Tag: Selection

  • Bigg Boss: ಸ್ಪರ್ಧಿಗಳ ಆಯ್ಕೆ ಹೇಗೆ ನಡೆಯುತ್ತೆ? ಮೋಸ ಮಾಡುವವರೂ ಇದ್ದಾರೆ ಹುಷಾರ್

    Bigg Boss: ಸ್ಪರ್ಧಿಗಳ ಆಯ್ಕೆ ಹೇಗೆ ನಡೆಯುತ್ತೆ? ಮೋಸ ಮಾಡುವವರೂ ಇದ್ದಾರೆ ಹುಷಾರ್

    ಗತ್ತಿನ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada)… ಅನುಮಾನವೇ ಬೇಡ.. ಅತೀ ಹೆಚ್ಚು ಸೀಸನ್ ಮುಗಿಸಿದ, ಹೆಚ್ಚು ಭಾಷೆಗಳಲ್ಲಿ ತಯಾರಾದ, ಸುದೀರ್ಘ 24 ವರ್ಷಗಳ ಇತಿಹಾಸ ಹೊಂದಿರುವ ಈ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶೇಷತೆ ಇದೆ. ಅಷ್ಟು ಸುಲಭವಾಗಿ ಈ ಕಾರ್ಯಕ್ರಮವನ್ನು ನಡೆಸುವುದು ಕಷ್ಟ ಕಷ್ಟ. ಕೋಟಿ ಕೋಟಿ ಹಣ ಬೇಡುವಂತಹ ಈ ಶೋ ಅತೀ ಶ್ರೀಮಂತ ಶೋಗಳಲ್ಲಿ ಒಂದಾಗಿದೆ.

    ಹೌದು, ಈ ಕಾರ್ಯಕ್ರಮ ಮೊದಲು ಶುರುವಾಗಿದ್ದು, ಡಚ್ ಭಾಷೆಯಲ್ಲಿ. ಹೊರದೇಶದಲ್ಲಿ ‘ಬಿಗ್ ಬ್ರದರ್’ ಹೆಸರಿನಿಂದ ಪ್ರಾರಂಭವಾದ ಈ ಶ್ರೀಮಂತ ಕಾರ್ಯಕ್ರಮ, ನಾನಾ ದೇಶಗಳನ್ನು ಸುತ್ತಿ, ಭಾರತಕ್ಕೆ ಬರುತ್ತಿದ್ದಂತೆಯೇ ತನ್ನ ಹೆಸರಿನ್ನು ಬದಲಾಯಿಸಿಕೊಂಡಿತು. ‘ಬಿಗ್ ಬ್ರದರ್’ ಹೆಸರಿನಲ್ಲಿ 63 ಭಾಷೆಗಳಲ್ಲಿ ನಿರ್ಮಾಣವಾದರೆ, ಭಾರತದಲ್ಲಿ ‘ಬಿಗ್ ಬಾಸ್’ ಆಗಿ ಬದಲಾಯಿತು. ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ, ಮರಾಠಿ, ಕನ್ನಡ  ಹೀಗೆ ಭಾರತದ ಏಳು ಭಾಷೆಗಳಲ್ಲಿ ಇದು ಪ್ರಸಾರವಾಗುತ್ತಿದೆ.

    ಇಂಥದ್ದೊಂದು ಶೋನಲ್ಲಿ ಭಾಗಿಯಾಗಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ದೊಡ್ಮನೆ ಕದ ತಟ್ಟೋಕೆ ಕನಸು ಕಟ್ಟಿಕೊಂಡವರು ಹಲವರು. ಸೂಟ್ ಕೇಸ್ ರೆಡಿ ಮಾಡಿಕೊಂಡು ಕಾದವರು ಅನೇಕರು. ಆದರೆ, ಬಿಗ್ ಬಾಸ್ ಆಯ್ಕೆ (Selection) ಸುಲಭದ್ದಲ್ಲ, ಹಾಗಂತ ಕಠಿಣವೂ ಅಲ್ಲ.  ಬಿಗ್ ಬಾಸ್ ಮನೆಗೆ ಹೋಗಲು ಅರ್ಹತೆಗಳೇನು? ನಾವೂ ಬಿಗ್ ಬಾಸ್ ಮನೆಗೆ ಹೋಗಬಹುದಾ? ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ? ಯಾರು ಆಯ್ಕೆ ಮಾಡುತ್ತಾರೆ? ಯಾರನ್ನು ಭೇಟಿ ಮಾಡಬೇಕು? ಇಂತಹ ಪ್ರಶ್ನೆಗಳು ಏಳುವುದು ಸಹಜ. ಬಿಗ್ ಬಾಸ್ ಮನೆಗೆ ಹೋಗಲು ನಮಗೂ ಅರ್ಹತೆ ಇದೆಯಾ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಕನ್ನಡದಲ್ಲಿ ಈವರೆಗೂ ಒಂಬತ್ತು ಸೀಸನ್ ಗಳು ಮುಗಿದಿವೆ. ಹತ್ತನೇ ಸೀಸನ್ ಇನ್ನಷ್ಟೇ ಶುರುವಾಗಬೇಕಿದೆ. ಬಹುತೇಕ ಸೀಸನ್ ಗಳಲ್ಲಿ ವಾಹಿನಿಯು ಸಿಲೆಬ್ರಿಟಿಗಳಿಗೇ ಆದ್ಯತೆ ನೀಡಿದ್ದರೆ, ಕೆಲವು ಸೀಸನ್ ಗಳಲ್ಲಿ ಸಾಮಾನ್ಯರಿಗೂ ಅವಕಾಶ ಕೊಟ್ಟಿದೆ. ಈ ಸಾಮಾನ್ಯರು ಆಯ್ಕೆಯಾಗಿದ್ದು ಮಾತ್ರ ರೋಚಕ. ತಮ್ಮ ತಮ್ಮ ಕ್ಷೇತ್ರಗಳ ಸಾಧನೆಯನ್ನು ವಾಹಿನಿಗೆ ತಿಳಿಸಿ ಎಂದು ಕೇಳಲಾಗಿತ್ತು. ಬಂದ ಅರ್ಜಿಗಳಲ್ಲಿ ವಿಶೇಷ ಅನಿಸಿದವರನ್ನು ವಾಹಿನಿಯೇ ಕಾಂಟ್ಯಾಕ್ಟ್ ಮಾಡಿ, ಅವರನ್ನು ಆಯ್ಕೆ ಮಾಡಲಾಯಿತು.

    ಸಾಧನೆಯಷ್ಟೇ ಆಯ್ಕೆಯ ಮಾನದಂಡವಾ? ಕಂಡಿತಾ ಇಲ್ಲ. ನೀವು ಎಷ್ಟೇ ಸಾಧನೆ ಮಾಡಿದರೂ, ಬಿಗ್ ಬಾಸ್ ತಂಡ ನಡೆಸುವ ಕೆಲ ಪರೀಕ್ಷೆಗಳನ್ನು ಎದುರಿಸಲೇಬೇಕು. ದೊಡ್ಮನೆಯಲ್ಲಿ ನೂರು ದಿನ ಉಳಿಯುವಂತಹ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಇದೆಯಾ ಅಂತ ಪರೀಕ್ಷೆ ಮಾಡಲಾಗತ್ತೆ. ದೊಡ್ಮನೆ ಒಳಗೆ ಹೋಗುವ ಮುನ್ನ ಸೈಕಿಯಾಟಿಸ್ಟ್ ಕೌನ್ಸಲಿಂಗ್ ಮಾಡ್ತಾರೆ. ಜೊತೆಗೆ ನಿಮಗೆ ಕ್ರಿಮಿನಲ್ ಹಿನ್ನೆಲೆ ಏನಾದರೂ ಇದೆಯಾ ಅಂತ ತಿಳಿದುಕೊಳ್ಳಲಾಗುತ್ತೆ. ವೈದ್ಯಕೀಯ ಪರೀಕ್ಷೆ ಮಾಡಲಾಗತ್ತೆ… ಬಿಗ್ ಬಾಸ್ ಶೋ ನಿಯಮಗಳನ್ನು ತಿಳಿಸಲಾಗತ್ತೆ. ಈ ಎಲ್ಲದರಲ್ಲೂ ಪಾಸಾದರೆ ಮಾತ್ರ ಬಿಗ್ ಬಾಸ್ ಮನೆ ಪ್ರವೇಶ ದೊರೆಯುತ್ತದೆ. ನಿಮ್ಮಲ್ಲೂ ಈ ಎಲ್ಲ ಅರ್ಹತೆಗಳು ಇದ್ದರೆ ಟ್ರೈ ಮಾಡಬಹುದು.

    ಒಂದು ವಿಷಯ ನೆನಪಿಡಿ, ಬಿಗ್ ಬಾಸ್ ಹೆಸರಿನಲ್ಲಿ ಹಲವಾರು ಮೋಸಗಳು ನಡೆದಿವೆ. ಮಧ್ಯವರ್ತಿಗಳು ಹಣ ದೋಚಿದ್ದಾರೆ. ಕೆಲವರು ಹಣ ಕೊಟ್ಟು ಮೋಸ ಹೋಗಿದ್ದಾರೆ. ವಾಹಿನಿಯು ಈ ವಿಷಯದಲ್ಲಿ ಯಾವುದೇ ಮಧ್ಯವರ್ತಿಗಳನ್ನು ಇಟ್ಟುಕೊಂಡಿರುವುದಿಲ್ಲ. ಆಯ್ಕೆ ಏನೇ ಇದ್ದರೂ ಅದು ಬಿಗ್ ಬಾಸ್ ತಂಡದಲ್ಲೇ ನಡೆಯುತ್ತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನ ಪರಿಷತ್ 7 ಸ್ಥಾನಗಳಿಗೆ ಅವಿರೋಧ ಆಯ್ಕೆ – ಅಧಿಕೃತ ಘೋಷಣೆ

    ವಿಧಾನ ಪರಿಷತ್ 7 ಸ್ಥಾನಗಳಿಗೆ ಅವಿರೋಧ ಆಯ್ಕೆ – ಅಧಿಕೃತ ಘೋಷಣೆ

    ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಿಗಧಿಯಾಗಿದ್ದ ಚುನಾವಣೆಗೆ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಶುಕ್ರವಾರ ಘೋಷಿಸಿದರು.

    ಮೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಮೇ 25 ರಂದು ಪರಿಶೀಲನೆ ಹಾಗೂ ಮೇ 27 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. 7 ಸ್ಥಾನಗಳಿಗೆ 7 ಅಭ್ಯರ್ಥಿಗಳು ಮಾತ್ರ ಅಂತಿಮ ಕಣದಲ್ಲಿ ಉಳಿದಿದ್ದ ಕಾರಣಕ್ಕೆ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಯುದ್ಧ ನೌಕೆಗಳು ತಯಾರಾಗೋ ಮೂಲಕ ಮೋದಿ ಆತ್ಮನಿರ್ಭರ್ ಅಭಿಯಾನಕ್ಕೆ ಬಲ ಬಂದಿದೆ: ರಾಜನಾಥ್ ಸಿಂಗ್

    ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸವದಿ ಲಕ್ಷ್ಮಣ, ಟಿ ನಾರಾಯಣ ಸ್ವಾಮಿ, ಹೇಮಾಲತಾ ನಾಯಕ್ ಹಾಗೂ ಕೇಶವ್ ಪ್ರಸಾದ್ ಎಸ್, ಭಾರತೀಯ ಕಾಂಗ್ರೆಸ್ ಪಕ್ಷದಿಂದ ಕೆ ಅಬ್ದುಲ್ ಜಬ್ಬಾರ್ ಹಾಗೂ ಎಂ ನಾಗರಾಜು, ಜೆಡಿಎಸ್ ಪಕ್ಷದಿಂದ ಶರವಣನ್ ಟಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ

    ಇಂದು ನಾಮಪತ್ರ ಹಿಂಪಡೆಯುವ ಸಮಯ ಮೀರಿದ ನಂತರ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಅವಿರೋಧ ಆಯ್ಕೆಯ ಪ್ರಮಾಣ ಪತ್ರಗಳನ್ನು ವಿತರಿಸಿದರು.

  • ವಿಶ್ವಕಪ್ ಆಯ್ಕೆಗೆ ‘ಆರೋಗ್ಯಕರ ತಲೆನೋವಾದ’ ರಿಷಬ್ ಪಂತ್

    ವಿಶ್ವಕಪ್ ಆಯ್ಕೆಗೆ ‘ಆರೋಗ್ಯಕರ ತಲೆನೋವಾದ’ ರಿಷಬ್ ಪಂತ್

    – ಆಯ್ಕೆಯ ರೇಸ್‍ನಲ್ಲಿ ರಹಾನೆ, ವಿಜಯ್ ಶಂಕರ್: ಎಂಎಸ್‍ಕೆ ಪ್ರಸಾದ್

    ಮುಂಬೈ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಮುಂದಿನ ವಿಶ್ವಕಪ್ ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ ಆಗಿದೆ ಎನ್ನಲಾಗಿದೆ.

    ಈ ಕುರಿತು ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಮಾಹಿತಿ ನೀಡಿದ್ದು, ವಿಶ್ವಕಪ್ ತಂಡದ ಆಯ್ಕೆ ವೇಳೆ ರಿಷಬ್ ಪಂತ್‍ರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ರಿಷಬ್ ಪಂತ್ ಆಯ್ಕೆ ಆರೋಗ್ಯಕರ ತಲೆನೋವಾಗಿದೆ ಎಂದು ತಿಳಿಸಿದ್ದಾರೆ.

    ರಿಷಬ್ ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕ ಅವರ ಬ್ಯಾಟಿಂಗ್‍ನಲ್ಲಿ ಉತ್ತಮ ಸುಧಾರಣೆ ಆಗಿದೆ. ಮತ್ತಷ್ಟು ಪರಿಪಕ್ವತೆ ಸಾಧಿಸಲು ಟೀಂ ಇಂಡಿಯಾ ಎ ತಂಡ ಸೇರುವಂತೆ ಸಾಕಷ್ಟು ಅವಕಾಶಗಳನ್ನು ಅವರಿಗೆ ನೀಡಿದ್ದೇವೆ. ಮೊದಲು ರಿಷಬ್‍ರನ್ನು ದಪ್ಪ ಚರ್ಮದ ವ್ಯಕ್ತಿ ಎಂದು ತಿಳಿದಿದ್ದೇವು. ಆದರೆ ಇಂದು ಆತ ಅನುಭವಿ ಆಟಗಾರರಂತಾಗಿದ್ದು, ತಂಡಕ್ಕೆ ಸಾಕಷ್ಟು ಬದ್ಧತೆಯನ್ನು ತೋರಿದ್ದಾರೆ ಎಂದರು.

    ಇದೇ ವೇಳೆ ರಹಾನೆ ಹಾಗೂ ವಿಜಯ್ ಶಂಕರ್ ಅವರನ್ನು ಆಯ್ಕೆ ವೇಳೆ ಪರಿಗಣಿಸಲಾಗುತ್ತದೆ. ಏಕೆಂದರೆ ಅವರು ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ಕಳೆದ 11 ಇನ್ನಿಂಗ್ಸ್ ಗಳಲ್ಲಿ ರಹಾನೆ 74.62 ಸರಾಸರಿಯಲ್ಲಿ 597 ರನ್ ಗಳಿಸಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಆಯ್ಕೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

    2019 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲು ಏಪ್ರಿಲ್ 23 ಅಂತಿಮ ದಿನಾಂಕವಾಗಿದೆ. ಜೂನ್ 05 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾರನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿಯನ್ನು ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜಾರಿಯನ್ನ ನೇಮಿಸಿದ ಬಸವ – ಮಳವಳ್ಳಿಯಲ್ಲಿ ಅಚ್ಚರಿಯ ಘಟನೆ

    ಪೂಜಾರಿಯನ್ನ ನೇಮಿಸಿದ ಬಸವ – ಮಳವಳ್ಳಿಯಲ್ಲಿ ಅಚ್ಚರಿಯ ಘಟನೆ

    ಮಂಡ್ಯ: ದೇವಾಲಯದ ಪೂಜೆ ಮಾಡಲು ಪೂಜಾರಿಯನ್ನು ದೇವಾಲಯದ ಬಸವನೇ ನೇಮಿಸಿದ ಅಚ್ಚರಿ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲ ಭೈರವೇಶ್ವರ ಸ್ವಾಮಿ ದೇವಾಲಯದ ಬಸವನನ್ನು ರಾಗಿ ಬೊಮ್ಮನಹಳ್ಳಿ ಗ್ರಾಮಕ್ಕೆ ವಿಶೇಷ ಪೂಜೆಗೆಂದು ಕರೆತರಲಾಗಿತ್ತು. ಈ ವೇಳೆ ಗ್ರಾಮಸ್ಥದ ಮಂಚಮ್ಮ ದೇವಸ್ಥಾನದ ನಿತ್ಯ ಪೂಜೆಗೆ ಅರ್ಹ ವ್ಯಕ್ತಿಯನ್ನು ನೇಮಿಸುವಂತೆ ಬಸವನಲ್ಲಿ ಮನವಿ ಮಾಡಿದ್ದು, ಗ್ರಾಮಸ್ಥರ ಮನವಿ ಮೇರೆಗೆ ಬಸವ ಊರಿನ ಯುವಕನನ್ನು ಪೂಜಾರಿಯಾಗಿ ನೇಮಕ ಮಾಡಿದೆ.

    ಗ್ರಾಮಸ್ಥರು ಮನವಿ ಮಾಡುತ್ತಿದಂತೆ ಬಸವ ಗುಂಪಿನಲ್ಲಿದ್ದ ರವಿಕುಮಾರ್ ಯುವಕನ ಬಳಿ ತೆರಳಿ ಆತನನ್ನು ಕೊಂಬಿನಿಂದ ತಳ್ಳಿ ಆಯ್ಕೆ ಮಾಡಿದೆ. ಅಲ್ಲದೇ ದೇವಾಲಯದ ಪಕ್ಕದಲ್ಲಿ ಇರುವ ಕೆರೆಯಲ್ಲಿ ಆತನನ್ನು ಮುಳುಗಿಸಿ ಬಳಿಕ ಮೇಲಕ್ಕೆ ಕರೆತಂದಿದೆ. ಸಂಪೂರ್ಣ ಘಟನೆಯನ್ನು ಕಂಡ ಭಕ್ತರು ಅಚ್ಚರಿಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv