Tag: Seetharama Kalyana

  • ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಅಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ರಚಿತಾ ರಾಮ್ ಅವರಿಗೆ ಇನ್ನೊಂದಷ್ಟು ಒಳ್ಳೆಯ ಅವಕಾಶಗಳು ಹುಡುಕಿ ಬರಲಾರಂಭಿಸಿವೆ. ಅತ್ತ ಸೀತಾರಾಮ ಕಲ್ಯಾಣ, ಮತ್ತೊಂದೆಡೆ ರುಸ್ತುಂ ಚಿತ್ರದಲ್ಲಿನ ಪಾತ್ರದಲ್ಲಿ ತೊಡಗಿಸಿಕೊಂಡಿರೋ ರಚಿತಾ ಇದೀಗ ಶಿವಣ್ಣನ ಚಿತ್ರವೊಂದಕ್ಕೆ ನಾಯಕಿಯಾಗಿದ್ದಾರೆ.

    ಶಿವರಾಜ್ ಕುಮಾರ್ ಈಗ ಸಣ್ಣ ವಿರಾಮವೂ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ರುಸ್ತುಂ, ದ್ರೋಣ ಸೇರಿದಂತೆ ಅವರ ಕೈಲಿರೋ ಚಿತ್ರಗಳ ಪಟ್ಟಿ ದೊಡ್ಡದಿದೆ. ಅದಾಗಲೇ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶನ ಮಾಡಲಿದ್ದಾರೆ.

    ಈ ಚಿತ್ರಕ್ಕೆ ಇದೀಗ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಶಿವಣ್ಣನ ಜೊತೆ ನಟಿಸಲು ಥ್ರಿಲ್ ಆಗಿಯೇ ಒಪ್ಪಿಕೊಂಡಿರೋ ರಚಿತಾ ಈ ಬಗ್ಗೆ ಹೊರ ಬೀಳಲಿರೋ ಅಧಿಕೃತ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಚಿತ್ರ ಈ ವರ್ಷವೇ ಆರಂಭವಾಗೋದಿಲ್ಲ. ಶಿವರಾಜ್ ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳನ್ನು ಮುಗಿಸಿಕೊಂಡ ನಂತರ ಹೊಸ ವರ್ಷದ ಆರಂಭದಲ್ಲಿಯೇ ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಖಿಲ್ ಗಾಗಿ 20 ವರ್ಷಗಳ ಬಳಿಕ ಬಾಲಿವುಡ್ ನಟಿ ಚಂದನವನಕ್ಕೆ ಎಂಟ್ರಿ

    ನಿಖಿಲ್ ಗಾಗಿ 20 ವರ್ಷಗಳ ಬಳಿಕ ಬಾಲಿವುಡ್ ನಟಿ ಚಂದನವನಕ್ಕೆ ಎಂಟ್ರಿ

    ಬೆಂಗಳೂರು: ನಟ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರ ತಾರೆಗಳಿಂದ ತುಂಬಿ ತುಳುಕುತ್ತಿದ್ದು, ಈಗ ನಿಖಿಲ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಲು ಬಿಟೌನ್ ನಟಿ 20 ವರ್ಷಗಳ ನಂತರ ಸ್ಯಾಂಡಲ್‍ವುಡ್ ಗೆ ಎಂಟ್ರಿಯಾಗುತ್ತಿದ್ದಾರೆ.

    `ಮೈನೆ ಪ್ಯಾರ್ ಕಿಯಾ’ ಲಡಕಿ ಎಂದೇ ಬಾಲಿವುಡ್‍ನಲ್ಲಿ ಫೇಮಸ್ ಆಗಿರುವ ಮುದ್ದು ಮುಖದ ನಟಿ ಭಾಗ್ಯಶ್ರೀ ಅವರು ಸ್ಯಾಂಡಲ್‍ವುಡ್ ಗೆ ಬರುತ್ತಿದ್ದಾರೆ. ಈಗಾಗಲೇ `ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ರವಿಶಂಕರ್, ಸಂಪತ್ ರಾಜ್, ಮಧು, ಶರತ್ ಕುಮಾರ್ ಸೇರಿದಂತೆ ಅನೇಕ ಹೆಸರಾಂತ ತಾರೆಯರು ಅಭಿನಯಿಸಿದ್ದಾರೆ.

    ತಮಿಳು-ತೆಲುಗು ಭಾಷೆಯ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದ್ದ ಭಾಗ್ಯಶ್ರೀ ಮದುವೆಯಾಗಿ ಸಾಂಸಾರಿಕ ಜೀವನದಲ್ಲೇ ಬ್ಯುಸಿಯಾಗಿದ್ದರು. ಆಗಾಗ ಹಿಂದಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕೆಲ ಚಿತ್ರಗಳಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ದೊಡ್ಡಪರದೆಯಿಂದ ಅನೇಕ ವರ್ಷಗಳ ಕಾಲ ದೂರವೇ ಇದ್ದರು. ಈಗ ಸ್ಯಾಂಡಲ್‍ವುಡ್ ಮೂಲಕ ಮತ್ತೆ ಸಿನಿಮಾರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

    ಸೀತಾರಾಮ ಕಲ್ಯಾಣ ಚಿತ್ರತಂಡದ ಅಭಿಲಾಷೆಯ ಮೇರೆಗೆ ಕನ್ನಡ ಸಿನಿಮಾದಲ್ಲಿ ಮತ್ತೆ ಅಭಿನಯಿಸುವುದಕ್ಕೆ ಒಪ್ಪಿ ಬರುತ್ತಿದ್ದಾರೆ. ವಿಶೇಷ ಅಂದರೆ ನಿಖಿಲ್ ಕುಮಾರ್ ತಾಯಿಯ ಪಾತ್ರದಲ್ಲಿ ಭಾಗ್ಯಶ್ರೀ ನಟಿಸಲಿದ್ದು, ಒಂದು ಫ್ಲ್ಯಾಶ್‍ಬ್ಯಾಕ್ ಕಥೆಯಲ್ಲಿ ಭಾಗ್ಯಶ್ರೀ ಪಾತ್ರ ಬರಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲೇ ಭಾಗ್ಯಶ್ರೀ ಅಭಿನಯಿಸುವ ಭಾಗದ ಚಿತ್ರೀಕರಣ ನಡೆಯಲಿದೆ.

    ಭಾಗ್ಯಶ್ರೀ ಅವರು ಸಲ್ಮಾನ್ ಖಾನ್ ಜೋಡಿಯಾಗಿ ಚಿತ್ರರಂಗ ಪ್ರವೇಶಿಸಿ ನಟಿಸಿದ್ದ ಮೊದಲ ಚಿತ್ರವೇ ಭರ್ಜರಿ ಹಿಟ್ ಆಗಿತ್ತು. ಮೈನೆ ಪ್ಯಾರ್ ಕಿಯಾ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಮುಂದೆ ಭಾಗ್ಯಶ್ರೀ ದಕ್ಷಿಣ ಚಿತ್ರರಂಗದ ಕಡೆ ಪ್ರಯಾಣ ಬೆಳೆಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೋಡಿಯಾಗಿ `ಅಮ್ಮಾವ್ರ ಗಂಡ’ ಕನ್ನಡ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ರಿಲೀಸ್‍ಗೂ ಮುನ್ನವೇ ಬಾಲಿವುಡ್ ನಲ್ಲಿ ಹವಾ ಎಬ್ಬಿಸಿದ ‘ಸೀತಾರಾಮ ಕಲ್ಯಾಣ’

    ರಿಲೀಸ್‍ಗೂ ಮುನ್ನವೇ ಬಾಲಿವುಡ್ ನಲ್ಲಿ ಹವಾ ಎಬ್ಬಿಸಿದ ‘ಸೀತಾರಾಮ ಕಲ್ಯಾಣ’

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಸ್ಟಾರ್ ಆಗಿ ಮಿಂಚಿದ್ದ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಾಲಿವುಡ್‍ನಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

    ಇತ್ತೀಚೆಗೆ ಸೀತಾರಾಮ ಕಲ್ಯಾಣ ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು. ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್‍ನಲ್ಲಿತ್ತು. ಇದೀಗ ಒಂದು ನಿಮಿಷ ಒಂದು ಸೆಕೆಂಡ್ ಇರುವ ಸೀತಾರಾಮ ಕಲ್ಯಾಣ ಟೀಸರ್ ನೋಡಿದ್ದು, ಸುಮಾರು 5.5 ಕೋಟಿ ರೂ. ಹಣವನ್ನು ಕೊಟ್ಟು ಸೀತಾರಾಮ ಕಲ್ಯಾಣ ಸಿನಿಮಾದ ಹಿಂದಿ ಸ್ಯಾಟಲೈಟ್ ರೈಟ್ಸ್ ನ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ‘ಜಾಗ್ವಾರ್’ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿತ್ತು. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಬಳಿಕ ಬಾಲಿವುಡ್ ಮಂದಿ ಸ್ಯಾಟ್‍ಲೈಟ್ ರೈಟ್ಸ್ ಪಡೆದು ಜಾಗ್ವಾರ್ ಹಿಂದಿ ಭಾಷೆಯಲ್ಲಿ ಯೂಟ್ಯೂಬ್‍ನಲ್ಲಿ ರಿಲೀಸ್ ಮಾಡಿದ್ದರು. ಸಿನಿಮಾವನ್ನ ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ ತಕ್ಷಣ ಪ್ರೇಕ್ಷಕರು ಸಿನಿಮಾವನ್ನು ಹೆಚ್ಚಾಗಿ ನೋಡಿದ್ದು, ಯೂಟ್ಯೂಬ್‍ನಲ್ಲಿ ಭರ್ಜರಿ ವ್ಯೂವ್ಸ್ ಪಡೆದುಕೊಂಡಿತ್ತು.

    ಜಾಗ್ವಾರ್ ಸಿನಿಮಾಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿರುವುದನ್ನ ಕಂಡಂತಹ ಬಿಟೌನ್ ಮಂದಿ, ಇದೀಗ ಮತ್ತೊಮ್ಮೆ ನಿಖಿಲ್ ಸಿನಿಮಾಗೆ ಮಣೆಹಾಕಿದ್ದಾರೆ. ಸಿನಿಮಾ ರಿಲೀಸ್‍ಗೂ ಮುನ್ನವೇ ಸೀತಾರಾಮ ಕಲ್ಯಾಣಗೆ ಬೇಡಿಕೆ ಸೃಷ್ಟಿಯಾಗಿದ್ದು, ಈ ಸಿನಿಮಾ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ.

    ಈ ಸಿನಿಮಾವನ್ನು ಹರ್ಷ ಅವರು ನಿರ್ದೇಶನ ಮಾಡಿದ್ದು, ಡಿಂಪಲ್ ಕ್ವೀನ್ ರಚಿತರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿಶಂಕರ್, ಶರತ್‍ಕುಮಾರ್, ಚಿಕ್ಕಣ್ಣ, ಮಧು ಸೇರಿದಂತೆ ಹಲವು ದಿಗ್ಗಜ್ಜರ ತಂಡವೇ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿದೆ. ಈ ಸಿನಿಮಾಗಾಗಿ ಚಿತ್ರತಂಡ ಮೈಸೂರು, ಬೆಂಗಳೂರು ಸೇರಿದಂತೆ ಹಲವು ತಾಣಗಳಲ್ಲಿ ಚಿತ್ರೀಕರಣ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=3pYwtl-VD-Y

  • ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಬೆಂಗಳೂರು: ಚಂದನವನದಲ್ಲಿ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಆದ್ರೆ ಟೀಸರ್‍ನಲ್ಲಿ ಗುಳಿಕೆನ್ನೆಯ ಮುದ್ದಾದ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ರಚಿತಾ ರಾಮ್ ತಾವು ಏಕೆ ಕಾಣಿಸಿಕೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಟೀಸರ್‍ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಎಂಬುದು ಮುಖ್ಯವಲ್ಲ. ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂಬುದು ಮುಖ್ಯ. ಚಿತ್ರದ ಟೀಸರ್ ಚೆನ್ನಾಗಿ ಮೂಡಿ ಬರಲಿ ಎಂದು ನಿಖಿಲ್ ಕುಮಾರ್ ಪಾತ್ರದ ಪರಿಚಯವನ್ನು ಅಲ್ಲಿ ತಿಳಿಸಲಾಗಿದೆ. ಟೀಸರ್ ಬಿಡುಗಡೆಯಾದಾಗ ಬಹಳ ಜನರು ನನ್ನನ್ನು ಈ ಪ್ರಶ್ನೆ ಕೇಳಿದ್ದರು ಅಂತ ಹೇಳಿದ್ರು.

    ಸೀತಾರಾಮ ಕಲ್ಯಾಣದಲ್ಲಿ ಎಲ್ಲ ಭಾಷೆಯ ಕಲಾವಿದರು ಇದ್ದಾರೆ. ಎಲ್ಲರೂ ತಮ್ಮ ಭಾಷೆಯಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರತಿಯೊಂದು ಸೀನ್‍ಗಳನ್ನು ಮಾಡುವಾಗ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಆದ್ರೆ ಪ್ರತಿಯೊಂದು ಶೂಟ್‍ನಲ್ಲಿ ಎಲ್ಲರಿಂದಲೂ ಕಲಿಯುವ ಅವಕಾಶ ಲಭಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಬಳಿಕ ಚಂದನವನದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯೂಟ್ಯೂಬ್‍ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ನಮ್ಮ ಟೀಸರ್ ಇತ್ತು. ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರತಂಡ ಹಾಗು ನನ್ನ ಪರವಾಗಿ ಎಲ್ಲ ಅಭಿಮಾನಿಗಳಿಗೆ ರಚಿತಾ ರಾಮ್ ಧನ್ಯವಾದ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=vmW64rkvPiU&feature=youtu.be

    https://www.youtube.com/watch?v=3pYwtl-VD-Y&feature=youtu.be

  • ಬಿಡುಗಡೆಯಾಯ್ತು `ಸೀತಾರಾಮ ಕಲ್ಯಾಣ’ ಟೀಸರ್- ಬಿಡುಗಡೆಯಾದ ಒಂದೇ ದಿನಕ್ಕೆ ಟಾಪ್ 1 ಟ್ರೆಂಡಿಂಗ್

    ಬಿಡುಗಡೆಯಾಯ್ತು `ಸೀತಾರಾಮ ಕಲ್ಯಾಣ’ ಟೀಸರ್- ಬಿಡುಗಡೆಯಾದ ಒಂದೇ ದಿನಕ್ಕೆ ಟಾಪ್ 1 ಟ್ರೆಂಡಿಂಗ್

    ರಾಮನಗರ: ಬಹುನಿರೀಕ್ಷಿತ ಸ್ಯಾಂಡಲ್‍ವುಡ್‍ನ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಮಂಗಳವಾರ ರಾಮನಗರದಲ್ಲಿ ನಾಡದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದರು.

    ಈ ಟೀಸರ್ ನಲ್ಲಿ ಬರೀ ಆ್ಯಕ್ಷನ್ ಸೀನ್‍ಗಳೇ ಇದ್ದು, ಆ್ಯಕ್ಷನ್ ಸೀನ್ ಇಷ್ಟಪಡುವ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ ಎಂಬುದನ್ನು ಸಿನಿಮಾ ಟೀಸರ್ ಸಾಬೀತು ಮಾಡುತ್ತಿದೆ. ಈ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್‍ನಲ್ಲಿದೆ.

    ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಶಾಸಕ ಮುನಿರತ್ನ, ನಿರ್ದೇಶಕ ಹರ್ಷ, ನಟ ನಿಖಿಲ್ ಕುಮಾರ್, ನಟಿ ರಚಿತಾ ರಾಮ್, ಹಾಸ್ಯನಟ ಚಿಕ್ಕಣ್ಣ, ಲಹರಿ ಮ್ಯೂಸಿಕ್‍ನ ವೇಲು ಜೊತೆಗೆ ಸೀತಾರಾಮ ಕಲ್ಯಾಣ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

    ಇದೇ ವೇಳೆ ಮಾತನಾಡಿದ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ನಮ್ಮ ಕುಟುಂಬದವರೆಲ್ಲರೂ ರಾಜಕೀಯ ರಂಗದಲ್ಲೇ ಇದ್ದೇವೆ. ಆದರೆ ನನ್ನ ಮಗ ನಿಖಿಲ್‍ನ ಒಲವು ಸಿನಿಮಾ ರಂಗದ ಮೇಲಿದೆ. ಕುರುಕ್ಷೇತ್ರದಲ್ಲಿ ನಿಖಿಲ್ ಅದ್ಭುತವಾಗಿ ಅಭಿನಯ ಮಾಡಿದ್ದಾನೆ. ಯುದ್ಧದ ಸನ್ನಿವೇಶದಲ್ಲಿ ಅದ್ಭುತವಾಗಿ ಅಭಿನಯಿಸಿ ಅಭಿಮನ್ಯು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಈ ಚಿತ್ರದಲ್ಲೂ ಕೂಡಾ ಉತ್ತಮವಾಗಿ ನಿಖಿಲ್ ಅಭಿನಯಿಸಿದ್ದಾನೆ ಎಂದು ತಿಳಿಸಿದ್ದರು.

     

    ರಾಜಕೀಯವಾಗಿ ವಿರೋಧಿಗಳು ಅಸೂಯೆಯಿಂದ ಮೂರ್ನಾಲ್ಕು ಜಿಲ್ಲೆಯ ಸಿಎಂ ಎಂದು ಲೇವಡಿ ಮಾಡ್ತಾರೆ. ಆದರೆ ನಾನು ಅಖಂಡ ಕರ್ನಾಟಕದ ಸಿಎಂ, ನನ್ನನ್ನ ಈ ಮಟ್ಟಕ್ಕೆ ಬೆಳೆಸಿದವರು, ನನಗೋಸ್ಕರ ದುಡಿಮೆ ಮಾಡಿದವರು ರಾಮನಗರದವರು ಎಂದು ತಿಳಿಸಿದರು. ಅಲ್ಲದೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಅರಿಯಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎರಡೆರಡು ದಿನಗಳ ವಾಸ್ತವ್ಯ ಹೂಡುತ್ತೇನೆ. ರಾಜ್ಯದ ರಾಜಕೀಯ ಸ್ಥಿರವಾದ ಬಳಿಕ ರಾಮನಗರದ ಪ್ರತಿಹಳ್ಳಿಗೂ ಸಹ ಬರುತ್ತೇನೆ ಎಂದು ತಿಳಿಸಿದರು.

    https://www.youtube.com/watch?v=3pYwtl-VD-Y

  • ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಟ ನಿಖಿಲ್ ಕುಮಾರಸ್ವಾಮಿ!

    ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಟ ನಿಖಿಲ್ ಕುಮಾರಸ್ವಾಮಿ!

    ಮಂಡ್ಯ: ಸಿನಿಮಾ ಚಿತ್ರೀಕರಣ ವೇಳೆ ಗ್ರಾಮೀಣ ಮಕ್ಕಳೊಂದಿಗೆ ನಟ ನಿಖಿಲ್ ಕುಮಾರಸ್ವಾಮಿ ಕ್ರಿಕೆಟ್ ಆಡಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ನಾರ್ಥ್ ಬ್ಯಾಂಕ್ ಬಳಿ ‘ಸೀತಾರಾಮ ಕಲ್ಯಾಣ’ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಚಿತ್ರೀಕರಣ ವೇಳೆ ನಿಖಿಲ್ ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಕಳೆದೊಂದು ವಾರದಿಂದ ಚಿತ್ರೀಕರಣ ನಡೆಯುತ್ತಿದ್ದು, ನಟ ನಿಖಿಲ್ ಜೊತೆ ಕ್ರಿಕೆಟ್ ಆಡಿ ಮಕ್ಕಳು ಸಂಭ್ರಮಿಸಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ತನ್ನ ತಾತನಿಗೋಸ್ಕರ ಹಳ್ಳಿ ಸೊಗಡಿನ ಸೀತಾರಾಮ ಕಲ್ಯಾಣ ಚಿತ್ರ ಮಾಡಲಿದ್ದಾರೆ. ಸಾಂಪ್ರದಾಯಿಕ ಶೈಲಿ ನಿರೂಪಣೆ, ಹಳ್ಳಿ ಸೊಗಡು ಹೆಚ್ ಡಿ ಕುಮಾರಸ್ವಾಮಿ ನಿರ್ಮಾಣದ ಚಿತ್ರಗಳಲ್ಲಿ ಈ ದೃಶ್ಯಗಳನ್ನು ಕಾಣಬಹುದು.

    ಇತ್ತೀಚೆಗೆ ಬರುವ ಚಿತ್ರಗಳಲ್ಲಿ ಹಳ್ಳಿ ಸೊಗಡನ್ನು ತೋರಿಸುವ ದೃಶ್ಯಗಳನ್ನು ಕಡಿಮೆಯಾಗಿತ್ತು. ಹೀಗಾಗಿ ಮತ್ತೆ ಹಳ್ಳಿ ವೈಭೋಗದ ದೃಶ್ಯವನ್ನು ತೋರಿಸೋಕೆ ಸೀತಾರಾಮ ಕಲ್ಯಾಣ ಚಿತ್ರ ಬರುತ್ತಿದೆ.

    ಮಂಡ್ಯ ಮೈಸೂರು ಭಾಗದ ಹಳ್ಳಿ ಹುಡುಗನಾಗಿ ನಿಖಿಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ಐದಾರು ತಿಂಗಳ ಹಿಂದೆಯೇ ಸೆಟ್ಟೇರಿದ್ದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಜೊತೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.

    ಮೂಲಗಳ ಪ್ರಕಾರ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ವೇಳೆಗೆ ಅದ್ಧೂರಿ ಮದುವೆ ಸೆಟ್ಟನ್ನು ಕ್ರಿಯೇಟ್ ಮಾಡಲಾಗುತ್ತೆ ಎನ್ನುವ ಸುದ್ದಿ ಇದೆ. ಹೀಗಾಗಿ ರೀಲ್ ಲೈಫ್‍ನಲ್ಲಿ ನಟ ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಕಲ್ಯಾಣೋತ್ಸವಕ್ಕೆ ಸಜ್ಜಾಗುತ್ತಿದ್ದಾರೆ.