Tag: seetharamam

  • ತಮಿಳಿನತ್ತ ‘ಸೀತಾರಾಮಂ’ ನಟಿ- ಸೂರ್ಯಗೆ ಮೃಣಾಲ್ ನಾಯಕಿ?

    ತಮಿಳಿನತ್ತ ‘ಸೀತಾರಾಮಂ’ ನಟಿ- ಸೂರ್ಯಗೆ ಮೃಣಾಲ್ ನಾಯಕಿ?

    ತೆಲುಗಿನಲ್ಲಿ ಮೃಣಾಲ್ ಠಾಕೂರ್ (Mrunal Thakur) ನಟಿಸಿದ 3 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿವೆ. ಹಾಗಾಗಿ ಅವರೀಗ ತಮಿಳಿನತ್ತ ಮುಖ ಮಾಡಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯ (Suriya) ನಟಿಸಲಿರುವ ಹೊಸ ಚಿತ್ರಕ್ಕೆ ನಾಯಕಿಯಾಗಿ ‘ಸೀತಾರಾಮಂ’ (Seetharamam) ನಟಿ ಮೃಣಾಲ್ ಆಯ್ಕೆಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.

    ಸೂರ್ಯ ಅವರ ಮುಂದಿನ ಸಿನಿಮಾ ಫ್ಯಾಂಟಸಿ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರವನ್ನು ಆರ್‌ಜೆ ಬಾಲಾಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಮೃಣಾಲ್ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಇನ್ನೂ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ. ಇದನ್ನೂ ಓದಿ:ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

    ಈ ಹಿಂದೆ ಮೃಣಾಲ್‌ಗೆ ‘ಕಂಗುವ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಒಪ್ಪಿಕೊಂಡಿರುವ ಸಿನಿಮಾಗಳಿದ್ದ ಹಿನ್ನೆಲೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರವನ್ನು ಮೃಣಾಲ್ ಮಿಸ್ ಮಾಡಿಕೊಂಡಿದ್ದರು. ಆ ನಂತರ ‘ಕಂಗುವ’ (Kanguva) ಚಿತ್ರದ ಆಫರ್ ದಿಶಾ ಪಟಾನಿ ಪಾಲಾಯಿತು.

    ಸದ್ಯ ಪೂಜಾ ಮೇರಿ ಜಾನ್, ಹೇ ಜವಾನಿ ತೋ ಇಷ್ಟ ಹೋನಾ ಹಿ, ಸನ್ ಆಫ್ ಸರ್ದಾರ್ 2, ತುಮ್ ಓಹ್ ಹೋ ಚಿತ್ರಗಳಲ್ಲಿ ಮೃಣಾಲ್ ನಟಿಸುತ್ತಿದ್ದಾರೆ.

  • ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್

    ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್

    ಸೀತಾರಾಮಂ (Seetharamam), ಫ್ಯಾಮಿಲಿ ಸ್ಟಾರ್ ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದ ನಟಿ ಮೃಣಾಲ್ ಠಾಕೂರ್ (Mrunal Thakur) ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಹೀರೋ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಮೃಣಾಲ್ ಲವ್ವಿ ಡವ್ವಿ ಶುರುವಾಗಿದೆ ಎಂದು ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ

    ಬಿಟೌನ್ ಅಂಗಳದ ನಯಾ ಜೋಡಿ ಅಂದರೆ ಸಿದ್ಧಾಂತ್ ಮತ್ತು ಮೃಣಾಲ್. ಇತ್ತೀಚೆಗೆ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್ ಡೇಟ್ ಮುಗಿಸಿ ಜೊತೆಯಾಗಿ ಕೈ ಕೈ ಹಿಡಿದು ಇಬ್ಬರೂ ಕಾಣಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಈ ಸುದ್ದಿ ನಿಜನಾ? ಎಂಬುದನ್ನು ಈ ಜೋಡಿ ಖಚಿತಪಡಿಸಬೇಕಿದೆ.

    ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಮೃಣಾಲ್‌ಗೆ ಭಾರೀ ಬೇಡಿಕೆ ಇದೆ. ಹಿಂದಿ ಸಿನಿಮಾಗಳಿಗಿಂತ ತೆಲುಗಿನಲ್ಲಿ ನಟಿ ಸಕ್ಸಸ್ ಕಂಡಿದ್ದಾರೆ. ಅದರಲ್ಲೂ ‘ಸೀತಾರಾಮಂ’ ಸಿನಿಮಾದಲ್ಲಿ ಸೀತಾ ಆಗಿ ಎಲ್ಲರ ಗಮನ ಸೆಳೆದಿದ್ದರು.

    ಸದ್ಯ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಹೊಸ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ಕೆಲವು ಸಿನಿಮಾಗಳ ಮಾತುಕತೆ ನಡೆಯುತ್ತಿವೆ.

  • ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

    ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

    ದುಲ್ಕರ್ ಸಲ್ಮಾನ್ ಜೊತೆ ಮೃಣಾಲ್ ಠಾಕೂರ್ (Mrunal Thakur) ಡ್ಯುಯೇಟ್ ಹಾಡಿದ ಮೇಲೆ ನಟಿಯ ಲಕ್ ಬದಲಾಗಿದೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಬಂಪರ್‌ಗಳನ್ನ ಬಾಚಿಕೊಳ್ತಿದ್ದಾರೆ. ಹೀಗಿರುವಾಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ನಟಿಸುವ ಚಾನ್ಸ್ ಅನ್ನ ನಟಿ ಗಿಟ್ಟಿಸಿಕೊಂಡಿದ್ದಾರೆ.

    ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟ ಮೇಲೆ ಬನ್ಸಾಲಿ ಅವರ ಸಿನಿಮಾದಲ್ಲಿ ಹೀರೋಯಿನ್ ಆಗಬೇಕು ಎಂಬುದು ಪ್ರತಿಯೊಬ್ಬರ ನಾಯಕಿಯರ ಕನಸು. ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಆಲಿಯಾ ಭಟ್ ಅವರಂತಹ ನಟಿಯರು ಬನ್ಸಾಲಿ ಗರಡಿಯಲ್ಲಿ ಪಳಗಿ ಗೆದ್ದಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಸಕ್ಸಸ್ ನಂತರ ಯಾವ ಸಿನಿಮಾ ಮಾಡುತ್ತಾರೆ ಎಂದು ಕಾಯ್ತಿದ್ದವರಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ಸದ್ಯ ಅವರು ‘ಹೀರಾಮಂಡಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್‌ನಲ್ಲಿ ಸಿನಿಮಾ ಚಿತ್ರೀಕರಣ ಅಂತ್ಯವಾಗಲಿದೆ. ಬಳಿಕ ಮೃಣಾಲ್ ಠಾಕೂಲ್‌ಗೆ ಸಂಜಯ್ ಲೀಲಾ ಬನ್ಸಾಲಿ(Sanjay Leela Bansali) ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿದ್ಧಾಂತ್ ಚತುರ್ವೇದಿಗೆ ನಾಯಕಿಯಾಗಿ ‘ಸೀತಾರಾಮಂ’ (Seetha Ramam) ನಟಿ ಸಾಥ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ರವಿ ಉದ್ಯಾವರ್ ನಿರ್ದೇಶನ ಮಾಡುತ್ತಿದ್ದಾರೆ.

    2024ರ ವೇಳೆ ಈ ಸಿನಿಮಾ ಶುರುವಾಗಲಿದೆ. ಒಂದು ವಿಭಿನ್ನ ಲವ್ ಸ್ಟೋರಿಯನ್ನ ಈ ಜೋಡಿಯ ಮೂಲಕ ತೋರಿಸಲು ಹೊರಟಿದ್ದಾರೆ. ಸಿದ್ಧಾಂತ್-‌ ಮೃಣಾಲ್‌ ಜೋಡಿ ತೆರೆಯ ಮೇಲೆ ಕ್ಲಿಕ್‌ ಆಗುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

    `ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ನೀಡಲಾಯಿತು. ಈ ಸಮಾರಂಭದಲ್ಲಿ ಅಪ್ಪು ಸ್ನೇಹಿತನಾಗಿ ಬೆಂಗಳೂರಿಗೆ ಬಂದು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು. ಈ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Jr.Ntr) ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಪುನೀತ್ ಸಾಧನೆ ಮತ್ತು ಸಮಾಜಮುಖಿ ಕಾರ್ಯವನ್ನ ನೋಡಿ, ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಪುನೀತ್ ಮೇಲಿನ ಪ್ರೀತಿಗಾಗಿ ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ಬೆಂಗಳೂರಿಗೆ ಆಗಮಿಸಿ, ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಅಪ್ಪು ಮೇಲಿನ ತಾರಕ್ ಪ್ರೀತಿ, ಕನ್ನಡದ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್ ಕೂಡ ಫಿದಾ ಆಗಿದ್ದರು. ಬೆಂಗಳೂರಿಂದ ಹಿಂದಿರುಗಿದ ಬೆನ್ನಲ್ಲೇ `ಸೀತಾರಾಮಂ'(Seetharamam) ನಿರ್ದೇಶಕನ ಜೊತೆ ತಾರಕ್ ಕೈ ಜೋಡಿಸಿದ್ದಾರೆ.

    `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಓಕೆ ಎಂದಿದ್ದಾರೆ. ಸೀತಾರಾಮಂ ನಿರ್ದೇಶಕನ ಹನು ರಾಘವಪುಡಿ ಜೊತೆ ಹೊಸ ಚಿತ್ರ ಮಾಡಲಿದ್ದಾರೆ. ಒಂದು ಸುತ್ತಿನ ಚರ್ಚೆಯಾಗಿತ್ತು. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಅಂದ್ಹಾಗೆ, ದುಲ್ಕರ್ ಮತ್ತು ಮೃಣಾಲ್ ನಟನೆಯ `ಸೀತಾರಾಮಂ’ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿದ್ದು, ಇದೀಗ ಈ ಚಿತ್ರದ ನಿರ್ದೇಶಕನ ಜೊತೆ ತಾರಕ್‌ ಸಾಥ್‌ ನೀಡಿದ್ದಾರೆ. ಹನು ರಾಘವಪುಡಿ ಡೈರೆಕ್ಷನ್‌ನಲ್ಲಿ ಯಂಗ್‌ ಟೈಗರ್‌ ತಾರಕ್‌ ನಟನೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]