Tag: select

  • ಸರ್ಕಾರಿ ನೌಕರರ ಕ್ರೀಡಾಕೂಟ – ಬ್ಯಾಡ್ಮಿಂಟನ್‍ನಲ್ಲಿ ಬ್ಯಾಡಗಿಯ ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆ

    ಸರ್ಕಾರಿ ನೌಕರರ ಕ್ರೀಡಾಕೂಟ – ಬ್ಯಾಡ್ಮಿಂಟನ್‍ನಲ್ಲಿ ಬ್ಯಾಡಗಿಯ ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆ

    ಹಾವೇರಿ: ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಶಂಕರ್ ಕಿಚಡಿ ಹಾಗೂ ಬಿ.ಸುಭಾಷ್ ಇವರಿಗೆ ಹಾವೇರಿ ಜಿಲ್ಲೆ ಬ್ಯಾಡಗಿ ಬ್ಯಾಡ್ಮಿಂಟನ್ ಕ್ಲಬ್‍ನ ಸದಸ್ಯರು ಅಭಿನಂದಿಸಿದ್ದಾರೆ.

    ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಸ್ಫರ್ಧೆಗಳಲ್ಲಿ ಶಂಕರ ಕಿಚಡಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸನಲ್ಲಿಯೂ ಪುರುಷರ 400 ಮೀ ಮತ್ತು 800 ಮೀ ರನ್ನಿಂಗ್‍ನಲ್ಲಿ ಬಿ. ಸುಭಾಷ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‍ನಲ್ಲಿ ಶಂಕರ ಕಿಚಡಿ ಶಂಭು ಬಿದರಕಟ್ಟಿ ಅವರೊಂದಿಗೆ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿಜೇತ ಕ್ರೀಡಾಪಟುಗಳಿಗೆ ಬ್ಯಾಡಗಿ ಬ್ಯಾಡ್ಮಿಂಟನ್ ಕ್ಲಬ್‍ನ ಅಧ್ಯಕ್ಷ ನೇಮಿಚಂದ ಜೈನ್, ಸದಸ್ಯರಾದ ವನರಾಜ ಅಕ್ಕಿ ವಿಶಾಲ್ ಜಿಂಗಾಡೆ, ಮಹೇಶ ನಾಯಕ್, ಬಸವರಾಜು ನವಲೆ, ಐ.ಎಂ.ಮುಲ್ಲಾ, ಶಿವರಾಜ ಚೂರಿ, ಡಾ.ಶಿವಕುಮಾರ್, ಶಿವಾನಂದ ಮಲ್ಲನಗೌಡ್ರ, ಎಸ್.ಬಿ.ಖಾನಗೌಡ್ರ, ಉಜ್ಜನಗೌಡ ನಂದಿಗೌಡ್ರ, ಸತೀಶ್ ಚೂರಿ, ಪ್ರಕಾಶ್ ತಾರೀಕೊಪ್ಪ, ಚಾಲ್ರ್ಸ ಚಾಕೋ, ಶಾಂತರಾಜ್ ಕರ್ಕುಂದಿ, ವಿರೇಶ್ ಪೂಜಾರ, ಮನೋಹರ, ಶಿವಪ್ರಸಾದ್ ಇನ್ನಿತರರು ಅಭಿನಂದಿಸಿದ್ದಾರೆ.

  • 2018ರ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಆಯ್ಕೆ

    2018ರ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಆಯ್ಕೆ

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿದಂತೆ ಐವರು ಮಹಿಳಾ ಕುಸ್ತಿಪಟುಗಳು 2018ರ ಕಾಮನ್‍ವೆಲ್ತ್ ಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

    ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 2018ರಲ್ಲಿ ನಡೆಯಲಿರೋ ಕಾಮನ್‍ವೆಲ್ತ್ ಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲು ಶನಿವಾರ ಲಕ್ನೋ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

    62 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಆರ್ಹತೆ ಪಡೆಯುವುದರೊಂದಿಗೆ, ವಿನಿಶ್ ಫೊಗತ್ (50ಕೆ.ಜಿ), ಬಬಿತಾ ಕುಮಾರಿ (54ಕೆ.ಜಿ), ಪೂಜಾ ಧಂಡಾ(57ಕೆ.ಜಿ), ದಿವ್ಯ ಕರಣ್ (68 ಕೆ.ಜಿ) ಮತ್ತು ಕಿರಣ್ (76ಕೆ.ಜಿ) ವಿಭಾಗಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು.

    ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಒಟ್ಟು 6 ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೇ ನಡೆಯಿತು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ಕಿರ್ಗಿಸ್ತಾನದಲ್ಲಿ ನಡೆಯುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಸ್ಪರ್ಧಿಸಲಿರುವ ಭಾರತ 6 ಫ್ರೀಸ್ಟೈಲ್ ಕುಸ್ತಿಪಟುಗಳು ಆಯ್ಕೆಯಾಗಿದ್ದಾರೆ.