Tag: seere

  • BJP ಮುಖಂಡನಿಂದ ಭರ್ಜರಿ ಆಫರ್ – ಸೀರೆಗಾಗಿ ನಾರಿಯರ ನೂಕು ನುಗ್ಗಲು

    BJP ಮುಖಂಡನಿಂದ ಭರ್ಜರಿ ಆಫರ್ – ಸೀರೆಗಾಗಿ ನಾರಿಯರ ನೂಕು ನುಗ್ಗಲು

    ಚಿಕ್ಕಬಳ್ಳಾಪುರ: ಚುನಾವಣೆಗೆ (Election) ಕೆಲವೇ ತಿಂಗಳು ಬಾಕಿ ಇದ್ದು, ರಾಜ್ಯದಲ್ಲಿ 3 ಪಕ್ಷಗಳು ಯಾತ್ರೆಗಳ ಅಬ್ಬರದ ಪ್ರಚಾರ ಕೈಗೊಂಡಿವೆ. ಮತದಾರರನ್ನ (Voters) ಓಲೈಸೋಕೆ ನಾನಾ ತಂತ್ರಗಳನ್ನ ಹೆಣೆದು ಉಚಿತ ಕೊಡುಗೆಗಳನ್ನ ಘೋಷಣೆ ಮಾಡ್ತಿದ್ದಾರೆ.

    ಈ ನಡುವೆ ರಾಜಕೀಯ ನಾಯಕರ (Political Leader) ಬೆಂಬಲಿಗರು ಸಹ ತಮ್ಮ ನಾಯಕರ ಮನಗೆಲ್ಲೋಕೆ ಸಾವಿರಾರು ಜನರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಶಕ್ತಿ ಪ್ರದರ್ಶನದ ವೇಳೆ ಉಚಿತ ಸೀರೆ ಉಡಗೊರೆಯಾಗಿ ಕೊಟ್ಟಿದ್ದು, ಸೀರೆಗಾಗಿ ನಾರಿಯರು ನಾನಾ ನೀನಾ ಅಂತಾ ಮುಗಿಬಿದ್ದ ಸನ್ನಿವೇಶ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗೆಂಟಿಗನಾಹಳ್ಳಿ ಗ್ರಾಮದಲ್ಲಿ ನಡೆಯಿತು.

    ಹೌದು. ಗ್ರಾಮದ ಬಿಜೆಪಿ ಮುಖಂಡ ಸಚಿವ ಕೆ.ಸುಧಾಕರ್ (K Sudhakar) ಬೆಂಬಲಿಗ ಶಿವಕುಮಾರ್, `ಸುಧಾಕರ್‌ಗೆ ಅಭಿನಂದನಾ ಸಮಾರಂಭ ಹಾಗೂ ಔತಣಕೂಟ’ದ ಹೆಸರಲ್ಲಿ ಸಾವಿರಾರು ಮಹಿಳೆಯರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗೆಂಟಿಗಾನಹಳ್ಳಿ ಗ್ರಾಮದ ಬಳಿ ಸಮಾರಂಭ ಆಯೋಜಿಸಿ ಭರ್ಜರಿ ಬಾಡೂಟ ಹಾಕಿಸಿ, ಸಾವಿರಾರು ಮಹಿಳೆಯರಿಗೆ ಕಲರ್ ಕಲರ್ ಸೀರೆ ಕೊಟ್ಟು ಮಹಿಳೆಯರ ಮನವೊಲಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಕೇವಲ 1 ರೂ.ಗೆ ಬಡಜನರಿಗೆ ಚಿಕಿತ್ಸೆ ನೀಡ್ತಾರೆ ಈ ಡಾಕ್ಟರ್‌!

    ಸಾವಿರಾರು ಮಹಿಳೆಯರು ಒಮ್ಮೆಲೆ ಸೀರೆ ಪಡೆಯೋಕೆ ನಾನಾ ನೀನಾ ಅಂತಾ ಮುಗಿಬಿದ್ದಿದ್ದು ನೂಕು ನುಗ್ಗಲು ಉಂಟಾಗಿತ್ತು. ಗ್ರಾಮದೇವತೆಗೆ ಪೂಜೆ ಹೆಸರಲ್ಲಿ ಶಿವಕುಮಾರ್ (Shivakumar) ಸಭೆಯಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರಿಗೆ ಟೋಕನ್ ಕೊಟ್ಟು ಹರಿಶಿನ ಕುಂಕುಮದ ಹೆಸರಲ್ಲಿ ಉಚಿತ ಸೀರೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್

    ಚಿಕ್ಕ-ಚಿಕ್ಕ ಮಕ್ಕಳನ್ನ ಕಂಕಳಲ್ಲಿ ಎತ್ತಿಕೊಂಡು ಸೀರೆಗಾಗಿ ಮುಗಿಬಿದ್ದಿದ್ದರು, ಗಂಟೆಗಟ್ಟಲೇ ಕಾಯ್ದುಕೊಂಡರೂ ನೂಕು ನುಗ್ಗಲಲ್ಲಿ ನಿಂತು ಸೀರೆ ಪಡೆದು ಮಹಿಳೆಯರು ತೆರಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಕೈ’ ಶಾಸಕ ಸುಧಾಕರ್ ವಿತರಿಸಿದ ಸೀರೆಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಮತದಾರ!

    `ಕೈ’ ಶಾಸಕ ಸುಧಾಕರ್ ವಿತರಿಸಿದ ಸೀರೆಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಮತದಾರ!

    ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಕಡೆಯಿಂದ ವಿತರಣೆ ಮಾಡಲಾಗಿದ್ದ ಸೀರೆಗೆ ಮತದಾರರೊಬ್ಬರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರೋ ವಿಡಿಯೋ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದೆ.

    ಶಾಸಕ ಡಾ ಕೆ ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದ ಮನೆ-ಮನೆಗೆ ತೆರಳಿ ಮಹಿಳಾ ಮತದಾರರಿಗೆ ಸೀರೆ ವಿತರಣೆ ಮಾಡುತ್ತಿದ್ದಾರೆ. ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ನೆಪದಲ್ಲಿ ಮಹಿಳಾ ಮತದಾರರ ಮನವೊಲಿಕೆಗೆ ಶಾಸಕ ಸುಧಾಕರ್ ಮುಂದಾಗಿದ್ದಾರೆ.

    ಇದೀಗ ಶಾಸಕ ಸುಧಾಕರ್ ಕಡೆಯಿಂದ ವಿತರಣೆ ಮಾಡಲಾಗಿದ್ದ ಸೀರೆಯನ್ನ ನಡು ರಸ್ತೆಯಲ್ಲಿ ಹಾಕಿ, ಬೆಂಕಿ ಹಚ್ಚಿದ ವ್ಯಕ್ತಿಯೊರ್ವ ಇಷ್ಟು ವರ್ಷಗಳ ಕಾಲ ಸೀರೆ ವಿತರಣೆ ಮಾಡದ ನೀವು ಈಗ ಚುನಾವಣಾ ಸಮಯದಲ್ಲಿ ಯಾಕೆ ಸೀರೆ ವಿತರಣೆ ಮಾಡುತ್ತಿದ್ದೀರಿ ಅಂತ ಶಾಸಕ ಸುಧಾಕರ್ ಗೆ ಪ್ರಶ್ನೆ ಮಾಡಿದ್ದಾರೆ.

    ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಶಾಸಕ ಸುಧಾಕರ್ ತಮ್ಮ ಒಡೆತನದ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರಾದ್ಯಂತ ಮಹಿಳಾ ಮತದಾರರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದರು. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ನೀಡಲು ಇದೇ ತಿಂಗಳ 24 ರಂದು ಬೃಹತ್ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡುವ ನೆಪದಲ್ಲಿ ಸೀರೆ ಹಂಚಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

  • ಶಾಸಕ ಸುರೇಶ್ ಬಾಬುರಿಂದ ಕ್ಷೇತ್ರದ ಮತದಾರರಿಗೆ ಮತ್ತೊಂದು ಗಿಫ್ಟ್- ಸೀರೆಗಾಗಿ ಮುಗಿಬಿದ್ದ ಮಹಿಳೆಯರು

    ಶಾಸಕ ಸುರೇಶ್ ಬಾಬುರಿಂದ ಕ್ಷೇತ್ರದ ಮತದಾರರಿಗೆ ಮತ್ತೊಂದು ಗಿಫ್ಟ್- ಸೀರೆಗಾಗಿ ಮುಗಿಬಿದ್ದ ಮಹಿಳೆಯರು

    ತುಮಕೂರು: ಕೆಲ ದಿನಗಳ ಹಿಂದೆ ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಕೊಟ್ಟಿದ್ದ ಚಿಕ್ಕನಾಯನಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಇದೀಗ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆ ಗಿಫ್ಟ್ ನೀಡಿದ್ದಾರೆ.

    ಶುಕ್ರವಾರ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಮಹಿಳೆಯರಿಗೆ ಮಡಿಲು ತುಂಬುವ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಹಿಳಾ ಮತದಾರರಿಗೆ ಸೀರೆ ಗಿಫ್ಟ್ ನೀಡಲಾಗಿದೆ. ಶಾಸಕರು ತಮ್ಮ ಬೆಂಬಲಿಗರ ಮೂಲಕ ಚಿಕ್ಕನಾಯಕಯನಹಳ್ಳಿ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆ ಕೂಪನ್ ವಿತರಿಸಿದ್ದರು. ಹೀಗಾಗಿ ಸೀರೆ ಸಿಗುವ ಆಸೆಯಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಕಾರ್ಯಕ್ರಮ ಮುಗಿದ ಬಳಿಕ ಸೀರೆ ಹಂಚಿಕೆ ಮಾಡಲಾಯ್ತು. ಸೀರೆ ಪಡೆಯಲು ಮಹಿಳೆಯರು ದೌಡಾಯಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ನೂಕುನುಗ್ಗಲು ಉಂಟಾಗಿತ್ತು. ಕೆಲವರು ಕೂಪನ್ ಕೊಟ್ಟು ಮಹಿಳೆಯರು ಸೀರೆ ಪಡೆದು ಮನೆಯತ್ತ ನಡೆದರೆ ಮತ್ತೆ ಕೆಲವರು ಸೀರೆ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.