Tag: seat

  • ಲೇಡಿಸ್ ಸೀಟ್‍ನಲ್ಲಿ ಕುಳಿತಿದ್ದ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಮಹಿಳೆ

    ಲೇಡಿಸ್ ಸೀಟ್‍ನಲ್ಲಿ ಕುಳಿತಿದ್ದ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಮಹಿಳೆ

    ಮಂಗಳೂರು: ಮಹಿಳೆಯೊಬ್ಬರು ಲೇಡಿಸ್ ಸೀಟ್‍ನಲ್ಲಿ ಕುತಿರೋದಕ್ಕೆ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ತುಂಬಿದ ಸರ್ಕಾರಿ ಬಸ್ ನಲ್ಲಿ ಈ ಹೈಡ್ರಾಮ ನಡೆದಿದ್ದು, ಯುವಕನೋಬ್ಬ ಸೀಟ್ ಇಲ್ಲದೆ ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಕೂತಿದ್ದ. ಬಸ್‍ಗೆ ಹತ್ತಿದ ಮಹಿಳೆಯರು ನಿಂತುಕೊಂಡೇ ಇದ್ದರೂ ಯುವಕ ಮಾತ್ರ ಸೀಟ್ ಬಿಟ್ಟು ಎದ್ದೇಳಿಲ್ಲ.

    ಇದನ್ನು ಕಂಡ ಮಹಿಳೆಯೊಬ್ಬರು ಯುವಕನ ವಿರುದ್ಧ ಆರ್ಭಟಿಸಿ ಸೀಟು ಬಿಟ್ಟು ಕೊಡುವಂತೆ ಏಕಾಏಕಿಯಾಗಿ ರೌದ್ರಾವತರ ತಾಳಿ ಕೂಗಾಡಿದ್ದಾರೆ. ಆದರೆ ನಾನೇನು ಕಡಿಮೆ ಎನ್ನುವಂತೆ ಮಹಿಳೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇಬ್ಬರ ನಡುವೆ ಬಸ್ ಒಳಗಡೆಯೇ ಕಚ್ಚಾಟ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ಇಬ್ಬರ ರಂಪಾಟವನ್ನು ನೋಡಿದ್ದಾರೆ.

    ಮಹಿಳೆ ಕೊನೆಗೆ ಯುವಕನ ಕುತ್ತಿಗೆಪಟ್ಟಿ ಹಿಡಿದು ಸೀಟಿನಿಂದ ಎಬ್ಬಿಸಿದ್ದಾರೆ. ಮಹಿಳೆಯ ವರ್ತನೆ ಕಂಡು ದಂಗಾದ ಯುವಕ ಕೊನೆಗೆ ಗತಿಯಿಲ್ಲದೆ ಸೀಟು ಬಿಟ್ಟು ಎದ್ದು ಹೋಗಿದ್ದಾನೆ. ಆದರೆ ಈ ಜಗಳವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ಆ ವಿಡಿಯೋ ಸಖತ್ ವೈರಲ್ ಆಗಿದೆ.

    ವಿಡಿಯೋ ನೋಡಿ : 

    https://www.youtube.com/watch?v=7-dobyD0k0Q

  • ಮೋದಿ ಬಂದ್ರು ಸೀಟ್ ಸಿಗಲ್ಲ: ಸೀಟಿನಲ್ಲಿ ಕುಳಿತ ವಿದ್ಯಾರ್ಥಿನಿಗೆ KSRTC ಕಂಡಕ್ಟರ್, ಟಿಸಿ ಅವಾಜ್- ವಿಡಿಯೋ ನೋಡಿ

    ಮೋದಿ ಬಂದ್ರು ಸೀಟ್ ಸಿಗಲ್ಲ: ಸೀಟಿನಲ್ಲಿ ಕುಳಿತ ವಿದ್ಯಾರ್ಥಿನಿಗೆ KSRTC ಕಂಡಕ್ಟರ್, ಟಿಸಿ ಅವಾಜ್- ವಿಡಿಯೋ ನೋಡಿ

    ಮಂಡ್ಯ: ಕೆಎಸ್‍ಆರ್‍ಟಿಸಿ ಬಸ್ಸಿನ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ವಿದ್ಯಾರ್ಥಿನಿಗೆ ಬಸ್ಸಿನ ನಿರ್ವಾಹಕಿ ಮತ್ತು ಟಿಸಿ ಅವಾಜ್ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಾಗ್ವಾದ ಮಾಡಿರುವ ವಿಡಿಯೋವನ್ನು ಬಸ್ಸಿನಲ್ಲಿದ್ದ ಯುವಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಕಾಲೇಜು ವಿದ್ಯಾರ್ಥಿನಿ ತರಗತಿ ಮುಗಿಸಿಕೊಂಡು ಮನೆಗೆ ಹೋಗಲು ಮೇಲುಕೋಟೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಕೆಲಹೊತ್ತಿನಲ್ಲಿ ಮೇಲುಕೋಟೆಯಿಂದ ಮಂಡ್ಯಕ್ಕೆ ಹೋಗುವ ಬಸ್ ಬಂದಿದ್ದು, ಅದರಲ್ಲಿ ಖಾಲಿ ಇದ್ದ ಸೀಟಿನಲ್ಲಿ ವಿದ್ಯಾರ್ಥಿನಿ ಕುಳಿತುಕೊಂಡಿದ್ದಾಳೆ.

    ಈ ವೇಳೆ ಬಂದ ನಿರ್ವಾಹಕಿ ಟಿಕೆಟ್ ಪಡೆದವರಿಗೆ ಸೀಟು ಬಿಡಲು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿದ್ಯಾರ್ಥಿನಿ ವಿರೋಧಿಸಿದ್ದಾರೆ. ನಾವು ಹಣ ಕೊಟ್ಟು ಪಾಸ್ ಮಾಡಿಸಿಕೊಂಡಿದ್ದೇವೆ. ನಮಗೂ ಸೀಟಿನಲ್ಲಿ ಕುಳಿತುಕೊಳ್ಳುವ ಹಕ್ಕಿದೆ ಅಂತಾ ವಾದ ಮಾಡಿದ್ದಾಳೆ.

    ಗಲಾಟೆ ಕೇಳಿ ಬಸ್ಸಿನ ಬಳಿ ಬಂದ ನಿಲ್ದಾಣದ ಟಿಸಿ ಸರ್ಪಸೇನಾ ಕೂಡ ವಿದ್ಯಾರ್ಥಿನಿಗೆ ಅವಾಜ್ ಹಾಕಿದ್ದಾರೆ. ಯಾರಿಗೆ ಬೇಕಾದ್ರೂ ಹೇಳು, ಮೋದಿ ಬಂದ್ರು ಅಷ್ಟೇ ಅಂತಾ ಉಡಾಫೆ ಮಾತುಗಳನ್ನ ಮಾತನಾಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಕೆಳಗಿಳಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಎಲ್ಲ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/1hGt5_Ns1ZQ