Tag: sea

  • ದೇಶಾದ್ಯಂತ 75 ದಿನಗಳಲ್ಲಿ 75 ಬೀಚ್‍ಗಳ ಸ್ವಚ್ಛತೆ

    ದೇಶಾದ್ಯಂತ 75 ದಿನಗಳಲ್ಲಿ 75 ಬೀಚ್‍ಗಳ ಸ್ವಚ್ಛತೆ

    ನವದೆಹಲಿ: ದೇಶಾದ್ಯಂತ 75 ಸಮುದ್ರ ತೀರಗಳಲ್ಲಿ 75 ದಿನಗಳ ಕಾಲ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.

    ಭೂ ವಿಜ್ಞಾನ ಸಚಿವಾಲಯದ ಪ್ರಧಾನ ಕಚೇರಿಯ ಪೃಥ್ವಿ ಭವನದಲ್ಲಿ ಮುಂಬರುವ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಈ ವರ್ಷ ಜು. 3 ರಿಂದ ಸೆ. 17ರವರೆಗೆ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರತಿವರ್ಷ ಸೆ. 3ನೇ ಶನಿವಾರದಂದು ಆಯೋಜಿಸಲಾಗುವ ವಾರ್ಷಿಕ ಕಾರ್ಯಕ್ರಮವು ಈ ವರ್ಷ ಸೆ. 17ರಂದು ಬಂದಿದೆ ಎಂದು ಹೇಳಿದರು.

    ಇದು ಕಾಕತಾಳೀಯ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಅಂದೇ ಆಗಿದೆ. ಅಂದು ಸಮುದ್ರದ ಬೀಚ್ ರಕ್ಷಣೆ, ಪರಿಸರ ಮತ್ತು ಹವಾಮಾನ ರಕ್ಷಣೆಯ ನಿಟ್ಟಿನಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು.

    ಈ ವರ್ಷದ ಕಾರ್ಯಕ್ರಮವನ್ನು ದೇಶದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಜೊತೆಗೆ ಆಚರಿಸಲಾಗುತ್ತದೆ. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮದುವೆಗೆ ಅಡ್ಡಿಯಾಯ್ತು ಕುಜ ದೋಷ – ಮಹಿಳಾ ಪೊಲೀಸ್ ಬಲಿ

    ಕರಾವಳಿ ಭಾಗ ಮಾತ್ರವಲ್ಲದೆ ದೇಶದ ಇತರ ಭಾಗಗಳ ಏಳಿಗೆಗಾಗಿ ಸ್ವಚ್ಛ ಸಾಗರ, ಸುರಕ್ಷಿತ ಸಾಗರ ಎಂಬ ಸಂದೇಶ ಸಾರಲು ಸಾರ್ವಜನಿಕರ ಸಹಭಾಗಿತ್ವವೂ ಅತ್ಯಗತ್ಯವಾಗಿದೆ ಎಂದರು. ಇದನ್ನೂ ಓದಿ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆಗೆ ಸಿದ್ದು ವಿರೋಧ

    Live Tv

  • ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿ ಮುಳುಗಡೆ

    ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿ ಮುಳುಗಡೆ

    ಉಡುಪಿ: ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದ್ದು, ದೋಣೀಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿಶಿರೂರಿನ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಮೀನುಗಾರರು ಮೀನುಗಾರಿಕೆಗೆಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರಿ ಗಾತ್ರದ ದೋಣಿ ಮುಳುಗಿದೆ. ತಕ್ಷಣ ಅಲ್ಲೇ ಮತ್ತೊಂದು ದೋಣಿಯಲ್ಲಿದ್ದ ಸ್ಥಳೀಯ ಮೀನುಗಾರರಿಂದ ರಕ್ಷಣಾ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದ ನವಜೋತ್‌ ಸಿಂಗ್‌ ಸಿಧು ಆಸ್ಪತ್ರೆಗೆ ದಾಖಲು

    ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರಾವಳಿ ಕಾವಲು ಪಡೆ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೀನುಗಾರರ ರಕ್ಷಣೆಗೆ ಕರಾವಳಿ ಕಾವಲು ಪಡೆಯು ಸಾಥ್ ನೀಡಿದೆ. ಇದನ್ನೂ ಓದಿ: ಕುವೆಂಪು, ನಾಡಗೀತೆಗೆ ಅವಮಾನ- ರೋಹಿತ್ ಚಕ್ರತೀರ್ಥರ ಮೇಲೆ ಮುಗಿಬಿದ್ದ ಕಾಂಗ್ರೆಸ್

  • ಬೋಟ್ ಮಗುಚಿ 8 ಮಂದಿ ಮೀನುಗಾರರು ನಾಪತ್ತೆ

    ಬೋಟ್ ಮಗುಚಿ 8 ಮಂದಿ ಮೀನುಗಾರರು ನಾಪತ್ತೆ

    ಇಸ್ಲಾಮಾಬಾದ್: ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ಬೋಟ್‍ಗಳು ಮಗುಚಿ, 8 ಮಂದಿ ನಾಪತ್ತೆಯಾಗಿದ್ದಾರೆ.

    ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಗಳು ದೇಶದ ದಕ್ಷಿಣ ಸಿಂಧ್ ಪ್ರಾಂತ್ಯದ ಥಟ್ಟಾ ಕರಾವಳಿ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಮುಳುಗಿವೆ. 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್‌ – ಗೋವಾ ಮಾಜಿ ಸಿಎಂ ಪರ್ಸೇಕರ್‌ ರಾಜೀನಾಮೆ

    ಇಬ್ರಾಹಿಂ ಹೈದರಿ ಪ್ರದೇಶದಿಂದ ಹೊರಟಿದ್ದ ಅಲ್-ಸಿದ್ದಿಕ್ ಮತ್ತು ಅಲ್-ಬಹ್ರಿಯಾ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಮಗುಚಿವೆ. ರಕ್ಷಣಾ ಪಡೆಗಳು ಸುಮಾರು 25 ಮೀನುಗಾರರನ್ನು ರಕ್ಷಿಸಿದ್ದು, ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

    ಥಟ್ಟಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿನ ಅತಿಯಾದ ಗಾಳಿಯೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ದ್ವಂದ್ವ – ನೈಟ್ ಕರ್ಫ್ಯೂ ಬಗ್ಗೆ ಡಿಕೆಶಿ, ಸಿದ್ದು ಭಿನ್ನ ಅಭಿಪ್ರಾಯ

  • ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

    ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಫ್ಯಾಮಿಲಿ ಜೊತೆಗೆ ಸಖತ್ ಎಂಜಾಯ್ ಮಾಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    SwethaChangappa

    ನಟಿ ಶ್ವೇತಾ ಚೆಂಗಪ್ಪ ತಮ್ಮ ಬ್ಯೂಸಿ ಶೆಡ್ಯೂಲ್‍ಗಳ ಮಧ್ಯೆ ಫ್ಯಾಮಿಲಿಗೂ ಕೂಡ ಅಷ್ಟೇ ಸಮಯವನ್ನು ಮೀಸಲಿಡುತ್ತಾರೆ. ತಮ್ಮ ನಟನೆ ಮೂಲಕವೇ ಕನ್ನಡಿಗರ ಮನೆಮಾತಾಗಿರುವ ಶ್ವೇತಾ ಚೆಂಗಪ್ಪ ಕಂಡರೆ ಫ್ಯಾಮಿಲಿಗೂ ಕೂಡ ಅಷ್ಟೇ ಅಚ್ಚು ಮೆಚ್ಚು. ಇತ್ತೀಚೆಗಷ್ಟೇ ಸ್ನೇಹಿತರೊಂದಿಗೆ ಟ್ರಿಪ್ ಹೊಡೆದಿದ್ದ ಅವರು ಇದೀಗ ಪತಿ, ಮಗ ಹಾಗೂ ತಾಯಿ ಸೇರಿದಂತೆ ಫ್ಯಾಮಿಲಿಯ ಇತರ ಸದಸ್ಯರೊಂದಿಗೆ ಎಂಜಾಯ್ ಮಾಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ಶ್ವೇತಾ ಚೆಂಗಪ್ಪ ಫ್ಯಾಮಿಲಿ ಜೊತೆ ರೆಸಾರ್ಟ್ ಒಂದರಲ್ಲಿ ಕಾಲ ಕಳೆದಿದ್ದು, ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಫೋಟೋ ಜೊತೆಗೆ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದು ತುಂಬಾ ಅವಶ್ಯಕ, ಏಕೆಂದರೆ ನಾಳೆ ಎಂಬುದು ಎಂದಿಗೂ ಭರವಸೆ ನೀಡುವುದಿಲ್ಲ. ಅಷ್ಟೇ ಅಲ್ಲ, ಯಾವುದೇ ಹಣ ಅಥವಾ ಯಶಸ್ಸು ನಿಮ್ಮ ಕುಟುಂಬದವರ ಸ್ಥಾನ ತುಂಬುವುದಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್

    SwethaChangappa

    ಇತ್ತೇಚೆಗಷ್ಟೇ ಶ್ವೇತಾ ಚೆಂಗಪ್ಪ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ತಂಡದ ಸದಸ್ಯರೊಂದಿಗೆ ಚಾಂಮುಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಅಲ್ಲದೇ ನಟ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿಕ್ಲಿಕ್ಕಿಸಿಕೊಂಡಿದ್ದರು ಮತ್ತು ಸ್ನೇಹಿತೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಿದ್ದರು.

  • ಗೋಕರ್ಣದಲ್ಲಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನ ರಕ್ಷಣೆ

    ಗೋಕರ್ಣದಲ್ಲಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನ ರಕ್ಷಣೆ

    ಕಾರವಾರ: ಈಜಲು ಹೋಗಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

    ಹುಬ್ಬಳ್ಳಿ ಮೂಲದ ರೋಹಿತ್ ಪಾಟೀಲ್(21) ರಕ್ಷಣೆಗೊಳಗಾದ ಯುವಕ. ಐದು ಜನರು ಹುಬ್ಬಳ್ಳಿಯ ರೇಣುಕಾ ನಗರದಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದಿದ್ದ ರೋಹಿತ್ ಅಲೆಯ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ್ದರು. ಇದನ್ನೂ ಓದಿ: ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

    ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಉಪ್ಪಾರ್, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್, ಲೈಫ್ ಗಾರ್ಡ ರವಿ ಪೂಜಾರಿ ಅವರು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

  • ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

    ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

    ಕಾರವಾರ: ಸಮುದ್ರದ ಅಲೆಗಳ ಮಧ್ಯೆ ಕಲ್ಲುಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೊಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರ ಪಾಲಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ದುರಂತ ನಡೆದಿದೆ. ಶಿರಸಿಯ ನಿವಾಸಿ 42 ವರ್ಷದ ಸುಬ್ಬುಗೌಡ ಮೃತ ಪ್ರವಾಸಿಗ. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಸುಬ್ಬುಗೌಡ, ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

    ಮಳೆ ಹೆಚ್ಚಾಗುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಬೃಹತ್ ಗಾತ್ರದ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ. ಇದಾವುದನ್ನೂ ಅರಿಯದ ಪ್ರವಾಸಿಗರು, ಸಮುದ್ರದ ತಟದಲ್ಲಿ ಫೋಟೋಗೆ ಪೋಸ್ ಕೊಡಲು ಮುಂದಾಗುತ್ತಾರೆ. ಅದೇ ರೀತಿ ಪೋಸ್ ಕೊಡಲು ಹೋಗಿ ವ್ಯಕ್ತಿ ಇದೀಗ ಸಮುದ್ರದ ಪಾಲಾಗಿದ್ದಾರೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀಚ್‌ನಲ್ಲಿ ಮಾಸ್ಟರ್ ಪೀಸ್ ಬೆಡಗಿ – ಜಾಲಿಮೂಡ್‌ನಲ್ಲಿರುವ ಶಾನ್ವಿ ಕ್ಯೂಟ್ ವಿಡಿಯೋ ವೈರಲ್

    ಬೀಚ್‌ನಲ್ಲಿ ಮಾಸ್ಟರ್ ಪೀಸ್ ಬೆಡಗಿ – ಜಾಲಿಮೂಡ್‌ನಲ್ಲಿರುವ ಶಾನ್ವಿ ಕ್ಯೂಟ್ ವಿಡಿಯೋ ವೈರಲ್

    ಬೆಂಗಳೂರು: ಮಾಸ್ಟರ್ ಪೀಸ್ ಸಿನಿಮಾ ಖ್ಯಾತಿಯ ನಟಿ ಶಾನ್ವಿ ಶ್ರೀವತ್ಸವ್ ಸಮುದ್ರ ತೀರಲ್ಲಿ ಕಾಲ ಕಳೆಯುತ್ತಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    shanvi srivastava

    ಚಂದ್ರಕಲಾ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಶಾನ್ವಿ ಶ್ರೀವತ್ಸವ್ ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾದ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ಖ್ಯಾತಿ ಪಡೆಯುವುದರ ಜೊತೆಗೆ ತಮ್ಮ ಗ್ಲಾಮರ್ ಲುಕ್‍ನಿಂದ ಅದೆಷ್ಟೋ ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

    shanvi srivastava

    ಸದ್ಯ ಜಾಲಿ ಮೂಡ್‍ನಲ್ಲಿರುವ ಶಾನ್ವಿ ಶ್ರೀವತ್ಸವ್ ಕಡಲ ತೀರದಲ್ಲಿ ಮುಸುಕು ಕಟ್ಟಿದ ಮೋಡಗಳ ಮಧ್ಯೆ ಕೂಲ್ ಆಗಿರುವ ವಾತಾವರಣದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಶಾನ್ವಿ ತುಂಡು ಬಟ್ಟೆ ತೊಟ್ಟು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೆಲವೊಂದು ಫೋಟೋಗಳನ್ನು ವೀಡಿಯೋ ಜೊತೆಗೆ ಸೇರಿಸಿ ಹಾಡೊಂದನ್ನು ಸೆಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ್ದರೆ, ಮತ್ತೊಂದರಲ್ಲಿ ಗಲ್ಲದತ್ತ ಕೈ ಇಟ್ಟುಕೊಂಡು ಹೀಗೆ ಸಖತ್ ಆಗಿ ಭಿನ್ನ, ಭಿನ್ನ ರೀತಿಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

     

    View this post on Instagram

     

    A post shared by Shanvi sri (@shanvisri)

    ಒಟ್ಟಾರೆ ಈ ವೀಡಿಯೋದಲ್ಲಿ ಶಾನ್ವಿ ಚೆಲುವನ್ನು ನೋಡಿದರೆ ಗಂಡೈಕ್ಳ ಎದೆಬಡಿತ ಏರುಪೇರಾಗುವುದಂತೂ ಪಕ್ಕಾ ಅಂತಲೇ ಹೇಳಬಹುದು.

  • ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

    ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

    -ಮಂಗಳೂರು ಕಡಲಿನಲ್ಲಿ ಹೊಸ ಆವಿಷ್ಕಾರ

    ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು 10ಕ್ಕೂ ಹೆಚ್ಚು ದಿನಗಳ ಕಾಲ ಸಮುದ್ರದಲ್ಲೇ ಇರುತ್ತಾರೆ. ಈ ಸಂದರ್ಭ ಸಮುದ್ರದ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಒಂದು ವಾರದ ಬಳಕೆಗೆ ಬೇಕಾದ ಸಿಹಿ ನೀರನ್ನು ಹೋಗುವಾಗಲೇ ಬೋಟ್‍ನಲ್ಲಿ ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಆದರೆ ಇನ್ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನೇ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದು. ಆಸ್ಟ್ರೇಲಿಯಾದ ಈ ತಂತ್ರಜ್ಞಾನವನ್ನು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಈ ರೀತಿ ಬೋಟ್‍ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಸಚಿವ ಎಸ್.ಅಂಗಾರ ಸಮ್ಮುಖದಲ್ಲೇ ನಡೆಸಲಾಯಿತು.

    ಈ ತಂತ್ರಜ್ಞಾನ ಅಮೇರಿಕಾ, ಯುರೂಪ್‍ನಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‍ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತೆ. ಪೈಪ್‍ನಿಂದ ಬಂದ ಉಪ್ಪು ನೀರು ಶುದ್ದೀಕರಿಸುವ ಯಂತ್ರದ ಒಳಗೆ ಪಂಪ್ ಆಗಿ ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತೆ. ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀ. ನೀರು ಫಿಲ್ಟರ್ ಆಗುತ್ತೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‍ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತೆ ಎಂಬ ಆತಂಕವು ಇರೋದಿಲ್ಲ.

    ಈ ಯಂತ್ರಕ್ಕೆ 4 ಲಕ್ಷದ 60 ಸಾವಿರ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು ಸಿಹಿ ನೀರಿನ ಆಭಾವ ತಪ್ಪಲಿದೆ. ಇದನ್ನೂ ಓದಿ: ಪೂಜೆ ಮಾಡಿಕೊಂಡು ಹೋಗು ಅಂದ್ರೆ ದೇವಾಲಯವೇ ತನ್ನದೆಂದ ಪೂಜಾರಿ – ಗ್ರಾಮಸ್ಥರಿಂದ ಪ್ರತಿಭಟನೆ

  • ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ

    ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ

    ಮಂಗಳೂರು: ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟ ಮೀನುಗಾರ ಅರ್ಧ ಗಂಟೆ ಸಮುದ್ರದಲ್ಲಿ ಈಜಿ ಬದುಕುಳಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಅಳಿವೆಬಾಗಿಲು ಆಳಸಮುದ್ರದಲ್ಲಿ ನಡೆದಿದೆ.

    ಮಂಗಳೂರಿನ ಕಸಬ ಬೆಂಗ್ರೆಯ ನಿವಾಸಿ ನವಾಝ್(35) ಬದುಕುಳಿದ ಮೀನುಗಾರ. ಕಸಬಾ ಬೆಂಗ್ರೆಯ ನಾಡದೋಣಿ ಅಳಿವೆ ಬಾಗಿಲಿನತ್ತ ಹಿಂದಿರುಗುತ್ತಿದ್ದಾಗ ಸಮುದ್ರದ ನಡುವೆ ಕೆಟ್ಟು ನಿಂತಿತ್ತು. ಈ ಸಂದರ್ಭ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ನವಾಝ್ ಯತ್ನಿಸುತ್ತಿದ್ದರು. ಇದನ್ನೂ ಓದಿ: ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

    ಈ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ನವಾಝ್ ಸಮುದ್ರ ಪಾಲಾಗಿದ್ದರು. ಆದರೆ ಅವರು ಅರ್ಧ ಗಂಟೆ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದಾರೆ. ಈ ವೇಳೆ ಅದೇ ದಾರಿಯಿಂದ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಮೀನುಗಾರರಿಂದ ರಕ್ಷಣೆಗೊಳಗಾಗಿದ್ದಾರೆ. ಇದನ್ನೂ ಓದಿ: ಶಾಂತಿಯಿಂದ ಆಗಲಿಲ್ಲ – ಈಗ ಪಂಜ್‍ಶೀರ್ ವಶಕ್ಕೆ ತಾಲಿಬಾನಿಗಳ ಕುತಂತ್ರ

    ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬೆಂಗರೆ, ರಿತೀಶ್ ಹೊಯ್ಗೆ ಬಜಾರ್ ರಿಂದ ನವಾಝ್ ರನ್ನು ರಕ್ಷಣೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಸಮುದ್ರದಲ್ಲಿ ಕೊಚ್ಚಿ ಹೋದ ಯುವಕ – ಪೊಲೀಸರಿಂದ ಶೋಧ ಕಾರ್ಯ

    ಸಮುದ್ರದಲ್ಲಿ ಕೊಚ್ಚಿ ಹೋದ ಯುವಕ – ಪೊಲೀಸರಿಂದ ಶೋಧ ಕಾರ್ಯ

    ಕಾರವಾರ: ಸಮುದ್ರದಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕಡಲ ತೀರದಲ್ಲಿ ನಡೆದಿದೆ.

    ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಎಂಟು ಮಂದಿ ಬೆಂಗಳೂರಿನಿಂದ ಗೋಕರ್ಣಕ್ಕೆ ಇಂದು ಮುಂಜಾನೆ ಪ್ರವಾಸಕ್ಕೆ ಬಂದಿದ್ದರು. ಸ್ಥಳೀಯ ಜನರ ಎಚ್ಚರಿಕೆ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು.

    ಅಲೆಯ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದರು. ಈ ವೇಳೆ ಓರ್ವನನ್ನು ಲೈಫ್ ಗಾರ್ಡ ಹಾಗೂ ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದೆ. ಸಮುದ್ರಕ್ಕೆ ಇಳಿದಿದ್ದ ಉಳಿದವರು ಈಜಿ ದಡ ಸೇರಿದ್ದಾರೆ. ಆದರೆ ಅಲೆಗಳ ಅಬ್ಬರಕ್ಕೆ ಅರುಣ್ ತೇಲಿ ಹೋಗಿದ್ದಾನೆ.

    ಸಮುದ್ರ ಪಾಲಾದ ಈತನ ಪತ್ತೆಗಾಗಿ ಪೊಲೀಸರು ಹಾಗೂ ಲೈಫ್ ಗಾರ್ಡ್ ಗಳು ಶೋಧ ಕಾರ್ಯ ಮುಂದುವರೆಸಿದ್ದು ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ: ಸುರೇಶ್ ಕುಮಾರ್