Tag: sehwag

  • ಕೂ ಸೇರಿದ 15 ದಿನಗಳಲ್ಲೇ 1 ಲಕ್ಷ ಅನುಯಾಯಿಗಳನ್ನು ಪಡೆದ ಸೆಹ್ವಾಗ್ !

    ಕೂ ಸೇರಿದ 15 ದಿನಗಳಲ್ಲೇ 1 ಲಕ್ಷ ಅನುಯಾಯಿಗಳನ್ನು ಪಡೆದ ಸೆಹ್ವಾಗ್ !

    ಬೆಂಗಳೂರು: ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರು ಬಹು-ಭಾಷೆಯ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ಆಪ್ ಸೇರಿದ ಕೇವಲ 15 ದಿನಗಳಲ್ಲಿ 1 ಲಕ್ಷ ಅನುಯಾಯಿಗಳನ್ನು ಪಡೆದಿದ್ದಾರೆ.

    @VirenderSehwag ಹ್ಯಾಂಡಲ್ ಮೂಲಕ ಹಾಸ್ಯಮಯ, ನೇರ ಮಾತು ಹಾಗು ಚಮತ್ಕಾರಿ ಕಾಮೆಂಟ್ ಗಳಿಂದಾಗಿ ಸೆಹ್ವಾಗ್ ಅವರು ಮೇಕ್-ಇನ್-ಇಂಡಿಯಾ ವೇದಿಕೆಯಲ್ಲಿ ಎಲ್ಲಾ ಸ್ಥಳೀಯ ಭಾಷೆಗಳ ಜನರ ಆಕರ್ಷಣೆ ಗಳಿಸಿದ್ದಾರೆ.

    ಅವರವರದ್ದೇ ಭಾಷೆಗಳಲ್ಲಿ ಅಭಿವ್ಯಕ್ತಿಗೊಳಿಸಲು ಒಂದು ಮುಕ್ತ ವೇದಿಕೆಯಾಗಿರುವ ‘ಕೂ’ ಗೆ ಇತ್ತೀಚೆಗೆ ಕ್ರಿಕೆಟ್ ಮಾಸದಲ್ಲಿ ಹೆಸರಾಂತ ಕ್ರಿಕೆಟಿಗರು ಮತ್ತು ವ್ಯಾಖ್ಯಾನಕಾರರು ಸೇರಿದ್ದು , ಡೌನ್‌ಲೋಡ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಬಳಕೆದಾರರು ಪ್ಲಾಟ್‌ಫಾರ್ಮ್‌ನ ಬಹು-ಭಾಷೆಯ ವೈಶಿಷ್ಟ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ಆಪ್ ಪ್ರಾರಂಭವಾಗಿದ್ದು, ಕೇವಲ 20 ತಿಂಗಳ ಅವಧಿಯಲ್ಲಿ 1.5 ಕೋಟಿ (15 ಮಿಲಿಯನ್) ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಈ ಕ್ರಿಕೆಟ್ ಸೀಸನ್ ನಲ್ಲಿಯೇ 5 ಮಿಲಿಯನ್ ಜನರು ವೇದಿಕೆಗೆ ಸೇರಿಕೊಂಡಿದ್ದಾರೆ. ಟಿ 20 ವಿಶ್ವಕಪ್ ಸರಣಿ ನಡೆಯುತ್ತಿರುವ ಈ ಸಂದರ್ಭದಲ್ಲಿ ವೇದಿಕೆಗೆ ಮತ್ತಷ್ಟು ಜನರು ಸೇರುವ ನಿರೀಕ್ಷೆಯಿದೆ.

    KOO LOGO

    2021 ರ ಟಿ 20 ವಿಶ್ವಕಪ್‌ ಸಂದರ್ಭದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಕೂ ಆಕರ್ಷಕ ಪ್ರಚಾರ ಹಾಗು ಸ್ಪರ್ಧೆಗಳನ್ನು ಪ್ರಕಟಿಸಿದೆ. ಇದು ಭಾಷೆಗಳಲ್ಲಿ ತಲ್ಲೀನಗೊಳಿಸುವ ಮತ್ತು ಹೈಪರ್‌ಲೋಕಲ್ ಅನುಭವವನ್ನು ನೀಡುತ್ತದೆ. ಸೆಹ್ವಾಗ್ ಜೊತೆಗೆ, ವೆಂಕಟೇಶ್ ಪ್ರಸಾದ್, ನಿಖಿಲ್ ಚೋಪ್ರಾ, ಸೈಯದ್ ಸಾಬಾ ಕರೀಮ್, ಪಿಯೂಷ್ ಚಾವ್ಲಾ, ಹನುಮ ವಿಹಾರಿ, ಜೋಗಿಂದರ್ ಶರ್ಮಾ, ಪ್ರವೀಣ್ ಕುಮಾರ್, ವಿಆರ್‌ವಿ ಸಿಂಗ್, ಅಮೋಲ್ ಮುಜುಮ್ದಾರ್, ವಿನೋದ್ ಕಾಂಬ್ಳಿ, ವಾಸಿಂ ಜಾಫರ್, ಆಕಾಶ್ ಚೋಪ್ರಾ, ದೀಪ್ ದಾಸ್‌ಗುಪ್ತಾ ಮುಂತಾದವರು ಕೂ ಆಪ್‌ಗೆ ಸೇರಿದ್ದಾರೆ. ಮತ್ತು ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಲು ಅವರು ಸಕ್ರಿಯವಾಗಿ ಕೂ ಮಾಡುತ್ತಿರುವುದರಿಂದ ಭಾರೀ ಅನುಯಾಯಿಗಳನ್ನು ಗಳಿಸುತ್ತಿದ್ದಾರೆ. ಇದನ್ನೂ ಓದಿ: 14ನೇ ಆವೃತ್ತಿಯ ಐಪಿಎಲ್‍ನ ಕುತೂಹಲಕಾರಿ ಸಂಗತಿಗಳಿವು

    ‘ವೀರೇಂದ್ರ ಸೆಹ್ವಾಗ್ ಅವರು ಇಷ್ಟು ಕಡಿಮೆ ಅವಧಿಯಲ್ಲಿ 100,000 ಮೈಲಿಗಲ್ಲನ್ನು ದಾಟಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಸ್ಥಳೀಯ ಭಾಷೆಗಳಲ್ಲಿ ಸಂಭಾಷಣೆ ನಡೆಸಲು ಕೂ ವೇದಿಕೆಯಾಗಿದೆ. ಭಾರತೀಯರಾದ ನಮಗೆ ಕ್ರಿಕೆಟ್ ಒಂದು ಭಾವನೆ ಮತ್ತು ಪಂದ್ಯಗಳ ಸುತ್ತ ಸಂಭಾಷಣೆಗಳು ಸಾಮಾಜಿಕ ಮಾಧ್ಯಮದಲ್ಲಿ ಎಂಗೇಜ್ಮೆಂಟ್ ಉತ್ತೇಜಿಸುತ್ತದೆ. ನಮ್ಮ ಪ್ಲಾಟ್‌ಫಾರ್ಮ್ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಆಟಗಾರರು ಮತ್ತು ಕಾಮೆಂಟೇಟರ್ಸ್‌ಗಳ ಬಗ್ಗೆ ತಮ್ಮ ಆಯ್ಕೆಯ ಭಾಷೆಯಲ್ಲಿ ಸಂಭಾಷಣೆಗೆ ಅವಕಾಶವಿದೆ. ವಿಶ್ವಕಪ್ ಮತ್ತು ಅದರಾಚೆಗೂ ಬಳಕೆದಾರರು ಪಾಲ್ಗೊಳ್ಳಲು ಕೂ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿದೆ’ ಎಂದು ಕೂ ವಕ್ತಾರರು ವಿಶ್ವಾಸವ್ಯಕ್ತಪಡಿಸಿದ್ದಾರೆ.

    ಕೂ ಬಗ್ಗೆ: ಮಾರ್ಚ್ 2020ರಲ್ಲಿ ‘ಕೂ’ ಸ್ಥಾಪನೆಯಾಯಿತು. ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ, ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹಲವಾರು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಬಹುದು. ಭಾರತದಂತಹ ಕೇವಲ 10% ಇಂಗ್ಲಿಷ್ ಮಾತನಾಡುವ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಮ್ಮ ಸ್ವಂತ ಭಾಷೆಯ ಅನುಭವಗಳನ್ನು ನೀಡಲು ಮತ್ತು ಜನರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.

  • ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಸ್ಪಿನ್ ಪಾಠವನ್ನು ಹೇಳಿಕೊಟ್ಟಿದ್ದಾನೆ.

    ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಸ್ಪಿನ್ನರ್ ಆಡಿಸದ ವಿಚಾರವನ್ನು ಶೇನ್ ವಾನ್ ಟ್ವಿಟ್ಟರ್ ನಲ್ಲಿ ಪ್ರಸ್ತಾಪ ಮಾಡಿ ಅಸಮಾಧಾನ ಹೊರ ಹಾಕಿದ್ದರು.

    “ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡ ಒಬ್ಬ ಪರಿಣತ ಸ್ಪಿನ್ನರನ್ನು ಆಡಿಸದೇ ಇರುವುದು ನಿರಾಸೆ ತಂದಿದೆ. ಈ ಪಿಚ್‍ನಲ್ಲಿ ಸ್ಪಿನ್ನರ್ ಗಳು  ದೊಡ್ಡ ತಿರುವು ಪಡೆಯಬಲ್ಲರು. ಈಗಾಗಲೇ ಪಿಚ್‍ನಲ್ಲಿ ಬೌಲರ್ ಗಳ ಪಾತ್ರ ದೊಡ್ಡದಾಗಿ ಕಾಣಿಸುತ್ತದೆ. ಒಂದು ವೇಳೆ ಈ ಪಿಚ್‍ನಲ್ಲಿ ಸ್ಪಿನ್ ಲಭ್ಯವಾದರೆ, ಭಾರತ ತಂಡ 270-300 ರನ್ ಗಳಿಸಿದರೆ ಈ ಪಂದ್ಯ ಕಿವೀಸ್ ಪಾಲಿಗೆ ಮುಗಿದಂತೆ. ಕೇವಲ ಹವಾಮಾನವಷ್ಟೇ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲದು ಎಂದು ವಾರ್ನ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಅಭಿಮಾನಿಯೊಬ್ಬ, “ಶೇನ್ ನಿಮಗೆ ನಿಜಕ್ಕೂ ಸ್ಪಿನ್ ಬೌಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆಯೇ? ಪಿಚ್ ಒಣಗಿದರೆ ಮಾತ್ರ ಸ್ಪಿನ್ ಆಗಲು ಸಾಧ್ಯ. ಎಲ್ಲಾ ದಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಸ್ಪಿನ್ ಆಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾನೆ.

    ಅಭಿಮಾನಿಯ ಟ್ವೀಟ್‍ಗೆ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿ,ಶೇನ್ ವಾರ್ನ್ ಅವರ ಕಾಲೆಳೆದಿದ್ದಾರೆ. “ಶೇನ್ ವಾರ್ನ್ ನಿಮ್ಮ ಈ ಟ್ವೀಟ್ ಅನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳಬೇಕು ಮತ್ತು  ಸ್ಪಿನ್ ಹೇಗೆ ಆಗುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ” ಎಂದು ಹೇಳಿ ಗೂಗ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದರೆ, ನ್ಯೂಜಿಲೆಂಡ್ ತಂಡ ಯಾವುದೇ ಸ್ಪಿನ್ನರ್‍ಗಳನ್ನು ತೆಗೆದುಕೊಳ್ಳದೆ ಐವರು ವೇಗಿಗಳೊಂದಿಗೆ ಕಣಕ್ಕೆ ಇಳಿದಿದೆ.

  • ಸೆಹ್ವಾಗ್‌ ಸ್ಫೋಟಕ ಅರ್ಧಶತಕ – ಬಾಂಗ್ಲಾ ವಿರುದ್ಧ ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಸೆಹ್ವಾಗ್‌ ಸ್ಫೋಟಕ ಅರ್ಧಶತಕ – ಬಾಂಗ್ಲಾ ವಿರುದ್ಧ ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ರಾಯ್‌ಪುರ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು ಬಾಂಗ್ಲಾದೇಶ ಲೆಜೆಂಡ್‌ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ರೋಡ್‌ ಸೇಫ್ಟಿ ವಿಶ್ವ ಸೀರಿಸ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಗ್ಲಾದೇಶ ಮೊದಲು ಬ್ಯಾಟಿಂಗ್‌ ಮಾಡಿ 19.4 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್‌ ಆಯ್ತು. 110 ರನ್‌ಗಳ ಸುಲಭ ಸವಾಲನ್ನು ಪಡೆದ ಭಾರತ 10.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 114 ರನ್‌ಗಳ ಗುರಿಯನ್ನು ಮುಟ್ಟಿತು.

    https://twitter.com/urmilpatel30/status/1367869943996416003

    ವೀರೇಂದ್ರ ಸೆಹ್ವಾಗ್‌ ಸ್ಫೋಟಕ 80 ರನ್‌(35 ಎಸೆತ, 10 ಬೌಂಡರಿ, 5 ಸಿಕ್ಸರ್‌) ಹೊಡೆದರೆ ನಾಯಕ ತೆಂಡೂಲ್ಕರ್‌ 33 ರನ್‌(26 ಎಸೆತ, 5 ಬೌಂಡರಿ) ಹೊಡೆದರು.

    ಬಾಂಗ್ಲಾ ಪರ ನಿಜಮುದ್ದೀನ್‌ 49 ರನ್‌ ಹೊಡೆದು ಔಟಾದರು. ಭಾರತದ ಪರ ವಿನಯ್‌ ಕುಮಾರ್‌, ಪ್ರಗ್ಯಾನ್‌ ಓಜಾ, ಯುವರಾಜ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರು. ಮನ್‌ಪ್ರೀತ್‌ ಗೊನಿ, ಯೂಸೂಫ್‌ ಪಠಾಣ್‌ ತಲಾ ಒಂದು ವಿಕೆಟ್‌ ಪಡೆದರು.

    3 ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದೆ. ಭಾರತ ತಂಡ ಕಳೆದ ವರ್ಷವೇ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಕೊರೊನಾ ಕಾರಣದಿಂದ ಈ ಟಿ 20 ಸರಣಿ ಈ ವರ್ಷಕ್ಕೆ ಮುಂದೂಡಿಕೆಯಾಗಿತ್ತು.

  • ಭಾರತಕ್ಕೆ 82 ರನ್‌ಗಳ ಮುನ್ನಡೆ – ರಹಾನೆಯ ಶತಕದಾಟಕ್ಕೆ ಜೈಹೋ ಎಂದ ಕೊಹ್ಲಿ, ಸೆಹ್ವಾಗ್‌

    ಭಾರತಕ್ಕೆ 82 ರನ್‌ಗಳ ಮುನ್ನಡೆ – ರಹಾನೆಯ ಶತಕದಾಟಕ್ಕೆ ಜೈಹೋ ಎಂದ ಕೊಹ್ಲಿ, ಸೆಹ್ವಾಗ್‌

    ಮೆಲ್ಬರ್ನ್: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆಯ ಅಜೇಯ ಶತಕದ ಆಟವಾಡಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟಿದ್ದಾರೆ.

    ಎರಡನೇ ದಿನದಾಟಕ್ಕೆ 5 ವಿಕೆಟ್‌ ಕಳೆದುಕೊಂಡು ಭಾರತ 277 ರನ್‌ ಹೊಡೆಯುವ ಮೂಲಕ 82 ರನ್‌ಗಳ ಮುನ್ನಡೆಯಲ್ಲಿದೆ.

    ನಿನ್ನೆ 28 ರನ್‌ ಗಳಿಸಿದ್ದ ಶುಭ್‌ಮನ್‌ ಗಿಲ್‌ ಇಂದು 45 ರನ್‌(65 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಚೇತೇಶ್ವರ ಪೂಜಾರ 17 ರನ್‌, ಹನುಮ ವಿಹಾರಿ 21 ರನ್‌, ರಿಷಭ್‌ ಪಂತ್‌ 29 ರನ್‌ ಹೊಡೆದು ಔಟಾದರು.

    ವಿಕೆಟ್‌ ಉರುಳುತ್ತಿದ್ದಾಗ ಮುರಿಯದ 6ನೇ ವಿಕೆಟ್‌ಗೆ ಜೊತೆಯಾದ ಜಡೇಜಾ ಜೊತೆ ಸೇರಿ ರಹಾನೆ 179 ಎಸೆತದಲ್ಲಿ 100 ರನ್‌ ಜೊತೆಯಾಟವಾಡಿದರು. ರಹಾನೆ 104 ರನ್‌(200 ಎಸೆತ, 12 ಬೌಂಡರಿ) ಹೊಡೆದರೆ ಜಡೇಜಾ 40 ರನ್‌(104 ಎಸೆತ, 1 ಬೌಂಡರಿ) ಹೊಡೆದಿದ್ದಾರೆ.

    ಟ್ವೀಟ್‌ ಮಾಡಿ ರಹನೆಯ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿ, ನಮಗೆ ಮತ್ತೊಂದು ಉತ್ತಮ ದಿನ. ಸರಿಯಾದ ಟೆಸ್ಟ್ ಕ್ರಿಕೆಟ್. ಜಿಂಕ್ಸ್‌ನಿಂದ ಮತ್ತೊಂದು ಶತಕ ಎಂದು ಶ್ಲಾಘಿಸಿದ್ದಾರೆ.

    ವೀರೇಂದ್ರ ಸೆಹ್ವಾಗ್‌ ಬ್ರಿಲಿಯಂಟ್‌ ಸೆಂಚೂರಿ ಎಂದು ಹೇಳಿದರೆ, ನಾಯಕನ ಶತಕದಾಟ, ಗಿಲ್, ಪಂತ್ ಮತ್ತು ಜಡೇಜಾ ಅವರಿಂದ ಉಪಯುಕ್ತ ಕೊಡುಗೆಗಳು ಎಂದು ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದಾರೆ.

  • ದ್ವಿಶತಕ ಸಿಡಿಸಿ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಸಂಜು ಸ್ಯಾಮ್ಸನ್

    ದ್ವಿಶತಕ ಸಿಡಿಸಿ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಸಂಜು ಸ್ಯಾಮ್ಸನ್

    ಪಣಜಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ತಂಡದ ಯುವ ಆಟಗಾರ ಸಂಜು ಸ್ಯಾಮ್ಸನ್ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದು, ಟೂರ್ನಿಯಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಟೂರ್ನಿಯ ಗ್ರೂಪ್ ‘ಎ’ ನಲ್ಲಿ ಗೋವಾ ತಂಡದ ಎದುರು ಸಂಜು ಸ್ಯಾಮ್ಸನ್ 129 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳ ನೆರವಿನಿಂದ ಅಜೇಯ 212 ರನ್ ಗಳಿಸಿದ್ದಾರೆ. ಆ ಮೂಲಕ ಕಳೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತರಖಂಡ ಆಟಗಾರ ಕರಣ್‍ವೀರ್ ಕೌಶಾಲ್ 202 ರನ್ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲಿ 1 ಶತಕವೂ ದಾಖಲಿಸಿದ ಸಂಜು ಇದಕ್ಕೂ ಮುನ್ನ ನಡೆದ ಟೂರ್ನಿಯಲ್ಲಿ ಏಕೈಕ ಅರ್ಧ ಶತಕ ಗಳಿಸಿದ್ದರು.

    ಇಂದಿನ ಪಂದ್ಯದಲ್ಲಿ ಕೇರಳ ತಂಡ ಮತ್ತೊಬ್ಬ ಆಟಗಾರ ಸಚಿನ್ ಬೇಬಿರೊಂದಿಗೆ ಸ್ಯಾಮ್ಸನ್ 338 ರನ್ ಗಳ ಜೊತೆಯಾಟ ನೀಡಿದ್ದು, ಪರಿಣಾಮ ಕೇರಳ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ 377 ರನ್ ಪೇರಿಸಿತು. ಸಂಜುಗೆ ಸಾಥ್ ನೀಡಿದ ಸಚಿನ್ ಬೇಬಿ ಕೂಡ 135 ಎಸೆತಗಳಲ್ಲಿ 127 ರನ್ ಗಳಿಸಿದ್ದರು.

    ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲಿ ಸಂಜು ಸಿಡಿಸಿದ ಮೊದಲ ದ್ವಿಶಕ ಇದಾಗಿದ್ದು, ಈ ಹಿಂದೆ ಸಚಿನ್, ಸೆಹ್ವಾಗ್, ರೋಹಿತ್ ಶರ್ಮಾ, ಶಿಖರ್ ಧವನ್, ಕರಣ್ ಕೌಶಾಲ್ ಬಳಿಕ ಸ್ಥಾನವನ್ನು ಸಂಜು ಸ್ಯಾಮ್ಸನ್ ಪಡೆದಿದ್ದಾರೆ.

  • ಪ್ರೀತಿ ಝಿಂಟಾ ಟೀಂಗೆ ಗುಡ್‍ಬೈ ಹೇಳಿದ್ರು ಸೆಹ್ವಾಗ್!

    ಪ್ರೀತಿ ಝಿಂಟಾ ಟೀಂಗೆ ಗುಡ್‍ಬೈ ಹೇಳಿದ್ರು ಸೆಹ್ವಾಗ್!

    ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಐಪಿಎಲ್‍ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಹೊರಬಂದಿದ್ದಾರೆ ಈ ವಿಷಯವನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಸೆಹ್ವಾಗ್ ಅವರು ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ನಾನು ಕಿಂಗ್ಸ್ ಇಲೆವೆನ್ ಪಂಜಾಬ್‍ನಲ್ಲಿ 2 ಸೀಸನ್ ನಲ್ಲಿ ಆಟಗಾರನಾಗಿ ಮತ್ತು 3 ಸೀಸನ್ ಗಳಲ್ಲಿ ಮೆಂಟರ್ ಆಗಿ ಅದ್ಭುತ ಸಮಯವನ್ನು ಕಳೆದಿದ್ದೇನೆ. ಕಿಂಗ್ಸ್ ಇಲೆವೆನ್ ಅವರೊಂದಿಗೆ ನನ್ನ ಸಹಯೋಗವು ಕೊನೆಗೊಳ್ಳುತ್ತದೆ. ನಾನು ಇಲ್ಲಿ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ ಅದಕ್ಕೆ ನಾನು ಕೃತಜ್ಞರಾಗಿರುತ್ತೇನೆ. ಮುಂದಿನ ದಿನಗಳಿಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

    ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾನ್ ತಂಡ ಬಿಟ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಹಿಂದಿನ ಸರಣಿಯಲ್ಲಿ ಸೆಹ್ವಾಗ್ ಹಾಗೂ ಕಿಂಗ್ಸ್ ಇಲವೆನ್ ಮಾಲೀಕಳಾದ ಪ್ರೀತಿ ಝಿಂಟಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಚಾರವಾಗಿ ನನ್ನ ಮತ್ತು ಸೆಹ್ವಾಗ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಸ್ಪಷ್ಟನೆ ನೀಡಿದ್ದರು.

    ನಮ್ಮ ಪರವಾಗಿ ಸುದ್ದಿ ಪ್ರಕಟವಾಗುವಂತೆ ನಾವು ಮಾಧ್ಯಮಗಳಿಗೆ ಹಣ ನೀಡಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಎಲ್ಲವೂ ಸುಳ್ಳು ಎಂದು ಪ್ರೀತಿ ಝಿಂಟಾ ಟ್ವೀಟ್ ಮಾಡಿದ್ದರು. ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಸುಲಭ ಮೊತ್ತವನ್ನು ಬೆನ್ನತ್ತಲು ತಂಡ ವಿಫಲವಾಗಲು ಮೆಂಟರ್ ಸೆಹ್ವಾಗ್ ಅವರ ನಿರ್ಧಾರವೇ ಕಾರಣ ಎಂದು ಪ್ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

    ರಾಜಸ್ಥಾನ ಪಂದ್ಯದಲ್ಲಿ ನಾಯಕ ಆಶ್ವಿನ್‍ಗೆ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಿ ನಂಬರ್ 3 ಸ್ಥಾನದಲ್ಲಿ ಕಳಿಸಲಾಗಿತ್ತು. ಆದರೆ ಪಂದ್ಯದಲ್ಲಿ ಅಶ್ವಿನ್ ಶೂನ್ಯ ಸುತ್ತುವ ಮೂಲಕ ಎಲ್ಲ ಲೆಕ್ಕಾಚಾರನ್ನು ತಲೆ ಕೆಳಗೆ ಮಾಡಿದ್ದರು. ಸದ್ಯ ಪಂದ್ಯದ ಫಲಿತಾಂಶದಿಂದ ಪ್ರೀತಿ ಅಸಮಾಧಾನಗೊಂಡಿದ್ದರು ಎಂದು ಬರೆಯಲಾಗಿತ್ತು.

    ಪಂದ್ಯದ ಬಳಿಕ ಆಟಗಾರರು ಮೈದಾನದಿಂದ ಮರಳುವ ಮುನ್ನವೇ ಪ್ರೀತಿ ಝಿಂಟಾ ಈ ಕುರಿತು ಪ್ರಶ್ನೆ ಮಾಡಿದ್ದರು. ಆದ್ರೆ ಸೆಹ್ವಾಗ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ಗೆ ಆಯ್ಕೆ ಆಗುವ ಎಲ್ಲಾ ಅವಕಾಶ ಇರುವ ವೇಳೆ ಈ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು. ಇದು ಆಟಗಾರ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸೆಹ್ವಾಗ್ ಪ್ರತಿಕ್ರಿಯೇ ನೀಡಿಲ್ಲ ಎಂದು ವರದಿ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ಟೆಸ್ಟ್ ವೇಳೆ ದ್ರಾವಿಡ್ ನೆನಪು ಮಾಡ್ಕೊಂಡ ಸೆಹ್ವಾಗ್

    ಬೆಂಗಳೂರು ಟೆಸ್ಟ್ ವೇಳೆ ದ್ರಾವಿಡ್ ನೆನಪು ಮಾಡ್ಕೊಂಡ ಸೆಹ್ವಾಗ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಯುತ್ತಿದಂತೆ ಸೆಹ್ವಾಗ್ ತಮ್ಮ ಆತ್ಮೀಯ ಗೆಳೆಯ ದ್ರಾವಿಡ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ದ್ರಾವಿಡ್ ನಿವೃತ್ತಿಯ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ನಂ.3 ರ ಬ್ಯಾಟಿಂಗ್ ಕ್ರಮದಲ್ಲಿ ರಾಹುಲ್ ಹೆಸರನ್ನು ಕಾಣುತ್ತಿರುವುದಾಗಿ ಹೇಳಿದ್ದಾರೆ. ಅಫ್ಘಾನ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಧವನ್ ಸ್ಫೋಟಕ ಶತಕ ಸಿಡಿಸಿ ಔಟಾಗುತ್ತಿದಂತೆ ರಾಹುಲ್ ಬ್ಯಾಟಿಂಗ್ ನಡೆಸಿ ಅರ್ಧಶತಕ (54) ಪೂರೈಸಿದರು.

    ಪಂದ್ಯದಲ್ಲಿ ಸೆಹ್ವಾಗ್ ದಾಖಲೆ ಮುರಿದ ಧವನ್ ಮೊದಲ ದಿನ ಭೋಜನ ವಿರಾಮಕ್ಕೂ ಮುನ್ನ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಸೆಹ್ವಾಗ್ 2006 ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ 99 ರನ್, 1967 ರಲ್ಲಿ ಫಾರುಖ್ ಎಂಜಿನಿಯರ್ 94 ರನ್ ಗಳಿಸಿದ್ದರು. ಅಲ್ಲದೇ ಪಂದ್ಯದ ವಿರಾಮದ ವೇಳೆ ಶತಕ ಸಿಡಿಸಿದ 6ನೇ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದರು. ಈ ಹಿಂದೆ ಆಸೀಸ್ ನ ವಿಕ್ಟರ್ ಟ್ರಂಪರ್, ಚಾರ್ಲ್ಸ್ ಮ್ಯಾಕಾರ್ಟ್‍ನಿ, ಡಾನ್ ಬ್ರಾಡ್ ಮನ್, ಡೇವಿಡ್ ವಾರ್ನರ್ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಮಜೀದ್ ಖಾನ್ ಈ ಸಾಧನೆ ಮಾಡಿದ್ದರು.

  • ಭಿಕ್ಷೆ ಬೇಡಲ್ಲ, ಸಾಲವನ್ನು ಮರುಪಾವತಿಸಲು 72ನೇ ವರ್ಷದಲ್ಲಿ ಟೈಪಿಸ್ಟ್ ಆದ್ರು ಸೂಪರ್ ವುಮನ್!

    ಭಿಕ್ಷೆ ಬೇಡಲ್ಲ, ಸಾಲವನ್ನು ಮರುಪಾವತಿಸಲು 72ನೇ ವರ್ಷದಲ್ಲಿ ಟೈಪಿಸ್ಟ್ ಆದ್ರು ಸೂಪರ್ ವುಮನ್!

    ಭೋಪಾಲ್: ತೆಗೆದುಕೊಂಡ ಸಾಲವನ್ನು ಪಾವತಿಸಲು 72 ವರ್ಷದ ಮಹಿಳೆಯೊಬ್ಬರು ಟೈಪಿಸ್ಟ್ ಉದ್ಯೋಗವನ್ನು ಸೇರಿಕೊಂಡಿದ್ದಾರೆ.

    ತನ್ನ ಮಗಳ ಅಪಘಾತದ ನಂತರ ಚಿಕಿತ್ಸೆಗೆ ತೆಗೆದುಕೊಂಡ ಸಾಲವನ್ನು ಪಾವತಿ ಮಾಡಲು ಲಕ್ಷ್ಮೀಬಾಯಿ ಎಂಬವರು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬೆರಳಚ್ಚು ಯಂತ್ರದಿಂದ ದಾಖಲೆಗಳನ್ನು ಟೈಪ್ ಮಾಡುವ ಮೂಲಕ ತನ್ನ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ.

    ನಾನು ಭಿಕ್ಷೆ ಬೇಡಲ್ಲ. ತೆಗೆದುಕೊಂಡಿರುವ ಸಾಲವನ್ನು ಪಾವತಿಸಲು ಈ ವೃತ್ತಿಯನ್ನು ಆಯ್ದುಕೊಂಡಿರುವುದಾಗಿ ಹೇಳಿದ್ದಾರೆ. ನನಗೆ ಡಿಸಿ ರಾಘವೇಂದ್ರ ಸಿಂಗ್ ಮತ್ತು ಎಸ್‍ಡಿಎಂ ಭಾವನ ವಿಲಂಬೆ ಅವರ ಸಹಾಯದಿಂದ ಈ ಕೆಲಸ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜೂನ್ 12 ರಂದು ಸೂಪರ್ ಲಕ್ಷ್ಮೀಬಾಯಿ ಅವರ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಮಧ್ಯಪ್ರದೇಶದ ಸೆಹೋರ್ ನಲ್ಲಿ ವಾಸವಾಗಿರುವ ಈ ಮಹಿಳೆಯಿಂದ ಕಲಿಯಲು ಮತ್ತು ಕೆಲಸ ಮಾಡಲು ವಯಸ್ಸು ಬೇಕಾಗಿಲ್ಲ. ಯಾವುದೇ ಒಂದು ಚಿಕ್ಕ ಕೆಲಸ ಕಲಿಕೆಯ ಪಾಠವಿದ್ದಂತೆ. ಇವರಿಂದ ಯುವಕರು ಕಲಿಯುವುದು ತುಂಬಾನೇ ಇದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಹ್ಯಾಟ್ಸ್ ಆಫ್ ಎಂದ ಕೈಫ್

    ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಹ್ಯಾಟ್ಸ್ ಆಫ್ ಎಂದ ಕೈಫ್

    ನವದೆಹಲಿ: ಇರಾನ್ ನಲ್ಲಿ ನಡೆಯುತ್ತಿರುವ 2018 ರ ಏಷ್ಯಾ ಚೆಸ್ ಟೂರ್ನಿಯಿಂದ ಇತ್ತೀಚೆಗಷ್ಟೇ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ ಭಾರತ ತಂಡದ ಆಟಗಾರ್ತಿ ಸೌಮ್ಯಾ ಸ್ವಾಮಿನಾಥನ್ ನಡೆಗೆ ಕ್ರಿಕೆಟಿಗ ಮಹಮ್ಮದ್ ಕೈಫ್ ಬೆಂಬಲ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೈಫ್, ಯಾವುದೇ ಕ್ರೀಡೆಯಲ್ಲಿ ಧಾರ್ಮಿಕ ನಿಯಮಗಳನ್ನು ಅನುಸರಿಸುವಂತೆ ಒತ್ತಡ ಹೇರುವುದು ಉತ್ತಮವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇರಾನ್ ಟೂರ್ನಿಯಿಂದ ಹೊರ ನಡೆದ ನಿಮ್ಮ ನಿರ್ಧಾರಕ್ಕೆ `ಹ್ಯಾಟ್ಸ್ ಅಫ್’ ಸೌಮ್ಯಾ. ಕ್ರೀಡಾಪಟುಗಳ ಮೇಲೆ ಯಾವುದೇ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಹೇರಬಾರದು. ಅದರಲ್ಲೂ ಅಂತರಾಷ್ಟ್ರೀಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ರಾಷ್ಟ್ರ ನಿಯಮ ರೂಪಿಸಬಾರದು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕೈಫ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಸೌಮ್ಯಾ ಅವರ ನಿರ್ಧಾರಕ್ಕೆ ಕೈಫ್ ಅಲ್ಲದೇ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹ ಬೆಂಬಲ ನೀಡಿದ್ದು, ಸೌಮ್ಯಾ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    https://www.facebook.com/permalink.php?story_fbid=2177807325593182&id=218386564868611

    ಏನಿದು ಪ್ರಕರಣ?
    ಇರಾನ್ ನಲ್ಲಿ ಜೂನ್ 26 ರಿಂದ ಆಗಸ್ಟ್ 4 ವರೆಗೆ ನಡೆಯಲಿರುವ ಏಷ್ಯಾ ಚೆಸ್ ಟೂರ್ನಿಯಿಂದ ಭಾರತದ ತಂಡದ ಆಟಗಾರ್ತಿ ಸೌಮ್ಯಾ ಸ್ವತಃ ನಿರ್ಧಾರದಿಂದ ಹೊರ ನಡೆದಿದ್ದರು. ಇರಾನ್ ದೇಶ ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮವಿದೆ. ಇದರಂತೆ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರ್ತಿಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮ ರೂಪಿಸಿತ್ತು. ಈ ಕಾರಣದಿಂದ ಸ್ಕಾರ್ಫ್ ಧರಿಸಲು ನಿರಾಕರಿಸಿದ್ದ ಸೌಮ್ಯ ಟೂರ್ನಿಯಿಂದ ಹೊರ ನಡೆಯುವ ತೀರ್ಮಾನವನ್ನು ಪ್ರಕಟಿಸಿದ್ದರು.

    ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಸೌಮ್ಯ, ಇರಾನ್ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಗಳು ಸೇರಿದಂತೆ ನನ್ನ ಮಾನವ ಹಕ್ಕುಗಳನ್ನು ರಕ್ಷಿಸಿ ಕೊಳ್ಳಲು ಟೂರ್ನಿಗೆ ತೆರಳದೇ ಇರುವುದು ಸೂಕ್ತ ಎಂದು ಬರೆದುಕೊಂಡಿದ್ದಾರೆ.

    ಇದೇ ಮೊದಲಲ್ಲ: ಭಾರತೀಯ ಆಟಗಾರರು ಡ್ರೆಸ್ ಕೋಡ್ ಕಾರಣದಿಂದ ಈ ಹಿಂದೆಯೂ ಹಲವು ಟೂರ್ನಿಗಳಿಂದ ಹೊರ ನಡೆದಿದ್ದರು. ಪ್ರಮುಖವಾಗಿ 2016 ರಲ್ಲಿ ಶೂಟರ್ ಹೀನಾ ಸಿಂಧು ಏಷ್ಯಾ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ನಿಂದ ಹೊರ ನಡೆದಿದ್ದರು.

  • ಸಚಿನ್ ರಾಮನಾದ್ರೆ, ಸೆಹ್ವಾಗ್ ಹನುಮಾನ್-ವೈರಲ್ ಆಗುತ್ತಿದೆ ವಿಶೇಷ ಫೋಟೋ

    ಸಚಿನ್ ರಾಮನಾದ್ರೆ, ಸೆಹ್ವಾಗ್ ಹನುಮಾನ್-ವೈರಲ್ ಆಗುತ್ತಿದೆ ವಿಶೇಷ ಫೋಟೋ

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಚಿನ್ ತೆಂಡೂಲ್ಕರ್ ಜೊತೆಗಿನ ವಿಶೇಷ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಚಿತ್ರಕ್ಕೆ ಅಭಿಮಾನಿಗಳೂ ಫಿದಾ ಆಗಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಸೆಹ್ವಾಗ್, ಸಚಿನ್ ಅವರ ಮುಂದೇ ಮಂಡಿಯೂರಿ ಹನುಮಂತನಂತೆ ಕುಳಿತ್ತಿದ್ದು, ಸಚಿನ್ ರಾಮನಂತೆ ನಿಂತಿದ್ದಾರೆ. ಈ ಚಿತ್ರವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಇಬ್ಬರ ನಡುವಿನ ಬಾಂಧವ್ಯ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

    ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿನ್, ಸೆಹ್ವಾಗ್ ಕುರಿತ ಹಲವು ವಿಷಯಗಳನ್ನು ಬಹಿರಂಗ ಪಡಿಸಿದ್ದರು. ಮುಖ್ಯವಾಗಿ ಸೆಹ್ವಾಗ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ತಮ್ಮೊಂದಿಗೆ ಮಾತನಾಡುತ್ತಲೇ ಇರಲಿಲ್ಲ. ಜೊತೆಯಲ್ಲೇ ಇನ್ನಿಂಗ್ ಆರಂಭಿಸಿದರು ಸಹ ಮಾತನಾಡುತ್ತಿರಲಿಲ್ಲ. ಬಳಿಕ ತಾವೇ ಮಾತನಾಡಲು ಮುಂದಾಗಿದ್ದಾಗಿ ತಿಳಿಸಿದ್ದರು.

    ಸೆಹ್ವಾಗ್ ರನ್ನು ಮಾತನಾಡಿಸಲು ಮುಂದಾದ ವೇಳೆ ಸಚಿನ್ ಪಂದ್ಯದ ಮೊದಲು ಊಟಕ್ಕೆ ಆಹ್ವಾನಿಸಿದ್ದು, ಈ ವೇಳೆ ಸೆಹ್ವಾಗ್ ತಾವು ಸಸ್ಯಾಹಾರಿ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ ಏಕೆ ಮಾಂಸ ಸೇವನೆ ಮಾಡುವುದಿಲ್ಲ ಎಂಬ ಮರುಪ್ರಶ್ನೆಗೆ ಉತ್ತರಿಸಿ ಮನೆಯಲ್ಲಿ ಚಿಕನ್ ಸೇವಿಸಿದರೆ ದಪ್ಪವಾಗುವುದಾಗಿ ಹೇಳಿದ್ದಾರೆ. ಅದ್ದರಿಂದ ತಾವು ಮಾಂಸ ಆಹಾರ ಸೇವಿಸುವುದಿಲ್ಲ ಎನ್ನುವ ಉತ್ತರವನ್ನು ಸೆಹ್ವಾಗ್ ನೀಡಿದ್ದರು ಎಂದು ಸಚಿನ್ ಹೇಳಿದರು.

    ಮಾಜಿ ಆಟಗಾರರಾಗಿರುವ ಸೆಹ್ವಾಗ್ ಹಾಗೂ ಸಚಿನ್ ಟೀಂ ಇಂಡಿಯಾದ ಓಪನಿಂಗ್ ಬ್ಯಾಟ್ಸ್ ಮನ್ ಗಳಾಗಿದ್ದು, ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕವೂ ಉತ್ತಮ ಸ್ನೇಹಿರಾಗಿ ಮುಂದುವರಿದಿದ್ದಾರೆ.