Tag: searching

  • ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು

    ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು

    ಶ್ರೀನಗರ: ಅಮರನಾಥ ಯಾತ್ರೆಗೆ ಕೆಲವೇ ದಿನಗಳಿರುವ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ) ಉದ್ದಕ್ಕೂ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಅಮರನಾಥ ಯಾತ್ರೆಯ ಗಡಿಯಾಚೆಗಿನ ಸುರಂಗಗಳಲ್ಲಿ ಭಯೋತ್ಪಾದಕರು ಒಳನುಸುಳುವಿಕೆ ಯತ್ನಗಳನ್ನು ತಡೆಯಲು ಭದ್ರತಾ ಪಡೆ ಐಬಿ ಉದ್ದಕ್ಕೂ ಕಾರ್ಯಾಚರಣೆಯನ್ನು ನಡೆಸುತ್ತಿದೆ.

    ಪೊಲೀಸರು, ಸಿಆರ್‌ಪಿಎಫ್ ಮತ್ತು ಬಿಎಸ್‍ಎಫ್ ಜಂಟಿಯಾಗಿ ಸಾಂಬಾ, ಕಥುವಾ ಮತ್ತು ಜಮ್ಮು ಜಿಲ್ಲೆಗಳ ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಮೂವರು ಉಗ್ರರ ಹತ್ಯೆ

    ಯಾತ್ರೆ ಯಾವಾಗ?
    43 ದಿನಗಳ ಅಮರನಾಥ ಯಾತ್ರೆಯು ಜೂನ್ 30 ರಂದು ಎರಡು ಮಾರ್ಗಗಳಿಂದ ಪ್ರಾರಂಭವಾಗಲಿದೆ. ಮೊದಲನೆಯದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‍ನ 48 ಕಿಮೀ ನುನ್ವಾನ್ ಮತ್ತು ಎರಡನೆಯದು ಮಧ್ಯ ಕಾಶ್ಮೀರದ ಗಂದರ್‍ಬಾಲ್‍ನ ಬಾಲ್ಟಾಲ್‍ನಿಂದ 14 ಕಿಮೀವರೆಗೂ ಭಕ್ತಾದಿಗಳು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

    ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಕೆಲ ಉಗ್ರರನ್ನು ಈಗಾಗಲೇ ಸೇನೆ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದೆ. ಹೀಗಿದ್ದರೂ ಯಾತ್ರಿಕರ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಐಬಿ ಉದ್ದಕ್ಕೂ ತೀವ್ರ ಶೋಧ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಭಾರದ್ವಾಜ್ ವಿವರಿಸಿದ್ದಾರೆ.

    ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಅಮರಾನಾಥ ಯಾತ್ರೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದಕ್ಕೆ ಸರ್ಕಾರ ಮತ್ತೆ ಯಾತ್ರೆಗೆ ಅನುಮತಿ ಕೊಟ್ಟಿದೆ.

    Live Tv

  • ರಾತ್ರಿಯಿಡೀ ಖಾರದಪುಡಿ, ದೊಣ್ಣೆ ಹಿಡಿದುಕೊಂಡು ಓಡಾಡಿದ ಮಹಿಳೆಯರು!

    ರಾತ್ರಿಯಿಡೀ ಖಾರದಪುಡಿ, ದೊಣ್ಣೆ ಹಿಡಿದುಕೊಂಡು ಓಡಾಡಿದ ಮಹಿಳೆಯರು!

    ಹುಬ್ಬಳ್ಳಿ: ರಾಜ್ಯದೆಲ್ಲೆಡೆ ಮಕ್ಕಳ ಕಳ್ಳರ ವದಂತಿಯ ಹಾವಳಿಯಿಂದ ಹುಬ್ಬಳ್ಳಿಗರು ಆತಂಕಗೊಂಡಿದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಕಳ್ಳರಿಗಾಗಿ ಶೋಧ ಕಾರ್ಯ ಮಾಡಿದ್ದಾರೆ.

    ಹುಬ್ಬಳ್ಳಿಯ ಮಂಟೂರು ರಸ್ತೆಯ ಸುಣ್ಣದ ಭಟ್ಟಿ ನಿವಾಸಿಗಳು ಆತಂಕಗೊಂಡಿದ್ದು, ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಮಹಿಳೆಯರು ರಾತ್ರಿ ಇಡೀ ಖಾರದಪುಡಿ ಹಾಗೂ ದೊಣ್ಣೆ ಹಿಡಿದುಕೊಂಡು ಓಡಾಡಿದ್ದಾರೆ.

    ಇದೇ ಪ್ರದೇಶದಲ್ಲಿ ರೈಲ್ವೆ ಬೋಗಿಗಳನ್ನ ನಿಲ್ಲಿಸಲಾಗಿರುತ್ತದೆ. ಅದರಲ್ಲೇ ಮಕ್ಕಳ ಕಳ್ಳರು ಅಡಗಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ಇಡೀ ಮಕ್ಕಳ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ್ರೂ ಪೊಲೀಸರು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತಾವೇ ಕಳ್ಳರಿಗಾಗಿ ರಾತ್ರಿಯಿಡೀ ಶೋಧ ನಡೆಸಿದ್ದಾರೆ.

  • ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

    ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.

  • ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ

    ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ

    ಬೆಂಗಳೂರು: ಯಾರಾದರು ಕಾಣೆಯಾದ್ರೆ ಅವರ ಕುಟುಂಬಸ್ಥರು ಆ ವ್ಯಕ್ತಿಯನ್ನು ರಾತ್ರಿ ಹಗಲು ಎನ್ನದೇ ಹುಡುಕೋದನ್ನು ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ಯುವಕ ಕಳೆದು ಹೋದ ತನ್ನ ನಾಯಿಗೊಸ್ಕರ ಇಡೀ ರಾತ್ರಿ ಹುಡುಕಾಟ ನಡೆಸ್ತಿದ್ದಾರೆ.

    ಹೌದು. ನಗರದ ನಂದಿನಿಲೇಔಟ್ ನಿವಾಸಿ ಮಹೇಶ್ ಅನ್ನೋರು ನಾಲ್ಕು ವರ್ಷಗಳ ಹಿಂದೆ ಎರಡು ನಾಯಿಗಳನ್ನು ತೆಗೆದುಕೊಂಡು ಬಂದು ಅದಕ್ಕೆ ಜಾನಿ, ಮತ್ತು ಶಾಲು ಅಂತಾ ಹೆಸರಿಟ್ಟಿದ್ರು. ಆದ್ರೆ ಇದೀಗ ಜಾನಿ ಕಳೆದ ನಾಲ್ಕು ದಿನಗಳ ಹಿಂದೆ ಕಳೆದು ಹೋಗಿದೆ. ಇದರಿಂದ ಬೇಸತ್ತ ಕುಟುಂಬ ಚಿಂತೆಯಲ್ಲಿ ಮುಳುಗಿದ್ದು, ಮಹೇಶ್ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡೋಕೆ ಹೋಗಿದ್ದಾರೆ.

    ಆದ್ರೆ ಪೊಲೀಸರು ನಾಯಿ ಇದ್ದಕ್ಕೆ ಲೈಸನ್ಸ್ ಬೇಕು ಇಲ್ಲವಾದ್ರೆ ಕೇಸ್ ತೆಗೆದುಕೊಳ್ಳೋಕೆ ಆಗಲ್ಲ ಅಂತೀದ್ದಾರೆ. ಪರಿಣಾಮ ಮಹೇಶ್ ನಾಯಿ ಫೋಟೋ ಹಿಡಿದು, ಇಡೀ ರಾತ್ರಿ ಜಾನಿ ಜಾನಿ ಅಂತಾ ಹುಡುಕಾಟ ನಡೆಸುತ್ತಿದ್ದಾರೆ.