Tag: seized

  • ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ

    ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ

    – ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 4.4 ಕೆಜಿ ಬಂಗಾರ ವಶ

    ಚಿಕ್ಕಬಳ್ಳಾಪುರ: ಏರ್ ಇಂಟಲಿಜೆನ್ಸಿ ಕಸ್ಟಮ್ಸ್ ಆಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 4.4 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಟ್ಟು 1.45 ಕೋಟಿ ರೂ. ಮೌಲ್ಯದ 4.4 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಏರ್ ಪೋರ್ಟ್ ನಲ್ಲಿ ಶೋಧಕಾರ್ಯ ಮಾಡುವಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆಯಾಗಿದೆ. ಈಕೆ ಸುಡಾನ್ ದೇಶದವಳಾಗಿದ್ದು, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಇತ್ತ ಜರ್ಮನ್ ಪಾಸ್ ಪೋರ್ಟ್ ಹೊಂದಿದ್ದ ವ್ಯಕ್ತಿಯ ಶಾರ್ಟ್ಸ್ ನಲ್ಲಿ 1.4 ಕೆ.ಜಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಇನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದ ವಿಮಾನದ ಸೀಟಿನ ಕೆಳಗೆ 1.2 ಕೆ.ಜಿ. ಚಿನ್ನ ಪತ್ತೆಯಾಗಿದೆ.

    ಗುದದ್ವಾರದದಲ್ಲಿ ಚಿನ್ನ ಸಾಗಿಸಿದ್ದ ಕೇರಳ ಮೂಲದ ವ್ಯಕ್ತಿಯಿಂದ 500 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಮಾಡು ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ಚೈತನ್ಯಪುರಿ ಪೊಲೀಸ್ ಮತ್ತು ಎಲ್.ಬಿ. ನಗರ ಸ್ಪಷೆಲ್ ಕಾರ್ಯಾಚರಣೆ ತಂಡವು ಇಬ್ಬರನ್ನು ಬಂಧಿಸಿದೆ. ಜೊತೆಗೆ ಅವರ ಬಳಿ ಇದ್ದ 1.65 ಕೋಟಿ ರೂ. ನಗದು ಮತ್ತು ಎರಡು ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ಕೋತಪೇಟ್ ನಿವಾಸಿ ಟಿ. ವೆಂಕಟ ಶಿವ ಮಹೇಶ್ವರ ರಾವ್ ಮತ್ತು ಕುಕಟ್ಪಲ್ಲಿಯ ಎಸ್. ವೆಂಕಟೇಶ್ವರ ರಾವ್ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮ ಹಣ ವರ್ಗಾವಣೆ ಮಾಡುವ ಏಜೆಂಟ್‍ರನ್ನು ಭೇಟಿ ಮಾಡಲು ಬಂದಿದ್ದಾರೆ. ಆಗ ಅಕ್ರಮ ವರ್ಗಾವಣೆಯ ಕೆಲಸದಿಂದ ಲಾಭವಿದೆ ಎಂದು ತಿಳಿದುಕೊಂಡು ನಂತರ ಅವರು ಕೂಡ ಅದೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.

    ಕಾರ್ಯಾಚರಣೆ ತಂಡವು ಕೊಥೆಪೆಟ್ ನಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಸೂರ್ಯ ಮಿತ್ರ ಟ್ರೇಡರ್ಸ್ ಎಕ್ಸ್ ಪೋರ್ಟ್ಸ್ ಮಾಲೀಕ ಮಹೇಶ್ವರ ರಾವ್ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತ ತನ್ನ ಗೆಳೆಯ ಸತ್ಯನಾರಾಯಣ ಎಂಬಾತ 1 ಕೋಟಿ ರೂ. ಹಣ ಹೊಂದಿಸಿಕೊಡುವಂತೆ ಹೇಳಿದ್ದಾನೆ. ಅಲ್ಲದೇ ಆ ಹಣವನ್ನು ಮತ್ತೆ ನಿನಗೆ ಬೇರೆ ಬೇರೆ ಖಾತೆಗಳ ಮೂಲಕ ವಾಪಸ್ ಮಾಡುವುದಾಗಿ ಹೇಳಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ.

    ಸ್ನೇಹಿತ ಕೇಳಿದ್ದಕ್ಕೆ ಸದ್ಯ 85 ಲಕ್ಷ ಹಣ ಹೊಂದಿಸಿಕೊಂಡು ರಾವ್, ತನ್ನ ಕಾರಿನಲ್ಲಿ ದಿಲ್ ಸುಖ್ ನಗರದತ್ತ ಹೊರಟಾಗ ಸ್ಪೆಷಲ್ ಕಾರ್ಯಾಚರಣಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನ ಕೈಯಿಂದ ನಗದು ವಶಪಡಿಸಿಕೊಂಡಿರೋ ತಂಡ ತನಿಖೆ ಮುಂದುವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ರಮವಾಗಿ ಸಾಗಿಸುತ್ತಿದ್ದ 5.80 ಕೋಟಿ ರೂ.ಯನ್ನು ವಶಕ್ಕೆ ಪಡೆದ ಪೊಲೀಸರು

    ಅಕ್ರಮವಾಗಿ ಸಾಗಿಸುತ್ತಿದ್ದ 5.80 ಕೋಟಿ ರೂ.ಯನ್ನು ವಶಕ್ಕೆ ಪಡೆದ ಪೊಲೀಸರು

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳು ಬಾಕಿ ಇದೆ. ಹೀಗಿರುವಾಗ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ 5.8 ಕೋಟಿ ರೂ. ನಗದು ಸಾಗಿಸುತ್ತಿದ್ದ ಕಾರ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಜನಗಾಂವ್ ಜಿಲ್ಲೆಯ ಪೆಂಬರ್ತಿ ಸಮೀಪದ ಎಸ್‍ಎಸ್‍ಟಿ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹಣ ಪತ್ತೆಯಾಗಿದೆ. ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ಅವರ ನೇತೃತ್ವದಲ್ಲಿ ಹಣ ಸೀಜ್ ಮಾಡಲಾಗಿದೆ.

    ಕಾರ್ ನಲ್ಲಿದ್ದ 5,80,65,000 ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ 2 ಸಾವಿರ ರೂ. ಮುಖಬೆಲೆಯ 35,926 ನೋಟುಗಳು ಹಾಗೂ 500 ರೂಪಾಯಿ ಮುಖಬೆಲೆಯ 20,051 ನೋಟುಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ 100 ಕೋಟಿ ರೂ.ಗೂ ಅಧಿಕ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮತದಾನವು ಇದೇ 7ರಂದು ನಡೆಯಲಿದ್ದು, 11ರಂದು ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ.

    ನವೆಂಬರ್ 8ರಂದು ಹವಾಲ ನಡೆಸಿದ್ದ ತಂಡವನ್ನು ಹೈದರಾಬಾದ್ ನಗರ ಪೊಲೀಸರು ಬಂಧಿಸಿ, 7.51 ಕೋಟಿ ರೂ. ವನ್ನು ವಶಕ್ಕೆ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವ್ಯಕ್ತಿಯ ಬೆಲ್ಟ್, ಶೂಗಳಲ್ಲಿ 3 ಕೋಟಿ ಮೌಲ್ಯದ ಚಿನ್ನ ಪತ್ತೆ!

    ವ್ಯಕ್ತಿಯ ಬೆಲ್ಟ್, ಶೂಗಳಲ್ಲಿ 3 ಕೋಟಿ ಮೌಲ್ಯದ ಚಿನ್ನ ಪತ್ತೆ!

    ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆದಾಯ ತೆರಿಗೆ ಗುಪ್ತಚರ ನಿರ್ದೇಶನಾಲಯವು(ಡಿಆರ್‍ಐ) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ನನ್ನು ವಶಪಡಿಸಿಕೊಂಡಿದೆ.

    ಡಿಆರ್ ಐ  ಅಧಿಕಾರಿಗಳು ನ್ಯೂ ಜಲ್‍ಪಾಲ್‍ಗುರಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಅನುಮಾನ ಮೇರೆಗೆ ಪರಿಶೀಲನೆ ನಡೆಸಿದಾಗ ಆತನ ಬಳಿ 56 ಚಿನ್ನದ ಬಿಸ್ಕತ್ ಪತ್ತೆಯಾಗಿದ್ದು, ಸುಮಾರು 9.2 ಕೆ.ಜಿ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಮಣಿಪುರದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಚಿನ್ನವನ್ನು ಮ್ಯಾನ್ಮಾರ್ ದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ವ್ಯಕ್ತಿ ಅಸ್ಸಾಂನ ಗುವಾಹಾಟಿಯಲ್ಲಿನ ಮಣಿಪುರಿ ವ್ಯಕ್ತಿಯಿಂದ ಚಿನ್ನದ ಬಿಸ್ಕತ್ ಗಳನ್ನು ಪಡೆದುಕೊಂಡಿದ್ದನು ಎಂದು ತನಿಖೆ ಸಂಸ್ಥೆ ತಿಳಿಸಿದೆ.

    ಸದ್ಯಕ್ಕೆ ಡಿಆರ್‍ಐ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ. ಈತ ಪಶ್ಚಿಮ ಬಂಗಾಳದ ಹೂಗ್ಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಈತ ಕಳ್ಳಸಾಗಾಣಿಕೆಯ ಚಿನ್ನದ ಬಿಸ್ಕತ್ ಗಳನ್ನು ತನ್ನ ಸೊಂಟದ ಸುತ್ತಲೂ ವಿಶೇಷವಾದ ಬಟ್ಟೆಯಿಂದ ತಯಾರಿಸಿದ್ದ ಬೆಲ್ಟ್ ನಲ್ಲಿ ಮತ್ತು ಸ್ಪೋರ್ಟ್ಸ್ ಶೂಗಳ ಒಳಭಾಗದಲ್ಲಿ ಅಡಗಿಸಿಕೊಂಡಿದ್ದನು ಎಂದು ಡಿಆರ್ ಐ ಹೇಳಿಕೆ ನೀಡಿದೆ.

    ಸದ್ಯಕ್ಕೆ ಡಿಆರ್‍ಐಯೂ ಬಂಧಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ಆತನಿಂದ ವಿದೇಶಿ ಮೂಲದ 9.296 ಕೆಜಿ ಚಿನ್ನದ ಬಿಸ್ಕತ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 3.08 ಕೋಟಿ ರೂ. ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಉಡುಪಿಯಲ್ಲಿ ದಾಖಲೆ ಇಲ್ಲದ ಎರಡು ಚೀಲದಲ್ಲಿದ್ದ 1.65 ಕೋಟಿ ರೂ. ವಶ

    ಉಡುಪಿಯಲ್ಲಿ ದಾಖಲೆ ಇಲ್ಲದ ಎರಡು ಚೀಲದಲ್ಲಿದ್ದ 1.65 ಕೋಟಿ ರೂ. ವಶ

    ಉಡುಪಿ: ಶಿವಮೊಗ್ಗ ಉಪಚುನಾವಣೆ ಹಿನ್ನೆಲೆಯಲ್ಲಿ ಕೋಟಿ ಕೋಟಿ ಕಾಂಚಾಣ ಹರಿದಾಡುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಇಂತಹ ಆರೋಪಕ್ಕೆ ಪುಷ್ಟಿ ನೀಡುವಂತೆ ಉಡುಪಿ ರೈಲ್ವೇ ರಕ್ಷಣಾ ದಳ ಪೊಲೀಸರು ದಾಖಲೆ ಇಲ್ಲದ 1.65 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.

    1.65 ಕೋಟಿ ರೂ. ಮೊತ್ತ ಶಿವಮೊಗ್ಗ ಉಪ ಚುನಾವಣೆ ಹಂಚಿಕೆಗೆ ಬಂದಿತ್ತಾ ಎಂಬ ಸಂಶಯ ಶುರುವಾಗಿದೆ. ಉಡುಪಿ ರೈಲ್ವೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ರಾಜಸ್ಥಾನದ ಇಬ್ಬರು ಹಾಗೂ ಕಣ್ಣೂರಿನ ಮತ್ತೊರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಹಣ ವಶಕ್ಕೆ ಪಡೆದು, ರೈಲ್ವೇ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

    ವಶದಲ್ಲಿರುವ ಮೂರು ಮಂದಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆರೋಪಿಗಳು ರಾಜಸ್ಥಾನದಿಂದ ಮುಂಬೈ ಮೂಲಕ ಕೇರಳದ ಎರ್ನಾಕುಲಂಗೆ ಟಿಕೆಟ್ ಪಡೆದಿದ್ದರು ಎನ್ನಲಾಗಿದೆ. ನೇತ್ರಾವತಿ ಏಕ್ಸ್ ಪ್ರೆಸ್ ರೈಲಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಕುಮುಟಾದಲ್ಲಿ ಪೊಲೀಸರಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ದುಡ್ಡಿರುವ ಎರಡು ಚೀಲಗಳು ಪತ್ತೆಯಾಗಿದೆ. ರಾಜಸ್ಥಾನದಿಂದ ಬಂದ ಹಣ ಪಡೆಯಲು ಕಣ್ಣೂರಿನ ವ್ಯಕ್ತಿ ಮಂಗಳೂರಿಗೆ ಬಂದಿದ್ದ. ಆತನನ್ನು ಉಡುಪಿಗೆ ಕರೆಸಿ ವಶಕ್ಕೆ ಪಡೆಯಲಾಗಿದೆ. ರೈಲ್ವೇ ಪೊಲೀಸರು ಸಂಶಯ ಬಂದು ಟಿಕೆಟ್ ಕೇಳಿದಾಗ ಅಕ್ರಮ ಹಣಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಉಡುಪಿ, ಮಂಗಳೂರಿನ ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಉಡುಪಿ ರೈಲ್ವೇ ರಕ್ಷಣಾ ದಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಉಪಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ತೀವ್ರ ವಿಚಾರಣೆ ಮಾಡಿದ್ದಾರೆ.

    ಆರೋಪಿಗಳಲ್ಲಿ ಇಬ್ಬರು ಜಮೀನು ಖರೀದಿಗಾಗಿ ಹಣ ತಂದಿರುವ ಮಾಹಿತಿ ನೀಡಿದ್ದಾರೆ. ಕಣ್ಣೂರಿನ ವ್ಯಕ್ತಿ ಮನೆ ಬಳಕೆ ವಸ್ತು ಖರೀದಿಗಾಗಿ ಹಣ ಸಾಗಿಸಲಾಗಿದೆ ಎಂದು ಹೇಳಿದ್ದಾನೆ. ಬೇರೆ ಬೇರೆ ಉತ್ತರ,  ಅಧಿಕಾರಿಗಳು ಹಾಗೂ ಪೊಲೀಸರನ್ನು ಮತ್ತಷ್ಟು ಸಂಶಯಕ್ಕೆ ತಳ್ಳಿದೆ.

    ಸಂಶಯಕ್ಕೆ ಎಡೆ: ದಾಖಲೆಯಿಲ್ಲದೆ ಇಷ್ಟು ದೊಡ್ಡ ಮೊತ್ತ ಸಾಗಿಸುವುದು ತಪ್ಪು. ಉಪ ಚುನಾವಣೆ ಹಿನ್ನೆಲೆಯಲ್ಲಿ ತನಿಖೆ ತೀವ್ರವಾಗಿ ನಡೆಯುತ್ತಿದೆ. ವಶದಲ್ಲಿರುವ ಸಂಶಯಾಸ್ಪದ ವ್ಯಕ್ತಿಗಳು ಬೇರೆ ಬೇರೆ ಕಾರಣ ಕೊಡುತ್ತಿರುವುದು ಕೂಡಾ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳೂರು ಐಟಿ ಅಧಿಕಾರಿಗಳು ಹಣ ವಶಕ್ಕೆ ಪಡೆಯುತ್ತಾರೆ. ಸೂಕ್ತ ದಾಖಲೆ ಕೊಡಲು ಅವಕಾಶ ಕೂಡ ಇದೆ ಎಂದು ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರೋರಾತ್ರಿ KSRTC  ಬಸ್ಸಿನಲ್ಲಿ 11 ಲಕ್ಷ ರೂ. ಪತ್ತೆ

    ರಾತ್ರೋರಾತ್ರಿ KSRTC ಬಸ್ಸಿನಲ್ಲಿ 11 ಲಕ್ಷ ರೂ. ಪತ್ತೆ

    ಬಳ್ಳಾರಿ: ದಾಖಲೆಗಳಿಲ್ಲದೇ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 11 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜಿಟಿಟಿಸಿ ಬಳಿ ಸ್ಥಾಪಿಸಲಾಗಿರುವ ಸ್ಥಿರ ಕಣ್ಗಾವಲು ಪಡೆ(ಎಸ್‍ಎಸ್ಟಿ) ಚೆಕ್‍ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಹಣವನ್ನು ಜಪ್ತಿ ಮಾಡಲಾಗಿದೆ. ದಾವಣಗೆರೆಯಿಂದ ಸೋಲಾಪುರಕ್ಕೆ (ಕೆಎ-17,ಎಫ್-1673) ನಂಬರ್ ನ ಕೆಎಸ್‍ಆರ್ ಟಿಸಿ ಬಸ್ ಹೋಗುತ್ತಿತ್ತು. ಈ ವೇಳೆ ಸ್ಥಿರ ಕಣ್ಗಾವಲು ಪಡೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ಬಸ್ಸಿನಲ್ಲಿ 11,05,200 ರೂ. ಹಣ ಪತ್ತೆಯಾಗಿದೆ.

    ಈ ಕುರಿತು ವಿಚಾರಿಸಿದಾಗ ಸರಿಯಾದ ದಾಖಲೆ ನೀಡದ ಹಿನ್ನೆಲೆಯಲ್ಲಿ ಹಣವನ್ನು ವಶಪಡಿಸಿಕೊಂಡು ಹಗರಿಬೊಮ್ಮನಹಳ್ಳಿ ಖಜಾನೆಯಲ್ಲಿಡಲಾಗಿದೆ. ಈ ಹಣವು ಜೂಟುರು ಹನುಮೇಶ ಕುವೆಂಪು ಬಡಾವಣೆ ಗಂಗಾವತಿ(ಶ್ರೀ ರಾಮಾಂಜನೇಯ ಕಮರ್ಷಿಯಲ್ ಕಾರ್ಪೊರೇಷನ್ ಸಿಬಿಎಸ್ ಗಂಜ್ ಆರ್‍ಜಿ ರೋಡ್ ಅಂಗಡಿ ಮಾಲೀಕ) ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

    ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಜಹೀರ್ ಅಬ್ಬಾಸ್, ತಾಲೂಕು ನೋಡಲ್ ಅಧಿಕಾರಿ ರಾಜಪ್ಪ, ತಹಸೀಲ್ದಾರ್ ರೆಹಮಾನ್ ಪಾಷ್ ಮತ್ತು ಎಂಸಿಸಿ ನೋಡಲ್ ಅಧಿಕಾರಿ ವಿಶ್ವನಾಥ್ ಕಾರ್ಯಚರಣೆ ನಡೆಸುತ್ತಿದ್ದರು.

    ಈ ಸಂಬಂಧ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 18.5 ಕೆಜಿ ತೂಕದ ಚಿಪ್ಪು ಹಂದಿ ಪತ್ತೆ

    ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 18.5 ಕೆಜಿ ತೂಕದ ಚಿಪ್ಪು ಹಂದಿ ಪತ್ತೆ

    ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ 18.5 ಕೆ.ಜಿ. ತೂಕದ ಎರಡು ಚಿಪ್ಪು ಹಂದಿ ಪತ್ತೆಯಾಗಿದೆ.

    ಸುಮಾರು ಎರಡರಿಂದ ಮೂರು ಲಕ್ಷ ಬೆಲೆಬಾಳುವ ಈ ಚಿಪ್ಪು ಹಂದಿಯನ್ನ ಬೇಟೆಯಾಡಿ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದ ಇಬ್ಬರಲ್ಲಿ ಓರ್ವ ಆರೋಪಿಯನ್ನ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.

    ಹಲಸೂರು ಮೀಸಲು ಅರಣ್ಯದಲ್ಲಿ ಪ್ರದೀಪ್ ಹಾಗೂ ಪ್ರಕಾಶ್ ಇಬ್ಬರು ಯುವಕರು ಎರಡು ಚಿಪ್ಪು ಹಂದಿಯನ್ನ ಬೇಟೆಯಾಡಿದ್ದರು. ಬೇಟೆಯ ಬಳಿಕ ಹಂದಿಯನ್ನ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಎ.ಸಿ.ಎಫ್ ಲೋಹಿತ್ ಕುಮಾರ್, ಆರ್.ಎಫ್.ಓ ತನುಜಕುಮಾರ್ ಹಾಗೂ ಡಿ.ಆರ್.ಎಫ್.ಓ ಸುಂದ್ರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಪ್ರದೀಪ್ ಎಂಬಾತನನ್ನ ಬಂಧಿಸಿ ಎರಡು ಚಿಪ್ಪು ಹಂದಿಯನ್ನ ರಕ್ಷಿಸಿದ್ದಾರೆ.

    ಬಂಧಿತ ಆರೋಪಿಯಿಂದ 18.5 ಕೆ.ಜಿ.ತೂಕದ ಗಂಡು ಮತ್ತು ಹೆಣ್ಣು ಚಿಪ್ಪು ಹಂದಿ ಹಾಗೂ ಒಂದು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಮತ್ತೋರ್ವ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಪ್ರಕಾಶ್‍ಗಾಗಿ ಬಲೆ ಬೀಸಿದ್ದಾರೆ. ಈ ಚಿಪ್ಪು ಹಂದಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

    ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

    ಕಾರಾವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾ ಘಟ್ಟದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

    ಬಾಂಡಿಶಟ್ಟಾ ಮೂಲದ ಕಾರವಾರ ಬಂದರು ಇಲಾಖೆಯ ಕಾರ್ ಚಾಲಕನಾಗಿದ್ದ ವಿನಯ್ ಶಾಂತನಾಗೇಕರ್ ಬಂಧಿತ ಆರೋಪಿ. ಡಿಸಿಬಿ ಇನ್ಸ್ ಪೆಕ್ಟರ್ ಶರಣಗೌಡರವರು ಖಚಿತ ಮಾಹಿತಿ ಆಧಾರದಲ್ಲಿ ಅಕ್ರಮವಾಗಿ ಗೋವಾದಿಂದ ಹೊನ್ನಾವರಕ್ಕೆ ಸಾಗಿಸುತಿದ್ದಾಗ ದಾಳಿ ನಡೆಸಿದ್ದಾರೆ.

    ಈ ವೇಳೆ ಜಲ್ಲಾ ಡಿ.ಸಿ.ಬಿ ಪೊಲೀಸರು ಒಂದು ಲಕ್ಷ ಮೌಲ್ಯದ 470 ಲೀಟರ್ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಒಂದು ಲಕ್ಷ ಮೌಲ್ಯದ ಕಾರನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಮೇಲೆ ಈ ಹಿಂದೆ ಬಂದರು ಇಲಾಖೆಯ ವಾಹನವನ್ನು ಕಳವು ಮಾಡಿ ಮದ್ಯ ಸಾಗಿಸುತಿದ್ದ ದೂರು ಹಾಗೂ ಅಕ್ರಮ ಮದ್ಯ ಸಾಗಟದ ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದು ಬಂದಿದೆ.

    ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಯಾನ್ ಆಗಿದ್ದರು 500, ಸಾವಿರ ಮುಖಬೆಲೆಯ 3.36 ಕೋಟಿ ಹಣ ಪತ್ತೆ

    ಬ್ಯಾನ್ ಆಗಿದ್ದರು 500, ಸಾವಿರ ಮುಖಬೆಲೆಯ 3.36 ಕೋಟಿ ಹಣ ಪತ್ತೆ

    ಗಾಂಧಿನಗರ: 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಸುಮಾರು 2 ವರ್ಷಗಳು ಕಳೆದಿದೆ. ಆದರೂ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗುತ್ತಿವೆ. ಈಗ ಗುಜರಾತಿನಲ್ಲಿ ಹಳೆಯ ನೋಟಿನ ಬರೋಬ್ಬರಿ 3.36 ಕೋಟಿ ಹಣ ಪತ್ತೆಯಾಗಿದೆ.

    ಸೂರತ್ ನ ಕಟೋದರದಲ್ಲಿ 3.36 ಕೋಟಿ ರೂ. ಮೊತ್ತದ ಅಮಾನೀಕರಣಗೊಂಡಿರುವ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಗಗನೀಶ್ ರಜ್‍ಪೂತ್, ಮೊಹಮ್ಮದ್ ಅಲಿ ಶೇಖ್ ಹಾಗೂ ಲತೀಫ್ ಶೇಖ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಕಟೋದರ ಪ್ರದೇಶದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಾರೊಂದರಲ್ಲಿ 1 ಸಾವಿರ ಹಾಗೂ 500 ರೂ.ಗಳ ನಿಷೇಧಿತ ನೋಟುಗಳು ಸಿಕ್ಕಿದೆ. ಕಾರಿನಲ್ಲಿ ಪತ್ತೆಯಾದ ಹಣದಲ್ಲಿ ಹಳೆಯ 500 ರೂ. ಮುಖಬೆಲೆಯ 1.20 ಕೋಟಿ ರೂ. (24 ಸಾವಿರ ನೋಟುಗಳು) ಹಾಗೂ 1 ಸಾವಿರ ರೂ. ಮುಖಬೆಲೆಯ 2.16 ಕೋಟಿ ರೂ. (21,600 ನೋಟುಗಳು) ಪತ್ತೆಯಾಗಿದೆ. ಒಟ್ಟು 3.36 ಕೋಟಿ ಹಣ ಸಿಕ್ಕಿದ್ದು, ಸೂರತ್ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದೇವೆ. ಸದ್ಯಕ್ಕೆ ಸಿಕ್ಕಿರುವ ಹಣದ ಸಂಪೂರ್ಣ ಮಾಹಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 70 ಸಾವಿರ ರೂ. ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದ ಅಬಕಾರಿ ಇಲಾಖೆ

    70 ಸಾವಿರ ರೂ. ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದ ಅಬಕಾರಿ ಇಲಾಖೆ

    ಕಾರವಾರ: ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಿಟ್ಟಿದ್ದ 70 ಸಾವಿರ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ.

    ಕಾರವಾರ ತಾಲೂಕಿನಲ್ಲಿ ಮಾಜಾಳಿ ಮೀನು ಮಾರುಕಟ್ಟೆಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಾರಾಟಕ್ಕಾಗಿ ಮುಚ್ಚಿಟ್ಟಿದ್ದ ಬರೋಬ್ಬರಿ 70 ಸಾವಿರ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಖಚಿತ ಮಾಹಿತಿ ಆಧಾರದ ಮೇರೆಗೆ ಜಿಲ್ಲಾ ಅಬಕಾರಿ ಅಧೀಕ್ಷಕ ಮಂಜುನಾಥ್ ನೇತ್ರತ್ವದ ತಂಡ ಮಾಜಾಳಿ ಮೀನು ಮಾರುಕಟ್ಟೆಗೆ ಹೋಗಿದ್ದು, ಅಲ್ಲಿ ದಾಳಿ ನಡೆಸಿದ್ದಾರೆ. ಆಗ 70 ಸಾವಿರ ಮೌಲ್ಯದ 273 ಲೀಟರ್ ಗೋವಾ ಪೆನ್ನಿ, ಬಿಯರ್ ಮತ್ತು ವಿಸ್ಕಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.