Tag: Section 133

  • ಕಲಬುರಗಿಯ ಬಾರ್, ವೈನ್ ಶಾಪ್ ಬಂದ್- ಸೆಕ್ಷನ್ 133 ಜಾರಿ

    ಕಲಬುರಗಿಯ ಬಾರ್, ವೈನ್ ಶಾಪ್ ಬಂದ್- ಸೆಕ್ಷನ್ 133 ಜಾರಿ

    ಕಲಬುರಗಿ: ನಗರದ ಮತ್ತೋರ್ವ ವ್ಯಕ್ತಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಕಲಬುರಗಿಯಲ್ಲಿ ಸೆಕ್ಷನ್ 133 (ಜಿಲ್ಲಾದ್ಯಂತ ಜಾತ್ರೆ, ಸಂತೆ, ಊರುಸ್ ನಿಷೇಧ)ಜಾರಿ ಮಾಡಿದ್ದಾರೆ.

    ಇಂದಿನಿಂದ ಎಂಟು ದಿನಗಳವರೆಗೆ ನಗರದ ಬಾರ್,ವೈನ್ ಶಾಪ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಹಾಗಾಗಿ ದಿನನಿತ್ಯದ ಅಗತ್ಯ ವಸ್ತುಗಳು ಬಿಟ್ಟು ವ್ಯಾಪಾರ ವಹಿವಾಟಿಗೆ ಬ್ರೇಕ್ ಬೀಳಲಿದೆ. ಅತಿ ಹೆಚ್ಚು ಜನರು ಸೇರುವ ಮಾಲ್, ಪಾಕ್9, ಚಿತ್ರಮಂದಿರಗಳ ಸೇವೆ ಸಹ ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಮತ್ತೋರ್ವ ವ್ಯಕ್ತಿಗೆ ಕೊರೊನಾ ದೃಢಪಟ್ಟಿರುವವ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಚಿತಪಡಿಸಿದ್ದರು.

    ಚಿಕ್ಕಬಳ್ಳಾಪುರದಲ್ಲಿ ಇಬ್ಬರಿಗೆ, ಧಾರವಾಡದಲ್ಲಿ ಓರ್ವರಿಗೆ, ಮಡಿಕೆರಿಯಲ್ಲಿ ಓರ್ವರಿಗೆ ಹಾಗೂ ನೆಲಮಂಗಲದಲ್ಲಿ ಓರ್ವ ಕೊರೊನಾ ಶಂಕಿರನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ, ಚಿಕಿತ್ಸೆ ಕೊಡಲಾಗುತ್ತಿದೆ. ವಾರಗಳ ಕಾಲ ಕೊರೊನಾ ಬಂದ್‍ನಿಂದಾಗಿ 2ನೇ ದಿನವೇ ರಾಜ್ಯದಲ್ಲಿ ಭರ್ತಿ ಅಂದಾಜು ಏಳು ಸಾವಿರ ಕೋಟಿ ನಷ್ಟವಾಗಿದೆ. ಸರ್ಕಾರದ ಆದೇಶವನ್ನು ಬೆಂಗಳೂರು ಜನ, ಉದ್ಯಮಿಗಳು ಪಾಲಿಸಿದ್ದಾರೆ. ಆದರೆ, ಬಾರ್ ಮಾಲೀಕರು ಸಡ್ಡು ಹೊಡೆದಿದ್ದಾರೆ.