ಸಾಪತ್ತೆ

    ಟೀಸೆ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಯುವತಿಗೆ ಮಾಜಿ ಪ್ರಿಯಕರ ಮಾಡಿರುವ ಮೆಸೇಜ್‌ನಲ್ಲಿ, ಇನ್‌ಸ್ಟಾ ಸ್ಟೇಟಸ್‌ಗೆ ಹಾಕಿರುವ ಸೆಲ್ಫೀ ಮೆಸೇಜ್‌ ತೆಗೆದುಹಾಕಬೇಕು. ಮುಂದಿನ 5 ನಿಮಿಷಗಳಲ್ಲಿ ನಾನು ಇದನ್ನು ನೋಡಬಾರದು ಎಂದು ಸಮಯವನ್ನೂ ಉಲ್ಲೇಖಿಸಿ ಸಂದೇಶ ಕಳುಹಿಸಿದ್ದಾನೆ.

    ತಾನು ಕೊಟ್ಟಿದ್ದ ಗಡುವು ಮುಗಿದ ನಂತರ ಮತ್ತೊಂದು ಮೆಸೇಜ್‌ನಲ್ಲಿ, ಕೊಟ್ಟಿದ್ದ ಸಮಯ ಮುಗಿಯಿತು. ನಿಮಗೆ ಒಳ್ಳೆಯ ಜೀವನವಿದೆ. ಇನ್ನು ಮುಂದೆ ನೀನು ನನ್ನೊಂದಿಗೆ ಇರಬೇಕಾಗಿಲ್ಲ. ನೀನು ಏನು ಬೇಕಾದರೂ ಮಾಡಬಹುದು ಎಂದು ಬ್ರೇಕ್‌ ಅಪ್‌ ಹೇಳಿದ್ದಾನೆ. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಯೂಫೋರಿಯಾ (ಅತಿಯಾದ ಸಂತೋಷ) ನಾಟಕೀಯವಾಗಿರುತ್ತದೆ ಎಂದು ಜನ ಹೇಳುತ್ತಾರೆ. ಆದರೆ ನಾನು ಈಗ ಅದನ್ನು ಅನುಭವಿಸಿದ್ದೇನೆ ಎಂದು ಪ್ರಿಯಕರನ ಸಂದೇಶಕ್ಕೆ ಯುವತಿ ವೀಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾಳೆ. ಇದು ಎಲ್ಲೆಡೆ ವೈರಲ್‌ ಆಗಿದೆ.

    ಇದಕ್ಕೆ ಅನೇಕರು ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಆ ಚಿತ್ರದಲ್ಲಿ ಏನು ತಪ್ಪಾಗಿದೆ ಎಂದು ಒಬ್ಬರು ಪ್ರಶ್ನಿಸಿದರೆ. ಅದು ಅವನಲ್ಲಿ ಮುಜುಗರ ಉಂಟುಮಾಡಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ: ಹೆಚ್‍ಡಿಕೆ

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲಿಗೆ ಡಿಕ್ಕಿ – ನಾಲ್ವರ ಸಾವು

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲಿಗೆ ಡಿಕ್ಕಿ – ನಾಲ್ವರ ಸಾವು

    ನವದೆಹಲಿ: ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರು ಯುವಕರು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮಂಗಳವಾರ ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಮೇಲ್ಸೇತುವೆ ಬಳಿ ನಡೆದಿದೆ.

    ಮೃತರನ್ನು ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

    ಅವರಲ್ಲಿ ಒಬ್ಬ 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಸರ್ಕಾರಿ ರೈಲ್ವೆ ಪೊಲೀಸ್ ಪ್ರಕಾರ, ದೆಹಲಿಯ ಸರಾಯ್ ರೋಹಿಲ್ಲಾದಿಂದ ಅಜ್ಮೀರ್‍ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೇಸ್ ಗುರುಗಾಮ್ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

    18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ನಿಂತಿದ್ದರು. ರೈಲು ಸಾಕಷ್ಟು ಸಮೀಪ ಬಂದರು ಸಹ ಯುವಕರು ಫೋಟೋದಲ್ಲಿ ರೈಲು ಬೇಕು ಎಂದು ಕದಲದೆ ಅಲ್ಲಿಯೇ ನಿಂತಿದ್ದರು.

    ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ಚಾಲಕನಿಂದ ಮಾಹಿತಿ ಪಡೆದ ತಕ್ಷಣ, ಜಿಆರ್‍ಪಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತನೊಬ್ಬನ ತಂದೆ ತರಕಾರಿ ಮಾರಾಟಗಾರರಾಗಿದ್ದಾರೆ.

  • ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

    ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

    ಒಟ್ಟಾವಾ: ಸೆಲ್ಫಿಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ ಕೆಲವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆ ಕೆನಡಾದಲ್ಲಿ ನಡೆದಿದೆ.

    ಕಾರು ನಿಯಂತ್ರಣ ತಪ್ಪಿ ಮಂಜುಗಡ್ಡೆಯಿಂದ ತುಂಬಿದ ರಿದಾಯ ನದಿಗೆ ಬಿದ್ದಿದೆ. ಕಾರು ನಿಧಾನವಾಗಿ ಮಂಜುಗಡ್ಡೆ ಒಳಗೆ ಮುಳುಗುತ್ತಿದ್ದರೆ ಕಾರು ಚಲಾಯಿಸುತ್ತಿದ್ದ ಮಹಿಳೆ ಮಾತ್ರ ಕಾರಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಇದನ್ನು ಗಮನಿಸಿದ ಜನರು ಆಕೆಯನ್ನು ರಕ್ಷಿಸಿದ್ದಾರೆ. ಆಕೆ ಸೆಲ್ಫಿ ತೆಗೆದುಕೊಳ್ಳುತ್ತೀರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

    ಸ್ಥಳೀಯರು ಮಹಿಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜನರು ಅವಳಿಗೆ ಸಹಾಯ ಮಾಡಲು ಆತುರದಿಂದ ಮತ್ತು ಚಿಂತಿತರಾಗಿದ್ದಾಗ ಅವಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ

     

  • ಕುಣಿಯವುದನ್ನು ನಿಲ್ಲಿಸು – ಅಭಿಮಾನಿ ಮೇಲೆ ಸಲ್ಲು ಗರಂ

    ಕುಣಿಯವುದನ್ನು ನಿಲ್ಲಿಸು – ಅಭಿಮಾನಿ ಮೇಲೆ ಸಲ್ಲು ಗರಂ

    ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸೆಲ್ಫಿ ತೆಗೆಯಲು ಬಂದ ಅಭಿಮಾನಿ ಮೇಲೆ ಗರಂ ಆಗಿದ್ದು, ಈಗ ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಅಭಿಮಾನಿಗಳು ಕೇಳಿದ ತಕ್ಷಣ ಸೆಲೆಬ್ರಿಟಿಗಳು ಸೆಲ್ಫಿ ಕೊಡುತ್ತಾರೆ. ಆದರೆ ಅವರಿಗೂ ಎಲ್ಲ ಸಮಯದಲ್ಲಿ ಒಂದೇ ರೀತಿಯ ಮೂಡ್ ಇರುವುದಿಲ್ಲ. ಅದರಲ್ಲಿಯೂ ಸಲ್ಲುಗೆ ಸಿಟ್ಟು ಬಹುಬೇಗ ಬರುತ್ತೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಭಿಮಾನಿಯೊಬ್ಬರು ಸೆಲ್ಫಿ ಹುಚ್ಚಿಗೆ ಬಿದ್ದು, ಸಲ್ಲು ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ನೀನು ಕುಣಿಯುವುದನ್ನು ನಿಲ್ಲಿಸು ಎಂದು ಸಿಟ್ಟಿನಿಂದ ಹೇಳಿದ್ದಾರೆ. ಈ ವೀಡಿಯೋವನ್ನು ಅಭಿಮಾನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು, ಪ್ರಸ್ತುತ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಾವೇರಿ ನದಿಗೆ ತರ್ಪಣ ಬಿಟ್ಟ ವಿನೋದ್ ರಾಜ್

     

    View this post on Instagram

     

    A post shared by Viral Bhayani (@viralbhayani)

    ಸಲ್ಲು ನಟನೆಯ ‘ಅಂತಿಮ್ ದಿ ಫೈನಲ್ ಟ್ರುತ್’ ಸಿನಿಮಾದ ಸ್ವಲ್ಪ ದಿನಗಳಲ್ಲಿಯೇ ತೆರೆ ಕಾಣಲಿದೆ. ಅದಕ್ಕೆ ಆ ಸಿನಿಮಾದ ಪ್ರಮೋಷನ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಪರಿಣಾಮ ಮುಂಬೈ ಪೂರ್ತಿ ಇವರು ಸುತ್ತಾಡುತ್ತಿದ್ದಾರೆ. ಅದೇ ರೀತಿ ನಿನ್ನೆ ಪ್ರಮೋಷನ್ ನಲ್ಲಿ ನಿರತರಾಗಿರುವಾಗ ಫ್ಯಾನ್ಸ್ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು ಸಲ್ಲುಗೆ ಇಷ್ಟವಾಗಲಿಲ್ಲ.

    ಮೊದಲು ಸಲ್ಲು ಕ್ಯಾಮೆರಾ ಮ್ಯಾನ್ ಗಳು ಫೋಟೋ ತೆಗೆದುಕೊಳ್ಳುತ್ತಿದ್ದಾರೆ ಎಂದು ಮನವಿ ರೂಪದಲ್ಲೇ ಹೇಳಿದ್ದು, ಅದನ್ನು ಕೇಳಿಸಿಕೊಳ್ಳದ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ಹಿನ್ನೆಲೆ ಸಿಟ್ಟುಕೊಂಡ ಸಲ್ಲು ಕುಣಿಯುವುದನ್ನು ನಿಲ್ಲಿಸಿ ಎಂದು ಸಿಟ್ಟಿನಲ್ಲಿಯೇ ಹೇಳಿದ್ದಾರೆ. ನಂತರ ಅಭಿಮಾನಿ ಅಲ್ಲಿಂದ ತೆರಳಿದ್ದಾನೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

    ಪ್ರಸ್ತುತ ಸಲ್ಲು ‘ಅಂತಿಮ್ ದಿ ಫೈನಲ್ ಟ್ರುತ್’ ಸಿನಿಮಾದ ಪ್ರಮೋಷನ್ ಬ್ಯುಸಿಯಾಗಿದ್ದು, ಈ ಚಿತ್ರ ನವೆಂಬರ್ 26 ರಂದು ತೆರೆಗೆ ಬರುತ್ತಿದೆ. ಇನ್ನೂ ಈ ಚಿತ್ರದಲ್ಲಿ ಆಯುಶ್ ಶರ್ಮಾ ಗ್ಯಾಂಗ್‍ಸ್ಟರ್ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದ್ದು, ಚಿತ್ರಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಅದು ಅಲ್ಲದೇ ಈ ಚಿತ್ರವನ್ನು ಅವರೇ ನಿರ್ಮಾಣವನ್ನು ಮಾಡುತ್ತಿದ್ದಾರೆ.