Tag: Seetha

  • ಸೀತೆ ಪಾತ್ರ ಒಪ್ಪಿಕೊಂಡಿದ್ದು ನಿಜ: ನಟಿ ಸಾಯಿ ಪಲ್ಲವಿ

    ಸೀತೆ ಪಾತ್ರ ಒಪ್ಪಿಕೊಂಡಿದ್ದು ನಿಜ: ನಟಿ ಸಾಯಿ ಪಲ್ಲವಿ

    ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲದ ಸುದ್ದಿಗಳು ಹೊರ ಬರುತ್ತಲೇ ಇವೆ. ಅವುಗಳು ಅಧಿಕೃತವಾ ಅಥವಾ ಸುಳ್ಳಾ ಗೊತ್ತಿಲ್ಲ. ಆದರೂ, ದಿನಕ್ಕೊಂದು ಸುದ್ದಿಗಳು ಹೊರ ಬೀಳುತ್ತಿವೆ. ಈ ಸುದ್ದಿಗೊಂದು ಖಚಿತತೆ ಸಿಕ್ಕಿದೆ. ಈ ಸಿನಿಮಾದಲ್ಲಿ ಸೀತೆ (Seetha) ಪಾತ್ರವನ್ನು ಮಾಡುತ್ತಿರುವುದಾಗಿ ಸಾಯಿ ಪಲ್ಲವಿ (Sai Pallavi) ಒಪ್ಪಿಕೊಂಡಿದ್ದಾರೆ. ಆ ಪಾತ್ರಕ್ಕೆ ಜೀವ ತುಂಬುವಂತೆ ಪ್ರಯತ್ನ ಮಾಡುವೆ ಎಂದೂ ಹೇಳಿಕೊಂಡಿದ್ದಾರೆ.

    ರಾವಣನಾಗ್ತಾರಾ ಯಶ್?

    ಈ ಸಿನಿಮಾದಲ್ಲಿ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.

    ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.

    ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ.

     

    ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್

    ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್

    ಮಂಡ್ಯ: ಚಿಂತಕ ಪ್ರೊ. ಕೆ.ಎಸ್.ಭಗವಾನ್ (Prof KS Bhagwan) ಇದೀಗ ಮತ್ತೆ ಆದರ್ಶ ಪುರುಷ ರಾಮನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ರಾಜ್ಯ ಎಂದು ದೇಶದಲ್ಲಿ ಕಥೆ ಕಟ್ಟಿದ್ದಾರೆ. ರಾಮ ರಾಜ್ಯ ಮಾತು ಹರಡಲು ಮಹಾತ್ಮ ಗಾಂಧೀಜಿ (Mahatma Gandhiji) ಅವರೇ ಕಾರಣ. ವಾಲ್ಮೀಕಿ ರಾಮಾಯಣ (Valmiki Ramayana) ಓದಿ ಉತ್ತರ ಕಾಂಡದಲ್ಲಿ ಓದಿದ್ರೆ ರಾಮ ರಾಜ್ಯಕ್ಕೆ ಅರ್ಥ ಇಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಜ್ಯ ರಾಜ್ಯಭಾರ ಮಾಡಿಲ್ಲ ಎಂದು ಹೇಳಿದ್ದಾರೆ.

    ಪುರೋಹಿತರ ಜೊತೆ ಕೂತು ಆ ಕಥೆ ಈ ಕಥೆ ಎಂದು ರಾಮ ಹರಟೆ ಹೊಡೆಯುತ್ತಿದ್ದ. ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ. ಸೀತೆಗೂ ರಾಮ ಹೆಂಡ ಕುಡಿಸುತ್ತಿದ್ದ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇವೆ. ರಾಮ ರಾಜ್ಯಭಾರ ಮಾಡಿದ್ದು 11 ವರ್ಷ. ಇದರಲ್ಲಿ ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸಿದ. ಸೀತೆಗೆ ಮಾತನಾಡಲು ರಾಮ ಬಿಡಲಿಲ್ಲ. ಲಕ್ಷ್ಮಣನನ್ನು ರಾಮ ಗಡಿಪಾರು ಮಾಡಿದ ಎಂದರು. ಇದನ್ನೂ ಓದಿ: ಸಿದ್ದು ಸೋಲಿಸಲು ಅಖಾಡಕ್ಕಿಳಿದ ಬಿಎಲ್‌ ಸಂತೋಷ್‌

    ಸರಯೂ ನದಿಯ ದಡಲ್ಲಿ ಅತ್ತುಕೊಂಡು ಲಕ್ಷ್ಮಣ ಸತ್ತು ಹೋದ. ಶೂದ್ರನ ತಲೆಯನ್ನು ರಾಮ ಕಡಿದಿದ್ದಾನೆ. ರಾಮನನ್ನು ಆದರ್ಶ ದೊರೆ ಎಂದು ಕರೆಯಲು ಹೇಗೆ ಸಾಧ್ಯ. ನಮ್ಮ ಜನರಿಗೆ ಸತ್ಯ ಗೊತ್ತಿಲ್ಲದೆ ಮಕ್ಕಳಿಗೆ ರಾಮ ಎಂದು ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳು ರಾಮ ರಾಮ ಅಂತಾರೆ, ರಾಮ ತನ್ನ ಹೆಂಡತಿಯನ್ನು ಕಾಡಿಗೆ ಕಳಿಸಿದವ ಎಂದು ಭಗವಾನ್ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮ ಆಯ್ತು, ಈಗ ಸೀತೆ ಸರದಿ – ದನದ ಮಾಂಸ ತಿನ್ತಿದ್ದಳು: ಚಿಂತಕಿ ಕಲೈಸೆಲ್ವಿ

    ರಾಮ ಆಯ್ತು, ಈಗ ಸೀತೆ ಸರದಿ – ದನದ ಮಾಂಸ ತಿನ್ತಿದ್ದಳು: ಚಿಂತಕಿ ಕಲೈಸೆಲ್ವಿ

    ಮೈಸೂರು: ರಾಮಾಯಣದ ರಾಮ ಆಯ್ತು ಇದೀಗ ಸೀತೆಯ ಸರದಿ. ರಾಮ ಮದ್ಯವ್ಯಸನಿ ಎಂದು ವಿಚಾರವಾದಿ ಕೆ.ಎಸ್. ಭಗವಾನ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

    ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿದ್ದಾಳೆ ಎಂದು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪೆರಿಯಾರ್ ವಾದಿ ಚಿಂತಕಿ ಕಲೈಸೆಲ್ವಿ ಹೇಳಿಕೆ ನೀಡಿದ್ದಾರೆ. ಸೀತೆ ಅರಣ್ಯದಲ್ಲಿ ಇದ್ದಾಗ ದನದ ಮಾಂಸ ತಿಂದಿದ್ದಾಳೆ. ದನದ ಮಾಂಸವನ್ನು ಹಸುವಿನ ತುಪ್ಪದಲ್ಲಿ ಉರಿದು ತಿಂದಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಅಂತಾರೆ. ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ ಶ್ರೇಷ್ಠ, ಬ್ರಾಹ್ಮಣರು ಶ್ರೇಷ್ಠ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು. ವಿಷ್ಣು ಅಷ್ಟೊಂದು ಅವತಾರ ಎತ್ತಿದ್ದಾನೆ. ಆದರೆ ಶಿವ ಯಾಕೆ ಎತ್ತಿಲ್ಲ. ವಿಷ್ಟು ದೇವಾಲಯಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಶಿವನ ದೇವಾಲಯ ಸಿಂಪಲ್ಲಾಗಿರಲು ಕಾರಣ ಏನು. ಇದು ಮೌಢ್ಯವನ್ನು ಹೆಚ್ಚಿಸುವ ಕೆಲಸ ಎಂದು ಕಲೈಸೆಲ್ವಿ ಹೇಳಿದ್ದಾರೆ.

    ಈ ಹಿಂದೆ ವಿಚಾರವಾದಿ ಪ್ರೊಫೆಸರ್ ಕೆ. ಎಸ್ ಭಗವಾನ್ ಅವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಮನೊಂದಿಗೆ ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಕೂಡ ಟೀಕಿಸಿದ್ದು, ಭಾರೀ ಚರ್ಚೆಗೆ ಒಳಗಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv