ಚಿಕ್ಕಮಗಳೂರು: ಪತ್ನಿ ಜೊತೆ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ (Selfie) ತೆಗೆದುಕೊಳ್ಳಲು ಹೋಗಿ 60 ಅಡಿ ಆಳದ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಾವನ್ನಪ್ಪಿದ ದುರ್ಘಟನೆ ಕೆಮ್ಮಣ್ಣುಗುಂಡಿಯ (Kemmanugundi) ಬಳಿ ನಡೆದಿದೆ.
ಮೃತ ಶಿಕ್ಷಕನನ್ನು (Teacher) ಸಂತೋಷ್ (40) ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಗೆ ಪತ್ನಿ ಜೊತೆ ಸಂತೋಷ್ ಬಂದಿದ್ದರು. ಈ ವೇಳೆ ರಸ್ತೆ ಬದಿ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆಗೆ ಬಲವಾದ ಗಾಯವಾಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದ ವ್ಯಕ್ತಿಗೆ 25 ಸಾವಿರ ದಂಡ!
ಸಂತೋಷ್ ಅವರು ತರೀಕೆರೆ ತಾಲೂಕಿನ ಲಕ್ಷ್ಮೀಸಾಗರ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ನವದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನ ಗದರಿಸಿ ದೂರ ತಳ್ಳಿದ ಪ್ರಸಂಗ ದೆಹಲಿಯ ಸಂವಿಧಾನ ಕ್ಲಬ್‌ನ (Constitution Club) ನಡೆದಿದೆ.
#WATCH | Delhi: Samajwadi Party MP Jaya Bachchan scolded a man and pushed him away, while he was trying to take a selfie with her. pic.twitter.com/UxIxwrXSM0
ಜಯಾ ಬಚ್ಚನ್ ವ್ಯಕ್ತಿಯನ್ನ ಹಿಡಿದು ತಳ್ಳಿದ 32 ಸೆಕೆಂಡುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನುಮತಿಯಿಲ್ಲದೇ ಏಕೆ ಸೆಲ್ಫಿ ಕ್ಲಿಕ್ಕಿಸಬೇಕು? ಅಂತ ಕೇಳಿದ್ರೆ, ಇನ್ನೂಬ್ಬರು ಇದು ದುರಹಂಕಾರಿ ನಡವಳಿಕೆ ಎಂದಿದ್ದಾರೆ. ಮತ್ತೊಬ್ಬರು ಜನರಿಗಾಗಿ ಹೋರಾಡುತ್ತೇನೆ ಅನ್ನುವವರು ಮತ್ತೊಬ್ಬ ವ್ಯಕ್ತಿಯನ್ನ ಹೀಗೆ ತಳ್ಳೋದು ಸರಿಯೇ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ದೋಷ ಶಂಕೆ – ಲ್ಯಾಂಡಿಂಗ್ ವೇಳೆ ಕಾರ್ಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ
ಗುವಾಹಟಿ: ಐಪಿಎಲ್‌ನಿಂದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಅವರನ್ನು ಬ್ಯಾನ್ ಮಾಡಬೇಕೆಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಆಗಿದ್ದು ಏನು?
ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 6 ರನ್‌ಗಳಿಂದ ತಂಡ ಗೆದ್ದ ಬಳಿಕ ಅಭಿಮಾನಿಗಳು ಪರಾಗ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದೆ ಬಂದಿದ್ದಾರೆ. ಈ ವೇಳೆ ಪರಾಗ್ ಸೆಲ್ಫಿ ಕ್ಲಿಕ್ಕಿಸಿ ಮೊಬೈಲ್ ಅನ್ನು ನೇರವಾಗಿ ಕೈಯಲ್ಲಿ ನೀಡದೇ ಎಸೆದಿದ್ದಾರೆ. ಇದನ್ನೂ ಓದಿ: ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ ಅನಿಕೇತ್ ಔಟ್
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಮೊಬೈಲ್ ಕೈಯಲ್ಲಿ ಕೊಡಬಹುದಿತ್ತು. ಅದನ್ನು ಯಾಕೆ ಎಸೆಯಬೇಕಿತ್ತು? ಇಷ್ಟೊಂದು ಅಹಂಕಾರ ತೋರಿಸುವ ಅಗತ್ಯ ಏನು? ಇಷ್ಟೊಂದು ಧಿಮಾಕು ಇರುವ ರಿಯಾನ್ ಪರಾಗ್ ಅವರನ್ನು ಐಪಿಎಲ್‌ನಿಂದಲೇ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕುತ್ತಿದ್ದಾರೆ.
ಗುವಾಹಟಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಹೊಡೆದಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲಲಿ 8 ವಿಕೆಟ್ ನಷ್ಟಕ್ಕೆ 176 ರನ್ ಹೊಡೆದು ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಪರಾಗ್ 37 ರನ್(28 ಎಸೆತ, 2 ಬೌಂಡರಿ, 2 ಸಿಕ್ಸ್) ಹೊಡೆದಿದ್ದರು.
ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಿಧಾನಗತಿಯ ಓವರ್ ಎಸೆದಿದ್ದಕ್ಕೆ ನಾಯಕ ರಿಯಾನ್ ಪರಾಗ್‌ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.
ಬಳ್ಳಾರಿ: ಕೋಡಿ ಬಿದ್ದಿದ್ದ ಕೆರೆಯಲ್ಲಿ (Lake) ಸೆಲ್ಪಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ (Kudligi) ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಕೋಡಿ ಬಿದ್ದಿದ್ದರಿಂದ ಯುವಕ ಚೇತನ್ ಕುಮಾರ್ ಸೆಲ್ಫಿ (Selfie) ತೆಗೆದಿಕೊಳ್ಳಲು ಹೋಗಿದ್ದ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಕೋಡಿ ಬಿದ್ದಿರುವ ಜಾಗಕ್ಕೆ ಚೇತನ್ ಬಿದ್ದಿದ್ದಾನೆ. ಚೇತನ್ ಕೆರೆಗೆ ಬಿದ್ದ ಕೂಡಲೇ ಅಕ್ಕಪಕ್ಕದ ಜನ ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಚೇತನ್ ಕುಮಾರ್ ಶವ 200 ಮೀಟರ್ ದೂರದಲ್ಲಿ ಸಿಕ್ಕಿದೆ. ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಬಾಂಗ್ಲಾ ಪ್ರಜೆಗಳು ಅರೆಸ್ಟ್
ಮೃತ ಚೇತನ್ ಮನೆಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಉತ್ತರ ಕೊರಿಯಾದ ಟೆಬಲ್ ಟೆನ್ನಿಸ್ ಆಟಗಾರರಾದ ಜಂಗ್-ಸಿಕ್ ಮತ್ತು ಕಿಮ್ ಕುಮ್ ಯಂಗ್ ಪದಕ ಗೆದ್ದ ಮೇಲೆ ತಮ್ಮ ಬದ್ದ ವೈರಿ ದೇಶವಾದ ದಕ್ಷಿಣ ಕೊರಿಯಾದ ಆಟಗಾರರ ಜೊತೆ ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಸೆಲ್ಫಿ ತೆಗೆದುಕೊಳ್ಳುವಾಗ ಚೀನಾದ ಆಟಗಾರರು ಜೊತೆಗಿದ್ದರು.
ಗೃಹರಕ್ಷಕ ದಳ ಮತ್ತು ಸಹ ಪರ್ವತಾರೋಹಿಗಳು ಮಹಿಳೆಯನ್ನು ಸುರಕ್ಷಿತವಾಗಿ ಕಮರಿನಿಂದ ಹೊರಕ್ಕೆ ಕರೆತಂದರು. ಆಕೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ 26 ವಯಸ್ಸಿನ ವ್ಯಕ್ತಿಯೊಬ್ಬರು ರೀಲ್ಸ್ ಮಾಡಲು ಹೋಗಿ ಕಮರಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದನ್ನೂ ಓದಿ: Madhya Pradesh: ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ದುರ್ಮರಣ
ಆನ್ವಿ ಕಾಮ್ದಾರ್ ಜು.16 ರಂದು ಜಲಪಾತ ವೀಕ್ಷಣೆಗೆ ಏಳು ಸ್ನೇಹಿತರೊಂದಿಗೆ ಪ್ರವಾಸವನ್ನು ಕೈಗೊಂಡಿದ್ದರು. ಸ್ನೇಹಿತರು ವೀಡಿಯೊವನ್ನು ಚಿತ್ರೀಕರಿಸುತ್ತಿದ್ದಾಗ ಆನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದು ಮೃತಪಟ್ಟಿದ್ದರು.
ಭೋಪಾಲ್: ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಸಿಂಹಗಳಿರುವ ಆವರಣಕ್ಕೆ ಹೋಗಿ ದುರಂತಕ್ಕೀಡಾದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ (Sri Venkateswara Zoological Park) ನಲ್ಲಿ ಇಂದು ನಡೆದಿದೆ.
ವ್ಯಕ್ತಿಯನ್ನು ಪ್ರಹ್ಲಾದ್ ಗುಜ್ಜರ್ (34) ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ಪುರಸಭೆಯ ನಿವಾಸಿ. ಈತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಸೆಲ್ಫಿ (Selfie With Lion) ತೆಗೆದುಕೊಳ್ಳಲು ಸಿಂಹಗಳ ಆವರಣಕ್ಕೆ ನುಗ್ಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿಯನ್ನು ತಿಂದಿಲ್ಲ: ನಿರ್ವಾಹಕರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಪ್ರವೇಶಿಸಬಹುದಾದ ಜಾಗದಿಂದ ಪ್ರವೇಶ ಕೊಟ್ಟಿದ್ದಾನೆ. ಝೂನಲ್ಲಿರುವ ಪ್ರಾಣಿ ಪಾಲಕರು ಗುಜ್ಜರ್ ನಿರ್ಬಂಧಿತ ಸ್ಥಳದಲ್ಲಿ ಪ್ರವೇಶಿಸುವುದನ್ನು ಗಮನಿಸಿ ಎಚ್ಚರಿಕೆ ನೀಡಿದರೂ ಆತ ಕ್ಯಾರೇ ಎಂದಿಲ್ಲ. 6 ಅಡಿ ಎತ್ತರದ ಬೇಲಿಯನ್ನು ದಾಟಿ ಸಿಂಹಗಳ ಆವರಣಕ್ಕೆ ಹಾರಿದ್ದಾನೆ. ಈ ವೇಳೆ ಸಿಂಹ (Lion Attack) ಆತನ ಮೇಲೆ ದಾಳಿ ಮಾಡಿದೆ. ದೇಹದ ಯಾವುದೇ ಭಾಗವನ್ನು ತಿನ್ನಲಿಲ್ಲ. ಆದರೆ ಗಂಭೀರ ಗಾಯಗೊಂಡ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃಗಾಲಯದ ಕ್ಯೂರೇಟರ್ ಸಿ ಸೆಲ್ವಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್
ಕೇರ್‌ಟೇಕರ್ ಸ್ಥಳಕ್ಕೆ ದೌಡಾಯಿಸುವ ಮುನ್ನವೇ ಗುಜ್ಜರ್‌ನನ್ನು ‘ಡೊಂಗಲ್‌ಪುರ’ ಎಂಬ ಸಿಂಹವು ಕೊಂದು ಹಾಕಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಘಟನೆಯ ಸಮಯದಲ್ಲಿ ಗುಜ್ಜರ್ ಮದ್ಯದ ಅಮಲಿನಲ್ಲಿದ್ನೋ ಎಂದು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ದಾಳಿಯ ಬಳಿಕ ಸಿಂಹದ ಆವರಣಕ್ಕೆ ಬೀಗ ಹಾಕಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ಘಟನೆಯ ಬಳಿಕ ವ್ಯಕ್ತಿಯ ಗುರುತು ಪತ್ತೆಗೆ ಸಿಂಹದ ಆವರಣ ಹುಡುಕಾಡಿದಾಗ ವ್ಯಕ್ತಿಯ ಪರ್ಸ್ ಪತ್ತೆಯಾಗಿದೆ. ಅದರಲ್ಲಿ ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ ಪತ್ತೆಯಾಗಿದೆ. ಬಳಿಕ ಸಿಬ್ಬಂದಿ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ.
ನವದೆಹಲಿ: ದೆಹಲಿಯ (Delhi) ದ್ವಾರಕ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಟ್ರೋ (Metro) ರೈಲಿನಲ್ಲಿ ಸಾಮಾನ್ಯ ಜನರೊಂದಿಗೆ ಪ್ರಯಾಣಿಸಿದರು.
ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮೋದಿ ಮೆಟ್ರೋದಲ್ಲಿ ಸಂಚರಿಸಿದ ಸಂದರ್ಭ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ತಮ್ಮನ್ನು ಸ್ವಾಗತಿಸಿದ ಮಕ್ಕಳಿಗೆ ಮೋದಿಯವರು ಚಾಕ್ಲೇಟ್‌ಗಳನ್ನು ನೀಡಿದ್ದು, ಅನೇಕ ಪ್ರಯಾಣಿಕರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಲ್ಲದೇ ಪ್ರಧಾನಿ ದೆಹಲಿ ಮೆಟ್ರೋ ರೈಲು ನಿಗಮದ (DMRC) ಸಿಬ್ಬಂದಿಯೊಂದಿಗೆ ಮಾತನಾಡಿದರು. ಇದನ್ನೂ ಓದಿ: ಪ್ರಧಾನಿಯಿಂದ ದೆಹಲಿಯಲ್ಲಿ ಯಶೋಭೂಮಿ ಸಮಾವೇಶ ಕೇಂದ್ರ ಅನಾವರಣ – ಏನಿದರ ವಿಶೇಷತೆ?
#WATCH | Passengers in Delhi metro extend their wishes to Prime Minister Narendra Modi on his 73rd birthday. PM Modi travelled by metro, earlier today pic.twitter.com/fZjxjqzExa
ಹೈಸ್ಪೀಡ್ ಕಾರಿಡಾರ್ ಅನ್ನು ದ್ವಾರಕಾ ಸೆಕ್ಟರ್ 21 ನಿಲ್ದಾಣದಿಂದ ಯಶೋಭೂಮಿ (YashoBhoomi) ದ್ವಾರಕಾ ಸೆಕ್ಟರ್ 25 ನಿಲ್ದಾಣಕ್ಕೆ ವಿಸ್ತರಿಸಲಾಗಿದೆ. ಸುಮಾರು 2 ಕಿಲೋಮೀಟರ್ ಉದ್ದದ ವಿಸ್ತರಣೆ ದ್ವಾರಕ ಸೆಕ್ಟರ್ 21 ಮತ್ತು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಸಂಪರ್ಕಿಸುತ್ತದೆ. ಇದನ್ನೂ ಓದಿ: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ- ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ
ಈ ವಿಭಾಗವನ್ನು ಸೇರಿಸುವುದರಿಂದ ನವದೆಹಲಿಯಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರವರೆಗಿನ ಏರ್‌ಪೋರ್ಟ್ ಎಕ್ಸ್ಪ್ರೆಸ್ ಲೈನ್‌ನ ಒಟ್ಟು ಉದ್ದ 24.9 ಕಿಲೋ ಮೀಟರ್ ಆಗಲಿದೆ ಎಂದು ಡಿಎಂಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು – INDIAಗೆ ಸೋನಿಯಾ ಕರೆ
ಜಗತ್ತಿನ ಖ್ಯಾತ ಮಾಡೆಲ್ (Model) ಕಿಮ್ ಕರ್ದಾಶಿಯನ್ ಅಚ್ಚರಿಯ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಡೆಲ್ ಜಗತ್ತಿನ ಅತ್ಯಂತ ಶ್ರೀಮಂತೆ ಮತ್ತು ಹಲವಾರು ಉತ್ಪನ್ನಗಳಿಗೆ ರೂಪದರ್ಶಿಯಾಗಿರುವ ಕಿಮ್ (Kim Kardashian), ಆಘಾತಕಾರಿ ಸಂಗತಿಯನ್ನು ಫೋಟೋ ಸಮೇತ ಹಂಚಿಕೊಂಡಿದ್ದು, ಅಭಿಮಾನಿಗಳು ಕಿಮ್‌ಗೆ ಧೈರ್ಯ ನೀಡಿದ್ದಾರೆ. ಇಂತಹ ಫೋಟೋಗಳನ್ನು ಶೇರ್ ಮಾಡುವ ಬದಲು ನಿಮ್ ಹಾಟ್ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿ ಎಂದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕಿಮ್ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಕನ್ನಡಿ ಎದುರು ನಿಂತುಕೊಂಡು ತಮ್ಮದೇ ಮೊಬೈಲ್ ನಲ್ಲಿ ಸೆಲ್ಫಿ (Selfie) ತೆಗೆದುಕೊಂಡಿದ್ದರು. ವಾರದ ಬಳಿಕ ಆ ಫೋಟೋ ನೋಡಿದಾಗ ಕಿಮ್ ಆತಂಕಗೊಂಡಿದ್ದಾರೆ. ತಮ್ಮ ಹಿಂದೆ ಇರುವವರು ಯಾರು ಎಂದು ಅಚ್ಚರಿಯಿಂದ ನೋಡಿದ್ದಾರೆ. ಅಂದು ಮನೆಯಲ್ಲಿ ಒಬ್ಬರೇ ಇದ್ದರೂ, ಇನ್ನೊಬ್ಬರು ಯಾರು ಎಂದು ಫೋಟೋವನ್ನು ಝೂಮ್ ಮಾಡಿ ನೋಡಿದಾಗ ಅದು ಭೂತವೆಂದು (Ghost) ಗೊತ್ತಾಗಿದೆಯಂತೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್
ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಿಮ್, ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಕಿಮ್ ಅಭಿಮಾನಿಗಳು ಅದಕ್ಕೆ ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಅದು ನಿಮ್ಮದೇ ನೆರಳು ಯಾವುದೇ ಭೂತ ಇಲ್ಲವೆಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ಚರ್ಚೆಗೆ ಹೋಗಿ ಬನ್ನಿ ಸರಿ ಹೋಗುತ್ತದೆ ಎಂದು ಸಲಹೆಯನ್ನು ನೀಡಿದ್ದಾರೆ. ಭೂತ, ದೆವ್ವ ಯಾವುದೂ ಇರುವುದಿಲ್ಲ, ದಯವಿಟ್ಟು ಆರಾಮಾಗಿ ಇರಿ ಎಂದು ಅನೇಕರು ಆ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ಕಿಮ್ ಪೋಸ್ಟ್ ಮಾಡಿರುವ ಫೋಟೋಗೆ 30 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಲೈಕ್ ಮಾಡಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಕಾಮೆಂಟ್ ಮಾಡಿ, ಧೈರ್ಯ ತುಂಬಿದ್ದಾರೆ. ಕಿಮ್ ಅತ್ಯಂತ ಪ್ರಭಾವಿತ ಮಾಡೆಲ್. ಅವರ ಇನ್ಸ್ಟಾ ಪೇಜ್ ಅನ್ನು 36 ಕೋಟಿ ಜನರು ಫಾಲೋ ಮಾಡುತ್ತಾರೆ. ಅಲ್ಲದೇ, ಜನಪ್ರಿಯ ಉದ್ಯಮಿ ಕೂಡ ಅವರಾಗಿದ್ದಾರೆ.
ಲಕ್ನೋ: ಪತ್ನಿ ಹಾಗೂ ಮಕ್ಕಳು 500 ರೂ. ನೋಟುಗಳ ಜೊತೆ ಸೆಲ್ಫಿ ತೆಗೆದುಕೊಂಡು ಪರಿಣಾಮ ಇದೀಗ ಪೊಲೀಸ್ ಅಧಿಕಾರಿಯೊಬ್ಬರು ಫಜೀತಿಗೆ ಸಿಲುಕಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ( Uttar Pradesh’s Unnao) ನಡೆದಿದೆ.
ಹೌದು. ಹೆಂಡ್ತಿ, ಮಕ್ಕಳು ಕಂತೆ ಕಂತೆ ನೋಟುಗಳ ಜೊತೆ ಸೆಲ್ಫಿ (SelfiE With 500 Rs. Notes) ತೆಗೆದುಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಬೆನ್ನಲ್ಲೇ ಠಾಣೆಯ ಉಸ್ತುವಾರಿಯಾಗಿದ್ದ ರಮೇಶ್ ಚಂದ್ರ ಸಹನಿಯನ್ನು (Ramesh Chandra Sahani) ತಕ್ಷಣ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಸ್ಟಾಲಿನ್ V/s ರವಿ ಸಂಘರ್ಷ- ವಿವಾದಾತ್ಮಕ ಆದೇಶ ವಾಪಸ್ ಪಡೆದ ಗವರ್ನರ್
ಫೋಟೋದಲ್ಲೇನಿದೆ..?: 500 ರೂ. ನೋಟಿನ ಬಂಡಲ್‍ಗಳನ್ನು ಮಂಚದ ಮೇಲೆ ನೀಟಾಗಿ ಜೋಡಿಸಿ ಅಧಿಕಾರಿಯ ಪತ್ನಿ ಮತ್ತು ಮಕ್ಕಳಿಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋ ಶೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಗಳು ಕೇಳಿಬಂದಿವೆ. ಇದು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂಬ ಟೀಕೆಗಳು ಕೇಳಿಬಂದವು. ಸುಮಾರು 14 ಲಕ್ಷ ರೂ. ಮೌಲ್ಯದ ಹಣ ಕತೆಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಟೀಕೆಗಳು ಕೇಳಿಬಂದ ಬೆನ್ನಲ್ಲೇ ಅಧಿಕಾರಿಯನ್ನು ವರ್ಗಾವಣೆ ಮಾಡಿ ತನಿಖೆ ಆರಂಭಿಸಲಾಗಿದೆ. ತನಿಖೆಯ ವೇಳೆ, ಇದು 2021ರ ನವೆಂಬರ್ 14 ರಂದು ತಮ್ಮ ಕುಟುಂಬದ ಆಸ್ತಿ ಮಾರಾಟ ಮಾಡಿದಾಗ ಬಂದಂತಹ ಹಣವಾಗಿದೆ. ಈ ಹಣದ ಜೊತೆ ಮನೆಯವರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಸಹನಿ ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಹನಿ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.