Tag: selfie

  • ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

    ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

    ಚೆನ್ನೈ: ಶನಿವಾರದಂದು ಚೆನ್ನೈಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತ ತಿರು ಎಸ್.ಮಣಿಕಂದನ್ (Tiru.S.Manikandan) ಅವರನ್ನು ಭೇಟಿಯಾಗಿ ವಿಶೇಷ ಸೆಲ್ಫಿ (Selfie) ತೆಗೆದುಕೊಂಡು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸಲುವಾಗಿ ಪ್ರಧಾನಿ ಮೋದಿ (Narendra Modi) ಶನಿವಾರ ಚೆನ್ನೈಗೆ (Chennai) ಭೇಟಿ ನೀಡಿದ್ದರು. ಈ ವೇಳೆ ಅಂಗವಿಕಲರಾಗಿ (Disabled) ಒಂದು ಅಂಗಡಿಯನ್ನು ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಾದ ತಿರು.ಎಸ್.ಮಣಿಕಂದನ್ ಅವರನ್ನು ಭೇಟಿಯಾಗಿ ಅವರೊಡನೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅನೇಕರು ಪ್ರೇರೇಪಿತರಾಗಲಿ ಎಂದು ಅವರ ಜೀವನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಇದನ್ನು ಓದಿ: ಕೋವಿಡ್ ಕೇಸ್ ತೀವ್ರ ಹೆಚ್ಚಳ – ಕೇರಳ, ಹರಿಯಾಣ, ಪುದುಚೇರಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ಚೆನ್ನೈನಲ್ಲಿ ನಾನು ತಿರು ಎಸ್.ಮಣಿಕಂದನ್ ಅವರನ್ನು ಭೇಟಿಯಾದೆ. ಅವರು ಈರೋಡ್‌ನ (Erode) ಬಿಜೆಪಿ ಕಾರ್ಯಕರ್ತ ಹಾಗೂ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಅಂಗವಿಕಲನಾಗಿ ಅವರು ತನ್ನದೇ ಸ್ವಂತ ಅಂಗಡಿಯನ್ನು ನಡೆಸುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಅಲ್ಲದೇ ಅವರು ತಮಗೆ ಬಂದ ದೈನಂದಿನ ಲಾಭದಲ್ಲಿ ಗಣನೀಯ ಭಾಗವನ್ನು ಬಿಜೆಪಿಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಫೋಟೋದೊಂದಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಕಾರು ಅಪಘಾತ 

    ತಿರು ಎಸ್.ಮಣಿಕಂದನ್ ಅವರಂತಹ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ ಪಕ್ಷದಲ್ಲಿ ನಾನು ಕಾರ್ಯಕರ್ತನಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ ಎಂದು ಮಣಿಕಂದನ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದನ್ನು ಓದಿ: ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು

  • ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ವಿಜಯಪುರ: ಪಿಯು ಪರೀಕ್ಷಾ (PUC Exam) ಕೇಂದ್ರದಲ್ಲಿ ವಿಶೇಷ ಮೇಲ್ವಿಚಾರಕಿ (Invigilator) ಎಡವಟ್ಟು ಮಾಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಕೊಂಡೊಯ್ದು, ಸೆಲ್ಫಿ ಕ್ಲಿಕ್ಕಿಸಿ (Selfie) ಎಡವಟ್ಟು ಮಾಡಿದ್ದಾರೆ.

    ವಿಜಯಪುರ (Vijayapura) ಜಿಲ್ಲೆ ಸಿಂದಗಿ ತಾಲೂಕಿನ ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಿಂದಗಿ ಸಮಾಜ ಕಲ್ಯಾಣ ಇಲಾಖೆ ಎಡಿ ನಿರ್ಮಲಾ ಭೂಸಗೊಂಡ ಪರೀಕ್ಷೆ ಮೇಲ್ವಿಚಾರಣೆ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೆಂಟಲ್ ಹಾಸ್ಪಿಟಲ್ ಕ್ಯಾಂಡಿಡೇಟ್ ಬಗ್ಗೆ ನಾನು ಮಾತನಾಡಲು ಹೋಗಲ್ಲ: ಡಿಕೆಶಿ

    ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ನಿರ್ಮಲಾ ಸ್ಪೆಷಲ್ ಅಬ್ಸರ್ವರ್ ಆಗಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ಸ್ಮಾರ್ಟ್ಪೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ನಂತರ ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದಾರೆ.

    ನಿರ್ಮಲಾ ಕ್ಲಿಕ್ಕಿಸಿರುವ ಸೆಲ್ಫಿ ಸಮಾಜ ಕಲ್ಯಾಣ ಇಲಾಖೆ ಗ್ರೂಪ್‌ಗೂ ಶೇರ್ ಮಾಡಲಾಗಿದೆ. ಮೇಲ್ವಿಚಾರಕಿ ಪರೀಕ್ಷಾ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅವರಿಗೆ ನೋಟಿಸ್ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ನೂರು ಸಿಡಿ ಬರಲಿ, ನಾನು ಗಟ್ಟಿ ಇದ್ದೇನೆ: ಡಿಕೆಶಿಗೆ ಜಾರಕಿಹೊಳಿ ಟಾಂಗ್

  • ರೆಡ್ ಲೆಹೆಂಗಾ ಧರಿಸಿ ನಟಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಟ್ರೋಲ್

    ರೆಡ್ ಲೆಹೆಂಗಾ ಧರಿಸಿ ನಟಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಟ್ರೋಲ್

    `ಸೆಲ್ಫಿ’ (Selfie) ಸಿನಿಮಾ ಸೋಲಿನಿಂದ ಬೇಸತ್ತ ಅಕ್ಷಯ್ ಕುಮಾರ್ (Akshay Kumar) ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ರೆಡ್ ಲೆಹೆಂಗಾ (Red Lehenga) ಧರಿಸಿ ನೋರಾ ಜೊತೆ ಕುಣಿದ ಬಿಟೌನ್ ಕಿಲಾಡಿ ಅಕ್ಷಯ್ ಈಗ ಭರ್ಜರಿ ಟ್ರೋಲ್ ಆಗ್ತಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ

    ಇತ್ತೀಚಿಗೆ ಅಕ್ಷಯ್ ಕುಮಾರ್ (Akshay Kumar) ಏನೇ ಮಾಡಿದ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿ ಸಿಲುಕಿರುವ ನಟ ಇದೀಗ ನಟಿ ನೋರಾ ಜೊತೆ ಕುಣಿದು ಸಖತ್ ಟ್ರೋಲ್ ಆಗಿದ್ದಾರೆ. ನೋರಾ ಜೊತೆ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿರುವ ಅಕ್ಷಯ್‌‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಷಯ್ ಮತ್ತು ನೋರಾ ಡಾನ್ಸ್ ನೋಡಿ ನೆಟ್ಟಿಗರು ಬೇಕಾಬಿಟ್ಟಿ ಕಾಮೆಂಟ್ ಮಾಡುತ್ತಿದ್ದಾರೆ.

    ಅಕ್ಷಯ್ ಕುಮಾರ್ ಸದ್ಯ ನೋರಾ, ದಿಶಾ ಪಟಾನಿ, ಮೌನಿ ರಾಯ್ ಮತ್ತು ಇತರರೊಂದಿಗೆ ಕಾರ್ಯಕ್ರಮವೊಂದಕ್ಕಾಗಿ USA ಟೂರ್‌ನಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಅಕ್ಷಯ್, ನಟಿ ನೋರಾ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಕೆಂಪು ಬಣ್ಣದ ಲೆಹೆಂಗಾ ಧರಿಸಿ ಹೆಜ್ಜೆ ಹಾಕಿದ್ದಾರೆ. ನೋರಾ ಫತೇಹಿ ಕೆಂಪು ಬಣ್ಣದ ಮಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಡಾನ್ಸ್ ಮಾಡುತ್ತಾ ಅಕ್ಷಯ್ ಲೆಹೆಂಗಾ ಬಿಚ್ಚಿ ಹಾಕಿ ನೋರಾ ಅವರನ್ನು ಎಳೆದುಕೊಳ್ಳುತ್ತಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

    ಅಕ್ಷಯ್ ಕುಮಾರ್ ಡಾನ್ಸ್ ನೋಡಿ ನೆಟ್ಟಿಗರು ಸಿನಿಮಾದಿಂದ ಅಂತೂ ಹಣ ಬರುತ್ತಿಲ್ಲ. ಹಾಗಾಗಿ ಹಿಂಗಾದ್ರು ಹಣ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.

  • ಸೋಲಿನ ಹೊಣೆಹೊತ್ತ ಅಕ್ಷಯ್ ಕುಮಾರ್ : ಕೊನೆಗೂ ಗೆದ್ದ ಕಂಗನಾ

    ಸೋಲಿನ ಹೊಣೆಹೊತ್ತ ಅಕ್ಷಯ್ ಕುಮಾರ್ : ಕೊನೆಗೂ ಗೆದ್ದ ಕಂಗನಾ

    ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಸೆಲ್ಫೀ ಸಿನಿಮಾ ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಅಂದುಕೊಂಡಷ್ಟು ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಮಕಾಡೆ ಮಲಗಿದೆ. ಈ ಸೋಲಿನ ಹೊಣೆಯನ್ನು ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ. ಇಡೀ ಸೋಲನ್ನು ನಾನೊಬ್ಬನೇ ಹೊತ್ತುಕೊಳ್ಳುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಸೋಲು ನನಗೇನೂ ಹೊಸದಲ್ಲ ಎಂದು ಅವರು ಆಡಿದ್ದಾರೆ.

    ನನ್ನ ಸಿನಿಮಾಗಳ ಗೆಲುವು ಎಷ್ಟಿದೆಯೋ, ಸೋಲು ಅಷ್ಟೇ ಇದೆ. ಸತತವಾಗಿ ನನ್ನ ಸಿನಿಮಾಗಳು ಸೋತಿವೆ. ಮತ್ತೆ ಗೆದ್ದಿದ್ದೇನೆ. ಹಾಗಾಗಿ ಸೋಲು ನನಗೆ ಹೊಸದಲ್ಲ. ಇದರಿಂದ ಪಾಠ ಕಲಿತುಕೊಳ್ಳುತ್ತಲೇ ಬಂದಿದ್ದೇನೆ. ಈಗಲೂ ಕಲಿಯುತ್ತೇನೆ. ಇದೊಂದು ಎಚ್ಚರಿಕೆಯ ಪಾಠವಾಗಿ ನಾನು ತಗೆದುಕೊಳ್ಳುತ್ತೇನೆ. ಈ ಸಿನಿಮಾವನ್ನು ಪ್ರೇಕ್ಷಕರು ನೋಡಲಿಲ್ಲ ಎಂದು ಅವರನ್ನು ದೂಷಿಸುವುದು ತಪ್ಪು ಎಂದಿದ್ದಾರೆ ಅಕ್ಷಯ್.

    ನಿನ್ನೆಯಷ್ಟೇ ಸೆಲ್ಫಿ ಸೋಲಿನ ಬಗ್ಗೆ ಕಂಗನಾ ಟೀಕೆ ಮಾಡಿದ್ದರು. ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ಈ ಪ್ರಮಾಣದಲ್ಲಿ ಹೀನಾಯವಾಗಿ ಸೋಲ್ತಿದೆಯಾ ಎಂದು ಅನುಮಾನ ಬರುವಂತೆ ಹಣದ ಲೆಕ್ಕವನ್ನು ಕಂಗನಾ ಹಾಕಿದ್ದರು. ಕಂಗನಾ ಲೆಕ್ಕಾ ಹಾಕುವುದಕ್ಕೂ ಅಕ್ಷಯ್ ಸೋಲನ್ನು ಒಪ್ಪಿಕೊಂಡಿದ್ದಕ್ಕೂ ಒಂದು ರೀತಿ ಕಾಕತಾಳೀಯವಾದರೂ, ಕಂಗನಾ ಗೆದ್ದು ಬೀಗುತ್ತಿರುವುದು ಸುಳ್ಳಲ್ಲ.

    ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರದಂತೆ ಸೆಲ್ಫೀ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಮೂರು ಕೋಟಿ ಎಂದು ಅಂದಾಜಿಸಲಾಗಿದೆ. ಅಕ್ಷಯ್ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಹಣ ಗಳಿಸಿದ ಸಿನಿಮಾ ಎನ್ನುವ ಅಪಕೀರ್ತಿಗೂ ಕಾರಣವಾಗಿದೆ. ಈ ನಡುವೆ ಉರಿವ ಬೆಂಕಿಗೆ ತುಪ್ಪ ಹಾಕುವಂತೆ ಕಂಗನಾ ತಮ್ಮದೇ ಆದ ಲೆಕ್ಕಾಚಾರವನ್ನು ಕೊಟ್ಟಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ ಹತ್ತು ಲಕ್ಷ ರೂಪಾಯಿ ಮಾತ್ರ ಎಂದು ಬರೆದುಕೊಂಡಿದ್ದಾರೆ.

    ಕಂಗನಾ ನಟನೆಯ ‘ಧಾಕಡ್’ ಸಿನಿಮಾ ರಿಲೀಸ್ ಆದಾಗ ಬಾಲಿವುಡ್ ನ ಅನೇಕರು  ಚಿತ್ರವನ್ನು ಸೋಲಿಸಲು ನಾನಾ ರೀತಿಯಲ್ಲಿ ಪ್ರಯತ್ನಪಟ್ಟರಂತೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾತನಾಡಿದರಂತೆ. ಮೊದಲ ದಿನವೇ ಸಿನಿಮಾ ಸೋತಿದೆ ಎಂದು ಅಪಪ್ರಚಾರ ಮಾಡಿದರಂತೆ. ಆದರೆ, ಸೆಲ್ಫೀ ಬಗ್ಗೆ ಯಾರೂ, ಏಕೆ ಮಾತನಾಡುತ್ತಿಲ್ಲ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ತಮಗೆ ಅಪಹಾಸ್ಯ ಮಾಡಿದಂತೆ ಸೆಲ್ಫೀ ತಂಡಕ್ಕೆ ಯಾರೂ ಏಕೆ ಅಪಹಾಸ್ಯ ಮಾಡುತ್ತಿಲ್ಲ ಎಂದು ಕೇಳಿದ್ದಾರೆ.

  • ‘ಸೆಲ್ಫೀ’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗಪಡಿಸಿದ ಕಂಗನಾ: ಅಕ್ಷಯ್ ಚಿತ್ರಗಳಿಸಿದ್ದು 10 ಲಕ್ಷವಾ?

    ‘ಸೆಲ್ಫೀ’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗಪಡಿಸಿದ ಕಂಗನಾ: ಅಕ್ಷಯ್ ಚಿತ್ರಗಳಿಸಿದ್ದು 10 ಲಕ್ಷವಾ?

    ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತೆ ನಿರ್ಮಾಪಕ ಕರಣ್ ಜೋಹಾರ್ (Karan Johar) ವಿರುದ್ಧ ಯುದ್ಧ ಸಾರಿದ್ದಾರೆ. ಕರಣ್ ಕೂಡ ಹಣ ಹೂಡಿರುವ ‘ಸೆಲ್ಫೀ’ (Selfie) ಸಿನಿಮಾ ನಿನ್ನೆ ರಿಲೀಸ್ ಆಗಿದ್ದು, ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ಈ ಪ್ರಮಾಣದಲ್ಲಿ ಹೀನಾಯವಾಗಿ ಸೋಲ್ತಿದೆಯಾ ಎಂದು ಅನುಮಾನ ಬರುವಂತೆ ಹಣದ ಲೆಕ್ಕಹಾಕಿದ್ದಾರೆ.

    ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರದಂತೆ ಸೆಲ್ಫೀ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಮೂರು ಕೋಟಿ ಎಂದು ಅಂದಾಜಿಸಲಾಗಿದೆ. ಅಕ್ಷಯ್ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಹಣ ಗಳಿಸಿದ ಸಿನಿಮಾ ಎನ್ನುವ ಅಪಕೀರ್ತಿಗೂ ಕಾರಣವಾಗಿದೆ. ಈ ನಡುವೆ ಉರಿವ ಬೆಂಕಿಗೆ ತುಪ್ಪ ಹಾಕುವಂತೆ ಕಂಗನಾ ತಮ್ಮದೇ ಆದ ಲೆಕ್ಕಾಚಾರವನ್ನು ಕೊಟ್ಟಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ ಹತ್ತು ಲಕ್ಷ ರೂಪಾಯಿ ಮಾತ್ರ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಕಂಗನಾ ನಟನೆಯ ‘ಧಾಕಡ್’ ಸಿನಿಮಾ ರಿಲೀಸ್ ಆದಾಗ ಬಾಲಿವುಡ್ ನ ಅನೇಕರು  ಚಿತ್ರವನ್ನು ಸೋಲಿಸಲು ನಾನಾ ರೀತಿಯಲ್ಲಿ ಪ್ರಯತ್ನಪಟ್ಟರಂತೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾತನಾಡಿದರಂತೆ. ಮೊದಲ ದಿನವೇ ಸಿನಿಮಾ ಸೋತಿದೆ ಎಂದು ಅಪಪ್ರಚಾರ ಮಾಡಿದರಂತೆ. ಆದರೆ, ಸೆಲ್ಫೀ ಬಗ್ಗೆ ಯಾರೂ, ಏಕೆ ಮಾತನಾಡುತ್ತಿಲ್ಲ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ತಮಗೆ ಅಪಹಾಸ್ಯ ಮಾಡಿದಂತೆ ಸೆಲ್ಫೀ ತಂಡಕ್ಕೆ ಯಾರೂ ಏಕೆ ಅಪಹಾಸ್ಯ ಮಾಡುತ್ತಿಲ್ಲ ಎಂದು ಕೇಳಿದ್ದಾರೆ.

  • ಬಾಯ್ಕಾಟ್ ಗ್ಯಾಂಗಿಗೆ ಅಕ್ಷಯ್ ಕುಮಾರ್ ತಿರುಗೇಟು: ಶಾರುಖ್ ಪರ ನಿಂತ ನಟ

    ಬಾಯ್ಕಾಟ್ ಗ್ಯಾಂಗಿಗೆ ಅಕ್ಷಯ್ ಕುಮಾರ್ ತಿರುಗೇಟು: ಶಾರುಖ್ ಪರ ನಿಂತ ನಟ

    ಬಾಲಿವುಡ್ ನಲ್ಲಿ ಬಾಯ್ಕಾಟ್ ಕಾವು ಜೋರಾಗಿದೆ. ಇದಕ್ಕೆ ಬಾಲಿವುಡ್ ನಿರ್ಮಾಪಕರು ಬೇಸತ್ತು ಹೋಗಿದ್ದಾರೆ. ಬಾಯ್ಕಾಟ್ ಗಾಳಿ ಎಷ್ಟೇ ಜೋರಾದರೂ, ಪಠಾಣ್ ಸಿನಿಮಾವನ್ನು ಏನೂ ಮಾಡುವುದಕ್ಕೆ ಆಗಲಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಸಿನಿಮಾ ಸೆಲ್ಫಿಯಲ್ಲಿ ಬಾಯ್ಕಾಟ್ ಮಾಡುವವರನ್ನೇ ಟ್ರೋಲ್ ಮಾಡಿದ್ದಾರೆ. ಈ ಮೂಲಕ ಅಕ್ಷಯ್ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಸಡನ್ನಾಗಿ ಶಾರುಖ್ ಪರ ಅಕ್ಷಯ್ ನಿಂತಿದ್ದು ಅಚ್ಚರಿಯನ್ನೂ ಮೂಡಿಸಿದೆ.

    ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಗೆಲುವನ್ನು ಅನೇಕರು, ಅನೇಕ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ರಂಗಕ್ಕೆ ಚೈತನ್ಯ ತುಂಬಿದ ಸಿನಿಮಾವಿದು ಎಂದು ಕೆಲವರು ಪ್ರಶಂಸೆ ಮಾಡುತ್ತಿದ್ದರೆ, ಶಾರುಖ್ ವಿರೋಧಿಗಳು ಈ ಗೆಲುವನ್ನು ಅರ್ಥೈಸುತ್ತಿರುವ ಪರಿಯೇ ವಿಚಿತ್ರವಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬಾಯ್ಕಾಟ್ ಪರಿಯನ್ನೇ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

    ಪಠಾಣ್ ಸಿನಿಮಾ ಅತೀ ಹೆಚ್ಚು ಜನರಿಗೆ ತಲುಪುವಂತೆ ಮಾಡಿದ್ದು, ಸಿನಿಮಾದ ಕಂಟೆಂಟ್ ಗಿಂತಲೂ ವಿರೋಧಿಗಳು ನಡೆಸಿದ ಬಾಯ್ಕಾಟ್ ಎನ್ನುವ ಮಾತಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವು ಪ್ರತಿಭಟನೆಗಳು ಕೂಡ ನಡೆದವು. ಈ ಬಾಯ್ಕಾಟ್ ಸಿನಿಮಾಗೆ ವರವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಆ ಬಾಯ್ಕಾಟ್ ಬಗ್ಗೆಯೇ ಅಗ್ನಿಹೋತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ‘ನಿಜವಾಗಿಯೂ ಬಾಯ್ಕಾಟ್ ಮಾಡಿದ್ದು ಯಾರು? ಶಾರುಖ್ ಖಾನ್ ಅವರ ಗ್ಯಾಂಗೇ ಈ ರೀತಿಯಲ್ಲಿ ಪ್ರಚಾರ ಮಾಡಿತಾ ಎನ್ನುವ ಅನುಮಾನ ನನ್ನದು. ಬಾಯ್ಕಾಟ್ ಎನ್ನುವುದು ಸಿನಿಮಾ ಪ್ರಚಾರದ ಒಂದು ಭಾಗ ಆಗಿತ್ತಾ? ‘ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪಠಾಣ್ ಗೆಲುವನ್ನು ತಾವು ಗೆಲುವು ಎಂದು ಕರೆಯುವುದಿಲ್ಲ ಎಂದೂ ಅವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಸ್ತಿ ವಿಚಾರಕ್ಕೆ ಸೋದರ ಸಂಬಂಧಿಯ ತಲೆಯನ್ನೇ ಕಡಿದ್ರು – ಸೆಲ್ಫಿ ತೆಗೆದು ವಿಕೃತಿ ಮೆರೆದ್ರು

    ರಾಂಚಿ: ಆಸ್ತಿ (Property) ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯ (Cousin) ತಲೆಯನ್ನೇ ಕಡಿದು (beheading) ಹತ್ಯೆ ಮಾಡಿದ್ದಲ್ಲದೇ (Murder) ಆತನ ತಲೆಯನ್ನು ಹಿಡಿದುಕೊಂಡು ಸೆಲ್ಫಿಯನ್ನೂ (Selfie) ತೆಗೆದು ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ (Jharkhand) ಖುಂಟಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವ್ಯಕ್ತಿ, ಆತನ ಪತ್ನಿ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    20 ವರ್ಷದ ವ್ಯಕ್ತಿ ಸೋದರ ಸಂಬಂಧಿಯ ತಲೆ ಕಡಿದಿದ್ದಾನೆ. ಬಳಿಕ ಆ ತಲೆಯನ್ನು ಹಿಡಿದುಕೊಂಡು ಆತನ ಸ್ನೇಹಿತರು ಸೆಲ್ಫಿ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಯಾದ ವ್ಯಕ್ತಿಯ ತಂದೆ ದೇಸಾಯಿ ಮುಂಡಾ ತನ್ನ ಮಗ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಅವರು ಡಿಸೆಂಬರ್ 1 ರಂದು ಭತ್ತದ ಗದ್ದೆಯಲ್ಲಿ ಕೆಲಸಕ್ಕೆಂದು ಹೋಗಿದ್ದು, ತಮ್ಮ ಮಗ ಮನೆಯಲ್ಲಿ ಒಬ್ಬನೇ ಇದ್ದ. ಮನೆಗೆ ಹಿಂದಿರುಗಿದಾಗ ಮಗನನ್ನು ಅಪಹರಿಸಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಬಳಿಕ ಹುಡುಕಾಡಿದರೂ ಮಗ ಎಲ್ಲಿಯೂ ಸಿಗದ ಹಿನ್ನೆಲೆ ದೇಸಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    ಎಫ್‌ಐಆರ್ ದಾಖಲಿಸಿಕೊಂಡ ಖುಂಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿ ಸಾಗರ್ ಮುಂಡಾನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದ ದುಲ್ವಾ ತುಂಗ್ರಿ ಪ್ರದೇಶದ ಅರಣ್ಯದಲ್ಲಿ ಮೃತ ವ್ಯಕ್ತಿಯ ತಲೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    crime

    ಮೃತನ ಕುಟುಂಬ ಹಾಗೂ ಆರೋಪಿಗಳ ನಡುವೆ ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದಲೇ ಕಲಹವಿತ್ತು. ಈ ಕಾರಣಕ್ಕೆ ಆರೋಪಿಗಳು ಶಿರಚ್ಛೇದ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಂದ ಪೊಲೀಸರು 6 ಮೊಬೈಲ್ ಫೋನ್‌ಗಳು, 2 ಹರಿತವಾದ ರಕ್ತಸಿಕ್ತ ಆಯುಧಗಳು, 1 ಕೊಡಲಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಸೆಲ್ಫಿ ಕ್ರೇಜ್‍- ಕಾಲುಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಶವವಾಗಿ ಪತ್ತೆ

    ಸೆಲ್ಫಿ ಕ್ರೇಜ್‍- ಕಾಲುಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಶವವಾಗಿ ಪತ್ತೆ

    ರಾಯಚೂರು: ಸೆಲ್ಫಿ (Selfie) ಕ್ರೇಜ್‍ನಿಂದ ಕಾಲುಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Student) ಶವವಾಗಿ ಪತ್ತೆಯಾದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.

    ರಾಯಚೂರು ತಾಲೂಕಿನ ಕಲಮಲಾ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಹೈಡ್ರಲ್ ಪ್ರಾಜೆಕ್ಟ್‌ನಲ್ಲಿ ಈ ಘಟನೆ ನಡೆದಿದೆ. ರಾಯಚೂರಿನ ಬೆಸ್ಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್(16) ಮತ್ತು ವೈಭವ (16) ಮೃತರು. ಪಿಕ್ನಿಕ್‍ಗಾಗಿ ಬಂದಿದ್ದ ವೇಳೆ ವಿದ್ಯಾರ್ಥಿಗಳು ಸೆಲ್ಫಿ ತೆಗೆಯುವಾಗ ಕಾಲುವೆಗೆ ಬಿದ್ದಿದ್ದಾರೆ. ಅದಾದ ಬಳಿಕ ನಾಪತ್ತೆ ಆಗಿದ್ದರು. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    crime

    ನಿನ್ನೆ ಸಂಜೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಇಂದು ಎನ್‍.ಆರ್. ಶೆಟ್ಟಿಯ ಮುಚ್ಚಿರುವ ಹೈಡ್ರಲ್ ಪ್ರಾಜೆಕ್ಟ್‌ನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿಯ ಹೊಸ ಜೀಪ್ ಓಡಿಸಿ ಮಹಿಳೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರೇಣುಕಾಚಾರ್ಯ

    ಅಭಿಮಾನಿಯ ಹೊಸ ಜೀಪ್ ಓಡಿಸಿ ಮಹಿಳೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರೇಣುಕಾಚಾರ್ಯ

    ಹಾವೇರಿ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಅಭಿಮಾನಿಯ ಹೊಸ ಜೀಪ್ ಓಡಿಸಿ, ಮಹಿಳೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಮನಸೆಳೆದಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷನ ಪುತ್ರನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಎಂ.ಪಿ ರೇಣುಕಾಚಾರ್ಯ ಆಗಮಿಸಿದ್ದರು. ಮಗನ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು – ವೀಡಿಯೋ ವೈರಲ್


    ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಅಭಿಮಾನಿಯೋರ್ವನ ಮನದಾಸೆಯಂತೆ ಹೊಸ ಜೀಪ್ ಓಡಿಸಿ ರೇಣುಕಾಚಾರ್ಯ ಬಯಕೆ ತೀರಿಸಿದರು. ಬಳಿಕ ರೇಣುಕಾಚಾರ್ಯ ಜೊತೆ ಆಶಾ ಕಾರ್ಯಕರ್ತೆಯರು ಹಾಗೂ ಬಿಜೆಪಿ ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದಿದ್ದರು. ಈ ವೇಳೆ ರೇಣುಕಾಚಾರ್ಯ ಆಶಾ ಕಾರ್ಯಕರ್ತೆಯರ ಮೊಬೈಲ್ ತೆಗೆದುಕೊಂಡು ಸೆಲ್ಫಿಗೆ ಪೋಸ್ ನೀಡಿದರು. ಇದನ್ನೂ ಓದಿ: ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಬಿದ್ದು ಬೆಂಕಿ – ಇಬ್ಬರು ಸುಟ್ಟು ಕರಕಲು, ಚಾಲಕ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆ ನೀರು ಪಾಲಾದ ಯುವಕ

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆ ನೀರು ಪಾಲಾದ ಯುವಕ

    ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೊಬ್ಬ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.

    ಕಿರಣ್ ರಜಪೂತ(22) ಮೃತ ಯುವಕನಾಗಿದ್ದಾನೆ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿಯಾಗಿರುವ ಕಿರಣ್, ಭಾನುವಾರ ತನ್ನ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಜಲಾಶಯದ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದರಿಂದ ಕಿರಣ್ ಕೊಚ್ಚಿ ಹೋಗಿದ್ದಾನೆ. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ

     ಕಳೆದ 24 ಗಂಟೆಯಿಂದ ಕಿರಣ್‍ಗಾಗಿ ಹುಡುಕಾಟ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಇದೀಗ ಮೃತದೇಹ ಪತ್ತೆಯಾಗಿದ್ದು, ಕಿರಣ್ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ

    Live Tv
    [brid partner=56869869 player=32851 video=960834 autoplay=true]