Tag: Self Marriage

  • 10 ಲಕ್ಷ ರೂ. ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ ಮಹಿಳೆ

    10 ಲಕ್ಷ ರೂ. ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ ಮಹಿಳೆ

    ಲಂಡನ್: 20 ವರ್ಷದಿಂದ ಸರಿಯಾದ ಸಂಗಾತಿ (Partner) ಸಿಗದ ಹಿನ್ನೆಲೆ ಮಹಿಳೆಯೊಬ್ಬರು (Woman) ಸುಮಾರು 10 ಲಕ್ಷ ರೂ. ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ (Marriage) ಘಟನೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (UK) ನಡೆದಿದೆ.

    ಸಾರಾ ವಿಲ್ಕಿನ್ಸನ್ (42) ತನ್ನನ್ನು ತಾನು ಮದುವೆಯಾಗಿ (Self Marriage) ಸಂಗಾತಿಗಾಗಿ ಕಾಯುವ ಜೀವನವನ್ನು ಕೊನೆಗಾಣಿಸಿದ್ದಾರೆ. ತನ್ನ ವಿವಾಹದಿಂದ ತುಂಬಾ ಸಂತೋಷವಾಗಿದ್ದು, ಅದ್ಧೂರಿ ಮದುವೆಯ ಬಯಕೆ ಈಡೇರಿದೆ ಎಂದು ಸಾರಾ ತಿಳಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಾರಾ ತನ್ನನ್ನು ಮದುವೆಯಾಗಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಇಬ್ಬರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಸುಮಾರು 40 ಬಂಧುಮಿತ್ರರ ಸಮ್ಮುಖದಲ್ಲಿ 14 ವ್ರತಗಳನ್ನು ಮಾಡಿ ಸಾರಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಅಲ್ಲದೇ ತನಗಾಗಿ ನಿಶ್ಚಿತಾರ್ಥದ ಉಂಗುರವನ್ನು (Engagement Ring) ಸಹಾ ಖರೀದಿಸಿದ್ದಾರೆ. ಈಕೆ ಸುಮಾರು 2 ದಶಕಗಳಿಂದ ಈ ದಿನಕ್ಕಾಗಿ ತಯಾರಿ ನಡೆಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    ಕೋವಿಡ್ ಸಮಯದಲ್ಲಿ ಸಾರಾ 40ನೇ ವರ್ಷಕ್ಕೆ ಕಾಲಿಟ್ಟಿದ್ದು, ತನ್ನ ನಿಶ್ಚಿತಾರ್ಥಕ್ಕಾಗಿ ಡೈಮಂಡ್ ರಿಂಗ್ ಅನ್ನು ಖರೀದಿಸಿದ್ದರು. ಈ ವೇಳೆ ಸರಿಯಾದ ಸಂಗಾತಿಗಾಗಿ ಕಾಯುವ ಬದಲು ತನ್ನನ್ನು ತಾನು ಮದುವೆಯಾಗುವ ಆಲೋಚನೆಯನ್ನು ಸಾರಾ ಮಾಡಿದ್ದರು. ಇದನ್ನೂ ಓದಿ: 26ನೇ ವರ್ಷಕ್ಕೆ ಬದುಕು ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ!

    ಈ ಸಮಾರಂಭವು ಅಧಿಕೃತ ವಿವಾಹವಾಗಿರಲಿಲ್ಲ. ಆದರೆ ನಾನು ನನ್ನ ಮದುವೆಯ ದಿನವನ್ನು ಹೊಂದಿದ್ದೇನೆ. ನನ್ನ ಪಕ್ಕದಲ್ಲಿ ನನ್ನ ಸಂಗಾತಿ ಇಲ್ಲದಿರಬಹುದು. ಆದರೆ ವಿವಾಹವನ್ನು ಯಾಕೆ ತಪ್ಪಿಸಿಕೊಳ್ಳಲಿ? ಈ ಹಣ ನನ್ನ ಮದುವೆಗೆಂದು ಕೂಡಿಟ್ಟಿದ್ದೆ. ಇಂದು ನನ್ನ ಬಯಕೆ ಈಡೇರಿದೆ ಎಂದು ಸಾರಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಕನಿಷ್ಕಾ ಸೋನಿ ತನ್ನನ್ನು ತಾನೇ ಮದುವೆ ಆಗಿದ್ದಕ್ಕೆ ಕಾರಣ ಸ್ಟಾರ್ ನಟನ ಕಿರುಕುಳವಂತೆ

    ನಟಿ ಕನಿಷ್ಕಾ ಸೋನಿ ತನ್ನನ್ನು ತಾನೇ ಮದುವೆ ಆಗಿದ್ದಕ್ಕೆ ಕಾರಣ ಸ್ಟಾರ್ ನಟನ ಕಿರುಕುಳವಂತೆ

    ನ್ನನ್ನು ತಾನೇ ಮದುವೆ ಆಗಿರುವುದಾಗಿ ಘೋಷಿಸಿರುವ ಹಿಂದಿ ಕಿರುತೆರೆಯ ಹೆಸರಾಂತ ನಟಿ ಕನಿಷ್ಕಾ ಸೋನಿ, ತಾವು ಆ ನಿಲುವನ್ನು ತಾಳಿದ್ದಕ್ಕೆ ಕಾರಣ ತನ್ನ ಮೇಲೆ ಆಗಿರುವಂತಹ ದೌರ್ಜನ್ಯ ಎಂದು ಹೇಳಿಕೊಂಡಿದ್ದಾರೆ. ಬಣ್ಣದ ಪ್ರಪಂಚಕ್ಕೆ ಕಾಲಿಡಲು ಮುಂಬೈಗೆ ಬಂದಾಗಿನಿಂದ ಈವರೆಗೂ ಸಾವಿರಕ್ಕೂ ಹೆಚ್ಚು ಹುಡುಗರು ಈಕೆಗೆ ಪ್ರಪೋಸ್ ಮಾಡಿದ್ದಾರಂತೆ. ಆ ಎಲ್ಲ ಪ್ರಸ್ತಾಪಗಳನ್ನು ತಾವು ತಿರಸ್ಕರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಪ್ರಪೋಸ್ ಮಾಡಿದ ವ್ಯಕ್ತಿಗಳಲ್ಲಿ ಹೆಸರಾಂತ ನಟನೊಬ್ಬನಿದ್ದನಂತೆ. ಮದುವೆಗೂ ಅವನು ಪ್ರಪೋಸ್ ಮಾಡಿದ್ದ. ಆ ವ್ಯಕ್ತಿ ಹೇಗೆ ಎನ್ನುವುದು ತಮಗೆ ಮೂರು ತಿಂಗಳಲ್ಲೇ ಗೊತ್ತಾಯಿತಂತೆ. ಸಿಕ್ಕಾಪಟ್ಟೆ ಹಿಂಸೆ ಮಾಡುತ್ತಿದ್ದನಂತೆ. ಕ್ಷಣ ಕ್ಷಣಕ್ಕೂ ಕೋಪ ಮಾಡಿಕೊಳ್ಳುತ್ತಿದ್ದನಂತೆ. ಹಾಗಾಗಿ ಮೂರೇ ತಿಂಗಳಲ್ಲೇ ಅವನಿಂದ ಆಚೆ ಬಂದರಂತೆ ಕನಿಷ್ಕಾ. ಆ ನೋವಿನಿಂದ ಆಚೆ ಬರಲು ಅವರಿಗೆ ಮೂರು ವರ್ಷಗಳು ಬೇಕಾದವು ಎಂದಿದ್ದಾರೆ.  ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಎ ಗ್ರೇಡ್ ಸಿನಿಮಾದಲ್ಲಿ ನಟಿಸಲು ಅವಕಾಶವೊಂದು ಹುಡುಕಿಕೊಂಡು ಬಂದಿದ್ದ ವಿಷಯವನ್ನೂ ಹಂಚಿಕೊಂಡಿರುವ ಅವರು, ‘ನನ್ನ ಹೊಟ್ಟೆಯನ್ನು ನೋಡಲು ನನ್ನ ರೂಮ್ ಗೆ ಬಾ ಎಂದು ನಿರ್ಮಾಪಕರು ಕರೆದರಂತೆ. ಇವರನ್ನು ಅದಕ್ಕೆ ನಿರಾಕರಿಸಿದರಂತೆ. ನನ್ನ ಮುಂದೆಯೇ ನೀನು ಹೊಟ್ಟೆ ತೋರಿಸಲ್ಲ ಅಂತಿಯಾ, ನಿನ್ನ ಕ್ಯಾಮೆರಾ ಮುಂದೇ ಹೇಗೆ ತೋರಿಸ್ತಿಯಾ ಎಂದು ಅವಮಾನ ಮಾಡಿದರಂತೆ. ಇದರಿಂದ ಬೇಸತ್ತು, ಅವರು ತಮ್ಮನ್ನು ತಾವೇ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿರಂತೆ.

    ಈ ರೀತಿಯ ಕಿರುಕುಳದಿಂದ ಬೇಸತ್ತು ಅವರು ತಮ್ಮನ್ನು ತಾವು ಮದುವೆ ಆಗುವ ನಿರ್ಧಾರ ಮಾಡಿದರಂತೆ. ಈಗ ನನ್ನನ್ನು ನಾನೇ ಗೆಲ್ಲುವ ಶಕ್ತಿ ಬಂದಿದೆ. ನಾನೇ ಶಕ್ತಿ ಸ್ವರೂಪಿಣಿ. ಎಲ್ಲವನ್ನೂ ನನಗೆ ನಾನೇ ಪೂರೈಸಿಕೊಳ್ಳುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]