Tag: seetha rama serial

  • ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ಸೆಮಣೆ ಏರಲು ಸಜ್ಜಾಗಿರುವ ಕನ್ನಡದ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಮದುವೆ ಶಾಸ್ತ್ರಗಳ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರ ಮನೆಗಳಲ್ಲೂ ಮದುವೆಗೆ ಸಕಲ ತಯಾರಿಗಳು ನಡೆಯುತ್ತಿವೆ. ವಿವಾಹಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ವೈಷ್ಣವಿ ಹಳದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

     

    View this post on Instagram

     

    A post shared by Vaisshnavi (@iamvaishnavioffl)

    ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಸೀರಿಯಲ್ ಲೋಕದಲ್ಲಿ ಇದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸಹ ಅವರು ಸ್ಪರ್ಧಿಸಿದ್ದರು. ಇನ್ನೂ ಅನುಕೂಲ್ ಮಿಶ್ರಾ ಅವರು, ಏರ್​ ಫೋರ್ಸ್​ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಭಾರತದ ಛತ್ತಿಸ್​ಗಡದವರು. ಅಂದಹಾಗೆ, ಇದು ಅರೇಂಜ್ ಮ್ಯಾರೇಜ್. ಕುಟುಂಬದವರೇ ಮಾತುಕಥೆ ಮಾಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಹೇಳಿಕೊಂಡಿದ್ದರು.

    ಮದುವೆ ಬಳಿಕವೂ ನಟಿಸುವ ಬಗ್ಗೆ ಮಾತಾಡಿದ್ದ ವೈಷ್ಣವಿ, ಮದುವೆಯ ಬಳಿಕವೂ ನಟನೆಗೆ ಅನುಮತಿ ಇದೆ. ಅವರು ನನ್ನ ಸೀರಿಯಲ್ ದಿನಾ ನೋಡುತ್ತಾರಂತೆ. ಸೀರಿಯಲ್ ಬಗ್ಗೆ ನನಗಿಂತ ಹೆಚ್ಚು ಅವರು ಅಪ್‌ಡೇಟ್ ಇದ್ದಾರೆ. ಮದುವೆ ಬಗ್ಗೆ ಅಮೂಲ್ಯ ಸೇರಿ ಕೆಲವರಿಗೆ ಮಾತ್ರ ಗೊತ್ತಿತ್ತು. ಅನುಕೂಲ್ ಅವರು ಬೆಂಗಳೂರಿನಲ್ಲೇ ಇರೋದ್ರಿಂದ ಮದುವೆ ಬಳಿಕವೂ ಇಲ್ಲೇ ಇರುತ್ತೇವೆ. ದೇವರು ತಡ ಮಾಡೋದು ಒಳ್ಳೆಯದನ್ನ ಮಾಡೋದಕ್ಕಾಗಿ ಎಂದು ನಂಬುತ್ತೇನೆ ಎಂದು ಹೇಳಿದ್ದರು.

    ವೈಷ್ಣವಿ ಗೌಡ, ‘ಅಗ್ನಿಸಾಕ್ಷಿ’, ‘ಸೀತಾ ರಾಮ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮೂಲಕ ಆಗಾಗ ಅಭಿಮಾನಿಗಳನ್ನು ಸೆಳೆಯುವ ವೈಷ್ಣವಿ ತಮ್ಮದೇ ಫ್ಯಾನ್ಸ್‌ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

  • ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಗ್ನಿಸಾಕ್ಷಿ, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಗ್ರ್ಯಾಂಡ್‌ ಆಗಿ ನಟಿ ನಿಶ್ಚಿತಾರ್ಥ ಮಾಡಿಕೊಂಡು ಸರ್ಪ್ರೈಸ್‌ ಕೊಟ್ಟಿದ್ದಾರೆ. ಇದನ್ನೂ ಓದಿ:KGF 3 ಮೇಲಿನ ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲ್ಲ- ಗುಡ್‌ ನ್ಯೂಸ್ ಕೊಟ್ಟ ಹೊಂಬಾಳೆ ಸಂಸ್ಥೆ

    ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ಮದುವೆಯಾಗುತ್ತಿರೋ ವರ ಅನುಕೂಲ್ ಮಿಶ್ರಾ (Anukool Mishra) ಅವರು ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಷಕರು ಮೆಚ್ಚಿದ ವರನೊಂದಿಗೆ ಖುಷಿಯಿಂದ ಹಸೆಮಣೆ ಏರಲು ನಟಿ ರೆಡಿಯಾಗಿದ್ದಾರೆ.

    ಸದ್ಯ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ ಅವರು, ಅವನದ್ದು ಆಕಾಶ ಸೇವೆ, ನನ್ನದು ಸ್ಕ್ರೀಪ್ಟ್ ಹಾಗೂ ವೇದಿಕೆ. ವಿಧಿ ಒಂದು ಸುಂದರ ಲವ್‌ಸ್ಟೋರಿ ಹೆಣೆದಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಬಂದ ಮೇಘಾ ಶೆಟ್ಟಿ

     

    View this post on Instagram

     

    A post shared by Vaisshnavi (@iamvaishnavioffl)

    ಬೆಳಗ್ಗೆ ನಡೆದ ಶಾಸ್ತ್ರದಲ್ಲಿ ಕ್ರೀಮ್ ಕಲರ್ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಸಂಜೆ ನಡೆದ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ವೈಷ್ಣವಿ ಅವರು ಕ್ರೀಮ್ ಕಲರ್ ಗೌನ್‌ನಲ್ಲಿ ಮಿಂಚಿದ್ದರೆ, ಅನುಕೂಲ್ ಅವರು ಬ್ಲ್ಯಾಕ್ ಡ್ರೆಸ್ ಧರಿಸಿದ್ದಾರೆ.

    ನಟಿಯ ನಿಶ್ಚಿತಾರ್ಥ ಸಂಭ್ರಮಕ್ಕೆ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ, ಚೈತ್ರಾ ವಾಸುದೇವನ್, ಪೂಜಾ ಲೋಕೇಶ್ ಸೇರಿದಂತೆ ‘ಸೀತಾ ರಾಮ’ ಸೀರಿಯಲ್ ತಂಡ ಕೂಡ ಭಾಗಿಯಾಗಿತ್ತು.