Tag: seemantha

  • ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

    ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

    ನಟಿ ಭಾವನಾ ರಾಮಣ್ಣ (Bhavana Ramanna) ಅಮ್ಮನಾಗುತ್ತಿರುವ ಸಂತಸದಲ್ಲಿದ್ದಾರೆ. ಇದೀಗ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು ಸೀಮಂತ ಶಾಸ್ತ್ರ ನಡೆದಿದೆ. ಅವರ ನಿವಾಸದಲ್ಲೇ ಸೀಮಂತ ನಡೆದಿದ್ದು ಆಪ್ತರನ್ನಷ್ಟೇ ಆಹ್ವಾನಿಸಿದ್ದರು.

    ಐವಿಎಫ್ (IVF) ಮೂಲಕ ಗರ್ಭಿಣಿಯಾಗಿರುವ ಭಾವನಾ ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡಲಿದ್ದಾರೆ. ಸೀಮಂತಕ್ಕೆ (Seemantha) ಭವನಾ ಹಸಿರು ಬಣ್ಣದ ಸೀರೆ ಧರಿಸಿದ್ದರು. ಈ ಕಾರ್ಯಕ್ರಮಕ್ಕೆ ಸಿನಿಮಾ ಉದ್ಯಮದ ಕೆಲವೇ ಆಪ್ತರು, ಕುಟುಂಬಸ್ಥರು ಹಾಗೂ ಸ್ನೇಹಿತೆಯರನ್ನು ಮಾತ್ರ ಭಾವನಾ ಆಹ್ವಾನಿಸಿದ್ದರು.

    ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ಸೀಮಂತ ನಡೆದಿದೆ. ಮತ್ತೈದೆಯರು ಭಾವನಾಗೆ ಮಡಿಲು ತುಂಬುವ ಶಾಸ್ತ್ರ ಮಾಡಿ ಸಿಹಿ ತಿನ್ನಿಸಿದ್ದಾರೆ. ಹಳದಿ ಮಿಶ್ರಿತ ಹೂವಿಂದ ಅಲಂಕೃತ ಜಾಗದ ಮುಂದೆ ಭಾವನಾ ಕುಳಿತು ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    ತುಂಬು ಗರ್ಭಿಣಿಯ ನಿವಾಸದ ಸಿಂಗಾರದಲ್ಲಿ ವೀಣಾ ಸಮೇತ ಶಾರದಾದೇವಿಯ ವಿಗ್ರಹ ಸೊಗಸಾಗಿ ಗೋಚರಿಸುತ್ತಿದೆ.

  • ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

    ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

    ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ (Abhishek Ambareesh) ಮತ್ತು ಸೊಸೆ ಅವಿವ ಬಿಡಪ (Aviva Bidapa) ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಸಂಭ್ರಮದಲ್ಲಿ ಅವಿವಗೆ ಸರಳವಾಗಿ ಸೀಮಂತ  ಮಾಡಿದ್ದಾರೆ.

    ಸೆ.15ರಂದು ತುಂಬು ಗರ್ಭಿಣಿಯಾಗಿರುವ ಅವಿವಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಹಸಿರು ಬಣ್ಣದ ಸೀರೆಯುಟ್ಟು ಅಭಿಷೇಕ್ ಪತ್ನಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವಿವ ಮುಖದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಸೆ.16ರಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ- ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಒತ್ತಾಯ

    ಬೆಂಗಳೂರಿನ ಸುಮಲತಾ (Sumalatha) ನಿವಾಸದಲ್ಲಿಯೇ ನಡೆದ ಈ ಸೀಮಂತ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸರಳವಾಗಿ ಜರುಗಿದ ಈ ಸಮಾರಂಭದಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

    ಅಂದಹಾಗೆ, ಹಲವು ವರ್ಷಗಳಿಂದ ಅವಿವ ಮತ್ತು ಅಭಿಷೇಕ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜೂನ್ 5ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಇಂದು ಸೀಮಂತ ಕಾರ್ಯ : ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ

    ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಇಂದು ಸೀಮಂತ ಕಾರ್ಯ : ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ

    ಟ ಧ್ರುವ ಸರ್ಜಾ ಬಾಳಿನಲ್ಲಿ ಸಂಭ್ರಮ ತಂದಿದ್ದಾರೆ ಪತ್ನಿ ಪ್ರೇರಣಾ. ಸಹೋದರ ಚಿರುವನ್ನು ಕಳೆದುಕೊಂಡು ದುಃಖದಲ್ಲಿದ್ದ ಧ್ರುವ ಮತ್ತು ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದ್ದು, ಇಂದು ಪ್ರೇರಣಾ ಅವರಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಬಹುತೇಕರು ಹಾಜರಿದ್ದರು. ಮತ್ತು ಪ್ರೇರಣಾ ಕುಟುಂಬವೂ ಭಾಗಿ ಆಗಿತ್ತು.

    ಮೊನ್ನೆಯಷ್ಟೇ ಅಭಿಮಾನಿಗಳ ಜೊತೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ, ಪುಟ್ಟ ಕಂದಮ್ಮನಿಗಾಗಿ ಹಾರೈಸಿ ಎಂದು ಮನವಿ ಮಾಡಿದ್ದರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ನಿಯ ಸೀಮಂತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿರು ಅನುಪಸ್ಥಿತಿಯನ್ನೂ ನೆನೆದು ಬೇಸರಿಸಿಕೊಂಡಿದ್ದಾರೆ. ಚಿರುವನ್ನು ಬಿಟ್ಟು ಯಾವುದೇ ಕಾರ್ಯಕ್ರಮವನ್ನು ಮಾಡಿಕೊಂಡವರಲ್ಲ ಧ್ರುವ. ಹಾಗಾಗಿ ಸೀಮಂತ ಕಾರ್ಯದಲ್ಲಿ ಅಣ್ಣ ಇರಬೇಕಿತ್ತು ಎನ್ನುವುದು ಸಹಜ. ಇದನ್ನೂ ಓದಿ:ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರು ಪುತ್ರ ರಾಯನ್ ಲವಲವಿಕೆಗೆ ತಂದಿದ್ದು, ಇದೀಗ ಧ್ರುವ ಸರ್ಜಾ ಮಗು ಕೂಡ ಜೊತೆಯಾಗಲಿದೆ. ಎರಡೂ ಕಂದಮ್ಮಗಳು ಚಿರುವಿನ ನೋವನ್ನು ಸರ್ಜಾ ಕುಟುಂಬಕ್ಕೆ ಮರೆಸಲಿವೆ. ಸೀಮಂತ ಕಾರ್ಯದಲ್ಲಿ ಸಿನಿಮಾ ಉದ್ಯಮದ ಆಪ್ತರು, ಮೇಘನಾ, ಪ್ರೇರಣಾ ಹಾಗೂ ಸರ್ಜಾ ಕುಟುಂಬ ಸದಸ್ಯರು ಹಾಜರಿದ್ದು, ಪ್ರೇರಣಾಗೆ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

    ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

    ಚಂದನವನಕ್ಕೆ `ಗಂಡ ಹೆಂಡತಿ’ ಚಿತ್ರದ ಮೂಲಕ ಲಗ್ಗೆಯಿಟ್ಟ ನಟಿ ಸಂಜನಾ ಗಲ್ರಾನಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಷ್ಟೇ ತಾವು ಗರ್ಭೀಣಿಯಾಗಿರುವ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಈಗ ಸಂಜನಾ ತಮ್ಮ ಸೀಮಂತದ ಶಾಸ್ತ್ರದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ  ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗಿದೆ.

    `ಗಂಡ ಹೆಂಡತಿ’, ಮೈಲಾರಿ, `ದಂಡುಪಾಳ್ಯ 2′ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ, ಅಜೀಜ್ ಪಾಷಾ ಅವರೊಂದಿಗೆ ಸಂಜನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಸಿನಿಮಾಗಳ ಜತೆಗೆ ಇನ್ಸ್ಟಾಗ್ರಾಂನಲ್ಲೂ ಆಕ್ಟೀವ್ ಆಗಿದ್ದಾರೆ ಒಂದಲ್ಲಾ ಒಂದು ವಿಡಿಯೋ ಮತ್ತು ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದನ್ನೂ ಓದಿ: ಡಾ.ರಾಜ್ ಮೊಮ್ಮಗಳ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್: ಗಂಗಾ ಪಾತ್ರದಲ್ಲಿ ಧನ್ಯ ಮಿಂಚಿಂಗ್

    ದಕ್ಷಿಣ ಭಾರತದ ಶೈಲಿಯಲ್ಲಿ ಪತಿ ಅಜೀಜ್ ಪಾಷಾ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಗರ್ಭಾವಸ್ಥೆಯ ಒಂಭನೇ ತಿಂಗಳಿಗೆ ಪ್ರವೇಶಿಸುತ್ತಿದ್ದು, ನನ್ನ ಮಗು ನಮ್ಮ ಮನೆ ಪ್ರವೇಶಿಸಲು ಒಂದು ತಿಂಗಳು ಬಾಕಿಯಿದೆ. ತುಂಬಾ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಸೀಮಂತದ ಫೋಟೋಗಳು ಶೇರ್ ಮಾಡಿದ್ದಾರೆ. ನೆಚ್ಚಿನ ನಟಿಯ ಖುಷಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

  • ಅದ್ದೂರಿಯಾಗಿ ಜರುಗಿದ ಅಮೂಲ್ಯ ಸೀಮಂತ ಶಾಸ್ತ್ರ!

    ಅದ್ದೂರಿಯಾಗಿ ಜರುಗಿದ ಅಮೂಲ್ಯ ಸೀಮಂತ ಶಾಸ್ತ್ರ!

    ಬೆಂಗಳೂರು: ಚಂದನವನದ ಐಸು ಅಮೂಲ್ಯ ಸೀಮಂತ ಶಾಸ್ತ್ರ ಇಂದು ಅದ್ದೂರಿಯಾಗಿ ಜರುಗಿದೆ.

    ಐಸು ಎಂದೇ ಖ್ಯಾತಿ ಹೊಂದಿರುವ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ಹಸಿರು ಥೀಮ್ ನಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿ ಅಮೂಲ್ಯ ಕ್ಯೂಟ್ ಆಗಿ ಕಾಣುತ್ತಿದ್ದಾರೆ.

    ಫೋಟೋದಲ್ಲಿ ಅಮೂಲ್ಯ ಪತಿ ಜಗದೀಶ್ ಮತ್ತು ಕುಟುಂಬಸ್ಥರು ಇದ್ದು, ಹೂಗಳಿಂದ ಸಿಗರಗೊಂಡಿರುವ ವೇದಿಕೆ ಮೇಲೆ ಅಮೂಲ್ಯ ಕುಳಿತುಕೊಂಡಿದ್ದಾರೆ. ಹೂಗಳಿಂದ ಗಿಳಿಗಳನ್ನು ಮಾಡಿದ್ದು, ಅಲಂಕಾರ ಸಖತ್ ಆಗಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

    ಕಳೆದ ವಾರ ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು.

    ತಾವು ತಾಯಿಯಾಗುತ್ತಿರುವ ವಿಚಾರವನ್ನು ಸ್ವತಃ ಅಮೂಲ್ಯ ಅವರೇ ತಿಳಿಸಿದ್ದರು. ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಇದೀಗ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

  • BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತವನ್ನು ಮಾಡಲಾಗಿದೆ.

    ಬಸವನಗುಡಿಯ ಎನ್‍ಆರ್ ಕಾಲೋನಿಯ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 60 ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್

    ಕಟ್ಟೆ ಸತ್ಯ ಫೌಂಡೇಷನ್ ಮತ್ತು ರಾಧಕೃಷ್ಣ ಆಸ್ಪತ್ರೆ ಸಹಯೋಗದೊಂದಿಗೆ ಡಾ.ಸಿ ಅಶ್ವಥ್ ಕಲಾ ಭವನನಲ್ಲಿನಡೆದ ಕಾರ್ಯಕ್ರಮವನ್ನ ನಟಿ ಸುಧಾರಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ನಟಿ ಸುಧಾರಾಣಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷವಾಗುತ್ತಿದೆ. ಎಷ್ಟೋ ಹೆಣ್ಣು ಮಕ್ಕಳಿಗೆ ಸೀಮಂತದ ಕ್ಷಣಗಳನ್ನ ಆನಂದಿಸೋಕೆ ಸಾಧ್ಯವಾಗುವುದಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಸಾಧ್ಯವಾಗದ ಗರ್ಭಿಣಿಯರಿಗೆ ಸೀಮಂತ ಮಾಡುತ್ತಿರುವುದು ಬಹಳ ಸಂತೋಷ ಎಂದಿದ್ದಾರೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

    ಹೆಣ್ಣು ಮಕ್ಕಳಿಗೆ ತಾಯ್ತನದ ಹಂತ ಬಹಳ ಶ್ರೇಷ್ಠವಾದದ್ದು. ಇಂತಹ ಸಂಧರ್ಭದಲ್ಲಿ ಸಂತೋಷದಿಂದ ಮತ್ತು ಎಚ್ಚರದಿಂದಿರಬೇಕು. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, ನಿಮ್ಮ ತಾಯಿ ತನದ ದಿನಗಳನ್ನ ಆರೋಗ್ಯದಿಂದ ಆನಂದಿಸಿ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಮೇಯರ್ ಸತ್ಯನಾರಾಯಣ, ಶಾಸಕ ರವಿ ಸುಬ್ರಹ್ಮಣ್ಯ, ಫೌಂಡೇಶನ್ ಅಧ್ಯಕ್ಷ ಸುಧೀಂದ್ರ ಭಾಗಿಯಾಗಿದ್ದರು.

  • ಹಸುವಿಗೆ ಸೀಮಂತ ಮಾಡಿ ಗೋಪ್ರೇಮ ಮೆರೆದ ರೈತ ಕುಟುಂಬ

    ಹಸುವಿಗೆ ಸೀಮಂತ ಮಾಡಿ ಗೋಪ್ರೇಮ ಮೆರೆದ ರೈತ ಕುಟುಂಬ

    – ಹಸು ಬಂದ ದಿನದಿಂದ ಮನೆಯಲ್ಲಿ ಸಮಸ್ಯೆ ನಿವಾರಣೆ
    – ಮನೆ ಮಗಳಿಗೆ ಮಾಡುವಂತೆ ನಡೆಯಿತು ಸೀಮಂತ
    – ಗೋವಿಗೆ ಸೀರೆಯುಡಿಸಿ, ಮುತ್ತೈದೆಯರಿಂದ ಆರತಿ

    ಚಿಕ್ಕೋಡಿ(ಬೆಳಗಾವಿ): ಗೋವು ದೇವರ ಸ್ವರೂಪಿ, ರೈತರು ಗೋವಿಗೆ ವಿಶೇಷ ಸ್ಥಾನ ಮಾನಕೊಡುತ್ತಾರೆ. ಆದರೆ ಇಲ್ಲೊಂದು ರೈತ ಕುಟುಂಬ ಗೋವಿಗೆ ಸೀಮಂತ ಕಾರ್ಯವನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಯಕ್ಸಂಬಾ ಪಟ್ಟಣದ ಕುಟುಂಬಸ್ಥರು ಗೋವಿಗೆ ಸೀಮಂತ ಮಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ತುಕಾರಾಮ್ ಮಾಳಿ ಎಂಬವರ ಕುಟುಂಬ ಒಂದು ವರ್ಷದ ಹಿಂದೆ ಆಕಳನ್ನ ಖರೀದಿ ಮಾಡಿ ಮನೆಗೆ ತಂದಿದ್ದಾರೆ. ಹಸು ಮನೆಗೆ ಬಂದ ದಿನದಿಂದಲೂ ಮನೆಯಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಜಗಳ ನಿಂತಿದ್ದವು ಹಾಗೂ ಆರ್ಥಿಕ ಸ್ಥಿತಿಗತಿ ಕೂಡ ಸುಧಾರಿಸಿತ್ತು. ಇದನ್ನೆಲ್ಲಾ ನೋಡಿದ ತುಕಾರಾಮ್, ಆಕಳನ್ನ ಮನೆಯ ಮಗಳಂತೆ ನೋಡಿಕೊಳ್ಳಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಇದಕ್ಕೆ ಗೌರಿ ಅಂತ ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದಾರೆ.

    ಕಳೆದ ಐದು ತಿಂಗಳ ಹಿಂದಷ್ಟೇ ಗೌರಿ ಗರ್ಭ ಧರಿಸಿದ್ದಳು. ಅಂದಿನಿಂದಲೂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಐದು ತಿಂಗಳು ಮುಗಿದ ಬಳಿಕ ಮಗಳಿಗೆ ಹೇಗೆ ತವರು ಮನೆಯವರು ಸೀಮಂತ ಮಾಡ್ತಾರೆಯೋ ಅದೇ ಮಾದರಿಯಲ್ಲಿ ಇಂದು ಅದ್ಧೂರಿಯಾಗಿ ಗೌರಿಗೆ ಸೀಮಂತ ಮಾಡಿದ್ದಾರೆ. ಮನೆಯ ಮುಂದೆ ಶಾಮಿಯಾನ, ಮನೆಗೆಲ್ಲಾ ಸಿಂಗಾರ, ಹೂಗಳಿಂದ ಸಿಂಗರಿಸಿ, ಕೊರಳಲ್ಲಿ ಸೀರೆಯುಡಿಸಿ, ಮುತ್ತೈದೆಯರು ಆರತಿ ಮಾಡಿ ಬಗೆ ಬಗೆಯ ಅಡುಗೆ ಮಾಡಿ ಮೊದಲು ಗೌರಿಗೆ ಕೊಟ್ಟು ಮಂಗಳಾರತಿ ಮಾಡಿ ಸೀಮಂತ ಕಾರ್ಯ ಮಾಡಿದ್ದಾರೆ.

    ಸೀಮಂತ ಮಾಡುವ ಎರಡು ದಿನ ಪೂರ್ವದಿಂದಲೂ ತಯಾರಿ ಮಾಡಿಕೊಂಡಿದ್ದ ಕುಟುಂಬಸ್ಥರು, ಊರಲ್ಲಿದ್ದ ಸಂಬಂಧಿಕರನ್ನೂ ಕರೆಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ಗ್ರಾಮದ ಜನರನ್ನ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬೆಳಗ್ಗೆ ಎಂಟು ಗಂಟೆಗೆ ಗೌರಿಯ ಮೈತೊಳೆದು ನಂತರ ಬಣ್ಣ ಬಳಿದು ಮಲ್ಲಿಗೆ, ಸೇವಂತಿ, ಚೆಂಡು ಹೂಗಳಿಂದ ಅಲಂಕಾರ ಮಾಡಲಾಯಿತು. ಇದಾದ ಬಳಿಕ ಗೌರಿ ಕಣ್ಣಿಗೆ ಕಾಡಿಗೆ ಬಳಿದು ಕೊರಳಲ್ಲಿ ಸೀರೆಯನ್ನ ಹಾಕಿ ಆರತಿ ಬೆಳಗೆ ಮಂಗಳಾರತಿಯನ್ನ ಹೇಳಿ ಪೂಜೆ ಸಲ್ಲಿಸಲಾಯಿತು.

    ಇತ್ತ ಬಗೆ ಬಗೆಯ ಅಡುಗೆಯನ್ನ ಮಾಡಿದ್ದು ಮೊದಲು ಗೌರಿಗೆ ಅದನ್ನ ತಿನ್ನಿಸಿ ನಂತರ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಶೀರಾ, ಸಜ್ಜಿಗೆ ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ ಬಡಿಸಲಾಯಿತು. ಇನ್ನೂ ಮನೆ ಮಗಳ ಸೀಮಂತ ಕಾರ್ಯ ಕೂಡ ಇಷ್ಟೊಂದು ಅದ್ಧೂರಿಯಾಗಿ ಮಾಡುತ್ತಿರಲಿಲ್ಲ, ಅದಕ್ಕಿಂತ ಹೆಚ್ಚಾಗಿ ಇಂದು ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಸೀಮಂತ ಕಾರ್ಯ ಮಾಡಲಾಯಿತು.

    ಹಸುವನ್ನು ಮಗಳಂತೆ ನೋಡಿಕೊಂಡು ಅದ್ಧೂರಿಯಾಗಿ ಇಂದು ಸೀಮಂತ ಮಾಡಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೈತರು ಅಂದ್ರೆ ಹಾಗೇನೆ ಅನ್ಸತ್ತೆ ಮನೆಯಲ್ಲಿ ಸಾಕುವ ಪ್ರತಿಯೊಂದು ಪ್ರಾಣಿಗಳಿಗೂ ಒಂದು ಸ್ಥಾನ ಮಾನ ಕೊಟ್ಟು ಮನಷ್ಯರಿಗಿಂತ ಹೆಚ್ಚಾಗಿ ಅವುಗಳನ್ನ ಸಾಕಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

  • ಪವನ್ ಒಡೆಯರ್ ಪತ್ನಿಗೆ ಸೀಮಂತ ಸಂಭ್ರಮ

    ಪವನ್ ಒಡೆಯರ್ ಪತ್ನಿಗೆ ಸೀಮಂತ ಸಂಭ್ರಮ

    ಬೆಂಗಳೂರು: ಇತ್ತೀಚೆಗಷ್ಟೆ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ತಂದೆ-ತಾಯಿ ಆಗುತ್ತಿರುವ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತುಂಬು ಗರ್ಭಿಣಿ ಅಪೇಕ್ಷಾ ಅವರಿಗೆ ಸೀಮಂತ ಶಾಸ್ತ್ರ ನೆರವೇರಿದೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಪವನ್ ಒಡೆಯರ್ ದಂಪತಿ – ಫೋಟೋಶೂಟ್

    ಅಪೇಕ್ಷಾ ಪುರೋಹಿತ್ ಅವರ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಈ ಸುಂದರ ಕ್ಷಣಗಳ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತುಂಬಾ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಕುಟುಂಬದವರು ಮತ್ತು ಆಪ್ತರು ಮಾತ್ರ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿದ್ದರು.

    ತುಂಬು ಗರ್ಭಿಣಿ ಅಪೇಕ್ಷಾ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಜೊತೆಗೆ ಇಷ್ಟದ ತಿನಿಸುಗಳನ್ನು ಇಟ್ಟು ಬಯಕೆ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಪೂಜೆ ಮತ್ತು ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಕೆಲ ದಿನಗಳ ಹಿಂದೆಯಷ್ಟೆ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ಅಭಿಮಾನಿಗಳು ಗುಡ್‍ನ್ಯೂಸ್ ಕೊಟ್ಟಿದ್ದರು. ಅಂದರೆ ತಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಪವನ್ ಒಡೆಯರ್ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದರು. “ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ” ಎಂದು ಬರೆದುಕೊಂಡಿದ್ದರು.

    https://twitter.com/PavanWadeyar/status/1314234597077471234

    ಪವನ್ ಒಡೆಯರ್ ಹಾಡಿನ ಮೂಲಕ ತಾವು ತಂದೆಯಾಗುತ್ತಿರುವ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಫ್ರದಲ್ಲೇ ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅಪೇಕ್ಷಾ ಪುರೋಹಿತ್ ಗರ್ಭಿಣಿ ಫೋಟೋಶೂಟ್ ಮಾಡಿಸಿದ್ದು, ಪತ್ನಿಯ ಜೊತೆ ಪವನ್ ಒಡೆಯರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದರು. ವಿವಿಧ ರೀತಿಯಲ್ಲಿ ದಂಪತಿ ಫೋಟೋಶೂಟ್ ಮಾಡಿದ್ದು, ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

  • ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

    ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

    ಬೆಂಗಳೂರು: ಇತ್ತೀಚೆಗಷ್ಟೆ ಮೇಘನಾ ರಾಜ್ ಸೀಮಂತ ಕಾರ್ಯಕ್ರಮ ಸಾಂಪ್ರದಾಯಕವಾಗಿ ನಡೆದಿದೆ. ಚಿರಂಜೀವಿ ಅಗಲಿಕೆಯ ನೋವಿನಲ್ಲಿದ್ದ ಸರ್ಜಾ ಕುಟುಂಬ ಮೇಘನಾ ಸೀಮಂತ ಮಾಡುವ ಮೂಲಕ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ ಕರಣ್ ಆಚಾರ್ಯ ಪ್ರತಿಕ್ರಿಯೆ

    ಸೀಮಂತದಲ್ಲಿ ಚಿರು ಇಲ್ಲ ಎಂಬ ನೋವು ಎಲ್ಲರಿಗೂ ಕಾಡಿತ್ತು. ಆದರೂ ಮೇಘನಾ ಸೀಮಂತ ಕಾರ್ಯಕ್ರಮದಲ್ಲಿ ಚಿರುವಿನ ದೊಡ್ಡ ಪೋಸ್ಟರ್‌ವೊಂದನ್ನು ಇಡಲಾಗಿತ್ತು. ಚಿರು ಫೋಟೋ ಮುಂದೆಯೇ ಮೇಘನಾ ಚೇರ್ ಮೇಲೆ ಕುಳಿತುಕೊಂಡಿದ್ದು, ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಇದೇ ವೇಳೆ ಮೇಘನಾ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.

    ಇದೀಗ ಮೇಘನಾ ಸೀಮಂತ್ ಫೋಟೋಗಳ ಪೈಕಿ ಅರಳಿದ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಘನಾ ಅವರು ಒಬ್ಬರೇ ನಿಂತುಕೊಂಡು ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋಗೆ ಕಲಾವಿದ ಕರಣ್ ಆಚಾರ್ಯ ಜೀವ ನೀಡಿದ್ದಾರೆ. ಅಂದರೆ ಆ ಫೋಟೋವನ್ನು ಎಡಿಟ್ ಮಾಡಲಾಗಿದೆ.

    ಸಾಮಾನ್ಯವಾಗಿ ಸೀಮಂತ ಸಮಯದಲ್ಲಿ ಪತಿ ಜೊತೆಯಲ್ಲಿರಬೇಕು ಎಂದು ಪ್ರತಿಯೊಬ್ಬ ಪತ್ನಿಯೂ ಇಷ್ಟಪಡುತ್ತಾಳೆ. ಆದರೆ ಮೇಘನಾ ವಿಚಾರದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಕಲಾವಿದ ಕರಣ್ ಆಚಾರ್ಯ ಫೋಟೋ ಮೂಲಕ ಆ ಆಸೆಯನ್ನು ನೆರವೇರಿಸಿದ್ದಾರೆ. ಅಭಿಮಾನಿಯೊಬ್ಬರು ಮೇಘನಾರ ಒಂಟಿ ಫೋಟೋವನ್ನು ಪೋಸ್ಟ್ ಮಾಡಿ ಈ ಫೋಟೋಗೆ ಜೀವ ತುಂಬಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

    ಕಲಾವಿದ ಕರಣ್ ಅದರಂತೆಯೇ ಮೇಘನಾ ಕೈ ಹಿಡಿದು ಚಿರು ಹೆಜ್ಜೆ ಹಾಕುತ್ತಿರುವ ರೀತಿ ಎಡಿಟ್ ಮಾಡಿದ್ದಾರೆ. ಚಿರುವಿನ ಮದುವೆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವನ್ನು ಮೇಘನಾ ಫೋಟೋ ಜೊತೆ ಎಡಿಟ್ ಮಾಡಿದ್ದಾರೆ. ಕಲಾವಿದ ಕರಣ್ ಆಚಾರ್ಯರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    https://www.instagram.com/p/CF-DrP7HJbU/?igshid=b1htolkc11th

    ಇದೇ ರೀತಿ ಇನ್ನೂ ಕೆಲ ಫೋಟೋಗಳನ್ನ ಎಡಿಟ್ ಮಾಡಲಾಗಿದೆ. ಅದರಲ್ಲೂ ಮೇಘನಾ ಜೊತೆ ಚಿರು ನಿಂತಿರುವ ರೀತಿ ಕಾಣಬಹುದಾಗಿದೆ. ಮೊದಲಿಗೆ ಭಾನುವಾರ ಮನೆಯಲ್ಲಿಯೇ ಸರಳವಾಗಿ ಮೇಘನಾ ರಾಜ್ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ಮತ್ತೆ ಸೋಮವಾರ ರಾತ್ರಿ ಅದ್ಧೂರಿಯಾಗಿ ಮೇಘನಾ ರಾಜ್ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದರು.

  • ಚಿರು ಫೋಟೋ ಇಟ್ಟು ಮೇಘನಾಗೆ ಸೀಮಂತ ಶಾಸ್ತ್ರ

    ಚಿರು ಫೋಟೋ ಇಟ್ಟು ಮೇಘನಾಗೆ ಸೀಮಂತ ಶಾಸ್ತ್ರ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಪತಿ ಮೇಘಾನ್ ರಾಜ್ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ.

    ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದು, ಮನೆಯವರು ಸರಳವಾಗಿ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದಾರೆ. ಚಿರು ಕುಟುಂಬದವರು ಚಿರು ಅಗಲಿಕೆ ನೋವಲ್ಲಿದ್ದಾರೆ. ಹೀಗಾಗಿ ಬಹಳ ಖಾಸಗಿಯಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ.

    ಪತಿಯ ಅಗಲಿಕೆಯಲ್ಲಿ ಚಿರುವಿನ ದೊಡ್ಡ ಕಟೌಟ್ ಇಟ್ಟು ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಮೇಘನಾ ಚೇರ್ ಮೇಲೆ ಕುಳಿತಿದ್ದು, ಅವರ ಹಿಂದೆ ಚಿರುವಿನ ದೊಡ್ಡ ಕಟೌಟ್ ಇಟ್ಟಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ಚಿರು ತಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದು ಮೇಘನಾ ಸಂತಸಪಟ್ಟಿದ್ದಾರೆ.

    ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದು, ಮೇಘನಾ ರಾಜ್ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಮೇಘನಾ ರಾಜ್ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮಿಳಾ ಜೋಷಾಯ್ ಮಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಇತ್ತೀಚೆಗೆಷ್ಟೆ ಸ್ಯಾಂಡಲ್‍ವುಡ್ ಹಿರಿಯ ತಾರೆಯರು ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ, ಕುಶಲೋಪಚರಿ ವಿಚಾರಿಸಿದ್ದರು. ಈ ಕುರಿತು ಮಾಳವಿಕಾ ಅವಿನಾಶ್ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದರು. ಮಾಳವಿಕಾ ಅವಿನಾಶ್ ಜೊತೆ ಸುಧಾರಾಣಿ, ಶೃತಿ ಹಾಗೂ ಅವರ ಮಗಳು ಮಿಲಿ ಕೂಡ ಭೇಟಿಯಾಗಿದ್ದರು.

    ಮೆಘನಾ ರಾಜ್ ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಯಲ್ಲೇ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಮೆಘನಾ ಅವರು ಸೃಜನ್ ಲೋಕೇಶ್ ಜೊತೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿದ ಬಳಿಕ ಚಿತ್ರ ಬಿಡುಗಡೆಯಾಗಲಿದೆ.