Tag: Sean Connery

  • ಜೇಮ್ಸ್ ಬಾಂಡ್ ಖ್ಯಾತಿಯ ಸೀನ್ ಕಾನರಿ ನಿಧನ

    ಜೇಮ್ಸ್ ಬಾಂಡ್ ಖ್ಯಾತಿಯ ಸೀನ್ ಕಾನರಿ ನಿಧನ

    ಲಂಡನ್: ಜೇಮ್ಸ್ ಬಾಂಡ್ ಸಿನಿಮಾ ಖ್ಯಾತಿಯ ನಟ ಸೀನ್ ಕಾನರಿ (90) ಇಂದು ನಿಧನ ಹೊಂದಿದ್ದಾರೆ. ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ, ತಮ್ಮ ಅದ್ಭುತ ನಟನೆ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದ್ದರು.

    ತಮ್ಮ ಅದ್ಧೂರಿ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದ ಸೀನ್ ಕಾನರಿ ಅವರನ್ನ ಹಲವು ಪ್ರಶಸ್ತಿಗಳು ಅರಸಿ ಬಂದಿದ್ದವು. ಇವುಗಳಲ್ಲಿ ಆಕ್ಸರ್, ಮೂರು ಗ್ಲೋಡ್ ಗ್ಲೋಬ್ ಮತ್ತು ಎರಡು ಬಾಫ್ಟಾ ಅವಾರ್ಡ್ ಸಹ ಸೇರಿವೆ. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟಿಸಿದ ಎಲ್ಲ ಕಲಾವಿದರಲ್ಲಿ ಸೀನ್ ಕಾನರಿ ನೋಡುಗರಿಗೆ ಹೆಚ್ಚು ಇಷ್ಟವಾಗಿದ್ದರು. ಜೇಮ್ಸ್ ಬಾಂಡ್ ಅಲ್ಲದೇ ‘ದಿ ಹಂಟ್ ಫಾರ್ ರೆಡ್ಡ್ ಅಕ್ಟೋಬರ್’ ಮತ್ತು ಇಂಡಿಯನಾ ಜೋನ್ಸ್ ಎಂಡ್ ದಿ ಲಾಸ್ಟ್ ಕ್ರೂಸೆಡ್ ಮತ್ತು ದಿ ರಾಕ್ ಸೀನ್ ಕಾನರಿ ಯಶಸ್ವಿ ಚಿತ್ರಗಳು.

    1988ರಲ್ಲಿ ಮೊದಲ ಬಾರಿಗೆ ಸೀನ್ ಕಾನರಿ ಅವರಿಗೆ ‘ದಿ ಅನ್‍ಟಚೇಬಲ್ಸ್’ ಸಿನಿಮಾದಲ್ಲಿಯ ನಟನೆಗೆ ಆಸ್ಕರ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಈ ಸಿನಿಮಾದಲ್ಲಿ ಸೀನ್ ಕಾಲರಿ ಐರಿಷ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಕಳೆದ ಆಗಸ್ಟ್ ನಲ್ಲಿ ಸೀನ್ ಕಾಲರಿ ತಮ್ಮ 90ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.