Tag: seal down

  • ಮೈಸೂರು ಪೊಲೀಸರ ಬೆನ್ನೇರಿದ ಹೆಮ್ಮಾರಿ- 23 ಮಂದಿ ಖಾಕಿಗಳಿಗೆ ಸೋಂಕು

    ಮೈಸೂರು ಪೊಲೀಸರ ಬೆನ್ನೇರಿದ ಹೆಮ್ಮಾರಿ- 23 ಮಂದಿ ಖಾಕಿಗಳಿಗೆ ಸೋಂಕು

    – ನಂಜನಗೂಡು ಠಾಣೆ, ಡಿವೈಎಸ್‍ಪಿ ಕಚೇರಿ ಸೀಲ್‍ಡೌಲ್

    ಮೈಸೂರು: ಕೊರೊನಾ ಮುಕ್ತ ಆಯ್ತು ಅಂತ ನಿಟ್ಟುಸಿರು ಬಿಡುವ ಸಮಯದಲ್ಲಿ ಮತ್ತೆ ಮೈಸೂರಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸದ್ಯ ಡೆಡ್ಲಿ ವೈರಸ್ ಮೈಸೂರು ಪೊಲೀಸರ ಬೆನ್ನತ್ತಿದೆ.

    ಬೆಂಗಳೂರು ಪೊಲೀಸರಷ್ಟೇ ಅಲ್ಲ. ಮೈಸೂರು ಪೊಲೀಸರಿಗೂ ಕೊರೊನಾ ಸೋಂಕು ಬಂದಿದೆ. ಇಲ್ಲಿವರೆಗೂ ಮೈಸೂರು ಜಿಲ್ಲೆಯೊಂದರಲ್ಲೇ 23 ಮಂದಿ ಪೊಲೀಸರು ಸೋಂಕು ಬಾಧಿತರಾಗಿದ್ದಾರೆ. ಜ್ಯುಬಿಲಿಯಂಟ್ ಕೊರೊನಾ ಮುಕ್ತವಾದ ಬಳಿಕ ಇಡೀ ಮೈಸೂರು ನೆಮ್ಮದಿ ನಿಟ್ಟುಸಿರು ಬಿಟ್ಟಿತ್ತು. ಅಷ್ಟರಲ್ಲೆ ಕಿಲ್ಲರ್ ಕೊರೊನಾ ಪೊಲೀಸರ ಹೆಗಲೇರಿ ಕುಳಿತುಬಿಟ್ಟಿದೆ.

    ನಂಜನಗೂಡು ಗ್ರಾಮಾಂತರ ಠಾಣೆಯ ಕಾನ್ಸ್​​ಟೇಬಲ್​ಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿ ಅಡಿಷನಲ್ ಎಸ್‍ಪಿ ಸ್ನೇಹ ಸೇರಿ 22 ಜನ ಅಧಿಕಾರಿಗಳು ಇದ್ದಾರೆ. ಇವರೆಲ್ಲರ ಗಂಟಲು ದ್ರವ ಸಂಗ್ರಹಣೆ ಮಾಡಿ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಎಲ್ಲರೂ ಈಗ ಕ್ವಾರಂಟೈನ್‍ನಲ್ಲಿದ್ದಾರೆ.

    ಎಸ್‍ಪಿ ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕದಲ್ಲಿದ್ದಾರೆ. ಇವರಲ್ಲಿ ಈಗ ಆತಂಕ ಮನೆ ಮಾಡಿದೆ. ಮೈಸೂರಿನ ಟಿ. ನರಸೀಪುರದ ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆಯಾಗಿತ್ತು. ಇದರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪೇದೆಗೆ ಸೋಂಕು ದೃಢವಾಗಿದೆ. ಹೀಗಾಗಿ ತಂಡದಲ್ಲಿದ್ದ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

    ನಂಜನಗೂಡು ಠಾಣೆ, ಡಿವೈಎಸ್‍ಪಿ ಕಚೇರಿ ಸೀಲ್‍ಡೌನ್!
    ಸೋಂಕಿತ ಕಾನ್ಸ್​​ಟೇಬಲ್​ನಿಂದ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಡಿವೈಎಸ್‍ಪಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಹಾಗೇ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ನಾಲ್ಕು ಪೋಲಿಸ್ ಕ್ವಾಟರ್ಸ್ ನಲ್ಲಿದ್ದವರನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ತಾತ್ಕಾಲಿಕವಾಗಿ ಪಟ್ಟಣ ಪೊಲೀಸ್ ಠಾಣೆಗೆ ಸ್ಥಳಾಂತರ ಮಾಡಲಾಗಿದೆ.

  • ಬೆಂಗ್ಳೂರಿನ ನಾಗರಬಾವಿಯ ಅಡ್ಡರಸ್ತೆ ಸೀಲ್‍ಡೌನ್ – 28 ದಿನ ಯಾರೂ ಹೊರಗೆ ಬರುವಂತಿಲ್ಲ

    ಬೆಂಗ್ಳೂರಿನ ನಾಗರಬಾವಿಯ ಅಡ್ಡರಸ್ತೆ ಸೀಲ್‍ಡೌನ್ – 28 ದಿನ ಯಾರೂ ಹೊರಗೆ ಬರುವಂತಿಲ್ಲ

    ಬೆಂಗಳೂರು: ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಬಾವಿ 2ನೇ ಹಂತ, ನಾಲ್ಕನೇ ಅಡ್ಡರಸ್ತೆ ಸೀಲ್ ಡೌನ್ ಮಾಡಲಾಗಿದೆ.

    29 ವರ್ಷದ ವ್ಯಕ್ತಿ ಇಟಲಿಯಿಂದ, ದೋಹಾಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದರು. 7 ದಿನ ಕ್ವಾರಂಟೈನ್ ಮುಗಿಸಿ ನಾಗರಬಾವಿ ಮನೆಗೆ ಬಂದಿದ್ದರು. ಕ್ವಾರಂಟೈನ್ ಮುಗಿಸಿ ಮನೆಗೆ ಬಂದು ಮೂರು ದಿನ ಆದ ಮೇಲೆ ಪಾಸಿಟಿವ್ ವರದಿ ಬಂದಿದೆ.

    ಈಗಾಗಲೇ ರೋಗಿಯನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದ್ದು, ರೋಗಿ ವಾಸವಿದ್ದ ಜಾಗವನ್ನು ಸೀಲ್ ಡೌನ್ ಮಾಡಿ 28 ದಿನ ಯಾರೂ ಹೊರಬಾರದಂತೆ ಸೂಚನೆ ನೀಡಲಾಗಿದೆ.

    15 ದಿನಗಳ ಹಿಂದೆ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೋಗಿ ಮನೆಗೆ ಬಂದು ತಂದೆಯ ತಿಥಿ ಕಾರ್ಯ ಕೂಡ ಮಾಡಿದ್ದರು.

  • ಸಾಯಿಬಾಬಾ ಮಂದಿರ ಆಶ್ರಮದ ಸೂಪರ್ ವೈಸರ್‌ಗೆ ಕೊರೊನಾ

    ಸಾಯಿಬಾಬಾ ಮಂದಿರ ಆಶ್ರಮದ ಸೂಪರ್ ವೈಸರ್‌ಗೆ ಕೊರೊನಾ

    – ಚಿನ್ನದಂಗಡಿ ಮಾಲೀಕನ ಮಗಳ ಮಗನಿಗೂ ಸೋಂಕು

    ಚಿಕ್ಕಬಳ್ಳಾಪುರ: ನಗರ ಹೊರವಲಯದ ಹಾರೋಬಂಡೆ ಬಳಿಯ ಸಾಯಿಬಾಬಾ ಮಂದಿರ ಆಶ್ರಮದಲ್ಲಿನ 68 ವರ್ಷದ ಸೂಪರ್ ವೈಸರ್ ಗೂ ರೋಗಿ 2,653 ಕೊರೊನಾ ದೃಢವಾಗಿದೆ.

    ಆಶ್ರಮದಲ್ಲಿ ಸೂಪರ್ ವೈಸರ್ ಆಗಿದ್ದ ಇವರು ಇತ್ತೀಚೆಗೆ ಬೆಂಗಳೂರಿನ ಎಸ್.ಪಿ.ರೋಡ್‍ಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಹೀಗಾಗಿ ಗುರುವಾರ ಇವರ ಗಂಟಲು ದ್ರವ ಮಾದರಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ 50-50 ಅಂತ ಬಂದಿದೆ.

    ಸಂಶಯ ವ್ಯಕ್ತವಾದ ಹಿನ್ನೆಲೆ ಇವರ ಗಂಟಲು ದ್ರವ ಮಾದರಿಯನ್ನ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಂದು ಇವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಆಶ್ರಮ ಹಾಗೂ ಸಾಯಿಬಾಬಾ ಮಂದಿರ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಎಚ್.ನಾಗರಾಜ್ ಎಂಬವರದ್ದಾಗಿದೆ. ಸದ್ಯ ಆಶ್ರಮವಮ್ನ ಸೀಲ್‍ಡೌನ್ ಮಾಡಲಾಗಿದೆ.

    ಆಶ್ರಮದಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಮೂಲತಃ ಕೇರಳದವರಾಗಿದ್ದು, ಕಳೆದ 3 ವರ್ಷಗಳಿಂದ ಇದೇ ಆಶ್ರಮದಲ್ಲಿ ದೇವಾಲಯ ನಿರ್ಮಾಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನ ತಂದುಕೊಡುವ, ಉಸ್ತುವಾರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.

    ಚಿನ್ನದಂಗಡಿ ಮಾಲೀಕನ ಮಗಳ ಮಗನಿಗೂ ಸೋಂಕು:
    ಜಿಲ್ಲೆಯ ಚಿಂತಾಮಣಿ ನಗರದ ಚಿನ್ನದಂಗಡಿ ಮಾಲೀಕ ಸಂಪರ್ಕಕ್ಕೆ ಒಳಗಾಗಿದ್ದ ಮಗಳ ಮಗನಿಗೂ ಈಗ ಕೊರೊನಾ ದೃಢವಾಗಿದೆ. ಅಂದಹಾಗೆ ಈ ಚಿನ್ನದಂಗಡಿ ಮಾಲೀಕನ ಮಗ, ಮೊಮ್ಮಗ, ಮಗಳು, ಅಳಿಯನಿಗೂ ಕೊರೊನಾ ಸೋಂಕು ದೃಢವಾಗಿತ್ತು. ಈಗ ಮಗಳ 17 ವರ್ಷದ ಮಗನಿಗೂ ಸೋಂಕು ಬಂದಿದೆ. ಹೀಗಾಗಿ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಸೋಂಕಿತ ರೋಗಿ 648 ಮೊಮ್ಮಗನನ್ನ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಇನ್ನೂ ಬುದ್ಧಿ ಕಲಿಯದ ಪಾದರಾಯನಪುರ ಜನ- ಕೊರೊನಾ ಏರುತ್ತಿದ್ರೂ ಭಯವಿಲ್ಲದೇ ಓಡಾಟ

    ಇನ್ನೂ ಬುದ್ಧಿ ಕಲಿಯದ ಪಾದರಾಯನಪುರ ಜನ- ಕೊರೊನಾ ಏರುತ್ತಿದ್ರೂ ಭಯವಿಲ್ಲದೇ ಓಡಾಟ

    – ಪೊಲೀಸರು ಏನ್ ಹೇಳಿದ್ರೂ ಡೋಂಟ್‍ಕೇರ್

    ಬೆಂಗಳೂರು: ಕೊರೊನಾ ಪ್ರಕರಣಗಳ ಪತ್ತೆ ದಿನೇ ದಿನೇ ಏರುತ್ತಿದ್ದರೂ ಪಾದರಾಯನಪುರದ ಜನ ಕ್ಯಾರೇ ಅಂತಿಲ್ಲ. ಭಯವಿಲ್ಲದೇ ಓಡಾಟ ಮಾಡುವ ಮೂಲಕ ಜನ ಇನ್ನೂ ಬುದ್ಧಿ ಕಲಿತಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

    ಪಾದರಾಯನಪುರ ಪ್ರದೇಶದಲ್ಲಿ ತಳ್ಳೋ ಗಾಡಿ, ಬೈಕ್ ಹಾಗೂ ಆಟೋಗಳು ಸುಖಾ ಸುಮ್ಮನೆ ಸಂಚಾರ ಮಾಡುತ್ತಿವೆ. ಪೊಲೀಸರು ಏನು ವಾರ್ನಿಂಗ್ ಕೊಟ್ಟರೂ ಜನ ಕಿವಿಗೊಡುತ್ತಿಲ್ಲ. ಸೀಲ್‍ಡೌನ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರೂ ಪಿಪಿಇ ಕಿಟ್ ಧರಿಸುತ್ತಿಲ್ಲ.

    ಇಷ್ಟು ಮಾತ್ರವಲ್ಲದೆ ಮೇ 24 ರಂದು ರಂಜಾನ್ ಹಬ್ಬ ಇದೆ. ರಂಜಾನ್ ಮುಗಿಯುವವರೆಗೂ ಟೆಸ್ಟ್ ಗೆ ಬರಲ್ಲ. ಉಪವಾಸ, ಜಾಗಣೆ ಆಚರಣೆಗಳಿವೆ. ಹೀಗಾಗಿ ರ್‍ಯಾಂಡಮ್ ಟೆಸ್ಟ್ ಗೆ ಸಹಕರಿಸಲ್ಲ. ಹಬ್ಬ ಮುಗಿಯೇ ಪರೀಕ್ಷೆಗೆ ಬರುತ್ತೇವೆ ಎಂದು ಜನ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

    ಇತ್ತ ದಿನೇ ದಿನೇ ರ್‍ಯಾಂಡಮ್ ಟೆಸ್ಟ್ ಗೆ ಬರುವವರ ಸಂಖ್ಯೆಯೂ ಇಳಿಕೆಯಾಗಿದೆ. ಕಳೆದ ಬಾರಿ ಹೋಟೆಲ್ ಕ್ವಾರಂಟೈನ್ ಗೆ ಕಿರಿಕ್ ಆಗಿತ್ತು. ಹೀಗಾಗಿ ಬಲವಂತವಾಗಿ ಕರೆ ತರುವುದು ಬೇಡ ಎಂದು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಬ್ಬ ಮುಗಿಯುವಷ್ಟರಲ್ಲಿ ಮತ್ತಷ್ಟು ಪಾಸಿಟಿವ್ ಪತ್ತೆಯಾಗಬಹುದು ಎಂಬ ಆತಂಕ ಹುಟ್ಟಿದೆ.

  • ಬಾಪೂಜಿನಗರಕ್ಕೆ ಬಿಗ್ ರಿಲೀಫ್- ಚಾಂದಾನಿ ಚೌಕ್ ರಸ್ತೆ ಇಂದಿನಿಂದ ಸೀಲ್ ಡೌನ್

    ಬಾಪೂಜಿನಗರಕ್ಕೆ ಬಿಗ್ ರಿಲೀಫ್- ಚಾಂದಾನಿ ಚೌಕ್ ರಸ್ತೆ ಇಂದಿನಿಂದ ಸೀಲ್ ಡೌನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಒಂದು ಕಡೆಗೆ ಗುಡ್ ನ್ಯೂಸ್, ಇನ್ನೊಂದು ಕಡೆಗೆ ಬ್ಯಾಡ್ ನ್ಯೂಸ್. ಅದೇನೆಂದರೆ ಒಂದೆಡೆ ಸೀಲ್ ಡೌನ್ ಓಪನ್, ಇನ್ನೊಂದೆಡೆ ಕ್ಲೋಸ್ ಮಾಡಲಾಗಿದೆ.

    ಹೌದು. ಕೊರೊನಾ ಸೋಂಕು ಕಂಡುಬಂದಿದ್ದರಿಂದ ಬಾಪೂಜಿನಗರದಲ್ಲಿ ಹೇರಲಾಗಿದ್ದ ಸೀಲ್ ಡೌನ್ ಇಂದಿಗೆ ಮುಕ್ತಾಯವಾಗಲಿದ್ದು, ಪ್ರದೇಶದ ಜನ ನಿಟ್ಟುಸಿರು ಬಿಟ್ಟಂತಾಗಿದೆ. ಇತ್ತ ಶಿವಾಜಿನಗರದ ಚಾಂದಾನಿ ಚೌಕ್ ರಸ್ತೆಯನ್ನು ಇಂದಿನಿಂದ ಸೀಲ್ ಡೌನ್ ಮಾಡಲಾಗುತ್ತಿದ್ದು, ಇಂದಿನಿಂದ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ.

    ಈ ಮೂಲಕ ಒಂದು ಕಡೆ ಕೊರೊನಾದಿಂದ ರಿಲೀಫ್ ಸಿಕ್ಕರೆ ಮತ್ತೊಂದು ಕಡೆ ಕೊರೊನಾ ಆತಂಕ ಆರಂಭವಾಗಿದೆ. ಸೀಲ್ ಡೌನ್ ಮುಕ್ತವಾಗಿರುವುದರಿಂದ ಬಾಪೂಜಿನಗರದಲ್ಲಿ ಜನ ಅಡ್ಡಾದಿಡ್ಡಿ ಓಡಾಡಲು ಆರಂಭಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಹಾಕಿದ್ದ ಎಲ್ಲ ಬ್ಲ್ಯಾಕ್‍ಗಳನ್ನು ಓಪನ್ ಮಾಡಲಾಗಿದೆ. ವಾಹನಗಳು ಒಳಗೆ, ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಪೊಲೀಸರು ಭದ್ರತೆ ಮಾತ್ರ ನೀಡುತ್ತಿದ್ದು, ಅಧಿಕೃತವಾಗಿ ಸಿಕ್ಕ ಮೇಲೆ ಎಲ್ಲ ಬ್ಯಾರಿಕೇಡ್ ಸಹ ಕ್ಲಿಯರ್ ಮಾಡಲಿದ್ದಾರೆ.

    ಈ ಪ್ರದೇಶದಲ್ಲಿ ಕಳೆದ 28 ದಿನಗಳಿಂದ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಬುಧವಾರಕ್ಕೆ ಕಂಟೈನ್ಮೆಂಟ್ ಅವಧಿ ಮುಕ್ತಾಯವಾಗಿದೆ. ಹೀಗಾಗಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಎಲ್ಲ ಬ್ಯಾರಿಕೇಡ್‍ಗಳನ್ನು ಓಪನ್ ಮಾಡಲಾಗಿದೆ. ಇದರಿಂದ ಬಾಪೂಜಿನಗರ ನಿವಾಸಿಗಳು ಫುಲ್ ಖುಷಿಯಾಗಿದ್ದು, ತಮ್ಮ ತಮ್ಮ ವಾಹನಗಳನ್ನು ರಸ್ತೆಗಿಳಿಸಿದ್ದಾರೆ. ಇತ್ತ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಸಹ ಓಪನ್ ಮಾಡಲಾಗಿದ್ದು, ಈ ಮೂಲಕ ಸರಿ ಸುಮಾರು ಒಂದು ತಿಂಗಳ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.

  • ಚಿಕನ್ ಗುನ್ಯಾ ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್

    ಚಿಕನ್ ಗುನ್ಯಾ ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್

    – ಯಶವಂತಪುರದ ಖಾಸಗಿ ಆಸ್ಪತ್ರೆ ಸೀಲ್ ಡೌನ್
    – ಆಸ್ಪತ್ರೆಯಿಂದ ಇತರೆ ರೋಗಿಗಳ ಸ್ಥಳಾಂತರ

    ಬೆಂಗಳೂರು: ಚಿಕನ್ ಗುನ್ಯಾ ಸೋಂಕು ಅಂತ ಖಾಸಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.

    49 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಯಿಂದ ಇತರೆ ರೋಗಿಗಳನ್ನ ಸ್ಥಳಾಂತರಗೊಳಿಸಲಾಗಿದೆ.

    ಸೋಂಕಿತ ಮಹಿಳೆಯು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿರುವ ಮಗನ ಮನೆಗೆ ಮಾರ್ಚ್ 12ರಂದು ಬಂದಿದ್ದರು. ಅವರಿಗೆ ಏಪ್ರಿಲ್ 30ರಂದು ಜ್ಚರ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕನ್ ಗುನ್ಯಾ ಅಂತ ಭಾವಿಸಿ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಮೇ 1ರಂದು ದಾಖಲಾಗಿದ್ದರು. ಆದರೆ ಅವರಿಗೆ ಕೊರೊನಾ ಲಕ್ಷಣಗಳಿರುವ ಶಂಕೆ ವ್ಯಕ್ತಪಡಿಸಿದ ವೈದ್ಯರು ಚಿಕನ್ ಗುನ್ಯಾ ಟೆಸ್ಟ್ ಜೊತೆಗೆ ಕೋವಿಡ್-19 ಪರೀಕ್ಷೆ ಕೂಡ ಮಾಡಿಸಿದ್ದರು. ಈ ವೇಳೆ ಪಾಸಿಟಿವ್ ಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವ್ಯಕ್ತಿ ಶಿಫ್ಟ್ ಮಾಡಲಾಗಿದೆ.

    ಕಳೆದ 3 ದಿನಗಳಿಂದ ಆಸ್ಪತ್ತೆಯಲ್ಲಿ ಮಹಿಳೆ ಅಡ್ಮಿಟ್ ಆಗಿದ್ದರು. ಹೀಗಾಗಿ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಜೊತೆಗೆ ಉಳಿದ ರೋಗಿಗಳನ್ನು ಹಾಗೂ ಸಿಬ್ಬಂದಿಯನ್ನು ಹೋಟೆಲ್ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ.

    ಮಹಿಳೆಯ ಸಂಪರ್ಕದಲ್ಲಿದ್ದ ಮಗ, ಸೊಸೆ, ಖಾಸಗಿ ಆಸ್ಪತ್ರೆಯ 12 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‍ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಮತ್ತು ತ್ರಿವೇಣಿ ರೋಡ್, ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ರೋಡ್ ಸೀಲ್‍ಡೌನ್ ಮಾಡಿ ಬಾಂಬೆ ಡಾಯಿಂಗ್ ರೋಡ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

  • ಮಂಡ್ಯದ ಪೇಟೆ ಬೀದಿ ರಾತ್ರೋರಾತ್ರಿ ಸೀಲ್‍ಡೌನ್

    ಮಂಡ್ಯದ ಪೇಟೆ ಬೀದಿ ರಾತ್ರೋರಾತ್ರಿ ಸೀಲ್‍ಡೌನ್

    ಮಂಡ್ಯ: ರಾಜ್ಯದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜನರು ಮತ್ತಷ್ಟು ಆತಂಕಗೊಂಡಿದ್ದಾರೆ. ಇದೀಗ ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇದರಿಂದ ರಾತ್ರೋರಾತ್ರಿ ಪೇಟೆ ಬೀದಿ ಸೀಲ್‍ಡೌನ್ ಆಗಿದೆ.

    ಪೊಲೀಸ್ ಸಿಬ್ಬಂದಿಯೇ ಮಂಡ್ಯದ ಪ್ರಮುಖ ವಾಣಿಜ್ಯ ಕೇಂದ್ರವಾದ ಪೇಟೆಬೀದಿಯನ್ನು ಸೀಲ್‍ಡೌನ್ ಮಾಡಿದ್ದಾರೆ. ಜುಬಿಲಿಯಂಟ್ ಕಾರ್ಖಾನೆ ನೌಕರೊಬ್ಬನಿಗೆ ಸೋಂಕು ಧೃಡಪಟ್ಟ ಮಾಹಿತಿ ಹಿನ್ನೆಲೆಯಲ್ಲಿ ಪೇಟೆ ಬೀದಿಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಈಗಾಗಲೇ ವ್ಯಾಪಾರಸ್ಥರಿಗೆ ಸರಕು ಸರಂಜಾಮು ಸಾಗಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಪೇಟೆ ಬೀದಿ ರಸ್ತೆಗಳನ್ನು ಬ್ಲಾಕ್ ಮಾಡಿ ಜನರು ಓಡಾಡದಂತೆ ತಡೆಯಲಾಗಿದೆ. ಜೊತೆಗೆ ಜನರು ರಸ್ತೆಗಿಳಿಯದಂತೆ, ಅಂಗಡಿ ಮುಂಗಟ್ಟುಗಳು ತೆರೆಯದಂತೆ ಪೊಲೀಸರು ಕೂಡ ಸೂಚನೆ ಕೊಟ್ಟಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿಯ 60 ವರ್ಷದ ಪುರುಷನಿಗೆ ಶುಕ್ರವಾರ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇವರು ರೋಗಿ ನಂಬರ್ 179ರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶುಕ್ರವಾರ ಒಂದೇ ದಿನ 29 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೇರಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ.

  • ಬಿಬಿಎಂಪಿ ಮೇಲೆ ಗೂಬೆ ಕೂರಿಸಿದ ಶಾಸಕ ಜಮೀರ್ ಅಹ್ಮದ್

    ಬಿಬಿಎಂಪಿ ಮೇಲೆ ಗೂಬೆ ಕೂರಿಸಿದ ಶಾಸಕ ಜಮೀರ್ ಅಹ್ಮದ್

    -ನನ್ನ ಕೇಳಿ ಹೋಗಬೇಕಿತ್ತು
    -ರಾತ್ರಿ ಯಾಕೆ ಹೋದ್ರು?

    ಬೆಂಗಳೂರು: ಈ ರೀತಿಯ ಘಟನೆಗಳು ನಡೆಯಬಾರದಿತ್ತು. ಗಲಾಟೆ ನಡೆಸಿದವರ ಬಗ್ಗೆ ಖಂಡಿತ ಕಠಿಣ ಕ್ರಮ ಜರುಗಿಸಬೇಕು. ರಾತ್ರಿ ವೇಳೆ ಬಿಬಿಎಂಪಿ ಅಧಿಕಾರಿಗಳು ಯಾಕೆ ಪಾದರಾಯನಪುರಕ್ಕೆ ಹೋಗಬೇಕು. ಬೆಳಗ್ಗೆ ಹೋಗಿದ್ದು ತಪ್ಪು ಎಂದು ಬಿಬಿಎಂಪಿ ಮೇಲೆ ಶಾಸಕ ಜಮೀರ್ ಅಹಮದ್ ಗೂಬೆ ಕೂರಿಸಿದ್ದಾರೆ.

    ಕೊರೊನಾ ಶಂಕಿತರನ್ನು ಕರೆದುಕೊಂಡು ಹೋಗುವ ಮುನ್ನ ನನ್ನನ್ನು ಕೇಳಿ ಬೇಕಿತ್ತು. ಡೇ ಟೈಮ್ ನಲ್ಲಿ ಶಂಕಿತರನ್ನು ಕರೆದುಕೊಂಡು ಹೋಗುವಂತೆ ಕಮಿಷನರ್ ಗೆ ಸಹ ಹೇಳಿದ್ದೆ. ರಾತ್ರಿ ಹೋಗುವ ಅಗತ್ಯವೇನಿತ್ತು? ಬಿಬಿಎಂಪಿ ಕಮಿಷನರ್ ಅನಿಲ್ ಜೊತೆ ಸಹ ಮಾತನಾಡಿದ್ದೇನೆ. ಭಾನುವಾರ ಬೆಳಗ್ಗೆಯಿಂದ ನನ್ನ ಪಿಎ ಕಾಯ್ತಾ ಕುಳಿತಿದ್ದರು. ಹೋಟೆಲ್ ಸಿಗದ ಹಿನ್ನೆಲೆಯಲ್ಲಿ ರಾತ್ರಿ ಹೋಗಿದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ನಮಗೆ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸಿದ್ದಾರೆ. ಎಲ್ಲರಿಗೂ ತಿಳುವಳಿಕೆ ಹೇಳಿ ಸೋಂಕು ಶಂಕಿತರನ್ನು ಕರೆದುಕೊಂಡು ಹೋಗುವ ಬದಲು ಮನೆಯ ಮುಂದೆ ವಾಹನ ತೆಗೆದುಕೊಂಡು ನಿಂತಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ.

    ಬಿಬಿಎಂಪಿ ಕಮೀಷನರ್ ಏನ್ ಹೇಳಿದ್ದಾರೆ ಅಂತ ಗೊತ್ತಿಲ್ಲ. ಸೀಲ್‍ಡೌನ್ ಆಗಿದ್ದರಿಂದ ಜನ ಟೆನ್ಷನ್ ನಲ್ಲಿದ್ದಾರೆ. ಹಾಗಾಗಿ ಅಧಿಕಾರಿಗಳು ನನ್ನ ಗಮನಕ್ಕೆ ತರದೇ ಹೋಗಬಾರದಿತ್ತು. ಕೆಲವರು ಮಾಡಿದ ತಪ್ಪಿನಿಂದ ಇಡೀ ಸಮುದಾಯವನ್ನು ಟಾರ್ಗೆಟ್ ಮಾಡಬಾರದು. ಗಲಾಟೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾನೇ ಹೇಳುತ್ತಿದ್ದೇನೆ. ಇಷ್ಟು ದಿನ ಶಾಂತವಾಗಿದ್ದ ಪ್ರದೇಶದಲ್ಲಿ ಗಲಾಟೆ ಹೇಗೆ ನಡೆಯಿತು ನನಗೆ ಶಾಕ್ ಆಗಿದೆ ಎಂದರು.

  • ಪಾದರಾಯನಪುರದ ಘಟನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ: ಬೊಮ್ಮಾಯಿ

    ಪಾದರಾಯನಪುರದ ಘಟನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ: ಬೊಮ್ಮಾಯಿ

    ಬೆಂಗಳೂರು: ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ನಡೆದ ಘಟನೆ ಬಗ್ಗೆ ಕಠಿಒಣ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ ಈಗಾಗಲೇ 60 ಜನರನ್ನ ಬಂಧನ ಮಾಡಲಾಗಿದೆ. ಘಟನೆಯಾದ 3-4 ಗಂಟೆಯಲ್ಲಿ ಎಲ್ಲಾ ಪ್ರಮುಖರನ್ನ ಅರೆಸ್ಟ್ ಮಾಡಿದ್ದೇವೆ. ಪಾದರಾಯನಪುರದ ಘಟನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದೇವೆ ಎಂದರು.

    ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಾರ್ಯಾಚರಣೆ ಮಾಡಿದ್ದೇವೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಸಿಎಂ ಪೊಲೀಸರಿಗೆ ಫ್ರೀ ಹ್ಯಾಂಟ್ ಕೊಟ್ಟಿದ್ದಾರೆ. ಹೀಗಾಗಿ ರಾತ್ರೋ ರಾತ್ರಿ ಕಾರ್ಯಾಚರಣೆ ಮಾಡಿದ್ದೇವೆ. ಇನ್ನೂ ಕಾರ್ಯಾಚರಣೆ ನಡೆದಿದೆ. ಎಲ್ಲರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಘಟನೆಯೇನು?:
    ಭಾನುವಾರ ರಾತ್ರಿ ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಪಾದರಾಯನಪುರದ ಪುಂಡರು ಹಲ್ಲೆ ನಡೆಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದಿದ್ದರಿಂದ ಪುಂಡರ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೊರೊನಾ ಸೋಂಕಿತರ ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪುಂಡರ ಜೀವ ರಕ್ಷಣೆಗೆ ಬಂದವರ ಮೇಲೆಯೇ ದಾಳಿ ನಡೆಸಿದ್ದಾರೆ. ಘಟನೆ ವಿಕೋಪ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕರ್ತವ್ಯನಿರತ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ ಸುಮಾರು 50 ಜನರನ್ನು ರಾತ್ರಿಯೇ ಪೊಲೀಸರು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ.

  • ಪಾದರಾಯನಪುರದಲ್ಲಿ ಪುಂಡರ ಗಲಾಟೆ- ರಕ್ಷಣೆಗೆ ಬಂದವರ ಮೇಲೆ ಅಟ್ಯಾಕ್

    ಪಾದರಾಯನಪುರದಲ್ಲಿ ಪುಂಡರ ಗಲಾಟೆ- ರಕ್ಷಣೆಗೆ ಬಂದವರ ಮೇಲೆ ಅಟ್ಯಾಕ್

    -ಚೆಕ್‍ಪೋಸ್ಟ್ ಒಡೆದು ಹಾಕಿ ನೂರಾರು ಜನ ಗಲಾಟೆ
    -ಸ್ಥಳೀಯರ ಗೂಂಡಾಗಿರಿಗೆ ಕಾಲ್ಕಿತ್ತ ಪೊಲೀಸರು

    ಬೆಂಗಳೂರು: ಪಾದರಾಯನಪುರದಲ್ಲಿ ಪುಂಡರ ಹಾವಳಿ ಮುಂದುವರಿದಿದ್ದು, ಚೆಕ್‍ಪೋಸ್ಟ್ ಒಡೆದು ಹಾಕಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪಾದರಾಯನಪುರದ 58 ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಸಿಬ್ಬಂದಿ ಹೋಗಿದ್ದರು.

    ಇಂದು ರಾತ್ರಿಯಾಗುತ್ತಿದ್ದಂತೆ ಪಾದರಾಯನಪುರದ ಕೆಲ ಪುಂಡರು ರೌಡಿಗಳ ರೀತಿಯಲ್ಲಿ ವರ್ತಿಸಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರೋದನ್ನ ಗಮನಿಸಿದ ಪುಡಿ ರೌಡಿಗಳು ದಾಂಧಲೆಯನ್ನು ನಡೆಸಿದ್ದಾರೆ. ಏಕಾಏಕಿ ವಾಹನಗಳ ಸಮೇತ ಗುಂಪು ಕಟ್ಟಿಕೊಂಡು ಬಂದ ಜನರನ್ನ ನೋಡಿದ ಪೊಲೀಸರು ಒಂದು ಹೆಜ್ಜೆಯನ್ನು ಹಿಂದೆ ಇಟ್ಟಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಶಾ, ಕೆಲ ಯುವಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಭಾನುವಾರ ಆಗಿದ್ದರಿಂದ ಪೊಲೀಸರು ಸಹ ಕಡಿಮೆ ಸಂಖ್ಯೆಯಲ್ಲಿದ್ದರು. ಈ ರೀತಿ ಘಟನೆ ನಡೆದಿದ್ದು, ಇದೇ ಮೊದಲು ಪಾದರಾಯನಪುರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.