Tag: Security Lapse

  • ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

    ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

    ಬೆಂಗಳೂರು: ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಅಮಿತ್ ಶಾ (Amit Shah) ಭದ್ರತೆಯಲ್ಲಿ ವೈಫಲ್ಯ (Security Lapse) ಉಂಟಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಅಮಿತ್ ಶಾ ಪ್ರಯಾಣಿಸುತ್ತಿದ್ದಾಗ ಅವರ ಭದ್ರತಾ ವಾಹನಗಳನ್ನು 2 ಬೈಕರ್ಸ್‌ಗಳು ಬೆನ್ನಟ್ಟಿದ್ದಾರೆ.

    ಭಾನುವಾರ ತಡರಾತ್ರಿ 11 ಗಂಟೆ ಬಿಜೆಪಿ ಕೋರ್ ಸಮಿತಿಯ ಸಭೆ ನಡೆಸಿ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಿಂದ ಹೆಚ್‌ಎಎಲ್‌ಗೆ ಅಮಿತ್ ಶಾ ತೆರಳುತ್ತಿದ್ದಾಗ ಶಫಿನ್ ಫ್ಲಾಜಾದಿಂದ ಮಣಿಪಾಲ್ ಸೆಂಟರ್ ವರೆಗೆ ಅವರ ಭದ್ರತಾ ವಾಹನಗಳ ಹಿಂದೆ 2 ಬೈಕ್‌ಗಳು ಬಂದಿವೆ. ಸುಮಾರು 300 ಮೀ. ವರೆಗೆ ಬೈಕರ್ಸ್‌ಗಳು ಭದ್ರತಾ ವಾಹನಗಳ ಜೊತೆಯೇ ಬಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

    ಇಬ್ಬರು ಬೈಕರ್ಸ್‌ಗಳು ಏಕಾಏಕಿ ಭದ್ರತಾ ವಾಹನಗಳ ಹಿಂದಿನಿಂದ ಬಂದಿದ್ದು, ಸ್ವಲ್ಪ ದೂರದವರೆಗೆ ಬೆನ್ನಟ್ಟಿದ್ದಾರೆ. ತಕ್ಷಣವೇ ಭಾರತೀನಗರದ ಪೊಲೀಸರು ಬೈಕ್‌ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರಿಬ್ಬರೂ ವಿದ್ಯಾರ್ಥಿಗಳು ಎಂಬುದು ತಿಳಿದು ಬಂದಿದೆ.

    ಇಬ್ಬರು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಬಂದಿಲ್ಲ ಎಂದು ತಿಳಿಸಿದ್ದಾರೆ. ತಡರಾತ್ರಿವರೆಗೂ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಮತ್ತೆ ಸ್ವರೂಪ್ Vs ಭವಾನಿ ಫೈಟ್- ಇಬ್ಬರಿಂದಲೂ ವರಿಷ್ಠರಿಗೆ ಡೆಡ್‍ಲೈನ್ ಡಿಮ್ಯಾಂಡ್

    
    
  • BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ

    BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ

    ಕಲಬುರಗಿ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ಪಟ್ಟಣಕ್ಕೆ ಆಗಮಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಹೆಲಿಕಾಪ್ಟರ್ (Helicopter) ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ ಎದುರಾಗಿದೆ.

    ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಲ್ಯಾಂಡಿಂಗ್ ವೇಳೆಯಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ. ಏಕೆಂದರೆ ಹೆಲಿಪ್ಯಾಡ್ ಸುತ್ತ ಜಮೀನಿನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಾಕಲಾಗಿದ್ದು, ಲ್ಯಾಂಡಿಂಗ್ ವೇಳೆ ಅವು ಹೆಲಿಕಾಪ್ಟರ್ ಮೇಲೆ ಹಾರಿ ಬಂದಿವೆ. ತಕ್ಷಣವೇ ಎಚ್ಚೆತ್ತುಕೊಂಡ ಪೈಲಟ್, ಹೆಲಿಕಾಪ್ಟರ್ ಅನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ದಿಂಬು, ಹಾಸಿಗೆ, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದೆ: ಬೊಮ್ಮಾಯಿ

    ಲ್ಯಾಂಡಿಂಗ್ ವೇಳೆ ಹಾರಿ ಬಂದ ಪ್ಲಾಸ್ಟಿಕ್ ಚೀಲಗಳನ್ನು ತಕ್ಷಣ ಪೋಲಿಸರು ತೆರವು ಮಾಡಿದ್ದು, ನಂತರ ಒಂದೆರಡು ಸುತ್ತು ಹಾರಾಟ ನಡೆಸಿ, ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದಾರೆ.

    ಹೆಲಿಕಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿ ಬಂದಿದ್ದರಿಂದ ಅಧಿಕಾರಿಗಳು ಮತ್ತು ಪೋಲಿಸರು ಕಕ್ಕಾಬಿಕ್ಕಿಯಾಗಿ ಓಡಾಡಿದ್ದರು. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ ಇರುವುದರಿಂದ ಭದ್ರತಾ ಲೋಪ ಎದುರಾಗಿದೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‍ಗೆ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ

  • ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ – ರಾಗಾ ಅಪ್ಪಿಕೊಳ್ಳಲು ಓಡಿದ ವ್ಯಕ್ತಿ

    ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ – ರಾಗಾ ಅಪ್ಪಿಕೊಳ್ಳಲು ಓಡಿದ ವ್ಯಕ್ತಿ

    ಚಂಡೀಗಢ: ಕಾಂಗ್ರೆಸ್ (Congress) ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ಭದ್ರತಾ ಲೋಪವಾಗಿರುವ (Security Lapse) ಘಟನೆ ಮಂಗಳವಾರ ನಡೆದಿದೆ.

    ಪಂಜಾಬ್‌ನ (Punjab) ಹೋಶಿಯಾರ್‌ಪುರದಲ್ಲಿ (Hoshiarpur) ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು (Rahul Gandhi) ಅಪ್ಪಿಕೊಳ್ಳಲು ವ್ಯಕ್ತಿಯೊಬ್ಬ ಅವರತ್ತ ಓಡಿರುವ ಘಟನೆ ವರದಿಯಾಗಿದೆ. ಆದರೆ ತಮ್ಮ ಸುತ್ತಲೂ ಸಾಗುತ್ತಿದ್ದ ಕಾಂಗ್ರೆಸ್‌ನ ಇತರ ಕಾರ್ಯಕರ್ತರು ಆತನನ್ನು ತಕ್ಷಣವೇ ತಡೆದಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಜೋಡೋ ಪಾದಯಾತ್ರೆ ದೆಹಲಿಯಲ್ಲಿ ಸಾಗುತ್ತಿದ್ದ ಸಂದರ್ಭ ರಾಗಾ ಅವರಿಗೆ ಭದ್ರತೆ ಒದಗಿಸುವಲ್ಲಿ ದೆಹಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ರಾಹುಲ್ ಅವರೇ 2020 ರಿಂದ 113 ಬಾರಿ ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿರುವುದಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಿರುಗೇಟು ನೀಡಿತ್ತು. ಇದನ್ನೂ ಓದಿ: ಬುದ್ಗಾಮ್ ಕೋರ್ಟ್‌ ಸಂಕೀರ್ಣದ ಬಳಿ ಎನ್‌ಕೌಂಟರ್‌ – ಇಬ್ಬರು ಉಗ್ರರ ಹತ್ಯೆ

    ಭಾರತ್ ಜೋಡೋ ಯಾತ್ರೆ ಮಂಗಳವಾರ ಬೆಳಗ್ಗೆ ಹೋಶಿಯಾರ್‌ಪುರದ ತಾಂಡಾದಿAದ ಪುನರಾರಂಭವಾಯಿತು. ಪಕ್ಷದ ಪಂಜಾಬ್ ಮುಖ್ಯಸ್ಥ ಅಮರೀಂದರ್ ಸಿಂಗ್ ರಾಜಾ ವಾರಿಂಗ್, ಹರೀಶ್ ಚೌಧರಿ, ಹಾಗೂ ರಾಜ್ ಕುಮಾರ್ ಚಬ್ಬೇವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಬಾಲಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮಿತ್ ಶಾ ಭದ್ರತೆಯಲ್ಲಿ ಲೋಪ- ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ ಬಂಧನ

    ಅಮಿತ್ ಶಾ ಭದ್ರತೆಯಲ್ಲಿ ಲೋಪ- ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ ಬಂಧನ

    ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ, ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಮಲಬಾರ್ ಹಿಲ್‍ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಧೂಲೆ ನಿವಾಸಿ ಹೇಮಂತ್ ಪವಾರ್ (32) ವ್ಯಕ್ತಿಯನ್ನು ಬಂಧಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಈ ವಾರದ ಆರಂಭದಲ್ಲಿ ಮುಂಬೈಗೆ(Mumbai) ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಭದ್ರತೆಯಲ್ಲಿ ಲೋಪವಾಗಿದೆ(Security Lapse) ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    POLICE JEEP

    ಹೇಮಂತ್ ಪವಾರ್ ಆಂಧ್ರಪ್ರದೇಶ ಸಂಸದರೊಬ್ಬರ ಸಹಾಯಕನಂತೆ ನಟಿಸುತ್ತಿದ್ದ ಎನ್ನಲಾಗಿದೆ. ಈತ ಗೃಹ ಸಚಿವಾಲಯದ ಐ-ಕಾರ್ಡ್ ಹಾಕಿಕೊಂಡು ಗಂಟೆಗಟ್ಟಲೆ ಅಮಿತ್ ಶಾ ಅವರ ಸುತ್ತ ತಿರುಗಾಡಿದ್ದ. ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಪವಾರ್ ಅವರನ್ನು ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಆತ ನಕಲಿ ಅಧಿಕಾರಿ ಎಂಬ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪವಾರ್‌ನನ್ನು ಬಂಧಿಸಿ,(Arrest) ಆತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ – ಸುಪ್ರೀಂಗೆ ಸಮಿತಿ ವರದಿ

    ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ – ಸುಪ್ರೀಂಗೆ ಸಮಿತಿ ವರದಿ

    ನವದೆಹಲಿ: ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಉಂಟಾದ ಭದ್ರತಾ ವೈಫಲ್ಯಕ್ಕೆ ಫಿರೋಜ್‍ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ನೇರ ಕಾರಣ. ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‍ಗೆ ಸಮಿತಿ ವರದಿ ಸಲ್ಲಿಸಿದೆ.

    ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ರಚಿಸಿದ ವಿಶೇಷ ಸಮಿತಿಯೂ ತನ್ನ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠಕ್ಕೆ ಸಲ್ಲಿಸಿದೆ. ವರದಿಯಲ್ಲಿ ಪೊಲೀಸ್ ಭದ್ರತಾ ವೈಫಲ್ಯವನ್ನು ಕಟುವಾಗಿ ಟೀಕಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್‌

    ವರದಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಫಿರೋಜ್‍ಪುರ ಎಸ್‍ಎಸ್‍ಪಿ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸಾಕಷ್ಟು ಬಲ ಲಭ್ಯವಿದ್ದರೂ ಅವರು ಭದ್ರತೆ ನೀಡುವಲ್ಲಿ, ಪ್ರತಿಭಟನೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪ್ರಧಾನಿ ಮಾರ್ಗದ ಬಗ್ಗೆ 2 ಗಂಟೆಗಳ ಮೊದಲು ಅವರಿಗೆ ತಿಳಿಸಲಾಗಿದ್ದರೂ ಅವರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಉಲ್ಲೇಖಿಸಿದೆ.

    ವರದಿಯನ್ನು ಗಣನೆಗೆ ತೆಗೆದುಕೊಂಡಿದ್ದು, ಸಮಿತಿಯು ಪ್ರಧಾನಿಯ ಭದ್ರತೆಯನ್ನು ಬಲಪಡಿಸಲು ಕೆಲವು ಪರಿಹಾರ ಕ್ರಮಗಳನ್ನು ಸೂಚಿಸಿದ್ದು, ನಾವು ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಸಿಜೆಐ ರಮಣ ವಿಚಾರಣೆ ವೇಳೆ ಹೇಳಿದರು. ಸಮಿತಿಯ ವರದಿಯ ಪರಿಷ್ಕೃತ ಪ್ರತಿಯನ್ನು ನೀಡುವಂತೆ ಕೇಳಿದ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಲು ಪೀಠ ನಿರಾಕರಿಸಿತು. ಇದನ್ನೂ ಓದಿ: 5 ಫೋನ್‌ಗಳಲ್ಲಿ ಮಾಲ್‍ವೇರ್‌ಗಳು ಕಂಡು ಬಂದಿದೆ, ನಿರ್ದಿಷ್ಟವಾಗಿ ಪೆಗಾಸಸ್ ಎನ್ನಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್‍ಗೆ ತಜ್ಞರ ವರದಿ

    ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ಉಂಟಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ನ್ಯಾಯಾಲಯ ಮೇಲುಸ್ತುವಾರಿಯಲ್ಲಿ ವಿಶೇಷ ಸಮಿತಿ ರಚಿಸಿ ತನಿಖೆಗೆ ಸೂಚಿಸಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್‍ಗೆ ಸಹಕರಿಸಲು ಮತ್ತು ಪಂಜಾಬ್ ಪೊಲೀಸ್ ಮತ್ತು ವಿಶೇಷ ರಕ್ಷಣೆ (SPG) ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ಅಧಿಕಾರಿಗಳಿಗೆ ಅಗತ್ಯ ನೆರವು ನೀಡುವಂತೆ ಪೀಠವು ನಿರ್ದೇಶನ ನೀಡಿತು.

    Live Tv
    [brid partner=56869869 player=32851 video=960834 autoplay=true]