Tag: seetharam

  • ‘ಸೀತಾರಾಮ’ ನಟಿಗೆ ಕಿಡಿಗೇಡಿಗಳ ಕಾಟ- ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೋ

    ‘ಸೀತಾರಾಮ’ ನಟಿಗೆ ಕಿಡಿಗೇಡಿಗಳ ಕಾಟ- ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೋ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna), ಕತ್ರಿನಾ ಕೈಫ್ ಅವರ ವಿಡಿಯೋ ಡೀಪ್ ಫೇಕ್ ಮಾಡಿದ್ದರು. ಈ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈಗ ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್‌ ಖ್ಯಾತಿಯ ನಟಿ ವೈಷ್ಣವಿ ಗೌಡಗೆ (Vaishnavi Gowda) ಕಿಡಿಗೇಡಿಗಳಿಂದ ಡೀಪ್ ಫೇಕ್ (Deep Fake) ಕಾಟ ಎದುರಾಗಿದೆ. ಇದನ್ನೂ ಓದಿ:ಹೆಸರು ಬದಲಿಸಿಕೊಂಡ ಅಣ್ಣಾವ್ರ ಮೊಮ್ಮಗ ಧೀರೇನ್

    ವೈಷ್ಣವಿ ಅವರ ಫೋಟೋವನ್ನು ಕಿಡಿಗೇಡಿಗಳಿಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಇಷ್ಟು ಎಕ್ಸ್‌ಪೋಸ್ ಬೇಕಿತ್ತಾ ಅಂತ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಷ್ಟಕ್ಕೂ ಇದು ನಿಜವಾದ ಫೋಟೋ ಅಲ್ಲ. ಕೆಲ ಕಿಡಿಗೇಡಿಗಳು ಬೋಲ್ಡ್ ಆಗಿ ಎಡಿಟ್ ಮಾಡಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ. ರಿಯಲ್‌ ಆಗಿ ವೈಷ್ಣವಿದೇ ಲುಕ್‌ ಎಂದು ಭಾವಿಸಿ ಫ್ಯಾನ್ಸ್‌ ದಂಗಾಗಿದ್ದಾರೆ.


    ಸದ್ಯ ಈ ಡೀಪ್ ಫೇಕ್ ಬಗ್ಗೆ ‘ಸೀತಾರಾಮ’ (Seetharama) ನಟಿ ವೈಷ್ಣವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗ್ತಾರಾ? ಎಂದು ಕಾದುನೋಡಬೇಕಿದೆ.

  • ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ

    ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ

    `ಅಗ್ನಿಸಾಕ್ಷಿ’ (Agnisakshi) ಮತ್ತು `ಬಿಗ್ ಬಾಸ್’ (Bigg Boss) ಬೆಡಗಿ ವೈಷ್ಣವಿ ಗೌಡ (Vaishnavi Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಪಾತ್ರದ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    ಕಿರುತೆರೆಯ ಟಾಪ್ ಒನ್ ಸೀರಿಯಲ್ ಅಗ್ನಿಸಾಕ್ಷಿ ನಾಯಕಿಯಾಗಿ ಮೋಡಿ ಮಾಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಲಗ್ಗೆ ಕನ್ನಡಿಗರ ಮನ ಗೆದ್ದಿದ್ದರು. ನಟಿಯ ಅದ್ಭುತ ವ್ಯಕ್ತಿತ್ವವನ್ನ ಕರ್ನಾಟಕದ ಜನತೆ ಮೆಚ್ಚಿಕೊಂಡಿತ್ತು. ಇದೀಗ ಲಾಂಗ್ ಗ್ಯಾಪ್ ನಂತರ `ಸೀತಾರಾಮ’ (Seetharam) ಧಾರಾವಾಹಿ ಮೂಲಕ ನಟಿ ಕಂಬ್ಯಾಕ್ ಮಾಡ್ತಿದ್ದಾರೆ.

    ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ವೈಷ್ಣವಿ ಎಂಟ್ರಿ ಕೊಡ್ತಿದ್ದಾರೆ. ʻಮಂಗಳಗೌರಿ ಮದುವೆʼ(Mangala Gowri Maduve) ಖ್ಯಾತಿಯ ಗಗನ್‌ಗೆ ಜೋಡಿಯಾಗಿ ನಟಿ ಬರುತ್ತಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದು ನಿಜಕ್ಕೂ ವೈಷ್ಣವಿ ಫ್ಯಾನ್ಸ್‌ಗೆ ಡಬಲ್ ನ್ಯೂಸ್ ಎಂದೇ ಹೇಳಬಹುದು. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಸದ್ಯದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, `ಅಗ್ನಿಸಾಕ್ಷಿ’ ನೋಡಿ ಮೆಚ್ಚಿಕೊಂಡಿದ್ದ ಫ್ಯಾನ್ಸ್‌ಗೆ ಸೀತಾರಾಮ ಸೀರಿಯಲ್ ಮೂಲಕ ಕೂಡ ನಟಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]