Tag: selfie video

  • ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

    ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

    ವಾಷಿಂಗ್ಟನ್ : ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬನ ಸೆಲ್ಫಿ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.

    ಕೆಲವೊಂದು ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸಂಚರಿಸುತ್ತವೆ. ಇದೀಗ ಅಂತಹುದೇ ವಿಡಿಯೋ ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ. ಅಮೆರಿಕದ ಯುವಕನೊಬ್ಬ ಶೋ ರೂಮ್ ನಲ್ಲಿ ಮಾಡಿರುವ ಸೆಲ್ಫಿ ವಿಡಿಯೋ ನೋಡುಗರನ್ನು ಒಂದು ಕ್ಷಣ ಚಕಿತಗೊಳಿಸುತ್ತದೆ.

    ಶಾನ್ ಎಂಬ ಯುವಕ ತನ್ನ ಸೋದರನ ಜೊತೆಗೆ ಬಟ್ಟೆ ಖರೀದಿಗಾಗಿ ಶೋ ರೂಮಿಗೆ ತೆರಳಿದ್ದಾನೆ. ಡ್ರೆಸ್ ಟ್ರಯಲ್ ರೂಮ್ ನಲ್ಲಿ ಬಹಳಷ್ಟು ಕನ್ನಡಿಗಳನ್ನು ನೋಡಿದ ಕೂಡಲೇ ಈ ವಿಡಿಯೋ ಮಾಡಿದ್ದಾನೆ. ಕನ್ನಡಿಯಲ್ಲಿ ಆತನ ಪ್ರತಿಬಿಂಬ ಕಾಣುತ್ತಿರುತ್ತದೆ. ವಿಡಿಯೋ ಜೂಮ್ ಮಾಡುತ್ತಾ ಹೋದಂತೆ ಮತ್ತೊಮ್ಮೆ ಶಾನ್ ಕಾಣಿಸಿಕೊಳ್ಳುತ್ತಾನೆ. ಹೀಗೆ ವಿಡಿಯೋ ಜೂಮ್ ಆಗುತ್ತಾ ಹೋದಂತೆ ಕ್ಷಣಾರ್ಧದಲ್ಲಿ ಶಾನ್ ಅಂಗಡಿ ಮಧ್ಯೆ ಕಾಣಿಸಿಕೊಂಡು ನಗುತ್ತಾನೆ.

    ನೆಟ್ಟಿಗರು ಇದೊಂದು ಎಡಿಟ್ ವಿಡಿಯೋ ಎಂದ್ರೆ, ಕೆಲವರು ಈ ರೀತಿ ಮಾಡಲು ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಬ್ಬರು ಅವಳಿ ಸೋದರರು ಸೇರಿ ಸೆಲ್ಫಿ ವಿಡಿಯೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪತ್ರಿಕೆ ಜೊತೆ ಮಾತನಾಡಿರುವ ಶಾನ್, ಯಾವುದೇ ಎಡಿಟಿಂಗ್ ವಿಡಿಯೋ ಅಲ್ಲ. ಅಲ್ಲಿಯ ಕನ್ನಡಿಗಳಿಂದ ಈ ರೀತಿ ಮಾಡಲು ಸಾಧ್ಯವಾಯ್ತು ಎಂದು ಸ್ಪಷ್ಟಪಡಿಸಿದ್ದಾನೆ.

    https://www.instagram.com/p/BscEVsbhm-j/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

    ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಪತ್ನಿ, ಹೆತ್ತವರು, ಗೆಳೆಯರು ಹಾಗೂ ಕುಟುಂಬಸ್ಥರು ಭಾವುಕರಾಗುತ್ತಿದ್ದಾರೆ.

    ಕೆಲವು ದಿನಗಳ ಹಿಂದೆ ಹುತಾತ್ಮ ಯೋಧ ಗುರು ಅವರು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಒಂದು ಸೆಲ್ಫಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಈ ವಿಡಿಯೋದಲ್ಲಿ ಅವರ ಮೇಲೆ ಇಬ್ಬನಿ ಬೀಳುತ್ತಿದ್ದು, ಕಾಶ್ಮೀರ್ ಎಂದು ಹೇಳಿ ಅಲ್ಲಿ ನಿಂತು ಹಾಯ್ ಮಾಡಿದ್ದಾರೆ.

    ಈ ವಿಡಿಯೋವನ್ನು ಗುರು ಅವರ ತಮ್ಮ, ಗೆಳೆಯರು ಹಾಗೂ ಕುಟುಂಬದವರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಇದೀಗ ಅವರ ಗೆಳೆಯರು ಹಾಗೂ ಕುಟುಂಬದವರು ಈ ವಿಡಿಯೋವನ್ನು ನೋಡುತ್ತಾ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಗುರುವಿಗೆ ಮದುವೆ ಆಗಿ 8 ತಿಂಗಳು ಆಗಿತ್ತು. ನನ್ನ ಮಗ ಚೆನ್ನಾಗಿ ಇರಲಿ ಎಂದು ಮಗನಿಗೆ ಮದುವೆ ಮಾಡಿದೆ. ಬಳಿಕ ಕೆಲಸಕ್ಕೆ ಹೋಗೋದು ಬೇಡ ಎಂದು ಹೇಳಿದ್ದೆ. ಆದರೆ ನಾನು ದೇಶ ಸೇವೆ ಮಾಡಬೇಕು ಎಂದು ಹಠದಲ್ಲಿ ರಜೆ ಮುಗಿಸಿಕೊಂಡು ಹೋದವನು ಹಿಂದಿರುಗಿ ಬರಲೇ ಇಲ್ಲ ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕೋಳಮ್ಮ ಹೇಳುತ್ತಾ ಅವರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

    https://www.youtube.com/watch?v=lavakLJVgvg&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಮಾಲೀಕ ಯತ್ನ

    ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಮಾಲೀಕ ಯತ್ನ

    ಚಿಕ್ಕಬಳ್ಳಾಪುರ: ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ವಿಚಾರದಲ್ಲಿ ಇಬ್ಬರು ಮಾಲೀಕರುಗಳ ನಡುವಿನ ಗಲಾಟೆ, ಗೊಂದಲ, ಮನಸ್ತಾಪದಿಂದ ಓರ್ವ ಮಾಲೀಕ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಜಾತ್ರೆಯಲ್ಲಿ ನಡೆದಿದೆ.

    ಅಮ್ಯೂಸ್‍ಮೆಂಟ್ ಪಾರ್ಕಿನ ಮಾಲೀಕ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳಲ್ಲಿ, ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಮಾಡುವುದರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿ ಶ್ರೀನಿವಾಸ್ ಹಾಗೂ ಬೆಂಗಳೂರು ಮೂಲದ ರಾಜೇಶ್ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಎಂದಿನಂತೆ ಈ ಬಾರಿ ಜಿಲ್ಲೆಯ ಚಿತ್ರಾವತಿ ಬಳಿ ಇರುವ ಶ್ರೀ ಸುಬ್ರಮ್ಮಣ್ಯಶ್ವರ ಜಾತ್ರೆಯಲ್ಲಿ ಸ್ಪರ್ಧೆಗಿಳಿದು ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದರು.

    ಆದರೆ ಒಂದೇ ಜಾಗದಲ್ಲಿ ಎರಡೆರಡು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ ಕಾರಣ ಇಬ್ಬರಿಗೂ ನಷ್ಟವಾಗಿದೆ. ಮತ್ತೊಂದೆಡೆ ರಾಜೇಶ್ ಕಡೆಯವರು ತನಗೆ ಪ್ರಾಣ ಬೆದರಿಕೆ ಹಾಕಿ ಪದೆ ಪದೆ ತನಗೆ ತೊಂದರೆ ನಿಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸ್ ಇಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಸ್ಥಳಿಯರು ಶ್ರೀನಿವಾಸ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮತ್ತೊಂದೆಡೆ ಶ್ರೀನಿವಾಸ್ ಆರೋಪ ಅಲ್ಲಗಳೆದಿರುವ ರಾಜೇಶ, ತಾವು ಜಾತ್ರೆ ಆರಂಭವಾಗುವುದಕ್ಕೂ ಮುನ್ನ ಚಿತ್ರಾವತಿಯಲ್ಲಿ ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದೆ, ನಂತರ ಬಂದ ಶ್ರೀನಿವಾಸ್, ಹಠಕ್ಕೆ ಬಿದ್ದವರಂತೆ ತಮ್ಮ ಎದರುಗಡೆಯೇ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ್ದರು. ಅವರ ವ್ಯಾಪಾರ ಅವರದು ನಮ್ಮ ವ್ಯಾಪಾರ ನಮ್ಮದು, ಶ್ರೀನಿವಾಸ್ ಮೈತುಂಬ ಸಾಲ ಮಾಡಿಕೊಂಡು ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುವುದೇ ಆತನ ಕಾಯಕ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮೊಬೈಲ್ ಕರೆಗೆ ರಾಜೇಶ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ಯಾರಾ ಮೋಟಾರ್ ನಲ್ಲಿ ಆಗಸಕ್ಕೆ ಜಿಗಿದು ಸೆಲ್ಫಿ ವೀಡಿಯೋ ಮಾಡಿದ್ರು ಶುಭಾಪೂಂಜಾ

    ಪ್ಯಾರಾ ಮೋಟಾರ್ ನಲ್ಲಿ ಆಗಸಕ್ಕೆ ಜಿಗಿದು ಸೆಲ್ಫಿ ವೀಡಿಯೋ ಮಾಡಿದ್ರು ಶುಭಾಪೂಂಜಾ

    ಕಾರವಾರ: ವಿಮಾನದಲ್ಲಿ ಕಿಟಕಿ ಪಕ್ಕ ಕೂತು ಪ್ರಯಾಣ ಬೆಳೆಸುವುದು ಅಂದರೆ ಬಹಳಷ್ಟು ಜನರು ಭಯಪಡುವ ವೇಳೆ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾಪೂಂಜಾ ಪ್ಯಾರಾ ಮೋಟಾರ್ ನಲ್ಲಿ 500 ರಿಂದ ಸಾವಿರ ಅಡಿ ಎತ್ತರಕ್ಕೆ ಜಿಗಿದು ಸೆಲ್ಫಿ ವೀಡಿಯೋ ಮಾಡಿದ್ದಾರೆ.

    ನಿತ್ಯ ಬೆಂಗಳೂರಿನ ಟ್ರಾಫಿಕ್ ನಡುವೆ ಸಿಕ್ಕು, ಯಾಕ್ಷನ್ ಕಟ್ ಎಂದು ಬ್ಯುಸಿಯಾಗಿರುವ ನಟಿ ಶುಭಾಪೂಂಜಾ ಇಂದು ಕಾರವಾರದ ಕಡಲತೀರಕ್ಕೆ ಆಗಮಿಸಿ ಸಮುದ್ರ ತೀರದ ಪ್ಯಾರಾಮೋಟರ್ ನಲ್ಲಿ ಕುಳಿತು ಹಕ್ಕಿಯಂತೆ ಹಾರಾಡಿ ಸೆಲ್ಫಿ ವೀಡಿಯೋ ತೆಗೆದು ಎಂಜಾಯ್ ಮಾಡಿದ್ದಾರೆ.

    ಸುಮಾರು ಹತ್ತು ನಿಮಿಷಗಳ ಕಾಲ ಆಕಾಶದಲ್ಲಿ ತೇಲಿ ಕಾರವಾರದ ಸುಂದರ ಪರಿಸರವನ್ನು ವೀಕ್ಷಿಸಿದ ಶೂಭಾಪೂಂಜಾ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದರು. ಇದೇ ಮೊದಲ ಬಾರಿಗೆ ಪ್ಯಾರಾಮೋಟರ್ ನಲ್ಲಿ ಆಕಾಶದಲ್ಲಿ ಹಾರಾಡಿದ್ದೇನೆ. ಮೇಲಿನಿಂದ ಸುಂದರ ಪರಿಸರವನ್ನು ನೋಡುವುದು ತುಂಬಾ ಥ್ರಿಲ್ ಆಗಿರುತ್ತೆ. ಕಾರವಾರದ ಸಮುದ್ರ ನೀಲಿ ಆಕಾರದಲ್ಲಿ ಕಾಣುತಿತ್ತು, ಎರಡು ಕಿಲೋಮೀಟರ್ ಹೆಚ್ಚು ದೂರ ಕ್ರಮಿಸಿ ತುಂಬಾ ಎಂಜಾಯ್ ಮಾಡಿದ್ದೇನೆ ಎಂದು ತಿಳಿಸಿದರು.

     

  • ಮಾಜಿ ಲವ್ವರ್ ಗೆ ಸೆಲ್ಫಿ ವಿಡಿಯೋ ಸೆಂಡ್ ಮಾಡಿ ನವ ವಧು ಆತ್ಮಹತ್ಯೆ!

    ಮಾಜಿ ಲವ್ವರ್ ಗೆ ಸೆಲ್ಫಿ ವಿಡಿಯೋ ಸೆಂಡ್ ಮಾಡಿ ನವ ವಧು ಆತ್ಮಹತ್ಯೆ!

    ಮುಂಬೈ: ಮದುವೆಗೆ ಇನ್ನು 10 ದಿನಗಳು ಇರುವಾಗ ಮಾಜಿ ಪ್ರಿಯಕರನಿಗೆ ಸೆಲ್ಫಿ ವಿಡಿಯೋ ಸೆಂಡ್ ಮಾಡಿ ನವವಧು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯಲ್ಲಿ ನಡೆದಿದೆ.

    ನಿಶಾ ದೇವಿದಾಸ್ ಆತ್ಮಹತ್ಯೆಗೆ ಶರಣಾದ ನವ ವಧು. ಫೆಬ್ರವರಿ 4 ರಂದು ನಿಶಾ ಮದುವೆ ನಿಶ್ಚಯವಾಗಿತ್ತು. ಆದರೆ ಕ್ರಿಮಿನಾಶಕ ವಿಷ ಸೇವಿಸಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಜಿಲ್ಲೆಯ ನಾಗ್ಪುರ ಸಮೀಪದ ರೋಹಿಣಿ ಗ್ರಾಮದಲ್ಲಿ ನಡೆದಿದೆ.

    ಮಾಜಿ ಪ್ರಿಯಕರ ನಿಶಾಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಇದರಿಂದ ಮನನೊಂದು ಲೈವ್ ಆಗಿ ವಿಷವನ್ನು ಸೇವಿಸಿ ಕೊನೆಯದಾಗಿ ಮಾತನಾಡಿದ್ದಾಳೆ. ಬಳಿಕ ಆ ವಿಡಿಯೋವನ್ನು ಆತನಿಗೆ ಕಳುಹಿಸಿದ್ದಾಳೆ. ಕುಟುಂಬದ ಸದಸ್ಯರಿಗೆ ವಿಷ ಸೇವಿಸಿದ್ದ ವಿಚಾರ ತಿಳಿದು ತಕ್ಷಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

    ನನ್ನ ಸಹೋದರಿ ಮದುವೆ ಫೆಬ್ರವರಿ 4 ರಂದು ನಿಶ್ಚಯವಾಗಿದ್ದು, ಮದುವೆಯ ಸಿದ್ಧತೆಗಳು ನಡೆಯುತ್ತಿದ್ದವು. ನನ್ನ ಸಹೋದರಿ ಸಾವಿಗೆ ನಿಖಿಲ್ ಕಾರಣನಾಗಿದ್ದಾನೆ. ಆತ ನನ್ನ ಸಹೋದರಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಇದರಿಂದ ಮನನೊಂದು ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಆದ್ದರಿಂದ ತಕ್ಷಣ ನಿಖಿಲ್‍ನನ್ನು ಬಂಧಿಸಿಬೇಕು ಎಂದು ನಿಶಾ ಸಹೋದರ ರವಿ ಕಾವ್ಲೇ ಹೇಳಿದ್ದಾರೆ.

    ಈ ಘಟನೆ ಸಂಬಂಧ ಲಖಾಂದುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

     

  • ಗೆಳೆಯನಿಗೆ ಪೊಲೀಸರು ವಾರ್ನ್ ಮಾಡಿದ್ದಕ್ಕೆ ಸೂಸೈಡ್ ಡ್ರಾಮಾ ಮಾಡಿದ್ಳಾ ಯುವತಿ?

    ಗೆಳೆಯನಿಗೆ ಪೊಲೀಸರು ವಾರ್ನ್ ಮಾಡಿದ್ದಕ್ಕೆ ಸೂಸೈಡ್ ಡ್ರಾಮಾ ಮಾಡಿದ್ಳಾ ಯುವತಿ?

    ಬೆಂಗಳೂರು: ಪೊಲೀಸರ ದುರ್ವರ್ತನೆಗೆ ಮನನೊಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

    ವೈಟ್‍ಫೀಲ್ಡ್ ಠಾಣೆಯ ಪಿಎಸ್‍ಐ ಸೋಮಶೇಖರ್, ಮುಖ್ಯ ಪೇದೆ ರೋಷನ್ ಅಲಿಖಾನ್ ವಿರುದ್ಧ ಯುವತಿ ಶಿಲ್ಪಾ ಹಾಗೂ ಆತನ ಗೆಳೆಯ ಷಡ್ಯಂತ್ರ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಹೇಂದ್ರ ಆಟೋ ಡ್ರೈವರ್‍ವೊಬ್ಬರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಆರೋಪಿ ಮಹೇಂದ್ರನನ್ನು ಠಾಣೆಗೆ ಕರೆಸಿ ಪಿಎಸ್‍ಐ ಸೋಮಶೇಖರ್ ಹಾಗೂ ಮುಖ್ಯ ಪೇದೆ ರೋಷನ್ ಅಲಿಖಾನ್ ಎಚ್ಚರಿಕೆ ನೀಡಿದ್ದರು.

    ಇದರಿಂದ ಮಹೇಂದ್ರನ ಗೆಳತಿ ಶಿಲ್ಪಾ ಆತ್ಮಹತ್ಯೆ ಯತ್ನ ನಾಟಕವಾಡಿ ಪೊಲೀಸರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯುವತಿ ಪೊಲೀಸ್ ಠಾಣೆಗೆ ದೂರನ್ನೇ ನೀಡಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿ ತನ್ನ ಗೆಳೆಯನಿಗಾಗಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.

    ನಡೆದಿದ್ದೇನು?: ಬುಧವಾರದಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕಾಡುಗೋಡಿಯ ಪಟಾಲಮ್ಮ ಲೇಔಟ್ ನಲ್ಲಿ ನಡೆದಿತ್ತು. ಪಟಾಲಮ್ಮ ಲೇಔಟ್ ನಿವಾಸಿಯಾದ ಶಿಕ್ಷಕಿ ಶಿಲ್ಪಾ ದೇವಾಲಯಕ್ಕೆ ತೆರಳುತ್ತಿದ್ದಾಗ ಬೈಕ್ ವಿಲೀಂಗ್ ಮಾಡಿ ಯುವಕರ ಗುಂಪು ಚುಡಾಯಿಸಿದ್ದಾರೆ. ಚುಡಾಯಿಸಿದ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಠಾಣೆಯ ಪಿಎಸ್‍ಐ ಸೋಮಶೇಖರ್ ಮತ್ತು ಮುಖ್ಯ ಪೇದೆ ರೋಷನ್ ಆಲಿಖಾನ್ ನನ್ನನ್ನು ಐದು ಗಂಟೆಗೂ ಹೆಚ್ಚು ಕಾಲ ಕಾಯಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೊತೆಗೆ ಜಾತಿನಿಂದನೆ ಮಾಡಿದಲ್ಲದೇ ನಿರ್ಲಕ್ಷ್ಯತನದಿಂದ ದೂರು ಸ್ವೀಕರಿಸಿದ್ದಾರೆ. ದೂರು ನೀಡಲು ಹೋದಾಗ ನೀನು ರೋಡಲ್ಲಿ ಯಾಕ್ ಓಡಾಡುತ್ತೀಯಾ, ಮನೆಯಲ್ಲಿ ಇರು, ಇದೆಲ್ಲಾ ಕಾಮನ್. ನೀವು ಯಾವ ಜಾತಿ ಎಂದು ವಿಚಾರಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು.

    ವಿಷಯ ತಿಳಿದ ಮಹೇಂದ್ರ ಶಿಲ್ಪಾಳನ್ನು ವೈಟ್ ಫೀಲ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

     

  • ತುಂಬಾ ನೋವು ಕೊಟ್ಬಿಟ್ಟೆ ಕಣೇ, sorry ಗುಡ್ ಬೈ ಎಂದು ಸೆಲ್ಫಿ ವಿಡಿಯೋ ಮಾಡಿಟ್ಟು ಯುವಕ ನೇಣಿಗೆ ಶರಣು

    ತುಂಬಾ ನೋವು ಕೊಟ್ಬಿಟ್ಟೆ ಕಣೇ, sorry ಗುಡ್ ಬೈ ಎಂದು ಸೆಲ್ಫಿ ವಿಡಿಯೋ ಮಾಡಿಟ್ಟು ಯುವಕ ನೇಣಿಗೆ ಶರಣು

    ಬೆಂಗಳೂರು: ಫೈನಾನ್ಸಿಯರ್ ಕಿರುಕುಳ ಹಾಗೂ ಪ್ರೀತಿ ಸಿಗದಿದ್ದಕ್ಕೆ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕುರುಬರಹಳ್ಳಿಯಲ್ಲಿ ನಡೆದಿದೆ

    26 ವರ್ಷದ ರಾಜೇಶ್ ನೇಣಿಗೆ ಶರಣಾದ ಯುವಕ. ಕಿರಣ್ ಅನ್ನೋರ ಬಳಿ ಸುಮಾರು 25 ಸಾವಿರ ರೂ. ಸಾಲ ಪಡೆದಿದ್ದರು. ಸಾಲವನ್ನು ಹಿಂದಿರುಗಿಸುವಂತೆ ಫೈನಾನ್ಸಿಯರ್ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದು ರಾಜೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಸೆಲ್ಫಿ ವಿಡಿಯೋದಲ್ಲೇನಿದೆ?: ಸಾಲ ಮಾಡಿರುವುದು ನಾನು. ಹೀಗಾಗಿ ನನ್ನ ಕುಟುಂಬದವರಿಗೆ ಯಾರೂ ತೊಂದರೆ ಕೊಡಬೇಡಿ ಎಂದು ಹೇಳಿರೋ ರಾಜೇಶ್, ಯಾರೂ ಸಾಲ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ತುಂಬಾ ನೋವು ಕೊಟ್ಬಿಟ್ಟೆ ಕಣೇ, ನಿನ್ನ ನಂಬಿದೆ. ನಿನಗೋಸ್ಕರ ಹೇಳಿದ್ದೆಲ್ಲಾ ಮಾಡಿದ್ದೆ. ನನ್ನ ಜೊತೆಯೇ ಇರುತ್ತೇನೆ ಎಂದು ಮಾತು ಕೊಟ್ಟೆ. ಆದರೆ ನೀನು ಮೋಸ ಮಾಡಿಬಿಟ್ಟೆ. ಐ ಲವ್ ಯು ರಾ.. ಎಂದು ಹುಡುಗಿಯೊಬ್ಬಳ ಬಗ್ಗೆ ಮಾತನಾಡಿದ್ದಾರೆ. ರಾಜೇಶ್ ಮದುವೆಯಾಗಿದ್ದ ಯುವತಿಯೊಬ್ಬರನ್ನ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.

    ಅಮ್ಮ ಸಾರಿ, ಐ ಲವ್ ಯು ಅಮ್ಮ. ಸಾರಿ ಗುಡ್ ಬೈ ಎಂದು ಹೇಳಿದ್ದಾರೆ. ಸಾಲ ಪಡೆದಿದ್ದು ನಾನು ಡಾಕ್ಯೂಮೆಂಟ್‍ಗೆ ಸಹಿ ಹಾಕಿರೋದು ನಾನು. ನನ್ನ ಕುಟುಂಬಕ್ಕೆ ಏನು ಮಾಡಬೇಡಿ ಎಂದು ಹೇಳಿ ಸ್ನೇಹಿತರಿಗೆಲ್ಲಾ ಸಾರಿ ಕೇಳಿದ್ದಾರೆ.

    ರಾಜೇಶ್ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನನ್ನ ಸಾವಿಗೆ ಇವರೇ ಕಾರಣ ಅಂತಾ ಸೆಲ್ಫಿ ವಿಡಿಯೋ ಮಾಡಿ, ರೈಲಿಗೆ ತಲೆಕೊಟ್ಟ!

    ನನ್ನ ಸಾವಿಗೆ ಇವರೇ ಕಾರಣ ಅಂತಾ ಸೆಲ್ಫಿ ವಿಡಿಯೋ ಮಾಡಿ, ರೈಲಿಗೆ ತಲೆಕೊಟ್ಟ!

    ಕಲಬುರಗಿ: ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ನನ್ನ ಸಾವಿಗೆ ಇವರೇ ಕಾರಣ ಅಂತಾ ಹೇಳಿ ವ್ಯಕ್ತಿಯೊಬ್ಬ ರೈಲಿಗೆ ತಲೆಕೊಟ್ಟಿರುವ ಘಟನೆ ನಗರದ ಪಿಡಿಎ ಕಾಲೇಜು ಬಳಿಯ ಹಳಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

    26 ವರ್ಷದ ಸುಧಾಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸುಧಾಕರ್ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿಯಾಗಿದ್ದು, ಮೂರು ದಿನಗಳ ಹಿಂದೆ ಸುಧಾಕರ್ ಪತ್ನಿ ರೇಖಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಆಸ್ಪತ್ರೆಯಲ್ಲಿ ಪತ್ನಿಯನ್ನು ಭೇಟಿಯಾಗಿ ಮನೆಗೆ ಹಿಂದಿರುಗುವಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಮಲ್ಲಪ್ಪ ಮುರುಳಿ, ಭಾಗವ್ವ ಮುರುಳಿ, ಭೀಮಾಬಾಯ್ ಮತ್ತು ಮಾದೇವಿ ಎಂಬವರೇ ನನ್ನ ಸಾವಿಗೆ ಕಾರಣರಾಗಿದ್ದಾರೆ. ಈ ನಾಲ್ವರಲ್ಲಿ ಮಲ್ಲಪ್ಪ ಎಂಬವರೇ ನನ್ನ ಸಾವಿಗೆ ಕಾರಣವಾದ ಪ್ರಮುಖ ವ್ಯಕ್ತಿ. ಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಮರನಾಥ್ ಕುಳಗೇರಿ ಮತ್ತು ರಾಜ್ಯಾಧ್ಯಕ್ಷರಾದ ಮಂಜುನಾಥ್ ಹಾಗರಗಿ ಅವರು ನನ್ನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಅಂತಾ ಸುಧಾಕರ್ ಹೇಳಿದ್ದಾರೆ.

    ಸೆಲ್ಫಿ ವಿಡಿಯೋದಲ್ಲಿ ಸುಧಾಕರ್ ಹೇಳಿರುವ ನಾಲ್ವರು ಪತ್ನಿಯ ಸಂಬಂಧಿಕರು ಎಂದು ಹೇಳಲಾಗಿದೆ. ಘಟನೆ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/Nx6Wi9pzLAk

  • ಸೆಲ್ಫಿ ವಿಡಿಯೋ ಮಾಡಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಸೆಲ್ಫಿ ವಿಡಿಯೋ ಮಾಡಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಹೈದರಾಬಾದ್: ನವವಿವಾಹಿತೆ 3 ತಿಂಗಳ ಗರ್ಭಿಣಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಮ್ ನಗರದಲ್ಲಿ ನಡೆದಿದೆ.

    ಮೌನಿಕ ಆತ್ಯಹತ್ಯೆ ಮಾಡಿಕೊಂಡ 3 ತಿಂಗಳ ಗರ್ಭಿಣಿ. ಈಕೆ ಉದ್ದಂಡಿ ನಾಗೇಶ್ವರ ರಾವ್ ಮಗಳಾಗಿದ್ದು, ಹೈದರಾಬಾದ್‍ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರ ಎಂಬುವವರ ಜೊತೆ ಆಗಸ್ಟ್ ತಿಂಗಳಿನಲ್ಲಿ ಮದುವೆಯಾಗಿತ್ತು.

    ಮೌನಿಕಗೆ ಪತಿಯ ಗುಣ ನಡತೆ ಇಷ್ಟವಾಗಿರಲಿಲ್ಲ. ಆದ್ದರಿಂದ ತನ್ನ ಪೋಷಕರಿಗೆ ಪತಿ ಬಳಿ ಇರುವ ಹಣ, ಚಿನ್ನವನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ದರೆ ಕಳೆದ ವಾರ ಮೌನಿಕ ಸಂಕ್ರಾಂತಿ ಹಬ್ಬದ ವರೆಗೂ ಇರಲು ತನ್ನ ತವರು ಮನೆಗೆ ಬಂದಿದ್ದಾರೆ.

    ಸೋಮವಾರ ಬೆಳಿಗ್ಗೆ ಪೋಷಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಫೋನಿನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಪತಿ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

     

  • Sorry ಅಪ್ಪು.. ದಯವಿಟ್ಟು ನನ್ನ ಕ್ಷಮಿಸಿಬಿಡಿ- ಲವ್ವರ್ ಗೆ ವಿಡಿಯೋ ಕಳ್ಸಿ ಯುವತಿ ಆತ್ಮಹತ್ಯೆಗೆ ಯತ್ನ

    Sorry ಅಪ್ಪು.. ದಯವಿಟ್ಟು ನನ್ನ ಕ್ಷಮಿಸಿಬಿಡಿ- ಲವ್ವರ್ ಗೆ ವಿಡಿಯೋ ಕಳ್ಸಿ ಯುವತಿ ಆತ್ಮಹತ್ಯೆಗೆ ಯತ್ನ

    ತುಮಕೂರು: ಪ್ರಿಯಕರ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಾ ಮಾತ್ರೆಗಳನ್ನು ನುಂಗುತ್ತಾ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಡಿಯೋದಲ್ಲಿ `ಸಾರಿ ಅಪ್ಪು.. ಐ ಆಮ್ ಸೋ ಸಾರಿ.. ನನ್ನಿಂದ ಯಾರಿಗೂ ನೋವಾಗೋದಕ್ಕೆ ನಾನು ಇಷ್ಟಪಡಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ’ ಅಂತ ಕೈಮುಗಿದು ಬೇಡಿಕೊಂಡು ಬಳಿಕ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ.

    ಈ ವಿಡಿಯೋ ನೋಡಿದ ಪ್ರಿಯಕರ ಕೂಡಲೇ ಯುವತಿಯಿದ್ದ ಹಾಸ್ಟೆಲ್ ಗೆ ಕರೆ ಮಾಡಿ ಯುವತಿಯ ಪ್ರಾಣ ಉಳಿಸಿದ್ದಾರೆ. ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.