Tag: Sea Water

  • ಹವಾಮಾನ ವರದಿ ನೀಡಲು ಸಮುದ್ರದ ನೀರಿನಲ್ಲಿ ನಿಂತ ಸಚಿವ

    ಹವಾಮಾನ ವರದಿ ನೀಡಲು ಸಮುದ್ರದ ನೀರಿನಲ್ಲಿ ನಿಂತ ಸಚಿವ

    ಫುನಾಫುಟಿ: ಹವಾಮಾನ ಬದಲಾವಣೆ ಬಗ್ಗೆ ಸಂದೇಶ ನೀಡಲು ಸಮುದ್ರದ ನೀರಿನಲ್ಲಿ ನಿಂತು ಭಾಷಣ ಮಾಡುವ ಮೂಲಕವಾಗಿ ತುವಾಲು ದೇಶದ ಸಚಿವ ಸುದ್ದಿಯಾಗಿದ್ದಾರೆ.

    ನವೆಂಬರ್ 9 ರಂದು ಸಮುದ್ರದಲ್ಲಿ ಮೊಣಕಾಲಿನಷ್ಟು ಆಳದ ನೀರಲ್ಲಿ ನಿಂತು, ತುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ ಅವರು ವಿಶ್ವಸಂಸ್ಥೆಯ ಕೋಪ್ 26 ಹವಾಮಾನ ಶೃಂಗಸಭೆಯಲ್ಲಿ ಸಂದೇಶವನ್ನು ನೀಡಿದರು. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ

    ವೀಡಿಯೋದಲ್ಲಿ ಏನಿದೆ: ನೀವು ನೋಡಿದಂತೆ ಇಲ್ಲಿರುವ ವಾಸ್ತವ ಸಮುದ್ರ ಮಟ್ಟಗಳು ಏರುತ್ತಿದೆ, ಕರಾವಳಿಯುದ್ದಕ್ಕೂ ಸಾಕಷ್ಟು ಸವೆತವಾಗಿದೆ, ನಾವು ಬಹಳಷ್ಟು ಹವಾಮಾನ ಮತ್ತು ಹವಾಮಾನದ ಮಾದರಿಗಳಲ್ಲಿನ ಬದಲಾವಣೆಗಳನ್ನು ನೋಡುತ್ತಿದ್ದೇವೆ. ಈ ವಿಶಿಷ್ಟ ರೀತಿಯಲ್ಲಿ ತನ್ನ ಸಂದೇಶವನ್ನು ನೀಡಲು ಅವರು ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ವಿವರಿಸಿದ ಕೋಫೆ, ದಿನದಿಂದ ದಿನಕ್ಕೆ ತುವಾಲುವಿನಲ್ಲಿ ನಾವು ಎದುರಿಸುತ್ತಿರುವ ಸವಾಲುಗಳು ಇವು. ನಾವು ಏನು ಇದನ್ನು ಯಾವ ರೀತಿ ನಿರ್ವಹಿಸುತ್ತಿದ್ದೇವೆ ಎಂಬುದನ್ನು ತೋರಿಸಲು ಮಾಧ್ಯಮವು ಈ ಸಂದೇಶಗಳನ್ನು ಜನರಿಗೆ ತಲುಪಿಸಬಹುದೆಂದು ನಾವು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್

    ಸಮುದ್ರ ಮಟ್ಟ ಹೆಚ್ಚುತ್ತಿರುವ ಕಾರಣ ಮುಂದಿನ 50 ರಿಂದ 100 ವರ್ಷಗಳಲ್ಲಿ ಇಡೀ ರಾಷ್ಟ್ರವನ್ನು ಸ್ಥಳಾಂತರಿಸಬೇಕಾದ ಕೆಟ್ಟ ಸನ್ನಿವೇಶದ ಬಗ್ಗೆ ತನ್ನ ದೇಶವು ಗಂಭೀರವಾಗಿ ಯೋಚಿಸುತ್ತಿದೆ ಎಂದು ಕೋಫೆ ಹೇಳಿದರು. ಹವಾಮಾನ ಬದಲಾವಣೆಯ ವಿರುದ್ಧ ಬಲವಾದ ಬದ್ಧತೆಗಳನ್ನು ಮಾಡಲು ನಾವು ದೊಡ್ಡ ರಾಷ್ಟ್ರಗಳಿಗೆ ಪ್ರತಿಪಾದಿಸುತ್ತಿದ್ದರೂ, ಕೆಟ್ಟ ಸಂದರ್ಭವನ್ನು ಎದುರಿಸುವುದಕ್ಕೆ ನಾವು ಸಿದ್ಧರಾಗಬೇಕಿದೆ ಎಂದು ಅವರು ಹೇಳಿದರು.

  • ಶೀಘ್ರವೇ 5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ

    ಶೀಘ್ರವೇ 5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ

    ಭೋಪಾಲ್: ಶೀಘ್ರದಲ್ಲೇ 5 ಪೈಸೆಗೆ ಒಂದು ಲೀಟರ್ ನೀರನ್ನು ವಿತರಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಮಧ್ಯಪ್ರದೇಶದ ಬಂದ್ರಭಾನ್ ನಲ್ಲಿ ನಡೆಯುತ್ತಿರುವ ನದಿ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿನ ಟ್ಯುಟಿಕೋರನ್ ನಲ್ಲಿ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ನೀರಾಗಿ ಪರಿವರ್ತನೆ ಮಾಡುವ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿ ಹಲವು ರಾಜ್ಯಗಳು ನದಿ ನೀರಿಗಾಗಿ ಜಗಳವಾಡುತ್ತಿದೆ. ಆದರೆ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹೋಗುವ ನದಿಯ ಬಗ್ಗೆ ಯಾರು ಕಳವಳ ವ್ಯಕ್ತಪಡಿಸುವುದಿಲ್ಲ ಎಂದರು.

    ಭಾರತದ ಮೂರು ನದಿಗಳು ಪಾಕಿಸ್ತಾನಕ್ಕೆ ಹರಿದು ಹೋಗುತ್ತದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುವುದಿಲ್ಲ ಜೊತೆಗೆ ಶಾಸಕರು ನೀರನ್ನು ತಡೆಯಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಹೇಳಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!