Tag: seat belt

  • ನ.1ರಿಂದ ಕಾರಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ

    ನ.1ರಿಂದ ಕಾರಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ

    ಮುಂಬೈ: ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಾಗರಿಕ ಅಧಿಕಾರಿಗಳು ರಸ್ತೆ ಸುರಕ್ಷತೆ ಕ್ರಮಗಳು ಮತ್ತು ನಿಯಮಗಳನ್ನು ಹೆಚ್ಚಿಸುತ್ತಿದ್ದಾರೆ.

    ಈ ನಿಟ್ಟಿನಲ್ಲಿ ಎಲ್ಲಾ ಮುಂಬೈ (Mumbai) ಪೊಲೀಸರು, ಚಾಲಕರು ಮತ್ತು ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದಾರೆ. 2022ರ ನವೆಂಬರ್ 1ರಿಂದ ಹಿಂಭಾಗ ಕುಳಿತುಕೊಳ್ಳುವವರು ಸಹ ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ. ಇದನ್ನೂ ಓದಿ: ಪತ್ನಿಯನ್ನು ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ನೆರೆಮನೆಯವನಿಂದ ಪತಿ ಹತ್ಯೆ

    ನ.1 ರಿಂದ ಮುಂಬೈನಲ್ಲಿ ಜಾರಿಗೆ ಬರಲಿರುವ ಸೀಟ್ ಬೆಲ್ಟ್ ನಿಯಮಗಳು
    * ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
    * ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸಬೇಕು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ
    * ಸುರಕ್ಷತಾ ಬೆಲ್ಟ್ ಸೌಲಭ್ಯವಿಲ್ಲದ ವಾಹನಗಳಲ್ಲಿ ಸೀಟ್ ಬೆಲ್ಟ್ ಸ್ಥಾಪಿಸಲು 2022ರ ನವೆಂಬರ್ 1ರವರೆಗೆ ಸಮಯ ನೀಡಲಾಗುತ್ತದೆ.
    * 2022ರ ನವೆಂಬರ್ 1ರಿಂದ ಮುಂಬೈನಲ್ಲಿ ಪ್ರಯಾಣಿಸುವಾಗ ಎಲ್ಲಾ ಚಾಲಕರು ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು. ಇದನ್ನೂ ಓದಿ: ಗುಜರಾತ್‍ನ ತೂಗು ಸೇತುವೆ ಕುಸಿತ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

    ಒಟ್ಟಾರೆ ಕಾರಿನಲ್ಲಿ ಪ್ರಯಾಣಿಸುವ ಚಾಲಕ ಮತ್ತು ಪ್ರಯಾಣಿಕರು ಮುಂಬೈನಲ್ಲಿ ಸೀಟ್ ಬೆಲ್ಟ್ ಅನ್ನು ನವೆಂಬರ್ 1ರಿಂದ ಧರಿಸಬೇಕು. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೇ ಇದ್ದರೆ ಅವರ ವಿರುದ್ಧ ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ, 2019 ರ ಸೆಕ್ಷನ್ 194 (ಬಿ) (1) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ

    ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ

    ಬೆಂಗಳೂರು: ವಾಹನ ಸವಾರರೇ ಇನ್ಮುಂದೆ ವಾಹನ ಚಲಾಯಿಸುವಾಗ ಎಚ್ಚರವಾಗಿರಿ. ಅದರಲ್ಲೂ ಕಾರು ಚಾಲಕರು ಇದನ್ನು ಗಮನಿಸಲೇಬೇಕು. ಇನ್ನು ಮುಂದೆ ಸೀಟ್ ಬೆಲ್ಟ್ (Seat Belt) ಧರಿಸದೇ ಹೋದಲ್ಲಿ 1,000 ರೂ. ದಂಡ (Fine) ಕಟ್ಟಬೇಕಾಗುತ್ತದೆ.

    ಹೌದು, ಕೇಂದ್ರ ಸರ್ಕಾರದ ಹೊಸ ಆದೇಶದ ಅನ್ವಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಎಸ್‌ಪಿ ಕಚೇರಿಗೆ ಈ ಆದೇಶ ಪ್ರತಿ ರವಾನೆಯಾಗಿದೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಏಷ್ಯಾದಿಂದಲೇ ಮೊದಲು, ಕೋಲಾರದ ಮಹಿಳೆ ನೇಮಕ

    ಸೀಟ್ ಬೆಲ್ಟ್ ಧರಿಸದೇ ಜನರು ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳ (Road Accident) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೊಸದಾಗಿ ದಂಡವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಸೀಟ್ ಬೆಲ್ಟ್ ಹಾಕದೇ ಕಾರನ್ನು ಚಲಾಯಿಸುತ್ತಿದ್ದವರಿಗೆ 500 ರೂ. ದಂಡ ಹಾಕಲಾಗುತ್ತಿತ್ತು. ಆದರೆ ಇದೀಗ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ನವದೆಹಲಿ: ಕಾರಿನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟ್ ಬೆಲ್ಟ್ ಧರಿಸದೇ ಇರುವ ಜನರಿಗೆ ದೆಹಲಿ ಟ್ರಾಫಿಕ್ ಪೊಲೀಸರು‌ (Delhi Traffic Police) 1,000 ರೂಪಾಯಿ ದಂಡವನ್ನು(Penalty) ವಿಧಿಸಿದ್ದಾರೆ.

    ಸೆಪ್ಟೆಂಬರ್ 4 ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ(Cyrus Mistry) ಅವರು ನಿಧನರಾದರು. ಈ ಘಟನೆಯ ಬಳಿಕ ಸೀಟ್ ಬೆಲ್ಟ್ (Seat Belts) ಧರಿಸದೇ ಹಿಂದಿನ ಸೀಟಿನಲ್ಲಿ ಕುಳಿತದ್ದರಿಂದ ಸೈರಸ್ ಮಿಸ್ತ್ರಿ ಅವರು ಸಾವನ್ನಪ್ಪಿದ್ದಾರೆ ಎಂದೂ ಕೂಡ ಹೇಳಲಾಗಿತ್ತು. ಇದರ ಬೆನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

    ದೆಹಲಿ ಟ್ರಾಫಿಕ್ ಪೊಲೀಸರು ಹಿಂದಿನ ಸೀಟ್‍ಗಳಲ್ಲಿ ಸೀಟ್ ಬೆಲ್ಟ್ ಧರಿಸುವ ನಿಯಮ ಕಡ್ಡಾಯ ಎಂದು ಜನರಿಗೆ ತಿಳಿಸಲು ಅಭಿಯಾನವನ್ನು ಪ್ರಾರಂಭಿಸಿದರು. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೇ ಹೋದರೆ 1,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯ ವಿರೂಪ – ಭಾರತ ವಿರೋಧಿ ಬರಹದ ಮೂಲಕ ದ್ವೇಷ ಬಿತ್ತನೆ

    ಬುಧವಾರ ಪೊಲೀಸರು ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್(Connaught Place) ಬಳಿಯ ಬರಾಖಂಬಾ ರಸ್ತೆಯಲ್ಲಿ(Barakhamba Road) ತಪಾಸಣೆ ನಡೆಸಿದರು. ಈ ವೇಳೆ ಅನೇಕ ಟ್ರಾಫಿಕ್ ಪೊಲೀಸರು ತಮ್ಮ ಕೈಯಲ್ಲಿ “ಹಿಂಬದಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂಬ ಫಲಕವನ್ನು ಹಿಡಿದುಕೊಂಡಿದ್ದರು. ನಗರದಾದ್ಯಂತ 10 ದಿನಗಳ ಕಾಲ ಟ್ರಾಫಿಕ್ ಪೊಲೀಸರು ಈ ಅಭಿಯಾನವನ್ನು ನಡೆಸಲಿದ್ದು, ಹಿಂಬದಿ ಸೀಟ್ ಬೆಲ್ಟ್ ಧರಿಸುವುದರ ಬಗೆಗಿನ ಮಹತ್ವವನ್ನು ಜನರಿಗೆ ತಿಳಿಸಲಿದ್ದಾರೆ.

    2019ರಿಂದಲೇ ಪ್ರಯಾಣಿಕರು ಹಿಂಬದಿ ಸೀಟ್ ಬೆಲ್ಟ್‌ಗಳನ್ನು ಧರಿಸುವುದು ಕಡ್ಡಾಯವಾಗಿದ್ದರೂ, ಸಾಕಷ್ಟು ಮಂದಿ ಈ ನಿಯಮವನ್ನು ಪಾಲಿಸುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

  • 500 ಪೀಕಿಸಲು ಹೋಗಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡ ಪೊಲೀಸರು

    500 ಪೀಕಿಸಲು ಹೋಗಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡ ಪೊಲೀಸರು

    ಉಡುಪಿ: ಸೀಟು ಬೆಲ್ಟ್ ಹಾಕಿದ್ದರೂ ಹಾಕಿಲ್ಲ ಎಂದು ಮಹಿಳೆಯಿಂದ 500 ರೂ. ಪೀಕಿಸಲು ಹೋಗಿ ಪೊಲೀಸರು ಪೀಕಲಾಟಕ್ಕೆ ಒಳಗಾದ ಘಟನೆ ಉಡುಪಿ ಜಿಲ್ಲೆಯ ಹೆಮ್ಮಾಡಿಯಲ್ಲಿ ನಡೆದಿದೆ.

    ಕುಂದಾಪುರದಲ್ಲಿ ಹೈವೇ ಪೆಟ್ರೋಲ್ ಪೊಲೀಸರು ಮಹಿಳೆಯ ಕಾರು ಬರುತ್ತಿದ್ದಂತೆ ದೂರದಲ್ಲೇ ನಿಲ್ಲಿಸುವಂತೆ ಸೂಚನೆ ನೀಡಿದರು. ಬಳಿಕ ಪೊಲೀಸರು ನೀವು ಸೀಟ್ ಬೆಲ್ಟ್ ಹಾಕಿಲ್ಲ 500 ರೂ. ಕೊಡಿ ಎಂದು ಹಣ ಪೀಕಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಈ ಹಿಂದೆ ಬಹಳಷ್ಟು ಬಾರಿ ಪೊಲೀಸರ ಹಗಲು ದರೋಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆ ಶಾಂತಿ ಫುಟಾರ್ಡೋ ಪೊಲೀಸರಿಗೆ ರೇಗಾಡಿದ ವಿಡಿಯೋವನ್ನು ತಾನೇ ಚಿತ್ರೀಕರಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ತಾನೇ ಶೇರ್ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸರು ಸ್ಪಷ್ಟನೆ ನೀಡಿಲ್ಲ.

  • ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ ಸಜೀವ ದಹನ

    ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ ಸಜೀವ ದಹನ

    ಬೀದರ್: ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲಿಯೇ ಮಹಿಳೆ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ನಡೆದಿದೆ.

    ಕಲ್ಯಾಣಿ (42) ಸಜೀವ ದಹನವಾದ ಮಹಿಳೆ. ಇಂದು ಬೆಳಗ್ಗಿನ ಜಾವ ಒಂದೇ ಕುಟುಂಬದ ನಾಲ್ವರು ಹುಂಡೈ ಕಾರಿನಲ್ಲಿ ಮಹಾರಾಷ್ಟ್ರ ಉದಗೀರ್ ನಿಂದ ಹೈದರಾಬಾದ್‍ಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾರಿನ ಹಿಂಬದಿಯ ಎಸಿ ಬಿಸಿಯಾಗಿ ಸ್ಫೋಟಗೊಂಡಿದೆ. ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮಹಿಳೆ ಸಜೀವ ದಹನವಾಗಿದ್ದಾರೆ.

    ಕಾರಿಗೆ ಬೆಂಕಿ ತಗುಲಿದ ಗಲಿಬಿಲಿಯಲ್ಲಿ ಸೀಟ್ ಬೆಲ್ಟ್ ತೆಗೆಯಲಾಗದೆ ಕಲ್ಯಾಣಿ ಸೀಟ್‍ನಲ್ಲಿಯೇ ಸಜೀವ ದಹನವಾಗಿರುವ ದೃಶ್ಯ ಎಲ್ಲರ ಕರಳು ಕಿತ್ತು ಬರುವಂತ್ತಿದೆ. ಈ ಘಟನೆಯಲ್ಲಿ ಪತಿ ಉದಯಕುಮಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮನ್ನಾಏಖೇಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀಟ್ ಬೆಲ್ಟ್ ಹಾಕದ ಪೊಲೀಸ್ರನ್ನೇ ಪ್ರಶ್ನಿಸಿದ ಯುವಕ

    ಸೀಟ್ ಬೆಲ್ಟ್ ಹಾಕದ ಪೊಲೀಸ್ರನ್ನೇ ಪ್ರಶ್ನಿಸಿದ ಯುವಕ

    ಹುಬ್ಬಳ್ಳಿ: ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವ ಪೊಲೀಸ್ ಸಿಬ್ಬಂದಿ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡ ಬೈಕ್ ಸವಾರನೊಬ್ಬ ಪೊಲೀಸರನ್ನೇ ತರಾಟೆಗೆ ತಗೆದುಕೊಂಡಿದ್ದಾನೆ.

    ಪೊಲೀಸ್ ಸಿಬ್ಬಂದಿ ಟೋಯಿಂಗ್ ಮೂಲಕ ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಬೈಕ್ ಸವಾರ ಟೋಯಿಂಗ್ ವಾಹನವನ್ನು ಹಿಂಬಾಲಿಸಿದ್ದಾನೆ.

    ಟೋಯಿಂಗ್ ವಾಹನವನ್ನು ಹಿಂಬಾಲಿಸಿ ಚಾಲಕ, “ಸರ್, ನೀವು ಸೀಟ್ ಬೆಲ್ಟ್ ಹಾಕಿಲ್ಲ. ನಿಮ್ಮ ಚಾಲಕ ಕೂಡ ಸೀಟ್ ಬೆಲ್ಟ್ ಧರಿಸಿಲ್ಲ. ನಮಗೊಂದು ನ್ಯಾಯ, ನಿಮಗೊಂದು ನ್ಯಾಯನಾ. ಸರ್ ನಿಮ್ಮ ಹೆಸರು ಏನು ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ.

    ಯುವಕ ಪ್ರಶ್ನೆ ಮಾಡುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ತಬ್ಬಿಬ್ಬಾಗಿ ಇದು ಗೂಡ್ಸ್ ವಾಹನ. ಇದಕ್ಕೆ ಸೀಟ್ ಬೆಲ್ಟ್ ಇರುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. ಪೊಲೀಸ್ ಹಾಗೂ ಬೈಕ್ ಸವಾರರನ ನಡುವೆ ನಡೆದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

  • ಕೇಂದ್ರ ಸಚಿವ ಜೋಷಿಯಿಂದಲೂ ಸಂಚಾರಿ ನಿಯಮ ಉಲ್ಲಂಘನೆ

    ಕೇಂದ್ರ ಸಚಿವ ಜೋಷಿಯಿಂದಲೂ ಸಂಚಾರಿ ನಿಯಮ ಉಲ್ಲಂಘನೆ

    ಧಾರವಾಡ: ಹೊಸ ಸಂಚಾರಿ ನಿಯಮ ಜಾರಿಯಾಗಿದ್ದರೂ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಮಾತ್ರ ಯಾವುದಕ್ಕೂ ಡೋಂಟ್ ಕೇರ್ ಎಂದು ತಾವಿರಲಿ, ತಮ್ಮ ಚಾಲಕನಿಗೂ ಸಹ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸುವುದಿಲ್ಲ.

    ಇಂದು ಧಾರವಾಡದ ಹೊಸ ಬಸ್ ನಿಲ್ದಾದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ಮಾಡಲು ಕಾರಿನಲ್ಲಿ ಬಂದಿದ್ದ ಸಚಿವರು ಬೆಲ್ಟ್ ಹಾಕಿರಲಿಲ್ಲ. ಸಚಿವರಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಹಾಕಿರಲಿಲ್ಲ.

    ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಕೂಡಲೇ ದಂಡವನ್ನು ಕಡಿಮೆ ಮಾಡಿ ಇಲ್ಲವೇ ರಸ್ತೆಗಳನ್ನು ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಕೇಂದ್ರ ಸಚಿವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಕಾರಿನಲ್ಲಿ ರಾಜಾರೋಷವಾಗಿ ಪ್ರಯಾಣ ಮಾಡುತ್ತಿದ್ದಾರೆ.

    ನಿಯಮವನ್ನು ಜಾರಿಗೆ ತಂದ ಕೇಂದ್ರ ಸಚಿವ ಸಂಪುಟದ ಸಚಿವರೇ ನಿಯಮವನ್ನು ಪಾಲಿಸುತ್ತಿಲ್ಲ ಇವರಿಗೆ ದಂಡ ಹಾಕುವವರು ಯಾರು? ನಿಯಮ ಅಂದಮೇಲೆ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ, ಸಾರ್ವಜನಿಕರಿಗೆ ವಿನಾಕಾರಣ ಕ್ಯಾತೆ ತೆಗೆಯೋ ಪೊಲೀಸರು ಸಚಿವರ ವರಸೆ ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಅವರದ್ದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರಿ ನಿಯಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ರಾಜಕಾರಣಿಗಳು ಸೀಟ್ ಬೆಲ್ಟ್ ಧರಿಸದೆ, ಕಾರಿನಲ್ಲಿ ಪ್ರಯಾಣಿಸುತ್ತಾರೆ ಎಂಬುದರ ಕುರಿತು ಬೆಳಕು ಚೆಲ್ಲಲಾಗಿತ್ತು.

  • ಉಡುಪಿಯಲ್ಲಿ ಟ್ರಾಫಿಕ್ ನಿಯಮ ಮುರಿದ ನಳೀನ್- ಸುನೀಲ್

    ಉಡುಪಿಯಲ್ಲಿ ಟ್ರಾಫಿಕ್ ನಿಯಮ ಮುರಿದ ನಳೀನ್- ಸುನೀಲ್

    ಉಡುಪಿ: ಜನಸಾಮಾನ್ಯರಿಗೊಂದು ನ್ಯಾಯ ನಮ್ಮನ್ನಾಳುವ ನಾಯಕರಿಗೊಂದು ನ್ಯಾಯ ಎನ್ನುವ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಪೊಲೀಸರು ಹೊಸ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪೊಲೀಸರು ಜಾರಿಗೆ ತಂದಿದ್ದಾರೆ. ಆದರೆ ಉಡುಪಿಯಲ್ಲಿ ಬಿಜೆಪಿ ನಾಯಕರಿಗೆ ಪೊಲೀಸರು ದಂಡ ಬೀಸಲೇ ಇಲ್ಲ.

    ರಾಜ್ಯಾದ್ಯಂತ ಮಧ್ಯಮ ವರ್ಗವನ್ನು ಗುರಿಯಾಗಿಸಿ ಪೊಲೀಸರು ದಂಡ ಬೀಸುತ್ತಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉಡುಪಿಗೆ ಬರುತ್ತಾ ನಳೀನ್ ಅವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಸೀಟ್ ಬೆಲ್ಟ್ ಹಾಕದೆಯೇ ನಳೀನ್  ಕುಮಾರ್  ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸಿದ್ದಾರೆ.

    ಸರ್ಕಾರದ ಮುಖ್ಯ ಸಚೇತಕ ಶಾಸಕ ಸುನೀಲ್ ಕುಮಾರ್ ಅವರು ಕೂಡ ನಿಯಮ ಉಲ್ಲಂಘಿಸಿದ್ದಾರೆ. ಇವರಿಬ್ಬರೂ ಕಣ್ಮುಂದೆಯೇ ಕಾರಿಂದ ಇಳಿದರೂ ಟ್ರಾಫಿಕ್ ಪೊಲೀಸರು ದಂಡ ಹಾಕಿಲ್ಲ. ಅಷ್ಟೇ ಅಲ್ಲದೆ ಉಡುಪಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.

    ಈ ಜೀಪಿನ ಚಾಲಕ ಸೀಟ್ ಬೆಲ್ಟ್ ಹಾಕದೆ ಮೂರ್ನಾಲ್ಕು ಕಿ.ಮೀ ವಾಹನ ಚಲಾಯಿಸಿದ್ದಾನೆ. ನಗರದಾದ್ಯಂತ ತೆರೆದ ವಾಹನ ಸಂಚರಿಸುವಾಗ ಪೊಲೀಸರು ಜೀಪಿಗೆ ರಕ್ಷಣೆ ನೀಡಿದರೆ  ವಿನಾಃ ಆ ಚಾಲಕನಿಗೆ ದಂಡ ಹಾಕಲಿಲ್ಲ.

  • ಇಸ್ರೋಗೆ ಬರುವಾಗ, ಹೋಗುವಾಗ ಸಂಚಾರಿ ನಿಯಮ ಪಾಲಿಸಿದ ಮೋದಿ

    ಇಸ್ರೋಗೆ ಬರುವಾಗ, ಹೋಗುವಾಗ ಸಂಚಾರಿ ನಿಯಮ ಪಾಲಿಸಿದ ಮೋದಿ

    ಬೆಂಗಳೂರು: ಸಂಚಾರಿ ನಿಯಮಗಳೆಂದರೆ ರಾಜ್ಯದ ನಾಯಕರಿಗೆ ಕಸದ ರೀತಿಯಂತಾಗಿವೆ. ಗತ್ತಿನಲ್ಲೇ ಓಡಾಡುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಸಂಚಾರಿ ನಿಯಮವನ್ನು ಚಾಚೂತಪ್ಪದೇ ಪಾಲಿಸುತ್ತಾರೆ. ಸೀಟ್ ಬೆಲ್ಟ್ ಧರಿಸುವುದನ್ನು ಯಾವುದೇ ಕಾರಣಕ್ಕೂ ಮರೆಯುವದಿಲ್ಲ.

    ರಾಜ್ಯದ ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ಸಂಚಾರಿ ನಿಯಮ ಪಾಲಿಸುತ್ತಾರೆ. ಎಷ್ಟು ಜನ ಸೀಟ್ ಬೆಲ್ಟ್ ಧರಿಸಿ ಪ್ರಯಾಣಿಸುತ್ತಾರೆ ಎಂಬುದರ ಕುರಿತು ನಿನ್ನೆಯಷ್ಟೇ ಪಬ್ಲಿಕ್ ಟಿವಿ ವರದಿ ಪ್ರಸಾರಸಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರಾದಿಯಾಗಿ ಬಹುತೇಕ ನಾಯಕರು ಸೀಟ್ ಬೆಲ್ಟ್ ಧರಿಸುವ ಶಿಸ್ತನ್ನು ತೋರಿಸಿರಲಿಲ್ಲ.

    ಚಂದ್ರಯಾನ ನೇರ ಪ್ರಸಾರ ವೀಕ್ಷಿಸಲು ನಗರದ ಇಸ್ರೋ ಕೇಂದ್ರಕ್ಕೆ ಆಗಮಿಸಿದಾಗಲೂ ಮತ್ತು ಇಸ್ರೋ ಕೇಂದ್ರದಿಂದ ಯಲಹಂಕ ವಾಯುನೆಲೆಗೆ ತೆರಳಿದಾಗ ಕಾರಿನಲ್ಲಿ ಕುಳಿತ ತಕ್ಷಣವೇ ಮೋದಿ ಸೀಟ್ ಬೆಲ್ಟ್ ಧರಿಸಿದ್ದಾರೆ. ಕಾರಿನಲ್ಲಿ ಕುಳಿತ ತಕ್ಷಣ ಮೋದಿ ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಎಸ್‍ಪಿಜಿ ಸಿಬ್ಬಂದಿ ಸಹಾಯ ಮಾಡುತ್ತಾರೆ.

    ರಾಜ್ಯದ ನಾಯಕರು ಸಂಚಾರಿ ನಿಯಮ ಪಾಲಿಸುವಲ್ಲಿ ದೂರ ಉಳಿದಿದ್ದಾರೆ. ರಾಜಕೀಯ ನಾಯಕರಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಧರಿಸದೇ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಾರೆ. ನಿತ್ಯ ಜನಪ್ರತಿನಿಧಿಗಳಿಗೆ ಸೆಲ್ಯೂಟ್ ಮಾಡಿ ಕಳುಹಿಸುವ ಪೊಲೀಸರೂ ಸಹ ಈ ಕುರಿತು ನಾಯಕರಿಗೆ ಮನವರಿಕೆ ಮಾಡುತ್ತಿಲ್ಲ.

    ಸೆಪ್ಟೆಂಬರ್ 4ರಂದು ಸೆರೆ ಹಿಡಿದಿದ್ದ ದೃಶ್ಯದಲ್ಲಿಯೂ ಸಹ ಬಿಎಸ್‍ವೈ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಮೊನ್ನೆಯ ದೃಶ್ಯದಲ್ಲಿಯೂ ಸಹ ಯಡಿಯೂರಪ್ಪ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರ್ಯನಿಮಿತ್ತ ತಮ್ಮ ನಿವಾಸ ಧವಳಗಿರಿಯಿಂದ ಕಾರಲ್ಲಿ ಹೊರಟಾಗ ಯಥಾ ಪ್ರಕಾರ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸಿದರೂ ಪೊಲೀಸರು ಈ ಬಗ್ಗೆ ಗಮನವೇ ಹರಿಸಲಿಲ್ಲ.

    ಸೀಟ್ ಬೆಲ್ಟ್ ಧರಿಸದೇ ಇದ್ದರೆ ಕಾರು ಪ್ರಯಾಣಿಕರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸಂಚಾರ ನಿಯಮ ಉಲ್ಲಂಘಿಸಿದ್ದರೂ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದಾರೆ. ಸೆ.3 ರಂದು ಜೆಪಿ ನಗರದ ನಿವಾಸದಿಂದ ಕಾರಲ್ಲಿ ಹೊರಟ ಕುಮಾರಸ್ವಾಮಿ ಸೀಟ್ ಬೆಲ್ಟ್ ಧರಿಸುವ ಗೋಜಿಗೆ ಹೋಗಲಿಲ್ಲ. ಭದ್ರತೆಗೆ ಇದ್ದ ಪೊಲೀಸರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದು ಹೇಳಲು ಹೋಗಲಿಲ್ಲ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸಂಚಾರಿ ನಿಯಮ ಅನ್ವಯವಾಗುವುದಿಲ್ಲ. ಟ್ರಾಫಿಕ್ ರೂಲ್ಸ್ ಲೆಕ್ಕಕ್ಕೆ ಇದ್ದಂಗೆ ಇಲ್ಲ. ಅವ್ರು ಕೂಡ ಕಾರಲ್ಲಿ ಕೂತ್ರೆ ಸೀಟ್ ಬೆಲ್ಟ್ ಹಾಕಿಕೊಳ್ಳುವುದೇ ಇಲ್ಲ.

    ಅನರ್ಹ ಶಾಸಕ ಬಿಸಿ ಪಾಟೀಲ್ ಈ ಹಿಂದೆ ಇನ್ಸ್‍ಪೆಕ್ಟರ್ ಆಗಿದ್ದವರು. ಎಲ್ಲರಿಗೂ ರೂಲ್ಸ್ ರೆಗ್ಯೂಲೇಷನ್ ಹೆಳಿಕೊಟ್ಟವರು. ಎಲ್ಲರಿಗಿಂತ ರೂಲ್ಸ್ ಬಗ್ಗೆ ಸ್ವಲ್ಪ ಜಾಸ್ತಿಯೇ ಅವರಿಗೆ ತಿಳಿದಿರುತ್ತದೆ. ಆದರೆ ಅವರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳದೇ ನಿಯಮ ಉಲ್ಲಂಘಿಸಿದ್ದಾರೆ.