Tag: Sealedown

  • ಮಂಡ್ಯದ ಹಲವು ಹಳ್ಳಿಗಳನ್ನು ಸೀಲ್‍ಡೌನ್ ಮಾಡಿದ ಅಧಿಕಾರಿಗಳು

    ಮಂಡ್ಯದ ಹಲವು ಹಳ್ಳಿಗಳನ್ನು ಸೀಲ್‍ಡೌನ್ ಮಾಡಿದ ಅಧಿಕಾರಿಗಳು

    ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಜಿಲ್ಲೆಯಲ್ಲಿ ಹಳ್ಳಿಗಳಿಗೂ ಕೊರೊನಾ ವ್ಯಾಪಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಇದೀಗ ಅಧಿಕಾರಿಗಳು ಗ್ರಾಮಗಳನ್ನು ಸೀಲ್‍ಡೌನ್ ಮಾಡಲು ಮುಂದಾಗಿದ್ದಾರೆ.

    ಕೊರೊನಾ ಜಿಲ್ಲೆಯಲ್ಲಿ ವ್ಯಾಪಿಸಿರುವ ಪರಿಣಾಮ ಮಂಡ್ಯ ತಾಲೂಕಿನಲ್ಲಿ 8 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಹನಕೆರೆ, ಬಸರಾಳು, ಹುಲಿವಾನ, ಕೀಲಾರ, ಮಂಗಲ, ಹೆಮ್ಮಿಗೆ, ತೂಬಿನಕೆರೆ ಹಾಗೂ ಹಳುವಾಡಿ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಪೈಕಿ ಒಂದೊಂದು ಗ್ರಾಮದಲ್ಲಿ 40ಕ್ಕೂ ಕೊರೊನಾ ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ನಮ್ಮೂರುಗಳಲ್ಲಿ 150ಕ್ಕೂ ಹೆಚ್ಚು ಕೇಸ್‍ಗಳು ಇವೆ ಎಂದು ಹೇಳುತ್ತಿದ್ದಾರೆ.

    ಕೆಆರ್‌‌ಪೇಟೆ ತಾಲೂಕಿನಲ್ಲಿ ಎರಡು ಗ್ರಾಮಗಳನ್ನು ಸೀಲ್ ಮಾಡಲಿದೆ. ಚೌಡಸಮುದ್ರ, ಕೊಮ್ಮೇನಹಳ್ಳಿ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊಮ್ಮೇನಹಳ್ಳಿ ಗ್ರಾಮದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದ ತಾಲೂಕಿನ ಹಲವು ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಜನರಿಗೆ ಆತಂಕ ಸೃಷ್ಟಿಯಾಗಿದೆ.

  • ಚಾಮರಾಜನಗರದಲ್ಲಿ ಕೊರೊನಾಗೆ ಪೇದೆ ಬಲಿ – ಸರ್ಕಲ್ ಇನ್ಸ್‌ಪೆಕ್ಟರಿಗೆ ಸೋಂಕು

    ಚಾಮರಾಜನಗರದಲ್ಲಿ ಕೊರೊನಾಗೆ ಪೇದೆ ಬಲಿ – ಸರ್ಕಲ್ ಇನ್ಸ್‌ಪೆಕ್ಟರಿಗೆ ಸೋಂಕು

    ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಸೇರಿ ಮೂವರ ಪೇದೆಗಳಿಗೆ ಕೊರೊನಾ ಸೋಂಕು ತಗುಲಿದೆ.

    ಜಿಲ್ಲೆಯ ಡಿಎಆರ್ ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಕುಮಾರ್ (36) ಕೋವಿಡ್‍ನಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಕೂಡ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ನಿವಾಸಿಯಾಗಿದ್ದಾರೆ. ಕೊಳ್ಳೇಗಾಲ ವೃತ್ತ ನಿರೀಕ್ಷಕರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಕಚೇರಿ ಸೀಲ್‍ಡೌನ್ ಮಾಡಿ ಔಷಧಿ ಸಿಂಪಡಿಸಲಾಗಿದೆ.

    ಇನ್ಸ್ ಪೆಕ್ಟರ್ ಅವರು ಶನಿವಾರ ಕೊರೊನಾ ತಪಾಸಣೆಗೆ ಒಳಗಾಗಿದ್ದರು. ಆದರೆ ಇಂದು ಬಂದ ಕೊರೊನಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ಜೊತೆಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪುರುಷ ಪೇದೆ, ಓರ್ವ ಮಹಿಳಾ ಪೇದೆಗೆ ಕೊರೊನಾ ಬಂದಿರುವುದು ತಿಳಿದು ಬಂದಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

  • ಅರ್ಚಕರಿಗೆ ಕೊರೊನಾ – ಶ್ರೀಭೋಗನಂದೀಶ್ವರ ದೇವಾಲಯ ಬಂದ್

    ಅರ್ಚಕರಿಗೆ ಕೊರೊನಾ – ಶ್ರೀಭೋಗನಂದೀಶ್ವರ ದೇವಾಲಯ ಬಂದ್

    ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇವಾಲಯದ ಅರ್ಚಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇವಾಲಯವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

    ದೇವಾಲಯದಲ್ಲಿನ ಇಬ್ಬರು ಅರ್ಚಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇವಾಲಯವನ್ನು ಇಂದಿನಿಂದ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅರ್ಚಕರಿಗೆ ಕೊರೊನಾ ಸೋಂಕು ಹಿನ್ನೆಲೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ದೇವಾಲಯದ ಪ್ರಮಖ ಗೇಟ್‍ನ್ನು ಸಂಪೂರ್ಣ ಮುಚ್ಚಿ ಟೇಪ್ ಮಾಡಲಾಗಿದೆ. ಇಂದು ಸಹ ಜಿಲ್ಲೆಯಲ್ಲಿ 102 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,526 ಕ್ಕೆ ಏರಿಕೆಯಾಗಿದೆ. ಇದುವರೆಗೂ 3624 ಮಂದಿ ಗುಣಮುಖರಾಗಿದ್ದು, ಸದ್ಯ 836 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೊನಾದಿಂದ ಇದುವರೆಗೂ 65 ಮಂದಿ ಸಾವನ್ನಪ್ಪಿದ್ದಾರೆ.

  • ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿಗೆ ಸೀಲ್‍ಡೌನ್

    ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿಗೆ ಸೀಲ್‍ಡೌನ್

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಪೊಲೀಸ್ ಠಾಣೆ ಸೀಲ್‍ಡೌನ್ ಆಗಿದೆ. ಮೂರು ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಠಾಣೆಯನ್ನು ಎರಡನೇ ಬಾರಿಗೆ ಸೀಲ್‍ಡೌನ್ ಮಾಡಲಾಗಿದೆ.

    ಬೈಂದೂರು ಠಾಣೆಯ ಎಎಸ್‍ಐ, ಓರ್ವ ಮಹಿಳಾ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗೆ ಕೊರೊನಾನ ಪಾಸಿಟಿವ್ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಹಿಂದೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಬೈಂದೂರು ಠಾಣೆಯಲ್ಲಿ ಕೊರೊನಾ ಬಂದಿದ್ದರಿಂದ ಠಾಣೆಯನ್ನು ಸೀಲ್ ಮಾಡಲಾಗಿತ್ತು. ಎರಡು ದಿನಗಳ ಕಾಲ ನಿರಂತರ ಸ್ಯಾನ್‍ಟೈಸ್ ಪ್ರಕ್ರಿಯೆ ನಡೆದಿತ್ತು. ಇದೀಗ ಮತ್ತೆ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಇಂದು ಎರಡು ಬಾರಿ ಸ್ಯಾನಿಟೈಸ್ ಮಾಡುವುದಾಗಿ ಎಸ್‍ಐ ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಸಂಪರ್ಕಕ್ಕೆ ಬಂದ ಎಲ್ಲರನ್ನು ಕ್ವಾರಂಟೈನ್ ಮಾಡುವುದಾಗಿ ಅವರು ತಿಳಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯ ಗಂಟಲು ದ್ರವದ ಪರೀಕ್ಷೆ ಈ ಹಿಂದೆ ಒಮ್ಮೆ ನಡೆಸಿದ್ದು, ಇದೀಗ ಮತ್ತೆ ಕೋವಿಡ್ ಟೆಸ್ಟ್ ಮಾಡುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

  • ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್

    ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 21 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇತ್ತ ಶಿರಸಿಯ ಮಾರಿಕಾಂಬಾ ದೇವಸ್ಥಾನವನ್ನು ಒಂದು ವಾರ ಸೀಲ್‍ಡೌನ್ ಮಾಡಲಾಗಿದೆ.

    ಶಿರಸಿಯ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲೇ ವಾಸವಿದ್ದ ವ್ಯಕ್ತಿಗೂ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಈತ ಪ್ರತಿ ದಿನ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುತಿದ್ದ ಎನ್ನಲಾಗಿದೆ. ಹೀಗಾಗಿ ಈತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ದೇವಸ್ಥಾನವನ್ನು ಸೀಲ್‍ಡೌನ್ ಮಾಡುವ ನಿರ್ಧಾರಕ್ಕೆ ಮಾಡಲಾಗಿದೆ.

    ಶಿರಸಿ ಮಾರಿಕಾಂಬ ದೇವಸ್ಥಾನವನ್ನು ಇಂದಿನಿಂದ ಒಂದು ವಾರದ ಕಾಲ ಸೀಲ್‍ಡೌನ್ ಮಾಡುತಿದ್ದು, ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರನ್ನು ಹೊರತುಪಡಿಸಿ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರಿಗೂ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೋಂಕಿತ ವ್ಯಕ್ತಿ ದೇವಸ್ಥಾನಕ್ಕೆ ಬಂದು ಹೋಗುತಿದ್ದರಿಂದ ದೇವಸ್ಥಾನವನ್ನು ಸ್ಯಾನಿಟೈಸ್ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.

  • ಮೂವರು ಆರೋಪಿಗಳಿಗೆ ಸೋಂಕು- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್

    ಮೂವರು ಆರೋಪಿಗಳಿಗೆ ಸೋಂಕು- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್

    ಬೆಂಗಳೂರು: ಮೂವರು ಕೊಲೆ ಆರೋಪಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಸಿಲಿಕಾನ್ ಸಿಟಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್ ಮಾಡಲು ರೆಡಿಯಾಗಿದೆ.

    ಈ ಮೂಲಕ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮತ್ತೊಂದು ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧತೆ ನಡೆದಿದೆ. ಪಶ್ಚಿಮ ವಿಭಾಗದ ಪೊಲೀಸರಿಗೆ ಕೊರೊನಾ ಕಂಟಕವಾಗಿದೆ. ಡಿಸಿಪಿ ಕಚೇರಿ, ಎಸಿಪಿ ಕಚೇರಿ, ಉಪ್ಪಾರಪೇಟೆ, ಮಾರ್ಕೆಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಜೆಜೆ ಆರ್ ನಗರ, ಕಾಮಾಕ್ಷಿಪಾಳ್ಯ, ಕೆಪಿ ಅಗ್ರಹಾರ, ಕೆಂಗೇರಿ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿದ್ದವು. ಇದೀಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧವಾಗಿದೆ.

    ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸರು 9 ಜನ ಕೊಲೆ ಆರೋಪಿಗಳನ್ನು ಬಂಧಿಸಿ ಸೆಲ್‍ನಲ್ಲಿ ಇಟ್ಟಿದ್ದರು. ಈ 9 ಜನರ ಪೈಕಿ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಮೂವರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲು ತೀರ್ಮಾನ ಮಾಡಿದ್ದು, ಸಂಪರ್ಕದಲ್ಲಿದ್ದ ಪೊಲೀಸರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ.

  • ಕೊಡಗು ಜಿಲ್ಲೆಯ 6 ಪ್ರದೇಶಗಳು ಸೀಲ್ ಡೌನ್

    ಕೊಡಗು ಜಿಲ್ಲೆಯ 6 ಪ್ರದೇಶಗಳು ಸೀಲ್ ಡೌನ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಷ್ಟು ದಿನ ನಿಯಂತ್ರಣದಲ್ಲಿದ್ದ ಕೊರೊನಾ ಮಹಾಮಾರಿ ಬುಧವಾರ ಸ್ಫೋಟಗೊಂಡಿದೆ. ಒಂದೇ ದಿನ 14 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರಿಂದ ಕೊಡಗಿನ 6 ಏರಿಯಾಗಳನ್ನು ನಿನ್ನೆ ರಾತ್ರಿ ಸೀಲ್‍ಡೌನ್ ಮಾಡಲಾಗಿದೆ.

    ಮಡಿಕೇರಿ ನಗರದ ಓಂಕಾರೇಶ್ವರ ದೇವಾಸ್ಥಾನ ರಸ್ತೆ, ಪುಟಾಣಿ ನಗರ, ಡೇರಿ ಫಾರಂ, ಮಡಿಕೇರಿ ತಾಲೂಕಿನ ತಾಳತ್ ಮನೆ ಮತ್ತು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಏರಿಯಾ ಒಂದನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಏರಿಯಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ನಿಯೋಜಿಸಲಾಗಿದೆ.

    ಈ ಮೂಲಕ ಜನರು ಸೀಲ್‍ಡೌನ್ ಏರಿಯಾಗಳಿಂದ ಜನರು ಹೊರ ಹೋಗದಂತೆ ಮತ್ತು ಹೊರಗಿನವರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಎದುರಾಗಿದೆ.

  • ಕೊಡಗಿನ ಕೊರೊನಾ ನಂಜಿನಿಂದ ಗದಗ ಜಿಲ್ಲೆ ಪೊಲೀಸ್ ಠಾಣೆ ಸೀಲ್‍ಡೌನ್

    ಕೊಡಗಿನ ಕೊರೊನಾ ನಂಜಿನಿಂದ ಗದಗ ಜಿಲ್ಲೆ ಪೊಲೀಸ್ ಠಾಣೆ ಸೀಲ್‍ಡೌನ್

    ಗದಗ: ಕೊಡಗು ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯೋರ್ವನಿಂದ ಪೊಲೀಸ್ ಠಾಣೆ ಸೀಲ್ ಆಗಿರುವ ಘಟನೆ ಜಿಲ್ಲೆ ಮುಂಡರಗಿನಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ಪಿ-9215ರ ವ್ಯಕ್ತಿ ದಿನಾಂಕ 18 ರಂದು ಖಾಸಗಿ ವಿಷಯಕ್ಕೆ ಸಂಬಂಧಿಸಿದಂತೆ ಕೊಡಗಿನಿಂದ ಮುಂಡರಗಿ ಠಾಣೆಗೆ ಬಂದಿದ್ದ. ಆದರೆ ಸೋಮುವಾರದ ಹೆಲ್ತ್ ಬುಲೆಟಿನ್‍ನಲ್ಲಿ ಆ ವ್ಯಕ್ತಿಗೆ ಪಾಸಿಟಿವ್ ದೃಢವಾಗಿದೆ. ಇದರಿಂದ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸೈನಿಟೈಜ್ ಮಾಡಲಾಗಿದೆ. ಜೊತೆಗೆ ಪೊಲೀಸ್ ಠಾಣೆ ಒಳಗಡೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಠಾಣೆಯ ಸುತ್ತಲು ಬ್ಯಾರಿಕೇಡ್ ಹಾಕಿ, ಸೈನಿಟೆಜರ್ ಅಳವಡಿಸಲಾಗಿದೆ. ಠಾಣೆಯ ಹೊರಭಾಗ ಸಾರ್ವಜನಿಕರ ಸಮಸ್ಯೆ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಕೊಡಗಿನ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಆರೋಗ್ಯ ತಪಾಸಣೆ ಒಳಪಡಿಸಲಾಗಿದೆ. ವರದಿಗಾಗಿ ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಕಾಯುತ್ತಿದೆ. ಈ ಘಟನೆಯಿಂದ ಗದಗ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯಲ್ಲಿ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿದೆ.

  • ಇನ್ಮುಂದೆ ಸೀಲ್‍ಡೌನ್ ಇರಲ್ಲ, ಸೋಂಕಿತನ ಮನೆ ಮಾತ್ರ ಕ್ಲೋಸ್ ಡೌನ್: ಸುಧಾಕರ್

    ಇನ್ಮುಂದೆ ಸೀಲ್‍ಡೌನ್ ಇರಲ್ಲ, ಸೋಂಕಿತನ ಮನೆ ಮಾತ್ರ ಕ್ಲೋಸ್ ಡೌನ್: ಸುಧಾಕರ್

    ಉಡುಪಿ: ಸೀಲ್‍ಡೌನ್, ಕಂಟೈನ್ಮೆಂಟ್ ಝೋನ್ ಅನ್ನು ರದ್ದು ಮಾಡಿ, ಇನ್ನು ಮುಂದೆ ಕೊರೊನಾ ಸೋಂಕಿತನ ಮನೆ ಮಾತ್ರ ಸೀಲ್ ಡೌನ್ ಮಾಡುವ ಪ್ಲಾನ್ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

    ಉಡುಪಿಯಲ್ಲಿ ಜಿಲ್ಲಾಮಟ್ಟದ ಸಭೆಯ ನಂತರ ಮಾತನಾಡಿದ ಅವರು, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಅವಧಿ 7 ದಿನಕ್ಕೆ ಮೊಟಕು ಮಾಡಲಾಗಿದೆ. ಸಾವಿರಾರು ಜನರನ್ನು ಕ್ವಾರಂಟೈನ್ ಮಾಡುವುದು ಕಷ್ಟ. ಕಂಟೈನ್ಮೆಂಟ್ ಝೋನ್‍ನ ವಿವರಣೆ ಬದಲಾಗಿದೆ ಎಂದರು.

    ಉಡುಪಿಯ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ರಘುಪತಿ ಭಟ್ ಈ ಸಲಹೆ ನೀಡಿದ್ದಾರೆ. ಸೋಂಕಿತನ ಮನೆಯ ಬೀದಿಯನ್ನು ಕಂಟೈನ್ಮೆಂಟ್ ಝೋನ್ ಮಾಡುತ್ತಿದ್ದೇವೆ. ಜೊತೆಗೆ ಸೋಂಕಿತನ ಮನೆಯನ್ನು ಮಾತ್ರ ಸೀಲ್ ಮಾಡುವ ಪ್ರಸ್ತಾವ ಇದೆ. ಉಡುಪಿಯ ಸಭೆಯಲ್ಲಿ ಶಾಸಕರು ಈ ಬಗ್ಗೆ ಒತ್ತಾಯಿಸಿದ್ದಾರೆ. ಈ ಅಭಿಪ್ರಾಯ ಪ್ರಕಟಿಸಿದ್ದಾರೆ ಎಂದರು.

    ಕ್ವಾರಂಟೈನ್‍ನಲ್ಲಿ ಜನರ ಬೇಡಿಕೆ ಬಹಳ ಇರುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಜನರನ್ನು ಸಂಭಾಳಿಸೋದು ಕಷ್ಟ. ಸೀಲ್ ಆದ ಮನೆಗೆ ಅಗತ್ಯ ವಸ್ತುಗಳನ್ನು ಸರ್ಕಾರವೇ ಒದಗಿಸುತ್ತದೆ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಶೀಘ್ರ ಈ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಡಾ. ಸುಧಾಕರ್ ಹೇಳಿದರು.

  • ಸೀಲ್‍ಡೌನ್‍ಗೂ ಕ್ಯಾರೆ ಎನ್ನದ ಶಿವಾಜಿನಗರ ಜನ- ಬೇಕಾಬಿಟ್ಟಿ ಸಂಚಾರ

    ಸೀಲ್‍ಡೌನ್‍ಗೂ ಕ್ಯಾರೆ ಎನ್ನದ ಶಿವಾಜಿನಗರ ಜನ- ಬೇಕಾಬಿಟ್ಟಿ ಸಂಚಾರ

    – ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಸಂಚರಿಸಬಹುದು
    – ವ್ಯಾಪಾರ ವಹಿವಾಟು ಜೋರು

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊರೊನಾ ಹಾಟ್‍ಸ್ಪಾಟ್‍ಗಳ ಪೈಕಿ ಒಂದಾಗಿರುವ ಶಿವಾಜಿನಗರದಲ್ಲಿ ಹೆಸರಿಗಷ್ಟೇ ಸೀಲ್‍ಡೌನ್ ಮಾಡಲಾಗಿದ್ದು, ಇಲ್ಲಿಂದ ಎಲ್ಲಿಗೆ ಬೇಕಾದರೂ ತೆರಳಬಹುದಾಗಿದೆ ಎಂಬುದು ಪಬ್ಲಿಕ್ ಟಿವಿಯ ಗ್ರೌಂಡ್ ರಿಪೋರ್ಟ್ ನಲ್ಲಿ ಬಹಿರಂಗವಾಗಿದೆ.

    ಯಾರು ಬೇಕಾದರೂ ಶಿವಾಜಿನಗರಕ್ಕೆ ಬರಬಹುದು, ಯಾರು ಬೇಕಾದರೂ ಇಲ್ಲಿಂದ ಹೊರಗೆ ಹೋಗಬಹುದಾಗಿದೆ. ಅಲ್ಲದೆ ಗುಜರಿ ಅಂಗಡಿಗಳನ್ನು ಕದ್ದು ಮುಚ್ಚಿ ತೆರೆಯಲಾಗಿದ್ದು, ಇಡ್ಲಿ ವ್ಯಾಪಾರವೂ ಜೋರಾಗಿ ಸಾಗಿದೆ. ಕೊರೊನಾ ಭಯ ಹಾಗೂ ಸರ್ಕಾರದ ಸೀಲ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಜನರು ಓಡಾಡುತ್ತಿದ್ದಾರೆ. ಇಡ್ಲಿ ಮಾರಾಟ, ಮಳಿಗೆಗಳು ತೆರೆದಿವೆ. ಅಲ್ಲದೆ ರಸ್ತೆಯಲ್ಲೇ ಕೂತು ಕಾಫಿ ಕುಡಿಯುವುದು, ದ್ವಿಚಕ್ರ ವಾಹನ ಎತ್ತಿಕೊಂಡು ಸೀಲ್‍ಡೌನ್ ಮಿತಿ ದಾಟಿ ಬೀದಿ ಬೀದಿ ತಿರುಗುವುದು ಎಗ್ಗಿಲ್ಲದೆ ನಡೆದಿದೆ.

    ಅಲ್ಲದೆ ಇಲ್ಲಿಯ ಜನರು ಸಹ ಮಾಸ್ಕ್ ಹಾಕುವ ಗೋಜಿಗೆ ಹೋಗಿಲ್ಲ. ಪೊಲೀಸರು, ಆರೋಗ್ಯಾಧಿಕಾರಿಗಳು ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ಹೆಸರಿಗೆ ಮಾತ್ರ ಸೀಲ್‍ಡೌನ್ ಎನ್ನುವಂತಾಗಿದ್ದು, ಇವರು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ ಎನ್ನವಂತೆ ಎಗ್ಗಿಲ್ಲದೆ ತಮ್ಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸೀಲ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.