Tag: self-proclaimed godman

  • ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಮುಂಬೈ: ಮಗನ ಅಂಗವೈಕಲ್ಯವನ್ನು ಗುಣಪಡಿಸುತ್ತೇನೆ ಅಂತ 36 ವರ್ಷದ ಮಹಿಳೆಯ ಮೇಲೆ 60 ವರ್ಷದ ಸ್ವಯಂಘೋಷಿತ ದೇವಮಾನವ ಅತ್ಯಾಚಾರವೆಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಆರೋಪಿ ದೇವಮಾನವನನ್ನು ಮಾಟಮಂತ್ರ ಮಾಡುವ ಧನಂಜಯ್ ಗೋಹದ್ ಅಲಿಯಾಸ್ ನಾನಾ (60) ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆತನ ಸಹಚರ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    RAPE CASE

    ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತನ್ನ ಅಂಗವಿಕಲ ಮಗನಿಗೆ ಚಿಕಿತ್ಸೆ ಕೊಡಿಸಲು ಹುಡುಕಾಟ ನಡೆಸುತ್ತಿದ್ದ ವೇಳೆ 2021ರ ಜನವರಿಯಂದು ಮಹಿಳೆಗೆ ಆರೋಪಿಯ ಪರಿಚಯವಾಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು

    ಏಪ್ರಿಲ್ ತಿಂಗಳಿನಲ್ಲಿ ಧನಂಜಯ್ ಗೊಹಾದ್ ಋಣಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ನೆಪದಲ್ಲಿ ತನ್ನ ನಿವಾಸಕ್ಕೆ ಬಂದು ಬಟ್ಟೆ ಬಿಚ್ಚುವಂತೆ ಕೇಳಿಕೊಂಡನು. ನಂತರ ಗೋಹಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ತನ್ನ ಪತಿ ಮತ್ತು ಸಹೋದರ ಅಪಘಾತದಲ್ಲಿ ಸಾಯುತ್ತಾರೆ. ಅಲ್ಲದೆ ಜನಿಸುವ ಎರಡನೇ ಮಗು ಅಂಗವಿಕಲತೆಯಿಂದ ಹುಟ್ಟುತ್ತದೆ ಎಂದು ಬೆದರಿಕೆಯೊಡ್ಡಿದ್ದಾನೆ. ಆರೋಪಿ ತನ್ನ ಮಗನನ್ನು ಗುಣಪಡಿಸಲು ಮಾಟಮಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮೇ 27 ರಂದು ಘಟನೆ ಸಂಬಂಧ ಮಹಿಳೆ ಹದಾಸ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಪ್ರಕರಣ ದಾಖಲಿಸಿದ್ದಾರೆ

  • ಸ್ವಯಂಘೋಷಿತ ದೇವಮಾನವ ದಾತಿ ಮಹರಾಜ್ ಆಶ್ರಮದಿಂದ 600 ಹೆಣ್ಣು ಮಕ್ಕಳು ನಾಪತ್ತೆ!

    ಸ್ವಯಂಘೋಷಿತ ದೇವಮಾನವ ದಾತಿ ಮಹರಾಜ್ ಆಶ್ರಮದಿಂದ 600 ಹೆಣ್ಣು ಮಕ್ಕಳು ನಾಪತ್ತೆ!

    ನವದೆಹಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಸ್ಥಾನ ಸ್ವಯಂಘೋಷಿತ ದೇವಮಾನವ ದಾತಿ ಮಹಾರಾಜ್ ಆಶ್ರಮದಿಂದ 600 ಹೆಣ್ಣು ಮಕ್ಕಳು ಕಾಣೆಯಾಗಿರುವ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

    ಸದ್ಯ ರಾಜಸ್ಥಾನದ ಅಲವಾಸ್ ಪ್ರದೇಶದಲ್ಲಿರುವ ಆಶ್ರಮದಲ್ಲಿ 100 ಮಂದಿ ಹೆಣ್ಣು ಮಕ್ಕಳು ಮಾತ್ರ ಇದ್ದು, ಈ ಹಿಂದೆ ದಾತಿ ಮಹಾರಾಜ್ ತನ್ನ ಆಶ್ರಮದಲ್ಲಿ 700 ಮಂದಿ ಹೆಣ್ಣು ಮಕ್ಕಳಿರುವುದಾಗಿ ಹೇಳಿಕೆ ನೀಡಿದ್ದ. ಈ ಕುರಿತು ಪೊಲೀಸರು ತನಿಖೆ ನಡೆಸಿದ ವೇಳೆ ಬಾಲಕಿಯರು ನಾಪತ್ತೆ ಆಗಿರುವ ಕುರಿತ ಅಂಶ ಬೆಳಕಿಗೆ ಬಂದಿದೆ.

    ಆಶ್ರಮದಲ್ಲಿರುವ ಬಾಲಕಿಯರು ಆಶ್ರಮದಿಂದ ಹೊರ ನಡೆದಿದ್ದರಾ ಅಥವಾ ತಮ್ಮ ಮನೆಗಳಿಗೆ ಹಿಂದಿರುಗಿದ್ದರಾ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಸದ್ಯ ದಾತಿ ಮಹಾರಾಜ್ ಸಹ ಆಶ್ರಮದಿಂದ ಕಾಣೆಯಾಗಿದ್ದು, ಕ್ರೈಂ ಬ್ರಾಂಚ್ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

    ಏನಿದು ಪ್ರಕರಣ: ಸ್ವಯಂಘೋಷಿತ ದೇವಮಾನವ ದಾತಿ ಮಹಾರಾಜ್ ವಿರುದ್ಧ 25 ವರ್ಷದ ಯುವತಿಯೊಬ್ಬರು ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದರು. ದೂರಿನಲ್ಲಿ ತಮ್ಮ ಮೇಲೆ ದಾತಿ ಮಹಾರಾಜ್ ಹಾಗೂ ಆಶ್ರಮದ ಮತ್ತಿಬ್ಬರು ಸೇವಕರು ಸಹ ಅತ್ಯಾಚಾರ ನಡೆಸಿದ್ದಾಗಿ ಉಲ್ಲೇಖಿಸಿದ್ದರು.

    ಅಂದಹಾಗೇ ದೆಹಲಿ ಹಾಗೂ ರಾಜಸ್ಥಾನ ಆಶ್ರಮದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದು, ಬಳಿಕ ಯುವತಿ ಘಟನೆಯಿಂದ ಅಘಾತಕ್ಕೆ ಒಳಗಾಗಿ ಆಶ್ರಮ ತೊರೆದಿದ್ದರು. 2 ವರ್ಷದ ಬಳಿಕ ಘಟನೆಯಿಂದ ಚೇತರಿಸಿಕೊಂಡ ಯುವತಿ ಕೃತ್ಯದ ಕುರಿತು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. ಮಗಳ ಮೇಲೆ ನಡೆದ ಅವಮಾನಿಯ ಕೃತ್ಯದ ಕುರಿತು ಪೋಷಕರು ದೆಹಲಿ ಮಹಿಳಾ ಆಯೋಗದ ಸಹಕಾರ ಪಡೆದು ಪೊಲೀಸರಿಗೆ ದೂರು ನೀಡಿದ್ದರು.

    ಈ ವೇಳೆ ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ದಾತಿ ಮಹಾರಾಜ್ ದೂರು ನೀಡಿದ ಯುವತಿ ತನ್ನ ಮಗಳ ಸಮಾನ, ತನ್ನ ವಿರುದ್ಧ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು.