Tag: Secret

  • ಮಂಗಳವಾರ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಡ್ತಾರೆ ಪ್ರಭಾಸ್

    ಮಂಗಳವಾರ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಡ್ತಾರೆ ಪ್ರಭಾಸ್

    ಹೈದರಾಬಾದ್: ಅಕ್ಟೋಬರ್ 23ರಂದು ವಿಶೇಷವಾದ ಒಂದು ವಿಷಯವನ್ನು ಶೇರ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟಾಲಿವುಡ್ ನಟ ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಪ್ರೀತಿಯ ಅಭಿಮಾನಿಗಳೇ, ಈ ತಿಂಗಳ 23ರಂದು ನಿಮ್ಮ ಜೊತೆ ವಿಶೇಷವಾದ ಒಂದು ವಿಷಯವನ್ನು ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಅಕ್ಟೋಬರ್ 23 ಪ್ರಭಾಸ್ ಅವರ ಹುಟ್ಟುಹಬ್ಬ ದಿನವಾಗಿದ್ದು, ಕಳೆದ ವರ್ಷ ಅವರು ತಮ್ಮ ಹುಟ್ಟುಹಬ್ಬದಂದು ‘ಸಾಹೋ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಈ ವರ್ಷವೂ ಕೂಡ ಪ್ರಭಾಸ್ ತಮ್ಮ ಹುಟ್ಟುಹಬ್ಬದಂದು ಒಂದು ವಿಷಯವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ.

    ಪ್ರಭಾಸ್ 2016ರಲ್ಲೂ ತಮ್ಮ ಹುಟ್ಟುಹಬ್ಬದ ದಿನ ‘ಬಾಹುಬಲಿ- 2’ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದರು. ಈ ಚಿತ್ರ ವಿಶ್ವಾದ್ಯಂತ ಯಶಸ್ವಿಯಾಗಿತ್ತು. ಈ ಚಿತ್ರದಿಂದ ಪ್ರಭಾಸ್ ಇನ್ನಷ್ಟು ಜನಪ್ರಿಯವಾದರು, ಅಲ್ಲದೇ ಅವರಿಗೆ ಅಭಿಮಾನಿಗಳು ಹೆಚ್ಚಾದ್ದರು. ಈಗ ಪ್ರಭಾಸ್ ಅಭಿಮಾನಿಗಳು ಅ. 23ಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

    ಸದ್ಯ ಪ್ರಭಾಸ್ ಅವರ ಮುಂದಿನ ಸಾಹೋ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಾಹೋ ಆ್ಯಕ್ಷನ್ ಹಾಗೂ ಥ್ರಿಲ್ಲರ್ ಚಿತ್ರ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾದಕ ಬೆಡಗಿ ಸನ್ನಿ ಲಿಯೋನ್ ಬ್ಯೂಟಿ ಸೀಕ್ರೆಟ್ ರಿವೀಲ್- ನೀವು ಅನುಸರಿಸಬಹುದು

    ಮಾದಕ ಬೆಡಗಿ ಸನ್ನಿ ಲಿಯೋನ್ ಬ್ಯೂಟಿ ಸೀಕ್ರೆಟ್ ರಿವೀಲ್- ನೀವು ಅನುಸರಿಸಬಹುದು

    ಮುಂಬೈ: ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಕೇವಲ ಹಾಟ್ ಫಿಗರ್ ಅಲ್ಲದೇ ತನ್ನ ಹೊಳೆಯುವ ತ್ವಚೆ ಮೂಲಕವು ಎಲ್ಲರಿಗೂ ಇಷ್ಟವಾಗುತ್ತಾರೆ. ಹೀಗಾಗಿ ಬಹಳಷ್ಟು ಮಂದಿ ಸನ್ನಿಯಲ್ಲಿ ನಿಮ್ಮ ಸೌಂದರ್ಯ ಮತ್ತು ಆರೋಗ್ಯದ ಗುಟ್ಟು ಏನು ಎಂದು ಕೇಳುತ್ತಿದ್ದರು. ಈ ಪ್ರಶ್ನೆಗೆ ಉತ್ತರ ಎಂಬಂತೆ ಸನ್ನಿ ತನ್ನ ಬ್ಯೂಟಿ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

    ಸ್ಕೀನ್ ಹೈಡ್ರೇಟ್ ಮತ್ತು ಮಾಯಿಶ್ಚರೈಸ್(moisturizers):
    ತಮ್ಮ ಸ್ಕೀನ್ ಹೈಡ್ರೇಟ್ ಮಾಡಲು ಸನ್ನಿ ದಿನಕ್ಕೆ ಕಡಿಮೆ ಎಂದರೆ 8 ಗ್ಲಾಸ್ ನೀರು ಕುಡಿಯುತ್ತಾರೆ. ನಾವು ಏನೇ ತಿಂದರೂ ಅದು ನಮ್ಮ ತ್ವಚೆ ಮೇಲೆ ಪರಿಣಾಮ ಬೀರಿ ಅದು ನಮ್ಮ ಸ್ಕೀನ್ ಮೇಲೆ ಕಾಣುವ ರೀತಿ ಮಾಡುತ್ತದೆ. ಈ ಕಾರಣಕ್ಕಾಗಿ ನಾನು ನೀರು ಹೆಚ್ಚು ಕುಡಿಯುತ್ತೇನೆ ಎಂದು ಸನ್ನಿ ಹೇಳಿದ್ದಾರೆ. ನೀರನ್ನು ಹೊರತು ಪಡಿಸಿ ಹಣ್ಣು ಹಾಗೂ ಸಲಾಡ್ ಸೇವಿಸುತ್ತಾರೆ.

    ಪ್ರತಿನಿತ್ಯ ಯೋಗ:
    ಸುಂದರವಾಗಿ ಕಾಣಲು ಪ್ರತಿನಿತ್ಯ ಯೋಗ ಮಾಡುತ್ತಾರೆ. ಎಲ್ಲಿಯೇ ಶೂಟಿಂಗ್ ಇತ್ಯಾದಿ ಕೆಲಸಕ್ಕೆ ಹೊರಗಡೆ ಹೋದರೂ ಯೋಗ ಮಾಡೋದನ್ನು ಮಾತ್ರ ತಪ್ಪಿಸಲ್ಲ. ಗ್ಲೋಯಿಂಗ್ ಸ್ಕೀನ್ ಗಾಗಿ ಯೋಗ ಅವಶ್ಯಕ ಎಂದು ಸನ್ನಿ ಲಿಯೋನ್ ನಂಬುತ್ತಾರೆ.

    ಉತ್ತಮ ಕ್ವಾಲಿಟಿಯ ಪ್ರಾಡಕ್ಟ್:
    ತ್ವಚೆಯನ್ನು ಕಾಪಾಡಿಕೊಳ್ಳಲು ಸನ್ನಿ ಉತ್ತಮ ಕ್ವಾಲಿಟಿಯ ಪ್ರಾಡಕ್ಟ್ ಉಪಯೋಗಿಸುತ್ತಾರೆ. ಸ್ಕೀನ್‍ಗಾಗಿ ಒಳ್ಳೆಯ ಬ್ರಾಂಡ್ ಇರುವ ಸ್ಕೀನ್ ಪ್ರಾಡಕ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ಮೇಕಪ್ ನಿಂದಾಗಿ ತ್ವಚೆ ಮೇಲೆ ಯಾವುದೇ ಪರಿಣಾಮ ಬೀರದೇ ಇರಲು ಗುಣಮಟ್ಟದ ಉತ್ಪನ್ನವನ್ನು ಬಳಸುತ್ತಾರೆ.

    ಮಲಗುವಾಗ ಮೇಕಪ್ ಇರಲ್ಲ:
    ಸನ್ನಿ ಮೇಕಪ್ ತೆಗೆದೇ ಮಲಗುತ್ತಾರೆ. ಮೇಕಪ್ ತೆಗೆಯುವುದಕ್ಕಾಗಿ ಸನ್ನಿ ಪೋರ್ ಕ್ಲೇನ್ಸರ್ ಉಪಯೋಗಿಸುತ್ತಾರೆ. ಮೇಕಪ್ ತಮ್ಮ ನಯವಾದ ತ್ವಚೆಯಲ್ಲಿ ಇರಬಾರದು ಎಂದು ಕ್ಲೇನ್ಸರ್ ಉಪಯೋಗಿಸುತ್ತಾರೆ. ಅಲ್ಲದೇ ಏಜಿಂಗ್ ಎಫೆಕ್ಟ್ ಕಾಣದಿರಲು ಗುಣಮಟ್ಟದ ಬ್ಯೂಟಿ ಪ್ರಾಡಕ್ಟ್ ಉಪಯೋಗಿಸುತ್ತಾರೆ.

    ಈ ಎಲ್ಲಾ ಟಿಪ್ಸ್ ಅನುಸರಿಸಿದರೆ ನೀವು ಕೂಡ ಸನ್ನಿ ಲಿಯೋನ್ ನಂತಹ ಸುಂದರ ಹಾಗೂ ಹೊಳೆಯುವ ತ್ವಚೆ ಪಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಯಜಮಾನ’ ಸೆಟ್‍ಗೆ ವಿಜಯಲಕ್ಷ್ಮಿ ಭೇಟಿ ನೀಡಿದ ಸೀಕ್ರೆಟ್ ರಿವೀಲ್

    ‘ಯಜಮಾನ’ ಸೆಟ್‍ಗೆ ವಿಜಯಲಕ್ಷ್ಮಿ ಭೇಟಿ ನೀಡಿದ ಸೀಕ್ರೆಟ್ ರಿವೀಲ್

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ `ಯಜಮಾನ’ ಚಿತ್ರದ ಶೂಟಿಂಗ್ ಸೆಟ್‍ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆದರೆ ಈಗ ಆ ಭೇಟಿ ಹಿಂದಿನ ರಹಸ್ಯ ಬಹಿರಂಗವಾಗಿದೆ.

    ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಸದ್ಯ ಈ ಚಿತ್ರದಿಂದ ಈಗ ಹೊಸದಂದು ಸಿಕ್ರೇಟ್ ರಿವೀಲ್ ಆಗಿದ್ದು, ಈ ಚಿತ್ರದಲ್ಲಿ ದರ್ಶನ್ ಅವರ ಪುತ್ರ ವಿನೀಶ್ ಕೂಡ ನಟಿಸುತ್ತಿದ್ದಾನೆ.

    ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ‘ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ವಿಜಯಲಕ್ಷ್ಮಿ ಹಲವು ಬಾರಿ ತನ್ನ ಪತಿ ದರ್ಶನ್ ಅವರ ನಟನೆಯನ್ನು ನೋಡಲು ಶೂಟಿಂಗ್ ಸೆಟ್‍ಗೆ ಹೋಗುತ್ತಿದ್ದರು. ಆದರೆ ಈಗ ತಮ್ಮ ಮಗ ವಿನೀಶ್ ನಟನೆಯನ್ನು ನೋಡಲು ವಿಜಯಲಕ್ಷ್ಮಿ ಶನಿವಾರ ಯಜಮಾನ ಚಿತ್ರದ ಸೆಟ್‍ಗೆ ಭೇಟಿ ನೀಡಿದ್ದರು.

    ಸತತ ಎರಡ್ಮೂರು ತಿಂಗಳಿನಿಂದ ಯಜಮಾನ ಸಿನಿಮಾ ಚಿತ್ರೀಕರಣದಲ್ಲಿ ಭಾಗಹಿಸುತ್ತಿರುವ ದರ್ಶನ್ ನಿರಂತರ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇದೆ. ದರ್ಶನ್ ರೊಂದಿಗೆ ರಶ್ಮಿಕಾ ಮಂದಣ್ಣ ಜೋಡಿಯನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರುಣಾನಿಧಿ ಅವರ ಕಪ್ಪು ಕನ್ನಡಕ, ಹಳದಿ ಶಾಲಿನ ರಹಸ್ಯ

    ಕರುಣಾನಿಧಿ ಅವರ ಕಪ್ಪು ಕನ್ನಡಕ, ಹಳದಿ ಶಾಲಿನ ರಹಸ್ಯ

    ಚೆನ್ನೈ: ದೇಶದ ಯಾವ ಮೂಲೆಯ ಯಾವ ವ್ಯಕ್ತಿಯ ಬಳಿ ಬಗ್ಗೆ ವಿಚಾರಿಸಿದರೆ ಅವರು ಕರುಣಾನಿಧಿಯವರನ್ನ ಗುರುತಿಸ್ತಾ ಇದ್ದದ್ದು ಗಾಢ ಕಪ್ಪು ಕನ್ನಡಕ ಹಾಗೂ ಹಳದಿ ಶಾಲು. ಒಂದು ಲೆಕ್ಕಾಚಾರದಲ್ಲಿ ಕನ್ನಡಕ ಮತ್ತು ಹಳದಿ ಶಾಲೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು.

    ಬಿಳಿ ಪಂಚೆ, ವೈಟ್ ಶರ್ಟ್, ಬ್ಲ್ಯಾಕ್ ಕನ್ನಡಕ, ಎಡಗೈಯಲ್ಲಿ ಬ್ಲ್ಯಾಕ್ ವಾಚ್ ಹಾಗೂ ಹಳದಿ ಬಣ್ಣದ ಶಾಲು ಹಾಕಿ ಗತ್ತಿನ ಹೆಜ್ಜೆ ಇಡುತ್ತ ವೇದಿಕೆಗೆ ಎಂಟ್ರಿ ಕೊಟ್ಟರು ಎಂದರೆ ಅವರು ಬೇರೆ ಯಾರೂ ಅಲ್ಲ. ಖಡಕ್ ಮಾತು, ನೇರ ನುಡಿ ದಿಟ್ಟ ಹೆಜ್ಜೆಗಳನ್ನ ಇಡುತ್ತ ಕಳೆದ ಅರ್ಧಶತಕಗಳಿಗೂ ಹೆಚ್ಚು ಕಾಲ ತಮಿಳು ಜನರ ಮನಸ್ಸನ್ನ ಗೆದ್ದು ಹೆಸರಾದ ಕಲೈನರ್.

    ತಮಿಳುನಾಡಿನ ಯಾವ ಮಹಾನಾಯಕರನ್ನು ಅಥವಾ ರಾಜಕಾರಣಿಗಳನ್ನು ನೋಡಿದ್ದರೂ ಅವರದ್ದೇ ಆದ ಒಂದು ಟ್ರೇಡ್ ಮಾರ್ಕ್ ಇರುತ್ತೆ. ತಮಿಳಿನ ಮಹಾನಟ ಅನ್ನಿಸಿಕೊಂಡಿದ್ದ ಎಂಜಿಆರ್ ಕನ್ನಡಕ ಟೋಪಿ ಇಲ್ಲದೆ ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ. ಜಯಲಲಿತಾ ಯಾವಾಗಲೂ ಹಸಿರು ಸೀರೆಯುಡುತ್ತಾ ಇದ್ರು, ಹೀಗೆ ಕರುಣಾನಿಧಿ ಕೂಡ ಕಪ್ಪು ಕನ್ನಡಕ ಮತ್ತು ಹೆಗಲ ಮೇಲೆ ಹಳದಿ ಶಾಲಿಲ್ಲದೆ ಹೊರಗಡೆ ಕಾಲಿಡ್ತಾನೇ ಇರಲಿಲ್ಲ. ಕರುಣಾನಿಧಿಯವರ ಬಹುತೇಕ ಫೋಟೋಗಳಲ್ಲಿ ಅವರ ಹೆಗಲ ಮೇಲೊಂದು ಹಳದಿ ಶಾಲು ಇದ್ದೇ ಇರುತ್ತಿತ್ತು.

    1940ರ ದಶಕದಲ್ಲಿ ಜಾತಿ ತಾರತಮ್ಯದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದ, ದ್ರಾವಿಡರ್ ಕಳಗಮ್ ಹೋರಾಟವನ್ನು ಹುಟ್ಟುಹಾಕಿದ್ದ, ಪೆರಿಯಾರ್ ಇವಿ ರಾಮಸಾಮಿ ವಿಭಿನ್ನ ರೀತಿಯ ಚಳುವಳಿಯೊಂದನ್ನು ಹುಟ್ಟುಹಾಕಿದ್ದರು. ಹಳದಿ ಬಣ್ಣವನ್ನು ಸಮಾನತೆಯ ಪ್ರತೀಕವೆಂದು ಘೋಷಿಸಿದ್ದರು. ಪೆರಿಯಾರ್ ತತ್ವ ಆದರ್ಶಗಳನ್ನು ಬಲವಾಗಿ ನಂಬಿದ್ದ ಮತ್ತು ಅವರ ಹಾದಿಯಲ್ಲೇ ಸಾಗಿದ ಕರುಣಾನಿಧಿ ಅದೇ ಬಣ್ಣದ ಶಾಲನ್ನು ಧರಿಸೋದಕ್ಕೆ ತೀರ್ಮಾನಿಸಿದ್ದರು.

    ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಕರುಣಾನಿಧಿ ಅವರಿಗೆ ಇಷ್ಟವಾದ ಬಣ್ಣ ಕಪ್ಪು. ಆದರೆ ರಾಜಕೀಯ ಬದುಕಿನಲ್ಲಿದ್ದ ಅವರು ಧರಿಸುತ್ತಿದ್ದದ್ದು, ಬಿಳಿ ಬಣ್ಣದ ಶರ್ಟ್ ಹಾಗೂ ಪಂಚೆ. ಇವರು ಕಪ್ಪು ಬಣ್ಣವನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರಿಂದಲೇ ಇವರು ಕಟ್ಟುವ ವಾಚಿನ ಡೇಲ್ ಕಪ್ಪು ಬಣ್ಣದಾಗಿರುತ್ತಿತ್ತು. 1967ರಲ್ಲಿ ಅಪಘಾತವೊಂದರಲ್ಲಿ ಕರುಣಾನಿಧಿಯವರ ಎಡಗಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು. 4 ವರ್ಷಗಳವರೆಗೆ ಆ ನೋವನ್ನೂ ನುಂಗಿಕೊಂಡ ಕರುಣಾನಿಧಿ ಕೊನೆಗೆ 1971 ರಲ್ಲಿ ಅಮೆರಿಕಾದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ಧರಿಸಿದ ಕನ್ನಡಕವೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಕನ್ನಡಕ ಇಲ್ಲದೆ ಕರುಣಾನಿಧಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಕೆಲವರು ತಮಿಳುನಾಡಿನ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಹೀಗೆ ಗಾಢ ಕಪ್ಪುಬಣ್ಣದ ಕನ್ನಡಕ ಧರಿಸುವ ಶೋಕಿ ಇದೆ ಅಂತ ವ್ಯಂಗ್ಯವಾಡಿದ್ದರು.

    ಹೀಗೆ ಕರುಣಾನಿಧಿಯ ರಾಜಕೀಯ ಬದುಕು ವರ್ಣರಂಜಿತ ಅನ್ನಿಸಿಕೊಂಡಿತ್ತು. ಆದ್ರೀಗ ಕರುಣಾನಿಧಿ ಅನ್ನೋ ರಾಜಕೀಯ ಧುರೀಣ ಇನ್ನೇನಿದ್ರೂ ಪ್ರತಿಮೆಯಷ್ಟೇ.