ಕೋಲ್ಕತ್ತಾ: ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಮಾಹಿತಿಯ ಮೇರೆಗೆ ಕೋಲ್ಕತ್ತಾ (Kolkata) ನಗರದಲ್ಲಿ ಮೇ 28 ರಿಂದ 60 ದಿನಗಳ ಸುದೀರ್ಘ ಕಾಲ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ.
ಮೇ 28 ರಿಂದ ಜು.26 ರವರೆಗೆ 60 ದಿನಗಳವರೆಗೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಮಾಹಿತಿ ಆಧಾರದ ಮೇಲೆ ಮುಂದಿನ ಆದೇಶದವರೆಗೆ ಐಪಿಸಿಯ ಸೆಕ್ಷನ್ 144ನ್ನು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿಧಿಸಿದ್ದಾರೆ. ಇದನ್ನೂ ಓದಿ: ಮಾನನಷ್ಟ ಕೇಸ್- ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ
ಸಾರ್ವಜನಿಕ ಶಾಂತಿ ಕಾಪಾಡಲು ಈ ಆದೇಶ ಅಗತ್ಯವಾಗಿದೆ. ಇದರ ಅನ್ವಯ ಪೊಲೀಸರು (Kolkata Police) ನಿರ್ದೇಶನದ ಅನುಸಾರವಾಗಿ ಶಾಂತಿ ಕದಡುವವರ ವಿರುದ್ಧ ಕಾರ್ಯಾಚರಣೆಗಿಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೌಬಜಾರ್ ಪೊಲೀಸ್ ಠಾಣೆ, ಹೇರ್ ಸ್ಟ್ರೀಟ್ ಪೊಲೀಸ್ ಠಾಣೆ ಮತ್ತು ಕೋಲ್ಕತ್ತಾ ಟ್ರಾಫಿಕ್ ಗಾರ್ಡ್ ಹೆಡ್‍ಕ್ವಾರ್ಟರ್‌ಗಳು ವ್ಯಾಪ್ತಿಯಲ್ಲಿರುವ ಬೆಂಟಿಕ್ ಸ್ಟ್ರೀಟ್ ಹೊರತುಪಡಿಸಿ, ಕೆಸಿ ದಾಸ್ ಕ್ರಾಸಿಂಗ್‍ನಿಂದ ವಿಕ್ಟೋರಿಯಾ ಹೌಸ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸೆಕ್ಷನ್ 144 ಜಾರಿಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೇ 28 ರಂದು ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ತಪ್ಪಿಸಬೇಕೆಂದು ಮಮತಾ ಬ್ಯಾನರ್ಜಿ ಉದ್ದೇಶ ಪೂರ್ವಕವಾಗಿ ನಿಷೇಧಾಜ್ಞೆ ಹೇರಿದ್ದಾರೆ. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಹೇಳಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗೂಗಲ್ ಕಂಪನಿಯ ಫೋನ್ – ಹೂಡಿಕೆ ಕಳೆದುಕೊಂಡ ಕರ್ನಾಟಕ
ನವದೆಹಲಿ: ಫೆಬ್ರವರಿ 13ರಂದು ದೆಹಲಿಯಲ್ಲಿ (New Delhi) ರೈತರ ಪ್ರತಿಭಟನೆ (Farmer’s Protest) ಹಿನ್ನೆಲೆ ಹರಿಯಾಣ (Haryana) ಸರ್ಕಾರವು ರಾಜ್ಯದ ಏಳು ಜಿಲ್ಲೆಗಳಾದ ಅಂಬಾಲಾ, ಜಿಂದ್, ಕುರುಕ್ಷೇತ್ರ, ಹಿಸಾರ್, ಕೈತಾಲ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸೇವೆಗಳನ್ನು (Internet Service) ನಿಷೇಧಿಸಿದೆ. ಅಲ್ಲದೇ ಚಂಡೀಗಢಕ್ಕೆ ಸಮೀಪವಿರುವ ಪಂಚಕುಲದಲ್ಲಿ ಸೆಕ್ಷನ್ 144ನ್ನು (Section 144) ಜಾರಿಗೊಳಿಸಿದೆ.
ಈ ಕುರಿತು ಮಾತನಾಡಿದ ಪಂಚಕುಲ (Panchakula) ಡಿಸಿಪಿ ಸುಮೇರ್ ಸಿಂಗ್ ಪ್ರತಾಪ್, ಪಾದಚಾರಿಗಳು ಅಥವಾ ಟ್ರ‍್ಯಾಕ್ಟರ್ ಟ್ರಾಲಿಗಳು ಮತ್ತು ಇತರ ವಾಹನಗಳಲ್ಲಿ ಯಾವುದೇ ರಾಡ್‌ಗಳು, ಆಯುಧಗಳನ್ನು ಸಾಗಿಸುವಂತಿಲ್ಲ. ಮತ್ತು ರ‍್ಯಾಲಿ, ಪ್ರತಿಭಟನೆಗಳು ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ದರ್ಶನಕ್ಕೆ ಅಯೋಧ್ಯೆಗೆ ಬಸ್‌ನಲ್ಲಿ ತೆರಳಿದ ಯುಪಿ ಶಾಸಕರು
ಫೆಬ್ರವರಿ 13 ರಂದು ರೈತ ಸಂಘಟನೆಗಳು ದೆಹಲಿಗೆ ತಮ್ಮ ಮೆರವಣಿಗೆಯನ್ನು ಘೋಷಿಸಿದ ನಂತರ, ರಾಷ್ಟ್ರ ರಾಜಧಾನಿಯನ್ನು ತಲುಪುವುದನ್ನು ತಡೆಯಲು ಪಂಜಾಬ್-ಹರಿಯಾಣ ಗಡಿ (Punjab-Haryana Border) ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪಂಜಾಬ್-ಹರಿಯಾಣ ಗಡಿಯನ್ನು ಮುಚ್ಚಲಾಗಿದೆ. ಬ್ಯಾರಿಕೇಡ್‌ಗಳು, ಬಂಡೆಗಳು, ಮರಳು ತುಂಬಿದ ಟಿಪ್ಪರ್‌ಗಳು ಮತ್ತು ಮುಳ್ಳುತಂತಿಗಳಿಂದ ಗಡಿಗಳನ್ನು ಮುಚ್ಚಲಾಗಿದೆ. ಇದನ್ನೂ ಓದಿ: ಮದುವೆಯಲ್ಲಿ ಡಿಜೆಗಾಗಿ ಜಗಳ, ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು
ಇಂಟರ್ನೆಟ್ ನಿಷೇಧ: ಅಧಿಕೃತ ಆದೇಶದ ಪ್ರಕಾರ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 11 ರಂದು ಬೆಳಗ್ಗೆ 6 ರಿಂದ ಫೆಬ್ರವರಿ 13 ರಂದು ರಾತ್ರಿ 11.30 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಇದನ್ನೂ ಓದಿ: ನಿಮ್ಮ ಪೋಷಕರು ನನಗೆ ಮತ ಹಾಕದಿದ್ರೆ 2 ದಿನ ಊಟ ಮಾಡ್ಬೇಡಿ- ಶಾಸಕರ ವಿವಾದಾತ್ಮಕ ಹೇಳಿಕೆ
ಇನ್ನು ಗಡಿಯನ್ನು ಮುಚ್ಚುವುದರ ಜೊತೆಗೆ ಸಂಚಾರ ಸಲಹೆಯನ್ನು ಸಹ ಬಿಡುಗಡೆ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣದ ಪ್ರಮುಖ ಮಾರ್ಗಗಳಲ್ಲಿ ಸಂಭವನೀಯ ಟ್ರಾಫಿಕ್ ಅಡೆತಡೆಗಳನ್ನು ನಿರೀಕ್ಷಿಸುವ ಮೂಲಕ ಹರಿಯಾಣ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ. ಆದರೆ ರಾಜ್ಯದ ಇತರ ಎಲ್ಲ ಮಾರ್ಗಗಳಲ್ಲಿ ಸಂಚಾರ ಮುಂದುವರಿಯಲಿದೆ. ಈ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗದಂತೆ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸುವಂತೆ ಆಡಳಿತ ಮಂಡಳಿ ಜನರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?
ಹರಿಯಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ), ಮಮತಾ ಸಿಂಗ್ ಈ ಕುರಿತು ಮಾತನಾಡಿದ್ದು, ಪ್ರಸ್ತುತ ಟ್ರಾಫಿಕ್ ಪರಿಸ್ಥಿತಿಯನ್ನು ತಿಳಿಯಲು, ಹರಿಯಾಣ ಪೊಲೀಸರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಅನುಸರಿಸಿ. ಅಥವಾ ಹರಿಯಾಣ ಪೊಲೀಸ್ ಫೇಸ್‌ಬುಕ್ ಖಾತೆಯಲ್ಲಿ ತಿಳಿದುಕೊಳ್ಳಬಹುದು. ಯಾವುದೇ ಸಂದರ್ಭದಲ್ಲಾದರೂ 112 ನಂಬರ್ ಅನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 1 ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ BJPಗೆ 1,300 ಕೋಟಿ ರೂ. ಗಳಿಕೆ – ಹೆಲಿಕಾಪ್ಟರ್ ಬಳಕೆಗೆ 78.2 ಕೋಟಿ ರೂ. ಖರ್ಚು
ಕುರುಕ್ಷೇತ್ರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಅಲ್ಲದೇ ಆಡಳಿತ ಮಂಡಳಿ ಹರಿಯಾಣ ಪಂಜಾಬ್ ಗಡಿಯನ್ನು ಪೆಹೋವಾ ಗ್ರಾಮದ ತ್ಯುಕರ್‌ನಲ್ಲಿ ಮುಚ್ಚಿದೆ. ಫೆಬ್ರವರಿ 13 ರಂದು ದೆಹಲಿಗೆ ರೈತರ ಮೆರವಣಿಗೆಯಿಂದಾಗಿ ಹರಿಯಾಣ ಆಡಳಿತ ಫುಲ್ ಅಲರ್ಟ್ ಆಗಿದೆ. ಇದನ್ನೂ ಓದಿ: 17ನೇ ಲೋಕಸಭೆಯಲ್ಲಿ 221 ಮಸೂದೆ ಅಂಗೀಕಾರ: ಪ್ರಹ್ಲಾದ್ ಜೋಶಿ
ರೈತರ ಬೇಡಿಕೆಗಳೇನು?: ಎಂಎಸ್‌ಪಿಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ಕೃಷಿ ಸಾಲ ಮನ್ನಾ, ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು, ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ರೈತರ ಪ್ರಮುಖ ಬೇಡಿಕೆಯಾಗಿದೆ. ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಹಲವು ರೈತ ಸಂಘಟನೆಗಳು ಈ ವಿಷಯವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಇದನ್ನೂ ಓದಿ: ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ಕನಸು ನನಸಾಗುತ್ತೆ: ಮೋದಿ ಭರವಸೆ
ಬೆಂಗಳೂರು: ಬೆಂಗಳೂರಿನ (Bengaluru) ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಮಾಲ್ ಆಫ್ ಏಷ್ಯಾ (Mall Of Asia) ಮುಂದಿನ 15 ದಿನಗಳ ಕಾಲ ಬಂದ್ ಆಗಲಿದೆ. ಅಲ್ಲದೇ ಮಾಲ್ ಆಫ್ ಏಷ್ಯಾ ಬಳಿ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ.
ಮಾಲ್ ಆಫ್ ಏಷ್ಯಾ ಮೇಲೆ ಕರವೇ (Karnataka Rakshana Vedike) ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಭಾನುವಾರದಿಂದ 15 ದಿನಗಳವರೆಗೆ ಮಾಲ್ ಅನ್ನು ಮುಚ್ಚಲಾಗುತ್ತದೆ. ಮಾತ್ರವಲ್ಲದೇ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅನ್ನು ಜಾರಿ ಮಾಡಿ ಆದೇಶ ನೀಡಲಾಗಿದೆ. ಇತ್ತೀಚಿಗಷ್ಟೆ ಬೆಂಗಳೂರಿನಾದ್ಯಂತ ಕರವೇ ಕಾರ್ಯಕರ್ತರು ಕನ್ನಡ ನಾಮಫಲಕ (Kannada Nameboard) ಹಾಕುವಂತೆ ಹೋರಾಟ ಮಾಡಿದ್ದರು. ಇದನ್ನೂ ಓದಿ: ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್
ನಾಮಫಲಕದಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ವೇಳೆ ಮಾಲ್ ಆಫ್ ಏಷ್ಯಾಕ್ಕೆ ದಾಳಿ ನಡೆಸಿದ್ದರು. ಈ ವೇಳೆ ನಾಮಫಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮುಂಜಾಗ್ರತೆ ಹಿನ್ನೆಲೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಆದೇಶದ ಪ್ರಕಾರ 5ಕ್ಕಿಂತ ಹೆಚ್ಚು ಜನ ಸೇರೋ ಹಾಗಿಲ್ಲ. ಮಾಲ್ ಆಫ್ ಏಷ್ಯಾ ಅಕ್ಟೋಬರ್‌ನಲ್ಲಿ ಓಪನ್ ಆಗಿತ್ತು. ಇದನ್ನೂ ಓದಿ: ನಿಗಮ ಮಂಡಳಿ ನೇಮಕದಲ್ಲಿ ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಡಿಕೆಶಿ
ಮೈಸೂರು: ಮಹಿಷಾ ದಸರಾ (Mahisha Dasara) ಆಚರಣೆ ವಿಚಾರವಾಗಿ ಪರ ವಿರೋಧಗಳು ವ್ಯಕ್ತವಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೈಸೂರು (Mysuru) ನಗರ ಪೊಲೀಸ್ ಆಯುಕ್ತರು ಸೆಕ್ಷನ್ 144 ಜಾರಿ ಮಾಡಿದ್ದಾರೆ.
ಚಾಮುಂಡಿ ಬೆಟ್ಟ (Chamundi Hill) ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಪೊಲೀಸ್ ಕಮೀಷನರ್ ರಮೇಶ್.ಬಿ ಆದೇಶಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಅ.12ರಂದು ಮಧ್ಯರಾತ್ರಿ 12 ಗಂಟೆಯಿಂದ ಅ.14ರ ಬೆಳಗ್ಗೆ 06 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಯಾವುದೇ ಸಭೆ-ಸಮಾರಂಭ, ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಭಾಷಣದ ವೇಳೆ Emergency Alert Message- ಬಿಜೆಪಿಯವ್ರೂ ಅಲರ್ಟ್ ಆಗ್ಲಿ ಅಂತಾ ನಕ್ಕ ಡಿಕೆಶಿ
ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿ ಸಭೆ-ಸಮಾರಂಭ ಮೆರವಣಿಗೆ, ಪ್ರತಿಭಟನೆ, ರ‍್ಯಾಲಿ ನಡೆಸಲು ಪ್ರಯತ್ನಿಸಿದಲ್ಲಿ ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಆದೇಶವು ಮದುವೆ ಸಮಾರಂಭಗಳಿಗೆ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ, ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ. ಇದನ್ನೂ ಓದಿ: ನಗರಸಭೆ ಕಚೇರಿಯಲ್ಲೇ ಕೈ ಕೈ ಮಿಲಾಯಿಸಿದ ಸದಸ್ಯರು
ಯಾವುದೆಲ್ಲಾ ನಿಷೇಧ?
1) ಯಾವುದೇ ಮೆರವಣಿಗೆ, ಪ್ರತಿಭಟನೆ, ಬೈಕ್ ರ‍್ಯಾಲಿ ನಡೆಸುವುದು.
2) ಪರ ವಿರೋಧ ಘೋಷಣೆ ಕೂಗುವುದು.
3) ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು.
4) 5 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು.
5) ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು.
6) ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್ ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದು. ಇದನ್ನೂ ಓದಿ: ಕೆಲಸ ಮಾಡ್ಬೇಕು ಅಂದ್ರೆ ವೋಟ್ ಹಾಕ್ಬೇಕು ಅನ್ನೋದರಲ್ಲಿ ತಪ್ಪೇನಿದೆ?: ಬಾಲಕೃಷ್ಣ ಸಮರ್ಥನೆ
ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ಕರೆ ಬೆನ್ನಲ್ಲೇ ಇಂದು ಮಧ್ಯರಾತ್ರಿಯಿಂದಲೇ ನಗರದಲ್ಲಿ 144 ಸೆಕ್ಷನ್ (Section 144) ಜಾರಿ ಮಾಡಲಾಗಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು (Bengaluru) ನಗರ ಪೊಲೀಸ್ ಆಯುಕ್ತ ದಯಾನಂದ್, ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
144 ಸೆಕ್ಷನ್ ಜಾರಿ ವೇಳೆ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಗುಂಪು ಸೇರುವಂತೆ ಇಲ್ಲ. ಬಂದ್‌ಗಳನ್ನು ಕರೆಯುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಬಂದ್ ವೇಳೆ ಆಸ್ತಿ ಪಾಸ್ತಿ ನಾಶ ಮತ್ತು ಸಾವು ನೋವಿಗೆ ಸಂಘಟಕರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಾಹನಗಳನ್ನು ತಡೆಯುವುದು, ಡ್ಯಾಮೇಜ್ ಮಾಡುವುದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದಲ್ಲಿ ವ್ಯಾಪಕ ರಕ್ಷಣಾ ಕ್ರಮ ಜರುಗಿಸಲಾಗುತ್ತದೆ. ಪ್ರತಿಭಟನೆ, ಮೆರವಣಿಗೆಗೆ ಯಾವುದೇ ಅವಕಾಶವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾಳಿನ ಬಂದ್‌ಗೆ ಸಂಘಟನೆಗಳ ಜೊತೆಗೆ ವಿಪಕ್ಷದ ಬೆಂಬಲವೂ ಇದೆ: ಬೊಮ್ಮಾಯಿ
ರಾಯಚೂರು: ನಗರದ ಜನರಿಗೆ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ (Water Crisis) ಬಗೆಹರಿಸಲು ಜಿಲ್ಲಾಡಳಿತ 144 ಸೆಕ್ಷನ್ (Section 144) ಜಾರಿಗೊಳಿಸಿ ಟಿಎಲ್‍ಬಿಸಿ ಕಾಲುವೆಗೆ ನೀರು ಹರಿಸಲು ಮುಂದಾಗಿದೆ. ತುಂಗಭದ್ರಾ (Tungabhadra Eda Dande Kaluve) ಎಡದಂಡೆ ಕಾಲುವೆ ಪ್ರದೇಶದ ಸುತ್ತಮುತ್ತಲು 100 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ್ ಆದೇಶಿಸಿದ್ದಾರೆ.
ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲಿ ಅಥವಾ ಪಂಪ್ ಸೆಟ್ ಹಾಗೂ ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನ ಸಂರ್ಪೂಣವಾಗಿ ನಿಷೇಧಿಸಲಾಗಿದೆ. ಜೂನ್ 17 ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 27 ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯ ಪಠ್ಯಗಳಿಗೆ ಸರ್ಕಾರ ಕತ್ತರಿ- ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಠ್ಯಕ್ಕೆ ಬ್ರೇಕ್
ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಮತದಾನ ಪೂರ್ಣಗೊಳ್ಳುವ ವೇಳೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ 2 ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಮತದಾನ (Voting) ಪ್ರಕ್ರಿಯೆ ನಡೆದಿತ್ತು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆ ಕೆಂಭಾವಿ (Kembhavi) ಮತ್ತು ಸುರಪುರ (Surapura) ಪಟ್ಟಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ್ರೆ ಅದು ನಾನೊಬ್ಬನೇ: ಪುಟ್ಟರಾಜು
ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರಿಸ್ಥಿತಿಯನ್ನು ಅವಲೋಕಿಸಿ 2 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಮೇ 10ರ ಸಂಜೆ 6 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಎರಡು ದಿನಗಳ ಕಾಲ ಪಟ್ರೋಲಿಂಗ್ ಮತ್ತು ಗಸ್ತು ಪಡೆ ಇಲ್ಲೇ ಠಿಕಾಣಿ ಹೂಡಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನನಗಿಂತ ಗಟ್ಟಿ ಅಲ್ಲವೇ ಅಲ್ಲ: ಜಿಟಿಡಿ
ಯಾದಗಿರಿ: ಜಿಲ್ಲೆಯ ಕೆಂಬಾವಿ ಹಾಗೂ ಸುರಪುರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ (Section 144) ಮಾಡಿ ಮಾಡಿ ಎಸ್ಪಿ ಡಾ.ಬಿ.ಸಿ ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.
ಮತದಾನದ (Vote) ವೇಳೆ ಮತಗಟ್ಟೆ ಒಳಗೆ ನಿವೃತ್ತ ಎಎಸ್‍ಐ ಮೇಘನಾಥ್ ನುಗ್ಗಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ. ನಿವೃತ್ತ ಅಧಿಕಾರಿ ಚುನಾವಣಾ (Election) ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ್ದು, ತಳ್ಳಿ ಏಕವಚನದಲ್ಲೇ ರೇಗಿ ಹಲ್ಲೆಗೆ ಮುಂದಾಗಿದ್ದಾನೆ. ನನ್ನ ವಾಚ್‍ನಲ್ಲಿ ಇನ್ನೂ 6 ಗಂಟೆ ಆಗಿಲ್ಲ, ಗಂಟೆ ಆದಾಗ ಬರುತ್ತೇನೆ. ನಿನಗೆ ಮತದ ಬೆಲೆ ಗೊತ್ತಿಲ್ಲ ಎಂದು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾನೆ. ಕೊನೆಗೂ ಮತ ಹಾಕದೇ ತೆರಳಿದ್ದಾನೆ. ಇದನ್ನೂ ಓದಿ: ಎಕ್ಸಿಟ್ ಪೋಲ್‍ನಲ್ಲಿ ನಂಬಿಕೆ ಇಲ್ಲ, 141 ಸ್ಥಾನ ಗೆಲ್ತೀವಿ: ಡಿಕೆ ಶಿವಕುಮಾರ್
ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ನಗರದಲ್ಲಿ ಶುಕ್ರವಾರ ಬೆಳಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಜನರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಟುಡೇಸ್ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ
ಕೋಲ್ಕತ್ತಾ/ಮುಂಬೈ: ದೇಶಾದ್ಯಂತ ಗುರುವಾರ ರಾಮನವಮಿ ಆಚರಿಸಲಾಯಿತು. ರಾಮನವಮಿ ಆಚರಣೆ ವೇಳೆ ಕೆಲವು ರಾಜ್ಯಗಳಲ್ಲಿ ಗುಂಪು ಘರ್ಷಣೆ ನಡೆದಿದ್ದು, ತೀವ್ರ ಹಿಂಸಾಚಾರಕ್ಕೆ ಕಾರಣವಾಗಿದೆ. ಇದರಿಂದ ಬಿಹಾರ, ಪಶ್ಚಿಮ ಬಂಗಾಳ (West Bengal), ಮಹಾರಾಷ್ಟ್ರ (ಮುಂಬೈ) ಹಾಗೂ ಗುಜರಾತ್ ರಾಜ್ಯಗಳಲ್ಲಿ ವಿವಿಧೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಘಟನಾ ಸ್ಥಳಗಳಲ್ಲಿ 144 ನಿಷೇಧಾಜ್ಞೆ (Section 144) ಜಾರಿಗೊಳಿಸಲಾಗಿದೆ.
#WATCH | Mumbai: All 21 people, who were arrested by Malvani Police, in connection with the scuffle between two groups during ‘Ram Navami’ Shobha Yatra in Malad’s Malvani area yesterday, were produced before Borivali court today.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ, ಗುಜರಾತ್‌ನ ವಡೋದರಾ, ಮುಂಬೈನ ಮಲವಾನಿ ಹಾಗೂ ಬಿಹಾರದ ಸಾರ್ಸಮ್ ಸೇರಿದಂತೆ ವಿವಿಧೆಡೆ ರಾಮನವಮಿ ಆಚರಣೆ ಸಂದರ್ಭದಲ್ಲಿ ನಡೆದ ಗುಂಪುಗಳ ನಡುವೆ ಘರ್ಷಣೆಯಿಂದ ಹಿಂಸಾಚಾರ ಭುಗಿಲೆದ್ದಿದೆ. 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
#WATCH | Bihar: A clash broke out between two groups in Sasaram after the Ram Navami procession. Stone pelting also reported. Police and Administration reached the spot to control the situation. Section 144 CrPC imposed in Sasaram city. pic.twitter.com/WTTSUJ2VfT
ಶೋಭಾ ಯಾತ್ರೆ ಮೇಲೆ ಕಲ್ಲು ತೂರಾಟ: ವಡೋದರ ನಗರದ ಫತೇಹ್‌ಪುರ ಪ್ರದೇಶದಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಗುರುವಾರ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುತೂರಾಟ ನಡೆಸಿದ್ದ 24 ಮಂದಿ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ರಾಮ ನವಮಿ ಆಚರಣೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಜನರನ್ನು ವಶಕ್ಕೆ ಪಡೆದಿದ್ದೇವೆ. ಎಫ್‌ಐಆರ್ ದಾಖಲಾದ ಬಳಿಕ ಎಲ್ಲರನ್ನೂ ಅಧಿಕೃತವಾಗಿ ಬಂಧಿಸಲಾಗುವುದು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜನಜೀವನ ಸಹಜ ಸ್ಥಿತಿಯಲ್ಲಿದೆ’ ಎಂದು ವಡೋದರ ಪೊಲೀಸ್ ಕಮಿಷನರ್ ಶಮ್ಶೇರ್ ಸಿಂಗ್ ಹೇಳಿದ್ದಾರೆ.
ಈ ನಡುವೆ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ರಾಮ ನವಮಿಯಂದು ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೋರಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಯಾದಗಿರಿ: ನಗರದಲ್ಲಿ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಟಿಪ್ಪು ಸರ್ಕಲ್ (Tippu Circle) ವಿವಾದ ಸದ್ಯ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಅಹಿತಕರ ಘಟನೆ ಮುನ್ಸೂಚನೆ ಅರಿತಿದ್ದ ಯಾದಗಿರಿ ಪೊಲೀಸರ (Yadgir Police) ಬುದ್ಧಿವಂತಿಕೆ ನಡೆಯಿಂದ ಪ್ರತಿಭಟನೆಗೂ ಅವಕಾಶ ಸಿಗಲಿಲ್ಲ. ಶಾಂತಿ ಭಂಗಕ್ಕೆ ಮುಂದಾದವರನ್ನು ಬಂಧಿಸಿದ ಪೊಲೀಸರು, ಜನರ ಆತಂಕ ದೂರ ಮಾಡಿದ್ದಾರೆ.
ಕಳೆದೊಂದು ವಾರದಿಂದ ಇಡೀ ಯಾದಗಿರಿ (Yadgir) ನಗರದ ಸಾಮರಸ್ಯಕ್ಕೆ ಕೊಳ್ಳಿ ಇಟ್ಟು, ಎರಡು ಕೋಮುಗಳ ನಡುವೆ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿದ್ದ ವಿವಾದಿತ ಟಿಪ್ಪು ಸರ್ಕಲ್ ವಿಚಾರ ಇದೀಗ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಸರ್ಕಲ್ ತೆರವಿಗೆ ಗಡುವು ನೀಡಿ, ಜೈ ಶಿವಾಜಿ ಸಂಘಟನೆಯ (Jai Shivaji Organisation) ಪರಶುರಾಮ್ ಶೇಗೂರಕರ್ (Parashuram Shegoorkar) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಸ್ವತಃ ತಾವೇ ಪ್ರತಿಭಟನೆ ಮೂಲಕ ವಿವಾದಿತ ಸರ್ಕಲ್‌ನಲ್ಲಿ ಹಾಕಿರುವ ಟಿಪ್ಪು ಭಾವಚಿತ್ರ ಕಿತ್ತೆಸೆಯುವುದಾಗಿ ಹೇಳಿಕೆ ನೀಡಿದ್ದರು.
ಪರಶುರಾಮ್ ಶೇಗೂರಕರ್ ಈ ಹೇಳಿಕೆಯಿಂದ ಕೆರಳಿ ಕೆಂಡವಾಗಿದ್ದ ಟಿಪ್ಪು ಸಂಘಟನೆ ಅಬ್ದುಲ್ ಕರೀಂ ನೇತೃತ್ವದ ತಂಡ ಪ್ರಾಣ ಹೋದರೂ ತೆರವಿಗೆ ಅವಕಾಶ ಕೊಡಲ್ಲ ಎಂದು ಪ್ರತಿ ಸವಾಲು ಹಾಕಿದ್ದರು. ಇಬ್ಬರ ಹೇಳಿಕೆಗಳಿಂದ ಜನರ ನೆಮ್ಮದಿ ಹಾಳಾಗಿತ್ತು. ಭಾನುವಾರವೇ ಅಲರ್ಟ್ ಆಗಿದ್ದ ಯಾದಗಿರಿ ಪೊಲೀಸರು ಇಬ್ಬರ ಮೇಲೆ ಕೋಮು ಪ್ರಚೋದನೆ, ಸಾಮರಸ್ಯ ಹಾಳು ಮಾಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಸ್ಥಳದಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿತ್ತು. ಆದರೆ ಪೊಲೀಸರ ಎಚ್ಚರಿಕೆಯ ನಡುವೆಯೂ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್ ಹಾಗೂ ಶಂಕರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.
ನಗರದ ಹತ್ತಿಕುಣಿ ಕ್ರಾಸ್ ಬಳಿ ಕಳೆದ 2 ದಿನಗಳಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಸ್ವಲ್ಪ ಯಾಮಾರಿದರೂ 2 ಸಮುದಾಯಗಳ ನಡುವಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತಿತ್ತು. ಹೀಗಾಗಿಯೇ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಂತೆ 144 ಸೆಕ್ಷನ್ ಜಾರಿಗೊಳಿಸಿ, ಆದೇಶ ನೀಡಿದ್ದರು. ಪೊಲೀಸರ ಎಚ್ಚರಿಕೆಯ ನಂತರ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ಭಾನುವಾರ ಮುಂಬೈಗೆ ಹೋಗಿದ್ದಾರೆ. ಆದರೆ ಜೈ ಶಿವಾಜಿ ಸಂಘಟನೆಯ ಪರಶುರಾಮ್ ಶೇಗೂರಕರ್ ಮಾತ್ರ ಪೊಲೀಸರ ನೋಟಿಸ್ ಗೂ ಕ್ಯಾರೇ ಎನ್ನದೇ, ಗುಂಪು ಕಟ್ಟಿಕೊಂಡು ಪ್ರತಿಭಟನೆಗೆ ಮುಂದಾಗಿ, ಬಂಧಿತರಾಗಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ – ಬಿಜೆಪಿ ನಾಯಕನಿಗೆ ಸುಪ್ರೀಂ ಚಾಟಿ
ಭಾನುವಾರವೇ ಯಾದಗಿರಿಯ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದ ಕಾರಣ ಪರಶುರಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪರಶುರಾಮ್ ಶೇಗೂರಕರ್ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಂಧನದ ವೇಳೆ ಯಾದಗಿರಿ ಸಿಪಿಐ ಸುನೀಲ್ ಮೂಲಿಮನಿ ಅವರ ಹಣೆ ಹಾಗೂ ಕೈಗೆ ಗಾಯಗಳಾಗಿದ್ದು, ನೂಕಾಟ, ತಳ್ಳಾಟದ ನಡುವೆಯೇ ಪೊಲೀಸರು ಪರಶುರಾಮ್ ಶೇಗೂರಕರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.