Tag: sea

  • ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    – ಸಮುದ್ರ ತಳಕ್ಕೆ ಸಿಹಿನೀರು ಹೇಗೆ ಬಂತು?

    ಮುದ್ರ ಎಂದಾಕ್ಷಣ ಎಲ್ಲರಿಗೂ ಥಟ್ಟನೆ ನೆನಪಾಗುವುದು ಉಪ್ಪು ನೀರು. ಭೂಮಿಯ ಮುಕ್ಕಾಲು ಭಾಗ ಆವರಿಸಿರೋದು ಇದರಿಂದಲೇ. ಸಮುದ್ರದ ನೀರೆಲ್ಲ ಸಿಹಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಎಷ್ಟು ಜನರಲ್ಲಿ ಮೂಡಿರಲ್ಲ ಹೇಳಿ? ಎಷ್ಟೋ ಸಲ ಹಾಗೆ ಯೋಚನೆ ಮಾಡಿಯೂ ಇರುತ್ತಾರೆ. ಹಾಗಾದ್ರೆ ಸಮುದ್ರದಲ್ಲಿ ಸಿಹಿನೀರು ಸಿಗಲ್ವಾ ಎಂಬ ತಾರ್ಕಿಕ ಪ್ರಶ್ನೆಯೂ ಮೂಡಬಹುದು. ಅದು ಹೇಗೆ ಸಾಧ್ಯ? ಅಂತ ಹೆಚ್ಚಿನವರು ಭಾವಿಸಲೂ ಬಹುದು. ಪ್ರಕೃತಿಯ ವಿಸ್ಮಯವನ್ನು ಭೇದಿಸುವ ವಿಜ್ಞಾನಿಗಳು ಮತ್ತೊಂದು ಅಚ್ಚರಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸಮುದ್ರದ ತಳದಲ್ಲಿ ಸಿಹಿನೀರನ್ನು ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲ, ಸಿಹಿನೀರಿಗೆ ಕಾರಣವಾಗುವ ಜಲಚರವನ್ನೂ ಗುರುತಿಸಿದ್ದಾರೆ.

    ಸಮುದ್ರದ ನೀರು ಉಪ್ಪಾಗಿರುವುದೇಕೆ?
    ಸಮುದ್ರ ತಳದ ಸಿಹಿನೀರಿನ ಬಗ್ಗೆ ತಿಳಿಯುವುದಕ್ಕೂ ಮೊದಲು, ಸಮುದ್ರದ ನೀರು ಉಪ್ಪಾಗಿರುವುದೇಕೆ ಎಂಬುದನ್ನು ತಿಳಿಯೋಣ. ಸಮುದ್ರವು ತನ್ನ ಉಪ್ಪನ್ನು ಪ್ರಾಥಮಿಕವಾಗಿ ಭೂಮಿಯ ಮೇಲಿನ ಬಂಡೆಗಳಿAದ ಹವಾಮಾನ ಎಂಬ ಪ್ರಕ್ರಿಯೆಯ ಮೂಲಕ ಪಡೆಯುತ್ತದೆ. ಅಲ್ಲಿ ಆಮ್ಲೀಯ ಮಳೆನೀರು ಬಂಡೆಗಳನ್ನು ಸವೆಸಿ, ನದಿಗಳಿಗೆ ಮತ್ತು ಅಂತಿಮವಾಗಿ ಸಾಗರಕ್ಕೆ ಹರಿಯುವ ಖನಿಜ ಅಯಾನುಗಳನ್ನು ಬಿಡುಗಡೆ ಮಾಡುತ್ತದೆ. ನೀರೊಳಗಿನ ಜ್ವಾಲಾಮುಖಿ ಚಟುವಟಿಕೆಯು ಸಹ ಉಪ್ಪಿನಾಂಶಕ್ಕೆ ಕೊಡುಗೆ ನೀಡುತ್ತದೆ. ಕರಗಿದ ಖನಿಜಗಳನ್ನು ನೇರವಾಗಿ ನೀರಿಗೆ ಬಿಡುಗಡೆ ಮಾಡುತ್ತದೆ. ಲಕ್ಷಾಂತರ ವರ್ಷಗಳಿಂದ, ಈ ಲವಣಗಳು ಸಾಗರಗಳಲ್ಲಿ ಸಂಗ್ರಹವಾಗಿ ಅವುಗಳನ್ನು ಉಪ್ಪಾಗಿಸುತ್ತವೆ.

    ಹುಡುಕಿದ್ದು ಏನೋ, ಸಿಕ್ಕಿದ್ದೇನೋ!
    ಸುಮಾರು 50 ವರ್ಷಗಳ ಹಿಂದೆ ಯುಎಸ್ ಸರ್ಕಾರಿ ಹಡಗು ಸಮುದ್ರದ ತಳದಲ್ಲಿ ಖನಿಜಗಳು ಮತ್ತು ಹೈಡ್ರೋಕಾರ್ಬನ್‌ಗಳನ್ನು ಹುಡುಕುತ್ತಿತ್ತು. ದೇಶದ ಈಶಾನ್ಯ ಕರಾವಳಿಯ ಸಮುದ್ರ ತಳದಲ್ಲಿ ಕೊರೆಯುವಾಗ ಅನಿರೀಕ್ಷಿತವಾಗಿ ಸಿಹಿನೀರನ್ನು ಕಂಡುಕೊಂಡಿತು. ಈಗ ಅಂತರರಾಷ್ಟ್ರೀಯ ವಿಜ್ಞಾನಿಗಳ ಗುಂಪು ಈ ಅಚ್ಚರಿಯ ಆವಿಷ್ಕಾರವನ್ನು ಅನುಸರಿಸಿ, ನ್ಯೂಜೆರ್ಸಿಯಿಂದ ಮೈನೆವರೆಗೆ ವ್ಯಾಪಿಸಿರುವ ಅಟ್ಲಾಂಟಿಕ್ ಮಹಾಸಾಗರದ ಅಡಿಯಲ್ಲಿ ಸಿಹಿನೀರಿನಿಂದ ಆವೃತವಾಗಿರುವ ದೊಡ್ಡ ಜಲಚರದ ಅಸ್ತಿತ್ವವನ್ನು ದೃಢಪಡಿಸಿದೆ. ವಿಜ್ಞಾನಿಗಳು ಸಮುದ್ರದ ಕೆಳಗೆ 1,289 ಅಡಿಗಳಷ್ಟು ಆಳದಲ್ಲಿ ಸಿಕ್ಕ ಸಿಹಿನೀರಿನಲ್ಲಿ ವಿಶ್ಲೇಷಣೆಗಾಗಿ ಸುಮಾರು 50,000 ಲೀಟರ್ ನೀರನ್ನು ಸಂಗ್ರಹಿಸಿದ್ದಾರೆ. ‘ಭೂಮಿಯ ಮೇಲೆ ಸಿಹಿನೀರನ್ನು ಹುಡುಕುವ ಕೊನೆಯ ಸ್ಥಳಗಳಲ್ಲಿ ಇದು ಒಂದು’ ಎಂದು ಕೊಲೊರಾಡೋ ಸ್ಕೂಲ್ ಆಫ್ ಮೈನ್ಸ್ನ ಭೂ ಭೌತಶಾಸ್ತ್ರಜ್ಞ ಮತ್ತು ಜಲಶಾಸ್ತ್ರಜ್ಞ ಬ್ರಾಂಡನ್ ಡುಗನ್ ತಿಳಿಸಿದ್ದಾರೆ.

    ಜಗತ್ತಿನಾದ್ಯಂತ ಆಳವಿಲ್ಲದ ಉಪ್ಪುನೀರಿನಲ್ಲಿ ಅಸ್ತಿತ್ವದಲ್ಲಿದೆ ಎಂಬ ಅನೇಕ ಸಿಹಿನೀರಿನ ನಿಕ್ಷೇಪಗಳಲ್ಲಿ ಕಡಲಾಚೆಯ ಜಲಚರವೂ (Aquifers ಇದು ಮಣ್ಣು, ಕೆಸರು ಅಥವಾ ಬಂಡೆಗಳಂತಹ ಭೂಮಿಯೊಳಗಿನ ಪೋರಸದ (porous) ಪದರಗಳಾಗಿವೆ) ಒಂದು. ಕಡಲಾಚೆಯ ಜಲಚರ ವ್ಯವಸ್ಥೆಗಳು ಯಾವುವು? ಅವು ಸಿಹಿನೀರನ್ನು ಹೇಗೆ ಪಡೆಯುತ್ತವೆ? ಅವು ಏಕೆ ಮಹತ್ವದ್ದಾಗಿವೆ ಎಂಬುದನ್ನು ಇಲ್ಲಿ ನೋಡೋಣ.

    ಕಡಲಾಚೆಯ ಜಲಚರಗಳು ಯಾವುವು?
    ಭೂಮಿಯ ಮೇಲಿನ ಜಲಚರಗಳಂತೆಯೇ, ಕಡಲಾಚೆಯ ಜಲಚರಗಳು ಸಿಹಿನೀರನ್ನು ಒಳಗೊಂಡಿರುವ ಬಂಡೆ ಅಥವಾ ಕೆಸರಿನ ವ್ಯವಸ್ಥೆಯಾಗಿವೆ. ಅವು ಸಮುದ್ರ ತಳದಲ್ಲಿ ಇವೆ. ಕಡಲಾಚೆಯ ಜಲಚರಗಳು ಕರಾವಳಿಯಿಂದ 90 ಕಿಲೋಮೀಟರ್‌ಗಳ ವರೆಗೆ ವಿಸ್ತರಿಸಬಹುದು. ಭೂಮಿಯ ಮೇಲಿನ ಜಲಚರಗಳಿಂದ ತೆಗೆದಾಗ ಸಿಗುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಸಿಹಿನೀರನ್ನು ಹೊಂದಿರುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಜರ್ನಲ್ ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್ನಲ್ಲಿ ಪ್ರಕಟವಾದ 2021 ರ ಅಧ್ಯಯನವು, ’21 ನೇ ಶತಮಾನದಲ್ಲಿ ಸಂಭಾವ್ಯ ಸಿಹಿನೀರಿನ ಮೂಲವಾಗಿ ಕರಾವಳಿಯ ಏಕೀಕೃತವಲ್ಲದ ಕೆಸರು ವ್ಯವಸ್ಥೆಗಳಲ್ಲಿ ಕಡಲಾಚೆಯ ತಾಜಾ ಅಂತರ್ಜಲ ಇದೆ. ಸಮುದ್ರ ತಳದಲ್ಲಿ ಒಂದು ಮಿಲಿಯನ್ ಘನ ಕಿಲೋಮೀಟರ್ ಸಿಹಿನೀರು ಇದೆ ಎಂದು ಅಂದಾಜಿಸಿದೆ. ಎಲ್ಲಾ ಭೂಮಿಯ ತಾಜಾ ಅಂತರ್ಜಲದ ಸುಮಾರು 10% ರಷ್ಟಿದೆ.

    ಈಚಿನ ವರ್ಷಗಳಲ್ಲಿ ವಿಜ್ಞಾನಿಗಳು ಆಸ್ಟ್ರೇಲಿಯಾ, ಚೀನಾ, ಉತ್ತರ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದ ಕರಾವಳಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಕಡಲಾಚೆಯ ಜಲಚರಗಳ ಅಸ್ತಿತ್ವವನ್ನು ದೃಢಪಡಿಸಿದ್ದಾರೆ. ಆದಾಗ್ಯೂ, ಪ್ರಾಥಮಿಕವಾಗಿ ಭೂಮಿಯ ಮೇಲಿನ ಜಲಚರಗಳ ಮೇಲೆ ವಿಶೇಷ ಗಮನ ಮತ್ತು ಪ್ರಮುಖ ಕಾರಣಗಳಿಂದಾಗಿ, ಅವುಗಳ ಅನ್ವೇಷಣೆಗೆ ಹೆಚ್ಚಿನ ಆದ್ಯತೆ ಕೊಟ್ಟಿರಲಿಲ್ಲ. ಅದಕ್ಕಾಗಿಯೇ ಅಮೆರಿಕದ ಈಶಾನ್ಯದಿಂದ ದೂರದಲ್ಲಿರುವ ಕಡಲಾಚೆಯ ಜಲಚರಗಳ ಇತ್ತೀಚಿನ ಪರಿಶೋಧನೆಯು ನಿರ್ಣಾಯಕವಾಗಿದೆ. ಸಮುದ್ರದೊಳಗಿನ ಸಿಹಿನೀರಿನಿಗಾಗಿ ವ್ಯವಸ್ಥಿತವಾಗಿ ಕೊರೆಯುವ ಮೊದಲ ಜಾಗತಿಕ ದಂಡಯಾತ್ರೆ ಇದಾಗಿದೆ. ವಿಜ್ಞಾನಿಗಳು ಸಮುದ್ರ ತಳದಲ್ಲಿ 30 ರಿಂದ 50 ಕಿಲೋಮೀಟರ್‌ಗಳ ನಡುವೆ ಕೊರೆಯುತ್ತಾರೆ. ನ್ಯೂಯಾರ್ಕ್ ನಗರದಂತಹ ಮಹಾನಗರಕ್ಕೆ 800 ವರ್ಷಗಳ ಕಾಲ ಜಲಚರವು ಸಾಕಷ್ಟು ನೀರನ್ನು ಹೊಂದಿದೆ ಎಂದು ಅಂದಾಜಿಸಿದ್ದಾರೆ.

    ಸಮುದ್ರ ತಳಕ್ಕೆ ಸಿಹಿನೀರು ಹೇಗೆ ಬಂತು?
    ಭೂಮಿಯಲ್ಲಿರುವ ಜಲಚರಗಳು ಮಳೆ ಮತ್ತು ಹಿಮ ಕರಗುವಿಕೆಯಿಂದ ಸಿಹಿನೀರನ್ನು ಪಡೆಯುತ್ತವೆ. ಇದು ಮಣ್ಣಿನಲ್ಲಿ ಹೀರಿಕೊಂಡು ಬಂಡೆಗಳ ಮೂಲಕ ಕೆಳಗೆ ಹರಿಯುತ್ತದೆ. ಆದಾಗ್ಯೂ, ಕಡಲಾಚೆಯ ಜಲಚರಗಳು ಸಿಹಿನೀರನ್ನು ಹೇಗೆ ಪಡೆಯಬಹುದು ಎಂಬ ವಿಚಾರ ಸವಾಲಾಗಿ ಪರಿಣಮಿಸಿದೆ. ಸಿಹಿನೀರು ಅಲ್ಲಿಗೆ ಹೇಗೆ ಬರಬಹುದು ಎಂಬುದರ ಕುರಿತು ಸಾಕಷ್ಟು ಊಹೆಗಳಿವೆ. ಒಂದು ಸಿದ್ಧಾಂತದ ಪ್ರಕಾರ, ಹಿಂದಿನ ಹಿಮಯುಗಗಳಲ್ಲಿ ಸಮುದ್ರ ಮಟ್ಟ ಕಡಿಮೆಯಾಗಿದ್ದ ಮತ್ತು ಪ್ರಸ್ತುತ ಸಾಗರದಿಂದ ಆವೃತವಾಗಿರುವ ದೊಡ್ಡ ಪ್ರದೇಶಗಳು ಒಣ ಭೂಮಿಯಾಗಿದ್ದ ಸಮಯದಲ್ಲಿ ನೀರು ಸಮುದ್ರದ ತಳಭಾಗವನ್ನು ತಲುಪಿರಬಹುದು. ಪರಿಣಾಮವಾಗಿ, ಮಳೆಯು ನೆಲಕ್ಕೆ ಹರಿದು, ದೊಡ್ಡ ಪ್ರಮಾಣದ ಸಿಹಿನೀರನ್ನು ನಿರ್ಮಿಸಿತು. ಅಲ್ಲದೆ, ಈ ಸಮಯದಲ್ಲಿ ಮಂಜುಗಡ್ಡೆಯ ಗಾತ್ರವು ಬೆಳೆದಿತ್ತು. ಅವುಗಳ ತೂಕವು ನೀರನ್ನು ಸಮುದ್ರಕ್ಕೆ ವಿಸ್ತರಿಸಿದ ಸರಂಧ್ರ ಬಂಡೆಗಳಿಗೆ ತಳ್ಳಿರಬಹುದು.

    ಇನ್ನೊಂದು ಸಿದ್ಧಾಂತದ ಪ್ರಕಾರ, ಮಳೆಯ ನಂತರ ನಿಯಮಿತವಾಗಿ ನೀರು ಪೂರೈಕೆಯಾಗುತ್ತಿರಬಹುದು. ಕಡಲಾಚೆಯ ಜಲಚರಗಳ ಕೆಳಗಿರುವ ಸಿಹಿನೀರು ಉಪ್ಪುನೀರಿನೊಂದಿಗೆ ಬೆರೆಯದೇ ಇರಬಹುದು. ಏಕೆಂದರೆ ಜಲಚರಗಳ ಮೇಲಿರುವ ಜೇಡಿಮಣ್ಣಿನಿಂದ ಸಮೃದ್ಧವಾದ ಕೆಸರಿನಿಂದ ನಿರ್ಮಿಸಲಾದ ಕ್ಯಾಪ್ ರಾಕ್ ಪದರವಿದೆ. ‘ಜೇಡಿಮಣ್ಣು ವಿರೋಧಾಭಾಸವಾಗಿದೆ. ಇದು ಸಡಿಲವಾದಾಗ ಬಹಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಅದನ್ನು ಸಂಕ್ಷೇಪಿಸಿದಾಗ, ಅದು ಬಹುತೇಕ ಒಳನುಗ್ಗುವುದಿಲ್ಲ. ಈ ಕ್ಯಾಪ್ ಕಡಿಮೆ ಸಾಂದ್ರತೆಯ ಸಿಹಿನೀರು ಸಮುದ್ರ ತಳಕ್ಕೆ ಏರುವುದನ್ನು ತಡೆಯುತ್ತದೆ’ ಎಂದು ಸೈಂಟಿಫಿಕ್ ಅಮೆರಿಕನ್ ವರದಿ ತಿಳಿಸುತ್ತದೆ. ಯುಎಸ್ ಈಶಾನ್ಯ ಕರಾವಳಿಯಿಂದ ದೂರದಲ್ಲಿರುವ ಕಡಲಾಚೆಯ ಜಲಚರದಲ್ಲಿ ಸಿಹಿನೀರಿನ ಮೂಲವನ್ನು ಖಚಿತಪಡಿಸಿಕೊಳ್ಳಲು, ವಿಜ್ಞಾನಿಗಳು ಸಾವಿರಾರು ಮಾದರಿಗಳನ್ನು ಹೊರತೆಗೆದಿದ್ದಾರೆ. ಒಂದು ವೇಳೆ, ನೀರು ನವೀಕರಿಸಲಾಗದಿದ್ದರೆ ಮತ್ತು ಹಿಮಯುಗದಿಂದಲೂ ಇದ್ದರೆ, ಅದು ಮಿತವಾಗಿ ಬಳಸಬೇಕಾದ ಸೀಮಿತ ಸಂಪನ್ಮೂಲವಾಗಿರುತ್ತದೆ.

    ಭೂಮಿ ಮೇಲಿನ ನೀರಿನ ಕೊರತೆ ನಿವಾರಣೆಯಾಗುತ್ತಾ?
    ಕಡಲಾಚೆಯ ಜಲಚರಗಳು ಗಮನಾರ್ಹವಾಗಿವೆ. ಏಕೆಂದರೆ, ಈಗ ಸಿಕ್ಕಿರೋದು ಅವುಗಳು ಬಳಸದೆ ಇರುವ ಸಿಹಿನೀರಿನ ನಿಕ್ಷೇಪಗಳಾಗಿರಬಹುದು. ಭೂಮಿಯ ಮೇಲಿನ ನೀರಿನ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತವೆ. 2023 ರ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಪ್ರಪಂಚವು ಪ್ರಸ್ತುತ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. 2030 ರ ವೇಳೆಗೆ ಜಾಗತಿಕ ಸಿಹಿನೀರಿನ ಬೇಡಿಕೆಯು ಪೂರೈಕೆಗಿಂತ 40% ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ. ಇದು ಬರಗಾಲ, ಮಳೆ ಮತ್ತು ಹಿಮಪಾತದ ಮಾದರಿಗಳಲ್ಲಿನ ಬದಲಾವಣೆಗಳಿಗೆ ಕಾರಣವಾಗಿದೆ. ಈ ಬೆಳವಣಿಗೆಯು ಸಿಹಿನೀರಿನ ಮೂಲಗಳ ಮರುಪೂರಣದ ಮೇಲೆ ತೀವ್ರ ಪರಿಣಾಮ ಬೀರಿದೆ. ಮಾಲಿನ್ಯ ಮತ್ತು ನೀರಿನ ವ್ಯರ್ಥ ಬಳಕೆಯೂ ಸಹ ಈ ಕೊರತೆಗೆ ಕಾರಣವಾಗಿದೆ.

    ನಮಗೆ ನೀರಿನ ಬಿಕ್ಕಟ್ಟು ಇದೆ ಎಂಬುದು ವೈಜ್ಞಾನಿಕ ಪುರಾವೆಯಾಗಿದೆ. ನಾವು ನೀರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. ನೀರನ್ನು ಕಲುಷಿತಗೊಳಿಸುತ್ತಿದ್ದೇವೆ. ಹವಾಮಾನಕ್ಕೆ ನಾವು ಮಾಡುತ್ತಿರುವ ಕೆಲಸಗಳ ಮೂಲಕ ಇಡೀ ಜಾಗತಿಕ ಜಲವಿಜ್ಞಾನದ ಚಕ್ರವನ್ನು ಬದಲಾಯಿಸುತ್ತಿದ್ದೇವೆ ಎಂದು ಗ್ಲೋಬಲ್ ಕಮಿಷನ್ ಆನ್ ದಿ ಎಕನಾಮಿಕ್ಸ್ ಆಫ್ ವಾಟರ್ (GCEW) ನ ಸಹ-ಅಧ್ಯಕ್ಷರಾಗಿರುವ ಪಾಟ್ಸ್ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ನ ನಿರ್ದೇಶಕ ಜೋಹಾನ್ ರಾಕ್‌ಸ್ಟ್ರೋಮ್ ತಿಳಿಸಿದ್ದಾರೆ.

    ಸಮುದ್ರ ತಳದ ಸಿಹಿನೀರನ್ನು ಹೊರತೆಗೆಯಬಹುದೇ?
    ಕಡಲಾಚೆಯ ಜಲಚರಗಳನ್ನು ಸಿಹಿನೀರು ಪೂರೈಕೆಯ ಮೂಲವಾಗಿ ಪರಿವರ್ತಿಸುವ ಹಾದಿಯು ದೀರ್ಘವಾದದ್ದು. ಇದು ತುಂಬಾ ಸವಾಲುಗಳಿಂದ ಕೂಡಿದೆ. ಸಮುದ್ರ ತಳದಲ್ಲಿ ಕೊರೆಯುವಿಕೆಯು ಸಾಕಷ್ಟು ದುಬಾರಿಯಾಗಿದೆ. ಯುಎಸ್ ಈಶಾನ್ಯ ಕರಾವಳಿಯಿಂದ ಇತ್ತೀಚಿನ ಹೊರತೆಗೆಯುವಿಕೆಗೆ ಸುಮಾರು 25 ಮಿಲಿಯನ್ ಡಾಲರ್ (220 ಕೋಟಿ ರೂಪಾಯಿ) ವೆಚ್ಚವಾಗಿದೆ. ಸಮುದ್ರ ತಳದಲ್ಲಿ ಕಾರ್ಯನಿರ್ವಹಿಸುವ ಬಾವಿಗಳನ್ನು ವಿನ್ಯಾಸಗೊಳಿಸುವುದು, ನೀರನ್ನು ತೀರಕ್ಕೆ ಸಾಗಿಸುವುದು ಮತ್ತು ಉಪ್ಪುನೀರು ಸಿಹಿನೀರಿನೊಂದಿಗೆ ಬೆರೆಯದಂತೆ ಪಂಪಿಂಗ್ ಅನ್ನು ನಿಯಂತ್ರಿಸುವ ಅವಶ್ಯಕತೆಯಿದೆ.

    ಸಿಹಿನೀರು ಹೊರತೆಗೆದರೆ ಸಮುದ್ರ ಜೀವಿಗಳ ಮೇಲೆ ಎಫೆಕ್ಟ್ ಆಗುತ್ತಾ?
    ಕಡಲಾಚೆಯ ಜಲಚರಗಳಿಂದ ಸಿಹಿನೀರನ್ನು ಹೊರತೆಗೆಯುವುದರಿಂದ ಪರಿಸರ ವಿಜ್ಞಾನ ಮತ್ತು ಸಮುದ್ರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ನೀರನ್ನು ಹೊರತೆಗೆಯುವ ಸಂಬಂಧ ಮಾಲೀಕತ್ವ ಮತ್ತು ಹಕ್ಕುಗಳ ಸಮಸ್ಯೆಗಳಿವೆ. ಉದಾಹರಣೆಗೆ, ಹೊರತೆಗೆಯಲಾದ ನೀರನ್ನು ಯಾರು ನಿರ್ವಹಿಸುತ್ತಾರೆ? ಸ್ಥಳೀಯರು, ಮೀನುಗಾರಿಕೆ ಮತ್ತು ಕರಾವಳಿ ಸಮುದಾಯಗಳು ನೀರಿನ ನಿರ್ವಹಣೆಯಲ್ಲಿ ಎಷ್ಟು ಪಾಲನ್ನು ಪಡೆಯುತ್ತವೆ ಎಂಬುದು ಪ್ರಶ್ನೆಯಾಗಿದೆ. ಈ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದರೆ, ಬಹುತೇಕ ಅನಿರೀಕ್ಷಿತ ಪರಿಣಾಮಗಳು ಉಂಟಾಗುತ್ತವೆ ಎಂಬುದು ಸದ್ಯದ ವಿಶ್ಲೇಷಣೆ.

  • ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

    ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

    ಗೇನಿದ್ದರೂ ಸೋಶಿಯಲ್‌ ಮೀಡಿಯಾದ್ದೇ ಹವಾ. ರೀಲ್ಸ್‌ಗಾಗಿ ಯುವಕ- ಯುವತಿಯರು ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬ ಕಡಲಬ್ಬರದ ಅಲೆಗಳ ನಡುವೆ ಸ್ಕೂಟರ್‌ ಜೊತೆಗೆ ನೀರಿಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

    ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ. ಆದರೆ ಈ ರೀತಿಯ ಸಾಹಸಕ್ಕೆ ಯಾರೂ ಹಾಕಬೇಡಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ..?: ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಆತ ಹೆಲ್ಮೆಟ್ ಕೂಡ ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಬಳಿಕ ತನ್ನ ಸ್ಕೂಟರ್ ಅನ್ನು ಯಾವುದೇ ರಸ್ತೆಯಲ್ಲಿ ಓಡಿಸದೆ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ. ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ಬರುವ ಅಲೆಗಳನ್ನು ಸಹ ನೋಡಬಹುದು. ಅಲೆಗಳು ಅಪ್ಪಳಿಸಿದ್ರೂ ಯುವಕ ಕಿಂಚಿತ್ತೂ ಅಂಜದೆ ಸ್ಕೂಟರ್‌ ಚಾಲನೆ ಮಾಡಿದ್ದಾನೆ. ಇದನ್ನೂ ಓದಿ: ಹರಿಯಾಣದಲ್ಲಿ ಹಳಿತಪ್ಪಿದ ಗೂಡ್ಸ್‌ರೈಲು – ಕಂಟೈನರ್ ಮಗುಚಿ ರೈಲು ಸಂಚಾರಕ್ಕೆ ಅಡ್ಡಿ

    ಈ ಬೆನ್ನಲ್ಲೇ ಮತ್ತೊಂದು ದೊಡ್ಡದಾದ ಅಲೆ ಬಂದಿದೆ. ಈ ವೇಳೆ ಯುವಕ ತನ್ನ ಸ್ಕೂಟರ್‌ ಅನ್ನು ದಡದತ್ತ ತಿರುಗಿಸಿದ್ದಾನೆ. ಅಲೆಯು ಕೂಡ ಯುವಕನನ್ನು ದಡದತ್ತ ನೂಕಿದೆ. ಒಟ್ಟಿನಲ್ಲಿ ಯುವಕ ಸೇಫ್‌ ಆಗಿ ದಡ ಸೇರಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

    https://twitter.com/TheFigen_/status/1807823991324745951

    ಸದ್ಯ ಈ ವೀಡಿಯೋವನ್ನು @TheFigen_ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೋಗೆ ʼನೀವು ಗೂಗಲ್‌ ಮ್ಯಾಪ್‌ ಅನ್ನೇ ಜಾಸ್ತಿ ಅವಲಂಬಿಸಿದಾಗʼ ಎಂದು ತಮಾಷೆಯಾಗಿ ಬರೆದುಕೊಳ್ಳಲಾಗಿದೆ. ಈ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಬಳಕೆದಾರರು, ಸ್ಕೂಟರ್ ನಿಲ್ಲಲಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಮೂರನೇ ಬಳಕೆದಾರರು ಬರೆದಿದ್ದಾರೆ – ಇದು ತಮಾಷೆ ಮತ್ತು ಗಂಭೀರವಾಗಿದೆ, ಇದು ನಿಜವಾಗಿಯೂ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

  • ಕುಡುಕ ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಮಾಡಿದ್ದು ಆತ್ಮಹತ್ಯೆ ನಾಟಕ!

    ಕುಡುಕ ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಮಾಡಿದ್ದು ಆತ್ಮಹತ್ಯೆ ನಾಟಕ!

    ಕಾರವಾರ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆಯೊಂದಿದೆ. ಆದರೆ ಗಂಡ-ಹೆಂಡತಿ ಜಗಳ ಮುಂದುವರಿದರೆ ಏನಾಗುತ್ತೆ ಅನ್ನೋದಕ್ಕೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಎಂಬ ಗೃಹಿಣಿ ಮಾಡಿದ ಪಜೀತಿ ಯಾರಿಗೂ ಬೇಡ.

    ಕಳೆದೆರಡು ದಿನಗಳ ಹಿಂದೆ ಗೃಹಿಣಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂಬ ವರದಿಗೆ ಟ್ವಿಸ್ಟ್ ಸಿಕ್ಕಿದೆ. ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು, ಕುಮಟಾದ ಹೆಡ್‌ಬಂದರ್ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದಂತೆ ನಾಟಕವಾಡಿದ್ದಾಳೆ.

    ಸಮುದ್ರದಲ್ಲಿ ಆಕೆಯ ವೇಲ್ ಬಿದ್ದು ತೇಲುತ್ತಿದ್ದುದ್ದನ್ನು ಕಂಡು ಲೈಫ್ ಗಾರ್ಡಗಳು, ಪೊಲೀಸರು ಸಮುದ್ರ ಜಾಲಾಡಿದ್ದಾರೆ. ಆದರೆ ಆಕೆಯ ಶವ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪಿಎಸ್‌ಐ ನವೀನ್ ನೇತೃತ್ವದ ತಂಡ ಸಮುದ್ರ ಜಾಲಾಡುವ ಜೊತೆ ಬೇರೆ ರೀತಿಯಲ್ಲೂ ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: ಚಿಕ್ಕಪ್ಪನನ್ನೇ ಕೊಂದ ಪ್ರಕರಣ – ಜ್ಯೂಸ್ ಅಂತ ಹೇಳಿ ಮದ್ಯ ಕುಡಿಸಿದ್ದಕ್ಕೆ ಬರ್ಬರ ಹತ್ಯೆ

    ಕೊನೆಗೆ ಆಟೋ ಚಾಲಕರೊಬ್ಬರ ಮೂಲಕ ಆಕೆ ಬೇರೆಡೆ ಅಡಗಿರುವ ಕುರಿತು ಮಾಹಿತಿ ಕಲೆಹಾಕಿ ಬಲೆ ಬೀಸಿದಾಗ ಸಾವಿನ ನಾಟಕವಾಡಿರುವುದು ಪತ್ತೆಯಾಗಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ತಾನು ಗಂಡನ ಮೇಲೆ ಕೋಪಕ್ಕೆ ಹೀಗೆ ಮಾಡಿದ್ದೇನೆ. ಪ್ರತಿ ದಿನ ಕುಡಿದು ನನ್ನೊಂದಿಗೆ ಜಗಳವಾಡುತಿದ್ದ, ಹೊಡೆಯುತಿದ್ದ. ಹೀಗಾಗಿ ಆತನಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಸದ್ಯ ಆತ್ಮಹತ್ಯೆ ಪ್ರಕರಣವೇನೋ ಸುಖಾಂತ್ಯ ಕಂಡಿದೆ. ಆದರೆ ಗಂಡ-ಹೆಂಡತಿ ಜಗಳದಿಂದ ಪೊಲೀಸರು, ದಿನವಿಡೀ ರಕ್ಷಣಾ ಕಾರ್ಯದಲ್ಲಿ ತೊಡಗಿದ ಲೈಫ್ ಗಾರ್ಡ್‌ಗಳ ಸಮಯ ವ್ಯರ್ಥ ಮಾಡಿದ್ದು ಮಾತ್ರ ವಿಪರ್ಯಾಸವಾಗಿದೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

  • ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ

    ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ

    ಕಾರವಾರ: ಸಮುದ್ರದಲ್ಲಿ (Sea) ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಮುಳುಗಿ ಸಾವಿಗೀಡಾದ ಘಟನೆ ಕುಮಟಾದ (Kumta) ಬಾಡದಲ್ಲಿ ನಡೆದಿದೆ. ಮತ್ತೊಂದು ಕಡೆ ಮುರ್ಡೇಶ್ವರದಲ್ಲಿ (Murdeshwar) ಸಮುದ್ರದಲ್ಲಿ ಮುಳುಗುತ್ತಿದ್ದ ಮೂರು ಜನ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಮೃತನನ್ನು ಶಿವಮೊಗ್ಗ (Shivamogga) ಮೂಲದ ಪ್ರಶಾಂತ್ ಗುಪ್ತ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ 11 ಜನರೊಂದಿಗೆ ಕುಮಟಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಕುಮಟಾ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಮೆದುಳು ರಕ್ತಸ್ರಾವದಿಂದ ಸಾವು

    ಇನ್ನೊಂದೆಡೆ ಮುರ್ಡೇಶ್ವರದಲ್ಲಿ ಬಾಗಲಕೋಟೆಯಿಂದ ಬಂದಿದ್ದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಸವನಗೌಡ ಪಾಟೀಲ್ (22), ಶರಣು ಇಂಚಲ್ (21), ರವಿಚಂದ್ರನ್(22) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಶಶಿ, ಪಾಂಡು, ರಾಮಚಂದ್ರ ಅವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದ ಲೈಫ್ ಗಾರ್ಡ್ ಸಿಬ್ಬಂದಿಯಾಗಿದ್ದಾರೆ.

    ದಸರಾ ರಜೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಸಮುದ್ರಕ್ಕೆ ಇಳಿದು ತೊಂದರೆಗೆ ಸಿಲುಕುತ್ತಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಇನ್ನೊಬ್ಬ ವ್ಯಕ್ತಿ ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮುದ್ರಯಾನದತ್ತ ಭಾರತದ ಚಿತ್ತ – 6,000 ಮೀಟರ್‌ ಮಾನವ ಸಹಿತ ಜಲಾಂತರ್ಗಾಮಿ ಕಳುಹಿಸಲು ಸಿದ್ಧತೆ

    ಸಮುದ್ರಯಾನದತ್ತ ಭಾರತದ ಚಿತ್ತ – 6,000 ಮೀಟರ್‌ ಮಾನವ ಸಹಿತ ಜಲಾಂತರ್ಗಾಮಿ ಕಳುಹಿಸಲು ಸಿದ್ಧತೆ

    ನವದೆಹಲಿ: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನ ಅನ್ವೇಷಣೆಗೆ ಆದಿತ್ಯ ಎಲ್‌-1 ನೌಕೆಯನ್ನ ಕಳುಹಿಸಿರುವ ಭಾರತ ಇದೀಗ ಸಮುದ್ರಯಾನದತ್ತ (Project Samudrayaan) ಚಿತ್ತ ಹರಿಸಿದೆ.

    ಭಾರತೀಯ ವಿಜ್ಞಾನಿಗಳ (Indian Scientists) ಮಹತ್ವಾಕಾಂಕ್ಷಿ ಸಮುದ್ರಯಾನ ಯೋಜನೆ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಬರೋಬ್ಬರಿ 6 ಸಾವಿರ ಮೀಟರ್ ಸಮುದ್ರದ ಆಳಕ್ಕೆ ಮೂವರು ಸಂಶೋಧಕರನ್ನ ಕಳಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ದೇಶೀಯ ನಿರ್ಮಿತ ಜಲಾಂತರ್ಗಾಮಿ ನೌಕೆ ಸಿದ್ಧವಾಗಿದೆ. ಸಮುದ್ರದ ಆಳದಲ್ಲಿ ಇರಬಹುದಾದ ಬೆಲೆ ಬಾಳುವ ಲೋಹಗಳಾದ ನಿಕ್ಕಲ್, ಮ್ಯಾಂಗನೀಸ್, ಕೋಬಾಲ್ಟ್‌ ಲೋಹಗಳ ನಿಕ್ಷೇಪ ಪತ್ತೆ ಹಚ್ಚಲು ಈ ಯೋಜನೆ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ತಜ್ಞರನ್ನು ಸಮುದ್ರದ ಆಳಕ್ಕೆ ಕರೆದೊಯ್ಯುವ ಜಲಾಂತರ್ಗಾಮಿ ನೌಕೆಗೆ ಮತ್ಸ್ಯ (Matsya 6000)ಎಂದು ಹೆಸರಿಡಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ನೌಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೆನ್ನೈ ಸಮೀಪದ ಸಾಗರ ತೀರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಈ ಜಲಾಂತರ್ಗಾಮಿ ನೌಕೆಯ ಮೊದಲ ಸಮುದ್ರ ಪರೀಕ್ಷೆ ನಡೆಯಲಿದ್ದು, 2024ರ ಆರಂಭದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಇದನ್ನೂ ಓದಿ: ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

    ಈ ಕುರಿತು ಮಾಹಿತಿ ನೀಡಿರುವ ಕೇಂದ್ರದ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್, ಆಳ ಸಮುದ್ರ ಯೋಜನೆ ಅಡಿಯಲ್ಲಿ ಸಮುದ್ರಯಾನ ಕಾರ್ಯಕ್ರಮ ರೂಪಿಸಲಾಗಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಈ ನೌಕೆಯನ್ನು ಸಮುದ್ರದ 500 ಮೀಟರ್ ಆಳಕ್ಕೆ ಇಳಿಸಿ ಮೊದಲ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆ 2026ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.

    ಎನ್‌ಐಒಟಿ ನಿರ್ದೇಶಕ ಜಿ.ಎ ರಾಮದಾಸ್‌, 2.1 ಮೀಟರ್‌ ವ್ಯಾಸದ ಗೋಳಾಕಾರದಲ್ಲಿ ಈ ಜಲಾಂತರ್ಗಾಮಿಯನ್ನ ವಿನ್ಯಾಸಗೊಳಿಸಲಾಗಿದೆ. 6 ಸಾವಿರ ಮೀಟರ್‌ ಆಳಕ್ಕೆ ಕಳುಹಿಸಬೇಕಿರುವುದರಿಂದ 600 ಬಾರ್‌ ಒತ್ತಡ (ಸಮುದ್ರಮಟ್ಟದ ಒತ್ತಡಕ್ಕಿಂತ 600 ಪಟ್ಟು ಹೆಚ್ಚು) ತಡೆದುಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಜಲಾಂತರ್ಗಾಮಿಯನ್ನ ಸಿದ್ಧಪಡಿಸಲಾಗಿದೆ. 12 ರಿಂದ 16 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 96 ಗಂಟೆಗಳ ಕಾಲ ಆಕ್ಸಿಜನ್‌ ಇದರಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಈವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್‌ ಹಾಗೂ ಚೀನಾ ದೇಶಗಳು ಮಾತ್ರ ಈ ಮಾದರಿಯ ಮಾನವ ಸಹಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸಿವೆ. ಈ ನೌಕೆ ಮೂಲಕ ಅಮೂಲ್ಯ ಲೋಹಗಳಾದ ನಿಕ್ಕಲ್, ಕೋಬಾಲ್ಟ್, ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್ಸ್‌ ಹಾಗೂ ಗ್ಯಾಸ್ ಹೈಡ್ರೇಟ್ಸ್‌ಗಳನ್ನು ಪತ್ತೆ ಹಚ್ಚಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    ಕೆಲ ದಿನಗಳ ಹಿಂದೆಯಷ್ಟೇ ಟೈಟಾನಿಕ್‌ ಅವಶೇಷಗಳನ್ನು ತೊರಳು ತೆರಳಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

    ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

    ಳವಾದ ಸಮುದ್ರದ (Sea) ಅಧ್ಯಯನಕ್ಕಾಗಿ ಪ್ರಪಂಚದ ಎಲ್ಲಾ ದೇಶಗಳು ಒಂದಲ್ಲ ಒಂದು ರೀತಿಯ ಸಂಶೋಧನೆಯಲ್ಲಿ ತೊಡಗಿವೆ. ಇಂತಹ ಅಧ್ಯಯನಕ್ಕೆ ಮಾನವ ಮತ್ತು ಮಾನವರಹಿತ ಸಬ್‌ಮರ್ಸಿಬಲ್‌ಗಳನ್ನು ಬಳಸಲಾಗುತ್ತದೆ. ಇದೇ ರೀತಿಯ ಸಂಶೋಧನೆಯ ಭಾಗವಾಗಿ ಭಾರತ (India) ಸಮುದ್ರಯಾನ್ (Samudrayaan) ಎಂಬ ಯೋಜನೆಯನ್ನು ಕೈಗೊಂಡಿದೆ.

    ಸಮುದ್ರದ ಆಳದಲ್ಲಿ ಇರುವ ಅಪಾರ ಪ್ರಮಾಣದ ಮ್ಯಾಂಗನೀಸ್, ಕೋಬಾಲ್ಟ್, ತಾಮ್ರ ಮತ್ತು ಕಬ್ಬಿಣ ಹಾಗೂ ಪೆಟ್ರೋಲಿಯಂ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಈ ಮೂಲಕ ಭಾರತ ಮುಂದಾಗಿದೆ. ಭೂ ವಿಜ್ಞಾನ ಸಂಶೋಧನ ಇಲಾಖೆ ಈ ಕಾರ್ಯದಲ್ಲಿ ತೊಡಗಿದೆ. ಇದು ಭಾರತದ ಮೊದಲ ಮಾನವಸಹಿತ ಆಳ ಸಮುದ್ರದ ಅನ್ವೇಷಣೆಯ ಪ್ರಯತ್ನವಾಗಿದೆ. ಇದರಲ್ಲಿ ಮೂವರು ಸದಸ್ಯರ ತಂಡವನ್ನು ಕಳಿಸಲು ಯೋಜಿಸಲಾಗಿದೆ.

    ಯೋಜನೆಯ ಭಾಗವಾಗಿ ಮತ್ಸ್ಯಾ 6000 (Matsya 6000) ಎಂಬ ಸಬ್‌ಮರ್ಸಿಬಲ್‌ನ್ನು ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ವಿನ್ಯಾಸಗೊಳಿಸಿ, ತಯಾರಿಸಿದೆ. ಈ ಸಬ್‌ಮರ್ಸಿಬಲ್ 6000 ಮೀಟರ್ ಆಳ ಸಮುದ್ರದಲ್ಲಿ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ತುರ್ತು ಸಂದರ್ಭಗಳಲ್ಲಿ ಇದು ಮಾನವ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳೊಂದಿಗೆ 96 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಈ ಮಿಷನ್ 2026ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ. ಸಮುದ್ರಯಾನ ಯೋಜನೆಯನ್ನು ಒಳಗೊಂಡಿರುವ ಆಳ ಸಮುದ್ರದ ಮಿಷನ್‌ನ ವೆಚ್ಚವನ್ನು ಐದು ವರ್ಷಗಳ ಅವಧಿಯಲ್ಲಿ 4,077 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನು ಹಲವು ಹಂತಗಳಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.

    ಭಾರತವು 850,000 ಚದರ ಮೈಲುಗಳಷ್ಟು ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. ಅದರ ಬಳಕೆಯ ಪ್ರಮಾಣ ಕಡಿಮೆಯಾಗಿದ್ದು ಅಭಿವೃದ್ದಿಯಾಗದೆ ಉಳಿದಿದೆ. ಇಲ್ಲಿನ 10% ಸಂಪನ್ಮೂಲ 100 ವರ್ಷಗಳವರೆಗೆ ಭಾರತಕ್ಕೆ ಇಂಧನವನ್ನು ಪೂರೈಸಲಿದೆ ಎಂದು ಅಂದಾಜಿಸಲಾಗಿದೆ.

    1980 ರಲ್ಲಿ ಮೊದಲ ಸಂಶೋಧನಾ ನೌಕೆ ಅರಬ್ಬಿ ಸಮುದ್ರದಲ್ಲಿ ಖನಿಜ ನಿಕ್ಷೇಪಗಳ ಹುಡುಕಾಟ ಆರಂಭಿಸಿತ್ತು. ಬಳಿಕ 1982 ರಲ್ಲಿ ವಿಶ್ವಸಂಸ್ಥೆ ಸಮುದ್ರ ಕಾನೂನಿನಡಿಯಲ್ಲಿ ಸಮುದ್ರ ಅನ್ವೇಷಣೆಗಾಗಿ ಮಧ್ಯ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಚದರ ಕಿ.ಮೀ ಪ್ರದೇಶವನ್ನು ಪಡೆದುಕೊಂಡಿತು. ಈ ಮೂಲಕ ಆ ಸಮಯದಲ್ಲಿ ಮಧ್ಯ ಹಿಂದೂ ಮಹಾಸಾಗರದ ಜಲಾನಯನ ಪ್ರದೇಶದಲ್ಲಿ ಆಳ ಸಮುದ್ರದ ಖನಿಜ ಸಂಶೋಧನೆ ಬೆಂಬಲಿಸಿದ ವಿಶ್ವದ ಮೊದಲ ದೇಶ ಭಾರತವಾಗಿತ್ತು. ಬಳಿಕ ಭಾರತವು 2002 ರಲ್ಲಿ ಐಎಸ್‌ಎ (International Seabed Authority) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಇದಾದ ನಂತರ ಸಮುದ್ರ ತಳದ ಸಂಪನ್ಮೂಲ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಯಿತು.

    ಯೋಜನೆಯು ಕೇಂದ್ರದ ನೀಲಿ ಆರ್ಥಿಕ ನೀತಿಯನ್ನು ಬೆಂಬಲಿಸುವ ದೊಡ್ಡ ಆಳ ಸಾಗರ ವೈವಿಧ್ಯತೆಯ ಸಂಶೋಧನೆ ಮಿಷನ್‌ನ ಭಾಗವಾಗಿರುತ್ತದೆ. ಇದು ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆ ಮತ್ತು ಜೀವನೋಪಾಯಕ್ಕಾಗಿ ಸಮುದ್ರ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಜೊತೆಗೆ ಸಮುದ್ರ ಪರಿಸರದ ವ್ಯವಸ್ಥೆಯ ರಕ್ಷಣೆಯ ಜವಬ್ದಾರಿ ಹೊಂದಿದೆ.

    2021 ರಲ್ಲಿ ಇದರ ಪ್ರಯೋಗ ನಡೆಸಲಾಗಿದ್ದು 600 ಮೀಟರ್ ವರೆಗೂ ಇದು ಸಂಚರಿಸಿ ವಾಪಾಸ್ ಆಗಿದೆ. ಇನ್ನೂ ಹೆಚ್ಚಿನ ಆಳಕ್ಕೆ ಇಳಿಸಲು ಮಿಷನ್‌ನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಿಷನ್ ಮುಂದಿನ ದಿನಗಳಲ್ಲಿ ಬ್ಲೂ ಎಕನಾಮಿಗೆ ಬಲ ನೀಡುವ ನಿರೀಕ್ಷೆ ಇದೆ.

    ಈ ಕಾರ್ಯಾಚರಣೆಗಾಗಿ ಭಾರತವು ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾದಂತಹ ದೇಶಗಳಿಂದ ತಜ್ಞರ ಮತ್ತು ತಾಂತ್ರಿಕ ನೆರವು ಪಡೆಯುವ ನಿರೀಕ್ಷೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

    ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

    ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿದ್ದು, 9 ಮಂದಿ ಮೀನುಗಾರರ (Fishermen Rescued) ರಕ್ಷಣೆ ಮಾಡಲಾಗಿದೆ.

    ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಇದಾಗಿದ್ದು, 9 ಮಂದಿ ಮೀನುಗಾರರು ತೆರಳಿದ್ರು. ಇದನ್ನೂ ಓದಿ: ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!

    5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ.

    ಅಪಘಾತದಲ್ಲಿ ದೋಣಿಯಲ್ಲಿದ್ದ ಬಲೆ, ಇಂಜಿನ್ ಹಾನಿಯಾಗಿದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೋಣಿ ಮುಳುಗಿ 15 ಮಂದಿ ಸಾವು, ಹಲವರು ನಾಪತ್ತೆ

    ದೋಣಿ ಮುಳುಗಿ 15 ಮಂದಿ ಸಾವು, ಹಲವರು ನಾಪತ್ತೆ

    ಜಕಾರ್ತಾ: ದೋಣಿಯೊಂದು (Ferry) ಮುಳುಗಿ 15 ಮಂದಿ ಮೃತಪಟ್ಟ ಘಟನೆ ಇಂಡೋನೇಷ್ಯಾದ (Indonesia) ಸುಲವೆಸಿ ಎಂಬಲ್ಲಿ ನಡೆದಿದೆ. ದೋಣಿಯಲ್ಲಿ 40 ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ 6 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೋಣಿಯಲ್ಲಿದ್ದ 15 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ದುರಂತದಲ್ಲಿ ಬದುಕುಳಿದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರು ನಾಪತ್ತೆಯಾಗಿದ್ದು ಅವರ ಹುಡುಕಾಟ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷದ ವಿದ್ಯಾರ್ಥಿ ಮ್ಯಾರಥಾನ್‌ನಲ್ಲಿ ಓಡಿದ ಬಳಿಕ ಹೃದಯಾಘಾತದಿಂದ ಸಾವು

    ದೋಣಿ ಮುಳುಗಲು ನಿಖರವಾದ ಕಾರಣ ತಿಳಿದು ಬಂದಿಲ್ಲ. ದೋಣಿ ಮುಳುಗಿರುವ ಜಾಗದಲ್ಲಿ ಇನ್ನೂ ಹೆಚ್ಚಿನ ಜನ ಮುಳುಗಿ ಮೃತಪಟ್ಟಿರುವ ಅನುಮಾನವಿದ್ದು ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೇ ಮೃತದೇಹಗಳು ತೇಲುತ್ತಿರುವ ಶಂಕೆಯ ಮೇಲೆ ಬೋಟ್‍ಗಳನ್ನು ಬಳಸಿ ಸುತ್ತಮುತ್ತ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಂಡೋನೇಷ್ಯಾ ಸುಮಾರು 17,000 ದ್ವೀಪಗಳನ್ನು ಒಳಗೊಂಡಿದೆ. ಇದರಿಂದಾಗಿ ಸಾಮಾನ್ಯವಾಗಿ ಇಲ್ಲಿ ದೋಣಿಗಳನ್ನು ಸಾರಿಗೆಗೆ ಬಳಸಲಾಗುತ್ತದೆ. ಸುರಕ್ಷತಾ ನಿಯಮಗಳ ಸಡೀಲತೆ ಹಾಗೂ ಉಲ್ಲಂಘನೆಯಿಂದಾಗಿ ಇಂತಹ ಅಪಘಾತಗಳು ನಡೆಯುತ್ತವೆ. ಅಲ್ಲದೇ ರಕ್ಷಣಾ ಸಾಮಾಗ್ರಿಗಳ ಕೊರತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ತವರು ಮನೆಯಿಂದ ಕರೆತರಲು ಹೋದ ಪತಿಗೆ ಬೆಂಕಿ ಹಚ್ಚಿದ ಪತ್ನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಸಬ್‌ಮರ್ಸಿಬಲ್ ದುರಂತ ಅಂತ್ಯ – ಅಂದು ಏನಾಗಿರಬಹುದು?

    ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಸಬ್‌ಮರ್ಸಿಬಲ್ ದುರಂತ ಅಂತ್ಯ – ಅಂದು ಏನಾಗಿರಬಹುದು?

    ಮುದ್ರದ (Sea) ಆಳ, ಭೂಮಿಯ ಅಜ್ಞಾತ ಪ್ರದೇಶವಾಗಿಯೇ ಉಳಿದಿದೆ. ಇಂದಿಗೂ ಪ್ರಕೃತಿ ಇಲ್ಲಿನ ಆನೇಕ ರಹಸ್ಯಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದೆ. ಆಳವಾದ ಸಮುದ್ರದಲ್ಲಿರುವ ನೀರಿನ ಒತ್ತಡ. ಸಮುದ್ರದ ಆಳದಲ್ಲಿ ಮೇಲ್ಮಟ್ಟಕ್ಕಿಂತ 1,000 ಪಟ್ಟು ಹೆಚ್ಚಿನ ಒತ್ತಡ ಹೊಂದಿರುತ್ತದೆ. ಈ ಒತ್ತಡವೂ ಸದೃಢವಾದ ಹಡಗನ್ನು ಸಹ ಪುಡಿ ಮಾಡಬಲ್ಲಷ್ಟು ಪ್ರಬಲವಾಗಿರುತ್ತದೆ.

    ಇದೇ ಕಾರಣಕ್ಕೆ, ಆಳವಾದ ಸಮುದ್ರದ ತೀವ್ರ ಒತ್ತಡ, ಕಡಿಮೆ ತಾಪಮಾನ ಮತ್ತು ಕತ್ತಲೆಯ ನಡುವೆಯೂ ಕಾರ್ಯ ನಿರ್ವಹಿಸುವಂತೆ ನಿರ್ಮಾಣ ಮಾಡಲಾಗಿಯೂ ಸಹ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಸಬ್‌ಮರ್ಸಿಬಲ್ (Submersible) ಪತನವಾಯಿತು. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    ಜೂನ್ 18 ರಂದು ದುರಂತ ಅಂತ್ಯ ಕಂಡ ಜಲಾಂತರ್ಗಾಮಿ (Titan Tragedy) ಸಮುದ್ರದ ಆಳದ ಒತ್ತಡವನ್ನು ತಡೆದುಕೊಳ್ಳುವಂತೆ ಮೇಲ್ನೋಟಕ್ಕೆ ವಿನ್ಯಾಸಗೊಳಿಸಲಾಗಿತ್ತು. ಇದು ಕಾರ್ಯಾಚರಣೆಯ ದುರಂತಕ್ಕೆ ಕಾರಣವಾಯಿತು. ಒಂದು ವಾರದ ತೀವ್ರ ಶೋಧದ ಬಳಿಕ ಅಮೆರಿಕಾ ಕೋಸ್ಟ್ ಗಾರ್ಡ್ ಸಬ್‌ಮರ್ಸಿಬಲ್‌ನಲ್ಲಿ  ತೆರಳಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿತ್ತು.

    ಸಮುದ್ರದ ಮೇಲ್ಮೈಯಿಂದ 12,000 ಅಡಿಗಳಿಗಿಂತ ಹೆಚ್ಚು ಆಳದಲ್ಲಿದ್ದ ಟೈಟಾನಿಕ್ (Titanic) ಅವಶೇಷಗಳಿರುವ ಜಾಗಕ್ಕೆ ತೆರಳುವುದು ಅಪಾಯಕಾರಿಯಾಗಿತ್ತು. ಈ ಶೋಧನೆಯ ಪ್ರಯಾಸಗಳು ತಿಳಿದಿದ್ದರೂ ಸಹ ಯತ್ನಕ್ಕೆ ಕೈ ಹಾಕಿರುವುದು ಒಂದು ಬಗೆಯಲ್ಲಿ ದುರಂತಕ್ಕೆ ಆಹ್ವಾನ ಕೊಟ್ಟಂತೆಯೇ ಇತ್ತು. ಆದರೆ ದುರಂತದ ಸಮಯದಲ್ಲಿ ನಿಖರವಾಗಿ ಏನು ತಪ್ಪಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಸದ್ಯಕ್ಕೆ ತಿಳಿದಿರುವ ಸಂಗತಿ ಅಂದರೆ, ಸಬ್‌ಮರ್ಸಿಬಲ್ ಸ್ಫೋಟಕ್ಕೆ ಒಳಗಾಯಿತು ಎಂಬುದಷ್ಟೇ ಆಗಿದೆ.

    ಸಾಗರದ ಆಳ ಮತ್ತು ನೀರಿನ ಒತ್ತಡ
    ಸಾಗರವನ್ನು ಹಲವಾರು ಪದರಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಪದರಗಳು ಸೂರ್ಯನ ಬೆಳಕಿನ ವಲಯ, ಟ್ವಿಲೈಟ್ ವಲಯ, ಮಧ್ಯರಾತ್ರಿ ವಲಯ, ಪ್ರಪಾತ ವಲಯ ಮತ್ತು ಹಡಲ್ ವಲಯವಾಗಿ (ಕೊನೆಯದು ಆಳವಾದದ್ದು) ವಿಂಗಡಿಸಲಾಗಿದೆ.

    ಸೂರ್ಯನ ಬೆಳಕಿನ ವಲಯವು ಮೇಲ್ಮೈಯಿಂದ ಸುಮಾರು 200 ಮೀಟರ್ ಆಳದವರೆಗಿನ ಹೆಚ್ಚಿನ ಸಮುದ್ರ ಜೀವಿಗಳು ಮತ್ತು ಮಾನವ ಚಟುವಟಿಕೆಗಳಿಗೆ ಯೋಗ್ಯವಾದದ್ದು. ಟ್ವಿಲೈಟ್ ವಲಯಕ್ಕೆ (200 ರಿಂದ 1,000 ಮೀಟರ್) ಇಳಿಯುತ್ತಿದ್ದಂತೆ, ಸೂರ್ಯನ ಬೆಳಕು ಕಡಿಮೆಯಾಗುತ್ತದೆ. ತಾಪಮಾನ ಇಳಿಯುತ್ತದೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಮಧ್ಯರಾತ್ರಿ ವಲಯದಲ್ಲಿ (1,000 ರಿಂದ 4,000 ಮೀಟರ್‌ಗಳು), ಸಂಪೂರ್ಣ ಕತ್ತಲೆಯೇ ಆ ಸಾಮ್ರಾಜ್ಯವನ್ನು ಆಳುತ್ತದೆ.

    ಇನ್ನೂ ಪ್ರಪಾತ ವಲಯ (4,000 ರಿಂದ 6,000 ಮೀಟರ್) ವಿಶಾಲವಾದ ಸಾಗರ ತಳವನ್ನು ಆವರಿಸಿದೆ. ಇಲ್ಲಿ ತಾಪಮಾನವು ಘನೀಕರಣಕ್ಕಿಂತ ಸ್ವಲ್ಪ ಮೇಲಿರುತ್ತದೆ ಮತ್ತು ಒತ್ತಡವು ಅಗಾಧವಾಗಿರುತ್ತದೆ. ಹಡಲ್ ವಲಯ (6,000 ರಿಂದ 11,000 ಮೀಟರ್), ಕಂದಕಗಳು ಮತ್ತು ಕಣಿವೆಗಳನ್ನು ಒಳಗೊಂಡಿದೆ. ಸಾಗರದ ಆಳವಾದ ಭಾಗವಾದ ಮರಿಯಾನಾ ಕಂದಕವು ಮೌಂಟ್ ಎವರೆಸ್ಟ್ನ ಎತ್ತರಕ್ಕಿಂತ 11,034 ಮೀಟರ್ ಆಳಕ್ಕಿದೆ. ಸಮುದ್ರದ ಪ್ರತಿ 10 ಮೀಟರ್ ಆಳದಲ್ಲಿ ಒತ್ತಡದಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗುತ್ತಿರುತ್ತದೆ. ಸಮುದ್ರದ ಆಳವಾದ ಭಾಗದಲ್ಲಿ ಸುಮಾರು 50 ಜಂಬೋ ಜೆಟ್‌ಗಳನ್ನು ಒಬ್ಬನ ಮೇಲೆ ಜೋಡಿಸಿದಷ್ಟು ಪರಿಣಾಮ ಬೀರುತ್ತದೆ.

    ಸಬ್‌ಮರ್ಸಿಬಲ್‌ಗೆ ಏನಾಗಿರಬಹುದು?
    ಸಮುದ್ರದ ಆಳದ ತೀವ್ರ ಒತ್ತಡವು ಅನ್ವೇಷಣೆಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಟೈಟಾನ್‌ನಂತಹ ಸಬ್‌ಮರ್ಸಿಬಲ್ ಕೆಳಗಿಳಿದಾಗ ಅದು ನೀರಿನ ಹೆಚ್ಚು ಭಾರವನ್ನು ತಡೆದುಕೊಳ್ಳಬೇಕಾಗುತ್ತದೆ. ಅದರ ಹೊರಗಿನ ಒತ್ತಡವು ಒಳಗಿನ ಒತ್ತಡಕ್ಕಿಂತ ಗಮನಾರ್ಹವಾಗಿ ಹೆಚ್ಚಾದರೆ ಅದು ಸ್ಫೋಟಕ್ಕೆ ಕಾರಣವಾಗಬಹುದು.

    ಆದರೆ ಟೈಟಾನಿಕ್ ಹಡಗು ಮುಳುಗಿದ್ದಾಗ ಅದು ಸ್ಫೋಟಗೊಂಡಿರಲಿಲ್ಲ. ಯಾಕೆಂದರೆ, ಟೈಟಾನಿಕ್ ಕ್ರಮೇಣ ಕೆಳಗಿಳಿದಂತೆ ಗಾಳಿ ತುಂಬಿದ್ದ ಭಾಗಗಳು ನೀರಿನಿಂದ ತುಂಬಿರಬಹುದು. ಹಡಗಿನ ಒಳಗೆ ಮತ್ತು ಹೊರಗಿನ ಒತ್ತಡ ಸಮವಾಗಿ ಸ್ಫೋಟ ಆಗದೆ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಬ್‌ಮರ್ಸಿಬಲ್ ಗಾಳಿಯಿಂದ ತುಂಬಿತ್ತು. ಅಲ್ಲದೇ ನೀರಿನ ಆಳಕ್ಕೆ ವೇಗವಾಗಿ ಇಳಿಯಿತು. ಇದು ಅಪಾಯಕಾರಿ ಒತ್ತಡದ ವ್ಯತ್ಯಾಸವನ್ನು ಎದುರಿಸಲು ಕಾರಣವಾಗಿರಬಹುದು. ಈ ವ್ಯತ್ಯಾಸವು ಸಬ್‌ಮರ್ಸಿಬಲ್‌ನ ರಚನಾತ್ಮಕ ಮಿತಿಗಳನ್ನು ಮೀರಿ ಸ್ಫೋಟವನ್ನು ಅದು ಪ್ರಚೋದಿಸಬಹುದು.

    ಸಮುದ್ರದಲ್ಲಿಯೇ ವಾಸಿಸುವ ಜೀವಿಗಳಿಗೆ ಈ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ಪ್ರಕೃತಿಯೇ ನೀಡಿರುತ್ತದೆ. ಬದುಕಲು ವಿಶಿಷ್ಟವಾದ ದೇಹ ರಚನೆಯನ್ನು ಸಮುದ್ರದಾಳದ ಜೀವಿಗಳು ಹೊಂದಿರುತ್ತವೆ. ಆದರೆ ಮನುಷ್ಯನಿಗಾಗಲಿ ಮುನುಷ್ಯ ನಿರ್ಮಾಣ ಮಾಡಿರುವ ಸಾಧನಗಳಿಗೆ ಈ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ.

    ಆ ಕಾರಣಕ್ಕಾಗಿ ಹೆಚ್ಚಿನ ನೀರೊಳಗಿನ ಆಳ-ಸಮುದ್ರದ ಅನ್ವೇಷಣೆಯನ್ನು ಮಾನವರಹಿತ ಸಾಧನಗಳಿಂದ ನಡೆಸಲಾಗುತ್ತದೆ. ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಆಳ ಸಮುದ್ರದ ವಾಹನಗಳ ಪೈಕಿ ರಿಮೋಟ್ ಆಪರೇಟೆಡ್ ವೆಹಿಕಲ್ಸ್, ಆಟೋಮೆಟಿಕ್ ವಾಹನಗಳನ್ನು ಬಳಸಲಾಗುತ್ತದೆ. ಆದರೆ ಸಬ್‌ಮರ್ಸಿಬಲ್ ಹೆಚ್ಚಿನ ಆಳದ ಅಧ್ಯಯನಕ್ಕೆ ಯೋಗ್ಯವಲ್ಲ ಎನ್ನುವುದು ಈ ದುರಂತ ಸಾಬೀತು ಪಡಿಸಿದಂತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

    ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

    ಮಂಗಳೂರು: ರಾಜ್ಯದಲ್ಲಿ ಇನ್ನೂ ಮಳೆ ಬಿರುಸು ಪಡೆದಿಲ್ಲ. ಆದರೆ ಕರಾವಳಿಯಲ್ಲಿ ಬಿಪರ್‌ಜಾಯ್‌ ಚಂಡಮಾರುತದ (Biparjoy Cyclone) ಅಬ್ಬರಕ್ಕೆ ಕಡಲ್ಕೊರೆತ ತೀವ್ರಗೊಂಡಿದೆ. ಮಳೆ ಬರುವುದಕ್ಕೆ ಮೊದಲೇ ಚಂಡಮಾರುತ ಕಾಣಿಸಿದ್ದರಿಂದ ಕಡಲು ಅಬ್ಬರಿಸತೊಡಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ತಳ್ಳುತ್ತಿದ್ದಾರೆ.

    ಅರಬ್ಬೀ ಸಮುದ್ರದಲ್ಲಿ (Arabian Sea) ಎದ್ದಿರುವ ಚಂಡಮಾರುತದ ಪರಿಣಾಮ ಕಡಲು ಮಾತ್ರ ಭೋರ್ಗರೆಯುತ್ತ ಬರುತ್ತಿದ್ದು ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದಾಗಿ ಮಂಗಳೂರು (Mangaluru) ಹೊರವಲಯದ ಉಳ್ಳಾಲದ ಬಟ್ಟಂಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರದಲ್ಲಿರುವ ಮನೆಗಳು ಸಮುದ್ರ ಸೇರುತ್ತಿವೆ. ನೂರಾರು ತೆಂಗಿನ ಮರಗಳು ಧರಾಶಾಯಿ ಆಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಫೋಟೋ ಲೀಕ್- ಸಚಿವ ಜಮೀರ್‌ಗೆ ಸುರ್ಜೇವಾಲ ಕ್ಲಾಸ್

    ಈ ಭಾಗದಲ್ಲಿ ಕಡಲ್ಕೊರೆತ ಪ್ರತಿ ಬಾರಿ ಕಾಣಿಸಿಕೊಳ್ಳುವ ಸಮಸ್ಯೆ. ಮಳೆ ಜೋರಾದರೆ, ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡರೆ, ಕರಾವಳಿಯ ಕೆಲವು ಪ್ರದೇಶಗಳು ಟಾರ್ಗೆಟ್ ಆಗುತ್ತವೆ. ಕಡಲ ರಾಜನ ಅಬ್ಬರಕ್ಕೆ ಭೂಪ್ರದೇಶ ಕೊಚ್ಚಿ ಹೋಗುತ್ತಿದ್ದು, ಅಲ್ಲಿನ ಮನೆಗಳು ಸಮುದ್ರಕ್ಕೆ ಆಹುತಿಯಾಗುತ್ತವೆ. ಈ ಸಮಸ್ಯೆಗೆ ಪ್ರತಿ ಬಾರಿ ರಾಜಕಾರಣಿಗಳು ಶಾಶ್ವತ ಕಾಮಗಾರಿಯ ಭರವಸೆ ನೀಡಿದರೂ, ಅದು ಭರವಸೆಗಷ್ಟೇ ಸೀಮಿತವಾಗಿವೆ.

    ಕಳೆದ ಬಾರಿಯೂ ಮೀನುಗಾರಿಕೆ ಸಚಿವರಾಗಿದ್ದ ಎಸ್. ಅಂಗಾರ ಕೇರಳದ ಮಾದರಿ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದರು. ಆದರೆ ಕಾಮಗಾರಿಗೆ ಅನುದಾನವನ್ನೇ ಬಿಡುಗಡೆ ಮಾಡಿರಲಿಲ್ಲ. ಇದೀಗ ರಾಜ್ಯದಲ್ಲಿ ಸರಕಾರ ಬದಲಾಗಿದ್ದು, ಮತ್ತೆ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಆಗಬೇಕು ಇಲ್ಲವೇ ಈ ಭಾಗದ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

    ಒಂದೆಡೆ ಕಡಲು ಆಕ್ರಮಿಸಿಕೊಂಡು ಬರುತ್ತಿದ್ದರೆ, ಮತ್ತೊಂದೆಡೆ ಕಡಲಿಗೆ ಕಲ್ಲು ಹಾಕುವ ಕೆಲಸ ನಡೆಯುತ್ತಲೇ ಇದೆ. ಈ ರೀತಿ ಕಲ್ಲುಗಳನ್ನು ಸುರಿದರೆ, ಅದು ಪೂರ್ತಿಯಾಗಿ ಕಡಲಿನ ಒಳ ಸೇರುತ್ತವೆ. ಹತ್ತಾರು ವರ್ಷಗಳಿಂದಲೂ ಇದೇ ರೀತಿ ಆಗಿರುವುದರಿಂದ ಜನರು ಇಂತಹ ಅರೆಬರೆ ಕಾಮಗಾರಿಯ ನಾಟಕ ಬೇಡ ಎನ್ನುತ್ತಾರೆ. ಒಟ್ಟಿನಲ್ಲಿ ಮಳೆ ಬಿರುಸು ಪಡೆಯುವ ಮೊದಲೇ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದ್ದು ಇನ್ನು ಮಳೆ ಜೋರಾದಲ್ಲಿ ಪರಿಸ್ಥಿತಿ ಹೇಗಿರಬಹುದು ಎನ್ನುವ ಆತಂಕ ಸ್ಥಳೀಯರಲ್ಲಿದೆ.