Tag: SDPI

  • ಕರ್ನಾಟಕ ಬಂದ್ ಮಾಡಿದ್ದಕ್ಕೆ ಕಟ್ಟಡ ಒಡೆಸಿದ್ರು- ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್

    ಕರ್ನಾಟಕ ಬಂದ್ ಮಾಡಿದ್ದಕ್ಕೆ ಕಟ್ಟಡ ಒಡೆಸಿದ್ರು- ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್

    ಉಡುಪಿ: ಹಿಜಬ್ ಹೋರಾಟದಲ್ಲಿ ವಿದ್ಯಾರ್ಥಿನಿಯರನ್ನು ಬೆಂಬಲಿಸಿದ್ದಕ್ಕೆ ನಮ್ಮ ಅಂಗಡಿಯನ್ನು ತೆರವು ಮಾಡಿದ್ದಾರೆ. ಸಂವಿಧಾನ ಬದ್ಧ ಹೋರಾಟವನ್ನು ಮುಂದೆಯೂ ಬೆಂಬಲಿಸುವುದಾಗಿ ಉಡುಪಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಜೀರ್, ಅಂಗಡಿ ತೆರವುಗೊಳಿಸಿರಬಹುದು ನಮ್ಮ ಹೋರಾಟ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮನ್ನು ಹದ್ದುಬಸ್ತಿನಲ್ಲಿಡುವ ವ್ಯವಸ್ಥೆಯಾಗುತ್ತಿದೆ. ಬಿಜೆಪಿಯ ವಿರುದ್ಧ ಹೋದದ್ದಕ್ಕೆ ಅಂಗಡಿ ತೆರವು ಮಾಡಿದ್ದಾರೆ. ಕರ್ನಾಟಕ ಬಂದ್ ಇವರ ನಿದ್ದೆಗೆಡಿಸಿರಬೇಕು. ನಿರಂತರ ಬಂದ್ ಮಾಡಿಸುವ ಪ್ಲ್ಯಾನ್ ಇರಬಹುದು ಎಂದರು.

    ತಿಂಗಳಿಗೆ 2 ಲಕ್ಷ ರುಪಾಯಿ ಬಾಡಿಗೆಯನ್ನು ಮಸೀದಿಗೆ ಕೊಡುತ್ತಿದ್ದೆವು. ಸರ್ಕಾರಕ್ಕೆ 37 ಸಾವಿರ ರುಪಾಯಿ ಜಿಎಸ್‍ಟಿ ಕಟ್ಟುತ್ತಿದ್ದೆವು. ಪರವಾನಿಗೆ ಪಡೆಯಲು ಕಡತಗಳಿಗೆ ಹಣ ಖರ್ಚು ಮಾಡಿದ್ದೇವೆ. ಹಿಜಬ್ ಹೋರಾಟದಲ್ಲಿ ಮಕ್ಕಳಿಗೆ ಸಂವಿಧಾನಬದ್ಧ ಹಕ್ಕು ಸಿಗಲೇಬೇಕು. ನಾವಾಗಿಯೇ ವಿವಾದ ಸೃಷ್ಟಿ ಮಾಡಿಲ್ಲ. ಸಂವಿಧಾನಬದ್ಧ ಹಕ್ಕು ಒದಗಿಸಲು ನಾವು ಸಹಾಯ ಮಾಡಿಯೇ ಮಾಡುತ್ತೇವೆ. ನಗರಸಭೆ ಅಧಿಕಾರಿಗಳಿಗೆ ಬಿಜೆಪಿಯವರ ಒತ್ತಡ ಇದೆ. ನಗರಸಭೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.  ಇದನ್ನೂ ಓದಿ: ಉಡುಪಿಯಲ್ಲಿ ಜೆಸಿಬಿ ಘರ್ಜನೆ – SDPI ಜಿಲ್ಲಾಧ್ಯಕ್ಷನ ಹೋಟೆಲ್ ತೆರವು

    ಉಡುಪಿಯಲ್ಲಿ ಹಲವಾರು ಅಕ್ರಮ ಕಟ್ಟಡಗಳು ಇವೆ. ಎಲ್ಲಾ ಕಟ್ಟಡಗಳನ್ನು ತರವು ಮಾಡುತ್ತಾರಾ? ನ್ಯಾಯ ಅಂತ ಹೇಳಿದ ಮೇಲೆ ಎಲ್ಲರಿಗೂ ಒಂದೇ ಕಾನೂನು ಜಾರಿಯಾಗಬೇಕು. ಒಂದು ಅಂಗಡಿಗೆ ಡೋರ್ ನಂಬರ್ ಇದೆ ಇನ್ನೊಂದಕ್ಕೆ ಇಲ್ಲ. ಅಂಗಡಿ ಪರವಾನಿಗೆಗೆ ನಾವು ಓಡಾಡುತ್ತಿದ್ದೆವು ಎಂದು ಹೇಳಿದರು.  ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರಿಗೆ ಶಾಕ್ – ಎಸ್‌ಎಸ್‌ಎಲ್‌ಸಿ ಪರಿಕ್ಷೆಗೆ ಸಮವಸ್ತ್ರ ಕಡ್ಡಾಯ

    ಉಡುಪಿಯ ನಗರಸಭೆ ಅಧಿಕಾರಿಗಳು ಅಕ್ರಮ ಕಟ್ಟಡಗಳ ಮೇಲೆ ದಾಳಿ ಮಾಡಿದ್ದಾರೆ. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅವರಿಗೆ ಸೇರಿದ ಝರಾ ಹೋಟೆಲ್ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಜೊತೆ ಮಸೀದಿ ರಸ್ತೆಗೆ ಆಗಮಿಸಿದ ನಗರಸಭೆ ಅಧಿಕಾರಿಗಳು, ಸ್ಟೇ ಆರ್ಡರ್ ತೆರವಾಗಿರುವ ಆದೇಶವನ್ನು ಪ್ರದರ್ಶನ ಮಾಡಿದರು.  ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ – ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ

    ಕೆಎಸ್‍ಆರ್‍ಪಿ ಪೊಲೀಸ್ ತುಕಡಿ ಸ್ಥಳದಲ್ಲಿ ಮೊಕ್ಕಾಂ ಹೂಡಿಸಲಾಗಿದೆ. ಉಡುಪಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಇನ್ಸ್‍ಪೆಕ್ಟರ್ ಪ್ರಮೋದ್ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿದ್ದಾರೆ.

  • ಕೋರ್ಟ್‌ನಿಂದ ರಾಜಕೀಯ ಪ್ರೇರಿತ ಅಸಂವಿಧಾನಿಕ ತೀರ್ಪು: SDPI

    ಕೋರ್ಟ್‌ನಿಂದ ರಾಜಕೀಯ ಪ್ರೇರಿತ ಅಸಂವಿಧಾನಿಕ ತೀರ್ಪು: SDPI

    ಬೆಂಗಳೂರು: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜಕೀಯ ಪ್ರೇರಿತವಾದ ಅಸಾಂವಿಧಾನಿಕ ತೀರ್ಪನ್ನು ನೀಡಿದೆ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಅಸಮಾಧಾನ ವ್ಯಕ್ತಪಡಿಸಿದೆ.

    ದೇಶದ ಪ್ರಜೆಗಳಿಗಿರುವ ಆಯ್ಕೆಯ ಹಕ್ಕು, ಸಾಂವಿಧಾನಿಕವಾಗಿರುವ ವೈಯಕ್ತಿಕ ಹಕ್ಕು ಮತ್ತು ಮೂಲಭೂತ ಹಕ್ಕನ್ನು ಕಡೆಗಣಿಸಿ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಲ್ಲಿ ನ್ಯಾಯಾಲಯವು ವಿಫಲವಾಗಿದೆ ಎಂಬುದು ಕರ್ನಾಟಕ ಹೈಕೋರ್ಟ್ ಹಿಜಬ್ ಕುರಿತು ನೀಡಿದ ತೀರ್ಪಿನಲ್ಲಿ ರುಜುವಾತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ: ಎಚ್‍.ಡಿ ದೇವೇಗೌಡ

    ಬಿಜೆಪಿ ಸರ್ಕಾರ ಮುಸ್ಲಿಂ ಅಸ್ತಿತ್ವವನ್ನು ಅಪರಾಧಿಯಂತೆ ಬಿಂಬಿಸುತ್ತಿದೆ. ಆ ಮೂಲಕ ಸಮಾಜದೊಳಗೆ ಸಮಸ್ಯೆಯನ್ನು ಹುಟ್ಟುಹಾಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯವೂ ರಾಜಕೀಯ ಪ್ರೇರಿತವಾದ ಅಸಂವಿಧಾನಿಕ ತೀರ್ಪನ್ನು ನೀಡಿದೆ. ಇದು ನ್ಯಾಯ ವ್ಯವಸ್ಥೆಯ ಮೇಲಿರುವ ಅಲ್ಪಸಂಖ್ಯಾತರ ನಂಬಿಕೆಯನ್ನು ನಿರಾಶೆಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದೆ.

    ಹಿಜಬ್ ಒಂದು ಸಾಂವಿಧಾನಿಕವಾಗಿರುವ ವೈಯಕ್ತಿಕ ಮತ್ತು ಮೂಲಭೂತ ಹಕ್ಕುಗಳಿಂದ ಕೂಡಿದ ಆಯ್ಕೆಯ ಹಕ್ಕು. ಈ ಹಕ್ಕನ್ನು ನ್ಯಾಯಾಲಯವೇ ಕಸಿಯುತ್ತಿರುವುದು ವಿಷಾದನೀಯ. ಅಗತ್ಯ ಧಾರ್ಮಿಕ ಆಚರಣೆಯ ವಿಚಾರಗಳಲ್ಲಿ ಅಂದರೆ ಶಬರಿ ಮಲೆಗೆ ಮಹಿಳಾ ಪ್ರವೇಶ, ಮುಸ್ಲಿಂ ಹೆಣ್ಣು ಮಕ್ಕಳ ಮಸೀದಿ ಪ್ರವೇಶ, ಪಾರ್ಸಿ ಹೆಣ್ಮಕ್ಕಳ ಅಂತರ್ಜಾತಿ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್‌ ಎಷ್ಟರವರೆಗೆ ಮಧ್ಯ ಪ್ರವೇಶ ಮಾಡಬೇಕು? ಆಯಾ ಧರ್ಮದ ಧಾರ್ಮಿಕ ನಂಬಿಕೆಗಳನ್ನು ಎತ್ತಿ ಹಿಡಿಯಬೇಕಾ ಎಂಬ ವಿಚಾರದಲ್ಲಿ ಒಂದು ಅಂತಿಮ ತೀರ್ಮಾನ ಕೈಗೊಳ್ಳಲು ಬಾಕಿ ಇರುವಾಗಲೇ, ಕರ್ನಾಟಕ ಹೈಕೋರ್ಟ್ ಹಿಜಬ್ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲಾ ಎಂದಿರುವುದು ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

    2021-22ರ ಸರ್ಕಾರದ ದಾಖಲಾತಿ ನಿಯಮಗಳ ಪ್ರಕಾರ ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ಯಾರಾದರೂ ಅದನ್ನು ಉಲ್ಲಂಘಿಸಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಆದೇಶ ಇದ್ದರೂ, ಏಕಾಏಕಿ ವಿವಾದವೆಬ್ಬಿಸಿ ತಕ್ಷಣದಲ್ಲೇ ಹೊಸ ಆದೇಶ ಹೊರಡಿಸಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ರಾಜಕೀಯ ಪ್ರೇರಿತ ಆದೇಶ ಎಂಬ ಸಂಶಯಕ್ಕೆ ಹೆಚ್ಚು ಪುಷ್ಠಿಯನ್ನು ನೀಡಿದಂತಾಗಿದೆ ಎಂದು ತಿಳಿಸಿದೆ.

  • BJP, RSS ನಾಯಕರ ಮಾಹಿತಿಯನ್ನು SDPIಗೆ ಕೊಟ್ಟ ಪೊಲೀಸ್ ಅಮಾನತು!

    BJP, RSS ನಾಯಕರ ಮಾಹಿತಿಯನ್ನು SDPIಗೆ ಕೊಟ್ಟ ಪೊಲೀಸ್ ಅಮಾನತು!

    ತಿರುವನಂತಪುರಂ: RSS ಮತ್ತು BJP ನಾಯಕರ ಮಾಹಿತಿಯನ್ನು SDPIಗೆ ಸೋರಿಕೆ ಮಾಡಿದ ಆರೋಪದಡಿ ಕೇರಳದ ಪೊಲೀಸ್ ಅಧಿಕಾರಿಯನ್ನು ವಜಾ ಮಾಡಲಾಗಿದೆ.

    ಸಿವಿಲ್ ಪೊಲೀಸ್ ಅಧಿಕಾರಿ(CPO) ಅನಸ್ ಪಿಕೆ ‘ಕರಿಮನ್ನೂರು ಪೊಲೀಸ್ ಠಾಣೆ’ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅನಸ್ ಅವರು, SDPI(ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)ಗೆ ರಾಜ್ಯದ RSS ಮತ್ತು BJP ನಾಯಕರ ಮಾಹಿತಿಯನ್ನು ಕೊಟ್ಟಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಇದು ಗಂಭೀರ ಅಪರಾಧವೆಂದು ಪರಿಗಣಿಸಿ ಅನಸ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಕಾಯಬೇಡಿ, ನೀವೇ ಉತ್ತರ ಕೊಡಿ – RSS ಮುಖಂಡ ಅರವಿಂದ್ ದೇಶಪಾಂಡೆ

    ಕಳೆದ ತಿಂಗಳು ಅನಸ್ ಅವರಿಗೆ ನೋಟಿಸ್ ಕಳುಹಿಸಿದ್ದು, ಈ ಕುರಿತು ಮಾಹಿತಿ ನೀಡುವಂತೆ ಕೇಳಲಾಗಿದೆ. ಈ ವೇಳೆ ಪೊಲೀಸರು ತನಿಖೆ ಮಾಡಿದ್ದು, ಅನಸ್ ಅಪರಾಧ ಎಸಗಿರುವುದು ದೃಢವಾಗಿದೆ. ಪರಿಣಾಮ ಇಡುಕ್ಕಿ ಎಸ್‍ಪಿ ಆರ್ ಕರುಪ್ಪಸ್ವಾಮಿ, ಅನಸ್ ಅವರನ್ನು ವಜಾಗೊಳಿಸುವ ಸೂಚನೆಯನ್ನು ಹಸ್ತಾಂತರಿಸಿದ್ದಾರೆ.

    ಉಪ ಎಸ್‍ಪಿ ಲಾಲ್ ಈ ಕುರಿತು ಮಾತನಾಡಿದ್ದು, ಅನಸ್ ಪ್ರಕರಣ ಕುರಿತು ತನಿಖೆ ಮಾಡಲಾಗಿದೆ. ತನಿಖೆ ವೇಳೆ ಆತ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಮಾಹಿತಿಯನ್ನು ಎಸ್‍ಡಿಪಿಐ ಕಾರ್ಯಕರ್ತರಿಗೆ ಕೊಟ್ಟಿರುವುದು ಸತ್ಯ ಎಂಬುದು ತಿಳಿದುಬಂದಿದೆ. ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಹೀಗಾಗಿ ಅವರು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    Goa RSS rebel faction dissolved, merged with parent organisation | Goa News - Times of India

    ಡಿ.3 ರಂದು, ಎಸ್‍ಡಿಪಿಐ ಕಾರ್ಯಕರ್ತರು ಕೆಎಸ್‍ಆರ್‍ಟಿಸಿ ಕಂಡಕ್ಟರ್ ಮಧುಸೂದನನ್ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಎಸ್‍ಡಿಪಿಐ ಕಾರ್ಯಕರ್ತರು ಧರ್ಮದ ಆಧಾರದ ಮೇಲೆ ಆತನ ವಿರುದ್ಧ ದಾಳಿ ಮಾಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಕಂಡಕ್ಟರ್ ತನ್ನ ಮಕ್ಕಳ ಜೊತೆ ಬೈಕ್ ನಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

    ಈ ಹಿನ್ನೆಲೆ ಪೊಲೀಸರು ನಾಲ್ಕು SDPI ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿದ್ದ ಆರೋಪಿ ಶಾನವಾಸ್ ಫೋನ್ ಪರಿಶೀಲಿಸಲಾಗಿದೆ. ಈ ವೇಳೆ ಸಿಪಿಒ ಅನಸ್ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಮಾಹಿತಿ ನೀಡಿರುವುದು ತಿಳಿದುಬಂದಿದೆ. ಈ ಫೋನ್ ನಲ್ಲಿ RSS ನಾಯಕರ ಸಂಪೂರ್ಣ ಮಾಹಿತಿ ಇರುವುದು ಪತ್ತೆಯಾಗಿದೆ. ಅಲ್ಲದೆ ಆರೋಪಿ ಶಾನವಾಸ್ ಮತ್ತು ಪೊಲೀಸ್ ಅಧಿಕಾರಿ ಅನಸ್ ಇಬ್ಬರು 11 ವರ್ಷಗಳ ಸ್ನೇಹಿತರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಶಿವಮೊಗ್ಗದಲ್ಲಿ ಟ್ರೈಲರ್ ನೋಡಿದ್ದೀರಿ, ಪಿಚ್ಚರ್ ತೋರಿಸುತ್ತೇವೆ – ಭಜರಂಗದಳ ನೇರ ಎಚ್ಚರಿಕೆ

    ಶಿವಮೊಗ್ಗದಲ್ಲಿ ಟ್ರೈಲರ್ ನೋಡಿದ್ದೀರಿ, ಪಿಚ್ಚರ್ ತೋರಿಸುತ್ತೇವೆ – ಭಜರಂಗದಳ ನೇರ ಎಚ್ಚರಿಕೆ

    ಉಡುಪಿ: ಶಿವಮೊಗ್ಗದಲ್ಲಿ ಎರಡು ದಿನ ಟ್ರೈಲರ್ ನೋಡಿದ್ದೀರಿ ಶೀಘ್ರ ಪಿಚ್ಚರ್‌ ತೋರಿಸ್ತೇವೆ ಎಂದು ಉಡುಪಿಯಲ್ಲಿ ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ನೇರ ಎಚ್ಚರಿಕೆ ನೀಡಿದ್ದಾರೆ.

    ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿಯಲ್ಲಿ ಖಂಡನಾ ಪ್ರತಿಭಟನೆ ನಡೆಯಿತು. ಭಜರಂಗದಳ – ವಿಶ್ವ ಹಿಂದೂಪರಿಷತ್, ಹಿಂದು ಜಾಗರಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸುನೀಲ್ ಕೆ.ಆರ್, ಶಿವಮೊಗ್ಗದಲ್ಲಿ ಎರಡು ದಿನ ಟ್ರೈಲರ್ ತೋರಿಸಿದ್ದೇವೆ. ಪಿಚ್ಚರ್ ಅಭಿ ಬಾಕಿ ಹೇ. ಕೊಲೆಗಟುಕರಿಗೆ ಮುಂದಿನ ದಿನಗಳಲ್ಲಿ ಪೂರ್ಣ ಚಿತ್ರ ತೋರಿಸುತ್ತೇವೆ. ಗಲ್ಲಿ ಗಲ್ಲಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಡಲು ನಮಗೆ ಗೊತ್ತಿದೆ ಎಂದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

    ಹೋರಾಟ ಮಾಡಲು ನಮಗೆ ತಲವಾರು ಮಾರಕಾಸ್ತ್ರ ಬೇಡ. ಜೈಲಿನಲ್ಲಿ ಒಂದು ಚಮಚ ಇದ್ದರೂ ಸಾಕು. ಚಮಚದಲ್ಲಿ ನಮಗೆ ಪ್ರತೀಕಾರ ತೀರಿಸಿ ಅನುಭವ ಇದೆ. ಸರ್ಕರಕ್ಕೆ ಹಿಂದೂ ಕಾರ್ಯಕರ್ತರ ಮೇಲೆ ಪ್ರೀತಿ ಅಭಿಮಾನ ಇದ್ದರೆ, ಹರ್ಷ ಕೊಲೆ ಆರೋಪಿಗಳನ್ನು ಶೂಟೌಟ್ ಮಾಡಿ. ಕೊಲೆ ಆರೋಪಿಗಳನ್ನು ಕೂಡಲೇ ನೇಣಿಗೇರಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

    ಗಲ್ಲಿ ಗಲ್ಲಿಯಲ್ಲಿ ಭಜರಂಗಿಗಳು ಕಾರ್ಯಾಚರಣೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ಪಿಎಫ್‍ಐ, ಎಸ್‍ಡಿಪಿಐಗೆ ಸೂಕ್ತ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮಗೆ ಗೊತ್ತಿದೆ ಎಂದು ಸುನೀಲ್ ಕೆ.ಆರ್ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

  • SDPI & PFI ಬ್ಯಾನ್ ಬಗ್ಗೆ ಚರ್ಚೆ: ಆರಗ ಜ್ಞಾನೇಂದ್ರ

    SDPI & PFI ಬ್ಯಾನ್ ಬಗ್ಗೆ ಚರ್ಚೆ: ಆರಗ ಜ್ಞಾನೇಂದ್ರ

    ಬೆಂಗಳೂರು: ಎಸ್‍ಡಿಪಿಐ (SDPI) ಮತ್ತು ಪಿಎಫ್‍ಐ (PFI) ಬ್ಯಾನ್ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರೂ ಸೇರಿದಂತೆ ಎಲ್ಲರೂ ಈ ಸಂಘಟನೆಗಳನ್ನು ಬ್ಯಾನ್ ಮಾಡಲು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಶಿವಮೊಗ್ಗ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಹಿಂದೆ ಅನೇಕ ಸಂಘಟನೆಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ಎಸ್‍ಡಿಪಿಐ ಮತ್ತು ಪಿಎಫ್‍ಐ ಬ್ಯಾನ್ ಬಗ್ಗೆ ಅನೇಕರು ಒತ್ತಾಯ ಮಾಡಿದ್ದಾರೆ. ಸರ್ಕಾರ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುವುದಾಗಿ ಸಚಿವರು ತಿಳಿಸಿದರು.

    ಶಿವಮೊಗ್ಗ ಘಟನೆಯಲ್ಲಿ ಈವರೆಗೂ 8 ಜನರ ಬಂಧನ ಆಗಿದ್ದು, ತನಿಖೆ ಮುಂದುವರೆದಿದೆ ಅಂತ ಸಚಿವರು ಮಾಹಿತಿ ನೀಡಿದರು. ಇನ್ನೂ ಸ್ವಲ್ಪ ದಿನ ಶಿವಮೊಗ್ಗದಲ್ಲಿ ಪೊಲೀಸರ ಭದ್ರತೆ ಮುಂದುವರೆಸುತ್ತೇವೆ. ಸೆಕ್ಷನ್ 144 ಕೂಡಾ ಮುಂದುವರಿಸುತ್ತೇವೆ. ಘಟನೆಯಲ್ಲಿ ಅಪರಾಧಿಗಳಿಗೆ ಯಾರ ಲಿಂಕ್ ಇದೆ. ಯಾರು ಇದರ ಹಿಂದೆ ಇದ್ದಾರೆ ಅಂತ ತನಿಖೆ ನಡೆಯುತ್ತಿದೆ. ಸಂಪೂರ್ಣ ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಡಿಕೆಶಿ ಹೇಳುವುದು ಒಂದು, ಮಾಡುವುದು ಇನ್ನೊಂದು: ನಾರಾಯಣಗೌಡ

  • ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಶಿವಮೊಗ್ಗ: ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾದ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಹರ್ಷ ಮನೆಗೆ ಭೇಟಿ ನೀಡಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಯುವ ಘಟಕ ರಾಜ್ಯದ ತಂಡದವರೆಲ್ಲರು ಅವರ ಮನೆಗೆ ಭೇಟಿ ನೀಡಿದ್ದೇವೆ. ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗನಾಗಿದ್ದನು. ಅವರನ್ನು ಅತ್ಯಂತ ಅಮಾನುಷವಾಗಿ ಬರ್ಬರವಾಗಿ ಕೊಲ್ಲಲಾಗಿದೆ. ದೇಶಕ್ಕಾಗಿ ಹೇಗೆ ಯೋಧರು ಹುತ್ಮಾತ್ಮರಾಗುತ್ತಾರೋ ಹಾಗೇ ನನ್ನ ಮಗ ಹುತಾತ್ಮ ನಾಗಿದ್ದಾನೆ ಅಂತ ಅವರ ತಾಯಿ ಹೇಳಿದರು ಎಂದರು. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ಪ್ರತಿ ಮನೆಯಲ್ಲಿಯೂ ಹರ್ಷ ನಂತ ಹಿಂದೂ ಹುಟ್ಟಬೇಕು ಅಂದಿದ್ದಾರೆ. ಫೇಸ್ ಬುಕ್ ಪೋಸ್ಟ್ ಮಾಡಿದ್ದಾಗ ಈ ರೀತಿ ಆಗುತ್ತದೆ ಅಂದರೆ ಐಸಿಸಿಗೂ ನಮಗೂ ಏನೂ ವ್ಯತ್ಯಾಸ ಇದೆ? ಹತ್ಯೆ ಮಾಡಿದ ರಾಕ್ಷಕರಿಗೆ ಒಂದು ಮಾತು ಹೇಳುತ್ತೇನೆ. ರಾಜ್ಯದಲ್ಲಿ ಹಿಂದೂತ್ವದ ಸರ್ಕಾರ ಇದ್ದು, ನಿಮ್ಮನ್ನು ಹುಡುಕಿ ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮನವಿ ಮಾಡಿಕೊಳ್ಳುತ್ತೇನೆ. ಹಿಂದೂ ಹರ್ಷನ ಹತ್ಯೆ ಮರ್ಡರ್ ಅಲ್ಲ, ಭಯೋತ್ಪಾದಕ ಕೃತ್ಯ ಅಂತಾನೇ ಪ್ರಕರಣ ದಾಖಲಾಗಬೇಕು ಎಂದರು.  ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

     

    ಈಗಾಗಲೇ ನಾಲ್ಕು ಜನ ಸುಪಾರಿ ಕಿಲ್ಲರ್‍ಗಳನ್ನು ಅರೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ ಕೋಕಾ ಕಾಯ್ದೆ ಜಾರಿಗೊಳಿಸಬೇಕು. ಎಸ್‍ಡಿಪಿಐ, ಪಿಎಫ್‍ಐ, ಸಿಎಫ್‍ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇವುಗಳನ್ನೂ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ದಾಖಲೆ ಸಮೇತ ಕರುಡು ಸಲ್ಲಿಕೆ ಮಾಡಬೇಕು. ಹಿಂದೂಗಳ ಹತ್ಯೆ ಕೇವಲ ಮರ್ಡರ್ ಅಲ್ಲ. ಅದೊಂದು ವ್ಯವಸ್ಥಿತ ಮರ್ಡರ್‍ಗಳ ಷಡ್ಯಂತ್ರ ಎಂದರು.

  • ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

    ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

    – ಪೊಲಿಸರಿಗೆ ಎಸ್‍ಡಿಪಿಐ ಸವಾಲು

    ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಸಚಿವ ಕೆ.ಎಸ್ ಈಶ್ವರಪ್ಪರಿಗೂ, ಸುಪಾರಿ ಕೊಟ್ಟವರಿಗೂ ಏನೋ ಸಂಬಂಧ ಇದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪಾರಿ ಕೊಟ್ಟವರಿಗೆ ಹಾಗೂ ಈಶ್ವರಪ್ಪಗೂ ಏನೋ ಸಂಬಂಧ ಇದೆ. ಮೊದಲು ಅದರ ಬಗ್ಗೆ ತನಿಖೆ ಮಾಡಲಿ. ಈಶ್ವರಪ್ಪನವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ ಸತ್ಯ ಹೊರಗಡೆ ಬರುತ್ತೆ. ಸಂಘ ಪರಿವಾರದವರು ಈವರೆಗೆ 36 ಕೊಲೆ ಮಾಡಿದ್ದಾರೆ. 13 ಜನ ಹಿಂದೂ ಯುವಕರ ಕೊಲೆಯಲ್ಲಿ ಸಂಘ ಪರಿವಾರದ ಪಾತ್ರ ಇದೆ ಎಂದು ಆರೋಪ ಮಾಡಿದರು.

    ಶಿವಮೊಗ್ಗ ಯುವಕನ ಕೊಲೆ ಪ್ರಕರಣದ ನಂತರ ಆದ ಬೆಳವಣಿಗೆಗಳು ನಿಜಕ್ಕೂ ಖಂಡನೀಯ. ರಾಜ್ಯದಲ್ಲಿ ದೇಶದಲ್ಲಿ ಕೊಲೆ ಪ್ರಕರಣಗಳು ಹೊಸದೇನಲ್ಲ. ಮಾಧ್ಯಮದ ವರದಿಯ ಪ್ರಕಾರ ಈ ಹತ್ಯೆಯಾದ ವ್ಯಕ್ತಿ ರೌಡಿಶೀಟರ್ ಅಂತಾ ಗೊತ್ತಾಗಿದೆ. ಈ ಕೊಲೆ ನಡೆದ ಸರ್ಕಾರದ ಜವಾಬ್ದಾರಿಯುತವಾದ ಸ್ಥಾನದಲ್ಲಿರುವವರ ಮಾತುಗಳು ಖಂಡನೀಯ. ಕೊಲೆ ನಡೆದ ತಕ್ಷಣ ಪೊಲೀಸರ ತನಿಖೆ ಆರಂಭವಾಗುವ ಮುನ್ನ ಸಚಿವ ಈಶ್ವರಪ್ಪ, ರಾಘವೇಂದ್ರ, ಪ್ರತಾಪ್ ಸಿಂಹ ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ

    ಇವರ ಪ್ರಚೋದನಾಕಾರಿ ಹೇಳಿಕೆಯಿಂದ ಮುಸ್ಲಿಂ ಮನೆಯ ಮೇಲೆ, ಅಂಗಡಿಯ ಮೇಲೆ, ವಾಹನದ ಮೇಲೆ ಬೆಂಕಿ ಹಚ್ಚಲಾಗಿದೆ. 143 ಸೆಕ್ಷನ್ ಇದ್ರೂ ಮೆರವಣಿಗೆ ಮಾಡಿದ್ರು. ಪೊಲೀಸರ ಕಣ್ಣಮುಂದೆಯೇ ಈಶ್ವರಪ್ಪ ಕಡೆಯ ಐನೂರು ಜನ ಹುಡುಗರು ದಾಂಧಲೆ ಮಾಡ್ತಾರೆ. ಕಫ್ರ್ಯೂ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿರೋದು ಈಶ್ವರಪ್ಪ, ಈಶ್ವರಪ್ಪ – ಎ1, ರಾಘವೇಂದ್ರ, ಗೃಹಸಚಿವರು ಇವರೆಲ್ಲ ನೇರ ಹೊಣೆ. ಎರಡು ದಿನದ ಮುಂಚೆ ಶಿವಮೊಗ್ಗದಲ್ಲಿ ಇಬ್ಬರು ಮುಸ್ಲಿಮರ ಹತ್ಯೆಯಾಗಿತ್ತು ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಯಾತ್ರೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ: ಸಿದ್ದರಾಮಯ್ಯ

    ಪೊಲೀಸ್ ಇಲಾಖೆಯನ್ನು ವಿಸರ್ಜನೆ ಮಾಡಿ. ನೇರವಾಗಿ ಇವರ ದಾಂಧಲೆ ಮಾಡಿದ್ರೆ ಪೊಲೀಸರು ಯಾಕೆ ಬೇಕು. ನರಗುಂದದ ಮೇಲೆ ಮುಸ್ಲಿಂ ಯುವಕನ ಮೇಲೆ ಹಲ್ಲೆಯಾಗಿದೆ. ಸಮೀರ್ ಸಾವನ್ನಪ್ಪಿದ. ನಾಲ್ಕು ಜನ ಸಂಘಪರಿವಾರವದವರು ಜೈಲಿನಲ್ಲಿ ಇದ್ದಾರೆ. ಆದರೆ ರಾಜ್ಯದ ಮುಸ್ಲಿಮರು ಗಲಾಟೆ ಮಾಡಲಿಲ್ಲ. ಯಾರ ಮನೆಗೂ ಕಲ್ಲು ಎಸೆಯಲಿಲ್ಲ. ಈ ನಾಯಕರು ಮುಸ್ಲಿಂ ಯುವಕರ ಸಾವಿಗೆ ಸಂತಾಪ ಸೂಚಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ತಾ ಮುಂದು ನಾ ಮುಂದು ಅಂತಾ ಹರ್ಷ ಸಾವಿಗೆ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಇದೇ ಕರುಣೆ ಸಂಘ ಪರಿವಾರದವರು ಗದಗ ನರಗುಂದದಲ್ಲಿ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದಾಗ ಯಾಕೆ ಮಾತಾನಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧ್ವಜ ಹಿಡಿದು ಹೋದವರನ್ನ ಕೊಂದವರು ಕಾಂಗ್ರೆಸ್‍ನವರು: ಸಿ.ಟಿ ರವಿ ಕಿಡಿ

    ಮಿಸ್ಟರ್ ಪ್ರತಾಪ್ ಸಿಂಹ ನಾಲಿಗೆ ಬಿಗಿ ಹಿಡಿದು ಮಾತಾನಾಡಿ. ಕರ್ನಾಟಕದಲ್ಲಿ ಏನೇ ಆದ್ರೂ ಈ ಪ್ರತಾಪ್ ಸಿಂಹ, ನಳಿನ್ ಎಸ್‍ಡಿಪಿಐ ಮೇಲೆ ಎತ್ತಾಕಿ ಬಿಡ್ತಾರೆ. ನೀವೊಬ್ಬ ಜವಾಬ್ದಾರಿ ಸಂಸದಾರ..!? ಸಂಘಪರಿವಾರವದವರು ಕೊಲೆ ಮಾಡಿದ್ರಲ್ಲ, ಆಗ ಭಜರಂಗದಳ, ಶ್ರೀರಾಮ ಸೇನೆ, ಆರ್‍ಎಸ್‍ಎಸ್ ನಿಷೇಧಕ್ಕೆ ಒತ್ತಾಯ ಮಾಡಿಲ್ಲ. ಯಾಕೆ ಈ ದ್ವಿಮುಖ ನೀತಿ. ನಿಮಗೆ ಕೊಡಗಿನಲ್ಲಿ ಹಿಂದೂ ಯುವಕ ಕಾರ್ತಿಕ್ ಮೇಲೆ ಕೇಸರಿ ಶಾಲು ಹಾಕಿಲ್ಲ ಅಂತಾ ಹಿಂದೂ ಯುವಕರೇ ಚಾಕು ಹಾಕಿದ್ರು. ಆಗ ಯಾಕೇ ಇವರು ಮಾತಾನಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ – ಈಶ್ವರಪ್ಪ ಹೇಳಿಕೆಗೆ ಜೆ.ಪಿ ನಡ್ಡಾ ಛೀಮಾರಿ

    ನೀವು ಎಸ್‍ಡಿಪಿಐಗೆ ಪಾಠ ಮಾಡಬೇಕಾಗಿಲ್ಲ. ನಾವು ಪ್ರಬುದ್ಧ ರಾಜಕಾರಣದ ಮೇಲೆ ನಂಬಿಕೆ ಇಟ್ಟವರು. ಕ್ಷುಲ್ಲಕ ಕಾರಣಕ್ಕೆ ರಾಜಕಾರಣ ಮಾಡಲ್ಲ. ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣಕ್ಕೆ ಈಶ್ವರಪ್ಪ, ರಾಘವೇಂದ್ರ ಗೃಹಸಚಿವರು ಕಾರಣ. ಖಾಕಿ ಧರ್ಮಕ್ಕೆ ಪೊಲೀಸರು ಮರ್ಯಾದೆ ಕೊಟ್ರೆ ಇವರ ಮೇಲೆ ಕೇಸ್ ಹಾಕಿ ಎಂದು ಗರಂ ಆದರು. ಇದೇ ವೇಳೆ ಎಸ್‍ಡಿಪಿಐ ಬ್ಯಾನ್ ಗೆ ಒತ್ತಾಯ ಕೇಳಿಬರುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇದು ಅಲ್ಪಸಂಖ್ಯಾತ ವಿರೋಧಿ ನೀತಿ. ಇವರ ಷಡ್ಯಂತ್ರಗಳನ್ನು ನಾವು ಬಯಲಿಗೆ ಎಳೆಯುತ್ತೇವೆ. ನಾವು ಸೈದ್ಧಾಂತಿಕ ಹೋರಾಟ ಮಾಡುತ್ತಿದ್ದೇವೆ. ಇದಕ್ಕಾಗಿ ಬ್ಯಾನ್ ಮಾತು ಕೇಳಿಬರುತ್ತಿದೆ ಎಂದರು.

    ಹಿಜಾಬ್‍ಗೂ ಈ ಕೊಲೆಗೂ ನೇರ ಲಿಂಕ್ ಈ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲಾರೆ. ತನಿಖೆ ನಡೆಯುತ್ತಿದೆ, ನೈಜ್ಯ ಕಾರಣ ಬರಲಿ. ನಾಯಕರ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸೋದು ಅಲ್ಲ. ಹಿಜಬ್ ವಿಚಾರದಲ್ಲಿ ಸರ್ಕಾರ ವೈಫಲ್ಯವಾಗಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳೋಕೆ ಈ ರೀತಿಯ ಕೆಲಸ ಮಾಡಿರಬಹುದು. ಪೊಲೀಸರಿಗೆ ಫ್ರೀ ಹ್ಯಾಂಡ್ ಬಿಡಲಿ. ಮೊದಲು ಸಚಿವರು ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೃತ ಹರ್ಷ ಕುಟುಂಬಕ್ಕೆ 6 ಲಕ್ಷ ರೂ. ಕೊಟ್ಟು ಬರುತ್ತೇನೆ: ರೇಣುಕಾಚಾರ್ಯ

  • ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ ಆರ್ಟಿಕಲ್ 25 ಪ್ರತಿಪಾದಿಸುವ, ಭಾರತೀಯ ಜನತೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಪ್ರತಿಯೊಬ್ಬ ಭಾರತೀಯನ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವ ಹುನ್ನಾರವಾಗಿದೆ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ – ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹುಜಾರ್ ಆಹೆಮದ್ ಆರೋಪಿಸಿದ್ದಾರೆ.

    ಈ ಬಗ್ಗೆ ಪತಿಭಟನೆ ನಡೆಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‍ಡಿಪಿಐ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎನ್ನುವ ಆಕರ್ಷಕ ಹಣೆ ಪಟ್ಟಿ ಹೊಂದಿರುವ ಸದರಿ ಮಸೂದೆಯು, ಅಪ್ರಾಪ್ತ, ಅಸ್ವಸ್ಥ ಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎನ್ನುವ ಮೂಲಕ ದಲಿತ ಸಮುದಾಯವನ್ನು ಮಾನಸಿಕ ಅಸ್ವಸ್ಥರು, ಎನ್ನುವ ಮೂಲಕ ತುಂಬಾ ಅವಮಾನಕರವಾಗಿ ಬಿಂಬಿಸಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಅಕ್ರಮ ಮತಾಂತರ ನಡೆದಿದೆ ಎಂಬ ಆರೋಪವನ್ನು ಮಾಡಿ ಮತಾಂತರಗೊಂಡವರ ಬಂಧುಗಳು, ಸ್ನೇಹಿತರು ಹಾಗೂ ಪರಿಚಿತರ ಪೈಕಿ ಯಾರು ಬೇಕಾದರು ದೂರು ನೀಡಬಹುದು ಮತ್ತು ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆಯೂ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದೇ ಆಗಿರುತ್ತದೆ ಎನ್ನುವ ಮೂಲಕ ವೈಯಕ್ತಿಕ ದ್ವೇಷ, ಷಡ್ಯಂತ್ರ ಮತ್ತು ಅನ್ಯ ಕೋಮಿನವರ ನಾಶಕ್ಕೆ ಹಾಗೂ ಅವರನ್ನು ದುರುದ್ದೇಶಪೂರ್ವಕವಾಗಿ ತೊಂದರೆಗೆ ಸಿಲುಕಿಸುವ ಕೋಮುವಾದಿ ಧೋರಣೆಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    ಕೋಮು ಆಧಾರಿತ ಗಲಭೆಗಳಿಗೆ ಮತ್ತು ಅಶಾಂತಿಯ ವಾತಾವರಣಕ್ಕೆ ರಾಜ್ಯವನ್ನು ದೂಡಿ, ಇದನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ರಾಜಕೀಯ ಲಾಭಗಳಿಸುವುದು.ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ತಾರತಮ್ಯದಿಂದ ಮುಕ್ತಿ ಪಡೆಯದೆ ಮತ್ತದೇ ಜಾತಿವಾದದ ಕಪಿ ಮುಷ್ಟಿಯಲ್ಲಿ ನರಳಿ ಸಾಯುವಂತೆ ಮಾಡುವುದು. ಧರ್ಮ ನಿರಪೇಕ್ಷತೆಯನ್ನು ಪ್ರೋತ್ಸಾಹಿಸುವ ಅಂತರ್ ಧರ್ಮೀಯ ಮದುವೆಗಳನ್ನು ನಿರ್ಬಂಧಿಸುವುದು. ಮಹಿಳೆಯರ ಹಕ್ಕುಗಳನ್ನು ಕಸಿಯುವುದು. ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳ ಮೇಲೆ ದಾಳಿಗೆ ಪ್ರಚೋಧಿಸುವುದು, ಸದರಿ ಕಾಯ್ದೆಯ ಮೂಲಕ ಕಾನೂನನ್ನು ದುರ್ಬಳಕೆ ಮಾಡಿಕೊಂಡು ತೊಂದರೆ ಮಾಡುವುದು. ಅವರ ಆಸ್ತಿಗಳನ್ನು ಲಪಟಾಯಿಸಿ, ಆ ಮೂಲಕ ಅವರ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು. ಮಾನವ ಹಕ್ಕುಗಳ ಪ್ರತಿಪಾದಕರು, ಚಳುವಳಿಗರಾರರು, ಹೋರಾಟಗಾರರು ಸಾಹಿತಿಗಳನ್ನು ದಿಕ್ಕು ತಪ್ಪಿಸಿ, ಅವರ ಆದ್ಯತೆಗಳ ದಾರಿ ಬದಲಿಸಿ, ಭಾವನಾತ್ಮಕ ಇಂತಹ ಜಟಾಪಟಿಗಳಲ್ಲೇ ಮುಳುಗಿಸಿ ಅಗತ್ಯವಾದ ವಿಚಾರಗಳ ಸುತ್ತ ಹೋರಾಟಗಳು ನಡೆಯದಂತೆ ಈ ಕಾಯ್ದೆಯ ಮೂಲಕ ಹುನ್ನಾರ ನಡೆಸಲಾಗುತ್ತಿದೆ.

    ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನೂ ಅವಿರತವಾಗಿ ನಡೆಸಿಕೊಂಡು ಬರುತ್ತಿರುವ ಹಲವು ಧಾರ್ಮಿಕ ಸಂಸ್ಥೆಗಳ ಮೇಲೆ ಈ ರೀತಿಯ ಭಯೋತ್ಪಾದನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸೇವಾ ಸಂಸ್ಥೆಗಳು ನಾಡಿನ ಶೋಷಿತ ಸಮುದಾಯಗಳಿಗೆ ನೀಡುತ್ತಿದ್ದ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತಿತರ ಸೇವೆಗಳನ್ನು ತಡೆಗಟ್ಟಿ ಶೋಷಣೆ ಮಾಡಲು ಹೊರಟಿದೆ. ಸದರಿ, ಮತಾಂತರ ನಿಷೇಧ ಕಾಯ್ದೆಯ ಮೂಲಕ ಸರ್ಕಾರವು, ಸಮಾಜದಲ್ಲಿ ಅಕ್ಷರಶಃ ಆತಂಕ, ಭಯ, ದಾಳಿಯ ವಾತಾವರಣ ಸೃಷ್ಟಿಸಿ ಧಾರ್ಮಿಕ ಹಕ್ಕಿನ ಸ್ವಾತಂತ್ರ್ಯವನ್ನು ಧಮನಿಸಿ ತನ್ನ ಕೋಮುವಾದಿ ಅಜೆಂಡಾವನ್ನು ಮೆರೆಯಲು ಹೊರಟಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಕಾಪಾಡಬೇಕಾದ ಮಹತ್ವದ ಅಧಿಕಾರ ಹೊಂದಿರುವ ರಾಜ್ಯಪಾಲರು, ಯಾವ ಕಾರಣಕ್ಕೂ ಈ ಮತಾಂತರ ನಿಷೇದ ಕಾಯ್ದೆ ಎಂಬ ಈ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಮಸೂದೆಗೆ ಅನುಮತಿ ನೀಡಬಾರದೆಂದು ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಮನಿಯಾರ್ ಒತ್ತಾಯಿಸಿದ್ದಾರೆ.

  • ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

    ಬೆಂಗಳೂರು: ಕರ್ನಾಟಕ ಸರ್ಕಾರವು ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನ ವಿರೋಧಿಯು ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಕೃತ್ಯವೂ ಆಗಿದೆ ಎಂಬ ನಿಲುವನ್ನು ಎಸ್‍ಡಿಪಿಐ ಈಗಾಗಲೇ ಪ್ರಕಟಿಸಿದ್ದು, ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.

    ಈ ಬಗ್ಗೆ ಧ್ವನಿ ಎತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಘನತೆವೆತ್ತ ರಾಜ್ಯಪಾಲರು ಈ ಮಸೂದೆಯನ್ನು ತಿರಸ್ಕರಿಸಬೇಕು ಎಂಬ ಒತ್ತಾಯದ ಮನವಿಗಳನ್ನು ರಾಜ್ಯದಾದ್ಯಂತ ನಡೆಸಲಾದ ಪ್ರತಿಭಟನೆಗಳ ಮೂಲಕ ಸಲ್ಲಿಸಲಾಗಿದೆ. ಯುವಜನರ ಧರ್ಮಾಂತರದ ವೈವಾಹಿಕ ಜೀವನದ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿಯುವ ಮತ್ತು ಭಾರತದ ಪ್ರತಿಯೊಬ್ಬ ಪ್ರಜೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮತ್ತು ಇನ್ನೂ ಹತ್ತು ಹಲವು ಒತ್ತಾಯಗಳು ಮತ್ತು ಹೇರಿಕೆಗಳ ಮೂಲಕ ಜನತೆಯಲ್ಲಿ ಆತಂಕ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸಲು ಕಾರಣವಾಗಿರುವ ಮತಾಂತರ ನಿಷೇಧ ಎಂಬ ಭಯೋತ್ಪಾದಕ ಕಾಯ್ದೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ, ಎಸ್‍ಡಿಪಿಐ ನಾಡಿನ ಸರ್ವ ಜನರ ಹಿತದೃಷ್ಟಿಯಿಂದ ಘನ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಸ್‍ಡಿಪಿಐ ತೀರ್ಮಾನಿಸಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    ಮತಾಂತರ ನಿಷೇಧ ಕಾಯ್ದೆಯು ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಬಂದಾಗ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಕುಂಟು ನೆಪಗಳನ್ನು ಹೇಳದೇ, ಸಭೆಯನ್ನು ಬಹಿಷ್ಕರಿಸದೇ, ತನ್ನ ಎಲ್ಲಾ ಸದಸ್ಯರಿಗೂ ವಿಪ್ ಜಾರಿಗೊಳಿಸಿ ಮತಾಂತರ ನಿಷೇಧ ಕಾಯ್ದೆಯ ಚರ್ಚೆಯಲ್ಲಿ ಕಡ್ಡಾಯವಾಗಿ ಬಾಗವಹಿಸುವಂತೆ ನೋಡಿಕೊಳ್ಳಬೇಕು. ವಿಧಾನಸಭೆಯಲ್ಲಿ ಸದರಿ ಮಸೂದೆಯ ಕರಡನ್ನು ಮಂಡಿಸಿದಾಗ ಕಾಂಗ್ರೆಸ್‍ನ ಪ್ರಮುಖ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಹಾಜರಿರದೆ ಮಸೂದೆಯು ಮಂಡನೆಯಾದ ಮೇಲೆ ತಡವಾಗಿ ಸಭೆಗೆ ಆಗಮಿಸಿ, ನಮ್ಮಿಂದ ಮಸೂದೆಯನ್ನು ಮುಚ್ಚಿಟ್ಟು, ಚರ್ಚೆಗೆ ಅವಕಾಶ ನೀಡದೇ ಮಸೂದೆಯನ್ನು ಮಂಡಿಸಲಾಗಿದೆ ಎಂದು ತಕರಾರು ತೆಗೆದು ಮಾತನಾಡಿರುವ ಬಗ್ಗೆ ಎಸ್‍ಡಿಪಿಐ ಗಮನಿಸಿದೆ. ಇದು ತಪ್ಪು ಎಂದು ಅಭಿಪ್ರಯಾಪಟ್ಟಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಸಭೆಗೆ ಸರಿಯಾದ ಸಮಯಕ್ಕೆ ಆಗಮಿಸಿ ಕರಡು ಮಂಡನೆಯಾಗದಂತೆ ನೋಡಿಕೊಳ್ಳಬೇಕಾಗಿದ್ದು ವಿರೋಧ ಪಕ್ಷಗಳ ಜವಾಬ್ದಾರಿ ಆಗಿತ್ತು. ಈಗಲಾದರೂ ಮಸೂದೆಯು ವಿಧಾನ ಪರಿಷತ್ತಿಗೆ ಚರ್ಚೆಗೆ ಬಂದಾಗ, ಯಾವ ನೆಪವನ್ನೂ ಹೇಳದೇ ವಿರೋಧ ಪಕ್ಷದ ಸರ್ವ ಸದಸ್ಯರು ಖುದ್ದು ಹಾಜರಿದ್ದು ಮಸೂದೆಯನ್ನು ವಿರೋಧಿಸಿ, ಪರಿಷತ್ತಿನಲ್ಲಿ ತಿರಸ್ಕಾರವಾಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

  • ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆ ಪ್ರಕರಣ – ಇಬ್ಬರು ಆರ್‌ಎಸ್‌ಎಸ್‌ ಮುಖಂಡರು ಅರೆಸ್ಟ್‌

    ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆ ಪ್ರಕರಣ – ಇಬ್ಬರು ಆರ್‌ಎಸ್‌ಎಸ್‌ ಮುಖಂಡರು ಅರೆಸ್ಟ್‌

    ತಿರುವನಂತಪುರಂ: ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಕಾರ್ಯದರ್ಶಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರ್‌ಎಸ್‌ಎಸ್‌ ಮುಖಂಡರನ್ನು ಕೇರಳದ ಅಲ್ಪುಜಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್‌ ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಮುಖಂಡರಾದ ತ್ರಿಶೂರ್‌ ಜಿಲ್ಲೆಯ ಕೆ.ಟಿ.ಸುರೇಶ್‌, ಎಂ.ಸುರೇಶ್‌ ಎಂದು ಗುರುತಿಸಲಾಗಿದೆ. ತ್ರಿಶೂರ್‌ ಜಿಲ್ಲೆಯ ಅಡಗುತಾಣದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿಂದೆಯೂ, ಕೊಲೆಯಾದ ವ್ಯಕ್ತಿಯ ತವರು ಆಲಪ್ಪುಳದ ಮನ್ನಂಚೇರಿ ಗ್ರಾಮದಲ್ಲಿ ಇಬ್ಬರು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ

    ಶಾನ್‌ ಹತ್ಯೆಯಾದ ನಂತರ 12 ಗಂಟೆಗಳ ಅವಧಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್‌ ಶ್ರೀನಿವಾಸನ್‌ ಅವರನ್ನು ಪ್ರತೀಕಾರವಾಗಿ ಹತ್ಯೆ ಮಾಡಲಾಗಿದೆ. ರಂಜಿತ್‌ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಡಿಪಿಐನ ಐವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

    ಆಲಪ್ಪುಳದಲ್ಲಿ ನಡೆದ ಹತ್ಯೆ ಪ್ರಕರಣದ ಇನ್ನೂ ಅನೇಕ ಆರೋಪಿಗಳು ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ವಿಶೇಷ ತಂಡಗಳನ್ನು ಬೇರೆ ರಾಜ್ಯಗಳಿಗೆ ನಿಯೋಜಿಸಲಾಗಿದೆ ಎಂದು ಎಡಿಜಿಪಿ ವಿಜಯ್‌ ಶಕರೆ ತಿಳಿಸಿದ್ದಾರೆ. ಇದನ್ನೂ ಓದಿ: ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು