Tag: Security Agency

  • Pahalgam Terror Attack | ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

    Pahalgam Terror Attack | ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಬುಧವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಇದೀಗ ಘಟನೆಯಲ್ಲಿ ಭಾಗಿಯಾದ ಮೂವರು ಉಗ್ರರ (Terrorists) ರೇಖಾಚಿತ್ರವನ್ನು ಭದ್ರತಾ ಸಂಸ್ಥೆ ಬಿಡುಗಡೆ ಮಾಡಿದೆ.

    ಭದ್ರತಾ ಸಂಸ್ಥೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಈ ಭಯಾನಕ ದಾಳಿಯ ಹಿಂದಿನ ಕ್ರೂರ ಯೋಜನೆಯನ್ನು ಬಯಲು ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಇದೀಗ ಪ್ರತ್ಯಕ್ಷದರ್ಶಿಗಳ ಮಾಹಿತಿಯ ಆಧಾರದ ಮೇಲೆ ಶಂಕಿತ ಭಯೋತ್ಪಾದಕರ ರೇಖಾಚಿತ್ರವನ್ನು ಬಿಡಿಸಲಾಗಿದೆ. ಇದನ್ನೂ ಓದಿ: ಮಹಿಳೆಯರಿಂದ ಪುರುಷರನ್ನು ಬೇರ್ಪಡಿಸಿ ಹತ್ಯೆ – 20 ನಿಮಿಷದಲ್ಲಿ ನರಮೇಧ ಮಾಡಿದ್ದು ಹೇಗೆ?

    ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಈ ರೇಖಾಚಿತ್ರದಲ್ಲಿ ತೋರಿಸಲಾಗಿರುವ 3 ಶಂಕಿತ ಭಯೋತ್ಪಾದಕರ ಹೆಸರುಗಳು ಎಂದು ಎನ್‌ಐಎ ತಿಳಿಸಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಬೆನ್ನಲ್ಲೇ 2 ಭಯೋತ್ಪಾದಕರನ್ನ ಹೊಡೆದುರುಳಿಸಿದ ಸೇನಾ ಪಡೆ

    ದಾಳಿಗೆ ಮುನ್ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗುತಾಣಗಳನ್ನು ನಿರ್ಮಿಸಿದ್ದರು. ಭಯೋತ್ಪಾದಕರು ಬಾಡಿ ಕ್ಯಾಮೆರಾಗಳನ್ನು ಧರಿಸಿದ್ದರು. ವಿಶೇಷವಾಗಿ ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ ಕೃತ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಕಲಿಮಾ ಹೇಳದ್ದಕ್ಕೆ ತಂದೆಯ ತಲೆಗೆ ಗುಂಡೇಟು – ಕಣ್ಣೀರಿಟ್ಟ ಪುತ್ರಿ

    ಮೂಲಗಳ ಪ್ರಕಾರ ಮೂವರು ಭಯೋತ್ಪಾದಕರು ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷ ಮತ್ತು ಮಹಿಳಾ ಗುಂಪುಗಳಾಗಿ ವಿಂಗಡಿಸಿದ್ದಾರೆ. ನಂತರ ಅವರ ಧರ್ಮ, ಹೆಸರನ್ನು ಕೇಳಿದ್ದಾರೆ. ಈ ವೇಳೆ ಹಿಂದೂ ಹೆಸರು ಹೇಳಿದವರ ಮೇಲೆ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ.

  • ಭಾರತದ ಪ್ರಭಾವ ಕುಗ್ಗಿಸಲು ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ – ಕೆನಡಾ ಅಧಿಕಾರಿ ಹೇಳಿಕೆ ವಿಡಿಯೋ ವೈರಲ್‌

    ಭಾರತದ ಪ್ರಭಾವ ಕುಗ್ಗಿಸಲು ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ – ಕೆನಡಾ ಅಧಿಕಾರಿ ಹೇಳಿಕೆ ವಿಡಿಯೋ ವೈರಲ್‌

    ಒಟ್ಟಾವಾ: ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರತ ಮತ್ತು ಕೆನಡಾ (India – Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಈ ನಡುವೆ ಕೆನಡಾದ ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ ನೀಡುತ್ತಿದೆ ಎಂದು ಕೆನಡಾ ಗುಪ್ತಚರ ಸಂಸ್ಥೆಯ (CSIS) ನಿರ್ದೇಶಕಿ ವನೆಸ್ಸಾ ಲಾಯ್ಡ್ ಅವರು ಹೇಳಿದ್ದ ವೀಡಿಯೋ ಸದ್ದು ಮಾಡುತ್ತಿದೆ.

    ಇತ್ತೀಚೆಗೆ ನಡೆದ ವಿದೇಶಿ ಹಸ್ತಕ್ಷೇಪ ಸಮಿತಿಯ ಅಧಿವೇಶನದಲ್ಲಿ ವನೆಸ್ಸಾ ಲಾಯ್ಡ್, ನಿಜ್ಜರ್‌ ಹತ್ಯೆಗೆ ಸಂಬಂಧಿಸಿಂತೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಕೆನಡಾದ ರಾಜಕೀಯದ ಮೇಲೆ ಪ್ರಭಾವ ಬೀರುವಲ್ಲಿ ಪಾಕಿಸ್ತಾನದ ಪಾತ್ರವೂ ಇದೆ. ಜೊತೆಗೆ ಖಲಿಸ್ತಾನಿಗಳಿಗೆ ಪಾಕ್‌ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಕಡಿಮೆಗೊಳಿಸಲು ಪಾಕ್‌ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಖಲಿಸ್ತಾನಿಗಳ ಉಗ್ರವಾದಕ್ಕೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದರು. ಭಾರತ-ಕೆನಡಾ ನಡುವೆ ಮತ್ತೆ ಬಿಕ್ಕಟ್ಟು ಎದುರಾದ ಬೆನ್ನಲ್ಲೇ ಈ ವೀಡಿಯೋ ಭಾರಿ ಸದ್ದು ಮಾಡುತ್ತಿದೆ.

    ಹರ್ದೀಪ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಭಾರತ ಸರ್ಕಾರ (Indian Gooovernment) ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ. ಇದನ್ನೂ ಓದಿ: ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ಸೋಮವಾರ (ಅ.14) ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ 6 ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಸರ್ಕಾರ ಗಡಿಪಾರು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸರ್ಕಾರವೂ ನವದೆಹಲಿಯಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶ ತೊರೆಯುವಂತೆ ಹೇಳಿದೆ. ಇದರಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಇದನ್ನೂ ಓದಿ: ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

    ಈ ಬೆನ್ನಲ್ಲೇ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತೀಯ ಸರ್ಕಾರಿ ಏಜೆಂಟ್‌ ಜೊತೆ ಸಂಪರ್ಕ ಹೊಂದಿದೆ ಎಂದು ಕೆನಡಾದ ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ