Tag: Seemanta

  • ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ಮೈಸೂರು: ನಗರದ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಗೆ ಸೀಮಂತ ಕಾರ್ಯ ನಡೆದಿದೆ.

    ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸಂಪ್ರದಾಯಬದ್ಧವಾಗಿ ಠಾಣೆಯ ಪೇದೆಯ ಸೀಮಂತ ಕಾರ್ಯ ನೆರವೇರಿದೆ. ಮನೆ ಮಂದಿಯಂತೆ ಸಹದ್ಯೋಗಿಗಳು ಠಾಣೆಯ ಪೇದೆ ರಕ್ಷಿತಾರಿಗೆ ಸೀಮಂತ ನೆರವೇರಿಸಿದ್ದಾರೆ. ಇದನ್ನೂ ಓದಿ: ಕುಟುಂಬಸ್ಥರಂತೆ ಸಿಬ್ಬಂದಿಯಿಂದ ಠಾಣೆಯಲ್ಲಿಯೇ ಸಬ್ ಇನ್ಸ್‌ಪೆಕ್ಟರ್‌ಗೆ ಸೀಮಂತ!

    ಠಾಣೆಯ ಇನ್ಸ್ ಪೆಕ್ಟರ್ ನಾಗೇಗೌಡ ನೇತೃತ್ವದಲ್ಲಿ ಸೀಮಂತ ಕಾರ್ಯ ನಡೆದಿದ್ದು, ಸಂಪ್ರದಾಯದಂತೆ ಸೀಮಂತ ಕಾರ್ಯದಲ್ಲಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ಹಿಂದೆ ಮಂಡ್ಯದಲ್ಲೂ ಕೂಡ ಮಹಿಳಾ ಪೊಲೀಸ್ ಗೆ ಕುಟುಂಬದವರಂತೆ ಸೀಮಂತ ಮಾಡಿದ್ದರು.

  • ಕುಟುಂಬಸ್ಥರಂತೆ ಸಿಬ್ಬಂದಿಯಿಂದ ಠಾಣೆಯಲ್ಲಿಯೇ ಸಬ್ ಇನ್ಸ್‌ಪೆಕ್ಟರ್‌ಗೆ ಸೀಮಂತ!

    ಕುಟುಂಬಸ್ಥರಂತೆ ಸಿಬ್ಬಂದಿಯಿಂದ ಠಾಣೆಯಲ್ಲಿಯೇ ಸಬ್ ಇನ್ಸ್‌ಪೆಕ್ಟರ್‌ಗೆ ಸೀಮಂತ!

    ಮಂಡ್ಯ: ಗರ್ಭಿಣಿ ಸ್ತ್ರೀಗೆ ಕುಟುಂಬ ವರ್ಗ, ಬಂಧು ಬಳಗದವರು ಸೀಮಂತ ಕಾರ್ಯಕ್ರಮ ಮಾಡುವುದು ಸರ್ವೇ ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಠಾಣೆಯ ಸಿಬ್ಬಂದಿಯೇ ಹೃದಯ ತುಂಬಿ ಕುಟುಂಬಸ್ಥರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

    ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಸುಮಾರಾಣಿ ಅವರ ಸೀಮಂತ ಕಾರ್ಯಕ್ರಮ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ನೆರವೇರಿದೆ. ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಸ್ಕೃತಿಯಂತೆ ಸಮಾರಂಭ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಸಬ್ ಇನ್ಸ್‌ಪೆಕ್ಟರ್‌ ಸುಮಾರಾಣಿ ಅವರು ಪಾಂಡವಪುರ ಪೊಲೀಸ್ ಠಾಣೆಗೆ ಹತ್ತು ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದು, ವಿಧಾನಸಭೆ ಚುನಾವಣೆ ಸೇರಿದಂತೆ ವಿವಿಧ ಹಂತದಲ್ಲಿ ಉತ್ತಮ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

    ಸೀಮಂತ ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್‌ ಸುಮಾರಾಣಿ ಅವರಿಗೆ ಮಹಿಳಾ ಸಿಬ್ಬಂದಿ ವರ್ಗ ಅರಿಶಿಣ, ಕುಂಕುಮ ಹಚ್ಚಿ, ಹಣ್ಣು ಹಂಪಲು, ಸೀರೆ ನೀಡಿ ಮಡಿಲು ತುಂಬಿದರು. ಜೊತೆಗೆ ಠಾಣೆಯ ಹಿರಿಯರು ಸುಮಾರಾಣಿ ಅವರಿಗೆ ಅಕ್ಷತೆ ಹಾಕುವ ಮೂಲಕ ಶುಭ ಹಾರೈಸಿದರು. ಇನ್ನು ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಬ್ ಇನ್ಸ್‌ಪೆಕ್ಟರ್‌ ಸುಮಾರಾಣಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

    ಸದಾ ಕ್ರೈಂ, ತನಿಖೆ, ವಿಚಾರಣೆ ಇಂತಹ ವಿವಾದದಲ್ಲೇ ಬ್ಯುಸಿಯಾಗಿರುತ್ತಿದ್ದ ಪೊಲೀಸ್ ಸಿಬ್ಬಂದಿ ತಮ್ಮ ಮೇಲಾಧಿಕಾರಿಯ ಸೀಮಂತ ಮಾಡಿ ಅಧಿಕಾರಿಯ ಮೇಲಿರುವ ಅಭಿಮಾನ ಮೆರೆದಿದ್ದಾರೆ.