Tag: self assassination

  • ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ದಂಪತಿ!

    ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ದಂಪತಿ!

    ಬಳ್ಳಾರಿ: ಜೀವನದಲ್ಲಿ ಜಿಗುಪ್ಸೆಗೊಂಡ ದಂಪತಿ ತಮ್ಮ ಮೂರು ವರ್ಷದ ಮಗುವಿಗೆ ವಿಷವುಣಿಸಿ ತಾವೂ ಸಹ ಆತ್ಮಹತ್ಯೆಗೆ ಶರಣಾದ ಘಟನೆ ಕೂಡ್ಲಗಿ ತಾಲೂಕಿನ ಕೊಟ್ಟೂರಿನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಮೃತ್ಯುಂಜಯ (55) ಪತ್ನಿ ಮಧು (33) ತಮ್ಮ ಮಗು ಬಿಂದು (3)ವಿಗೆ ವಿಷಕುಡಿಸಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕೊಟ್ಟೂರು ಪಟ್ಟಣದ ರಿಯಲ್ ಎಸ್ಟೇಲ್ ಕೆಲಸ ಮಾಡುತ್ತಿದ್ದ ಮೃತ್ಯಂಜಯ ಬುಧವಾರ ಮುಂಜಾನೆ ಕೊಟ್ಟೂರಿನ ಹೊರವಲಯದ ಬಳಿ ಇರುವ ತಮ್ಮ ಜಮೀನಿನಲ್ಲಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಿದ್ದಾರೆ.

    ಡೆತ್ ನೋಟ್‍ನಲ್ಲಿ ತಾವೂ ಜೀವನದಲ್ಲಿ ಜಿಗುಪ್ಸೆಗೊಂಡ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾರೆ. ಅಷ್ಟೆ ಅಲ್ಲದೇ ತಮ್ಮ ಸಾವಿಗೆ ಯಾರು ಹೊಣೆಯಲ್ಲವೆಂದು ಡೆತ್ ನೋಟ್‍ನಲ್ಲಿ ನಮೂದಿಸಿದ್ದಾರೆ.

    ನಮಗೆ ಮೂರು ಮಕ್ಕಳಿದ್ದು, ಚಿಕ್ಕವಳಾಗಿರುವ ಹೆಣ್ಣು ಮಗುವನ್ನು ತಾವೂ ಕರೆದುಕೊಂಡು ಹೋಗುತ್ತಿರುವುದಾಗಿ ಡೆತ್ ನೋಟ್‍ನಲ್ಲಿ ಬರೆದಿದ್ದಾರೆ. ಇನ್ನಿಬ್ಬರು ಮಕ್ಕಳ ಪೈಕಿ ಒಂದು ಗಂಡು. ಒಂದು ಹೆಣ್ಣು ಮಗುವಿದೆ. ಈ ಮಕ್ಕಳು ಬುಧವಾರ ಶಾಲೆಗೆ ಹೋಗಿದ್ದರು. ಜೊತೆಗೆ ಈ ಮಕ್ಕಳು ಮೃತ ಮೃತ್ಯುಂಜಯನ ತಾಯಿಯ ಜೊತೆ ಅನೂನ್ಯವಾಗಿದ್ದಾರೆ. ಹೀಗಾಗಿ ಆ ಇಬ್ಬರು ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ಎಸ್‍ಪಿ ಆರ್. ಚೇತನ ಕೊಟ್ಟೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ. ಘಟನೆ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.