Tag: sea

  • ಸಮುದ್ರದಲ್ಲಿ ತೇಲಿ ಬಂದ ಬಾಟಲ್- ಮದ್ಯವೆಂದು ಕುಡಿದು ಮೀನುಗಾರರು ಸಾವು

    ಸಮುದ್ರದಲ್ಲಿ ತೇಲಿ ಬಂದ ಬಾಟಲ್- ಮದ್ಯವೆಂದು ಕುಡಿದು ಮೀನುಗಾರರು ಸಾವು

    ಚೆನ್ನೈ: ಸಮುದ್ರದಲ್ಲಿ ತೇಲಿಬಂದ ಬಾಟಲ್‍ನಲ್ಲಿರುವುದು ವಿದೇಶಿ ಮದ್ಯ ಎಂದು ಕುಡಿದು ಮೂವರು ಮೀನುಗಾರರು ಪ್ರಾಣಬಿಟ್ಟಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ.

    ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಆಂತೋನಿಸಾಮಿ (38) ಅರೋಕಿಯಾ ಪ್ರೊಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಈ ಮೂವರು ಸಮುದ್ರದಲ್ಲಿ ತೇಲಿ ಬರುತ್ತಿರುವ ಬಾಟಲ್ ನೋಡಿ ವಿದೇಶಿ ಮದ್ಯ ಎಂದು ಕುಡಿದು ಪ್ರಾಣ ಬಿಟ್ಟಿದ್ದಾರೆ.

    ಈ ಮೂವರು ಮೀನು ಹಿಡಿಯಲು ಬೋಟ್‍ನಲ್ಲಿ ಸಮುದ್ರಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ತೇಲುತ್ತಿರುವ ಬಾಟಲ್ ನೋಡಿ ಮದ್ಯ ಎಂದು ಆಸೆಯಿಂದ ಕುಡಿದಿದ್ದಾರೆ. ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ. ಆಂತೋನಿಸಾಮಿ ತೀರಕ್ಕೆ ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದಾನೆ. ಅರೋಕಿಯಾ ಪ್ರೊಹಿತ್ ಹಾಗೂ ವಿನೋದ್ ಕುಮಾರ್ ನಾಗಪಟ್ಟಿಣಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆಪ್ರಾಣಬಿಟ್ಟಿದ್ದಾರೆ.

    ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಭದ್ರತಾ ಪಡೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

  • ಭಾರೀ ಗಾತ್ರದ ತಿಮಿಂಗಲ ಕಳೇಬರ ಪತ್ತೆ

    ಭಾರೀ ಗಾತ್ರದ ತಿಮಿಂಗಲ ಕಳೇಬರ ಪತ್ತೆ

    ಭುವನೇಶ್ವರ: ಭಾರೀ ಗಾತ್ರದ ತಿಮಿಂಗಲ ಶಾರ್ಕ್ ಕಳೇಬರವು ಒಡಿಶಾದ ಹಳ್ಳಿಯೊಂದರ ನಾಲೆಯಲ್ಲಿ ಪತ್ತೆಯಾಗಿದೆ.

    ಬಾಲಾಸೋರ್ ಜಿಲ್ಲೆಯ ಖಾಂತಪಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಂತಿಛೇರಾ ಗ್ರಾಮ ಸಮೀಪ ಕಳೆಬರ ಕಾಣಿಸಿಕೊಂಡಿದೆ. ಸಮುದ್ರದಿಂದ ಸಂಪರ್ಕ ಕಲ್ಪಿಸುವ ನಾಲೆಯೆಲ್ಲಿ ತಿಮಿಂಗಲ ಹೇಗೆ ಬಂತು ಎನ್ನುವ ಮಾಹಿತಿ ಇಲ್ಲ.

    ತಿಮಿಂಗಲದ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನಾಲೆಯಲ್ಲಿರುವ ತಿಮಿಂಗಲ ಕಳೇಬರವನ್ನು ಹೊರಗೆ ತೆಗೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಾರೀ ಗಾತ್ರದ ತಿಮಿಂಗಲು ನೋಡಲು ಸ್ಥಳೀಯರು ಸೇರಿದ್ದರು.

    ಮೂರು ದಿನಗಳ ಹಿಂದೆ ಮೀನುಗಾರರು ಒಂದು ತಿಮಿಂಗಲವನ್ನು ಹಿಡಿದು ತಂದಿದ್ದರು. ಆದರೆ ಈ ವಿಚಾರವಾಗಿ ಸ್ಥಳೀಯರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ ಹಿನ್ನೆಲೆ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

  • ಬೀಚ್‍ನಲ್ಲಿ 41 ಕೆ.ಜಿ ತೂಕದ ಲೋಹದ ಚೆಂಡು ಪತ್ತೆ

    ಬೀಚ್‍ನಲ್ಲಿ 41 ಕೆ.ಜಿ ತೂಕದ ಲೋಹದ ಚೆಂಡು ಪತ್ತೆ

    ವಾಷಿಂಗ್ಟನ್: ಬೀಚ್‍ನಲ್ಲಿ 41 ಕೆ.ಜಿ ತೂಕದ ಲೋಹದ ಚೆಂಡು ಬಹಮಾಸ್ ಕಡಲ ತೀರದಲ್ಲಿ ಪತ್ತೆಯಾಗಿದೆ.

    ಬ್ರಿಟನ್ ಮೂಲದ ಮಹಿಳೆ ಮನೋನ್ ಕ್ಲಾರ್ಕ್ ಸಮುದ್ರ ದಡದಲ್ಲಿ ಬಿದ್ದಿದ್ದ ಲೋಹದ ಚೆಂಡನ್ನು ನೋಡಿ ಮರಳಿನಿಂದ ಹೊರಗೆ ತೆಗೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ 41 ಕೆ.ಜಿ ತೂಕ ಇರುವುದರಿಂದ ಒಬ್ಬರ ಕೈಯಲ್ಲಿ ತೆಗೆಯಲು ಸಾಧ್ಯವಾಗಿಲ್ಲ ಎಂದು ಒಂದು ಫೋಟೋವನ್ನು   ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಚೆಂಡಿನ ಮೇಲೆ ರಷ್ಯನ್ ಭಾಷೆಯಲ್ಲಿ ಬರೆದಿರುವ ಬರಹವಿದೆ. ಈ ಚೆಂಡು ಬರೋಬ್ಬರಿ 41 ಕೆ.ಜಿ ತೂಕವನ್ನು ಹೊಂದಿದೆ. ಈ ಲೋಹದ ಚೆಂಡು ಇಲ್ಲಿ ಹೇಗೆ ಬಂತು ಎಂಬ ಕುರಿತಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

    ಇದು ಯಾವುದೋ ರಾಕೆಟ್‍ನ ಹೈಡ್ರಾಜೈನ್ ಪ್ರೊಪೆಲ್ಲಂಟ್ ಟ್ಯಾಂಕ್‍ನದ್ದಾಗಿರಬಹುದು ಎಂದು ಶೇ.99ರಷ್ಟು ಗ್ಯಾರಂಟಿ ಇದೆ ಎಂದು ಗಗನಯಾತ್ರಿಯೊಬ್ಬರು ಹೇಳಿದ್ದಾರೆ. 41 ಕೆ.ಜಿ ತೂಕದ ಲೋಹದ ಚೆಂಡಿನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

  • ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ

    ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ

    – ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಕುಟುಂಬ

    ಕಾರವಾರ: ಸಮುದ್ರ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಕಡಲ ತೀರದಲ್ಲಿ ನಡೆದಿದೆ.

    ಸಂಜನ (15), ಸಂಜಯ್ (18),ಕಮಲಮ್ಮ (40) ರಕ್ಷಣೆಗೊಳಗಾದವವಾಗಿದ್ದಾರೆ. ಮೂಲತಃ ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಗಳಾದ ಇವರು ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಸಮುದ್ರದಲ್ಲಿ ಮುಳುಗುತ್ತಿದ್ದ ಇವರನ್ನು ಗಮನಿಸಿದ ಓಷನ್ ಅಡ್ವೇಂಚರ್ ನ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ತಕ್ಷಣ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.

    ಒಂದೇ ಕುಟುಂಬದ ಐವರು ಸೇರಿ ವೀಕೆಂಡ್ ಮಸ್ತಿ ಮಾಡಲು ಬೆಂಗಳುರಿನಿಂದ ಮುರುಡೇಶ್ವರಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ಈಜಾಡಲು ನೀರಿಗೆ ಇಳಿದಿದ್ದಾರೆ. ಆಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ರಕ್ಷಣೆ ಮಾಡಿ ಮೂವರ ಪ್ರಾಣವನ್ನು ಕಾಪಾಡಿದ್ದಾರೆ.

    ಲೈಫ್ ಗಾರ್ಡ ನೇಮಕಕ್ಕೆ ಆಗ್ರಹ
    ಮುರುಡೇಶ್ವರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸಮುದ್ರದಲ್ಲಿ ಮೋಜು ಮಸ್ತಿ ಮಾಡುವ ಇವರು, ಯಾವುದೇ ಸುರಕ್ಷಾ ಸಾಧನವಿಲ್ಲದೇ ಸಮುದ್ರಕ್ಕೆ ಇಳಿದು ಅಲೆಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಈ ಭಾಗದಲ್ಲಿ ಲೈಫ್ ಗಾರ್ಡಗಳನ್ನು ನಿಯೋಜನೆ ಮಾಡಿಲ್ಲ. ಹೀಗಾಗಿ ಪ್ರವಾಸಕ್ಕೆ ಬಂದ ಜನರು ಸಮುದ್ರ ಪಾಲಾದಾಗ ರಕ್ಷಣೆ ಮಾಡುವುದೇ ಒಂದು ಸವಾಲಾಗಿದ್ದು, ಸ್ಥಳೀಯ ಮೀನುಗಾರರು ಹಾಗೂ ಅಡ್ವೇಂಚರ್ ಕಂಪನಿಯ ಕೆಲಸಗಾರರೇ ಲೈಪ್ ಗಾರ್ಡನಂತೆ ಪ್ರವಾಸಿಗರ ಜೀವ ರಕ್ಷಣೆ ಮಾಡುತಿದ್ದಾರೆ. ಹೀಗಾಗಿ ತಕ್ಷಣ ಜಿಲ್ಲೆಯ ಪ್ರಮುಖ ಕಡಲತೀರದಲ್ಲಿ ಲೈಪ್ ಗಾರ್ಡ ನೇಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಸಾಹಸ – ವಿಡಿಯೋ ವೈರಲ್

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಸಾಹಸ – ವಿಡಿಯೋ ವೈರಲ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಪವರ್ ಸ್ಟಾರ್ ಹಂಚಿಕೊಂಡಿರುವ ಬ್ಯಾ ಡೈವ್‍ನ ಒಂದು ವೀಡಿಯೋವನ್ನು ಪ್ರಕಟಿಸಿದ್ದಾರೆ.

    ಪವರ್ ಸ್ಟಾರ್ ಸಮುದ್ರದಲ್ಲಿ ಬ್ಯಾಕ್ ಡೈವ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಇದು ಹೇಗೆ ಎಂದು ಅಚ್ಚರಿಯ ಕಾಮೆಂಟ್ ಮಾಡುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ‘ಬ್ಯಾಕ್ ಡೈವ್ ನೆನಪು. ವಿಭಿನ್ನ ಪ್ರಪಂಚಕ್ಕೆ ಡೈವ್ ಮಾಡುತ್ತಿರುವುದು’ ಎಂದು ಬರೆದುಕೊಂಡು ಡೈವ್ ಮಾಡುತ್ತಿರುವ ವೀಡೀಯೋವನ್ನು  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋಗೂ ಮೊದಲು ಅಪ್ಪು ದಯವಿಟ್ಟು ಯಾರು ಈ ರೀತಿ ಪ್ರಯತ್ನ ಮಾಡಬೇಡಿ ಎನ್ನುವ ಸೂಚನೆ ನೀಡಿದ್ದಾರೆ. ಪವರ್ ಸ್ಟಾರ್ ಸಾಹಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

    ಮುರುಡೇಶ್ವರ ಕಡೆ ಪ್ರವಾಸ ಮಾಡಿದ್ದರು. ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಇದೀಗ ನೇತ್ರಾಣಿಯಲ್ಲಿ ಬ್ಯಾಕ್ ಡೈವ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ನಟನೆ ಮಾತ್ರವಲ್ಲದೇ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಎಂದು ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೆಲ್ಲವನ್ನು ಮೀರಿಸುವ ಹೊಸ ಸಾಹಸವನ್ನು ಪವರ್ ಸ್ಟಾರ್ ಮಾಡಿದ್ದಾರೆ. ಸಾಹಸದ ವೀಡಿಯೋಗೆ ಈಗ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಪವರ್ ಸ್ಟಾರ್, ಪುನೀತ್ ರಾಜ್ ಕುಮಾರ್, ಬ್ಯಾಕ್ ಡೈವ್, ಪಬ್ಲಿಕ್ ಟವಿ, ಸ್ಯಾಂಡಲ್‍ವುಡ್, ಸಿನಿಮಾ, ಸಮುದ್ರ, ವೀಡಿಯೋ ವೈರಲ್, ಸೋಷಿಯಲ್ ಮೀಡಿಯಾ

  • ಮೋಜಿಗಾಗಿ ಸಮುದ್ರಕ್ಕಿಳಿದ- ಪ್ರಾಣ ಉಳಿಸಲು ಹೋಗಿ ಬೆಂಗಳೂರಿನ ಮೂವರು ಗೋಕರ್ಣದಲ್ಲಿ ಸಮುದ್ರಪಾಲು

    ಮೋಜಿಗಾಗಿ ಸಮುದ್ರಕ್ಕಿಳಿದ- ಪ್ರಾಣ ಉಳಿಸಲು ಹೋಗಿ ಬೆಂಗಳೂರಿನ ಮೂವರು ಗೋಕರ್ಣದಲ್ಲಿ ಸಮುದ್ರಪಾಲು

    – ಇಬ್ಬರನ್ನು ರಕ್ಷಿಸಿದ ಮೀನುಗಾರರು

    ಕಾರವಾರ: ಸಮುದ್ರದಲ್ಲಿ ಆಟವಾಡುತಿದ್ದ ಪ್ರವಾಸಿಗರಲ್ಲಿ ಮೂರು ಜನ ಅಲೆಗೆ ಸಿಲುಕಿ ಸಾವು ಕಂಡು, ಇಬ್ಬರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

     

    ಬೆಂಗಳೂರಿನಿಂದ ಇಂದು 16 ಜನ ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸಿದ್ದರು. ಊಟ ಮಾಡಿ ದೇವರ ದರ್ಶನ ಪಡೆಯಲು ಹೊರಟವರಲ್ಲಿ ತಿಪ್ಪೇಶ್ ಎಂಬ ಯುವಕ ಮೋಜಿಗಾಗಿ ಸಮುದ್ರಕ್ಕಿಳಿದಿದ್ದ. ಈ ವೇಳೆ ಯುವಕ ಸೇರಿ ಆತನನ್ನು ರಕ್ಷಿಸಲು ತೆರಳಿದ್ದ ಇಬ್ಬರು ನೀರು ಪಾಲಾಗಿದ್ದಾರೆ.

    ಈ ವೇಳೆ ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳೆದಿದೆ. ಇದನ್ನು ಗಮನಿಸಿದ ಯುವತಿ ಸುಮಾ ಆತನ ರಕ್ಷಣೆಗಾಗಿ ಧಾವಿಸಿದ್ದಾಳೆ. ಆದರೆ ಆಕೆಯೂ ಅಲೆಯ ಹೊಡೆತಕ್ಕೆ ನೀರುಪಾಲಾಗಿದ್ದು, ಬಳಿಕ ರವಿ ಹಾಗೂ ಈತನೊಂದಿಗಿದ್ದ ರತ್ನಮ್ಮ, ಪವಿತ್ರ ಇವರನ್ನು ರಕ್ಷಿಸಲು ಧಾವಿಸಿದ್ದಾರೆ ದುರಾದೃಷ್ಟವಶಾತ್ ರವಿ ಕೂಡ ನೀರು ಪಾಲಾಗಿದ್ದು, ಪವಿತ್ರ ಹಾಗೂ ರತ್ನಮ್ಮ ಅವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೇಕಾಫ್ ಆದ ನಾಲ್ಕೇ ನಿಮಿಷದಲ್ಲಿ ಸಮುದ್ರದಲ್ಲಿ ಪತನವಾದ ವಿಮಾನ

    ಟೇಕಾಫ್ ಆದ ನಾಲ್ಕೇ ನಿಮಿಷದಲ್ಲಿ ಸಮುದ್ರದಲ್ಲಿ ಪತನವಾದ ವಿಮಾನ

    – ಪ್ರಯಾಣಿಕರು ಮೃತಪಟ್ಟಿರುವ ಶಂಕೆ
    – ಮೀನುಗಾರರಿಗೆ ದೊರೆತ ವಿಮಾನದ ಅವಶೇಷಗಳು

    ಜಕಾರ್ತ: ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಟೇಕ್ ಆಫ್ ಆದ 4 ನಿಮಿಷದಲ್ಲೇ ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನವಾಗಿದೆ.

    ವಿಮಾನ ನಿಲ್ದಾಣದಿಂದ ಹೊರಟ ವಿಮಾನವೊಂದು ಹಾರಾಟ ಆರಂಭಿಸಿದ ನಾಲ್ಕೇ ನಿಮಿಷದಲ್ಲಿ ಸಂಪರ್ಕ ಕಡಿತವಾಗಿಸಿಕೊಂಡು ನಾಪತ್ತೆಯಾಗಿತ್ತು. ಇದೀಗ ಈ ವಿಮಾನ ಸಮುದ್ರದಲ್ಲ ಪತನವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ.

    10 ಸಾವಿರ ಅಡಿಯಿಂದ ವಿಮಾನ ಸಮುದ್ರಕ್ಕೆ ಬಿದ್ದಿದ್ದೆ ಎಂದು ಹೇಳಲಾಗುತ್ತಿದೆ. ಈ ವಿಮಾನದಲ್ಲಿ 62 ಜನ ಪ್ರಯಾಣಿಸುತ್ತಿದ್ದರು. ಸಮುದ್ರಕ್ಕೆ ವಿಮಾನ ಬಿದ್ದಿರುವ ಹಿನ್ನೆಲೆ ಬದುಕುಳಿದಿರುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಈ ಘಟನೆಯ ಕುರಿತಾಗಿ ಇಂಡೋನೇಷೀಯಾ ಸರ್ಕಾರವು ಅಧಿಕೃತವಾದ ಮಾಹಿತಿಯನ್ನು ನೀಡಿಲ್ಲ.

    ಮೀನುಗಾರರಿಗೆ ವಿಮಾನದ ಅವಶೇಷಗಳು ದೊರೆತಿವೆ. ಈ ಹೀಗಾಗಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಸಿಕ್ಕಿರುವ ಅವಶೇಷಗಳು ನಾಪತ್ತೆಯಾಗಿರುವ ವಿಮಾನಕ್ಕೆ ಸೇರಿದ ವಸ್ತುಗಳಾ ಎಂಬುದಕ್ಕೆ ನಿಖರವಾದ ಮಾಹಿತಿಲ್ಲ. ಕೇಬಲ್, ಹರಿದ ಜೀನ್ಸ್ ಪ್ಯಾಂಟಿನ ತುಂಡು, ಲೋಹದ ಅವಶೇಷಗಳು, ನೀರಿನಲ್ಲಿ ತೇಲುತ್ತಿದ್ದವು. ಹೀಗಾಗಿ ಮೀನಿಗಾರರಿಗೆ ನೂರ್ಹಾಸನ್ ದ್ವೀಪದಲ್ಲಿ ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಮಳೆ ಇರುವ ಕಾರಣದಿಂದಾಗಿ ವಿಮಾನ ನಿಲ್ದಾಣದಿಂದ 30 ನಿಮಿಷಗಳ ಕಾಲ ವಿಳಂಬವಾಗಿ ಹೊರಟ್ಟಿತ್ತು. ಕಾಲಿಮಂತನ್ ಪ್ರಾಂತ್ಯದಿಂದ ಪಾಂಟಿಯಾನಾಕ್‍ಗೆ ಹೊರಡಲು ಟೇಕ್ ಆಫ್ ಆಗಿರುವ ಕೆಲವೆ ನಿಮಿಷಗಳಲ್ಲಿ ನಾಪತ್ತೆಯಾದೆ. ಈ ವಿಮಾನ 26 ವರ್ಷ ಹಳೆಯ ವಿಮಾನವಾಗಿತ್ತು. 2018 ರಲ್ಲಿ ನಡೆದ ಜಕಾರ್ತ ಲಯನ್ ವಿಮಾನ ಪತನವಾಗಿ 189 ಮಂದಿ ಸಾವನ್ನಪ್ಪಿದ್ದರು. 2014ರಲ್ಲಿ ಇಂಡೋನೇಷ್ಯಾದ ಸುರಬಯಾದಿಂದ ಸಿಂಗಾಪುರಕ್ಕೆ ತೆರಳಿದ್ದ ಏರ್ ಏಷ್ಯಾ ವಿಮಾನ ಸಮುದ್ರಕ್ಕೆ ಅಪ್ಪಳಿಸಿ 162 ಮಂದಿ ಸಾವಿಗೀಡಾಗಿದ್ದರು.

  • ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

    ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

    ಮಂಗಳೂರು: ಸಾಧನೆ ಮಾಡಬೇಕು ಅದು ಎಲ್ಲರೂ ಗುರುತಿಸುವಂತಾಗಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಅಂತೆಯೇ ಇಲ್ಲೊಬ್ಬರು ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಅದು ಕೂಡ ಕಾಲಿಗೆ ಸರಪಳಿ ಬಿಗಿದು, ಪದ್ಮಾಸನ ಹಾಕಿಕೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಮುದ್ರದಲ್ಲಿ ಈಜುವ ಮೂಲಕ. ಇವರ ಈ ಸಾಧನೆ ಅರ್ಹವಾಗಿಯೇ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲೆಯಾಗಿದೆ.

    ಅಂದಹಾಗೆ ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಸಾಧಕನ ಹೆಸರು ನಾಗರಾಜ್ ಖಾರ್ವಿ. ಇವರು ವೃತ್ತಿಯಲ್ಲಿ ಶಿಕ್ಷಕರು. ಬಾಲ್ಯದಿಂದಲೇ ಈಜು ಬಲ್ಲವರಾಗಿದ್ದ ಇವರು ಅನೇಕ ವಿದ್ಯಾರ್ಥಿಗಳಿಗೆ ಈಜು ತರಬೇತಿಯನ್ನೂ ನೀಡಿದವರು. ಇವರು ಕೆಲ ವರ್ಷಗಳ ಹಿಂದೆ ಯೋಗಾಭ್ಯಾಸವನ್ನು ಕಲಿತಿದ್ದರು. ಈಜುವುದರಲ್ಲಿ ಯೋಗವನ್ನು ಯಾಕೆ ಅಳವಡಿಕೆ ಮಾಡಿಕೊಳ್ಳಬಾರದು ಎನ್ನುವ ಯೋಚನೆಯಂತೆ ಪದ್ಮಾಸನ ಹಾಕಿ ಈಜಲು ಅಭ್ಯಾಸ ಮಾಡಲಾರಂಭಿಸಿದರು. ಅದರ ಫಲವಾಗಿಯೇ ಇದೀಗ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಈ ಸಾಧನೆ ದಾಖಲಾಗಿದೆ.

    ಪ್ರವಾಸಿಗರ ನೆಚ್ಚಿನ ಬೀಚ್ ತಣ್ಣೀರುಬಾವಿಯಲ್ಲಿ ಕುತೂಹಲದಿಂದ ನೆರೆದಿದ್ದ ಜನರ ಮಧ್ಯೆ ನಾಗರಾಜ್ ಖಾರ್ವಿ ಅವರು ಕಡಲಿನಲ್ಲಿ ಸಾಧನೆ ಮಾಡಿದ್ರು. ನೂರಾರು ಜನರ ಸಮ್ಮುಖದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಆಳ ಸಮುದ್ರಕ್ಕೆ ಇಳಿದೇ ಬಿಟ್ಟರು. ಬ್ರೆಸ್ಟ್ ಸ್ಟ್ರೋಕ್ ಮೂಲಕ ಈಜುತ್ತಾ ಒಂದು ಕಿಲೋ ಮೀಟರ್ ದೂರದ ಗುರಿಯನ್ನ ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಲಗ್ಗೆ ಇಟ್ಟರು. ಸಮುದ್ರದ ಅಬ್ಬರ ಅಲೆಗಳ ಒತ್ತಡದ ಮಧ್ಯೆಯೂ ನಾಗರಾಜ್ ಖಾರ್ವಿ 25 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿ ನೆರೆದಿದ್ದವರನ್ನ ಹುಬ್ಬೇರಿಸುವಂತೆ ಮಾಡಿದ್ರು.

    ನಾಗರಾಜ್ ಖಾರ್ವಿ ಅವರು ಈ ರೀತಿ ಸಾಧನೆಯನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಾಗರಾಜ್ ಖಾರ್ವಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಗುರುಗಳಾದ ಬಿಕೆ ನಾಯ್ಕ್ ಅವರ ಸಹಾಯದಿಂದ ಲಿಮ್ಕಾ ದಾಖಲೆಗೂ ಕಾಲಿಟ್ಟಿದ್ದಾರೆ. ಇದೇ ಸ್ಫೂರ್ತಿಯಿಂದ ಯೋಗಾಸನಕ್ಕೂ ಅಗತ್ಯ ಪ್ರೋತ್ಸಾಹ ಸಿಗಬೇಕೆನ್ನುವ ನಿಟ್ಟಿನಲ್ಲಿ ಪದ್ಮಾಸನ ಮೂಲಕ ತಣ್ಣೀರುಬಾವಿ ಬೀಚ್‍ನಲ್ಲಿ ವಿಶಿಷ್ಟ ಸಾಧನೆಗೈದರು. ಈ ವೇಳೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೆಲ್ಲಕ್ಕೂ ಮಿಕ್ಕಿ ನಾಗರಾಜ್ ಖಾರ್ವಿ ಗುರುಗಳೇ ಮುಂದೆ ನಿಂತು ಶಿಷ್ಯನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

    ವೃತ್ತಿಯಲ್ಲಿ ಶಿಕ್ಷಕರಾದರೂ ಈಜುಗಾರಿಕೆಯಲ್ಲಿ ಇವರು ತೋರಿಸಿರುವ ಸಾಧನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಜಿನ ಜೊತೆಗೆ ಪದ್ಮಾಸನ ಭಂಗಿ ಮೂಲಕ ಯೋಗಾಸನವನ್ನು ಪ್ರಚುರಪಡಿಸಿದ ವಿಚಾರವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

  • ಮಂಗಳೂರಿನಲ್ಲಿ ಮೀನುಗಾರಿಕಾ ಬೋಟ್ ದುರಂತ – 6 ಜನ ನಾಪತ್ತೆ, ಇಬ್ಬರ ಮೃತದೇಹ ಪತ್ತೆ

    ಮಂಗಳೂರಿನಲ್ಲಿ ಮೀನುಗಾರಿಕಾ ಬೋಟ್ ದುರಂತ – 6 ಜನ ನಾಪತ್ತೆ, ಇಬ್ಬರ ಮೃತದೇಹ ಪತ್ತೆ

    ಮಂಗಳೂರು: ಸಮುದ್ರ ಮಧ್ಯೆ ನಡೆದ ಬೋಟ್ ದುರಂತದಲ್ಲಿ ಆರು ಮಂದಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ದಕ್ಕೆಯಿಂದ ನಿನ್ನೆ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ಹೆಸರಿನ ಪರ್ಸೀನ್ ಬೋಟ್ ದುರಂತಕ್ಕೀಡಾಗಿದೆ. 25 ಜನರ ತಂಡ ಪರ್ಸೀನ್ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇನ್ನೇನು ಮೀನುಗಾರಿಕೆ ಮುಗಿಸಿ ವಾಪಾಸು ದಡಕ್ಕೆ ಆಗಮಿಸುತ್ತಿದ್ದರು. ತಡರಾತ್ರಿ ಮೀನು ತುಂಬಿಸಿಕೊಂಡು ವಾಪಸ್ ಬರುವಾಗ ಅಳಿವೆ ಬಾಗಿಲು ಸಮೀಪ ಬೋಟು ತಿರುವು ಪಡೆಯುವ ವೇಳೆ ಪಲ್ಟಿಯಾಗಿದೆ.

    ಘಟನೆಯಲ್ಲಿ ಆರು ಜನ ಕಣ್ಮರೆಯಾಗಿದ್ದರೆ, 19 ಜನ ಇನ್ನೊಂದು ಸಣ್ಣ ಡಿಂಕಿ ಬೋಟ್ ಮೂಲಕ ದಡ ಸೇರಿದ್ದಾರೆ. ನಾಪತ್ತೆಯಾದ ಎಲ್ಲರೂ ಮಂಗಳೂರು ಮೂಲದವರೆ ಆಗಿದ್ದಾರೆ. ಬೋಟ್ ಸಂಪೂರ್ಣ ಪಲ್ಟಿಯಾಗಿದ್ದರಿಂದ ಮೀನುಗಾರರಿಗೆ ವೈಯರ್ ಲೆಸ್ ಮೂಲಕ ರಕ್ಷಣೆಗೆ ಸಂದೇಶ ನೀಡುವುದಕ್ಕೆ ಸಾಧ್ಯವಾಗಿಲ್ಲ. ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಳುಗುತಜ್ಞರು, ಕೋಸ್ಟಲ್ ಗಾರ್ಡ್ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

    ಸದ್ಯ ನಾಪತ್ತೆಯಾಗಿರುವ ಆರು ಜನರಲ್ಲಿ ಬೊಕ್ಕಪಟ್ನ ನಿವಾಸಿಗಳಾದ ಪ್ರೀತಂ, ಪಾಡುರಂಗ ಸುವರ್ಣ ಎಂಬವರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ನಾಲ್ಕೂ ಜನ ಝಿಯಾವುಲ್ಲ, ಅನ್ಸಾರ್, ಹಸೈನಾರ್, ಚಿಂತನ್‍ಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಘಟನೆಯಿಂದಾಗಿ ಕಡಲಮಕ್ಕಳು ಆತಂಕಕ್ಕೀಡಾಗಿದ್ದಾರೆ. ಮೃತ ಕುಟಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇವರನ್ನೇ ನಂಬಿದ್ದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂಬ ಒತ್ತಾಯವು ಕೇಳಿಬಂದಿದೆ.

  • ಕಾರವಾರ ಸಮುದ್ರದ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ!

    ಕಾರವಾರ ಸಮುದ್ರದ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ!

    – ಏನು ಹೇಳುತ್ತೆ ವಿಜ್ಞಾನ..?

    ಕಾರವಾರ: ರಾತ್ರಿಯಿಂದ ಮುಂಜಾನೆವರೆಗೆ ಕಡಲ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ ಕಾರವಾರದ ತಿಳಮಾತಿ ಬೀಚಿನಿಂದ ಕಾಳಿ ಸಂಗಮದವರೆಗೂ ಕಾಣುತ್ತಿದ್ದು, ಸಮುದ್ರ ತೀರದಲ್ಲಿ ಮುಂಜಾನೆ ಹೆಜ್ಜೆ ಹಾಕುವ ವಾಯು ವಿಹಾರಿಗಳಿಗೆ ಈ ನೀಲಿ ಬೆಳಕಿನ ವಿಸ್ಮಯ ಗೋಚರಿಸಿದೆ.

    ಹೌದು. ತಿಳಮಾತಿ ಬೀಜಿನಿಂದ ಕಾರವಾರದ ಕಾಳಿ ಸಂಗಮದ ಸಮುದ್ರ ತೀರದಲ್ಲಿ ಪಾಚಿಗಳು ಹೇರಳವಾಗಿ ಬಂದು ಸೇರುತ್ತಿದೆ. ಈ ಪಾಚಿಗಳು ಸಮುದ್ರದ ಅಲೆಗೆ ತೇಲಿ ಬರುತ್ತಿದ್ದು ಕೆಲತೀರವನ್ನು ಆವರಿಸಿದೆ. ಹೀಗಾಗಿ ಮುಂಜಾನೆ ವಾಯು ವಿಹಾರಕ್ಕೆ ತೆರಳಿದವರ ಹೆಜ್ಜೆ ಗುರುತುಗಳಲ್ಲಿ ನೀಲಿ ಬಣ್ಣಗಳ ಬೆಳಕು ಮೂಡಿ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸಿದೆ.

    ನೀಲಿ ಬೆಳಕಿನ ವಿಸ್ಮಯಕ್ಕೆ ವೈಜ್ಞಾನಿಕ ಕಾರಣವೇನು?:
    ವೈಜ್ಞಾನಿಕವಾಗಿ ‘ಡೈನೋಫ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್’ (Dinoflagellate Noctiluca scintillans) ಎಂಬ ಸೂಕ್ಷ್ಮಜೀವಿಗಳು ದೇಹದಿಂದ ರಾಸಾಯನಿಕವನ್ನು ಸ್ರವಿಸಿದಾಗಿ ನೀಲಿ ಬಣ್ಣದ ಬೆಳಕು ಮೂಡುತ್ತದೆ. ಮಿಂಚುಹುಳುವಿನ ಮಾದರಿಯಲ್ಲಿ ಹೊಳೆಯುತ್ತವೆ. ಒಂದೇ ಜೀವಕೋಶ ಹೊಂದಿರುವ ಈ ಸೂಕ್ಷ್ಮಜೀವಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿದಾಗ ಇಂತಹ ವಿದ್ಯಮಾನ ಗೋಚರಿಸುತ್ತದೆ ಎಂದು ವಿಜ್ಞಾನ ಜಗತ್ತು ಹೇಳುತ್ತದೆ.

    ಈ ಕುರಿತು ಮಾಹಿತಿ ನೀಡಿದ ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ, ಕಳೆದ ಬಾರಿ ಭಟ್ಕಳದವರೆಗೂ ಕಡಲತೀರದಲ್ಲಿ ಕಾಣಿಸಿಕೊಂಡಿದ್ದವು. ಈ ಬಾರಿ ಗೋಕರ್ಣದವರೆಗೂ ಗೋಚರಿಸಿದ್ದಾಗಿ ತಿಳಿದುಬಂದಿದೆ. ಸಮುದ್ರದಲ್ಲಿ ಅವುಗಳಿಗೆ ಪೂರಕವಾದ ವಾತಾವರಣ ಕಂಡುಬಂದಾಗ ಹುಲುಸಾಗಿ ಬೆಳೆಯುತ್ತವೆ ಎಂದರು.

    ನದಿಯಲ್ಲಿರುವ ಪೋಷಕಾಂಶಗಳು ಮಳೆಗಾಲದಲ್ಲಿ ಸಮುದ್ರಕ್ಕೆ ಸೇರುತ್ತವೆ. ಜೊತೆಗೆ ಅದೆಷ್ಟೋ ಚರಂಡಿಗಳ ನೀರು ಕೂಡ ಸಮುದ್ರದಲ್ಲಿ ವಿಲೀನವಾಗುತ್ತದೆ. ಇದರಿಂದ ಆಲ್ಗೆಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸಿಗುತ್ತದೆ. ಜೊತೆಗೆ ಬಿಸಿಲು ಕೂಡ ಇರುವುದು ಅವುಗಳಿಗೆ ಅನುಕೂಲಕರ ವಾತಾವರಣ ಉಂಟುಮಾಡುತ್ತದೆ. ಸಮುದ್ರದಾಳದಲ್ಲಿ ಹೂಳೆತ್ತುವಂಥ ಕಾರ್ಯಗಳ ಮೂಲಕ ಮನುಷ್ಯನ ಹಸ್ತಕ್ಷೇಪ ಹೆಚ್ಚಾಗುವುದೂ ಇದಕ್ಕೆ ಕಾರಣಗಳಲ್ಲಿ ಒಂದು ಎಂದು ಅವರು ವಿವರಿಸಿದರು. ಇದನ್ನೂ ಓದಿ: ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕೆಲವು ವರ್ಷಗಳ ಹಿಂದಿನವರೆಗೆ ಬಾಂಗ್ಡೆ, ತಾರ್ಲಿ ಮೀನುಗಳು ಹೆಚ್ಚಿರುತ್ತಿದ್ದವು. ಅವುಗಳು ಆಲ್ಗೆಗಳನ್ನು ತಿನ್ನುತ್ತಿದ್ದ ಕಾರಣ ನಿಯಂತ್ರಣದಲ್ಲಿ ಇರುತ್ತಿದ್ದವು. ಆದರೆ ಈಚೆಗೆ ಈ ಮೀನುಗಳ ಸಂತತಿ ಕಡಿಮೆಯಾಗಿದೆ. ಈ ಪ್ರಭೇದದ ಆಲ್ಗೆಯೊಂದೇ ಸಮುದ್ರದಲ್ಲಿ ಬೆಳೆಯುತ್ತಿದ್ದು, ಇತರ ಜಾತಿಯವು ಹೆಚ್ಚಾಗಲು ಅವಕಾಶವಿಲ್ಲದಂತಾಗಿದೆ. ಇದು ಒಂದು ರೀತಿಯಲ್ಲಿ ಮೀನುಗಳಿಗೆ ಆಹಾರದ ಕೊರತೆಯಾಗಲೂ ಕಾರಣವಾಗಿದೆ. ಹೀಗಾಗಿ ಮೀನುಗಳು ಸೊರಗಿ ಮೀನುಗಾರಿಕೆಯೂ ಕುಂಠಿತವಾಗುತ್ತದೆ ಎಂದು ತಿಳಿಸಿದರು.

    ಕಳೆದ ವರ್ಷವೂ ಗೋಚರಿಸಿತ್ತು..!:
    ನೀಲಿ ಬೆಳಕು ಸೂಸುವ ಪಾಚಿಗಳು ಕಳೆದ ವರ್ಷ ಕಾರವಾರದ ತಿಳಮಾತಿ ತೀರದಲ್ಲಿ ಗೋಚರಿಸಿತ್ತು. ಕಳೆದಬಾರಿ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಒಂದು ವಾರಕ್ಕೊ ಹೆಚ್ಚು ಸಮಯ ಈ ಪಾಚಿಗಳು ಗೋಚರಿಸುವ ಮೂಲಕ ನೀಲಿ ಬಣ್ಣದ ಬೆಳಕನ್ನ ಮೂಡಿಸಿ ವಿಸ್ಮಯ ಸೃಷ್ಟಿಸಿದ್ದವು.

    ನೀಲಿ ಬೆಳಕು ಸೂಸುವ ಪಾಚಿ ಮಾದರಿಯ ಅಧ್ಯಯನ:
    ಬೆಳಕು ಸೂಸುವ ಆಲ್ಗೆಗಳು 1949ರಲ್ಲಿ ಮೊದಲ ಬಾರಿಗೆ ಲಕ್ಷದ್ವೀಪದಲ್ಲಿ ಕಾಣಿಸಿಕೊಂಡವು. ಕಾರವಾರದಲ್ಲಿ 2017ರಲ್ಲಿ ಮೊದಲ ಬಾರಿಗೆ ದಾಖಲಾಯಿತು. ಮೂರು ವರ್ಷಗಳಿಂದ ಗೋಚರಿಸಲು ಕಾರಣವೇನು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲಾಗುತ್ತದೆ ಎಂದು ಡಾ.ಶಿವಕುಮಾರ್ ಹರಗಿ ಪಬ್ಲಿಕ್ ಟಿವಿಗೆ ತಿಳಿಸಿದರು.