Tag: Sea turtle

  • 3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು

    3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು

    ಮಂಗಳೂರು: ಸುಮಾರು ಮೂರು ದಶಕಗಳ ಬಳಿಕ ಮಂಗಳೂರು (Mangaluru) ಕಡಲ ಕಿನಾರೆಗೆ ಕಡಲಾಮೆಗಳು (Sea Turtles) ಬಂದಿವೆ.

    ಅಳಿವಿನಂಚಿನ ಅತ್ಯಂತ ಅಪರೂಪದ ಕಡಲಾಮೆ ಒಲೀವ್ ರಿಡ್ಲೆ ಮಂಗಳೂರು ಕಡಲ ಕಿನಾರೆಗೆ ಬಂದಿವೆ. ಕಡಲಲ್ಲಿ ಮೊಟ್ಟೆ ಇಟ್ಟಿವೆ. ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್‌ಗೆ ಕಡಲಾಮೆಗಳು ಬಂದಿವೆ.

    ಸಸಿಹಿತ್ಲು ಕಡಲತಡಿಯಲ್ಲಿ ಮೊಟ್ಟೆ ಇಟ್ಟಿವೆ. ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ಕಡಲಾಮೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರು ವಿಶೇಷ ನಿಗಾ ವಹಿಸಿದ್ದಾರೆ.

    ಮಂಗಳೂರಿನ ಸುತ್ತ ಮುತ್ತ ಸುಮಾರು 12 ಕಡೆ ಈ ಹಿಂದೆ ಆಮೆ ಮೊಟ್ಟುಗಳು ಪತ್ತೆಯಾಗಿದ್ದವು. ಮಂಗಳೂರಿನ ಕಡಲತಡಿಯ ತಣ್ಣೀರು ಬಾವಿ, ಸಸಿಹಿತ್ಲು, ಬೆಂಗ್ರೆ ಪ್ರದೇಶಕ್ಕೆ ಈ ಹಿಂದೆ ಕಡಲಾಮೆಗಳು ಬರುತ್ತಿದ್ದವು.

    ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1 ರ ಅಡಿಯಲ್ಲಿ ಕಡಲಾಮೆಗಳು ರಕ್ಷಣೆ ಪಡೆದಿವೆ. ತಾ ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುವ ಅಪರೂಪದ ಕಡಲಾಮೆಗಳು ಇವಾಗಿವೆ.

  • ಕಡಲ ತೀರದಲ್ಲಿ ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

    ಕಡಲ ತೀರದಲ್ಲಿ ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

    ಕಾರವಾರ: ಬೃಹದಾಕಾರದ ಕಡಲಾಮೆಗಳ 125 ಮೊಟ್ಟೆಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಪತ್ತೆಯಾಗಿದೆ.

    ಅಳಿವಿನಂಚಿನಲ್ಲಿರುವ ಬೃಹದಾಕಾರದ ಕಡಲಾಮೆ 125 ಮೊಟ್ಟೆಗಳು ಕಡಲತೀರದಲ್ಲಿ ಪತ್ತೆಯಾಗಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿ ವರ್ಷ ಕಡಲಾಮೆಗಳು ಕಾಸರಕೋಡಿನ ಬಂದರು ಜಾಗದ ಬಳಿ ಮೊಟ್ಟೆ ಇಟ್ಟು 45 ದಿನದ ನಂತರ ಮರಿ ಮಾಡಿ ಕರೆದುಕೊಂಡು ಹೋಗುತ್ತವೆ. ಐದು ಅಡಿ ಸುತ್ತಳತೆಗೂ ಹೆಚ್ಚು ಹಾಗೂ ಮೂರು ಅಡಿಗೂ ಹೆಚ್ಚು ಈ ಆಮೆಗಳು ಬೆಳೆಯುತ್ತದೆ.

    ಸದ್ಯ ಅವನತಿಯ ಅಂಚಿನಲ್ಲಿರುವ ಈ ಆಮೆಗಳು ಸಮುದ್ರದ ತಡದಲ್ಲಿನ ಯಾಂತ್ರಿಕ ಬದಲಾವಣೆಯಿಂದಾಗಿ ತನ್ನ ವಂಶಗಳನ್ನು ಕಳೆದುಕೊಳ್ಳುತಿದ್ದು ಅಳಿವಿನಂಚಿಗೆ ತಲುಪಿದೆ. ಇಂದು ಅರಣ್ಯ ಇಲಾಖೆ ಈ ಮೊಟ್ಟೆಗಳನ್ನು ರಕ್ಷಣೆಮಾಡಿದ್ದು ಕೃತಕ ಶಾಖ ನೀಡಿ 45 ದಿನದ ನಂತರ ಸಮುದ್ರಕ್ಕೆ ಬಿಡಲಿದ್ದಾರೆ.

  • ಕಾಲಿಲ್ಲದ ದೊಡ್ಡ ಕಡಲಾಮೆ ರಕ್ಷಣೆ

    ಕಾಲಿಲ್ಲದ ದೊಡ್ಡ ಕಡಲಾಮೆ ರಕ್ಷಣೆ

    ಉಡುಪಿ: ಜಿಲ್ಲೆಯ ಕೋಟ ಪಡುಕೆರೆಯಲ್ಲಿ ಕಡಲ ಆಮೆಯನ್ನು ರಕ್ಷಣೆ ಮಾಡಲಾಗಿದೆ.

    ಕೋಟದ ಕಡಲ ಕಿನಾರೆಯಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಸ್ಥಳೀಯ ಮೀನುಗಾರ ಪ್ರದೀಪ್ ಅವರು, ಕಡಲಂಚಿನಲ್ಲಿ ಬಲೆಹಾಕಿ ಮೀನು ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡಿರುವ ಕಡಲ ಆಮೆ ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ಬಳಿಕ ಸಮುದ್ರ ತೀರದಲ್ಲಿದ್ದ ಆಮೆಯನ್ನು ರಕ್ಷಣೆ ಮಾಡಿದ್ದಾರೆ.

    ರಕ್ಷಣೆ ಮಾಡಿದ ಆಮೆಯ ಬಗ್ಗೆ ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಫೌಂಡೇಶನ್ ಗಮನಕ್ಕೆ ತಂದಿದ್ದಾರೆ. ಸಂಸ್ಥೆಯ ರವಿಕಿರಣ್ ಮತ್ತು ಸಾಮಾಜಿಕ ಕಾರ್ಯಕರ್ತ ವಿನಯಚಂದ್ರ ಅರಣ್ಯ ಇಲಾಖೆಯನ್ನು ಸಂಪರ್ಕ ಮಾಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಅರಣ್ಯ ರಕ್ಷಕರಾದ ಶಿವಪ್ಪ ನಾಯ್ಕ, ಅರಣ್ಯ ವೀಕ್ಷಕರು ಪರಶುರಾಮ್ ಮೇಟಿ ಮತ್ತು ವಾಹನ ಚಾಲಕ ಜೋಯ್ ಕಡಲಾಮೆ ರಕ್ಷಣಾ ಕಾರ್ಯಚರಣೆಯನ್ನು ನೆಡೆಸಿದ್ದಾರೆ.

    ಬಳಿಕ ಆಮೆಯನ್ನು ಕಡಲಲ್ಲಿ ಅಲೆಗಳ ಅಬ್ಬರ ಹೆಚ್ಚಾದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಬಿಡಲಾಗಿದೆ. ಮೀನುಗಾರರ ಬಲೆಗೆ ಸಿಲುಕಿ ಅಥವಾ ದೊಡ್ಡ ಮೀನುಗಳ ದಾಳಿಗೆ ತುತ್ತಾಗಿ ಆಮೆ ಒಂದು ಕಾಲನ್ನು ಕಳೆದುಕೊಂಡಿದೆ.